ಸರ್ ನವರೋಜಿ ಸಕ್ಲಾತ್ ವಾಲ KBE ; CIE
(ಸೆಪ್ಟೆಂಬರ್ ೧೦, ೧೮೭೫-ಜುಲೈ ೨೧, ೧೯೩೮)
ಜನನ ಹಾಗೂ ಬಾಲ್ಯ
ಬದಲಾಯಿಸಿ'ನವರೋಜಿ, ಸಕ್ಲಾತ್ ವಾಲ,' ರವರು, ಸೆಪ್ಟೆಂಬರ್ ೧೦, ೧೮೭೫ರಲ್ಲಿ ಮುಂಬಯಿ ನ ಒಬ್ಬ ಸಾಧಾರಣ ಪಾರ್ಸಿಕುಟುಂಬದಲ್ಲಿ ಜನ್ಮಿಸಿದರು. ಅವರು ಮುಂಬಯಿ ನ 'ಸೇಂಟ್ ಝೇವಿಯರ್ ಸ್ಕೂಲ್' ಮತ್ತು ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪಡೆದರು. ೧೮೯೯ ನಲ್ಲಿ ಟಾಟ ಸಂಸ್ಥೆಗೆ ಪಾದಾರ್ಪಣೆಮಾಡಿದ್ದು, 'ಸ್ವದೇಶಿ ಮಿಲ್ಸ್' ನಲ್ಲಿ, ಒಬ್ಬ ಕಾರಕೂನನಾಗಿ. ಅಲ್ಲಿಂದ ಅವರು ಸುಮಾರು ೨೦ ವರ್ಷಗಳ ಕಾಲ ಪರಿಶ್ರಮದಿಂದ ದುಡಿದು ತಮ್ಮ ವೃತ್ತಿಯಲ್ಲಿ ಹಂತಹಂತವಾಗಿ ಬೆಳೆದು ಕೊನೆಗೆ 'ಟಾಟ ಸನ್ಸ್ ಸಂಸ್ಥೆಯ ಡೈರೆಕ್ಟರ್' ಹುದ್ದೆಗೆ ಏರಿದರು. ೧೯೨೩ ರಲ್ಲಿ C.I.E. ಆದರು. ೧೯೨೩, 'ಪ್ರಥಮ ವಿಶ್ವಯುದ್ಧ' ದಲ್ಲಿ ಅನೇಕ ಕಮಿಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ-ಸೇವೆಯನ್ನು ಮಾಡಿದರು. 'Munitions Board' (೧೯೧೯-೧೯೨೧) ಗೆ ಸಲಹೆಗಾರರಾಗಿದ್ದರು. ನವರೋಜಿ, ಸಕ್ಲಾತ್ ವಾಲ, ೧೯೨೧ ರಲ್ಲಿ ಕಾರ್ಮಿಕರ ಪರವಾಗಿ ಆಸಕ್ತಿವಹಿಸಿ, ಮಾಲಿಕರ ಡೆಲೆಗೇಟ್ ಆಗಿದ್ದರು. (International Labour Conference at Geneva) 'ಮಿಲ್ ಓನರ್ಸ್ ಅದಸೋಸಿಯೇಶನ್ ಕಮಿಟಿಗೆ ಸೇರಿದರು. ಅನೇಕ ವರ್ಷ ಆ ಹುದ್ದೆಯನ್ನು ಅಲಂಕರಿಸಿದ್ದರು. ೧೯೧೭ ರಲ್ಲಿ ಅದರ 'ಚೇರ್ಮನ್,' ಆದರು. 'ಮುಂಬಯಿ ಲೆಜಿಸ್ಲೇಟೀವ್ ಕೌನ್ಸಿಲ್,' ನ ಸದಸ್ಯರಾಗಿದ್ದರು. ೧೯೨೧. ಮುಂಬಯಿ ಲಿಜಿಸ್ಲೇಟೀವ್ ಕೌಸಿಲ್ ಅಸೆಂಬ್ಲಿ ೧೯೨೨ ಪ್ರತಿನಿಧಿಸಿದ್ದರು. ಸುಮಾರು ೨೦ ಅತಿ ದೊಡ್ಡ ಕಂಪೆನಿ, ಕಾರ್ಪೊರೇಷನ್ ಗಳ ಛೇರ್ಮನ್ ಆಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಕೆಲವು ಕಂಪೆನಿಗಳ ಹೆಸರುಗಳು ಹೀಗಿವೆ.
