ರತನ್‌ಜಿ ಟಾಟಾ

(ಸರ್. ರತನ್ ಟಾಟಾ ಇಂದ ಪುನರ್ನಿರ್ದೇಶಿತ)

ಸರ್ ರತನ್‌ಜಿ ಟಾಟಾ[] ಟಾಟಾ ಸಂಸ್ಥೆಯ ಮೂಲ ಸಂಸ್ಥಾಪಕ, ಶ್ರೀ. ಜಮ್ ಸೆಟ್ ಜಿ ನಜರ್ವಾನ್ ಜಿ ಟಾಟಾ, ರವರ ಎರಡನೆಯ ಪುತ್ರ. ಇವರು, ತಮ್ಮ ತಂದೆಯವರ ಉದ್ಯಮದಲ್ಲಿ ಭಾಗೀದಾರರಾಗಿದ್ದರು. ಆದರೆ, ಅವರಿಗೆ ಅದರಲ್ಲಿ ಆಸಕ್ತಿ ಕಡಿಮೆ. ಕಲೆ, ಕಟ್ಟಡನಿರ್ಮಾಣ, ಹಾಗೂ ವಿಶಿಷ್ಠ-ಕಲಾವಸ್ತುಗಳ ಸಂಗ್ರಹ ಗಳ ಬಗ್ಗೆ ತೀವ್ರವಾದ ಆಸಕ್ತಿ. ಅವರು ಸಂಗ್ರಹಿಸಿರುವ ಅಮೂಲ್ಯ ತೈಲ, ವರ್ಣಚಿತ್ರಗಳ ಸಂಗ್ರಹವನ್ನು ಬೊಂಬಯಿನ , ಛತ್ರಪತಿ ವಸ್ತುಸಂಗ್ರಹಾಲಯಕ್ಕೆ ( ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್ ), ದಾನಮಾಡಿದ್ದಾರೆ. ಅವರ ಹೆಸರಿನಲ್ಲಿ, ಸರ್ ರತನ್ ಟಾಟಾ ಟ್ರಸ್ಟ್, ಅವರ ಮರಣದ ನಂತರ ಸ್ಥಾಪಿತವಾಯಿತು.

ಸರ್ ರತನ್‌ಜಿ ಟಾಟಾ
Born(೧೮೭೧-೦೧-೨೦)೨೦ ಜನವರಿ ೧೮೭೧
Died5 September 1918(1918-09-05) (aged 47)
Alma materಮುಂಬಯಿ ವಿಶ್ವವಿದ್ಯಾಲಯ
Occupation(s)ಕೈಗಾರಿಕೋದ್ಯಮಿ, ದಾನಿ
Spouse

ನವಾಜ್ ಬಾಯ್ ಸೆಟ್ (Married:1893)

Childrenನವಲ್ ಟಾಟಾ (ದತ್ತುಪುತ್ರ)
Fatherಜೆಮ್ಷೆಟ್‌ಜಿ ಟಾಟಾ
Relativesದೊರಾಬ್‌ಜಿ ಟಾಟಾ (ಸಹೋದರ)
ರತನ್ ಟಾಟಾ (ಮೊಮ್ಮಗ)

ಜನನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

'ಸರ್ ರತನ್ ಟಾಟಾ',[]'ಜೆ. ಎನ್,' ರವರ ಇಬ್ಬರು ಮಕ್ಕಳಲ್ಲಿ ಕಡೆಯವರು. ಅವರು ಬೊಂಬಾಯಿನಲ್ಲಿ , ೨೦ ಜನವರಿ ೧೮೭೧ ರಂದು ಜನಿಸಿದರು. 'ಸೇಂಟ್ ಜೇವಿಯರ್ಸ್ ಸ್ಕೂಲ್', ನಲ್ಲಿ ಪ್ರಾರಂಬಿಕ ಶಿಕ್ಷಣ ದೊರಕಿತು. 'Tata & Sons, Director', ಆಗಿದ್ದ ಅವರು, ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ಅರಿತಿದ್ದರು. ಸುಮಾರು ೧೨ ವರ್ಷ ದೊಡ್ಡವರಾದ ಅಣ್ಣ, ದೊರಾಬ್ ಟಾಟಾ, ಮತ್ತು ೧೫ ವರ್ಷ ಹಿರಿಯರಾದ ಆರ್. ಡಿ. ಟಾಟಾರವರ ಮಾತನ್ನು ಮೀರುತ್ತಿರಲಿಲ್ಲ. ತಮ್ಮದೇ ಆದ ಕೆಲವು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದರು. ೧೯೦೪ ರಲ್ಲಿ ಜೆ. ಎನ್ ಟಾಟಾರವರ ಮರಣದ ತರುವಾಯ, ಜವಾಬ್ದಾರಿಯೆಲ್ಲಾ ಸಹಜವಾಗಿ, ಈ ಮೂವರ ಮೇಲೆ ಬಿತ್ತು. ಈಗಾಗಲೇ ಸ್ಥಾಪನೆಯದ ಕಂಪೆನಿಗಳನ್ನು ಆರೋಗ್ಯಕರವಾಗಿ ನೋಡಿಕೊಳ್ಳುವುದು ಮತ್ತು ತಂದೆಯವರ ಕನಸನ್ನು ಪೂರ್ಣಗೊಳಿಸುವುದು. ಈ ಕಾರ್ಯಗಳಲ್ಲಿ ಅವರು ತಮ್ಮ ಅಣ್ಣನಿಗೆ ಚಕಾರವೆತ್ತದೆ ಸಹಕಾರ ಕೊಟ್ಟರು. ಟಾಟಾ ಕಬ್ಬಿಣ ಮತ್ತು ಉಕ್ಕು ಸಂಸ್ಥೆ, ೩ ಜಲವಿದ್ಯುತ್ ಕೇಂದ್ರಗಳು ಹಾಗೂ ೪ ಬಟ್ಟೆಗಿರಣಿಗಳು ಭಾರತದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದವು. ಭಾರತ ದೇಶದ ಔದ್ಯೋಗಿಕನೆಲೆಯನ್ನು ಸುಸ್ಥಿರಗೊಳಿಸುವಲ್ಲಿ ಅವು ಪ್ರಮುಖಪಾತ್ರವಹಿಸಿದವು. ರತನ್ ಒಬ್ಬ ಹೃದಯವಂತ,ಕಲಾರಾಧಕ, ಮತ್ತು ಕಲಾಪೋಷಕ, ದೀನದಲಿತರ, ಅಸಹಾಯಕರ, ದುಖಃಕ್ಕೆ ಮಿಡಿಯುವ ಸ್ವಭಾವದವರಾಗಿದ್ದರು. ಅವರೊಬ್ಬ ಅತಿ ಧಾರಾಳಿಯಾದ ವ್ಯಕ್ತಿಕೂಡ. ಭಾರತೀಯತೆ ಮತ್ತು ದೇಶಭಕ್ತಿ ಅವರ ದೇಹದ ಕಣ-ಕಣಗಳಲ್ಲಿತುಂಬಿಕೊಂಡಿದ್ದವು. ಅದು, ಅವರು ಕೈಗೊಂಡ ಕಾರ್ಯಗಳಲ್ಲೆಲ್ಲಾ ಎದ್ದು ಕಾಣುತ್ತಿತ್ತು. ಅವರಪಾಲಿಗೆ ಬಂದ ತಂದೆಯವರ ಆಸ್ತಿಯನ್ನು ಅನೇಕ ಸಾರ್ವಜನಿಕ ಕಲ್ಯಾಣಕಾರ್ಯಗಳಿಗಾಗಿಯೇ ಮೀಸಲಾಗಿಟ್ಟರು. ಆ ಸಂಪತ್ತಿನ ಬಹುಭಾಗ ನಿಜವಾದ ದುಖಃಸಂತಪ್ತರಿಗೆ ಸೇರಬೇಕಾದದ್ದೆಂಬುದು ಅವರ ಆಸೆ. ಅದು ಒಬ್ಬ ವ್ಯಕ್ತಿಯಾಗಿರಬಹುದು, ಅಥವಾ ಸಂತಪ್ತ ಸಂಸ್ಥೆಯೂ ಆಗಿರಬಹುದು. ಅದಕ್ಕಾಗಿ 'ಸರ್ ಟಾಟಾ ಟ್ರಸ್ಟ್', ನ ಅಧಿಕಾರಿಗಳಿಗೆ ತಮ್ಮ 'ದಾನ ವಿತರಣಾ ನೀತಿ', ಯನ್ನು ಸ್ಪಷ್ಟಪಡಿಸಿದ್ದರು.

