ಶತಶತಮಾನಗಳಿಂದಲೂ ಕತ್ತಲೆಯ ಬದುಕಿನಲ್ಲೇ ಕಳೆದ ಮಹಿಳೆಯರ ಶೋಷಣೆ, ಏಳುಬೀಳು, ಸೋಲು ಗೆಲವುಗಳಿಂದ ಸ್ಫೂರ್ತಿ ಪಡೆದು, ಸಮಾಜ ಸೇವೆ-ಶಿಕ್ಷಣ-ಮಹಿಳೆಯರ ಜಾಗೃತಿಗಾಗಿ ಜೀವನದುದ್ದಕ್ಕೂ ದುಡಿಯುತ್ತಾ ಬಂದಿರುವ ಸರೋಜಿನಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಕ ತಾಲ್ಲೂಕಿನ ಮಿಶ್ರಿ ಕೋಟಿ ಎಂಬಲ್ಲಿ. ತಂದೆ ಬಸಪ್ಪ ಶಿಂತ್ರಿಯವರು ಶಿಕ್ಷಕರಾಗಿ, ವಿದ್ಯಾಧಿಕಾರಿಗಳಾಗಿ ಸಮಯಪಾಲನೆ, ಅಧ್ಯಯನ ಶೀಲತೆ, ತತ್ತ್ವಾದರ್ಶಗಳಿಗೆ ಹೆಸರಾಗಿದ್ದು ‘ಶಿಂತ್ರಿ ಮಾಸ್ತರ’ ಎಂದೇ ಪ್ರಸಿದ್ಧರಾಗಿದ್ದವರು. ತಾಯಿ ಗಂಗಮ್ಮ.

ಶಾಲೆಗಳು ವಿರಳವಾಗಿದ್ದ ಕಾಲದಲ್ಲಿ, ಸ್ತ್ರೀಯರಿಗೆ ಶಿಕ್ಷಣ ಅನಗತ್ಯವೆನ್ನುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾಗಿದ್ದ ಬಸಪ್ಪನವರು ಹೆಣ್ಣು ಮಕ್ಕಳೆಂದು ಅನಾದರ ಮಾಡದೆ ವಿದ್ಯೆ ಕಲಿಯಲು ಉತ್ತೇಜನ ನೀಡಿದರು.

ಪ್ರಾರಂಭಿಕ ಶಿಕ್ಷಣ ಬಿಜಾಪುರದ ಮುನಿಸಿಪಾಲಿಟಿ ಕನ್ನಡ ಶಾಲೆಯಲ್ಲಿ. ಧಾರವಾಡದ ಎ.ಕೆ.ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಾಲೆ, ಕರ್ನಾಟಕ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಾಕೆ. ೧೯೪೯ರಲ್ಲಿ ಬಿ.ಎ. ಪದವಿ (ಇಂಗ್ಲಿಷ್) ಹಾಗೂ ೧೯೫೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ.

ಮನೆತನಕ್ಕೆ ಬಂದ ಬಳುವಳಿಯಂತೆ ಶಿಕ್ಣಣ ಕ್ಷೇತ್ರವನ್ನೇ ಆಯ್ಕೆಮಾಡಿಕೊಂಡು ಓದಿದ ಕರ್ನಾಟಕ ಕಾಲೇಜಿನಲ್ಲಿಯೇ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಸೇರಿದರು. ಪ್ರೊ. ಆರ್ಮೆಂಡೋ ಮೆನಜಿಸ್ ಹಾಗೂ ವಿ.ಕೃ. ಗೋಕಾಕರ ಮೆಚ್ಚಿನ ಶಿಷ್ಯೆ. ಮೆನೆಜಿಸ್‌ರವರ ಮಾರ್ಗದರ್ಶನದಲ್ಲಿ ‘ವುಮೆನ್ ಕ್ಯಾರಕ್ಟರ್ಸ್‌ ಇನ್ ಶೇಕ್ಸಪಿಯರ್’ ಎಂಬ ವಿಷಯದಲ್ಲಿ ಅಧ್ಯಯನ ಕೈಗೊಂಡು ಪಡೆದ ಡಾಕ್ಟರೇಟ್ ಪದವಿ. ಸೇವಾವಧಿಯಲ್ಲಿ ಹಲವಾರು ಉನ್ನತ ಹುದ್ಧೆಗಳನ್ನು ಅಲಂಕರಿಸಿದ್ದು ೧೯೬೯ರಲ್ಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆಯಾಗಿ, ಕಲಾ ವಿಭಾಗದ ಡೀನ್ ಆಗಿ, ನಾಲ್ಕು ದಶಕಗಳ ಕಾಲದ ಸೇವೆಯ ನಂತರ ೧೯೯೧ರಲ್ಲಿ ನಿವೃತ್ತಿ.

ಸಾಹಿತ್ಯ

ಬದಲಾಯಿಸಿ

ಲಲಿತ ಪ್ರಬಂಧ

ಬದಲಾಯಿಸಿ
  • ಸ್ತ್ರೀ ದೃಷ್ಟಿ
  • ತುಂತುರ
  • ಅರಮನೆ
  • ಸೋಮಗಿರಿಯ ಸಾವಿತ್ರಿ
  • ಪರಿವರ್ತನೆ

ಜೀವನ ಚರಿತ್ರೆ

ಬದಲಾಯಿಸಿ
  • ನಾನೊಂದ ಕನಸ ಕಂಡೆ
  • ಕಮಲಾದೇವಿ ಚಟ್ಟೋಪಾಧ್ಯಾಯ
  • ಭಾಗಿರಥಿದೇವಿ ಪುರಾಣಿಕ

ಸಂಪಾದನೆ

ಬದಲಾಯಿಸಿ
  • ಮಹಿಳೆ: ಸಮಸ್ಯೆಗಳು ಸಾಧನೆಗಳು
  • ಮಹಿಳೆ ನಡೆದು ಬಂದ ದಾರಿ
  • ಅರಳುವ ಮೊಗ್ಗು
  • ಪ್ರಗತಿಪಥದಲ್ಲಿ ಮಹಿಳೆ
  • ಪ್ರಗತಿ ಪಥದಲ್ಲಿ ಮಹಿಳೆ
  • ಸ್ತ್ರೀ ದೃಷ್ಟಿ -ಸೃಷ್ಟಿ
  • ಷೇಕ್ಸ್ ಪಿಯರ್ ನ ದೃಷ್ಟಿಯಲ್ಲಿ ಮಹಿಳೆ

ಪುರಸ್ಕಾರ

ಬದಲಾಯಿಸಿ
  • ರಾಜ್ಯೋತ್ಸವ ಪ್ರಶಸ್ತಿ