- ೧. 'ಟಿಸ್ಕೊ' ,
- ೨. 'ಟಾಟ ಹೈಡ್ರೋ ಎಲೆಕ್ಟ್ರಿಕ್, ಕಂ',
- ೩. 'ಏಸಿಸಿ' ,
- ೪. 'ನ್ಯೂ ಇಂಡಿಯ ಲೈಫ್ ಇನ್ಸುರೆನ್ಸ್ ಕಂ',
- ೫. 'ಇಂಪೀರಿಯಲ್ ಬ್ಯಾಂಕ್',('ಈಗ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ,' ಆಗಿದೆ.
- ೬. 'ಮುಂಬಯಿ ಪೋರ್ಟ್ ಟ್ರಸ್ಟ್, ಬೋರ್ಡ್,' ನಲ್ಲಿದ್ದರು.
ಜೆ. ಎನ್. ಟಾಟರವರ ರಕ್ತಸಂಬಂಧಿ,'ನವರೋಜಿ, ಸಕ್ಲಾತ್ ವಾಲ,' ರವರು ಟಾಟಾ ಸನ್ಸ್ ಸಂಸ್ಥೆಯ ಹೊಸ ಡೈರೆಕ್ಟರ್ ಆದರು
ಬದಲಾಯಿಸಿಜಮ್ಸೆಟ್ ಜಿ ನುಝರ್ ವಾನ್ ಜಿ ಟಾಟಾ (ಜೆ. ಎನ್. ಟಾಟ) ರವರ ಮೊದಲನೆಯ ಮಗ, ಸರ್ ದೊರಾಬ್ಜಿ ಟಾಟರವರ ಮರಣದನಂತರ ಜೆ. ಎನ್. ರವರ ೩ ನೆಯ ಸಹೋದರಿ, 'ವಿರ್ ಬಾಯಿಜಿ' ಯವರ ಮಗನಾದ ನವರೋಜಿ, ಸಕ್ಲಾತ್ ವಾಲ ರವರು, 'ಟಾಟ ಸನ್ಸ್' ಹುದ್ದೆಗೆ ಆಯ್ಕೆಯಾದರು. [೧೯೩೨-೧೯೩೮] ಆಗಿನ ಸಮಯದಲ್ಲಿ ಟಾಟ ಪರಿವಾರದಲ್ಲಿ ಅತ್ಯಂತ ಹಿರಿಯರಾಗಿದ್ದ ಸಕ್ಲಾತ್ ವಾಲ, ಪ್ರತಿಭಾವಂತ, ಮತ್ತು ದಕ್ಷ ಆಡಳಿತಗಾರ. ಟಾಟ ಸನ್ಸ್ ಛೇರ್ಮನ್ ಆಗಿ, ಕಂಪೆನಿಯ ವಹಿವಾಟುಗಳನ್ನು ಅತ್ಯಂತ ಯಶಸ್ವಿಯಾಗಿ ಯಾವ ತೊಂದರೆಗೂ ಅವಕಾಶನೀಡದೆ ನಡೆಸಿಕೊಂಡು ಹೋಗುತ್ತಿದ್ದರು. ಹೆಚ್ಚಿನ ಸುಧಾರಣೆಗಳನ್ನು ಮಾಡದಿದ್ದರೂ, ಮೂಲ ಸ್ಥಾಪಕರ ಆಶೋತ್ತರಗಳನ್ನು ಕಾಪಾಡುವ ನಿಟ್ಟಿನಲ್ಲಿ ಮುಂದುವರೆದರು. ನವರೋಜಿ, ಸಕ್ಲಾತ್ ವಾಲ, ಪಾರ್ಸಿ ಸಮಾಜದಲ್ಲಿ ಒಬ್ಬ ದೇವರ ಅರ್ಚಕರಾಗಿ ಅತಿ ಸರಳ ಜೀವನ ನಡೆದುತ್ತಿದ್ದರು. ಯಾವಾಗಲೂ ದುರ್ಬಲ ವರ್ಗದವರ ಸಹಾಯಕ್ಕೆ ತಯಾರಿದ್ದರು. ಬಡವರ ಬಗ್ಗೆ ಕನಿಕರವಿತ್ತು. 