ಸಾಕ್ರೆಟಿಸ್ ಕ್ರಿ.ಪೂ.೪೬೯-೩೯೯ ರಲ್ಲಿ ಗ್ರೀಸ್ ದೇಶದಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವಜ್ಞಾನಿ.ಅವನು ಸತ್ಯವಾದಿಯೂ,ನಿಷ್ಟೂರವಾದಿಯೂ ಆಗಿದ್ದನು.

Socrates
A bust of Socrates
A bust of Socrates in the Louvre
ಜನನ470/469 BC
Deme Alopece, Athens
ಮರಣ399 BC (age approx. 71)
Athens
ರಾಷ್ಟ್ರೀಯತೆGreek
ಕಾಲಮಾನAncient philosophy
ಪ್ರದೇಶWestern philosophy
ಪರಂಪರೆClassical Greek
ಮುಖ್ಯ  ಹವ್ಯಾಸಗಳುEpistemology, ethics
ಗಮನಾರ್ಹ ಚಿಂತನೆಗಳುSocratic method, Socratic irony
ಪ್ರಭಾವ ಬೀರು

ಗ್ರೀಕ್ ಸಮಾಜ ವಿಷಮ ಘಟ್ಟದಲ್ಲಿದ್ದಾಗ, ಅನೈತಿಕತೆ, ಡಂಬಾಚಾರ, ಸ್ವೇಚ್ಛಾಚಾರ ಖಂಡಿಸಿ, ಸಮಾಜದ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿದವನು ಸಾಕ್ರಟೀಸ್.“ಆತ್ಮವಿಮರ್ಶೆಯಿಲ್ಲದ ಅವೈಚಾರಿಕ ಜೀವನ ಬಾಳಲು ಯೋಗ್ಯವಾದುದಲ್ಲ” ಎಂಬ ತತ್ವ ಇವನದು. ಸಾಕ್ರಟೀಸಿನ ವಿಮರ್ಶ ಅಥವಾ ತರ್ಕಬುದ್ಢಿ ಸಮಾಜದಲ್ಲಿ ಯಾರನ್ನು ಬಿಡಲಿಲ್ಲ. ಅವನು ರಾಜಕೀಯ ನಾಯಕನಿರಲಿ, ಆಡಳಿತ ಸೂತ್ರಧಾರಿಗಳಾಗಿರಲಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾಗಿರಲಿ ಅವರನ್ನು ತನ್ನ ವಿಚಾರ ವಿಮರ್ಶೆಗೆ ಒಳಪಡಿಸಿ ತೂಗದೆ ಇರುತ್ತಿರಲಿಲ್ಲ. ಅವನು ನಿರ್ಭಯದಿಂದ ತಪ್ಪನ್ನು ತಪ್ಪೆಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ. ಜನರ ಮೌಡ್ಯವನ್ನು ದಯೆದಾಕ್ಷಣ್ಯವಿಲ್ಲದೆ ವಿಮರ್ಶೆಯಿಂದ ಬಟ್ಟ ಬಯಲಾಗಿಸುತ್ತಿದ್ದ. ಈ ಕ್ರಿಯೆಯಿಂದ ಕೆಲವರ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿ, ಕೆಲ ಅಧಿಕಾರಿಗಳ, ಪ್ರತಿಷ್ಠಿತ ಜನರ ದ್ವೇಷಕ್ಕೆ ಗುರಿಯಾದ. ಯುವಕರನ್ನು ದುರ್ಮಾಗಕ್ಕೆ ಎಳೆಯುತ್ತಿದ್ದಾನೆ ಮತ್ತು ಸಂಪ್ರದಾಯ ವಿರೋಧಿ ಮತ್ತು ಅಥೆನ್ಸಿನ ದೇವರ ಮೇಲೆ ನಂಬಿಕೆಯಿಟ್ಟಿಲ್ಲ ಎಂಬ ಸುಳ್ಳು ಅಪವಾದಗಳನ್ನು ಆಧಾರಿಸಿ, ಸಾಕ್ರಟೀಸ್ ತಪ್ಪಿತಸ್ಥನೆಂದು ನಿರ್ಧರಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಯ್ತು. ಸಾವಿಗೆ ಅಂಜದ ಸಾಕ್ರಟೀಸ್ “ಸಾವು ಬಂದರೆ ಬರಲಿ, ಅಧರ್ಮವನ್ನಾಚರಿಸುವುದಿಲ್ಲ” ಎಂದು ಸಾವಿಗೆ ತಯಾರಾಗುತ್ತಾನೆ.

