ಸದಸ್ಯ:Y.Rithanya/ನನ್ನ ಪ್ರಯೋಗಪುಟ

ಕನ್ನಡ ಸಿ.ಐ.ಎ

ಬದಲಾಯಿಸಿ

ಸ್ವಯಂ ಪರಿಚಯ

ಬದಲಾಯಿಸಿ

ನನ್ನ ಹೆಸರು ರಿತನ್ಯ, ವಯಸ್ಸು ೧೮ ವರ್ಷ. ನಾನು ೯ ಡಿಸೆಂಬರ್ ೨೦೦೪ರಂದು ಜನಿಸಿದೆ. ನನ್ನ ಮಾತೃಭಾಷೆ ತೆಲುಗು. ನಾನು ಮೂಲತ:   ಬೆಂಗಳೂರಿನವಳು.ನನ್ನ ತ೦ದೆಯ ಹೆಸರು ಯೋಗಾನಂದ್,ತಾಯಿ ಲಲಿತ. ನನ್ನ ತಂದೆ ಸ್ವಂತ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ . ನನ್ನ ತಾಯಿ ಗೃಹಿಣಿ .

ಬದಲಾಯಿಸಿ

ನನ್ನ ಹವ್ಯಾಸಗಳು

ಬದಲಾಯಿಸಿ

ಎಲ್ಲಾ ರೀತಿಯ ಕ್ರೀಡೆಗಳನ್ನು ಆಡುವುದು, ಹೊಸ ವಿದೇಶಿ ಭಾಷೆ ಕಲಿಯುವುದು,ಸಿನಿಮಾ ನೋಡುವುದು,ಸೈಕ್ಲಿಂಗ್ ಮಾಡುವುದು, ಸ್ನೇಹಿತರೊಂದಿಗೆ ಆಟ ಆಡುವುದು, ನನ್ನ ಪೋಷಕರೊಂದಿಗೆ  ಚೆಸ್ ಆಡುವುದು,ಕ್ರಿಕೆಟ್ ಮ್ಯಾಚುಗಳನ್ನು ವೀಕ್ಷಿಸುವುದು ನನ್ನ ಅವ್ಯಾಸ. ಅದರಲ್ಲೂ ವಿರಾಟ್ ಕೊಹ್ಲಿ ನನಗೆ ಬಹಳ ಅಚ್ಚುಮೆಚ್ಚು.

ಬದಲಾಯಿಸಿ

ನನ್ನ ಪೋಷಕರು

ಬದಲಾಯಿಸಿ

ನನ್ನ ತಾಯಿ ಹೆಸರು ಲಲಿತ .ಇವರು ಒಬ್ಬ ಗೃಹಿಣಿ.ನನ್ನ ತಾಯಿ ಕೇವಲ ತಾಯಿಯಲ್ಲ ಅವರು ನನ್ನ ಸ್ನೇಹಿತೆ,ಹಿತೈಷಿ,ನನಗಾಗಿ ಎಲ್ಲವನ್ನು ಖರೀದಿಸುವವರು.ಬಹುತೇಕ ಎಲ್ಲಾ ಬಗೆಯ ಭಕ್ಷ್ಯಗಳನ್ನು ಅಡುಗೆ ಮಾಡುವ ಅತ್ಯುತ್ತಮ ಅಡುಗೆಯವರು ನನ್ನ ತಾಯಿ.ನನ್ನ ಜೀವನದಲ್ಲಿ ನಾನು ಎದುರಿಸುವ  ಎಲ್ಲಾ ಅಡತಡೆಗಳಲ್ಲಿ ನನ್ನ ತಾಯಿ ನನ್ನನ್ನು ಹುರಿತುಂಬಿಸುತ್ತಾರೆ.ನನ್ನ ಯಶಸ್ಸನ್ನು ಆಚರಿಸುವ ಮೊದಲ ವ್ಯಕ್ತಿ.ನನ್ನ ತಂದೆ ಹೆಸರು ಯೋಗಾನಂದ್ .ಅವರು ಸ್ವಂತ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ತಂದೆ ಕಟ್ಟುನಿಟ್ಟಾದ ಮತ್ತು ಅವರು ತುಂಬ ಕಠಿಣ ಪರಿಶ್ರಮದ ವ್ಯಕ್ತಿ.ನಾನು ನನ್ನ ಗುರಿಯನ್ನು ಸಾಧಿಸಿ ಉತ್ತಮ ಸ್ಥಾನದಲ್ಲಿ ನನ್ನನ್ನು ನೋಡಬೇಕೆಂಬುವುದು ನನ್ನ ತಂದೆಯ ಆಸೆ.

