ಸದಸ್ಯ:Yashaswini BM/ನನ್ನ ಪ್ರಯೋಗಪುಟ

ಚಾಮರಾಜನಗರ ದಕ್ಷಿಣ ಕರ್ನಾಟಕದಲ್ಲಿರುವ ಒಂದು ಜಿಲ್ಲೆ. ಮೊದಲಿಗೆ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕೇಂದ್ರ ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹನೂರು ತಾಲೂಕು ರಚನೆಯಾಯಿತು.


ಪರಿವಿಡಿ

ಬದಲಾಯಿಸಿ

೧ ಇತಿವೃತ್ತ ೨ ಚಾಮರಾಜನಗರ ಜಿಲ್ಲೆಯ ಪರಿಚಯ ೨.೧ ಜನಸಂಖ್ಯೆ ೩ ಜಿಲ್ಲೆಯ ಪ್ರವಾಸಿ ತಾಣಗಳು ೩.೧ ಚಾಮರಾಜೇಶ್ವರ ದೇವಾಲಯ ೩.೨ ದೀನ ಬಂಧು ೩.೩ ಸುವರ್ಣಾವತಿ ಜಲಾಶಯ ೩.೪ ನರಸಮಂಗಲ ೩.೫ ಮಲೆಯೂರಿನ ಕನಕಗಿರಿ ೩.೬ ದಿವ್ಯಲಿಂಗೇಶ್ವರ ದೇಗುಲ ೩.೭ ಬೂದಿ ಪಡಗ ೩.೮ ಬೇಡಗುಳಿ ಮತ್ತು ಅತ್ತಿಖಾನೆ ೩.೯ ಜೋಡಿಗೆರೆ ೩.೧೦ ಕೆ. ಗುಡಿ (ಕ್ಯಾತೇದೇವರ ಗುಡಿ) ೩.೧೧ ಬೆಲ್ಲತ್ತ ಪಕ್ಷಿರಾಶಿ ೩.೧೨ ಯಳಂದೂರು ೩.೧೩ ಬಳೇ ಮಂಟಪ ೩.೧೪ ಗೌರೀಶ್ವರ ದೇವಾಲಯ ೩.೧೫ ಬಿಳಿಗಿರಿರಂಗನಬೆಟ್ಟ ೩.೧೬ ದೊಡ್ಡ ಸಂಪಿಗೆ ೩.೧೭ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿ.ಜಿ.ಕೆ.ಕೆ.) ೪ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಲಯದ ಪ್ರವಾಸಿ ತಾಣಗಳು ೪.೧ ಮರಡಿಗುಡ್ಡ ೪.೨ ಇತರೆ ಸ್ಥಳಗಳು ೪.೩ ಚಿಲಕವಾಡಿ ೪.೪ ಕುಂತೂರು ೪.೫ ಶ್ರೀ ಸಿದ್ಧೇಶ್ವರ ಕ್ಷೇತ್ರ ೪.೬ ಕುರುಬನ ಕಟ್ಟೆ ೪.೭ ಕನಕಗಿರಿ ಕ್ಷೇತ್ರ ೪.೮ ಗುಂಡಾಲ್ ಜಲಾಶಯ ೪.೯ ಚಿಕ್ಕಲ್ಲೂರು ೪.೧೦ ಉಗನಿಯ ೪.೧೧ ಶಿವನ ಸಮುದ್ರ ೪.೧೨ ವೆಸ್ಲಿ ಸೇತುವೆ ೪.೧೩ ಬೂದಬಾಳು ಕ್ಷೇತ್ರ ೪.೧೪ ದರ್ಗಾ ೪.೧೫ ಭರಚುಕ್ಕಿ ೪.೧೬ ಯಡಕುರಿ ೫ ಚಾಮರಾಜನಗರದ ತಾಲೂಕುಗಳು ೫.೧ ಚಾರಣ ೬ ಇದನ್ನೂ ನೋಡಿ ೭ ಉಲ್ಲೇಖಗಳು ೮ ಬಾಹ್ಯ ಸಂಪರ್ಕಗಳು