The Death of Socrates, by Jacques-Louis David (1787)

ಸಾಕ್ರೆಟಿಸ್‍ಗೆ "ಪ್ಲೇಟೊ "ನಂತಹ ಶ್ರೇಷ್ಠ ಶಿಷ್ಯರೂ ಇದ್ದರು.ಸಾಕ್ರಟೀಸ್ ಮರಣದಂಡನೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿತ್ತು, ಅದರೆ ಯಾವುದೇ ವಿಧದಲ್ಲೂ ತಪ್ಪಿಸಿಕೊಳ್ಳುವುದಕ್ಕೆ ಸ್ವಲ್ಪವೂ ಪ್ರಯತ್ನಿಸದೆ,“ಹತ್ತು ಸಲ ಮರಣಯಾತನೆಯನ್ನು ಅನುಭವಿಸಬೇಕಾದರೂ ನನ್ನ ನಡತೆಯನ್ನೇನೂ ಬದಲಾಯಿಸುವುದಿಲ್ಲವೆಂದು ಮಾತ್ರ ತಿಳಿಯಿರಿ”ಎಂದು ಹೇಳುತ್ತಾ ಜೈಲಿನ ಸೇವಕನು ತಂದುಕೊಟ್ಟ "ಹೆಮ್ಲಾಕ್ "ಎಂಬ ವಿಷದ ಬಟ್ಟಲಿಂದ ವಿಷವನ್ನು ನಿರ್ವಿಕಾರ ಚಿತ್ತದಿಂದ ತಾನೆ ತೆಗೆದುಕೊಂಡು ಗಟಗಟನೆ ಕುಡಿದು ಸಂತೋಷದಿಂದ ಸಾಯುತ್ತಾನೆ.

ಸಾಕ್ರಟೀಸ್ ಬಗ್ಗೆ ಜೂಲಿಯನ್ ಚಕ್ರವರ್ತಿಯ ಮಾತುಗಳು"ಸಾಕ್ರಟೀಸ್ ರಣರಂಗದಲ್ಲಿ ನೂರಾಳುಗಳನ್ನು ಕೊಂದು ಗೆದ್ದ ವೀರನಲ್ಲ. ಬದಲಾಗಿ ತನ್ನನ್ನು ತಾನು ಗೆದ್ದ ಋಷಿ" “ಸಾಫ್ರೊನಿಸ್ಕನ್ಸಿನ ಮಗನು (ಸಾಕ್ರಟೀಸ್) ಅಲೆಕ್ಸಾಂಡರನಿಗಿಂತ ಮಹತ್ವದ ಕೆಲಸಗಳನ್ನು ಮಾಡಿದ್ದಾನೆ. ಅಲೆಕ್ಸಾಂಡರನ ವಿಜಯದಿಂದ ಯಾರಿಗೆ ಮೋಕ್ಷ ದೊರೆತಿದೆ? ಆದರೆ ತತ್ವಜ್ಞಾನದಿಂದ ಮೋಕ್ಷವನ್ನು ಪಡೆದಿರುವರೆಲ್ಲರೂ ಸಾಕ್ರಟೀಸ್‌ನ ಋಣಿಗಳು.

ಹೆಚ್ಚಿನ ಓದಿಗೆ

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


ಸೋಫಿಕ್ಸ್ ಗೆ ಸಾಕ್ರಟೀಸ್ ಗು ಪರಸ್ಪರಗಳು ಬಿನ್ನಬಿಪ್ರಾಯಗಳಿದ್ದವು.