ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.



ಸಿಂಧೂಲಿಪಿ ಇನ್ನು ಗೌಪ್ಯಲಿಪಿಯಾಗಿಯೇ ಉಳಿದಿದೆ. ಅದನ್ನು ಓದಲು ಮಾಡಿರುವ ಪ್ರಯತ್ನಗಳು ಸ್ತುತ್ಯಾರ್ಹ. ವ್ಯಾಡೆಲ್- ಈ ಲಿಪಿಯು ಭಾರತಕ್ಕೆ ಸುಮೇರಿಯನ್ನರಿಂದ ಬಂದಿದೆ ಎಂದಿದ್ದಾನೆ. ರೆವೆರೆಂಡ್ ಹೆರಾಸ್ ಇದರ ಮೂಲವನ್ನು ಶೋಧಿಸಲು ಸಂಶೋಧನೆ ಕೈಗೊಂಡಿದ್ದಾರೆ. ಕೆಲವು ವಿದ್ವಾಂಸರು ಗಣಕಯಂತ್ರದ ನೆರವಿನಿಂದ ಈ ಲಿಪಿಯನ್ನು ಓದುವ ಪ್ರಯತ್ನವನ್ನು ಮಾಡಿದ್ದಾರೆ. ಭಾಷಾ ವಿದ್ವಾಂಸರು ಪ್ರತಿ ಚಿಹ್ನೆಗೂ ದ್ರಾವಿಡ ಅರ್ಥವನ್ನು ಕೊಟ್ಟರೂ, ಅವರ ಪ್ರಯತ್ನ ಸಫಲವಾಗಲಿಲ್ಲ. ಫಿನ್ನಿಷ್ ವಿದ್ವಾಂಸರು "ಸಿಂಧೂಲಿಪಿ"ಯ ಪ್ರತಿಯೊಂದು ಚಿಹ್ನೆಯನ್ನು ಅಭ್ಯಸಿಸಿ, ಆ ಪ್ರತಿಯೊಂದು ಚಿಹ್ನೆಗಳಲ್ಲಿ ಒಂದೊಂದು, ಒಂದೊಂದು ಪದಕ್ಕೆ ಸಮ ಎಂದಿದ್ದಾರೆ.