ಕಲ್ಕತ್ತಾದ 'ಶಾಂತಿನಿಕೇತನ' ದ, ಸಂಶೋಧಕರಿಗೆ, ವಸತಿಗೃಹ

ಬದಲಾಯಿಸಿ

ಕಲ್ಕತ್ತನಗರದ, ಶಾಂತಿನಿಕೇತನ, ದಲ್ಲಿ ಪೌರಾತ್ಯ ಸಾಹಿತ್ಯ, ಕಲೆ, ಶಿಲ್ಪ, ಸಂಸ್ಕೃತಿ, ಸಂಗೀತದ ಅಭ್ಯಾಸಮಾಡಲು ಅನುವಾಗುವಂತೆ, ಸಂಶೋಧಕರಿಗೆ, ಒಂದು ವಸತಿಗೃಹವನ್ನು ನಿರ್ಮಿಸಿಕೊಟ್ಟರು. ಇಲ್ಲಿ ಹೆಚ್ಚಾಗಿ ಐರೋಪ್ಯರು ಬರುತ್ತಿದ್ದರು. ರತನ್ ರವರ ಹಿರಿಯಣ್ಣ, ದೊರಾಬ್ ಟಾಟ ರವರಿಗಿಂತ, ೧೨ ವರ್ಷ ಚಿಕ್ಕವರು. ಆರ್. ಡಿ. ಟಾಟಾ ರವರಿಗಿಂತ ೧೫ ವರ್ಷಕಿರಿಯವರು. ರತನ್ ಟಾಟ ತಮ್ಮದೇ ಆದ ಒಂದು ಲೋಕವನ್ನು ಸೃಷ್ಟಿಸಿಕೊಂಡಿದ್ದರು. ದಾನ ಧರ್ಮ, ಬಡಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.ವಿದ್ಯಾಸಂಸ್ಥೆಗಳು ಮತ್ತು ಜನಹಿತ ಕಾರ್ಯಗಳಲ್ಲಿ ತೀವ್ರ ಆಸಕ್ತಿ. ಕಲಾರಾಧಕರು, ಅದನ್ನು ಪೋಶಕರು ಕೂಡ. 'ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ' ದ ಮೊದಲ ಮಳಿಗೆಯಲ್ಲಿ ಬಹುಭಾಗ ಸ್ಥಳವನ್ನು, ರತನ್ ಟಾಟಾ ಕಲಾಸಂಗ್ರಹಗಳಿಗಾಗಿಯೇ ಮೀಸಲಾಗಿಡಲಾಗಿಲಾಗಿದೆ. ವಾಸ್ತು ಶಿಲ್ಪಿಗಳನ್ನು ಅವರು ಗೌರವಿಸುತ್ತಿದ್ದರು.

ಬೊಂಬಾಯಿನ,'ಬಾಂಬೆ ಹೌಸ್'ನ,ವಿನ್ಯಾಸವನ್ನು ಸರ್.ರತನ್ ಟಾಟಾ ಮಾಡಿದರು

ಬದಲಾಯಿಸಿ

ಬೊಂಬಾಯಿನ, ತಮ್ಮ ಸಂಸ್ಥೆಯ ಬಾಂಬೆ ಹೌಸ್, ಪ್ರಮುಖ ಕಛೇರಿಯ ವಿನ್ಯಾಸವನ್ನು, ತಾವೇ ಖುದ್ದಾಗಿ ನಿಂತು, ಬ್ರಿಟಿಷ್ ವಾಸ್ತುಶಿಲ್ಪಿ, 'ಜಾರ್ಜ್ ವಿಟೆಟ್', ರವರ ಜೊತೆ ಸಂಪರ್ಕಿಸಿ, ವಿನ್ಯಾಸದ ನೀಲನಕ್ಷೆಯನ್ನು ತಯಾರಿಸಿ, ಕೊಟ್ಟಿದ್ದಾರೆ. ಟಾಟ ಉದ್ಯಮ ಸಂಸ್ಥೆಗಳ ಪ್ರಮುಖ ಮುಖ್ಯ ಅಧಿಕಾರಸಂಸ್ಥೆಯಾಗಿದೆ. ಇದರ ಶಂಕುಸ್ಥಾಪನೆ ಮಾಡಿದ್ದು, ೧೯೨೧ ರಲ್ಲಿ. ಗೇಟ್ ವೇ ಅಫ್ ಇಂಡಿಯ, ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್ ನಂತಹ ಸುಪ್ರಸಿದ್ಧ ಭವ್ಯ ಕಟ್ಟಡಗಳ ನಿರ್ಮಾತ, 'ಜಾರ್ಜ್ ವಿಟೆಟ್' ರವರು ಕಟ್ಟಲು ಒಪ್ಪಿಕೊಂಡು ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದರು. ೧೯೨೪ ರಲ್ಲಿ, ವಿಧ್ಯುಕ್ತವಾಗಿ ಬಾಂಬೆ ಹೌಸ್, ನ ಉದ್ಘಾಟನೆಯಾಯಿತು. ಇದಕ್ಕೆ ಮೊದಲು, ನವಸಾರಿ ಹೌಸ್, ಟಾಟ ಸಂಸ್ಥೆಯ ಪ್ರಮುಖ ಕಛೇರಿಯಾಗಿತ್ತು.

