ಸಿಹಿಹಾಲೆ
ಲೆಪ್ಟಡೆನಿಯಾ ರೆಟಿಕ್ಯುಲಾಟಾ ಒಂದು ಹಳದಿ ಹೂ ಬಿಡುವ ಒಂದು ಬಳ್ಳಿ ನೀರಿನಾಸೆರೆಯಿರುವಲ್ಲಿ ತಾನಾಗಿಯೇ ಬೆಳೆಯುವ ಸಸ್ಯ. ಬಳ್ಳಿ ಅಥವಾ ಎಲೆಯನ್ನು ಮುರಿದಾಗ ನಸುಹಳದಿಯ ಬಣ್ಣದ ಹಾಲು ಬರುವ ಈ ಗಿಡವನ್ನು ಬೀಜಗಳಿಂದ ಪಡೆಯಬಹುದು. ಬೀಜ ಹಾಕಿದ ಮೂರು-ನಾಲ್ಕು ತಿಂಗಳಲ್ಲಿ ಬಳಸಬಹುದಾದ ಮಟ್ಟಕ್ಕೆ ಬೆಳೆಯುತ್ತದೆ. ಎಲೆಗಳು ಹಳದಿಯಾಗುವ ಮೂದಲು ಉಪಯೋಗಿಸಬೇಕು . ಈ ಸಸ್ಯ ಔಷಧವಷ್ಟೇ ಅಲ್ಲ ಅತ್ಯುತ್ತಮ ತರಕಾರಿಯು ಹೌದು.[೧]
ಸಿಹಿಹಾಲೆ, ಪೌಷ್ಟಿಕಾಂಶ ಮತ್ತು ಜೀವಸತ್ವಗಳ ಆಗರ. ಕಣ್ಣುಗಳ ದೃಷ್ಟಿಶಕ್ತಿ ಹೆಚ್ಚಿಸಿ, ಕೆಮ್ಮು-ದಮ್ಮು, ದುಬ೯ಲತೆಳನ್ನು ನಿವಾರಿಸಿ, ರೋಗನಿರೋಧಕ ಶಕ್ತಿಯನ್ನು ಬೆಳೆಸುತದೆ.[೨]
ಇತರ ಹೆಸರು
ಬದಲಾಯಿಸಿ- ಸಿಹಿಸಾಲೆ
- ಕಿರುಹಾಲೆ
- ಹಾಲುಬಳ್ಳಿ
- ಫಲತಿಗೇ ಬಳ್ಳಿ
- ದೊದೆಬಳ್ಳಿ
ಉಪಯೋಗ
ಬದಲಾಯಿಸಿ- ಸಿಹಿಹಾಲೆಯ ಸೊಪ್ಪನ್ನು ಹೆಸರುಕಾಳು ಆಥವ ತೊಗರಿ ಬೇಳೆಯೂಂದಿಗೆ ಸೇರಿಸಿ ಪಲ್ಯ ಮಾಡಿ ತಿನ್ನುವುದರಿಂದ ಹಾಲು ಕುಡಿಸುವ ತಾಯಂದೆರಲ್ಲಿ ಎದೆಹಾಲಿನ ಪ್ರಮಾಣ ಹೆಚ್ಚುತ್ತದೆ. ಮಗುವಿಗೆ ಪೌಷ್ಟಿಕಾಂಶ ದೊರೆಯುತ್ತದೆ. ರೋಗನಿರೋಧಕ ಶಕ್ತಿಯೂ ಬೆಳೆಯುತ್ತದೆ. ಈ ಸೊಪ್ಪಿನ ಸಾರು ಆಥವಾ ಕಟ್ಟು ಕೂಡ ಇಷ್ಟೆ ಒಳೆಯದು.
- ಕೆಮ್ಮು, ದಮ್ಮು ಸ್ವರವ್ಯತ್ಯಾಸ ಮುಂತಾದವುಗಳಲ ಇದರು ಎಲೆಗಳಿಂದ ತೆಗೆದ ಮೂರು-ನಾಲ್ಕು ಟೀ ಚಮಚದಷ್ಟು ರಸಕ್ಕೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ದಿನದಲ್ಲಿ ಎರಡು ಮೂರು ಬಾರಿ ಆಹಾರಕ್ಕೆ ಮೊದಲು ಸೇವಿಸಬೇಕು. ಇದರಿಂದ ಗಂಟ್ಲು ಉರಿ ಮತ್ತು ಮೂಗಿನಿಂದ ಸುರಿಯುವ ರಕ್ತವು ನಿಲ್ಲುತ್ತದೆ.
- ವಾರದಲ್ಲಿ ಒಂದೆರಡು ಬಾರಿ ತರಕಾರಿಯಾಗಿ ಬಳಸುವುದರಿಂದ 'ಎ' ಜೀವಸತ್ವದ ಕೊರತೆಯಿಂದ ಕಾಣಿಸುವ ದೃಷ್ಟಿಮಾಂದ್ಯ ಸಂಪುಣ೯ವಾಗಿ ಪರಿಹಾರವಾಗಿ ಕಣ್ಣು ಆರೋಗ್ಯ ಪುಣ೯ವಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ https://scialert.net/fulltextmobile/?doi=ajps.2010.314.319
- ↑ ಔಷಧೀಯ ಗುಣವುಳ್ಳ ಹಿತ್ತಲ ಗಿಡ, ಡಾ. ವೈಜಯಂತಿಮಾಲಾ, ಪುಟ ೨೭, ೨೦೦೨, ಬಿ. ಆರ್. ಜಗದೀಶ್