ಸಬಿಹಾ ಭೂಮಿಗೌಡ ಅವರು ಕನ್ನಡದಲ್ಲಿ ಅನೇಕ ಕವನ ಹಾಗೂ ಸಣ್ಣ ಕತೆಗಳನ್ನು ಬರೆದಿದ್ದಾರೆ. ತಮ್ಮ ಕಥೆ, ಪ್ರಬಂಧ, ಸಂಶೋಧನೆಗಳಿಂದ ಓದುಗರಿಗೆ ಪರಿಚಯವಾಗಿರುವ ಸಬಿಹಾ ೨೫ ವರ್ಷಗಳ ಬೋಧನಾನುಭವ, ೧೦ ವರ್ಷಗಳ ಸಂಶೋಧನಾನುಭವವನ್ನು ಹೊಂದಿರುವವರು. "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣಕಥೆಗಳ ಹುಟ್ಟು ಮತ್ತು ಬೆಳವಣಿಗೆ(೧೯೪೩-೪೭)" ಎಂಬ ವಿಷಯ ಕುರಿತು ೧೯೯೨ರಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯ ವಿಮರ್ಶೆ, ಹೊಸಗನ್ನಡ ಸಾಹಿತ್ಯ ಮಹಿಳಾ ಅಧ್ಯಯನಗಳು ಇವರ ಕ್ಷೇತ್ರಗಳಾಗಿವೆ. ಇವರು ಮಂಗಳೂರು ವಿಶ್ವವಿದ್ಯಾಲಯಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕಿ[] ಹಾಗೂ ಶಿವರಾಮ ಕಾರಂತ ಪೀಠದ ನಿರ್ದೇಶಕಿಯಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕೊಡಗಿನ ಚಿಕ್ಕ ಆಳುವಾರ ಸ್ನಾತಕೋತ್ತರ ಕೇಂದ್ರದ ಪ್ರಭಾರ ಮುಖ್ಯಸ್ಥರಾಗಿಯೂ, ಕರ್ನಾಟಕದ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಹುಟ್ಟು

ಬದಲಾಯಿಸಿ

ಮೈಸೂರುನಲ್ಲಿ ಜನಿಸಿದ ಸಬಿಹಾರವರು,

ವಿದ್ಯಾಭ್ಯಾಸ

ಬದಲಾಯಿಸಿ

ಮಂಗಳೂರುವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪೋರೈಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಕತೆಗಳ ಹುಟ್ಟು ಬೆಳವಣಿಗೆ ನ್ನುವ ಇವರ ಮಹಾಪ್ರಬಂಧಕ್ಕೆ ಪಿ.ಎಚ್.ಡಿ.ಯನ್ನು ಪಡೆದರು.

ಮಹತ್ವದ ಸಂಶೊಧನಾ ಯೋಜನೆಗಳು

ಬದಲಾಯಿಸಿ
  • ೧] ಕನ್ನಡ ವಿಶ್ವವಿದ್ಯಾಲಯ, ಹಂಪಿ - ಇವರ ಮಹಿಳಾ ಸಾಹಿತ್ಯ ಚರಿತ್ರೆಯ ಯೋಜನೆ.
  • ೨] ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕ್ರೇಂದ್ರದ 'ದಕ್ಷಿಣ ಕನ್ನಡ ಜಿಲ್ಲೆಯ ಅವಿವಾಹಿತ ಮಹಿಳೆ- ಸಮಾಜೋ ಸಾಂಸ್ಕೃತಿಕ ಅಧ್ಯಯನ'.
  • ೩] ಯೂ.ಜಿ.ಸಿ.ಯ ಪ್ರಧಾನ ಸಂಶೋಧನಾ ಯೋಜನೆ - ಅಭಿವೃದ್ಧಿ ಶೀಲರಾಷ್ಟ್ರಗಳ ಸ್ತ್ರೀವಾದಿ ಚಿಂತನೆಗಳು.
  • ಕನ್ನಡ ಭಾಷಾಭಿವೃದ್ಧಿ ಯೋಜನೆಯಲ್ಲಿ ದಕ್ಷಿಣ ಕನ್ನಡ,ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಚಳುವಳಿಗಳು ಮತ್ತು ಹೋರಾಟಗಳು ಎಂಬ ಸಂಶೋಧನಾ ಅಧ್ಯಯನವನ್ನು ಕೈಗೊಂಡಿದ್ದಾರೆ. ಸರಸ್ವತಿ ಬಾಯಿ ರಾಜವಾಡೆ ಅವರ ಆಯ್ದ ಕಥೆಗಳು (೧೯೯೪) ಎಂಬ ಸಂಪಾದನ ಗ್ರಂಥವನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆಯಿರಿಸಿದರು.

