ಸಾರ್ವಜನಿಕ ಹಣಕಾಸು

ಇತ್ತೀಚೆಗೆ ಸಾರ್ವಜನಿಕ ಹಣಕಾಸು ಅರ್ಥಶಾಸ್ತ್ರದ ಒಂದು ಮುಖ್ಯ ಅಧ್ಯಾಯವಾಗಿ ಪರಿಣಮಿಸಿದ್ದು ಬಹು ಹೆಚ್ಚಿನ ಮಹತ್ವ ಪಡೆದಿದೆ. ಸಾರ್ವಜನಿಕ ಸಂಸ್ಥೆಗಳ ಆಯವ್ಯಯಗಳನ್ನು ಹಾಗೂ ಅವುಗಳೆರಡರ ನಡುವಣ ಸಂಬಂಧದ ಬಗ್ಗೆ ಚರ್ಚಿಸುವ ಶಾಸ್ತ್ರವನ್ನು "ಸಾರ್ವಜನಿಕ ಹಣಕಾಸಿಣ ಶಾಸ್ತ್ರ" ಎಂದು ಕರೆಯುತ್ತಾರೆ.ಅಂದರೆ ಸಾರ್ವಜನಿಕ ಹಣಕಾಸು ಸರ್ಕಾರದ ಆದಾಯ ಮತ್ತು ವೆಚ್ಚಗಳ ಬಗ್ಗೆ ಅದ್ಯಯನ ಮಾಡುವುದಲ್ಲದೆ ಅವೆರಡನ್ನೂ ಹೇಗೆ ಹೊಂದಿಸಲಾಗುತ್ತದೆ ಎಂಬುದನ್ನೂ ತಿಳೆಸುತ್ತದೆ. ಸಾರ್ವಜನಿಕ ಸಂಸ್ಥೆಗಳು ಹಣವನ್ನು ಗಳಿಸುವ ಹಾಗು ಗಳಿಸಿದ ಹಣವನ್ನು ವೆಚ್ಚಮಾಡುವ ವಿಧಾನವನ್ನು ಸಾರ್ವಜನಿಕ ಹಣಕಾಸಿನ ಶಾಸ್ತ್ರದಲ್ಲಿ ಅರಿಯಬಹುದು. ಮುಖ್ಯವಾಗಿ ಸಾರ್ವಜನಿಕ ಹಣಕಾಸೆಂದರೆ ವರಮಾನ, ಲಾಭ ಮುಂತಾದ ಮೂಲಗಳಿಂದ ಪಡೆಯುವ ಹಣ.

Logo - Union Public Service Commission - Government of India

ಸಾರ್ವಜನಿಕ ಹಣಕಾಸಿನ ಅಧ್ಯಯನವು ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ಅಧ್ಯಯನದ ನಡುವೆ ಬರುತ್ತದೆ. ಹಿಂದೆ ಅರ್ಥಶಾಸ್ತ್ರವನ್ನು ರಾಜಕೀಯ ಅರ್ಥಶಾಸ್ತ್ರವೆಂಬುದಾಗಿ ಪರಿಗಣಿಸಲಾಗಿತ್ತು.ಅರ್ಥಶಾಸ್ತ್ರದಲ್ಲಿ ಮಾನವನೇ ಕೇಂದ್ರ ಬಿಂದು. ಅವನ ಕಲ್ಯಾಣವೇ ಅರ್ಥಶಾಸ್ತ್ರದ ಮುಖ್ಯ ಗುರಿ. ಮಾನವ ಹಿಂದೆ ಅಲೆದಾಡುವ ಪ್ರವೃತ್ತಿಯನ್ನು ಹೋಂದಿದ್ದ ಕ್ರಮೇಣ ಅವನು ಒದೆಡೆ ನೆಲೆಸಿ ಸಂಸಾರ ಹೂಡಿದನು. ಹೀಗೆ ಅನೇಕ ಸಂಸಾರಗಳು ಕಲೆತು ಸಮಾಜವಾಗಿ ಪರಿಣಮಿಸಿತು. ಇಂತಹ ಸಮಾಜಗಳು ಕಲೆತು ಒಂದು ಹಳ್ಳಿಯಾಯಿತು. ಅನೇಕ ಹಳ್ಳಿಗಳು ಒಂದು ಗೂಡಿ ನಗರವಾಯಿತು. ಅನೇಕ ನಗರಗಳು ಸೇರಿ ಒಂದು ರಾಷ್ಟ್ರವಾಯಿತು. ಈ ರೀತಿ ಒಂದು ರಾಷ್ಟ್ರವು ಅನುಷ್ಠಾನಾಕ್ಕೆ ಬರಲು ಜನಸಂಖ್ಯೆ ಹಾಗೂ ಪ್ರದೇಶಗಳು ಕಾರಣವಾದವು. ರಾಷ್ಟ್ರದ ಮುಖ್ಯ ಗುರಿ ಮಾನವನನ್ನು ರಕ್ಷಿಸಿ, ಅವನಿಗೆ ಕಲ್ಯಾಣವನ್ನುಂಟು ಮಾಡುವುದು. ಆದಕಾರಣ ರಾಷ್ಟ್ರ ಆರ್ಥಿಕ ಕಲ್ಯಾಣ ಉಂಟಾಗಲು ರಾಷ್ಟ್ರವು ಆರ್ಥಿಕಾಭಿವೃದ್ಧಿಯನ್ನು ಹೊಂದಬೇಕು. ತ್ವರಿತ ವೇಗದ ಆರ್ಥಿಕ ಮುನ್ನಡೆಯನ್ನು ಹೊಂದಬೇಕಾದರೆ ರಾಷ್ಟ್ರದಲ್ಲಿ ಲಭ್ಯವಿರುವ ಸಾಧನೆ ಸಂಪತ್ತುಗಳ ಬಳಕೆ ಯೋಗ್ಯ ರೀತಿಯಲ್ಲಿ ಆಗಬೇಕು. ಇದರಿಂದ ಉತ್ಪಾದನೆಯು ಅಧಿಕಗೊಂಡು ದುಡಿಯ ಬಯಸುವವರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ಈ ಎಲ್ಲಾ ಕ್ರಮಗಳನ್ನು ಕಾರ್ಯ ರೂಪಕ್ಕೆ ತಂದು ಯಶಸ್ಸನ್ನು ಸಾಧಿಸಬೇಕಾದರೆ ಒಂದು ಪ್ರಬಲವಾದ ರಾಜಕೀಯ ಸಂಸ್ಥೆಯ ಅವಶ್ಯಕತೆ ಇದೆ. ಅದೇ ಸರಕಾರ. ಆದಾಯ,_ಸಾರ್ವಜನಿಕದ ಹೆಚ್ಚಳವೇ ಗುರಿ.