'ಟಾಟ ಸ್ಟೀಲ್ ಕಂ' ನಿಯ ಛೇರ್ನ್ಮನ್ ಆಗಿ, ಅನೇಕ ಸುಧಾರಣೆಗಳನ್ನು ಬಳಕೆಗೆ ತಂದರು. ಕೆಲಸಗಾರರ ಜೊತೆ ಲಾಭವನ್ನು ಹಂಚಿಕೊಳ್ಳುವ ಒಂದು ಪ್ರಕ್ರಿಯೆಯನ್ನು ಸರ್ ದೊರಾಬ್ ಟಾಟ ಟ್ರಸ್ಟ್ ನ ಛೇರ್ಮನ್ ಆದಬಳಿಕ ಜಾರಿಗೆ ತಂದರು. ಅನೇಕ ಬಡ ಸಂಸ್ಥೆಗಳಿಗೆ ದಾನಧರ್ಮಗಳ ಸಹಾಯಮಾಡಿ ಪ್ರೋತ್ಸಾಹನೀಡಿದರು. ಅವರ ಸಮಯದಲ್ಲಿ 'ಬೊಂಬಾಯಿನ ಕ್ರಿಕೆಟ್' ಹಾಗೂ 'ಟೆನ್ನಿಸ್ ಟೂರ್ನಮೆಂಟ್' ಗಳನ್ನು ಆಯೋಜಿಸಿ ಅದನ್ನು ವೀಕ್ಷಿಸುತ್ತಿದ್ದರು. ಕ್ರೀಡೆಗಳ ಬಗ್ಗೆ ತೀವ್ರವಾದ ಆಸಕ್ತಿಯಿತ್ತು.
- 'ಛೇರ್ಮನ್ ಕ್ರಿಕೆಟ್ ಕ್ಲಬ್ ಆಫ್ ಇಂಡಿಯ',
- 'ಪಾರ್ಸಿ ಜಮ್ಖಾನ',
- 'ಮುಂಬಯಿ ಪ್ರೆಸಿಡೆನ್ಸಿ ಒಲಿಂಪಿಕ್ ಅಸೋಸಿಯೇಶನ್',
- 'ವೈಸ್ ಪ್ರೆಸಿಡೆಂಟ್ ಆಫ್ ಮುಂಬಯಿ ಹಾಕಿ ಫೆಡರೇಷನ್',
ಸರ್ ನವರೋಜಿ ಸಕ್ಲಾತ್ ವಾಲ ರವರ ಮೇಲ್ವಿಚಾರಣೆಯಲ್ಲೇ ಬೊಂಬಾಯಿನ 'ಬ್ರೊಬಾರ್ನ್ ಸ್ಟೇಡಿಯಮ್ 'ಕಟ್ಟಲ್ಪಟ್ಟಿತು. ಸರ್ ನವರೋಜಿ ಸಕ್ಲಾತ್ ವಾಲ ಅತಿಯಾಗಿ ಧೂಮಪಾನಮಾಡುವ ಅಭ್ಯಾಸ ಹೊಂದಿದ್ದರು ಅವರ ಕೈನಲ್ಲಿ ಉರಿಯುತ್ತಿರುವ ಸಿಗರೇಟ್, ಮತ್ತು ಯಾವಾಗಲೂ ೫೫೫ ಕಂಪೆನಿಯ ಸಿಗರೇಟ್ ಪ್ಯಾಕ್ ಇರುತ್ತಿತ್ತು) ಹಾಗೂ ಅತಿಯಾಗಿ ಶ್ರಮವಹಿಸಿ ಕಂಪೆನಿಯ ಕಾರ್ಯಕಲಾಪಗಳನ್ನು ಸುಚಾರು ರೂಪದಿಂದ ನೋಡಿಕೊಳ್ಳುವುದು ಅವರ ವಿಶೇಷತೆಗಳಲ್ಲೊಂದು. 