ಸರಸ್ವತಿಬಾಯಿ ರಾಜವಾಡೆ
ಸರಸ್ವತಿಬಾಯಿ ರಾಜವಾಡೆ (ಜನನ:೩-೧೦-೧೯೧೩- ಮರಣ ೨೩-೦೪-೧೯೯೪) ಇವರು ದಕ್ಷಿಣ ಕನ್ನಡದ ಮೊದಲ ತಲೆಮಾರಿನ ಕತೆಗಾರ್ತಿ.[೧] ಗಿರಿಬಾಲೆ ಎನ್ನುವ ಕಾವ್ಯನಾಮದಲ್ಲಿ ಕತೆ, ಕಾದಂಬರಿ, ನಾಟಕ ಪ್ರಕಾರಗಳಲ್ಲಿ ಕೃತಿರಚನೆ ಮಾಡಿದ್ದಾರೆ.
ಸರಸ್ವತಿಬಾಯಿ ರಾಜವಾಡೆ | |
---|---|
ಜನನ | ೩-೧೦-೧೯೧೩ ಉಡುಪಿಯ ಬಳಿಯ ಒಳಂಜಾಲ |
ಮರಣ | ೨೩-೦೪-೧೯೯೪ |
ಕಾವ್ಯನಾಮ | ಗಿರಿಬಾಲೆ |
ವೃತ್ತಿ | ಲೇಖಕಿ, ನಟಿ, ಗಾಯಕಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಥೆ, ಕಾದಂಬರಿ, ನಾಟಕ |
ಜೀವನ
ಬದಲಾಯಿಸಿಸರಸ್ವತಿಬಾಯಿ ರಾಜವಾಡೆ ಉಡುಪಿಯ ಬಳಿಯ ಒಳಂಜಾಲ ಎಂಬಲ್ಲಿ ೧೯೧೩ ರ ಅಕ್ಟೋಬರ್ ೩ ರಂದು ಮಹಾರಾಷ್ಟ್ರ ಮೂಲದ ತಂದೆ ನಾರಾಯಣ ರಾವ್, ತಾಯಿ ಕಮಲಾಬಾಯಿಯವರಿಗೆ ಜನಿಸಿದರು.[೧]
ವೃತ್ತಿ ಜೀವನ
ಬದಲಾಯಿಸಿಆದರೆ ಪತ್ರಿಕೆಗಳಿಗೆ ಬರೆಯುವಾಗ ಅವರು ‘ಗಿರಿಬಾಲೆ’, ‘ವೀಣಾಪಾಣಿ’, ‘ಯು.ಸರಸ್ವತಿ’, ‘ವಿಶಾಖಾ’ ಮುಂತಾದ ಹೆಸರುಗಳಿಂದ ಬರೆಯುತ್ತಿದ್ದು ಅವುಗಳ ಪೈಕಿ ಗಿರಿಬಾಲೆ ಎನ್ನುವ ಹೆಸರು ಗಟ್ಟಿಯಾಗಿ ಅವರಿಗೆ ಅಂಟಿಕೊಂಡಿತು.[೨]
ಪತ್ರಿಕೋದ್ಯಮ
ಬದಲಾಯಿಸಿಮಹಿಳಾ ನಿಯತಕಾಲಿಕ ಸುಪ್ರಭಾತವನ್ನು ಸ್ಥಾಪಿಸಿ ಸಂಪಾದಿಸಿದ್ದರು.
ಸಮಾಜಸೇವೆ
ಬದಲಾಯಿಸಿಮಹಿಳಾ ಸಾಹಿತ್ಯ ಪರಂಪರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಕಲಾಸೇವೆ
ಬದಲಾಯಿಸಿದಕ್ಷಿಣ ಭಾರತದಲ್ಲಿ ಹರಿಕಥೆ ಹೇಳುತ್ತಿದ್ದರು. ಮಹಿಳಾ ಭಾಗವತರಾಗಿದ್ದರು.
