ಕ್ರಿಸ್ತಶಕ ವರ್ಷಗಳನ್ನು ಬರೆಯುವಾಗ ಉಪಯೋಗಿಸುವ ಕ್ರಿ.ಶ. - ಕ್ರಿ.ಪೂ. ಬದಲಿಗೆ ಸಾಮಾನ್ಯ ಯುಗ ಅಥವಾ ಪ್ರಸ್ತುತ ಯುಗ (ಸಂಕ್ಷಿಪ್ತವಾಗಿ, ಸಿ.ಇ.- Common Era (CE)) ಎಂಬುದು ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲಾಗುವ ಪರ್ಯಾಯ ಯುಗ ಗಣನೆಯ ಹೆಸರು. ಕ್ರೈಸ್ತರ ಪ್ರಭಾವದ ಪಶ್ಚಿಮದೇಶಗಳಲ್ಲಿ ಕ್ರಿಸ್ತನು (ಶಿಲುಬೆಗೇರಿದ) ದಿನದಿಂದ ಯುಗ (AD ಮತ್ತು BD) ಅಥವಾ ಶಕೆಯನ್ನು ಎಣಿಸುವ ಪದ್ದತಿ ಆರಂಭವಾಯಿತು. ಈಗ ಅದನ್ನು ಭಾರತ ಮತ್ತು ಜಗತ್ತಿನ ಇತರ ಎಲ್ಲಾ ಅಥವಾ ಅನೇಕ ದೇಶಗಳು ಅನುಸರಿಸುತ್ತವೆ.ಸರಳವಾಗಿ ಇಂಗ್ಲಿಷ್ನಲ್ಲಿ(AD means After Death, i.e., after the death of Christ BC Before means Christ)
Anno Domini ಆಸ್ಟ್ರಿಯಾದ ಕ್ಲಾಜೆನ್‌ಫರ್ಟ್ ಕ್ಯಾಥೆಡ್ರಲ್‌ನಲ್ಲಿ ಅನ್ನೋ ಡೊಮಿನಿ ಶಾಸನ
  • ಕಾಲಾನುಕ್ರಮಣಿಕೆಯನ್ನು ಹೆಚ್ಚಾಗಿ ೨ ಬಗೆಯಿಂದ ಗುರುತಿಸಲಾಗುತ್ತದೆ:-
  • ಡಿಯೋನೀಷಿಯನ್ ಯುಗದ ವ್ಯವಸ್ಥೆ - ಇದರಲ್ಲಿ "ಕ್ರಿಸ್ತ" (ದೇವರ ವರ್ಷ) ಮತ್ತು "BCE" (ಕ್ರಿಸ್ತನ ಮೊದಲು; ಕ್ರಿಸ್ತನ ಜನನಕ್ಕಿಂತ ಹಿಂದೆ, ಕ್ರಿಸ್ತಪೂರ್ವ= ಕ್ರಿಪೂ.BC:Before Christ) ಎಂದು ಪ್ರತ್ಯೇಕಿಸುತ್ತದೆ.