'ಜೆ. ಆರ್. ಡಿ' ಯವರಿಂದ ಹಿಡಿದು ಎಲ್ಲರಿಗೂ ಅವರ ಮಾತು ವೇದವಾಕ್ಯವಾಗಿತ್ತು. ಅವರ ಸಲಹೆ, ಸಮಾಧಾನಗಳನ್ನು 'ಗ್ವಾಲಿಯರ್ ಮಹಾರಾಜರು' ಬರಮಾಡಿಕೊಳ್ಳುತ್ತಿದ್ದರು. ೧೯೩೧ ರ ನಂತರ 'ಜಾನ್ ಪೀಟರ್ಸನ್' ರವರು ನಿವೃತ್ತರಾದಮೇಲೆ ಜೆ. ಆರ್. ಡಿಯವರಿಗೆ ಹಿರಿಯರ ಸಾನ್ನಿಧ್ಯವೆಂದರೆ,ನವರೋಜಿ, ಸಕ್ಲಾತ್ ವಾಲರವರಬಳಿ ಮಾತ್ರವಾಗಿತ್ತು. ಆಗ ಹಣದುಬ್ಬರದಿಂದ ಭಾರತದ ಆರ್ಥಿಕ ಪರಿಸ್ತಿತಿ ಸಮರ್ಪಕವಾಗಿರಲಿಲ್ಲ. 'Investment Companies of India', ಯ ಸಹಾಯದಿಂದ ನವರೋಜಿ, ಸಕ್ಲಾತ್ ವಾಲರು, ಟಾಟ ಕಂಪೆನಿಗಳನ್ನು ಒಂದು ಗೂಡಿಸಿದರು. ಸಕ್ಲಾತ್ ವಾಲ,ಮದುವೆಯಾಗಿದ್ದರು. ಅದರೆ ಮಕ್ಕಳಿರಲಿಲ್ಲ. ನವರೋಜಿ, ಸಕ್ಲಾತ್ ವಾಲ ರವರ ಸೋದರ 'ಕೈಕೋಬಾದ್' ಮುಂದೆ, ಅವರ ತರುವಾಯ 'ಟಾಟ ಸಂಸ್ಥೆ'ಯ ಡೈರೆಕ್ಟರ್ ಆಗಿ ಕೆಲಸಮಾಡಬಹುದಾಗಿತ್ತು. ಆದರೆ, ಅವರ ಆಸಕ್ತಿಗಳು ಬೇರೆಯಾಗಿತ್ತು. ಕಂಪೆನಿ ಆಡಳಿತದ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. 'ಕೈಕೋಬಾದ್', ಬರೆಯುವುದರಲ್ಲಿ ಹೆಚ್ಚು ಆಸಕ್ತರಾಗಿದ್ದರು. ಅವರ ಮಗ,ಮೀನೂ ಸಕ್ಲಾಟ್ವಾಲ, ಕೂಡಾ ಟಾಟ ಕಂಪೆನಿಯ ಆಡಳಿತದ ಬಗೆಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲಿಲ್ಲ. ಮೊದಲಿನಿಂದಲೂ ಜೆ. ಆರ್. ಡಿ ಯವರನ್ನು ತರಪೇತಿಮಾಡಿದ್ದರಿಂದ, ಅವರೇ ಸರ್ವಸಮ್ಮತದಿಂದ ಟಾಟ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿ ಚುನಾಯಿತರಾದರು.