ಹಿಂದೆ ಸಾರ್ವಜನಿಕ ಹಣಕಾಸನ್ನು, ಸರ್ಕಾರದ ಕಾರ್ಯಗಳಿಗೆ ಬೆಕಾಗುವ ಹಣವನ್ನು ವಸೂಲು ಮಾಡುವ ಹಾಗೂ ಯುದ್ಧದ ವೆಚ್ಚಗಳಿಗೆ ಅಗತ್ಯವಾದ ಹಣವನ್ನು ಒದಗಿಸುವ ಉಪಕರಣವೆಂದು ಅರ್ಥಶಾಸ್ತ್ರಜ್ಞರು ಬಣ್ಣಿಸಿದ್ದರು. ಪೂರ್ವದಲ್ಲಿ ಸರ್ಕಾರಗಳು ಸಾಮಾನ್ಯವಾಗಿ ಪೋಲೀಸ್ ರಾಷ್ಟ್ರಗಳಾಗಿದ್ದವು. ಆಗಿನ ಸರ್ಕಾರ ಮುಖ್ಯ ಕರ್ತವ್ಯವೆಂದರೆ ಜನರ ರಕ್ಷಣೆ, ನ್ಯಾಯ ಮತ್ತು ಶಿಸ್ತಿನ ಪರಿಪಾಲನೆ ಹಾಗೂ ಹೊರಗಿನ ಆಕ್ರಮಣಗಳನ್ನು ತಡೆಗಟ್ಟುವುದು. ಆದರೆ ಇಂದಿನ ಸರ್ಕಾರದ ಕರ್ತವ್ಯ ಕೇವಲ ಇಷ್ಟಕ್ಕೇ ಸೀಮೀತವಾಗಿಲ್ಲ. ಇಂದು ಸರ್ಕಾರದ ಕಾರ್ಯ ಕ್ಷೇತ್ರವು ವಿಶಾಲವಾಗಿ ಬೆಳಯುತ್ತಿದೆ. ಪ್ರಜೆಗಳ ಕಲ್ಯಾಣವೇ ಇಂದಿನ ಸರ್ಕಾರದ ಮುಖ್ಯ ಗುರಿ. ಜನತೆಯ ಹಿತವನ್ನು ಸಾಧಿಸುವುದರ ಮೂಲಕ ಸುಖೀ ರಾಜ್ಯದ ನಿರ್ಮಾಣ ಇದೇ ಈಗಿನ ಸರ್ಕಾರದ ಮುಖ್ಯ ಧ್ಯೇಯ. ಆದರಿಂದಲೇ ಆಧುನಿಕ ರಾಷ್ಟ್ರಗಳನ್ನು ಕಲ್ಯಾಣ ರಾಷ್ಟ್ರಗಳೆಂಬುದಾಗಿ ಕರೆಯಲಾಗಿದೆ. ಜನತೆಯ ಕಲ್ಯಾಣ,ಸುಖಗಳನ್ನು ಸಾಧಿಸಲು ಸರ್ಕಾರವು ಅನೇಕ ಬಗೆಯಲ್ಲಿ ಹಣ ವೆಚ್ಚ ಮಾಡಬೇಕಾಗುತ್ತದೆ. ಇದಕ್ಕಾಗಿ ತಕ್ಕ ಆದಯ ಗಳಿಸಬೇಕಾಗುತ್ತವೆ. ಇವುಗಳ ಅದ್ಯಯನವೇ ಸಾರ್ವಜನಿಕ ಹಣಕಾಸು. ಸುಖೀ ರಾಜ್ಯದ ನಿರ್ಮಾಣಕ್ಕೆ ಸಾರ್ವಜನಿಕ ಹಣಕಾಸು ಸೂಕ್ತ ಸಾದನದ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಸುಖೀ ರಾಷ್ಟ್ರದ ಗುರಿಯನ್ನು ನಿರೂಪಿಸಲು ಸಾದ್ಯ. ಆದ್ದರಿಂದಲೇ ಇಂದು ಸಾರ್ವಜನಿಕ ಹಣಕಾಸಿನ ಅಭ್ಯಾಸಕ್ಕೆ ಆಧಿಕ ಮಹತ್ವವನ್ನು ಕೊಡಲಾಗಿದೆ.

