ಸಾರಸ್ ಕೊಕ್ಕರೆ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಸಾರಸ್ ಕೊಕ್ಕರೆ ಭಾರತೀಯ ಭೂಖ೦ಡ,ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಕೊಕ್ಕರೆ ಸಾರಸ್.ಸ೦ಸ್ಕ್ರತದಲ್ಲಿ ಸಾರಸ ಎ೦ದರೆ ಕೆರೆಯ ಹಕ್ಕಿ ಎ೦ದರ್ಥ ಇದನ್ನು ಸಾರ೦ಸ ಎ೦ದೂ ಕರೆಯುತ್ತಾರೆ.ಭಾರತದಲ್ಲಿ ಗ೦ಗಾ ತೀರದಿ೦ದ ಆರ೦ಬಿಸಿ ಗೋದಾವರೀ ತೀರದ ನಡುವಿನ ಪ್ರದೇಶದಲ್ಲಿ ಪಶ್ಚಿಮ ಬ೦ಗಾಳ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ಸಾರಸ್ ಹಕ್ಕಿಗಳು ಕಾಣಿಸುತ್ತದೆ. ನಿ೦ತಾಗ ೬ ಅಡಿ ಎತ್ತರವಾಗಿರುವ ಈ ಹಕ್ಕಿ,ಹಾರುವ ಹಕ್ಕಿಗಳಲ್ಲೇ ಅತಿ ಎತ್ತರದ ಹಕ್ಕಿಯಾಗಿದೆ.ಪೂಣ೯ ಬೆಳದ ಸಾರಸ್ ಸುಮಾರು ೫ ರಿಂದ ೧೨ ಕಿಲೋ ತೂಗುತ್ತದೆ.ಸಾರಸ್ ಕೊಕ್ಕರೆಯ ಮೈ ಬಣ್ಣ ಬೂದು.ಇದರ ತಲೆ ಮತ್ತು ಕುತ್ತಿಗೆಯ ಮೇಲ್ಬಾಗ ಕೆ೦ಪು ಬಣ್ಣವಾಗಿರುತ್ತದೆ.ಇದರ ರೆಕ್ಕೆಗಳ ತುದಿ ಕಪ್ಪಗಾಗಿದ್ದು ಉದ್ದ ಕಾಲುಗಳು ಗುಲಾಬಿ ಬಣ್ಣದ್ದಾಗಿರುತ್ತದೆ. ಇ೦ದು ಭಾರತದಲ್ಲಿ ಸುಮಾರು ೧೦,೦೦೦ ಸಾರಸ್ ಹಕ್ಕಿಗಳಿವೆ.ವಾಲ್ಮೀಕಿ ಮಹಶಿ೯ ಸಾರಸ್ ಕೊಕ್ಕರೆಯನ್ನು ಕೊ೦ದ ಒಬ್ಬ ವ್ಯಾದನನ್ನು ಶಪಿಸಿದ ಬಳಿಕ ರಾಮಾಯಣ ಕಾವ್ಯವನ್ನು ಬರೆದರು ಎಂದು ಪುರಾಣಗಳಲ್ಲಿ ಹೇಳಿದೆ ಹೀಗಾಗಿ ಭಾರತೀಯರು ಈ ಹಕ್ಕಿಯನ್ನು ಕೊಲ್ಲುವುದಿಲ್ಲ ಆದರೆ ಬ್ರಿಟೀಷರು ಇದನ್ನು ಮಾ೦ಸಕ್ಕಾಗಿ ಬೇಟೆಯಾಡುತ್ತಿದ್ದರು.