ಕೃತಿಗಳು
ಬದಲಾಯಿಸಿಕೃತಿಗಳು: 1929 ರಿಂದ ಬರಹ ಆರಂಭಿಸಿದರು. ಮೊದಲ ಕಥಾ ಸಂಕಲನ ‘ಆಹುತಿ’. 1938ರಲ್ಲಿ ‘ದಿ ಹಿಂದೂ’ ಪತ್ರಿಕೆಯಲ್ಲಿ ವಿಮರ್ಶಕರೊಬ್ಬರು ‘ದಿ ಅನ್‌ಕ್ರೌನ್ಡ್ ಕ್ವೀನ್ ಆಫ್ ಶಾರ್ಟ್ ಸ್ಟೋರೀಸ್’ ಎಂದು ಪ್ರಶಂಸಿದ್ದರು. ಇದರಿಂದ ಬರಹಕ್ಕೆ ಮತ್ತಷ್ಟು ಪ್ರೇರಣೆ ದೊರೆಯಿತು. ಇವರ ಮತ್ತೆರಡು ಕಥಾ ಸಂಕಲನಗಳೆಂದರೆ ‘ಕದಂಬ’ ಹಾಗೂ ‘ಪ್ರೇಮ ವಿವಾಹ’. ಇವರು ಬರೆದ ಕಾದಂಬರಿ ‘ವಿಮಲೆ’. 1946ರಲ್ಲಿ ‘ಕಥಾವಳಿ’ ಎಂಬ ಪತ್ರಿಕೆಯ ವನಿತಾ ವಿಭಾಗದ ಸಂಪಾದಕರಾಗಿದ್ದರು ‘ಅಕ್ಕನ ಓಲೆ’ ಎಂಬ ಅಂಕಣವನ್ನು ಬರೆದರು. ‘ಚಾರು ಚಯನ’ ಎಂಬ ಅಂಕಣದಲ್ಲಿ ಉದಯೋನ್ಮುಖ ಲೇಖಕಿಯರ ಕತೆ, ಕವನಗಳನ್ನು ಪ್ರಕಟಿಸಿ ಉತ್ತೇಜನ ನೀಡಿದರು. 1951ರಲ್ಲಿ ‘ನಿಸರ್ಗ’ ಎಂಬ ಮತ್ತೊಂದು ಪತ್ರಿಕೆಯಲ್ಲಿ ಆರೋಗ್ಯ ಕುರಿತು ಲೇಖನಗಳನ್ನು ಬರೆದರು. ಗಿರಿಬಾಲೆ, ವೀಣಾಪಾಣಿ. ವಿಶಾಖಾ ಹೀಗೆ ಕಾವ್ಯನಾಮಗಳಿಂದ ಬರೆದರು. ‘ಪರಿಣಯ’ ಎಂಬ ಮರಾಠಿ ಪ್ರಹಸನವನ್ನು 1949 ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಲ್ಲದೆ, 1952 ರಲ್ಲಿ ಸ್ವತಂತ್ರ ನಾಟಕ ‘ಸಾರ್ಥಕ ಜೀವನ’ ರಚಿಸಿದರು. ಈ ನಾಟಕದ 3 ನೆಯ ಅಂಕದ ಏಳು ಮತ್ತು ಎಂಟನೆಯ ದೃಶ್ಯಗಳು ‘ಮಂಥರೆ ಕಂಡ ಅಂತರಂಗ’ ಎಂಬ ಹೆಸರಿನಲ್ಲಿ 1961 ರಲ್ಲಿ ಪ್ರಕಟವಾಯಿತು. ಮರಾಠಿಯಿಂದ ಅನುವಾದಿಸಿದ ನಾಟಕವೆಂದರೆ ‘ಬಿರುಗಾಳಿ’ (1957), ಹಿಂದಿ ಅನುವಾದಿತ ನಾಟಕ ‘ಪ್ರಕಾಶ’. 1961ರಲ್ಲಿ ರಚಿಸಿದ ನಾಟಕ ‘ಸಹೋದರ’. ಇವಲ್ಲದೆ, ಸಂತ ಮೀರ, ಸಂಸಾರ, ಡೆಪ್ಟಿ ಕಲೆಕ್ಟರ್ ಮುಂತಾದ ನಾಟಕಗಳನ್ನು ರಚಿಸಿದ್ದು, ಪಾತ್ರಧಾರಿಯಾಗಿಯೂ ಗಮನ ಸೆಳೆದಿದ್ದರು.