Indian finance and banking (1920) (14773020431)


ಆದುನಿಕ ಅರ್ಥಿಕ ವ್ಯವಸ್ತೆಯಲ್ಲಿ ಸಾರ್ವಜನಿಕ ಹಣಕಾಸಿನ ಪ್ರಾಮುಕ್ಯತೆ

ಬದಲಾಯಿಸಿ

ರಾಷ್ಟ್ರವು ಒಂದು ರಾಜಕೀಯ ಸಂಘಟನೆ. ಇದರ ಮುಖ್ಯ ಗುರಿ ಮಾನವನ ಹಿತರಕ್ಷಣೆ. ಇದನ್ನು ಹೊಂದಲು ರಾಷ್ಟ್ರವು ಅನೇಕ ಕಾರ್ಯಗಳನ್ನು ಕೈ ಗೊಳ್ಳುತ್ತದೆ. ಹಿಂದುಳಿದ ರಾಷ್ಟ್ರಗಳ ಮೂಲ ಸಮಸ್ಯೆ ಎಂದರೆ ಜನರ ಅಲ್ಪ ವರಮಾನ. ಇದಕ್ಕೆ ಕಾರಣಗಳು ಹಲವಾರು. ಅಲ್ಪ ಪ್ರಮಾಣದ ಉಳಿತಾಯ,ನಿರುದೋಗ, ಸಾದನ ಸಂಪ್ಪತ್ತುಗಳ ಅಭಾವ, ಆರ್ಥಿಕ ಮತ್ತು ಸ್ಮಾಜಿಕ ನ್ಯೂನತೆ ಇತ್ಯಾದಿ. ಇವೆಲ್ಲದರ ಪರಿಹಾರಕ್ಕಾಗಿ ಸರ್ಕಾರವು ಉಳಿತಾಯವನ್ನು ಹೆಚ್ಚಿಸುವುದು, ಬಂಡವಾಳ ಶೇಖರಣೆಗೆ ಉತ್ತೆಜನ, ಉಧೋಗಾವಕಾಶಗಳ ಕಲ್ಪನೆ ಇತ್ಯಾದಿ ಅನೂಕೂಲಗಳನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ಹಿಂದೆ ಸರ್ಕಾರ ತನ್ನ ಅವಶ್ಯತೆಗಷ್ಟೇ ಹಣ ಪಡೆಯಬೇಕೆಂದು ಅಭಿಪ್ರಾಯಪಡಲಾಗಿತ್ತು. ಆದರೆ ಈಗಿನ ರಾಷ್ಟ್ರಗಳು ಕಲ್ಯಾಣ ರಾಷ್ಟ್ರಗಳಾದ್ದರಿಂದ ಜನರ ಕಲ್ಯಾಣವನ್ನು ಹೋಂದಲು ಹಲವಾರು ಬಗೆಯ ಅಭಿವ್ರೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಆದ ಕಾರಣ ಹೆಚ್ಚಿನ ಪ್ರಮಾಣದ ಹಣವನ್ನು ಪಡೆಯಬೀಕಾಗುತ್ತದೆ. ಆದ್ದರಿಂದ ಉತ್ಪಾದನೆಯನ್ನು ಅಧಿಕಗೊಳಿಸುವುದು, ಉದ್ದಿಮೆಗಳನ್ನು ಸ್ಥಾಪಿಸುವುದು, ಜನರಿಗೆ ಅಧಿಕ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸುವುದನ್ನು ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಸಾಕಷ್ಟು ಹಣವನ್ನು ಜನರಿಂದ ಪಡೆಯುತ್ತಾರೆ. ಹಣಕಾಸಿನ ನೀತಿಯನ್ನು ರೂಪಿಸಿಕೊಂಡು, ಶ್ರೀಮಂತ ಮತ್ತು ಬಡವರಲ್ಲಿನ ಅಸಮಾನತೆಯನ್ನು ನಿವಾರಿಸಿ ಆಥಿಕ ಸಮಾನತೆಯನ್ನುಂಟ್ಟು ಮಾಡಲು ಶ್ರಮಿಸುತ್ತಿದೆ. ಅಮ್ದರೆ ಸರ್ಕಾರ ತೆರಿಗೆಗಳ ಮೂಲಕ ಶ್ರಿಮಂತರಿಂದ ಹಣವನ್ನು ಸಂಗ್ರಹಿಸಿ ಅದನ್ನು ಬಡವರ ಕಲ್ಯಾಣಕ್ಕಾಗಿ ಬಳಸುತ್ತದೆ. ಸರ್ಕಾರ ತೆರಿಗೆ ನೀತಿಯನ್ನು ಕಾರ್ಯರೂಪಕ್ಕೆ ತರುವುದರ ಮುಖ್ಯ ಉದ್ದೇಶ ೧)ತನ್ನ ಕಾರ್ಯಗಳನ್ನು ಸಮರ್ಪಕವಾಗಿ ನೆರವೇರಿಸಲು ಸಾಕಷ್ಟು ಹಣ ಪಡೆಯುವುದು. ೨)ಸಾಮಾಜಿಕ ಮತ್ತು ಆಥಿಕ ಉದ್ದೇಶಗಳನ್ನು ಹೊಂದುವುದು. ಸಾರ್ವಜನಿಕ ಹಣಕಾಸಿನ ಪದ್ಧತಿಯು ಆರ್ಥಿಕ ಕ್ಷೇತ್ರದ ಮೇಲೆ ತನ್ನ ಪ್ರಭಾವ ಭೀರುತ್ತದೆ. ಹಿಂದೆ ಸಾರ್ವಜನಿಕ ಹಣಕಾಸೆಂದರೆ ಆದಯವನ್ನು ಗಳಿಸುವ ಒಂದು ಸಾಧನ ಮಾತ್ರವಾಗಿತ್ತು. ಆದರೆ ಇಂದು ಸಾರ್ವಜನಿಕ ಹಣಕಾಸು ಸಾಮಾಜಿಕ ನ್ಯಾಯದ ಒಂದು ಉಪಕರಣವಾಗಿದೆ. ಆಧುನಿಕ ಸರ್ಕಾರಗಳು ಬದವ ಬಲ್ಲಿದವರ ನಡುವಿನ ಅಂತರವನ್ನು ತುಂಬಲು ಇದನ್ನು ಬಳಸುತ್ತಿವೆ. ಈ ಉದ್ದಿಮೆಗಳ ಸಾಧನೆಯಲ್ಲಿ ಸಾರ್ವಜನಿಕ ಹಣಾಕಾಸು ಇತ್ತೀಚೆಗೆ ಹೆಚ್ಚು ಮಹತ್ವವನ್ನು ಪಡೆದುಕೋಂಡಿವೆ.[]

