ಸನ್ನುವಂಡ ಕುಶಾಲಪ್ಪ ಉತ್ತಪ್ಪ

ಭಾರತೀಯ ಫೀಲ್ಡ್ ಹಾಕಿ ಆಟಗಾರ

ಸನ್ನುವಂಡ ಕುಶಾಲಪ್ಪ ಉತ್ತಪ್ಪರವರು ಡಿಸೆಂಬರ್ ೨ ೧೯೯೩ ರಂದು ಜನಿಸಿದರು.ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪಲುಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು.ಅವರು ಭಾರತದ ವೃತ್ತಿಪರ ಹಾಕಿಪಟುವಾಗಿದ್ದಾರೆ.೨೦೧೨ರಲ್ಲಿ ನಡೆದ ಲಂಡನ್ ಸಮ್ಮರ್ ಒಲಿಂಪಿಕ್ ಗೇಮ್ಸ್ ಗೆ ಇವರ ತಂಡ ಆಯ್ಕೆ ಆಗಿತ್ತು. ಉತ್ತಪ್ಪರವರು ಸ್ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯವನ್ನು ಸೇರಿದ ನಂತರ ಒಬ್ಬ ಒಳ್ಳೆಯ ಕ್ರೀಡಾಪಟುವಾಗಿ ಹೆಸರು ಮಾಡಿದ್ದಾನೆ.ಕೊಡಗಿನ ಆಟಗಾರನಾದ ಇವನು ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲಿನಲ್ಲಿ ಓದುತ್ತಿರುವಾಗ ಇವರು ಕರ್ನಾಟಕ ತಂಡಕ್ಕೆ ನ್ಯಾಷನಲ್ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು ಗೆದ್ದು ಕೊಟ್ಟಿದ್ದಾರೆ. ಅವರ ಸಣ್ಣ ವಯಸ್ಸಿನಿಂದಲೂ ತಂದೆ ತಾಯಿಯರಿಂದ ಬಹಳ ಪ್ರೋತ್ಸಾಹ ದೊರಕಿದೆ.ಅವರ ಅಣ್ಣ ಕೂಡ ಹಾಕಿ ಆಟಗಾರನಾಗಿದ್ದರಿಂದ ಅವರಿಗೆ ತಮ್ಮ ಅಣ್ಣನಿಂದ ಬಹಳ ಪ್ರೋತ್ಸಾಹ ದೊರಕಿತು.

ಸನ್ನುವಂಡ ಕುಶಾಲಪ್ಪ ಉತ್ತಪ್ಪ

ಹಾಕಿ ಕ್ರೀಡೆ

ಬದಲಾಯಿಸಿ

೮ ವರ್ಷದವನಿದ್ದಾಗಲೇ ಉತ್ತಪ್ಪ ರವರು ಈ ಕ್ರೀಡೆಯನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡರು.ಇದಕ್ಕೆ ಪ್ರೇರಣೆಯಾಗಿದ್ದವರು ತಮ್ಮ ಅಣ್ಣ, ಅವರು ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಹಾಕಿ ಆಡುತ್ತಿದ್ದರು.ಇವರು ೧೬ ಗೋಲುಗಳನ್ನು ಐದೇ ಪಂದ್ಯಗಳಲ್ಲಿ ಗಳಿಸಿದ ಪ್ರಶಂಸೆ ಇದೆ.ಇದು ಅವರು ೧೧ನೇ ವಯಸ್ಸಿನಲ್ಲಿ ಕೂರ್ಗ್ ತಂಡವನ್ನು ಪ್ರತಿನಿಧಿಸಿದಾಗ ಮಾಡಿದ ದಾಖಲೆ.ಇವರು ಕೂರ್ಗ್ ತಂಡಕ್ಕೆ ಆಡುತ್ತಿದ್ದಾಗ ಬೆಂಗಳೂರು ತಂಡದ ವಿರುದ್ಧ ಸತತ ನಾಲ್ಕನೇ ಬಾರಿ ತಂಡಕ್ಕೆ ಪ್ರಶಸ್ತಿಯನ್ನು ಗೆದ್ದು ಕೊಟ್ಟಿದ್ದಾರೆ.ಯನ್ಷಿ೪೯ನೇ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಚಾಂಪಿಪ್ ಚೆನ್ನೈನಲ್ಲಿ ೨೦೦೪ರಲ್ಲಿ ನಡೆದಾಗ ಕರ್ನಾಟಕ ತಂಡವನ್ನು ಪ್ರತಿನಿಧಿಸಿದರು.