'ಸರ್ ರತನ್ ಟಾಟ,' ರವರು ಕೊಡುಗೈದಾನಿಯಾಗಿದ್ದರು

ಬದಲಾಯಿಸಿ

೧೯೧೩-೧೭ ರ ಸಮಯದಲ್ಲಿ ಬ್ರಿಟಿಷ್ ಸರ್ಕಾರ, ಪಾಟಲಿಪುತ್ರದ ಭೂಮಿಯನ್ನು ಅಗೆದು ಮಾಡಿದ ಸಂಶೋಧನಕಾರ್ಯಕ್ಕೆ ದ್ರವ್ಯ-ಸಹಾಯ ಮಾಡಲು ರತನ್ ಟಾಟಾ, ಮುಂದೆಬಂದರು. ಅಲ್ಲಿ ಅಶೋಕ ಚಕ್ರವರ್ತಿಯ ಕಾಲದಲ್ಲಿದ್ದ, ಮಯೂರ ಸಿಂಹಾಸನ, ಸಿಕ್ಕಿತು. ೧೯೨೨ ರಲ್ಲಿ, ಲಂಡನ್ ನ ಸ್ಕೂಲ್ ಆಫ್ ಎಕೊನೊಮಿಕ್ಸ್ ನಲ್ಲಿ ಒಂದು ಪೀಠವನ್ನು ಸ್ಥಾಪಿಸಿ, ಅಲ್ಲಿ ಬಡತನದ ನಿವಾರಣೆ ಮತ್ತು ಅದರಬಗ್ಗೆ ವಿಶೇಷ ಅಧ್ಯಯನದ ಕೆಲಸಕ್ಕೆ ಧನಸಹಾಯ ಮಾಡಲು ಅವರು ಯೋಚಿಸಿದ್ದರು. ಲಂಡನ್ ನಲ್ಲಿ ಅತ್ಯಂತ ಪುರಾತನ ಐತಿಹಾಸಿಕ ಸೌಧ, "ಯಾರ್ಕ್ ಹೌಸ್ " ನ್ನು ಡ್ಯೂಕ್ ಡಿ ಆರ್ಲಿಯನ್ಸ್ ರವರಿಂದ ಟ್ವಿಕನ್ ಹ್ಯಾಮ್, ನಲ್ಲಿ ಖರೀದಿಸಿದರು. ಅವರ ಪತ್ನಿ, ರತನ್ ಸತ್ತಮೇಲೂ ೪೪ ವರ್ಷಗಳ ವರೆಗೆ ಬದುಕಿದ್ದರು. ಸರ್ ರತನ್ ಟಾಟಾ ಇನ್ನೂ ಮಾಡದೆ ಬಿಟ್ಟಿದ್ದ ಅನೇಕ ಅಧೂರಿಯಾಗಿದ್ದ, ಕಾರ್ಯಗಳನ್ನು ನೆರೆವೇರಿಸಿದರು. ಟ್ರಸ್ಟ್ ನ ಹಣ, ಟಾಟಾರವರು ಸ್ಥಾಪಿಸಿದ ಎಲ್ಲಾ ಟ್ರಸ್ಟ್ ಗಳಿಗಿಂತ ಮೊತ್ತದ ಗಾತ್ರದಲ್ಲಿ ಎರಡನೆಯದು. ಅವರು ಟಾಟಾ ಉದ್ಯಮದಲ್ಲಿ ಒಬ್ಬ ಡೈರೆಕ್ಟರ್ ಆಗಿದ್ದದ್ದು ನಿಜ. ಆದರೆ ಜವಾಬ್ದಾರಿಯನ್ನೆಲ್ಲಾ ತಮ್ಮ ಪ್ರೀತಿಯ ಅಣ್ಣನವರಾದ, ದೊರಾಬ್ ಮತ್ತು ಆರ್. ಡಿ. ಟಾಟಾರವರಿಗೆ ಒಪ್ಪಿಸಿಕೊಟ್ಟಿದ್ದರು. ತಂದೆಯವರು ಬಟ್ಟೆ ಉದ್ಯೋಗದಲ್ಲಿ ಅಪಾರ ಸಂಪತ್ತನ್ನು ಜಮಾಯಿಸಿದ್ದರು. ರತನ್ ರವರ ಪಾಲಿಗೆ ಬಂದ ಹಣವೂ ಅಪಾರ. ಅದನ್ನೆಲ್ಲಾ ದೇಶದ ಏಳಿಗೆಗಾಗಿ, ಮುಡುಪಾಗಿಟ್ಟರು. ಇಂಗ್ಲೆಂಡ್ ನಲ್ಲಿ, ಸೇಂಟ್ ಇವ್ಸ್ ಕಾರ್ನ್ವೆಲ್, ನಲ್ಲಿ ೫, ಸೆಪ್ಟೆಂಬರ್, ೧೯೧೮ ರಲ್ಲಿ, ತೀರಿಕೊಂಡರು. ಸರ್ ರತನ್ ಟಾಟಾ ದಂಪತಿಗಳಿಗೆ ಮಕ್ಕಳಿರಲಿಲ್ಲ. ಲೇಡಿ ನವಾಜ್ ಬಾಯಿ, ಯವರು ಅಪಾರ ದುಖಃವನ್ನು ಅನುಭವಿಸಬೇಕಾಯಿತು. ರತನ್ ಟಾಟಾ ರವರ ಆಸೆಯಂತೆ, ಅವರ ಟ್ರಸ್ಟ್ ನ ಸದಸ್ಯರು ನಡೆದುಕೊಂಡರು. ನವಾಜ್ ಬಾಯಿಯವರು ಇಟ್ಟ ಹಣದ ಮೊತ್ತ, ೮. ಮಿಲಿಯನ್ ರೂಪಾಯಿಗಳನ್ನು ಅತ್ಯಂತ ವಿಧಿ-ಪೂರ್ವಕವಾಗಿ ವಿನಿಯೋಗಿಸಲು ವ್ಯವಸ್ಥೆ ಮಾಡಿದರು. ಹಲವಾರು ಸಂಸ್ಥೆಗಳು, ಸರ್ ರತನ್ ಟಾಟಾ ಟ್ರಸ್ಟ್ ನ ವತಿಯಿಂದ ದ್ರ್ಯವ್ಯಸಹಾಯ ಪಡೆದು ಅಭಿವೃದ್ಧಿಹೊಂದಿವೆ. ಅವುಗಳಲ್ಲಿ ಪ್ರಮುಖವಾದವುಗಳು :

'ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ'

ಬದಲಾಯಿಸಿ

ಇದೊಂದು ಸಾಮಾಜಿಕ ಸಂಸ್ಥೆ. ಜೂನ್, ೧೨, ೧೯೦೫ ರಲ್ಲಿ ಗೋಪಾಲಕೃಷ್ಣ ಗೋಖಲೆಯವರ ನೇತೃತ್ವದಲ್ಲಿ ಇದು ಅಸ್ತಿತ್ವಕ್ಕೆ ಕಾರ್ಯರೂಪಕ್ಕೆ ಬಂತು. ಸ್ವಾತಂತ್ರಭಾರತದ ಕಲ್ಪನೆಯನ್ನು ಹೊಂದಿದ ಭಾರತೀಯರನ್ನೆಲ್ಲಾ ಒಂದುಗೂಡಿಸಿ ಸಮಾನ ಮನಸ್ಕರಾಗಿ ಹೋರಾಡುವ ಪರಿಕಲ್ಪನೆಯಲ್ಲಿ ತಮ್ಮ ತನುಮನ ಧನ ಗಳನ್ನು ಮುಡುಪಾಗಿಡುವ ವ್ಯಕ್ತಿಗಳ ಗುಂಪೊಂದನ್ನು ಕಟ್ಟುವ ಆಸೆ ಅವರದು. ಸರ್ ರತನ್ ಟಾಟಾ, ಗೋಪಾಲಕೃಷ್ಣಗೋಖಲೆಯವರ ಅಪ್ತ ಸ್ನೇಹಿತರು. ಅವರ ಬೇಡಿಕೆಯಂತೆ, ವಾರ್ಷಿಕಧನ ೧೦,೦೦೦/-ವನ್ನು ಮಂಜೂರುಮಾಡಿದರು. ಇದರ ಅವಧಿ ೧೦ ವರ್ಷಗಳ ವರೆಗೂ ಎಂದು ತೀರ್ಮಾನಿಸಲಾಗಿತ್ತು. ಈ ಹಣಸಹಾಯದಿಂದ ಆರ್ಥಿಕಮುಗ್ಗಟ್ಟಿನಿಂದ ಅಸಹಾಯಕ ಜೀವನ ನಿರ್ವಹಣೆಮಾಡುತ್ತಿರುವ, ವಿದ್ಯೆ, ಧನಗಳಿಂದ ವಂಚಿತರಾಗಿರುವ ಬಡಜನರಿಗೆ, ತಮ್ಮ ಕಾಲಿನಮೇಲೆ ಸ್ವಂತವಾಗಿ ನಿಲ್ಲಲು ಸಹಾಯಮಾಡುವ ದಿಶೆಯಲ್ಲಿ ಕಾರ್ಯವನ್ನು ಕೈಗೊಳ್ಳಲು ಕರೆಯಿತ್ತರು. ಅದುವರೆಗೂ, ಯಾವ ಭಾರತೀಯ ಉದ್ಯೋಗಪತಿಯೂ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಇಂತಹ ದಾನ-ಧರ್ಮ ಕಾರ್ಯದಲ್ಲಿ ಭಾಗವಹಿಸಿರಲಿಲ್ಲ.

'ದಕ್ಷಿಣ ಆಫ್ರಿಕ'ದಲ್ಲಿ 'ಮಹಾತ್ಮಾ ಗಾಂಧಿಯವರ ಕಾರ್ಯಗಳಿಗೆ ಧನ ಸಹಾಯ'

ಬದಲಾಯಿಸಿ

ಎಮ್.ಕೆ.ಗಾಂಧಿಯವರು ದಕ್ಷಿಣ ಆಫ್ರಿಕದ ಟ್ರಾನ್ಸ್ವಾಲ್ ನಲ್ಲಿ, ಬ್ಯಾರಿಸ್ಟರ್ ಆಗಿದ್ದ ಕಾಲದಲ್ಲಿ ನಡೆದ ಆಂದೋಲನದ ಬಗ್ಗೆ. ಪ್ರಸ್ತುತ ಸರ್ಕಾರವು ಏಶಿಯಾದ, ಹೆಚ್ಚಾಗಿ ಭಾರತೀಯರ ವಿರುದ್ಧ ಕಡುವೈರದಿಂದ, ಮಾಡುತ್ತಿದ್ದ ಸಾಮಾಜಿಕ ಅನ್ಯಾಯಗಳನ್ನು ಪ್ರತಿಭಟಿಸಿ ಗಾಂಧೀಜಿಯವರು ಅಸಹಕಾರ ಅಂದೋಳನ ಕ್ಕೆ ಕರೆಕೊಟ್ಟಿದ್ದರು. ಇದರ ಕಾರ್ಯಪ್ರಣಾಳಿಯನ್ನು ಸಾಮಾನ್ಯ ಜನರಿಗೆ ತಲುಪಿಸಲು, ಪತ್ರಿಕೆಗಳ ಮಾಧ್ಯಮದ ಸಹಾಯಬೇಕಾಗಿತ್ತು. ಗಾಂಧಿಯವರು ನಡೆಸುತ್ತಿದ್ದ ಪತ್ರಿಕೆಗಳಿಗೆ ಹಣದ ಅಗತ್ಯ ಬಹಳವಾಗಿತ್ತು. ಇದನ್ನು ಗಮನಿಸಿದ ಗೋಖಲೆಯವರು, ಸರ್ ರತನ್ ರವರನ್ನು ಏನಾದರೂ ಸಹಾಯಮಾಡಲು ಕೋರಿದರು. ಕೂಡಲೇ ರತನ್ ಟಾಟ ರವರು ತಮ್ಮ ಸಂಸ್ಥೆಯಿಂದ, ೨೫,೦೦೦/- ರೂಪಾಯಿಗಳನ್ನು ಮಂಜೂರುಮಾಡಿದರು. ಹೀಗೆ, ೧೯೦೯-೧೯೧೩ ರವರೆಗೆ ಅವರು ದಕ್ಷಿಣ ಆಫ್ರಿಕದ ಅಸಹಕಾರ ಚಳುವಳಿಗೆ ನೀಡಿದ ಆರ್ಥಿಕ ನೆರವಿನ ಒಟ್ಟು ಮೊತ್ತ, ೧, ೫೦,೦೦೦-ರೂಪಾಯಿಗಳು. ಇವನ್ನು ಅವರು ಹಲವು ಕಂತುಗಳಲ್ಲಿ ಕೊಟ್ಟಿದ್ದರು. ಗಂಧೀಜಿಯವರು ರತನ್ ರವರಿಗೆ ಬರೆದ ಪತ್ರದಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿ, "ನಿಮ್ಮ ಈ ಭಾರಿಮೊತ್ತದ ಸಹಾಯ-ಧನ, ನಮ್ಮದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಂದೋಳನಕ್ಕೆ ನಿಮ್ಮ ಪೂರ್ಣಸಹಕಾರದ ಪ್ರತೀಕವಾಗಿದೆ." ಯೆಂದು, ಬಣ್ಣಿಸಿದ್ದರು. ಭಾರತದ ಉದ್ಯಮಿಗಳ್ಯಾರೂ ಇಂತಹ ಕೊಡುಗೈ ಸಹಾಯವನ್ನು ಅದುವರೆಗೂ ಮಾಡಿರಲಿಲ್ಲ. ೧೯೧೬ ರಲ್ಲಿ, ಬ್ರಿಟಿಶ್ ಸರ್ಕಾರ ಅವರ ಅನುಪಮ ಸೇವೆಯನ್ನು ಗುರುತಿಸಿ, ಅವರಿಗೆ, ಸರ್ ಪದವಿ ಯನ್ನು, ಪ್ರದಾನಮಾಡಿತು. ರತನ್ ರವರ ಉದಾಹರಣೆಯಿಂದ ಹಲವರು ಪ್ರಭಾವಿತರಾಗಿ ತಾವೂ ತಮ್ಮ ಕೈಲಾದ ಹಣಸಹಾಯ ನಂತರ ಮಾಡಿದರು.