ಇತಿವೃತ್ತ

ಬದಲಾಯಿಸಿ

ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆ ಕನ್ನಡ. ಇಲ್ಲಿ ಮಾತನಾಡಲ್ಪಡುವ ಅಲ್ಪಸಂಖ್ಯಾತ ಭಾಷೆಗಳಲ್ಲಿ ಪ್ರಮುಖವಾದವು ಸೋಲಿಗನುಡಿ (ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟದ ಪ್ರದೇಶದಲ್ಲಿ) ಚಾಮರಾಜನಗರ ಜಿಲ್ಲೆಯಲ್ಲಿ ಧಾರ್ಮಿಕ ಪ್ರಾಮುಖ್ಯತೆಯ ಸಾಕಷ್ಟು ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧವಾದದ್ದು ಮಲೆಮಹದೇಶ್ವರ ಬೆಟ್ಟ. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯಲ್ಲಿ ನೈಸರ್ಗಿಕ ಸೌಂದರ್ಯದ ಉದಾಹರಣೆಗಳಲ್ಲಿ ಮುಖ್ಯವಾದವುಗಳೆಂದರೆ- ಬಿಳಿಗಿರಿರಂಗನ ಬೆಟ್ಟ , ಮಲೆಮಹದೇಶ್ವರ ಬೆಟ್ಟ ಮತ್ತು ಹಿಮವದ್ಗೋಪಾಲಸ್ವಾಮಿಬೆಟ್ಟ. ಶಿವನ ಸಮುದ್ರ ಬಂಡಿಪುರ ರಾಷ್ಟ್ರೀಯ ಉದ್ಯಾನವು ಜಿಲ್ಲೆಯ ದಕ್ಷಿಣಭಾಗದಲ್ಲಿದೆ. ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯಗಳಿದ್ದು ಇಲ್ಲಿನ ಪ್ರಮುಖ ವನ್ಯಜೀವಿಗಳು ಆನೆ, ಹುಲಿ, ಕರಡಿ, ಜಿಂಕೆ, ಇತ್ಯಾದಿ. ಇಲ್ಲಿನ ಕಾಡುಗಳು, ಮುಖ್ಯವಾಗಿ ಮಲೆಮಹದೇಶ್ವರ ಬೆಟ್ಟ, ಕುಖ್ಯಾತವಾದ ಕಾಡುಗಳ್ಳ ವೀರಪ್ಪನ್ ನ ಅಡಗುದಾಣಗಳಾಗಿದ್ದವು.

ಚಾಮರಾಜನಗರ ಜಿಲ್ಲೆಯ ಪರಿಚಯ

ಬದಲಾಯಿಸಿ

ಕರ್ನಾಟಕದ ದಕ್ಷಿಣ ತುತ್ತತುದಿಯಲ್ಲಿರುವ ಚಾಮರಾಜನಗರ ಜಿಲ್ಲೆ ಭೂಪಟದಲ್ಲಿ ಬಾಹುಬಲಿಯ ಬಲಭಾಗದ ಪಾದುಕೆಯಂತೆ ಕಂಗೊಳಿಸುವುದನ್ನು ಕಾಣಬಹುದು. ದಕ್ಷಿಣ ಒಳನಾಡಿನ ಎಲೆ ಉದುರುವ, ಮಳೆಗಾಲದಲ್ಲಿ ಸದಾ ಹಸಿರಾಗಿರುವ ಅರಣ್ಯ ಸಾಲನ್ನು ಹೊಂದಿದೆ. ತಮಿಳುನಾಡು ಮತ್ತು ಕೇರಳಗಡಿಗುಂಟ ಹಂಚಿಕೊಂಡಿರುವ ಈ ಜಿಲ್ಲೆ ೧೧.೩೫ ಉತ್ತರ ಅಕ್ಷಾಂಶದಿಂದ ೧೨.೧೮ ಉತ್ತರ ಅಕ್ಷಾಂಶದವರೆವಿಗೂ, ೭೨.೨೪ ಪೂರ್ವ ರೇಖಾಂಶದಿಂದ ೭೭.೪೬ ಪೂರ್ವ ರೇಖಾಂಶದ ನಡುವೆ ೫೬೮೫ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.