ಸಾಮಾನ್ಯ ಯುಗದ ವ್ಯವಸ್ಥೆ

ಬದಲಾಯಿಸಿ
  • 'ಸಿಇ' (CE)ಗೆ ಮುಂಚಿನ ಯುಗವನ್ನು ಸಿಇ ಪೂರ್ವ ಅಥವಾ ಕ್ರಿ.ಪೂ (ಸಾಮಾನ್ಯ ಯುಗದ ಮೊದಲು- ಹಿಂದೆ) ಎಂದು ಕರೆಯಲಾಗುತ್ತದೆ. ಸಾಮಾನ್ಯ ಯುಗ ಗುರುತಿಸುವಿಕೆ ವ್ಯವಸ್ಥೆಗಳನ್ನು ಡಿಯೋನೀಷಿಯನ್ ಯುಗದ ವ್ಯವಸ್ಥೆಗೆ ಪರ್ಯಾಯವಾಗಿ ಬಳಸಬಹುದು, ಯುಗಗಳನ್ನು . ಎರಡೂ ಸಂಕೇತ ವ್ಯವಸ್ಥೆಗಳು ಸಂಖ್ಯಾತ್ಮಕವಾಗಿ ಒಂದೇ ಆಗಿರುತ್ತವೆ; ಆದ್ದರಿಂದ, "2014 ಸಿಇ" ಎಂದರೆ "2014 ಎಡಿ (AD)" ಮತ್ತು "ಕ್ರಿ.ಪೂ 400" ಎಂದರೆ "ಕ್ರಿ.ಪೂ / ಬಿಸಿಇ 400".
  • 20 ನೇ ಶತಮಾನದ ಉತ್ತರಾರ್ಧದಲ್ಲಿ, ಸಿಇ ಮತ್ತು ಕ್ರಿ.ಪೂ.ಗಳ ಬಳಕೆಯನ್ನು ಸಾಮಾನ್ಯವಾಗಿ ಶೈಕ್ಷಣಿಕ ಮತ್ತು ವೈಜ್ಞಾನಿಕ ಪ್ರಕಟಣೆಗಳಲ್ಲಿ ಬರಹಗಾರರು ಮತ್ತು ಪ್ರಕಾಶಕರು ಜನಪ್ರಿಯಗೊಳಿಸಿದರು, ಕ್ರಿಶ್ಚಿಯನ್ನರಲ್ಲದವರಿಗೆ ಜಾತ್ಯತೀತತೆ ಮತ್ತು ಸೂಕ್ಷ್ಮತೆಯನ್ನು ಒತ್ತಿಹೇಳಲು 'ಎಚ್', ಮತ್ತು 'ಸಿ' ಉಪಯೋಗಿಸಿದರು, "ಕ್ರಿ.ಶ." ಜೀಸಸ್ ಕ್ರೈಸ್ಟ್ನಿಂದ "ಕ್ರಿಸ್ತ" ವರೆಗೆ ಮತ್ತು "ಡೊಮಿನ್ಸ್" ಎಂದು ಸ್ಪಷ್ಟವಾಗಿ ಉಲ್ಲೇಖಿಸಲಿಲ್ಲ.

ಲ್ಯಾಟಿನ್

ಬದಲಾಯಿಸಿ
  • ಆನೊ ಡೊಮಿನಿ (ಕ್ರಿ.ಶ.) ಮತ್ತು ಕ್ರಿಸ್ತನ ಮೊದಲು (ಕ್ರಿ.ಪೂ.) ಪದಗಳನ್ನು ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್‌ಗಳಲ್ಲಿ ವರ್ಷಗಳನ್ನು ಲೇಬಲ್ ಮಾಡಲು ಅಥವಾ ಸಂಖ್ಯೆ ಎಣಿಸಲು ಬಳಸಲಾಗುತ್ತದೆ. AD = "ಆನೊ ಡೊಮಿನಿ" ಎಂಬ ಪದವು ಮಧ್ಯಕಾಲೀನ ಲ್ಯಾಟಿನ್ ಮತ್ತು ಇದರ ಅರ್ಥ "ಭಗವಂತನ ವರ್ಷದಲ್ಲಿ", [][]
  • ಕ್ರಿ.ಶ. "ಸಾವಿನ ನಂತರ" ಅಲ್ಲ. ಇದು ಅನ್ನೋ ಡೊಮಿನಿಯನ್ನು ಸೂಚಿಸುತ್ತದೆ, ಇದನ್ನು ಭಗವಂತನ ವರ್ಷದಲ್ಲಿ ಅನುವಾದಿಸಲಾಗಿದೆ. ಯೇಸು ಜೀವಂತವಾಗಿದ್ದ ಸಮಯವು ಕ್ರಿ.ಶ. ಆದ್ದರಿಂದ, ಯೇಸುವಿನ ಶಿಲುಬೆಗೇರಿಸುವ ವರ್ಷ ಕ್ರಿ.ಶ 32 ಎಂದು ನಂಬಲಾಗಿದೆ.[]