ಸರ್ ರತನ್ ಟಾಟ ಟ್ರಸ್ಟ್ ಸ್ಥಾಪನೆ

ಬದಲಾಯಿಸಿ

ಲಂಡನ್ ವಿಶ್ವವಿದ್ಯಾಲಯದಲ್ಲಿ ಬಡತನವನ್ನು ನಿವಾರಿಸಿ, ದೇಶದ ಸಂಪತ್ತನ್ನು ಹೆಚ್ಚಿಸಲು ಕಾರ್ಮಿಕರಿಗೆ ನೆರವಾಗುವ ಒಂದು ಸಮೀಕ್ಷೆಯನ್ನು ನಡೆಸಲು ಹಾಗೂ ಅದರ ಬಗ್ಗೆ ಸಂಶೋಧನೆ ನಡೆಸಲು, ೧೯೧೨ ರಲ್ಲಿ, ತಾವು ನಿಧಿಯನ್ನು ಮಂಜೂರುಮಾಡಲು ಉತ್ಸುಕರೆಂಬ ಮಾತನ್ನು ಪ್ರಾಂಶುಪಾಲ, ಸರ್ ವಿಲಿಯಂ ಮೈರ್,ರವರ ಕಿವಿಗೆ ಹಾಕಿದರು. ಆಗ, ಸರ್. ವಿಲಿಯಮ್ ಮೈರ್, ತಮ್ಮ ಸಹೋದ್ಯೋಗಿಗಳಾದ, ಪ್ರೊ. ಎಲ್. ಟಿ, ಹಾಬ್ ಹೌಸ್, ಪ್ರೊ. ಉರ್ವಿಕ್ ಜೊತೆ ಸಮಾಲೋಚಿಸಿ, ಒಂದು ವಿಶೇಷವರದಿಯನ್ನು ತಯಾರುಮಾಡಿ, ಸರ್ ರತನ್ ಟಾಟಾರವರಿಗೆ ಒಪ್ಪಿಸಿದರು. ರತನ್ ಟಾಟಾ ತಮ್ಮ ಒಪ್ಪಿಗೆಸೂಚಿಸಿ, ವಾರ್ಷಿಕ ಪರಿಹಾರ ನಿಧಿ, ೧,೪೦೦ ಪಂಡ್ ಗಳನ್ನು ನೀಡಿದರು. 'ಲಂಡನ್ ಸ್ಕೂಲ್ ಆಫ್ ಎಕೊನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ಶಾಖೆಯಲ್ಲಿ,'ಸರ್ ರತನ್ ಟಾಟಾ ಪ್ರತಿಷ್ಠಾನ'ದ ಸ್ಥಾಪನೆಯಾಯಿತು. ಇದು ಮೊದಲು ೩ ವರ್ಷಗಳ ಅವಧಿಗೆ ಮೀಸಲಾಗಿತ್ತು. ನಂತರ, ೧೯೧೯ ರಲ್ಲಿ, ಮತ್ತೆ ೫ ವರ್ಷಗಳ ಅವಧಿಗೆ ವಿಸ್ತರಿಸಲಾಯಿತು. ಒಟ್ಟು ೧೯ ವರ್ಷಗಳ ಅವಧಿಯಲ್ಲಿ ಅನೇಕ, ಶಾಲಾ-ಕಾಲೆಜ್ ಗಳ, ವಿಧ್ಯಾರ್ಥಿಗಳು ಸಂಶೋಧನೆಯಲ್ಲಿ ಪಾಲ್ಗೊಂಡರು. ಬೇರೆ ಬೇರೆ ಉದ್ಯಗಳಲ್ಲಿ ದುಡಿಯುವ ನೌಕರರು, ಮತ್ತು ಅವರ ಜೀವನದ ಪರಿಸ್ಥಿತಿ, ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ವಿಶೇಷ ಲೇಖನಗಳು ಅನೇಕ ಪ್ರತಿಷ್ಯಿತ ಪತ್ರಿಕೆಗಳಲ್ಲಿ ಪ್ರಕಟವಾದವು.

