ಮಾನವರ ಸಂಶೋಧನೆಯಲ್ಲಿ, ಸಮೀಕ್ಷೆಯು ಜನರ ನಿರ್ದಿಷ್ಟ ಗುಂಪಿನಿಂದ ನಿರ್ದಿಷ್ಟ ಮಾಹಿತಿಯನ್ನು ಪಡೆಯುವ ಗುರಿಹೊಂದಿರುವ ಪ್ರಶ್ನೆಗಳ ಪಟ್ಟಿಯಾಗಿರುತ್ತದೆ. ಸಮೀಕ್ಷೆಗಳನ್ನು ದೂರವಾಣಿ, ಅಂಚೆ, ಅಂತರಜಾಲದ ಮೂಲಕ, ಮತ್ತು ಕೆಲವೊಮ್ಮೆ ಬಿಡುವಿಲ್ಲದ ರಸ್ತೆ ಮೂಲೆಗಳು ಅಥವಾ ಮಾಲ್‍ಗಳಲ್ಲಿ ಮುಖಾಮುಖಿಯಾಗಿ ನಡೆಸಬಹುದು. ಸಾಮಾಜಿಕ ಸಂಶೋಧನೆ ಹಾಗೂ ಜನಸಂಖ್ಯಾ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಮೀಕ್ಷೆಗಳನ್ನು ಬಳಸಲಾಗುತ್ತದೆ.

ವಿಚಾರಗಳು, ಅಭಿಪ್ರಾಯಗಳು ಮತ್ತು ಅನಿಸಿಕೆಗಳ ಮೌಲ್ಯಮಾಪನ ಮಾಡಲು ಸಮೀಕ್ಷಾ ಸಂಶೋಧನೆಯನ್ನು ಹಲವುವೇಳೆ ಬಳಸಲಾಗುತ್ತದೆ.[] ಸಮೀಕ್ಷೆಗಳು ನಿರ್ದಿಷ್ಟ ಹಾಗೂ ಸೀಮಿತವಾಗಿರಬಹುದು, ಅಥವಾ ಅವು ಹೆಚ್ಚು ಜಾಗತಿಕ, ವ್ಯಾಪಕ ಗುರಿಗಳನ್ನು ಹೊಂದಿರಬಹುದು. ಮನಃಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರು ವರ್ತನೆಯನ್ನು ವಿಶ್ಲೇಷಿಸಲು ಹಲವುವೇಳೆ ಸಮೀಕ್ಷೆಗಳನ್ನು ಬಳಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. Shaughnessy, J.; Zechmeister, E.; Jeanne, Z. (2011). Research methods in psychology (9th ed.). New York, NY: McGraw Hill. pp. 161–175.
"https://kn.wikipedia.org/w/index.php?title=ಸಮೀಕ್ಷೆ&oldid=967621" ಇಂದ ಪಡೆಯಲ್ಪಟ್ಟಿದೆ