ಇತಿಹಾಸ

ಬದಲಾಯಿಸಿ
  • ಕ್ರಿಸ್ತಶಕ ಪ್ರಪಂಚದಲ್ಲಿ ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ವರ್ಷ ತಿಂಗಳು ದಿವಸಗಳನ್ನು ಸೂಚಿಸುವ ಒಂದು ವ್ಯವಸ್ಥೆ (ಕ್ರಿಶ್ಚನ್ ಈರ). ಉದಾಹರಣೆಗೆ, 15-8-1972 ಎಂದರೆ ಒಂದು ನಿಶ್ಚಿತ ಮುಹೂರ್ತದಿಂದ ತೊಡಗಿ 1971 ವರ್ಷಗಳು ಮತ್ತು 7 ತಿಂಗಳುಗಳು ಸಂದ ಬಳಿಕ ಬರುವ 15ನೆಯ ದಿವಸ ಎಂದು ಅರ್ಥವಾಗುತ್ತದೆ. ಇಲ್ಲಿ ದಿವಸ-ತಿಂಗಳು ಸಂಬಂಧ ಸಹ ಗೊತ್ತಾದ ಕ್ರಮದಲ್ಲಿಯೇ ಇರಬೇಕು.
  • ಕ್ರಿಸ್ತಶಕದ ಪ್ರಾರಂಭ ಜನವರಿ 1, 754 ಎ.ಯು.ಸಿ. (ಆನ್ನೋ ಆರ್ಬಿಸ್ ಕಾಂಡಿಟೇ ಎಂಬುದರ ಸಂಕ್ಷೇಪ ರೂಪ. ರೋಮ್ ನಗರದ ತಳಪಾಯ ಹಾಕಿದಂದಿನಿಂದ 754 ವರ್ಷಗಳ ತರುವಾಯ ಕ್ರಿಸ್ತಶಕ ಆರಂಭವಾಗುತ್ತದೆ ಎಂದು ಇದರ ಅರ್ಥ). ಕ್ರಿಸ್ತನ ಜನನ ಅದೇ ಹಿಂದಿನ ಡಿಸೆಂಬರ್ 25ರಂದು ಆಗಿದ್ದಿರಬೇಕು ಎಂದು ಮೊದಲು ನಂಬಲಾಗಿತ್ತು. ಇದರ ವಿಚಾರದಲ್ಲಿ ಸಾಕಷ್ಟು ಗೊಂದಲ ಮುಂದಿನ ಹಲವಾರು ಶತಮಾನಗಳ ಕಾಲ ಪ್ರಚಲಿತವಾಗಿತ್ತು. ಇವನ್ನೆಲ್ಲ ನಿವಾರಿಸಿ ಸಮನ್ವಯ ಸಾಧಿಸಿದವ ಡಯೊನೀಸಿಯಸ್ ಎಗ್ಸಿಜಸ್ (ಸು. 496-540) ಎಂಬ ಇಟಲಿ ದೇಶದ ಕ್ರಿಶ್ಚನ್ ಪಾದ್ರಿ. ವಾಸ್ತವಿಕವಾಗಿ ಈತನೇ ಕ್ರಿಸ್ತಶಕದ ಸಂಸ್ಥಾಪಕ. ಖಚಿತತೆಯ ದೃಷ್ಟಿಯಿಂದ ವರ್ಷದ ಸಂಖ್ಯೆಯ ಒತ್ತಿಗೆ ಎ.ಡಿ. ಎಂಬ ಸಂಕ್ಷೇಪಗಳನ್ನು ಬರೆಯುವ ಕ್ರಮವನ್ನೂ ಈತ ಬಳಕೆಗೆ ತಂದ. (ಕನ್ನಡದಲ್ಲಿ ಕ್ರಿ.ಶ. ಎಂದು ಸಂಖ್ಯೆಯ ಮೊದಲೇ ಬರೆಯುತ್ತೇವೆ. ಇದಕ್ಕೆ ಸಂವಾದಿಯಾಗಿ ಕ್ರಿಸ್ತಪೂರ್ವ, ಇಂಗ್ಲಿಷಿನಲ್ಲಿ ಬಿಫೋರ್ ಕ್ರೈಸ್ಟ್ ಅಥವಾ ಬಿ.