ಸಲಾರ್ ಡಿ ಉಯುನಿ
ಸಲಾರ್ ಡಿ ಉಯುನಿ, ದಕ್ಷಿಣ ಅಮೆರಿಕದ ಬೊಲುವಿಯದೇಶದಲ್ಲಿರುವ ಜಗತ್ತಿನ ಅತಿ ಬೃಹತ್ ಉಪ್ಪಿನ ಸರೋವರದಲ್ಲಿ ಅತಿ ದೊಡ್ಡ ಪ್ರಮಾಣದ ಉಪ್ಪಿನ ಭಂಡಾರವಿದೆ. ಭೂಗರ್ಭ ಶಾಸ್ತ್ರಜ್ಞರ ಅಂದಾಜಿನಂತೆ, ೪,೦೮೬ ಚದರ ಮೈಲಿ ವಿಸ್ತಾರವಿರುವ ಈ ಉಪ್ಪುನೀರಿನ ಜಲಾಶಯ, ಹತ್ತು ಶತಕೋಟಿ ಟನ್ ಗಳಷ್ಟು ಉಪ್ಪಿನ ಸಂಗ್ರಹವಿದೆ. ಬೊಲುವಿಯಾದೇಶದಲ್ಲಿರುವ ಉಪ್ಪಿನ ಸರೋವರ, ಸಮುದ್ರಮಟ್ಟದಿಂದ ೧೧,೯೯೫ ಅಡಿ ಎತ್ತರದಲ್ಲಿದೆ. ಇದು, ನೈರುತ್ಯ ಬಲ್ಗೇರಿಯಕ್ಕೆ ಹತ್ತಿರದಲ್ಲಿದೆ. ಪೆರುದೇಶದ ಗಡಿಭಾಗದಲ್ಲಿರುವ ೩೦ ರಿಂದ ೪೦ ಸಹಸ್ತ್ರ ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ. ಉಪ್ಪಿನ ಮರುಭೂಮಿಯ ಎರಡು ಭಾಗದಲ್ಲಿದ್ದ 'ಪೋಪೋ ಲೇಕ್' ಮಾತ್ತು 'ಉರುಉರು' ಎನ್ನುವ ಎರಡು ಸರೋವರಗಳ ಸತತವಾಗಿ ಉಪ್ಪಿನ ಭೂಕೊರೆತ ಪರಿಣಾಮದಿಂದಾಗಿ ಇದರ ಉಗಮವಾಯಿತೆಂದು ಊಹೆ ಮಾಡಲಾಗಿದೆ.[೧]
ಅಪ್ಸರೆಯರ ಕಣ್ಣೀರು
ಬದಲಾಯಿಸಿಸ್ಥಳೀಯರ ಭಾಷೆಯಲ್ಲಿ, ಸಲಾರ್ ಡಿ ಉಯುನಿ, ಗೆ, 'ಆವರಣ ದ್ವೀಪ'ವೆನ್ನುವ ಅರ್ಥವಿದೆ. 'ಅಯ್ಮಾರ ಭಾಷೆ'ಯ ಜನರ ದಂತಕಥೆಯ ಪ್ರಕಾರದೇವತೆಗಳ ವಂಶದ ಅಪ್ಸರೆ ಟುನುಪ ದೈತ ಕುಸ್ಯುನನ್ನು ಮದುವೆಯಾಗುತ್ತಾಳೆ. ಕುಸ್ಕು ಕುಸೀನಾಳಜೊತೆ ಓಡಿಹೋಗುತ್ತಾನೆ. ಟುನುಪ, ಕುಸ್ಯುವನ್ನು ನೆನೆಸಿಕೊಂಡು ದುಃಖ್ಖಿಸುತ್ತಾ ಮಗುವಿಗೆ ಹಾಲುಣಿಸುತ್ತಾಳೆ. ಆಕೆಯ ಅಶ್ರುವಿನ ಜೊತೆ ಹಾಲೂ ಸೇರಿ, ಒಟ್ಟಾಗಿ ಹರಿದು ಉಪ್ಪಿನಸರೋವರ ಏರ್ಪಟ್ಟಿತಂತೆ. ಒಂದು ಭಾಗದಲ್ಲಿ 'ಆಂಡಿಸ್ ಪರ್ವತ ಶ್ರೇಣಿ' ಮೈತಳೆದಿದೆ. ಅದರ ಎತ್ತರ ೩,೬೫೦ ಮೀ. 'ಸೂರ್ಯಾಸ್ಥದ ಸೊಬಗನ್ನು ಸರೋವರದ ತೀರದಲ್ಲಿ ನೋಡುವುದು ಅತ್ಯಾಕರ್ಷಕವಾಗಿದೆ'.
