ಸಹಾಯ:Sandbox
ಇತಿಹಾಸ
ಬದಲಾಯಿಸಿಶಿಲಾ ಶಾಸನಗಳು
ಕನ್ನಡ ಭಾಷೆಯ ಮೊದಲ ಉಲ್ಲೆಖವನ್ನು ಕ್ರಿ.ಪೂ.೨೩೦ರಷ್ಟು ಹಳೆಯದಾದ ಅಶೋಕ ಚಕ್ರವರ್ತಿಯ ಕಾಲದ ಬ್ರಹ್ಮಗಿರಿಯ ತೀರ್ಪಿನಲ್ಲಿ ಕಾಣಬಹುದು. ಕ್ರಿ.ಪೂ. ೪೫೦ರ ಹಲ್ಮಿಡಿ ಶಾಸನದಲ್ಲಿ ಹಳಗನ್ನಡದ ಪ್ರಥಮ ಶಿಲಾಶಾಸನವನ್ನು ಗುರುತಿಸಬಹುದು. ಇದರ ಮುನ್ನಾಕಾಲದಿಂದಲೇ ಕನ್ನಡದ ಶಬ್ದಗಳನ್ನು,ಪದಸಮುಚ್ಚಯಗಳನ್ನು ಹಾಗೂ ವಾಕ್ಯಗಳನ್ನು ಹೊಂದಿರುವ ಬಹಳಶ್ಟು ಶಾಸನಗಳಿವೆ. ಕ್ರಿ.ಶ.೫೪೫ರ ಬಾದಮಿಯ ಪ್ರಥಮ ಪುಲಕೇಶಿಯ ಹಳಗನ್ನಡ ಲಿಪಿಯಲ್ಲಿರುವ ಸಂಸ್ಕೃತ ಶಾಸನವೊಂದು ಇದಕ್ಕೆ ಉದಾಹರಣೆ.
ತಾಮ್ರ ಶಾಸನಗಳು
ಕ್ರಿ.ಶ.೪೪೪ರ ತುಂಬುಲಾ ಶಾಸನಗಳು ಸಂಸ್ಕೃತ-ಕನ್ನಡ ದ್ವಿಭಾಷೆಯ ತಾಮ್ರಶಾಸನದ ಪ್ರಾಚೀನ ಉದಾಹರಣೆಗಳು. ದಕ್ಷಿಣ ಕನ್ನಡ ಜಿಲ್ಲೆಯ ಬೆಲಮಣ್ಣಿನ ಆಳುಪ ರಾಜ ಎರಡನೆಯ ಅಳುವರಸನ ಕಾಲದ ತಾಮ್ರಶಾಸನವು ಕನ್ನಡದ ಪುರಾತನ ತಾಮ್ರಶಾಸಗಳಲ್ಲಿ ಒಂದು.
ಪ್ರಾಚೀನ ಹಸ್ತಪ್ರತಿಗಳು
ಕನ್ನಡದ ಅತ್ಯಂತ ಹಳೆಯ ತಾಳೆಗರಿಯ ಲೇಖನವು ೯ನೇ ಶತಮಾನದ ಧವಳನಿಗೆ ಸೇರಿದ್ದು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಜೈನ ಮಂದಿರದಲ್ಲಿ ಸುರಕ್ಷಿತವಾಗಿರಸಲಾಗಿದೆ. ಈ ಹಸ್ತಪ್ರತಿಯಲ್ಲಿ ಶ್ಯಾಹಿಯಲ್ಲಿ ಬರೆದ ೧೪೭೮ ಎಲೆಗಳಿವೆ.ಸುಮಾರು ೩೦೦೦೦ ಸಾವಿರ ಶಾಸನಗಳನ್ನು ಹೊಂದಿರುವ ಕನ್ನಡ ಭಾಷೆಯು ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಶಾಸನಗಳನ್ನು ಹೊಂದಿರುವ ಭಾಷೆಯಾಗಿದೆ. ಈ ಶಾಸನಗಳನ್ನು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ನೆರೆರಾಜ್ಯಗಳಾದ ಆಂಧ್ರ ಪ್ರದೇಶ, ಮಹಾರಾಷ್ತ್ರ ಮತ್ತು ತಮಿಳುನಾದಿನಲ್ಲಿ ಕೂಡ ಕಾಣಬಹುದು. ಕೆಲವು ಶಾಸನಗಳು ಮಧ್ಯ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಕೂಡ ದೊರೆತ ದಾಖಲೆಗಳಿವೆ. ಜುರಾದಲ್ಲಿರುವ (ಕ್ರಿ.ಶ. ೯೬೪, ಜಬಲ್ಪುರ)ಮೂರನೇ ರಾಷ್ಟ್ರಕೂಟ ಕೃಷ್ಣನ ಕಾಲದ ಹಸ್ತಪ್ರತಿಯೊಂದು ಕನ್ನಡದ ಹಸ್ತಪ್ರತಿಗಳಿಗೆ ಒಂದು ಮೇರು ಉದಾಹರಣೆ. ಇದು ಕನ್ನಡ ಭಾಷೆಯು ವ್ಯಾಪಕವಗಿ ಹರಡಿರುವದನ್ನು ಸೂಚಿಸುತ್ತದೆ.
ಬೆಳವಣಿಗೆ
ಕನ್ನಡವು ದಕ್ಷಿಣ ಭಾರತದ ಮೂಲ ಭಾಷೆ ದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೆರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೆರ್ಪಟ್ಟಿತೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಕನ್ನಡವು ಮೊದಮೊದಲು ಇತರ ದ್ರಾವಿಡ ಭಾಷೆಗಳಂತೆ ಸಂಸ್ಕೃತ ಭಾಷೆಯಿಂದ ಸ್ವತಂತ್ರವಾಗಿ ಬೇಳೆಯಿತು. ನಂತರದ ಶತಮಾನಗಳಲ್ಲಿ ಕನ್ನಡವು ಭಾರತದ ಮತ್ತಿತರ (ತೆಲಗು,ಮಲಯಾಳ ಇತ್ಯಾದಿ)ಭಾಷೆಗಳಂತೆ ಸಂಸ್ಕೃತದ ಸಾಹಿತ್ಯಕ ಹಾಗೂ ಶಬ್ದಾವಳಿಯ ಪ್ರಭಾವಕ್ಕೊಳಗಾಯಿತು.