'ಪಾಟ್ನಾ'ದ ಬಳಿಯ, 'ಪಾಟಲೀಪುತ್ರ'ದಲ್ಲಿ ನಡೆಸಿದ, ಭೂಗರ್ಭ-ಸಂಶೋಧನೆಗೆ ಧನ ಸಹಾಯ

ಬದಲಾಯಿಸಿ

ಕಲಾರಾಧಕ, ಸಂಗ್ರಹಕ, ಮತ್ತು ಪರ್ಯಟಕರಾಗಿದ್ದ ರತನ್ ರವರು, ಭಾರತವನ್ನೆಲ್ಲಾ ಸುತ್ತಿದರು. ಅವರು ವಿದೇಶಗಳಲ್ಲೂ ಹೋಗಿ ಕಲಾವಸ್ತುಗಳನ್ನು ಕೊಂಡು ತರುತ್ತಿದ್ದರು. ೧೯೨೧ ರ ಸಮಯದಲ್ಲಿ ಒರಿಸ್ಸ ಮತ್ತು ಬಿಹಾರಗಳಲ್ಲಿ ಗವರ್ನರ್ ಆಗಿದ್ದ, ಲೆಫ್ಟಿನೆಂಟ್ ಗವರ್ನರ್, ಸರ್ ಹಾರ್ ಕೋರ್ಟ್ ಬಟ್ಲರ್ , ರವರನ್ನು ಸಂಪರ್ಕಿಸಿದ್ದರು. ಬ್ರಿಟಿಷ್ ಭಾರತಸರ್ಕಾರದ, ಭೂಗರ್ಭ ಸಂಶೋಧನಾ ಇಲಾಖೆ, ಯವರು ತಮ್ಮ ಉತ್ಖಲಕ್ರಿಯೆಯನ್ನು ಆಗ ಶುರುಮಾಡಿದ್ದರು. ನಿಧಿ-ನಿಕ್ಷೇಪ, ಮತ್ತು ಕಲಾಸಂಬಂಧಿತ ವಿಶೇಷ ವಸ್ತುಗಳನ್ನು ಭೂಮಿಯಿಂದ ಹೊರತೆಗೆದ ಮೇಲೆ, ಅವನ್ನು ಕಪಾಟಿನಲ್ಲಿಟ್ಟು ಪ್ರದರ್ಶನಕ್ಕೆ ಸಜುಗೊಳಿಸಲು ಯೋಗ್ಯವಾದ ವಸ್ತುಗಳನ್ನು ಸರ್ ರತನ್ ಟಾಟಾರವರು ಬಹಳ ವರ್ಷಗಳಿಂದ ಹುಡುಕುತ್ತಿದ್ದರು. ಅದಕ್ಕಾಗಿ, ೭೫,೦೦೦/- ರುಪಾಯಿಗಳನ್ನು ಮಂಜೂರುಮಾದಿದ್ದರು. ೧೯೧೩-೧೭ ರವರೆಗೆ ಭೂಮಿಯಿಂದ ಹೊರತೆಗೆದ ವಸ್ತುಗಳಲ್ಲಿ, ನಾಣ್ಯಗಳು, ಪ್ಲೇಕ್ ಗಳು, ಚಿತ್ರಗಳು, ಕೈಬರವಣಿಗೆಯ ವಸ್ತುಗಳು, ಮತ್ತು, ಮಯೂರಸಿಂಹಾಸನ, ಸಾಮ್ರಾಟ್ ಅಶೋಕನ ಕಾಲದ ಅರಮನೆಯ ನೆನಪನ್ನು ಸೂಚಿಸುತ್ತವೆ. ಪಾಟ್ಣ ಮ್ಯೂಸಿಯಂ ನಲ್ಲಿ, ಇಂದಿಗೂ ಈ ಕಲಾ ನಮೂನೆಗಳು ಕಾಣಲು ಉಪಲಭ್ದವಿದೆ.

ಸರ್ ರತನ್ ಟಾಟಾರವರ ಕಲಾ-ವಸ್ತುಗಳ, ಸಂಗ್ರಹಗಳು

ಬದಲಾಯಿಸಿ

ರತನ್ ಟಾಟಾ ಜಮ್ಸೆಟ್ ಜಿ ರವರು, ಕಲಾರಾಧಕರು, ಕಲಾಪೋಶಕರು, ಮತ್ತು, ಒಬ್ಬ ಶ್ರೇಷ್ಟ ಮಾನವ, ನೆಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವಕಲಾರಾಧಕ, ಪರ್ಯಟಕ ರತನ್, ಪುರಾತನ-ಬಟ್ಟೆಗಳು, ಟೆರ್ರಾಕೋಟ, ಹಸ್ತ ಲಿಖಿತಸಾಮಗ್ರಿಗಳು, ಈಟಿ, ಭರ್ಜಿ, ಗನ ಕತ್ತಿ, ಗುರಾಣಿ, ಜೆಡ್ ಮುಂತಾದ ಸಮಾನುಗಳು. ಬಣ್ಣಗಳ, ನೀಲಿ ಬಿಳುಪು, ಹೂದಾನಿಗಳು, ನ್ಯಶ್ಯದ ಡಬ್ಬಿಗಳು, ಆನೆದಂತದಿಂದ ತಯಾರಿಸಲ್ಪಟ್ಟ ಸಾಮಗ್ರಿಗಳು, ಮತ್ತು ಇತರ ಕರಕುಶಲ ವಸ್ತುಗಳನ್ನು , ಪ್ಯಾರಿಸ್ ಗೆ ಭೇಟಿಇತ್ತ ಸಮಯದಲ್ಲಿ ಕೊಂಡುಕೊಂಡರು. ೧೯೧೯ ರಲ್ಲಿ ಅದರ ಮೊತ್ತ ೫ ಲಕ್ಷರೂಪಾಯಿಗಳು ಎಂದು ಅಂದಾಜುಮಾಡಲಾಗಿತ್ತು. ಇಂಗ್ಲೆಂಡ್ ನ ತ್ವಿಕನ್ ಹ್ಯಾಮ್ ನಲ್ಲಿ ರಾಜ್ಯದ ಪುರಾತನ ಮ್ಯಾನ್ಶನ್ ಖರೀದಿಸಿದರು. ಇಂಗ್ಲೆಂಡ್ ನಲ್ಲಿ ತಮ್ಮ ವಿಹಾರ ಸ್ಥಳವಾಗಿ ಮಾರ್ಪಡಿಸಿದ್ದರು. ೧೭ ನೆಯ ಶತಮಾನದ ಕೆಂಪು ಇಟ್ಟಿಗೆಗಳಿಂದ ತಯಾರಾದ ಕಟ್ಟಡದ ಸುತ್ತಮುತ್ತಲೂ ಭಾರಿಉದ್ಯಾನವನ್ನೂ ಹೊಂದಿತ್ತು. ಯಾರ್ಕ್ ಹೌಸ್ ವಿಶಿಷ್ಠ ವಸ್ತುಗಳಿಂದ ತುಂಬಿತುಳುಕುವ ಭಾರಿ ಅದ್ಧೂರಿಯಾದ ಮ್ಯೂಸಿಯಂ ತರಹ ಕಂಗೊಳಿಸುತ್ತಿತ್ತು.

