ಸದಾರಮೆ ೧೯೩೫ರಲ್ಲಿ ಬಿಡುಗಡೆಯಾದ ಕನ್ಡಡದ ಮೂರನೇ ವಾಕ್ಚಿತ್ರವಾಗಿದೆ. ಇದನ್ನು ಶಕುಂತಲ ಫಿಲಂಸ್‌ ಲಾಂಛನದಲ್ಲಿ ಗುಬ್ಬಿ ವೀರಣ್ಣ ಹಾಗೂ ಷಣ್ಮುಖ ಚೆಟ್ಟಿಯಾರ್‌ ಜಂಟಿಯಾಗಿ ನಿರ್ಮಿಸಿದರು. ಚಿತ್ರದ ನಿರ್ದೇಶನ ರಾಜಾ ಚಂದ್ರಶೇಖರ್‌ ಮಾಡಿದರು.[] ಸದಾರಮೆ ಮೂಲತಃ ಶಿರಿಶ್‌ ಆಠವಳೆ ರಚಿಸಿದ ಮರಾಠೀ ನಾಟಕದ ಕನ್ನಡ ಅವತರಣಿಕೆಯಾಗಿದೆ.[]

ಸದಾರಮೆ (೧೯೩೫)
ಸದಾರಮೆ
ನಿರ್ದೇಶನರಾಜಾ ಚಂದ್ರಶೇಖರ್
ನಿರ್ಮಾಪಕಗುಬ್ಬಿ ವೀರಣ್ಣ
ಪಾತ್ರವರ್ಗಗುಬ್ಬಿ ವೀರಣ್ಣ ಶಕುಂತಲಾ ಕೆ.ಅಶ್ವತ್ಥಾಮ, ಸ್ವರ್ಣಮ್ಮ
ಸಂಗೀತವೆಂಕಟರಾಮಯ್ಯ (ಪಾಪಣ್ಣ)
ಛಾಯಾಗ್ರಹಣಸ್ಟೂಡಿಯೊ ತಂತ್ರಜ್ಞರು
ಸಂಕಲನಸ್ಟೂಡಿಯೊ ತಂತ್ರಜ್ಞರು
ಬಿಡುಗಡೆಯಾಗಿದ್ದು೧೯೩೫
ಚಿತ್ರ ನಿರ್ಮಾಣ ಸಂಸ್ಥೆಶಕುಂತಲ ಫಿಲಂಸ್
ಸಾಹಿತ್ಯಬೆಳ್ಳಾವೆ ನರಹರಿ ಶಾಸ್ತ್ರಿ
ಹಿನ್ನೆಲೆ ಗಾಯನಪಾತ್ರಧಾರಿಗಳು

ಕಥಾ ಸಾರಾಂಶ

ಬದಲಾಯಿಸಿ

ಈ ಚಿತ್ರದ ಚಿತ್ರಕತೆಯು ಗುಬ್ಬಿ ವೀರಣ್ಣನವರು ಪ್ರಯೋಗಿಸುತ್ತಿದ್ದ "ಸದಾರಮೆ" ಎಂಬ ನಾಟಕದ ಆಧಾರಿತವಾಗಿದ್ದು, ಜಾನಪದ ಕತೆಯೊಂದನ್ನು ಹೊಂದಿದೆ. ರಾಜಕುಮಾರಿ ಸದಾರಮೆ ಜಯವೀರನೆಂಬ ಸುಂದರನಲ್ಲಿ ಅನುರಕ್ತಳಾಗುತ್ತಾಳೆ. ಜಯವೀರನಿಗಾಗಿ ಅರಮನೆಯಿಂದ ಸದಾರಮರ ಹೊರಬರುತ್ತಾಳೆ. ಕಳ್ಳನೊಬ್ಬನ ಕೈಗೆ ಸಿಕ್ಕಿಕೊಂಡು ನಾನಾ ತೊಂದರೆಗಳನ್ನು ಅನಭವಿಸುತ್ತಾಳೆ. ಕೊನೆಗೆ ಜಯವೀರ ಸದಾರಮೆ ಒಂದಾಗುತ್ತಾರೆ. ವೈಶ್ಯ ಜನಾಂಗದ ತಂದೆ ಮಕ್ಕಳನ್ನು ಬಳಸಿಕೊಂಡು ಹಲವು ಹಾಸ್ಯ ಪ್ರಸಂಗಗಳನ್ನು ತರಲಾಗಿದೆ.

