ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್,ಬೆಳುವಾಯಿ

ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್ ನ್ನು ೨೦೧೧ರಲ್ಲಿ ಸಮ್ಮಿಲನ ಶೆಟ್ಟಿಯವರು, ಚಿಟ್ಟೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಥಾಪಿಸಿದರು.ಇದೊಂದು ಖಾಸಗಿ ಪಾರ್ಕ್ ಆಗಿದ್ದು, ಕೇವಲ ಚಿಟ್ಟೆಗಳನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತದೆ. ಈ ಪಾರ್ಕ್ ೭.೩೫ ಎಕರೆ ಅಭಯಾರಣ್ಯದಲ್ಲಿ ಸ್ಥಾಪಿತವಾಗಿದೆ.[]. ಈ ಪಾರ್ಕ್ ಮಂಗಳೂರಿನ ಬೆಳುವಾಯಿಯಲ್ಲಿ ಸ್ಥಾಪಿತವಾಗಿದ್ದು. ಬೆಳುವಾಯಿಯು ಕಾರ್ಕಳ ಮತ್ತು ಮೂಡುಬಿದಿರೆ ಮಾರ್ಗದಲ್ಲಿ ಇದೆ. ಈ ಪಾರ್ಕ್ ಅಧಿಕೃತವಾಗಿ ೨೦೧೩ರ ಆಗಸ್ಟ್ ನಲ್ಲಿ ಉದ್ಘಾಟನೆಯಾಯಿತು. ಮಂಗಳೂರಿನಿಂದ ೪೨ ಕಿಲೊ ಮೀಟರ್ ದೂರದಲ್ಲಿರುವ ಈ ಪಾರ್ಕ್ ಪಶ್ಚಿಮ ಘಟ್ಟ ಸಾಲುಗಳ ತಪ್ಪಲಿನಲ್ಲಿದೆ.ಇಲ್ಲಿ 118 ಪ್ರಬೇಧಗಳ ಚಿಟ್ಟೆಗಳು ದಾಖಲಾಗಿದೆ.[] ಇವುಗಳಲ್ಲಿ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ ಮಲಬಾರ್ ಬ್ಯಾಂಡೆಡ್ ಪೀಕಾಕ್(Malabar Banded Peacock) ಮಲಬಾರ್ ರೊಸ್ (Malabar rose) ಮುಂತಾದವು ಸೇರಿವೆ.[]

ಚಿಟ್ಟೆ ಪಾರ್ಕ, ಲಾಂಛನವಾಗಿ ಸ್ಥಳೀಯ ಮತ್ತು ಪಶ್ಚಿಮ ಘಟ್ಟಗಳ ಬೆರಗುಗೊಳಿಸುವ 'ಮಲಬಾರ್ ಬ್ಯಾಂಡೆಡ್ ಪೀಕಾಕ್' ಚಿಟ್ಟೆಯನ್ನು ಹೊಂದಿದೆ.

ಪಾರ್ಕ್ ನಲ್ಲಿ ಕಂಡುಬರುವ ಕೆಲವು ಪ್ರಬೇಧಗಳ ಚಿಟ್ಟೆಗಳ ಪಟ್ಟಿ

ಬದಲಾಯಿಸಿ
  1. ಇಂಡಿಯನ್ ಸ್ಕಿಪ್ಪರ್ (Indian Skipper)
  2. ಸ್ಮಾಲ್ ಪ್ಲಾಟ್(Small Flat)
  3. ಪೈಡ್ ಪ್ಲಾಟ್(Pied Flat)
  4. ರೆಡ್ ಹೆಲೆನ್(Red Helen)
  5. ಪ್ಯಾರಿಸ್ ಪಿಕಾಕ್(Paris Peacock)
  6. ಮಲಬಾರ್ ರೊಸ್(Malabar Rose)
  7. ಮಲಬಾರ್ ಬ್ಯಾಂಡೆಡ್ ಪೀಕಾಕ್ (Malabar Banded Peacock)
  8. ಯಾಮ್ ಪ್ಲೈ (Yamfly)
  9. ಇಂಡಿಯನ್ ಸನ್ ಬೀಮ್ (India Sunbeam)
  10. ಕಾಮನ್ ನವಾಬ್ (Common Nawab)
  11. ನೀಲಿ ನವಾಬ್ (Blue Nawab)
  12. ಕ್ಲಿಪ್ಪರ್ (Clipper)
  13. ಕಾಮನ್ ಬ್ಯಾರನ್ (Common Baron)

ಸಂದರ್ಶನ ಸಮಯ ಮತ್ತು ದಿವಸಗಳು

ಬದಲಾಯಿಸಿ

ಪ್ರತಿ ಭಾನುವಾರ ೦೮.೩೦ ರಿಂದ ೧೨.೩೦

ಭೇಟಿಗೆ ಸೂಕ್ತ ತಿಂಗಳು: ಜೂನ್ ನಿಂದ ಡಿಸೆಂಬರ್.

ಪಾರ್ಕ್ ನ ಮುಖ್ಯ ಉದ್ದೇಶ

ಬದಲಾಯಿಸಿ
  • ಚಿಟ್ಟೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂದರ್ಶಕರಿಗೆ, ವಿಶೇಷವಾಗಿ ಮಕ್ಕಳಿಗೆ ಚಿಟ್ಟೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಪ್ರಕೃತಿಯಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಸುವ ಸಲುವಾಗಿ.
  • ಪಶ್ಚಿಮ ಘಟ್ಟದ ​​ಜೀವಗೋಳದ ಚಿಟ್ಟೆಗಳಿಗೆ ಸಂರಕ್ಷಿತ ವಾಸಸ್ಥಾನವನ್ನು ಒದಗಿಸಲು.
  • ಚಿಟ್ಟೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು.
  • ಚಿಟ್ಟೆಗಳ ಸೌಂದರ್ಯವನ್ನು ನೋಡುವ ಮತ್ತು ಆನಂದಿಸುವ ಮೂಲಕ ಜನರಿಗೆ ಉನ್ನತಿಗೇರಿಸುವ ಅನುಭವವನ್ನು ಒದಗಿಸುವ ಸಲುವಾಗಿ.

ಗ್ಯಾಲರಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


ಬಾಹ್ಯ ಕೊಂಡಿ

ಬದಲಾಯಿಸಿ
  1. ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್
  2. ಚಿಟ್ಟೆಗಳ ಪಟ್ಟಿ