'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್,' ಗಾಗಿಯೇ ವಿಶೇಷವಾಗಿ ಸಂಗ್ರಹಿಸಿದ್ದರು

ಬದಲಾಯಿಸಿ

ಬೊಂಬಾಯಿನ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್, (ಈಗಿನ ಛತ್ರಪತಿ ವಸ್ತು ಸಂಗ್ರಹಾಲಯ) ಗಾಗಿಯೇ ವಿಶೇಷವಾದ ವಸ್ತುಗಳನ್ನು ವಿದೇಶದಲ್ಲಿ ಖರೀದಿಸಿ, ಸಂಗ್ರಹಿಸಿದ್ದರು. ತಮ್ಮ ಪೂರ್ವಾತ್ಯ ದೇಶಗಳ ಭೇಟಿಯಸಮಯದಲ್ಲಿ ಅವರು,ಬಿಳಿ-ನೀಲಿ ಬಣ್ಣಗಳ ಭಾರಿಗಾತ್ರದ ಹೂಜಿಗಳನ್ನು ಜಪಾನ್, ಮತ್ತು ಚೈನಗಳಿಂದ ಗೋಡೆಗೆ ತೂಗುಹಾಕುವ ರತ್ನ ಕಂಬಳಿಗಳು, ಆನೆದಂತದಿಂದ ಮಾಡಿದ ಸಾಮಾನುಗಳನ್ನು ಸಂಗ್ರಹಿಸಿದ್ದರು. ಬೊಂಬಾಯಿನಲ್ಲಿ ಆಗತಾನೆ ಶುರುವಾಗಿದ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್ ಗಾಗಿ ಸಂಗ್ರಹಿಸಿದ ವಸ್ತುಗಳನ್ನು ಕೊಡಲು ತಮ್ಮ ವಿಲ್ ನಲ್ಲಿ ಬರೆದಿಟ್ಟಿದ್ದರು. ಅದರಂತೆ ೧೯೨೧ ರಲ್ಲಿ ಪ್ರಾರಂಭವಾದಾಗ ಆ ಕಲಾಸಂಗ್ರಹಗಳನ್ನು ತಂದು ಮ್ಯೂಸಿಯಮ್ ನಲ್ಲಿ ಸಮಜಾಯಿಸಲಾಯಿತು. ಈಗಲೂ FAr Eastern Arts Collection section, ನಲ್ಲಿ ನಾವು, ಅವುಗಳನ್ನು ಕಾಣಬಹುದು. ತಮ್ಮಪಾಲಿಗೆ ತಮ್ಮ ತಂದೆಯರಿಂದ ಬಂದ ಆಸ್ತಿಯನ್ನು ದಾನಕ್ಕಾಗಿಯೇ ಮೀಸಲಾಗಿಟ್ಟರು. ೧೯೧೩ ರಲ್ಲಿ ತಮ್ಮ ಟ್ರಸ್ಟ್ ನ ಅಧಿಕಾರಿಗಳಾಗುವವರಿಗೆ ಸರಿಯಾದ ಮಾರ್ಗದರ್ಶನಮಾಡಿ ತಮ್ಮ ಆಸೆಯನ್ನು ಸ್ಪಷ್ಟವಾಗಿ ನಮೂದಿಸಿ ದಾಖಲಿಸಿದ್ದರು. ಅತಿವೃಷ್ಟಿ, ಅನಾವೃಷ್ಟಿ, ಬೆಂಕಿ ಅಪಘಾತ, ಭೂಕಂಪ, ಬರ,ದಂತಹ ಪಿಡುಗಿಗೆ, ಅವರ ಟ್ರಸ್ಟ್ ನಿಂದ ಯಾವಾಗಲೂ ಸಹಾಯಮಾಡುವ ವ್ಯವಸ್ಥೆಮಾಡಿದರು. ಆಸ್ಪತ್ರೆಗಳನ್ನು ಕಟ್ಟಿಸಿದರು. ಅವರು ವಿದ್ಯೆ, ಕಲಿಕೆ, ಔದ್ಯೋಗಿಕ ಉತ್ಪಾದನೆಗಳನ್ನು ಬಹು ಪ್ರಾಮುಖ್ಯವಾಗಿ ಪರಿಗಣಿಸಿದ್ದರು. ರತನ್ ಟಾಟಾರವರು, ೧೯೧೬ ರಲ್ಲಿ ಕಾಯಿಲೆಬಿದ್ದರು. ದೀರ್ಘಕಾಲ ಕಾಯಿಲೆಯಿಂದ ನರಳಿದ ಅವರು, ಗುಣಮುಖವಾಗಲೆ ಇಲ್ಲ. ಡಾ. ರವರ ಸಲಹೆಯಂತೆ, ಇಂಗ್ಲೆಂಡ್ ಗೆ ವೈದ್ಯಕೀಯ ಸಹಾಯಕ್ಕೆ ಹೋದರು. ಇಂಗ್ಲೆಂಡ್ ನ ಸೆಂಟ್ ಇನ್ಸ್, ಕಾರ್ನ್ ವಾಲ್ ನಲ್ಲಿ ೫, ಸೆಪ್ಟೆಂಬರ್, ೧೯೧೮ ರಲ್ಲಿ ತಮ್ಮ ಪ್ರೀತಿಯ ಮಡದಿ, ಲೇಡಿ ನವಾಜ್ ಬಾಯಿ, ಯವರನ್ನು ಅಗಲಿ, ಕೊನೆಯುಸಿರೆಳೆದರು.