ಶಾಲಾ ದಿನಗಳು

ಬದಲಾಯಿಸಿ

ಅವರ ಶಾಲಾ ದಿನಗಳಲ್ಲಿ ಕೊಡಗು ಜಿಲ್ಲೆಯನ್ನು ಅನೇಕ ಬ್ಯಾಡ್ ಮಿಂಟನ್ ಮತ್ತು ಫುಟ್ಬಾಲ್ ಆಟದಲ್ಲಿ ರಾಷ್ಟ್ರ ಮಟ್ಟಕ್ಕೆ ತಲುಪಿದ್ದಾರೆ ಇವರಿಗೆ ಪ್ರಿಯವಾದ ಕ್ರೀಡೆ ಹಾಕಿಯಾದ್ದರಿಂದ ಅದರಲ್ಲಿ ತೇರ್ಗಡೆ ಹೊಂದಲು ಬೆಂಗಳೂರಿಗೆ ೮ ವರ್ಷಗಳ ಹಿಂದೆ ಸ್ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾವನ್ನು ಸೇರಿದರು. ಸ್ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯ ಸೇರಿದ ದಿನದಿಂದಲೂ ಅವರು ಓದುತ್ತಿದ್ದ ಕಾಲೇಜು,ಸೇಂಟ್ ಜೋಸೆಫ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆಡುತ್ತಾ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.ಅವರ ಪ್ರತಿಭೆ ವ್ಯರ್ಥವಾಗದೇ ಅವರು ಸ್ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾವನ್ನು ಸೇರಿಕೊಂಡ ನಂತರ,ಅನೇಕ ಆಟಗಳನ್ನು ಆಡಿ ರಾಜ್ಯ ಮಟ್ಟಕ್ಕೆ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ೨೦೧೦ರಲ್ಲಿ ಪೂಣೆಯಲ್ಲಿ ನಡೆದ ಜ್ಯೂನಿಯರ ನ್ಯಾಷನಲ್ ಆಟದಲ್ಲಿಅವರ ನಾಯಕತ್ವದಿಂದ ಕರ್ನಾಟಕ ತಂಡವು ಪಂಜಾಬ್ ತಂಡವನ್ನು ಸೋಲಿಸಿ ಗೆಲುವನ್ನು ಸಾಧಿಸಿದರುಭೋಪಾಲ್ ನಲ್ಲಿ ನಡೆದ ಸೀನಿಯರ್ ನ್ಯಾಷನಲ್ಸ್ ಆಟದಲ್ಲಿ ಕರ್ನಾಟಕ ತಂಡಕ್ಕೆ ಎರಡನೇಸ್ಥಾನ ದೊರೆತ ನಂತರ ಉತ್ತಪ್ಪ ಉತ್ತಮ ಹಾಕಿ ಆಟಗಾರನಾಗಿ ಹೆಸರು ಗಳಿಸಿಕೊಂಡನು.

ಸಾದನೆಗಳು

ಬದಲಾಯಿಸಿ

ರಾಜ್ಯ ಮಟ್ಟದಲ್ಲಿ ಆಡಲು ಅವಕಾಶ ಸಿಗಬೇಕಾದರೆ ಅವರು ತುಂಬಾ ಅಡಚಣೆಗಳನ್ನು ಅನುಭವಿಸಿದರು.ಅವರ ಮಂಡಿಗೆ ತೀರ್ವವಾದ ಗಾಯವಾದ್ದರಿಂದ ಡಿಸೆಂಬರ್ ತಿಂಗಳವರೆಗೆ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಆಗಲಿಲ್ಲಅವರು ಗುಣವಾದ ನಂತರ ಮುಂದೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಎಲ್ಲಾ ಉತ್ತಮ ಆಟಗಾರರ ನಡುವೆ ಉತ್ತಪ್ಪರವರು ಪ್ರಾಮಾಣಿಕ ಆಟಗಾರನಾಗಿ ಎದ್ದು ಕಾಣಿಸಿದ್ದಾರೆ.ಅವರ ಚಿಕ್ಕ ವಯಸ್ಸಿನ ತರಬೇತುದಾರರಾಗಿದ್ದ ಪ್ರಭಾಕರ್ ಇವರನ್ನು "ಒಬ್ಬ ಅದ್ಭುತ ಆಟಗಾರನೆಂದು ಹೊಗಳಿದ್ದಾರೆ" ಉತ್ತಪ್ಪರವರು ೨೦೧೨ರ ಜನವರಿ ೧೬ರಂದು ದಕ್ಷಿಣ ಆಫ್ರಿಕ ವಿರುದ್ದ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವಾಡಿ ಅದರಲ್ಲಿ ೫೩ನೇ ನಿಮಿಷದಲ್ಲಿ ಗೋಲನ್ನು ಸಹ ಬಾರಿಸಿದರು.ಆ ಸರಣಿಯಲ್ಲಿ ಅವರು ನಾಲ್ಕು ಪಂದ್ಯಗಳಾಡಿದರು ಅದರಲ್ಲಿ ಮೂರು ಗೆದ್ದರೆ ಒಂದು ಪಂದ್ಯ ಡ್ರಾದಲ್ಲಿ ಅಂತಿಮಗೊಂಡಿತ್ತು.ಪಾದಾರ್ಪಣಾ ಪಂದ್ಯದಲ್ಲಿ ಗೋಲು ಗಳಿಸಿದ್ದಕ್ಕಾಗಿ ಅವರಿಗೆ ಹಾಕಿ ಇಂಡಿಯ ವತಿಯಿಂದ ವಿಶೇಷ ಬಹುಮಾನ ದೊರೆಯಿತು.ದಕ್ಷಿಣ ಆಫ್ರಿಕಾ ವಿರುದ್ದದ ತಮ್ಮ ಆಟದ ವೈಖರಿಯನ್ನು ಗಮನಿಸಿ ಅವರನ್ನು ೨೦೧೨ರ ಒಲಿಂಪಿಕ್ ಕ್ವಾಲಿಫಿಕೇಷನ್ ಟೂರ್ನಮೆಂಟ್ ಗೆ ಆಯ್ಕೆಯಾದರು;ಈ ಸರಣಿಯಲ್ಲಿ ಅವರು ಎಲ್ಲಾ ಆರು ಪಂದ್ಯಗಳನ್ನಾಡಿ ಕೇವಲ ಒಂದು ಗೋಲು ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದರು.

ಉಲೇಖನಗಳು

ಬದಲಾಯಿಸಿ

*http://www.ndtv.com/topic/sk-uthappa

*http://indiatoday.intoday.in/story/sk-uthappa-coorg-olympic-qualifier/1/170089.html