ಬೇರೆಬೇರೆ ಋತುಗಳಲ್ಲಿ
ಬದಲಾಯಿಸಿ[೨] ಸಲಾರ್ ಡಿ ಉಯುನಿ ಸರೋವರ ಶುಶ್ಕರುತುವಿನಲ್ಲಿ ಉಪ್ಪಿನಿಂದಾಗಿ ಹಾಸಿಗೆ ನಿರ್ಮಾಣವಾಗುತ್ತದೆ. ಆಗ ಅದರಮೇಲೆ ಕಾರು ಬೈಸಿಕಲ್, ಮತ್ತು ಬೈಕ್ಸ್, ಮೇಲೆ ಪ್ರಯಾಣಿಸಬಹುದು. ಮಲಗಿ ಆನಂದಿಸಬಹುದು. ಆದೃ ಋತಿವಿನಲ್ಲಿ ಸರೋವರದಲ್ಲಿ ಉಪ್ಪುನೀರಿನ ಭೋರ್ಗರೆಯುವ ಪ್ರವಾಹವಿರುತ್ತದೆ. ನೀರು ನೀಲಿಬಣ್ಣಕ್ಕೆ ತಿರುಗಿ ಕನ್ನಡಿಯ ತರಹ ಹೊಳೆಯುತ್ತದೆ. ಸರೋವರ ಒಣಗಿದ ಸಮಯದಲ್ಲಿ ೨೦ ಮೀ ಆಳದವರೆಗೆ ಭೂಮಿಯನ್ನು ಅಗಿದರೂ ಉಪ್ಪಿನ ಬಿಳಿಯ ಇಟ್ಟಿಗೆಗಳು ಗೋಚರಿಸುತ್ತವೆ. ಹರಳು ಉಪ್ಪನ್ನು ಗೂಡೆಹಾಕಲು ಇದು ಸರಿಯಾದ ಸಮಯ.
ಖನಿಜಗಳ ಕಣಜ
ಬದಲಾಯಿಸಿ'ಸಲಾರ್ ಡಿ ಉಯುನಿ ಉಪ್ಪಿನ ಸರೋವರ,'ದಲ್ಲಿ, [೩] ಉಪ್ಪಿನ ಜೊತೆಗೆ ಖನಿಜಗಳ ಭಂಡಾರವಿದೆ. ೯೦ ಲಕ್ಷ ಟನ್ ಪ್ರಮಾಣದ 'ಲಿಥಿಯಂ' ಭಂಡಾರವಿದೆಯೆಂದು ಅಂದಾಜು ಮಾಡಲಾಗಿದೆ. ವಿಶ್ವದಲ್ಲಿ ದೊರೆಯುವ ಲಿಥಿಯಂ ಖನಿಜದ ಒಟ್ಟುಸಂಗ್ರಹದ ಶೇ ೪೩% ಪ್ರಮಾಣಕ್ಕೆ ಸರಿಸಮ. ಬೊಲುವಿಯ ಸರಕಾರ ಗಣಿಕಾರಿಕೆಯನ್ನು ಪ್ರೋತ್ಸಾಹಿಸುವುದಿಲ್ಲ. ವರ್ಷಕ್ಕೆ ಕೇವಲ ೨೫,೦೦೦ ಟನ್ ಮಾತ್ರ ಸಂಗ್ರಹಿಸುತ್ತದೆ.ಪ್ರಾಕೃತಿಕ ಸಂಪತ್ತನ್ನು ವ್ಯಯಿಸಲು ಆಶಿಸುವುದಿಲ್ಲ. ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್, ಬೋರಾನ್, ಗಂಧಕ, ಆರ್ಸನಿಕ್, ಸೋಡಿಯಮ್ ಕ್ಲೋರೈಡ್ ನ ಅಪಾರ ಸಂಗ್ರಹವಿದೆ. ಕೆಲವು ಕುರುಹುಗಳಿಂದ ಪೂರ್ವದಲ್ಲಿ ಭೂಕಂಪಪೀಡಿತ ಪ್ರದೇಶವಾಗಿತ್ತೆಂದು ನಂಬಿಕೆಯಿದೆ. ಖನಿಜಗಳು ಇಷ್ಟು ಭಾರಿ ಪ್ರಮಾಣದಲ್ಲಿರುವ ಕಾರಣವೆಂದು ತಜ್ಞರ ಅಭಿಪ್ರಾಯ.
