ಸರ್ಕಾರಿ ಇಂಜಿನಿರಿಂಗ್ ಕಾಲೇಜು, ಹಾಸನ

ಸರ್ಕಾರಿ ಇಂಜಿನಿರಿಂಗ್ ಕಾಲೇಜು, ಹಾಸನ ಇದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ. ಬೆಂಗಳೂರು ಮಂಗಳೂರು(B.M) ರಾಷ್ಟ್ರೀಯ ಹೆದ್ದಾರಿ ನಂ:೪೮ ರಲ್ಲಿ ಅತ್ಯಂತ ವಿಶಾಲವಾದ ಕಟ್ಟಡ ಮತ್ತು ಪೂರ್ವಯೋಜಿತ ಉಪಯುಕ್ತತೆಗಳು ೪೦ ಎಕರೆಯ ವಿಶಾಲ ಭೂಪ್ರದೇಶದಲ್ಲಿ ಹರಡಿಕೊಂಡಿವೆ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪ್ರಮಾಣಿತಗೊಂಡಿದೆ ಮತ್ತು ಎ.ಐ.ಸಿ.ಟಿ.ಇ, ನವದೆಹಲಿಯಿಂದ ಅನುಮೋದಿತಗೊಂಡಿದೆ. ೨೦೦೭-೨೦೦೮ರಲ್ಲಿ ಕರ್ನಾಟಕ ಸರ್ಕಾರವು ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿ ೧೦ ತಾಂತ್ರಿಕ ಮಹಾವಿದ್ಯಾಲಯಗಳನ್ನು ಸ್ಥಾಪಿಸಿತು.

ಸರ್ಕಾರಿ ಇಂಜಿನಿರಿಂಗ್ ಕಾಲೇಜು, ಹಾಸನ
ಧ್ಯೇಯ"ಅಸಾಧ್ಯವಾದುದನ್ನು ಸಾಧಿಸಬೇಕು"
ಸ್ಥಾಪನೆ೨೦೦೭
ಪ್ರಕಾರಸರ್ಕಾರಿ ಇಂಜಿನಿರಿಂಗ್ ಕಾಲೇಜು
ಸ್ಥಳಹಾಸನ, ಕರ್ನಾಟಕ, ಭಾರತ
13°1′22.26″N 76°6′12.55″E / 13.0228500°N 76.1034861°E / 13.0228500; 76.1034861
ಆವರಣನಗರ
ಅಂತರಜಾಲ ತಾಣhttp://gechassan.ac.in

ಕಾಲೇಜು ಒಟ್ಟು ೪ ವಿಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ತ್ರಾನಿಕ್ಸ್ ಎಂಡ್ ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್.

ವಿದ್ಯಾರ್ಥಿಗಳು ಕಡಿಮೆ ಬೋಧನಾ ಶುಲ್ಕದೊಂದಿಗೆ ಕೇವಲ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ) ಮುಖೇನ ಪ್ರವೇಶ ಪಡೆಯಬಹುದಾಗಿದೆ.ಇಲ್ಲಿ ವ್ಯಾಸಂಗ ಮಾಡುತ್ತಿರುವ ಬಹಳಷ್ಟು ವಿಧ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಬೋಧನಾ ಶುಲ್ಕವನ್ನು ಹಿಂದಿರುಗಿಸುತ್ತದೆ ಹಾಗು ವಿವಿಧ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಸ್ಥೆಗಳು ವಿದ್ಯಾರ್ಥಿವೇತನವನ್ನು ಒದಗಿಸುತ್ತಿವೆ.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜು,ಹಾಸನವು ಈ ಕೆಳಕಂಡ ಶೈಕ್ಷಣಿಕ ಧ್ಯೇಯಗಳನ್ನು ಹೊಂದಿದೆ,

♦ ವಿದ್ಯಾರ್ಥಿಗಳಿಗೆ ಉತ್ತಮವಾದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು. ♦ ವಿದ್ಯಾರ್ಥಿಗಳ ಉದ್ಯೋಗಶೀಲತೆಯನ್ನು ವೃದ್ಧಿಸುವ ಸಲುವಾಗಿ ಸೂಕ್ತವಾದ ತರಭೇತಿ ನೀಡುವುದು. ♦ ತರಭೇತಿ,ಸಂಶೋಧನೆ ಹಾಗು ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಒಂದು ಉತ್ತಮವಾದ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸಿಕೊಡುವುದು. ♦ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸಲು ತಾಂತ್ರಿಕ ಕಾರ್ಯಾಗಾರ ಹಾಗು ವಿಚಾರಗೋಷ್ಠಿಗಳನ್ನು ಏರ್ಪಡಿಸುವುದು.