ಸಿ. ಇದೆ.) ಈ ಅಕ್ಷರಗಳ ವಿಸ್ತøತ ರೂಪ ಅನ್ನೊ ಡೋಮಿನಿ; ಅರ್ಥ ನಮ್ಮ ಪ್ರಭುವಿನ ವರ್ಷದಲ್ಲಿ ಎಂದು. ಡಯೊನೀಸಿಯಸನ ಸುಧಾರಣೆಯನ್ನು ಎಲ್ಲ ಗುರುಗಳೂ ಎಲ್ಲ ಪಂಥಗಳವರೂ ಒಡನೆಯೇ ಸ್ವೀಕರಿಸಲಿಲ್ಲ : ಸಾಕಷ್ಟು ದೀರ್ಘಕಾಲ ಕ್ರಿಸ್ತನ ಹುಟ್ಟಿನ - ಆದ್ದರಿಂದ ಕ್ರಿಸ್ತಶಕದ - ಆರಂಭದ ದಿವ¸ ಮತ್ತು ವರ್ಷವನ್ನು ಕುರಿತು ವಿವಾದ ಮುಂದುವರಿದಿತ್ತು. ಇಂಗ್ಲೆಂಡ್ 676ರಲ್ಲಿ ಡಯೊನೀಸಿಯಸ್ ವಿಧಾನವನ್ನು ಬಳಕೆಗೆ ತಂದಿತು. ಯುರೋಪ್ ಖಂಡದಲ್ಲಿ ಇದು ವ್ಯಾಪಕವಾಗಿ ಪಸರಿಸಿದ್ದು 11ನೆಯ ಶತಮಾನದ ಅನಂತರ; ಗ್ರೀಕ್ ಪ್ರಪಂಚದಲ್ಲಿ ಕಾಲೂರಿದ್ದು 15ನೆಯ ಶತಮಾನದಲ್ಲಿ. ಇದು ಹೇಗೂ ಇರಲಿ, ಇಂದು ಕ್ರಿಸ್ತಶಕ ಪ್ರಪಂಚದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವುದು ಮಾತ್ರವಲ್ಲ, ಎಲ್ಲ ನಾಗರಿಕರಿಗೂ ಸುಲಭವಾಗಿ ಅರ್ಥವೂ ಆಗುವುದು. ಇದರಿಂದಾಗಿ ವರ್ಷ, ತಿಂಗಳು, ದಿವಸಗಳ ನಿರೂಪಣೆಯಲ್ಲಿ ಒಂದು ವಿಧದ ಏಕತೆ ಒದಗಿದೆ.[]

ಕ್ಯಾಲೆಂಡರ್ ರಚನೆ ಮತ್ತು ಇತಿಹಾಸ - ವಿವರ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. [ "Anno Domini". Merriam Webster Online Dictionary. Merriam-Webster. 2003. Retrieved 4 October 2011. Etymology: Medieval Latin, in the year of the Lord]
  2. [ Blackburn & Holford-Strevens 2003, p. 782 "since AD stands for anno Domini, 'in the year of (Our) Lord'"]
  3. If B.C. means "Before Christ" and A.D. means "
  4. https://kn.wikisource.org/s/35u ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಿಸ್ತಶಕ