'ಸರ್ ರತನ್ ಟಾಟ ಟ್ರಸ್ಟ್,' ಸ್ಥಾಪನೆ

ಬದಲಾಯಿಸಿ

ಸರ್ ರತನ್ ಟಾಟಾರವರ ಇಚ್ಛೆಯಂತೆ, ನವಾಜ್ ಬಾಯಿಯವರು, ಟಾಟಾ ಪರಿವಾರದ ಸದಸ್ಯರೊಡನೆ ಸಮಾಲೋಚಿಸಿ, ೧೯೧೯ ರಲ್ಲಿ, ಒಂದು ಟ್ರಸ್ಟ್ ನಿರ್ಮಿಸಿ,'ಸರ್ ರತನ್ ಟಾಟ ಟ್ರಸ್ಟ್ 'ಎಂದು ಹೆಸರಿಟ್ಟರು. ಅವರು ೧೯೬೨ ರಲ್ಲಿ ಮೃತರಾಗುವವರೆಗೂ ಟಾಟ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿ ತಮ್ಮ ಅನುಪಮ ಸೇವೆ ಸಲ್ಲಿಸಿದರು. ಸರ್ ರತನ್ ಟಾಟಾ ಟ್ರಸ್ಟ್ ನ ರುವಾರಿಯಾಗಿ ಬೇರೆ ಟಾಟಾ ಡೈರೆಕ್ಟರ್ ಗಳ ಸಹಕಾರ, ಸಹಾಯ ಪಡೆದು ಅತ್ಯಂತ ಯಶಸ್ವಿಯಾಗಿ ಅದನ್ನು ನಡೆಸಿಕೊಂಡು ಹೋದರು. ಆಗ ಉಪಲಭ್ದವಿದ್ದ ಹಣದ ರಾಶಿ, ೮ ಮಿಲಿಯನ್ ರೂಪಾಯಿಗಳು. ಮಕ್ಕಳಿಲ್ಲದಿದ್ದ ಸರ್ ರತನ್ ಟಾಟಾ ದಂಪತಿಗಳು, ಸಮಸ್ತಹಣವನ್ನು ಬಡಬಗ್ಗರ, ಜೀವನದಲ್ಲಿ ಆಶಾಕಿರಣವನ್ನು ಮೂಡಿಸುವುದರಲ್ಲೇ ವಿನಿಯೋಗಮಾಡಿದರು.'ಜಮ್ಸೆಟ್ ಜಿ ಟಾಟಾ' ರವರ ಪತ್ನಿ,ಹೀರಾಬಾಯಿ ಯವರ ಸೋದರಿ,'ಕುವರ್ ಬಾಯಿ ಡಾಬು' ಹಾಗೂ, ಶಾಪುರ್ಜಿ ರಾವ್ ದಂಪತಿಗಳಿಗೆ 'ರತನ್ ಬಾಯಿ ರಾವ್' ಎಂಬ ಮಗಳು ಜನಿಸಿದಳು. ರತನ್ ಬಾಯಿ ರಾವ್ ರವರು,('ಸೂನೂ' ಎಂದು ಕರೆಯಲ್ಪಡುತ್ತಿದ್ದರು) ಹಾಗೂ 'ಹರ್ಮುಸ್ ಜಿ' ರವರ ಮಗ, ನಾವಲ್ ಹರ್ಮುಸ್ ಜಿ ಟಾಟಾ, ರವರನ್ನು, ಲೇಡಿ ನವಾಜ್ ಬಾಯಿ ಟಾಟಾರವರು' ದತ್ತು ತೆಗೆದುಕೊಂಡರು. ಪ್ರಸಕ್ತ ಟಾಟಾ ಸನ್ಸ್ ಕಂಪೆನಿ, ಯ ಡೈರೆಕ್ಟರ್, ರತನ್ ನಾವಲ್ ಟಾಟಾ ರವರು, 'ನಾವಲ್ ಹರ್ಮುಸ್ ಜಿ ಟಾಟಾ' ರವರ ಪುತ್ರರು. ಡೈರೆಕ್ಟರ್ ಆಫ್ ಟಾಟಾ ಸನ್ಸ್, ನ ಮಹಾನಿದೇಶಕರು, ಈಗಿನ ಟಾಟ ಸಂಸ್ಥೆಯ ಕಾರ್ಯಭಾರಗಳನ್ನು ಸಮರ್ಪಕವಾಗಿ ನೋಡಿಕೊಳ್ಳುತ್ತಿದ್ದಾರೆ.

'ಟಾಟ ದಾನ ಸಂಸ್ಥೆ',-ಭಾರತದ ಅತಿ ಹಳೆಯ 'ದಾನ ಸಂಸ್ಥೆ'ಗಳಲ್ಲಿ, ಪ್ರಮುಖವಾದದ್ದು

ಬದಲಾಯಿಸಿ

ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ, ಭಾರತಕ್ಕೆ ಕೊಟ್ಟ ಕೊಡುಗೆ ಅನನ್ಯ. ಅದೇ ತತ್ವವನ್ನು ಟಾಟಾ ಪರಿವಾರ ಸದಸ್ಯರೆಲ್ಲಾ ಅನೂಚಾನವಾಗಿ ಪಾಲಿಸಿಕೊಂಡು ಬಂದರು. ಟಾಟಾ ಸಂಸ್ಥೆಯಬಗ್ಗೆ ಭಾರತೀಯರ ಹೃದಯದಲ್ಲಿ ಅಪರಿಮಿತ ಪ್ರೀತಿ, ವಿಶ್ವಾಸ, ಗೌರವವಿದೆ. ಅದಕ್ಕೆ ಟಾಟಾ ಸಂಸ್ಥೆಯ ಹಲವು ಗಣ್ಯರೂ ಕಾರಣರಾಗಿದ್ದಾರೆ. ಟಾಟಾ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಕೆಲಸಮಾಡಲು, ಜನರಿಗೆ ಹೆಮ್ಮೆ.

ಸರ್ ಟಾಟ ೧೯೧೮ ರಲ್ಲಿ, ತಮ್ಮ ಪ್ರೀತಿಯ ಪತ್ನಿ, ನವಾಜ್ ಬಾಯಿಯವರನ್ನು ಬಿಟ್ಟು ನಿಧನರಾದರು. ಸರ್ ರತನ್ ಟಾಟ ನಿಧನರಾದ ನಂತರ ೪೪ ವರ್ಷ ನವಾಜ್ ಬಾಯಿ ಟಾಟರವರು, 'ಸರ್ ರತನ್ ಟ್ರಸ್ಟ್' (೮.೧ ಮಿಲಿಯನ್ ರೂಪಾಯಿಗಳ) ನ ಮೇಲ್ವಿಚಾರಕರಾಗಿ ಕೆಲಸಮಾಡಿದರು.[]

ಉಲ್ಲೇಖಗಳು

ಬದಲಾಯಿಸಿ
  1. "Sir Ratan Tata Trust and Navajbai Ratan Tata Trust". Archived from the original on 2014-02-10. Retrieved 2014-05-13.
  2. Tata titans
  3. "twickenham-museum". Archived from the original on 2012-05-15. Retrieved 2014-05-13.

<References / >