ಸಾದರ ಲಿಂಗಾಯತ
ಲಿಂಗಾಯತ ಜಾತಿಯ ಒಳಪಂಗಡ
ಸಾದರ ಲಿಂಗಾಯತ ಅಥವಾ ಸಾದರು ಅಥವಾ ಸಾದು ಲಿಂಗಾಯತರು ಅನ್ನುವುದು ಲಿಂಗಾಯತ ಸಮುದಾಯದಲ್ಲಿನ ಒಂದು ಪ್ರಮುಖ ಒಳಪಂಗಡ. ಮೂಲದ ಈ ಸಮುದಾಯದ ಪ್ರಮುಖ ವೃತ್ತಿ ಕೃಷಿ. ಇವರು ಮಧ್ಯ ಕರ್ನಾಟಕ ಭಾಗದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಶಿವಮೊಗ್ಗ, ಹಾವೇರಿ, ತುಮಕೂರು, ಹಾಸನ ಜಿಲ್ಲೆವಿಜಯನಗರ,ಬಳ್ಳಾರಿ, ಕೊಪ್ಪಳ, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಇನ್ನುಳಿದಂತೆ ಕರ್ನಾಟಕದ ಉಳಿದ ಬಾಗ,ಆಂದ್ರ,ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು,ಕೇರಳ, ಗೋವಾ ಗಳಲ್ಲಿ ಚದುರಿಹೋಗಿದ್ದಾರೆ. ಇವರು ಚಿತ್ರದುರ್ಗ ಜಿಲ್ಲೆ ಸಿರಿಗೆರೆಯ ತರಳಬಾಳು ಬೃಹನ್ಮಠದ ಅನುಯಾಯಿಗಳಾಗಿರುತ್ತಾರೆ.