ಡಾಲ್ಟನ ಪ್ರಕಾರ ಸಾರ್ವಜನಿಕ ಹಣಕಾಸಿನ ಮುಲಭೂತ ಸಿದ್ಧಾಂತ "ಗರಿಷ್ಟ ಸಾಮಾಜಿಕ ತತ್ವ" ಅಥವಾ ಸಮಾಜದ ಪರಮ ಹಿತವನ್ನು ಪಡೆಯುವುದು. ಅಂದರೆ ಸಮಾಜದಲ್ಲಿನ ಹೆಚ್ಚು ಜನರಿಗೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಉತ್ಪಾದನೆ ಮತ್ತು ಉಪಭೋಗಗಳನ್ನು ಸುಧಾರಿಸುವುದು. ಆದರೆ ಸಾರ್ವಜನಿಕ ಹಣಕಾಸು ಕೆಲವು ಜನರಿಗೆ, ಕೆಲವು ವರ್ಗದವರಿಗೆ ಮಾತ್ರ ಕಲ್ಯಾಣವನ್ನು ಒದಗಿಸುವುದಂತಿರ ಬಾರದು. ಸರ್ಕಾರವು ಸಾರ್ವಜನಿಕರಿಗಾಗಿ ಮಾಡುವ ಹಣದ ವೆಚ್ಚವು ಸಮಾಜದಲ್ಲಿನ ಬಹುಸಂಖ್ಯಾತ ಜನರಿಗೆ ಅನುಕೂಲವಾಗುವಂತಿರ ಬೇಕು. ಅಂದರೆ ಸರ್ಕಾರವು ಕೆಲವರಿಂದ ಹಣವನ್ನು ಪಡೆದು, ಆ ಹಣವನ್ನು ಬಹು ಜನರ ಹಿತಕ್ಕಾಗಿ ವೆಚ್ಚ ಮಾಡ ಬೇಕು. ರಾಷ್ಟ್ರದಲ್ಲಿ ಉತ್ಪಾದಿಸಲ್ಪಟ್ಟ ವಸ್ತುಗಳು ಸರಿಯಾಗಿ ವಿತರಣೆಯಾಗಿ ಜನರ ಜೀವನ ಮಟ್ಟ ಏರ ಬೇಕು. ಇದರಿಂದ ತಿಳಿದು ಬರುವುದೆನೆಂದರೆ ಬಹುಸಂಖ್ಯಾತ ಜನರ ಕಲ್ಯಾಣವಾಗ ಬೇಕು. ಈ ತತ್ವದ ಮುಖ್ಯ ಅಡಿಗಲ್ಲ ಮೇಲೆ ಇಂದಿನ ಆಧುನಿಕ ರಾಷ್ಟ್ರಗಳು ನಿಂತಿವೆ. ಗರಿಷ್ಟ ಸಂಖ್ಯೆಯ ಜನಕ್ಕೆ ಗರಿಷ್ಟ ಕ್ಷೇಮವನ್ನು ಒದಗಿಸುವುದೆ ಈ ರಾಷ್ಟ್ರಗಳ ಮುಖ್ಯ ಗುರಿಯಾಗಿದೆ. ಈ ಗುರಿಯ ಸಾಧನೆಯಲ್ಲಿ ಸಾರ್ವಜನಿಕ ಹಣಕಾಸು ಗಣನೀಯ ಪಾತ್ರ ವಹಿಸುತ್ತದೆ. ವೃದ್ದಿಯಾಗುತಿರುವ ಆರ್ಥಿಕ ಜೀವನದ ಜಟಿಲತೆಯನ್ನು ದೈರ್ಯದಿಂದ ಎದುರಿಸಿ ಸುವ್ಯವಸ್ತೆಯನ್ನು ತರುವಲ್ಲಿ ಸಾರ್ವಜನಿಕ ಹಣಕಾಸು ಬಹಳ ಪರಿಣಾಮಕಾರಿಯಾಗಿದೆ. ಇಂದು ಸರ್ಕಾರದ ಸ್ವಾಭಾವಿಕವಾದ ಕ್ರಿಯಾತ್ಮಕ ಕಾರ್ಯವು ಅತಿ ಹೆಚ್ಚಿನ ಮಟ್ಟದಲ್ಲಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಸಾರ್ವಜನಿಕ ಹಣಕಾಸಿನ ಚಟುವಟಿಕೆಗಳು ಹೆಚ್ಚುತಿರುವುದೆ ಆಗಿದೆ.