ನಿರ್ಮಾಣ

ಬದಲಾಯಿಸಿ

ವಾದ್ಯಗೋಷ್ಟಿಯವರು ಟ್ರಾಲಿಯ ಮೇಳೆ ಕುಳಿತು ವಾದ್ಯ ನುಡಿಸುತ್ತಿದ್ದಂತೆ, ಹಾಡುಗಳ ಚಿತ್ರಿಕರಣ, ಧ್ವನಿ ಮುದ್ರಣ ನಡೆಯುವ ಪದ್ದತಿಯಲ್ಲಿ ಸದಾರಮೆ ಚಿತ್ರಿಕರಣಗೊಂಡಿತು. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಚಿತ್ರಕ್ಕೆ ಗೀತೆಗಳನ್ನು ರಚಿಸಿದ್ದು, ಗುಬ್ಬಿ ವೀರಣ್ಣನವರು ಅದಾಗಲೇ ಪ್ರದರ್ಶಿಸುತ್ತಿದೆ ಸದಾರಮೆ ನಾಟಕದ ಸಂಭಾಷಣೆ ಹೊಂದಿತ್ತು. ರಾಜಾ ಚಂದ್ರಶೇಖರ್‌ ನಿರ್ದೇಶನದಲ್ಲಿ ಮುಂಬೈಯ ಸೆಂಟ್ರಲ್‌ ಸ್ಟೂಡಿಯೋದಲ್ಲಿ ಚಿತ್ರಿಕರಣಗೊಂಡಿತು.[]


ಪಾತ್ರವರ್ಗ

ಬದಲಾಯಿಸಿ
  • ಜಯವೀರನಾಗಿ ಮುರಾರಾಚಾರ್‌
  • ಸದಾರಮೆಯಾಗಿ ಕೆ.ಅಶ್ವತ್ತಮ್ಮ
  • ಕಳ್ಳನಾಗಿ ಗುಬ್ಬಿ ವೀರಣ್ಣ
  • ಚೆಂಚು ಕುಮಾರಿಯಾಗಿ ಬಿ.ಜಯಮ್ಮ

ಶಕುಂತಲಾ, ಬಿ ಸುಂದರಮ್ಮ, ಅಣ್ಣಾಜಮ್ಮ ಮತ್ತಿತರರು ಇತರ ಪಾತ್ರಗಳನ್ನು ನಿರ್ವಹಿಸಿದರು.

ಬಿಡುಗಡೆ

ಬದಲಾಯಿಸಿ

ಈ ಚಿತ್ರವು ಒಮ್ಮೆ ಮುಂಬೈ ಹಾಗೂ ಇನ್ನೊಮ್ಮೆ ಮೈಸೂರು ಡಿಸ್ಟ್ರಿಕ್ಟ್‌ ಸಿನೆಮಾಟೋಗ್ರಫಿ ಬೋರ್ಡ್‌ ನಲ್ಲಿ ಹೀಗೆ ಎರಡು ಬಾರಿ ಸೆನ್ಸಾರ್‌ ಆಗಿದ್ದು, ೧೬೦೦೦ ಸಾವಿರ ಅಡಿ ಉದ್ದವಿದ್ದು, ೧೬೭ ನಿಮಿಷಗಳ ಅವಧಿ ಹೊಂದಿತ್ತು. ೧೯೩೫ ಡಿಸೆಂಬರ್‌ ತಿಂಗಳಲ್ಲಿ ಈ ಚಿತ್ರವು ಬಿಡುಗಡೆಯಾಯಿತು.

ಉಲ್ಲೇಖ

ಬದಲಾಯಿಸಿ
  1. "History 10 - Samsara Nauka First Produced In Partnership". Chitraloka. Archived from the original on 11 ಆಗಸ್ಟ್ 2013. Retrieved 8 August 2013.
  2. "Naveena Sadaram (1935)". The Hindu. 3 April 2010.
  3. "Sadharam". Ragasinfilmmusic. 29 July 2012.