ನಿರ್ವಹಿಸಿದ ಜವಬ್ದಾರಿಗಳು

ಬದಲಾಯಿಸಿ

ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳು[]

ಸ್ನಾತಕೋತ್ತರ ಕೇಂದ್ರದ ಪ್ರಭಾರ ಮುಖ್ಯಸ್ಥರು

ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯನಿರ್ವಹಣೆ

ಇವರ ಕೃತಿಗಳು

ಬದಲಾಯಿಸಿ

ಕವನ ಸಂಕಲನ

ಬದಲಾಯಿಸಿ
  • ಚಿತ್ತಾರ

ಕಥಾ ಸಂಕಲನ

ಬದಲಾಯಿಸಿ
  • ಕರಾವಳಿಯ ಕಥೆಗಳು
  • ಕಡಲತಡಿಯ ಮನೆಗಳು

ವಿಮರ್ಶೆ

ಬದಲಾಯಿಸಿ
  • ಬಗೆ
  • ನುಡಿಗವಳ
  • ನಿಲುಮೆ

ಸಂಪಾದನೆ

ಬದಲಾಯಿಸಿ
  • ಸರಸ್ವತಿಬಾಯಿ ರಾಜವಾಡೆ ಅವರ ಆಯ್ದ ಕೃತಿಗಳು
  • ನಾವು ಮತ್ತು ನಮ್ಮ ಪರಿಸರ
  • ಮಕ್ಕಳ ಸಾಹಿತ್ಯ

ಸಂಪಾದನ ಗ್ರಂಥಗಳ ಪ್ರಕಟಣೆ

ಬದಲಾಯಿಸಿ
  • ಡಾ. ಸಬಿಹಾ ಅವರು ೧೪ ಸಂಪಾದನ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಕೆಲವು-
  • ನಾವು ಮತ್ತು ನಮ್ಮ ಪರಿಸರ (೨೦೦೪)
  • ಕರಾವಳಿಯ ಕಥೆಗಳು (೨೦೦೭)
  • ಕನ್ನಡ ಸಾಹಿತ್ಯ ಮತ್ತು ಮಹಿಳೆ (೨೦೦೭)
  • ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಸಾಹಿತ್ಯ (೨೦೦೯)- ಇತ್ಯಾದಿಗಳು.
  • ಕನ್ನಡ ಭಾಷಾ ಪ್ರವೇಶ
  • ಬಗೆ ಹಾಗೂ ನಿಲುಮೆ (ಈ ಎರಡು ಕೃತಿಗಳೂ ಸಬಿಹಾ ಅವರ ಮಹತ್ವಪೂರ್ಣ ವಿಮರ್ಶಾ ಲೇಖನಗಳನ್ನು ಒಳಗೊಂಡಿವೆ)
  • ಲೀಲಾ ಬ್ಯಾ ಕಾಮತ್ : ಬದುಕ-ಬರಹ (೨೦೦೮)
  • ಒಂದಾಣೆ ಮಾಲೆಯ ಸಾಹಸಿ - ಕುಡ್ಪಿ ವಾಸುದೇವ ಶೆಣೈ (೨೦೦೮) - ಈ ಎರಡೂ ಸಬಿಹಾ ಅವರು ರಚಿಸಿದ ವ್ಯಕ್ತಿ ಚಿತ್ರಗಳಾಗಿವೆ.
  • ವಿವಿಧ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
  • ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘ, ಮಂಗಳೂರು ಇದರ ೧೯೯೮-೨೦೦೦ರ ಸಾಲಿನ ಅಧ್ಯಕ್ಷೆಯಾಗಿ,
  • ೨೦೦೨-೨೦೦೫ರ ಅವಧಿಯಲ್ಲಿ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ- ಇದರ ಸೆನೆಟ್ ಸದಸ್ಯರಾಗಿ,
  • ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಸಲಹಾ ಸಮಿತಿಯ ಸದಸ್ಯರಾಗಿ,
  • ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು- ಇದರ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
  • ಇವರು ಹುದ್ದೆಯ ಜೊತೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಶಿವರಾಮ ಕಾರಂತ ಪೀಠದ ನಿರ್ದೇಶಕರೂ ಆಗಿ ಹೆಚ್ಚುವರಿ ಕಾರ್ಯ ನಿರ್ವಹಿಸಿದ್ದಾರೆ.
  • ೨೦೦೮ರಿಂದ ಕುಪ್ಪಳಿಯ ಕುವೆಂಪು ಪ್ರತಿಷ್ಠಾನದ ಸದಸ್ಯರಾಗಿ ಸಕ್ರಿಯರಾಗಿದ್ದಾರೆ.


ಉಲ್ಲೇಖ

ಬದಲಾಯಿಸಿ