ಅನೇಕ ಸರ್ಕಾರಗಳು ಸಾರ್ವಜನಿಕ ಹಣಕಾಸಿನ ಸಂಧರ್ಭಕ್ಕೆ ತಕ್ಕಂತೆ ಹಣಕಾಸಿನ ನೀತಿಯನ್ನು ರೂಪಿಸುತ್ತವೆ. ಇದರ ಮುಖ್ಯ ಉದ್ದೇಶ ರಾಷ್ಟ್ರಿಯ ಆದಾಯ ಹಾಗು ಉದ್ಯೋಗಗಳನ್ನು ವಿಸ್ತರಿಸುವದರ ಮೂಲಕ ಆರ್ಥಿಕ ಭದ್ರತೆಯನ್ನು ಸಾದಧಿಸುವುದು ಮತ್ತು ಅತಿ ಪ್ರಾರಣಕ್ಕೆ ಎಡೆ ಮಾದಿ ಕೊಡದ ರೀತಿಯಲ್ಲಿ ವಿದೇಶಿ ವಿನಿಮಯ ವ್ಯವಹಾರವನ್ನು ಬಗೆಹರಿಸುವುದು.ಇದರಿಂದ ಸಾರ್ವಜನಿಕ ಹಣಕಾಸಿನ ಹಿರಿಮಯ ಅರಿವಾಗುತ್ತದೆ. ಇಂದಿನ ವಿಶ್ವದಲ್ಲಿರುವ ಅಮುಲ್ಯ ಸಾಧನ ಸಂಪತ್ತನ್ನು ಆರ್ಥಿಕ ರೀತಿಯಲ್ಲಿ ಉಪಯೋಗಿಸುವುದು ಅತ್ಯಗತ್ಯವಾಗಿದೆ. ಕನಿಷ್ಠ ಪ್ರಮಾಣದ ಸಾಧನ ಸಂಪತ್ತಿನಿಂದ ಪರಮಾವದಿ ಪ್ರತಿಫಲ ಪಡೆಯ ಬೇಕೆನ್ನುವುದೆ ಎಲ್ಲಾ ರಾಷ್ಟ್ರಗಳ ಉದ್ದೇಶವಾಗಿದೆ. ಇದರ ಸಾಧನೆಗಾಗಿ ಸರ್ಕಾರವು, ಸಾರ್ವಜನಿಕರೂ ಒಂದಾಗಿ ಕಲೆತು ತೀರ್ಮಾನಗಳನ್ನು ಕೈಗೊಳ್ಳಬೇಕು. ಆಗಲೆ ಕಲ್ಯಾಣ ರಾಷ್ಟ್ರಗಳ ಕನಸು ನನಸಾಗಲು ಸಾಧ್ಯ.

ಸಾರ್ವಜನಿಕ ಹಣಕಾಸಿಗೂ ಖಾಸಗಿ ಹಣಕಾಸಿಗೂ ಇರುವ ವ್ಯತ್ಯಸಗಳು

ಬದಲಾಯಿಸಿ

ಹಣಕಾಸನ್ನು ಪ್ರಧಾನವಾಗಿ ಖಾಸಗಿ ಹಣಕಾಸು ಹಾಗೂ ಸಾರ್ವಜನಿಕ ಹಣಕಾಸೆಂದು ವಿಂಗಡಿಸಬಹುದು. ವಾಸ್ತವವಾಗಿ ಹೇಳಬೇಕೆಂದರೆ ಇರುವುದು ಒಂದೇ ರಾಷ್ಟೀಯ ಕ್ಷೇತ್ರ. ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳು ಇದರ ಎರಡು ಮುಖ್ಯ ಭಾಗಗಳು. ಇವೆರಡೂ ಶೀಗ್ರಕಾಲದ ಆರ್ಥಿಕೋನ್ನತಿಯ ಸಾಧನೆಗಾಗಿ ಶ್ರಮಿಸುತ್ತವೆ. ಈ ಎರಡು ಕ್ಷೇತ್ರಗಳ ಮೂಲ ಉದೇಶ ಒಂದೇ.ರಾಷ್ಟ್ರದ ಪ್ರಗತಿಯ ರಂಗಮಂಟಪದಲ್ಲಿ ಇವೆರಡೂ ಏಕ ರೀತಿಯ ಪ್ರಾತಿನಿಧ್ಯವನ್ನು ಹೊಂದಿವೆ.ಯಾವ ಒಂದು ಕ್ಷೇತ್ರದ ವಿಸ್ತರಣೆಯನ್ನು ಗಮನಿಸಿದ್ದರೂ ರಾಷ್ಟ್ರದ ಅಬಿವೃದ್ದಿ ಕುಂಠಿತಗೊಳ್ಳುತ್ತದೆ.ಯಾವುದೇ ಒಬ್ಬ ವ್ಯಕ್ತಿಯು ಖಾಸಗಿ ವ್ಯವಹಾರಕ್ಕೆ ಸಂಬಂಧ ಪಟ್ಟ ವ್ಯವಹಾರಗಳಿಗೆ ವೆಚ್ಚ ಮಾಡಿದರೆ ಆ ಹಣವನ್ನು ಖಾಸಗಿ ಹಣಕಾಸು ಎಂದು ಕರೆಯುತ್ತಾರೆ.ಇಲ್ಲಿ ವ್ಯಕ್ತಿಯು ತನ್ನ ಸ್ವಾರ್ಥವನ್ನು ಹೊಂದಿರುತ್ತಾನೆ.ಸರ್ಕಾರಿ ಸಂಸ್ಥೆಗಳಾದ ಕೇಂದ್ರ ಸರಕಾರ,ರಾಜ್ಯ ಸರಕಾರಗಳು ವೆಚ್ಚ ಮಾಡುವ ಹಾಗೂ ಆದಾಯವನ್ನು ಪಡೆಯುವ ವ್ಯವಹಾರಗಳಿಗೆ ಸಾರ್ವಜನಿಕ ಹಣಕಾಸು ಎಂದು ಕರೆಯಲಾಗುತ್ತದೆ.ಅಂದರೆ ಸಾರ್ವಜನಿಕ ಸಂಸ್ಥ್ರೆಗಳು ನಿರ್ವಹಿಸುವ ಹಣಕಾಸಿನ ವ್ಯವಹಾರಗಳಿಗೆ ಸಾರ್ವಜನಿಕ ಹಣಕಾಸು ಎನ್ನಬಹುದು.ಇಲ್ಲಿ ಸರ್ಕಾರ ವೆಚ್ಚ ಮಾಡುವ ಹಣವು ಪ್ರಜೆಗಳ ಕಲ್ಯಾಣವನ್ನೇ ಮುಖ್ಯ ಗುರಿಯಾಗಿ ಹೊಂದಿರುತ್ತದೆ.ಸಾರ್ವಜನಿಕ ಹಣಕಾಸಿನೊಂದಿಗೆ ಖಾಸಗಿ ಹಣಕಾಸನ್ನು ಹೋಲಿಸಿದರೆ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ.