1952ರಲ್ಲಿ ಮಹಿಳಾ ಬರಹಗಾರರಿಗೆ ಆದ್ಯತೆ ನೀಡಲು ಸುಪ್ರಭಾತ’ ಪತ್ರಿಕೆ ಆರಂಭಿಸಿದರು. ವೈವಿಧ್ಯಮಯವಾದ 50 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದರು. ಉಡುಪಿಯ ಸರಕಾರಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಹಣ ಸಹಾಯ ಮಾಡಿದರು. ಕಡೆಗೆ ಅಧ್ಯಾತ್ಮಿಕದತ್ತ ವಾಲಿದ ಸರಸ್ವತಿಬಾಯಿ, ಕೃಪಾಂತರಂಗ ಭಾಗ 1 ಮತ್ತು 2; ಸ್ತವನಾಂಜಲಿ, ಶ್ರೀಶಾರದಾಂಬ ಸ್ತುತಿಗೀತೆಗಳು, ಶ್ರೀಶಾರದಾದೇವಿ ಭಕ್ತರಿಗೆ ಪ್ರಕಟಿಸಿದ ಮಹಿಮೆಗಳು ಮುಂತಾದ ಕೃತಿಗಳನ್ನು ರಚಿಸಿದರು. 1976ರಲ್ಲಿ ಉಡುಪಿಯ ಚಿಟ್ಟಾಡಿಯಲ್ಲಿ ಶಾರದಾಂಬ ದೇಗುಲವನ್ನು ಜೀರ್ಣೋದ್ಧಾರ ಮಾಡಿಸಿದರು.
ನಾಟಕಗಳು
ಬದಲಾಯಿಸಿಅನುವಾದ ಕೃತಿಗಳು
ಬದಲಾಯಿಸಿಕಥಾ ಸಂಕಲನಗಳು
ಬದಲಾಯಿಸಿ- ಆಹುತಿ ಇತ್ಯಾದಿ ಕತೆಗಳು (೧೯೩೮)
- ಕದಂಬ (೧೯೪೭)
ಪ್ರಶಸ್ತಿಗಳು
ಬದಲಾಯಿಸಿ- ೧೯೯೪ರಲ್ಲಿ ಅನುಪಮಾ ಪ್ರಶಸ್ತಿ. [೧]
ಸರಸ್ವತಿಬಾಯಿ ರಾಜವಾಡೆಯವರ ಬಗ್ಗೆ ಇತರರು ಬರೆದ ಪುಸ್ತಕಗಳು ಮತ್ತು ಲೇಖನಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ ಸರಸ್ವತಿಬಾಯಿ ರಾಜವಾಡೆ (ಗಿರಿಬಾಲೆ) Archived 2014-04-03 ವೇಬ್ಯಾಕ್ ಮೆಷಿನ್ ನಲ್ಲಿ., ಕಣಜ
- ↑ ೨.೦ ೨.೧ ೨.೨ ‘ಗಿರಿಬಾಲೆ’ ನೂರರ ಸ್ಮರಣೆ, ಪ್ರಜಾವಾಣಿ, ಭಾನುವಾರ, ೧೩, ಅಕ್ಟೋಬರ್ ೨೦೧೩.
ಬಾಹ್ಯಕೊಂಡಿಗಳು
ಬದಲಾಯಿಸಿ- No event in Udupi to mark woman writer’s centenary ಹಿಂದು, ಅಕ್ಟೋಬರ್ ೩, ೨೦೧೩
- Rags to riches to the right word, ಅಕ್ಟೋಬರ್ ೨, ೨೦೧೩
- ಪುಸ್ತಕ Women Writing in India : Volume - 1, 600 B.C. to The Present
- Women Writing in India : Volume - 1, 600 B.C. to The Present, Google Books
- ರಾಜವಾಡೆ ಬದುಕು, ಬರಹ: ತಳಮಳಗೊಳಿಸುವ ಪುಟಗಳು[ಶಾಶ್ವತವಾಗಿ ಮಡಿದ ಕೊಂಡಿ],ದೀಪಾ ಗಣೇಶ್, ಕೆಂಡಸಂಪಿಗೆ ,ಗುರುವಾರ, 30 ಅಕ್ಟೋಬರ್ 2008 (05:16 IST)
- ವೈದೇಹಿ ಬರೆದ ಕಳೆದುಹೋದ ಗಿರಿಬಾಲೆಯ ಚರಿತ್ರೆ Archived 2010-01-05 ವೇಬ್ಯಾಕ್ ಮೆಷಿನ್ ನಲ್ಲಿ.,ವೈದೇಹಿ, ಕೆಂಡಸಂಪಿಗೆ, ಭಾನುವಾರ, 1 ಸೆಪ್ಟೆಂಬರ್ 2013 (10:52 IST)
- ಹೊಸ ಸದಾರಮೆ - ಸರಸ್ವತಿಬಾಯಿ ರಾಜವಾಡೆ[ಶಾಶ್ವತವಾಗಿ ಮಡಿದ ಕೊಂಡಿ] ಕೆ.ವಿ. ಸುಬ್ಬಣ್ಣ, ಕನ್ನಡಪ್ರಭ, ಡಿಸೆಂಬರ್ ೭,೨೦೦೮