ಇದು ಡಿಪ್ಟೆರೋಕಾರ್ಪೇಸಿಯ ಕುಟುಂಬದಲ್ಲಿಒಂದು ಜಾತಿಯ ಸಸ್ಯವಾಗಿದೆ. ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣ ಮರ. ಈ ಮರವು ಸುಮಾರು 30 ಮೀ ಎತ್ತರವಾಗಿದ್ದು, ತೊಗಟೆ 10-12 ಮಿ.ಮೀ.ಇರುತ್ತದೆ.ಉರುಳೆಯಾಕಾರದ ಕಾಂಡ; 6ಮೀ.ಸುತ್ತಿನ ಬೆಳವಣಿಗೆ ಕಾಣುತ್ತದೆ.ಇದು ಬೂದು ಬಣ್ಣದ ನಯವಾದ ತೊಗಟೆಯನ್ನು ಹೊಂದಿದೆ.ಸಾಮಾನ್ಯವಾಗಿ 40-60 ಮೀ.ಎತ್ತರದವರೆಗೆ ಬೆಳೆಯುತ್ತದೆ.ಬೀಜದ ಜೀವಶಕ್ತಿ ಕಡಿಮೆ, ಹೆಚ್ಚೆಂದರೆ 3 ವಾರದವರೆಗೆ ಇರುತ್ತದೆ.ಎಲೆಗಳು ಸರಳವಾಗಿದ್ದೂ ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತದೆ.ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ದಟ್ಟವಾದ ಹಳದಿ ಬಣ್ಣದಿಂದ ಕೂಡಿರುತ್ತವೆ. ಹೂಗಳು ಬಿಳಿ ಬಣ್ಣದಲ್ಲಿರುತ್ತವೆ.ಕರ್ನಾಟಕದ ಪಶ್ಚಿಮ ಘಟ್ಟದ ಅರಣ್ಯ ಭಾಗಗಳ 200-500 ಸೆಂ.ಮೀ.ಮೇಲ್ಪಟ್ಟು ಮಳೆ ಬೀಳುವ ಪ್ರದೇಶಗಳಲ್ಲಿ ಇದು ವ್ಯಾಪಿಸಿದೆ.ಜನವರಿ-ಮಾರ್ಚ್ ತಿಂಗಳುಗಳಲ್ಲಿ ಹೂವರಳಿ, ಮೇ-ಜುಲೈನಲ್ಲಿ ಕಾಯಿಗಳು ಬಲಿಯುತ್ತದೆ.ಬೀಜಗಳು ತಾಯಿಮರಗಳ ಸಮೀಪ ಆಸುಪಾಸು ಉದುರಿದ್ದು, ಬೇಗ ಮೊಳೆತು ಸಾಕಷ್ಟು ಸಸಿಗಳು ಮರದ ಸುತ್ತಮುತ್ತ ಕಂಡು ಬರುತ್ತದೆ.ದಕ್ಷಣಕನ್ನಡ ಭಾಗಗಳಲ್ಲಿ ಸಾಮಾನ್ಯವಾಗಿ ಇದನ್ನು ಸಾಲುಮರವಾಗಿ ಬೆಳೆಸುತ್ತಾರೆ.[೧][೨][೩][೪][೫]

Vateria indica leaves

ವ್ಶೆಜ್ಞಾನಿಕ ಹೆಸರು ಬದಲಾಯಿಸಿ

ವಟೇರಿಯಾಇಂಡಿಕ

ಸಾಮ್ರಾಜ್ಯ ಬದಲಾಯಿಸಿ

ಪ್ಲಾಂಟ

ಕುಟುಂಬ ಬದಲಾಯಿಸಿ

ಡಿಪ್ಟೆರೋಕಾರ್ಪೇಸ್

ಇತರ ಹೆಸರು ಬದಲಾಯಿಸಿ

ಸಾಲುಧೂಪ, ಧೂಪದ ಮರ, ಬಿಳಿ ಗುಗ್ಗುಲ, ಬಿಳಿ ಡಾಮರ್


ಉಪಯೋಗಗಳು ಬದಲಾಯಿಸಿ

  1. “ಬಿಳಿ ಡಾಮರ್” ಎಂದು ವಾಣಿಜ್ಯರಂಗದಲ್ಲಿ ಕರೆಯಲ್ಪಡುವ ಅಂಟುರಾಳವು ಈ ಮರದಿಂದ ಉತ್ಪನ್ನವಾಗುತ್ತದೆ.
  2. ಆಯುರ್ವೇದ ಔಷಧವಾಗಿ ಬಳಸಲಾಗುತ್ತದೆ.
  3. ಬೀಜದಿಂದಎಣ್ಣೆಯನ್ನುತಯಾರಿಸಲಾಗುತ್ತದೆ.
  4. ರಾಳವನ್ನು ಧೂಪದ್ರವ್ಯವಾಗಿ ಬಳಸುತ್ತಾರೆ.
  5. ಇದನ್ನು ಕೈಗಾರಿಕಾ ಕ್ಷೇತ್ರದಲ್ಲಿ , ಪದರ ಹಲಗೆ ಹಾಗೂ ಬೆಂಕಿಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಸುತ್ತಾರೆ.
  6. ಭೇದಿ ಜ್ವರ, ಕರುಳು-ಯೋನಿ ಸೋಂಕುಗಳು ಹಾಗೂ ಸಂಧಿವಾತದ ಊತದ ನಿವಾರಣೆಗೆ ಇದರ ಕಷಾಯ ಬಳಸುತ್ತಾರೆ.

ಉಲ್ಲೇಖಗಳು ಬದಲಾಯಿಸಿ

  1. ವನಸಿರಿ. ಅಜ್ಜಂಪುರ ಕೃಷ್ಣಸ್ವಾಮಿ. ಸ್ವರ್ಣಾಂಬ ಪಬ್ಲಿಕೇಶನ್
  2. https://en.wikipedia.org/wiki/Vateria_indica
  3. "ಆರ್ಕೈವ್ ನಕಲು". Archived from the original on 2018-10-22. Retrieved 2018-09-30.
  4. "ಆರ್ಕೈವ್ ನಕಲು". Archived from the original on 2020-09-23. Retrieved 2018-09-30.
  5. http://vikaspedia.in/agriculture/crop-production/package-of-practices/medicinal-and-aromatic-plants/vateria-indica
"https://kn.wikipedia.org/w/index.php?title=ಸರ್ಜು&oldid=1171333" ಇಂದ ಪಡೆಯಲ್ಪಟ್ಟಿದೆ