  1. ಆದಾಯ ಮತ್ತು ವೆಚ್ಚದ ಹೊಂದಾಣಿಕೆ: ಖಾಸಗಿ ವ್ಯಕ್ತಿಗಲಿಗೂ ಸರ್ಕಾರಕ್ಕೂ ಕಂಡುಬರುವ ಮೊದಲನೆಯ ವ್ಯತ್ಯಾಸ ಆದಯ ಮತ್ತು ವೆಚ್ಚದ ಹೊಂದಾಣಿಕೆ. ಖಾಸಗಿ ವ್ಯಕ್ತಿಗಳ ಆದಯವು ಅವರ ವೆಚ್ಚವು ಅದರ ಆದಾಯವನ್ನು ನಿರ್ಧರಿಸುತ್ತದೆ. ಅಂದರೆ ಖಾಸಗಿ ವ್ಯಕ್ತಿಗಳು ತಮ್ಮ ವೆಚ್ಚವನ್ನು ಆದಾಯಕ್ಕೆ ಹೊಂದಿಸಿಕೊಂಡು ಅದರಂತೆ ತಮ್ಮ ಕಾರ್ಯವನ್ನು ಕೈಗೊಳ್ಳುತ್ತಾರೆ. ಆದರೆ ಸರ್ಕಾರ ತನ್ನ ವೆಚ್ಚಕ್ಕೆ ಆದಾಯವನ್ನು ಹೊಂದಿಸಿಕೊಳ್ಳುತ್ತಾದೆ. ಒಬ್ಬ ಖಾಸಗಿ ವ್ಯಕ್ತಿಯು ತಾನು ಗಳಿಸುವುದಕ್ಕಿಂತ ಹೆಚ್ಚಿನ ಕರ್ಚು ಮಾಡಲು ಹೋಗುವುದಿಲ್ಲ. ಅವನು ಮೊದಲು ಆದಾಯವನ್ನು ಪಡೆದು ನಂತರ ಆದನ್ನು ಯಾವ ರೀತಿ ವೆಚ್ಚ ಮಾಡಬೇಕೆಂಬುದನ್ನು ಯೋಚಿಸುತ್ತಾನೆ. ಆದರೆ ಸರ್ಕಾರಕ್ಕೆ ಈ ಬಗೆಯ ಮಿತಿ ಇಲ್ಲಿ. ಮೊದಲು ಸರ್ಕಾರ ಎಷ್ಟು ಹಣವನ್ನು ವೆಚ್ಚ ಮಾಡಬೇಕು ಎಂಬುದನ್ನು ತೀರ್ಮಾನಿಸಿ ಅನಂತರ ಹಣವನ್ನು ತೆರಿಕೆಗಳ ಮೂಲಕ ವಸೂಲಿ ಮಾಡುತ್ತದೆ. ಕೆಲವು ವೇಳೆ ಖಾಸಗಿ ವ್ಯಕ್ತಿಗಳು ಕಷ್ಟಪಟ್ಟು ದುಡಿಯುವುದರಿಂದ ತಮ್ಮ ಆದಾಯವನ್ನು ಹೆಚ್ಚಿಸಿ ಕೊಳ್ಳಬಹುದು. ಹಾಗೆಯೇ ಕೆಲವು ವೇಳೆ ಸರ್ಕಾರಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ಆಯವ್ಯಯವನ್ನು ತಯಾರಿಸುವಾಗ ವಿವಿಧ ಇಲಾಖೆಗಳಿಂದ ಎಷ್ಟೆಷ್ತು ಖರ್ಚು ಬರುತ್ತದೆ ಎಂಬ ಬಗ್ಗೆ ವಿವರವನ್ನು ಪಡೆದು ನಂತರ ಅಷ್ಟು ಹಣವನ್ನು ಯಾವ ರೀತಿ ಪಡೆಯಬೇಕೆಂಬುದನ್ನು ನಿರ್ಧರಿಸುತ್ತದೆ. ಆದರೆ ಖಾಸಗಿ ವ್ಯಕ್ತಿಗಳು ಹಾಸಿಗೆ ಇದಷ್ಟು ಕಾಲು ಚಾಚಬೇಕು ಎನ್ನುವ ನಾಣ್ಣುಡಿಯಂತೆ ತಮ್ಮ ಆದಾಯಕ್ಕೆ ತಕ್ಕಂತೆ ವೆಚ್ಚ ಮಾಡುತ್ತಾರೆ.
  1. ಕಾಲದ ಅವಧಿ

