ಗಣಕೀಕೃತ ಛೇದಚಿತ್ರಣ

(ಸಿಟಿ ಸ್ಕ್ಯಾನ್ ಇಂದ ಪುನರ್ನಿರ್ದೇಶಿತ)

ಗಣಕೀಕೃತ ಛೇದಚಿತ್ರಣವು (ಸೀಟಿ) ಗಣಕಯಂತ್ರ ಸಂಸ್ಕರಣದಿಂದ ರಚಿತವಾದ ಛೇದಚಿತ್ರಣವನ್ನು ಬಳಸುವ ಒಂದು ವೈದ್ಯಕೀಯ ಚಿತ್ರಣ ವಿಧಾನ. ಒಂದೇ ಪರಿಭ್ರಮಣದ ಅಕ್ಷದ ಸುತ್ತ ತೆಗೆದ ಎರಡು-ಆಯಾಮದ ಕ್ಷ-ಕಿರಣ ಚಿತ್ರಗಳ ಭಾರಿ ಪ್ರಮಾಣದ ಶ್ರೇಣಿಯಿಂದ ಒಂದು ವಸ್ತುವಿನ ಒಳಭಾಗದ ಮೂರು ಆಯಾಮದ ಚಿತ್ರವನ್ನು ಸೃಷ್ಟಿಸಲು ಅಂಕೀಯ ರೇಖಾಗಣಿತ ಸಂಸ್ಕರಣವನ್ನು ಬಳಸಲಾಗುತ್ತದೆ. ಕ್ಷ-ಕಿರಣ ರಶ್ಮಿಯನ್ನು ತಡೆಗಟ್ಟುವ ಅವುಗಳ ಸಾಮರ್ಥ್ಯವನ್ನು ಆಧರಿಸಿ ವಿವಿಧ ಶಾರೀರಿಕ ರಚನೆಗಳನ್ನು ತೋರಿಸಲು ವಿಂಡೋಯಿಂಗ್ ಎಂದು ಪರಿಚಿತವಾದ ಪ್ರಕ್ರಿಯೆಯ ಮೂಲಕ ಬದಲಾಯಿಸಬಲ್ಲ ದತ್ತಾಂಶದ ಪರಿಮಾಣವನ್ನು ಸೀಟಿ ವಿಧಾನ ಸೃಷ್ಟಿಸುತ್ತದೆ.

ಒಂದು ಬಹು-ಛೇದ ಸೀಟಿ ಶೋಧಕ
Sketch of a CT scanner.[]