ವೈಜ್ಞಾನಿಕ ಹೆಸರು: ಸ್ಟ್ರೋಬಿಲಾಂಟಸ್ ಸಿಲಿಯಾಟಸ್[]

Sairiyakah (Sanskrit- सैरीयकः) (16027668459)

ಇತರೆ ಹೆಸರು: ಲೆಸ್ಸರ್ ಕುರಂಜಿ, ಕರಿಮುಕುರಂಜಿ (ಮಲಯಾಳಂ), ವೆಲ್ಲಕುರಿಂಜಿ, ಚಿನ್ನಿಕುರಿಂಜಿ (ತಮಿಳು)

ಸಂಸ್ಕೃತ: ಸಹಶ್ಚರಾ, ಸಹಾರಾ

ದೈಹಿಕ ರಚನೆ

ಬದಲಾಯಿಸಿ

ಸಹಚರ ಪೊದೆ ಜಾತಿಯ ಸಸ್ಯವಾಗಿದ್ದು ರೋಮರಹಿತ ಶಾಖೆಗಳಿಂದ ಕೂಡಿದೆ. ಎಲೆಯ ಮೇಲೆ ಮೊಟ್ಟೆಯಾಕಾರದ ವೃತ್ತಗಳಿದ್ದು ಎಲೆ-ಕಾಂಡಗಳು ಸುಮಾರು 2 ಸೆಂ.ಮೀ ಉದ್ದವಿರುತ್ತವೆ. ಹೂವುಗಳು 1.5 ಸೆಂ.ಮೀ ನಷ್ಟು ಉದ್ದವಿರುತ್ತವೆ. ಡಿಸೆಂಬರ್ ಹಾಗೂ ಮೇ ತಿಂಗಳಲ್ಲಿ ಹೂಗಳನ್ನು ಕಾಣಬಹುದು. ಎಲೆಗಳು ಹೆಚ್ಚು ಪೊಟ್ಯಾಶಿಯಂ ಅಂಶದಿಂದ ಕೂಡಿವೆ. ಬೇರುಗಳಲ್ಲಿ ಲೋಪಿಯಂ ಅಂಶವನ್ನು ಕಾಣಬಹುದು.

ವೈದ್ಯಕೀಯ ಉಪಯುಕ್ತತೆ

ಬದಲಾಯಿಸಿ
  • ಇದು ವಿಶ್ವದಾದ್ಯಂತ ಶೇಕಡಾ 75 ರಷ್ಟು ನಂಬಲಾದ ಗಿಡಮೂಲಿಕೆಯಾಗಿದೆ.
  • ಆಂಟಿಬಯಾಟಿಕ್, ಆಂಟಿಫಂಗಲ್, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ
  • ಸಸ್ಯದ ಎಥನೊಲಿಕ್ ಸಾರವು ಉರಿಯೂತ ಶಮನಕಾರಿಯಾಗಿದೆ
  • ಇದು ಉತ್ತಮ ಔಷಧೀಯ ಗುಣಗಳುಳ್ಳ ಸಸ್ಯವಾಗಿದ್ದು ಉಪಯೋಗಕ್ಕೆ ವೈದಿಕ ಕಾಲದಿಂದಲೂ ಇತಿಹಾಸವಿದೆ.
  • ಹಲ್ಲಿನ ನೋವುಗಳಿಗೆ ಉತ್ತಮ ಔಷಧವಾಗಿದೆ.
  • ಸಂಧಿವಾತ []ಚರ್ಮದ ಅಸ್ವಸ್ಥತೆಗಳಿಗೆ ಬಳಸಲಾಗುತ್ತದೆ.
  • ಚರ್ಮ ಹಾಗು ಮೂತ್ರದ ಸೋಂಕುಗಳಿಗೆ ಔಷಧವಾಗಿ ಬಳಕೆ
  • ಮಧುಮೇಹ[] ನಿಯಂತ್ರಣಕ್ಕೆ
  • ಖಿನ್ನತೆ ಶಮನಕಾರಿ
  • ನೋವು ನಿವಾರಕವಾಗಿ
  • ಆಂಟಿಕಾನ್ಸರ್ ಏಜೆಂಟ್ ಆಗಿ.

ಉಲ್ಲೇಖಗಳು

ಬದಲಾಯಿಸಿ
  1. https://indiabiodiversity.org/species/show/262762
  2. "ಆರ್ಕೈವ್ ನಕಲು". Archived from the original on 2020-06-15. Retrieved 2018-10-25.
  3. https://kannada.boldsky.com/health/diabetes/2010/0803-what-is-diabetes.html
"https://kn.wikipedia.org/w/index.php?title=ಸಹಚರ_ಮರ&oldid=1252983" ಇಂದ ಪಡೆಯಲ್ಪಟ್ಟಿದೆ