ಪೂರ್ವ ಮತ್ತು ಪಶ್ಚಿಮ ಘಟ್ಟ ಸಂದಿಸುವ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನ ಬೆಟ್ಟ ವನ್ಯಧಾಮ ಮತ್ತು ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ೧೪೧೩ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿದೆ. ಜಿಲ್ಲೆಯ ಎತ್ತರದ ಕತ್ತರಿಬೆಟ್ಟ ೧೮೧೬ ಮೀ (ಇದು ಅತ್ತಿಖಾನೆ ಗ್ರಾಮದ ಹತ್ತಿರದಲ್ಲಿದೆ), ಬಿಳಿಗಿರಿರಂಗನ ಬೆಟ್ಟ ೧೧೫೧ ಎಂ, ಬೇಡಗುಳಿ ಎಸ್ಟೇಟು ೧೪೦೦ ಮೀ ಗಳಾಗಿದ್ದು ಆನೆ, ಹುಲಿ, ಚಿರತೆ, ಕಾಡುಕೋಣ, ಸೀಳುನಾಯಿ, ಜಿಂಕೆ, ಕರಡಿ, ಸಾರಂಗ, ಸಿಂಗಳೀಕ, ನವಿಲು, ಅಪರೂಪದ ಕೀಟ ಪ್ರಭೇದವನ್ನು ಒಳಗೊಂಡಿದೆ. ಕೀಟಭಕ್ಷಕ ಸಸ್ಯವರ್ಗ ಒಳಗೊಂಡಂತೆ ಶ್ರೀಗಂಧ, ಬೀಟೆ, ಹೊನ್ನೆ, ನೀಲಗಿರಿ ಮತ್ತು ಸಿಂಕೋನ ವೃಕ್ಷಗಳ ಜೀವ-ವೈವಿದ್ಯತಾ ಆವಾಸಗಳ ನಡುವೆ ಕಾಣಬರುತ್ತದೆ.ಕ್ರಿಸ್ತಪೂರ್ವದಿಂದಲೂ ಆದಿ ಮಾನವನ ನೆಲೆಯಾಗಿದ್ದ ಶಿಲಾ ಸಮಾಧಿಗಳನ್ನು ಬುಡಕಟ್ಟು ಜನಾಂಗ ಸೋಲಿಗರು ವಾಸಿಸುವುದನ್ನು ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾಣಬಹುದಾಗಿದೆ. ಈ ಭಾಗದ ಜೀವನದಿಗಳಾದ ಸುವರ್ಣವತಿ ಚಿಕ್ಕಹೊಳೆ ಕಬಿನಿ, ಗುಂಡ್ಲು ನದಿಗಳು ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಯ ಉಪನದಿಗಳಾಗಿವೆ. ಇವುಗಳಿಗೆ ಅಲ್ಲಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಜೀವನದಿ ಕಾವೇರಿ ೧೧೦ ಕಿ.ಮೀ. ದೂರವನ್ನು ಕ್ರಮಿಸಿ, ಗಗನಚುಕ್ಕಿ, ಭರಚುಕ್ಕಿ ಜಲಪಾತ ಸೃಷ್ಟಿಸಿ ೧೯೦೨ ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ತಯಾರಿಕೆ ನೆಲೆಯಾಗಿದ್ದು ಇದೇ ಜಿಲ್ಲೆಯಲ್ಲಿ. ಮುಂದೆ ಮಹದೇಶ್ವರ ಬೆಟ್ಟದಿಂದ ೫೦ ಕಿ.ಮೀ ಅಂತರದಲ್ಲಿರುವ ಹೊಗೆನಕಲ್ ಜಲಪಾತ ನೈಸರ್ಗಿಕ ಶಿಲೆಗಳನ್ನು ಸೃಷ್ಟಿಸಿದೆ. ರಾಜ್ಯ, ರಾಷ್ಟ್ರ, ವಿದೇಶಿಯರ ಆಕರ್ಷಣೀಯ ನೈಸರ್ಗಿಕ ಜಲಪಾತಗಳು ಇಲ್ಲಿನ ವೈಶಿಷ್ಟ್ಯ ಗಂಗರು, ಹೊಯ್ಸಳರು, ವಿಜಯನಗರ, ಮೈಸೂರರಸರ ಕಲಾವೈಭವವನ್ನು ಚಾಮರಾಜನಗರದ ಬಳಿ ಇರುವ ನರಸಮಂಗಲ, ಹರದನಹಳ್ಳಿ, ಶಿಲಾಶಾಸನ, ಗುಂಡ್ಲುಪೇಟೆ ತಾಲೂಕಿನಲ್ಲಿ ಕಂಡುಬರುವ ವರಹಾವಾಸುದೇವ ಮಂದಿರ, ಹುಲುಗನ ಮೊರಡಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಳೇಮಂಟಪ, ಜಹಾಗಿರ್‌ದಾರ್ ಬಂಗಲೆ, ಕೊಳ್ಳೆಗಾಲದ ಬಳಿಯ ಮಧ್ಯರಂಗ ಇಲ್ಲಿನ ಐತಿಹಾಸಿಕ ಕುರುಹುಗಳಾಗಿವೆ.