ಸರಕಾರಕ್ಕೆ ಆಯವ್ಯಯವನ್ನು ತಯಾರಿಸುವುದಕ್ಕಾಗಿ ಒಂದು ನಿರ್ಧಿಷ್ತ ಅವಥಿ ಇರುತ್ತದೆ. ಅಂದರೆ ಸರಕಾರ ತನ್ನ ಆದಾಯ ಮತ್ತು ವೆಚ್ಚವನ್ನು ಒಂದು ವರ್ಷದ ಅವಧಿಗಾಗಿ (ಸಾಮಾನ್ಯವಾದಿ ಏಪ್ರಿಲ್ ತಿಂಗಳಿಂದ ಮಾರ್ಚ್ ಅಂತ್ಯದವರೆಗೆ ನಾನಾ ಮೂಲಗಳಿಂದ ಪಡೆಯುವ ಆದಾಯವನ್ನು ಹಾಗೂ ನಾನಾ ಕಾರ್ಯಗಳಿಗೆ ವೆಚ್ಚ ಮಾಡುವ ಹಣವನ್ನು ಒಳಗೊಂಡಿರುವ ಒಂದು ಸಮಗ್ರ ಪಟ್ಟಿ. ಇದನ್ನು ತಯಾರಿಸಲು ಖಾಸಗಿ ವ್ಯಕ್ತಿಗಳು ಅವಧಿಗೆ ಯಾವ ವಿಧವಾದ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ಮೇಲಾಗಿ ಒಂದು ನಿರ್ದಿಷ್ಟ ಅವಧಿಯೊಳಗೆ ಖಾಸಗಿ ವ್ಯಕ್ತಿಗಳು ತಮ್ಮ ಅಯವ್ಯಯವನ್ನು ಸರಿಪಡಿಸಿಕೊಳ್ಳಬೇಕೆಂಬ ನಿಯಮವಿರುವುದಿಲ್ಲ. ಖಾಸಗಿ ವ್ಯಕ್ತಿಗಳು ಸಾಮನ್ಯವಾಗಿ ಒಂದು ತಿಂಗಳಿಗೊಮ್ಮೆ ಅವರ ಆದಾಯ ವೆಚ್ಚಗಳನ್ನು ಲೆಕ್ಕ ಮಾಡಿಕೊಳ್ಳುತ್ತಾರೆ.

  1. ಆಂತರಿಕೆ ಸಾಲ

ರಾಷ್ಟ್ರವು ತನಗೆ ಹಣದ ಅವಶ್ಯಕತೆ ಕಂಡುಬಂದಾಗ ಸಾರ್ವಜನಿಕರಿಂದ ಹಣವನ್ನು ಸಾಲದ ರೂಪದಲ್ಲಿ ಪಡೆಯುತ್ತದೆ. ಕೆಲವು ವೇಳೆ ಹೊರ ದೇಶಗಳಿಂದಲೂ ಸಾಲವನ್ನು ಪಡೆಯಬಹುದು. ಆದ ಕಾರಣ ಸರಕಾರಕ್ಕೆ ಹೆಚ್ಚು ಆದಾಯದ ಮೂಲಗಳಿರುತ್ತವೆ. ಆದರೆ ಖಾಸಗಿ ವ್ಯಕ್ತಿಯು ಈ ಬಗೆಯ ಸಾಲ ಪಡೆಯಲಾಗುವುದಿಲ್ಲ. ಅವನು ಪರರರಿಂದ ಸಾಲ ಪಡೆಯಬಹುದು. ಖಾಸಗಿ ವ್ಯಕ್ತಿಗೆ ಎಲ್ಲಾ ಸಾಲಗಳೂ ಹೊರಗಿನವು. ಅವನು ಸ್ನೇಹಿತರಿಂದ, ನೆಂಟರಿಷ್ಟರಿಂದ, ಬ್ಯಾಂದಿನಿಂದ ಸಾಲ ಪಡೆಯಬಹುದು. ಅವನು ತನ್ನಿಂದಲೇ ಸಾಲ ಪಡೆಯಲಾರ. ಅಂದರೆ ಆಂತರಿಕ ಸಾಲದ ಸೌಲಭ್ಯವು ಖಾಸಗಿ ವ್ಯೆಕ್ತಿಗಿರುವುದಿಲ್ಲ.