ರಫ್ತು
ಬದಲಾಯಿಸಿಅಮೆರಿಕದ ಕಂಪೆನಿಯೊಂದು ಲಿಥಿಯಂ ಆಮದುಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿಹಾಕಿದೆ. ೧೩೭ ದಶ ಲಕ್ಷ ಡಾಲರ್ ಬಂಡವಾಳ ಹೂಡಿದೆ. ಸರೋವರದ ಒಳಭಾಗದಲ್ಲಿ ಪಾಚಿಯ ಪದರಗಳಿವೆ. ಅತಿಆಳದಲ್ಲಿ ದುರ್ಬಲವಾದ ಹವಳದ ಬಂಡೆಗಳಿವೆ. ಇಲ್ಲಿ ಗರಿಷ್ಟ ಉಷ್ಣಾಂಶ ೨೧ ಡಿಗ್ರಿಗಿಂದ ಹೆಚ್ಚಾಗುವುದಿಲ್ಲ. ಚಲಿಗಾಲದಲ್ಲಿ ೫ ಡಿಗ್ರಿಗೆ ಬರುತ್ತದೆ. ಮಳೆಗಾಲದಲ್ಲಿ ಸಹಿಲಾರದಷ್ಟು ಅತ್ಯಂತ ಚಲಿಯಿರುತ್ತದೆ. ಪ್ರವಾಸಿಗಳು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಈ ಭೂಭಾಗಕ್ಕೆ ಭೇಟಿನೀಡಬಹುದು. ಆಸಮಯದಲ್ಲಿ ಪ್ರವಾಸಿಗಳಿಂದ ತುಂಬಿರುತ್ತದೆ. ಪ್ರಪಂಚದಾದ್ಯಂತ ಬಂದ. ಇವರಿಗಾಗಿಯೇ ಬೊಲುವಿಯ ಸರಕಾರ ಒಂದು ಮೀ.ದಪ್ಪದ ಉಪ್ಪಿನ ಇಟ್ಟಿಗೆಗಳನ್ನು ಬಳಸಿ ತಂಗು ದಾಣಗಳನ್ನು ನಿರ್ಮಿಸುತ್ತದೆ.ಮೇಲಿನ ಛಾವಣಿಗೂ ಉಪ್ಪಿನ ಪದರದ ಹಾಳೆಗಳೇ ಇರುತ್ತವೆ. ಹೋಓಟೆಲ್ಲಿನ ಪೀಠೋಪಕರಣಗಳು ಇತ್ಯಾದಿ ಉಪ್ಪಿನ ಮಯ.ಚಳಿಗಾಲದಲ್ಲಿ ಇಲ್ಲಿ ವಿರಮಿಸಲು ಶಾಖದ್ ಚೀಲಗಳ ಬಳಕೆ ಅತ್ಯಗತ್ಯ.
ಕೆಲವೇ ಸಸ್ಯಗಳು, ಪ್ರಾಣಿಗಳು
ಬದಲಾಯಿಸಿಒಂದು ಬಗೆಯ ಗುಲಾಬಿಗಿಡಗಳು ಇಲ್ಲಿ ಬೆಳೆಯುತ್ತದೆ. ಬೃಹತ್ ಆಕಾರದ ಪಾಪಸ್ ಕಳ್ಳಿಗಳು ಕಾಣಿಸುತ್ತವೆ. ೩೯ ಅಡಿ ಎತ್ತರದ ಈ ಸಸ್ಯಗಳ ಬೆಳವಣಿಗೆ ಅತಿ ಕಡಿಮೆ. ವರ್ಷಕ್ಕೆ ಒಂದು ಸೆಂಟಿಮೀಟರಿನಷ್ಟು ಮಾತ್ರ. ಆದರೆ ಅವುಗಳು ಸಾವಿರಾರು ವರ್ಷಗಳಿದ ಅಸ್ತಿತ್ವದಲ್ಲಿವೆ. ಕೆಲವು ಪ್ರಾಣಿಗಳಲ್ಲಿ ಹಿಮಕರಡಿಯ ತರಹ ಹೋಲುವ 'ಆಂಡಿಯನ್ ನರಿ', ರಾಜಹಂಸಗಳಿಗೆ,ಕೊಕ್ಕರೆ, ಹೆಬ್ಬಾತುಗಳು, ಇದನ್ನೇ ಆಹಾರವಾಗಿ ಉಪಯೋಗಿಸುತ್ತವೆ. ಮತ್ತಿತರರ ಪ್ರಾಣಿಗಳಿವೆ. ಈ ಜಾತಿಯ ಪಾಪಸ್ ಕಳ್ಳಿಗಿಡಗಳ ಬಳಕೆ ಹಲವು ವಿಧದಲ್ಲಿ. ಸಸ್ಯಗಳೇ ಕಾಣಿಸದ ಈ ಪ್ರದೇಶದಲ್ಲಿ ಸುಮಾರು ೮೦ ಬಗೆಯ ಹಕ್ಕಿ ಪಕ್ಷಿಗಳನ್ನು ಕಾಣಬಹುದು.
