ಸಾಹಿತ್ಯ ಮತ್ತು ಸಮಾಜ

ಸಾಹಿತ್ಯ ಮತ್ತು ಸಮಾಜ ಬದಲಾಯಿಸಿ

ಭಾರತದ ಪ್ರಾಚೀನ ಕಾಲದ ಸಾಹಿತ್ಯದ ಮೇಲೆ ದೃಷ್ಟಿ ಹರಿಸಿದರೆಮಧ್ಯ ಮತ್ತು ಆಧುನಿಕ ಸಾಹಿತ್ಯವನ್ನು ಅವಲೋಕಿಸಿದರೆ, ಪ್ರತ್ಯೇಕ ಕಾಲದ ಸಾಹಿತ್ಯವು ಆಯಾ ಕಾಲದ ಮೇಲೆ ಅವಲಂಬಿತವಾಗಿದೆ ಎಂದು ತಿಳಿಯಬಹುದು. ಪ್ರತ್ಯೇಕ ಕಾಲದ ಸಾಹಿತ್ಯವು ಆಯಾ ಕಾಲದ ಸಮಾಜದ ದರ್ಪಣವಾಗಿದೆ. ವಿದೇಶಿ ಯಾತ್ರಿಕರಾದಂತಹ ಮೆಹಸ್ತನೀಜ್ ಮತ್ತು ಇತರರು ಭಾರತಕ್ಕೆ ಆಗಮಿಸಿದ ಅವಧಿಯಲ್ಲಿ ಬರೆದ ಸಂಸ್ಮರಣೆಗಳಿಂದ ಅಂದಿನ ಆರ್ಥಿಕ ಸ್ಥಿತಿ, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆ ನಮಗೆ ಇಂದು ಬಹು ಸುಲಭವಾಗಿ ತಿಳಿಯಬಹುದು