ಜೆ. ಆರ್. ಡಿ. ಟಾಟ ರವರನ್ನು 'ಟಾಟ ಸನ್ಸ್ ಸಂಸ್ಥೆ' ಯ ಡೈರೆಕ್ಟರ್ ಆಗಿ ಸರ್ವಾನುಮತದಿಂದ ನೇಮಿಸಲಾಯಿತು
ಬದಲಾಯಿಸಿಅನಿರೀಕ್ಷಿತವಾಗಿ ಆದ ಈ ಬದಲಾವಣೆಯಿಂದ ೨೬, ಜುಲೈ, ೧೯೩೮ ೧೧-೩೦ ಗಂಟೆಗೆ ಕರೆಯಲಾದ ಒಂದು ವಿಶೇಷ ತುರ್ತು-ಸಭೆಯಲ್ಲಿ ೩೪ ವರ್ಷ ಹರೆಯದ ಜೆ. ಆರ್. ಡಿ ಟಾಟ ರವರನ್ನು ಒಪ್ಪಿಸಿ ಸರ್ವಸಮ್ಮತದಿಂದ ಟಾಟ ಸನ್ಸ್ ಕಂಪೆನಿಯ ಹೊಸ ಡೈರೆಕ್ಟರ್ ಆಗಿ ಚುನಾಯಿಸಿದರು. ಸೊಹ್ರಾಬ್ ಸಕ್ಲಾತ್ ವಾಲರವರು ಜೆ. ಆರ್. ಡಿಯವರ ಹೆಸರನ್ನು ಸೂಚಿಸಿದರು. ಹಿರಿಯ ಸದಸ್ಯ, 'ಅರ್ದೆಶಿಯರ್ ದಲಾಲ್' ರವರು ಈ ಪ್ರಸ್ತಾವವನ್ನು ಅನುಮೋದಿಸಿದರು. 'ಜೆ' ಎಂದು ಎಲ್ಲರ ಪ್ರೀತಿಗೆ ಪಾತ್ರರಾದ ಜೆ. ಆರ್. ಡಿ. ಟಾಟ ರವರು ಮುಂದಿನ ೫೩ ವರ್ಷಗಳ ದೀರ್ಘಾವಧಿಯಲ್ಲಿ ' ಟಾಟ ಸನ್ಸ್ ಕಂಪೆನಿ,' ಯನ್ನು ಅತ್ಯಂತ ಉಚ್ಚಮಟ್ಟಕ್ಕೆ ತೆಗೆದುಕೊಂಡು ಹೋದರಲ್ಲದೆ, ವೈವಿಧ್ಯಮಯ ಶಾಖೆಗಳನ್ನು ಸ್ಥಾಪಿಸಿ ಒಂದು ವಿಕ್ರಮವನ್ನೇ ಸ್ಥಾಪಿಸಿದರು. ಭಾರತ ಸರ್ಕಾರ ಅವರ ರಾಷ್ಟ್ರಸೇವೆಯನ್ನು ಗುರುತಿಸಿ, ಅತ್ಯುನ್ನತ ಗೌರವ ಪ್ರಶಸ್ತಿಯಾದ 'ಭಾರತರತ್ನ' ವನ್ನು ಪ್ರದಾನಮಾಡಿ ಗೌರವಿಸಿತು.
ಮರಣ
ಬದಲಾಯಿಸಿಸರ್ ನವರೋಜಿ, ಸಕ್ಲಾತ್ ವಾಲ, ಸ್ವಲ್ಪ ದಿನದ ಹವಾಬದಲಾವಣೆಗೆಂದು ಯೂರೋಪ್ ಗೆ ಹೋದಾಗ, ೧೯೩೮ ರ ಏಪ್ರಿಲ್ ತಿಂಗಳ ಕೊನೆಯಲ್ಲಿ, ಜುಲೈ ೨೧, ೧೯೩೮, ರಂದು ಹೃದಯಾಘಾತದಿಂದ 'Aix-Les-Bains', ಎಂಬ ಫ್ರಾನ್ಸ್ ದೇಶದ ಊರಿನಲ್ಲಿ ಮೃತರಾದರು. ಹೀಗೆ 'ಟಾಟ ಸನ್ಸ್ ಕಂಪೆನಿ,' ಯ ಮತ್ತೂಬ್ಬ (೩ ನೆಯ ಡೈರೆಕ್ಟರ್) ಡೈರೆಕ್ಟರ್, ಭಾರತದಿಂದ ದೂರಪ್ರದೇಶದಲ್ಲಿ ನಿಧನವಾದರು.