  1. ಗೌಪ್ಯ

ಖಾಸಗಿ ಹಣಕಾಸು ಗೌಪ್ಯದಿಂದ ಸುತ್ತು ವರಿಯಲ್ಪಟ್ಟಿರುತ್ತದೆ. ಆಂದರೆ ಖಾಸಗಿ ವ್ಯಕ್ತಿಗಳು ಹಾಗು ಸಂಸ್ಥೆಗಳು ತಮ್ಮ ಆದಾಯ ಮತ್ತು ವೆಚ್ಚಗಳನ್ನು ಆದಷ್ಟು ಗುಟ್ಟಾಗಿಟ್ಟಿರುತ್ತಾರೆ. ಅವರು ತಮ್ಮ ಆದಾಯ ಎಷ್ಟು, ಅದು ಯಾವ ರೀತಿ ಬರುತ್ತದೆ, ಅದನ್ನು ಯಾವ ಬಾಬುಗಳ ಮೇಲೆ ವೆಚ್ಚ ಮಾಡಬೇಕು ಎಂಬುದನ್ನು ಯಾರಿಗೂ ತಿಳಿಸಲು ಬಯಸುವುದಿಲ್ಲ. ಒಂದು ವೇಳೆ ತಿಳಿಸಿದರೂ ತಮ್ಮ ಆದಾಯ ವೆಚ್ಚಗಳ ನೈಜಸ್ತಿತಿಯನ್ನು ಹೊರಗೆ ಬಿಟ್ಟುಕೊಡದೆ ಸುಳ್ಳು ಅಂಕಿ ಸಂಖ್ಯೆಗಳನ್ನು ಹೇಳುವುದೇ ಹೆಚ್ಚು. ಆದರೆ ಸರಕಾರದ ಆದಾಯ ಮತ್ತು ವೆಚ್ಚಕ್ಕೆ ಈ ಬಗೆಯ ಗುಟ್ಟು ಸಲ್ಲದು. ಸಾರ್ವಜನಿಕ ಹಣಕಾಸಿನ ಮುಖ್ಯತಿರುಳು ಜಾಹಿರಾತು. ಸರಕಾರವು ಪ್ರತಿ ವರ್ಷ ತನ್ನ ಆದಾಯವನ್ನು ಯಾವ ಯಾವ ಮೂಲಗಳಿಂದ ಆದಾಯ ಬರುತ್ತದೆ ಮತ್ತು ಅದನ್ನು ಯಾವ ಯಾವ ಬಾಬುಗಳಿಗೆ ವೆಚ್ಚ ಮಾಡಲಾಗುತ್ತದೆ ಎಂಬುದರ ಬಗ್ಗೆ ಒಂದು ಸಮಗ್ರ ಪಟ್ಟಿ ಮಾಡಿ ಅದನ್ನು ಪ್ರಕಟಿಸುತ್ತದೆ. ಅದಕ್ಕೆ ಸಾಕಷ್ಟು ಪ್ರಚಾರ ಕೊಡಲಾಗುತ್ತದೆ. ಎಲ್ಲರಿಗೂ ಅದರ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಶಾಸನ ಸಭೆಗಳಲ್ಲಿ, ಸಂಸತ್ತಿನಲ್ಲಿ ಅದನ್ನು ಬಹಿರಂಗವಾಗಿ ಚರ್ಚಿಸಲಾಗುತ್ತದೆ. ಪ್ರಚಾರಕ್ಕೆ ಅದು ಬಲ ಕೊಡುತ್ತದೆ. ಇದರಿಂದ ಸರ್ಕಾರದ ಬಗ್ಗೆ ಅಪನಂಬಿಕೆ ಬೇ ರೂರಲು ಕಾರಣವಿಲ್ಲ ವಾಗುತ್ತದೆ. []

  1. ಅತಿಪ್ರಸರಣವು ಸರಕಾರದ ಒಂದು ವಿಶೇಷ ಹಕ್ಕು

ಸರಕಾರಕ್ಕೆ ಹಣದ ಅವಶ್ಯಕತೆಯು ಕಂಡುಬಂದಾಗ ಹೆಚ್ಚು ಹೊಸ ನೋಟುಗಳನ್ನು ಮುದ್ರಿಸಿಕೊಳ್ಳುವ ವಿಶೇಷ ಹಕ್ಕಿರುತ್ತದೆ. ಯುದ್ಧದ ಕಾಲದಲ್ಲಿ, ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಆರ್ಥಿಕಾಭಿವ್ರುದ್ಧಿ ಹೊಂದುವ ಕಾಲಗಳಲ್ಲಿ ಸರಕಾರಕ್ಕೆ ಅಧಿಕ ಪ್ರಮಾಣದ ಹಣ ಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೆಚ್ಚು ನೋಟುಗಳನ್ನು ಮುದ್ರಿಸದೆ ರಾಷ್ಟ್ರವನ್ನು ಗಂಡಾಂತರ ಪರಿಸ್ಥಿತಿಯಿಂದ ಪಾರುಮಾಡಲು ಸಾಧ್ಯವಿಲ್ಲ, ಜನರಿಂದ ತೆರಿಗೆಗಳ ಮೂಲಕ ಹೆಚ್ಚು ಹಣ ಪಡೆಯುವುದು ಕಷ್ಟಸಾಧ್ಯವಾದಾಗ ಹೆಚ್ಚು ನೋಟುಗಳ ಮುದ್ರಣವನ್ನು ಕೈಕೊಳ್ಳಬಹುದು. ಹಾಗೆಯೇ ರಾಷ್ಟ್ರದ ಅಭಿವ್ರುದ್ಧಿಗಾಗಿ ಈ ರೀತಿಯಿಂದ ಹಣ ಪಡೆಯುವ ವಿಶೇಷ ಸೌಲಭ್ಯ ಸರಕಾರಕ್ಕಿದೆ. ಅಂದರೆ ಸರಕಾರ ತನಗೆ ಬೇಕಾದ ಹಣವನ್ನು ತಾನೇ ನಿರ್ಮಿಸಿಕೊಳ್ಳಬಹುದು. ಆದಾರೆ ಖಾಸಗಿ ವ್ಯಕ್ತಿಗಳಿಗೆ ಈ ಸೌಲಭ್ಯವಿಲ್ಲ. ಖಾಸಗಿ ವ್ಯಕ್ತಿಯು ನೋಟುಗಳನ್ನು ಮುದ್ರಿಸಿದರೆ ಅವು ಖೋಟಾ ನೋಟುಗಳಾಗುತ್ತವೆ. ಮೇಲಾಗಿ ಈ ಕ್ರಮ ಕೈಗೊಳ್ಳುವ ವ್ಯಕ್ತಿ ಜೈಲಿಗೆ ಹೋಗಬೇಕಾಗುತ್ತದೆ.


ಉಲ್ಲೆಖಗಳು

ಬದಲಾಯಿಸಿ
  1. http://www.yourarticlelibrary.com/economics/public-finance-meaning-and-concept-of-public-finance/38101/
  2. "ಆರ್ಕೈವ್ ನಕಲು". Archived from the original on 2016-01-31. Retrieved 2016-01-09.