- ಒಲೆಯುರಿಸಲು ಕಟ್ಟಿಗೆಯಾಗಿ,
- ನೆಗಡಿಗೆ ಔಷಧಿಯ ತರಹ
ಬಿಸಿನೀರಿನ ಬುಗ್ಗೆಗಳು
ಬದಲಾಯಿಸಿಕೆಂಪು ಹಸಿರು ವರ್ಣದ ಪುಟ್ಟು ಸರೋವರಗಳು, ಕಲ್ಲಿನ ವೈವಿದ್ಯಮಯ ರಚನೆಗಳು,ಪುರಾತನ ಗುಹೆಗಳು ಕಾಣಿಸುತ್ತವೆ.
ರೈಲುಗಳ ಸಂಗ್ರಹಾಲಯ
ಬದಲಾಯಿಸಿಸ್ಥಳೀಯರು ರೈಲುಗಳ ಸ್ಮಷಾನವೆಂದು ಕರೆಯುವ ನೂರಾರು ರೈಲ್ವೆ ಇಂಜಿನ್ ಗಳು ಬೋಗಿಗಳು, ೧೯ ನೆಯ ಶತಮಾನದಲ್ಲಿ ಬ್ರಿಟಿಷ್ ತಂತ್ರಜ್ಞರು, ಗಣಿಗಳನ್ನು ತೋಡಿ ಖನಿಜಗಳನ್ನು ಹೊರತೆಗೆದು ತಮ್ಮ ದೇಶಕ್ಕೆ ರಫ್ತುಮಾಡುವ ಯೋಜನೆ ಇಟ್ಟುಕೊಂಡಿದ್ದರು. ಅದರ ಸಾಗಾಣಿಕೆಗಾಗಿ ರೈಲು ರಸ್ತೆಗಳ ಮಾರ್ಗವನ್ನು ರಚಿಸಿದರು. ಬೊಲುವಿಯ ಸರಕಾರ ೧೯೪೦ ರಲ್ಲಿ ನಿಸರ್ಗಸಂಪತ್ತು ಹೀಗೆ ಪೋಲಾಗುವುದನ್ನು ನಿಷೇಧಿಸಿ, ಕಾನೂನುಗಳನ್ನು ತಂದರು. ಹಾಗಾಗಿ ಆಗ ಬಳಕೆಯಲ್ಲಿದ್ದ ರೈಲುಗಳು ಹಾಗೆಯೇ ಬಳಕೆಯಿಲ್ಲದೆ ನಿಂತಜಾಗದಲ್ಲೇ ನಿಂತಿವೆ. ೩ ಕಿ.ಮೀ ವಿಸ್ತಾರದ ಈ ಪ್ರದೇಶವನ್ನು ಪರ್ಯಟಕರಿಗೆ ಇದನ್ನು ರೈಲ್ವೆ ವಸ್ತುಸಂಗ್ರಹಾಲಯವೆಂದು ಘೋಶಿಸಲಾಯಿತು.
ಇದನ್ನೂ ಸಹಾ ನೋಡಿ
ಬದಲಾಯಿಸಿಮೂಲ : 'ಸಲಾರ್ ಡಿ ಉಯುನಿ', ಜಗತ್ತಿನ ಅತಿದೊಡ್ಡ ಸರೋವರ, ಪ. ರಾಮಕೃಷ್ಣ ಶಾಸ್ತ್ರಿ, ತರಂಗ, ೨೯ ಜನವರಿ, ೨೦೧೫, ಪುಟ-೩೮