ಸಿಖ್ ಧರ್ಮ

(ಸಿಖ್‌‌ ಧರ್ಮ ಇಂದ ಪುನರ್ನಿರ್ದೇಶಿತ)

ಸಿಖ್ ಧರ್ಮ ಅಥವಾ ಸೀಖ್ ಧರ್ಮ (ಪಂಜಾಬಿ ಭಾಷೆಯಲ್ಲಿ: ਸਿੱਖੀ ) ೧೬ನೇ ಶತಮಾನದಲ್ಲಿ ಗುರು ನಾನಕ್ ಮತ್ತು ಅವರ ನಂತರದ ಒಂಬತ್ತು ಗುರುಗಳ ಉಪದೇಶಗಳ ಆಧಾರದ ಮೇಲೆ ಉತ್ತರ ಭಾರತದಲ್ಲಿ ಸ್ಥಾಪನೆಗೊಂಡ ಒಂದು ಧರ್ಮ[]. ಸಿಖ್ ಪದವು ಸಂಸ್ಕೃತ ಮೂಲದ ಶಿಷ್ಯ ಪದದಿಂದ ಬಂದಿದೆ.[] ಸಿಖ್ ಧರ್ಮ ಪ್ರಪಂಚದ ೫ನೇ ದೊಡ್ಡ ಧರ್ಮವಾಗಿದೆ. ಪರ್ಷಿಯನ್ ಭಾಷೆಯು ಮಾತನಾಡುವ ಮತ್ತು ಬರೆಯುವ ಭಾಷೆಯಾಗಿದೆ. [] ಸಿಖ್ ಧರ್ಮವು ಜಾತಿ ಪದ್ದತಿಯ ಕ್ರಿಯಾವಿಧಿಗಳನ್ನು ಮತ್ತು ವೈರಾಗ್ಯವನ್ನು ತಿರಸ್ಕರಿಸುತ್ತದೆ. ಇದು ಲಿಂಗಗಳ ಮತ್ತು ಎಲ್ಲಾ ಧರ್ಮಗಳ ನಡುವೆ ಸಮಾನತೆ ಗುರುತಿಸುತ್ತದೆ ಹಾಗು ಯಾವುದೇ ಅಮಲೇರಿಸುವ ಪದಾರ್ಥಗಳ ಸೇವನೆಯನ್ನು ನಿಷೇಧಿಸಿದೆ.

ಜನಪ್ರಿಯವಾಗಿ ಚಿನ್ನದ ದೇವಸ್ಥಾನ ಎಂದು ಕರೆಯಲಾಗುವ ಹರಿಮಂದಿರ್ ಸಾಹಿಬ್, ಸಿಖ್ಖರ ಒಂದು ಪವಿತ್ರ ಸ್ಥಳ

ಉಲ್ಲೇಖಗಳು

ಬದಲಾಯಿಸಿ
  1. https://www.allaboutsikhs.com/introduction/introduction-to-sikhism
  2. Singh, Khushwant (2006). The Illustrated History of the Sikhs. India: Oxford University Press. p. 15. ISBN 0-19-567747-1.
  3. Adherents.com. "Religions by adherents". Archived from the original (PHP) on 2008-06-15. Retrieved 2007-02-09.