ಬದಲಾಯಿಸಿ

ನನ್ನ ಶಾಲಾ ಮತ್ತು ಬಾಲ್ಯ ಜೀವನ

ಬದಲಾಯಿಸಿ

ನಾನು  ಮೂರು ವರ್ಷದವಳಿದ್ದಾಗ ಓದಲು ಪ್ರಾರಂಭಿಸಿದೆ. ನನ್ನ ಪೋಷಕರು ನನ್ನನ್ನು ಪ್ಲಾನೆಟ್ ಕಿಡ್ಸ್  ಕಿಂಡರ್ಗಾರ್ಟನ್ ಸೇರಿಸಿದ್ದರು . ಅಲ್ಲಿ ನಾನು ಸಾಕಷ್ಟು ವಿಷಯಗಳನ್ನು ಕಲಿತ್ತಿದ್ದೇನೆಂದು ನನ್ನ ತಾಯಿ ಹೇಳುತ್ತಿದ್ದರು. ಮಕ್ಕಳಿಗೆ  ಉತ್ತಮ ಉಡುಗೊರೆಗಳನ್ನು ನೀಡಿದ್ದರು. ನಾನು ನನ್ನ ಪ್ರಾರ್ಥಮಿಕ ಶಾಲೆಯನ್ನು ವೆಂಕಟ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಪ್ರಾರಂಭಿಸಿದ್ದೆ. ನನ್ನ ಶಾಲೆಯಲ್ಲಿ ಉತ್ತಮ ಸ್ನೇಹಿತರನ್ನು ಪಡೆದುಕೊಂಡೆ ಮತ್ತು ಹೊಸ ಜವಾಬ್ದಾರಿಗಳನ್ನು ಕಲಿತುಕೊಂಡೆ. ಸದಾ ನೆನಪಿಡುವ ಶಿಕ್ಷಕರನ್ನು ಪಡೆದುಕೊಂಡೆ. ಶಾಲೆಯ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದೆ . ನನ್ನ ಶಾಲಾ ಜೀವನದಲ್ಲಿ ಅಧ್ಯನದೊಂದಿಗೆ ನಾನು ಕ್ರೀಡೆಯಲ್ಲಿ ಆಸಕ್ತಿ ಹೊಂದಿದೆ. ಶಾಲೆಯಲ್ಲಿ ನಡೆಯುವ ರನ್ನಿಂಗ್ ಕಾಂಪಿಟಿಷನ್ ನಲ್ಲಿ ಮತ್ತು  ಖೋ ಖೋ  ಪಂದ್ಯದಲ್ಲಿ  ಪ್ರತಿವರ್ಷ ಭಾಗವಯಿಸುತ್ತಿದ್ದೆ. ಬೆಳಗ್ಗೆ ಶಾಲೆಗೆ ಹೋಗಿ ಮಧ್ಯಾಹ್ನ ಮನೆಗೆ ಬಂದು ಸ್ವಲ್ಪ ಸಮಯ ಓದಿಕೊಂಡು ಸಂಜೆ ಗೆಳೆಯರೊಂದಿಗೆ ಆಟ ಆಡುವುದು ಆಗ ನನ್ನ ದಿನಚರಿ ಆಗಿತ್ತು. ನಾನು ಸುಮಾರು ೧೦  ವರ್ಷದವಳಾಗಿದ್ದಾಗ ನನ್ನ ತಂದೆ ತಾಯಿ ಬಸವೇಶ್ವರನಗರದಲ್ಲಿರುವ ಬ್ಯಾಸ್ಕೆಟ್ಬಾಲ್ ಕ್ಲಾಸ್ ಗೆ ಸೇರಿಸಿದ್ದರು.ನನ್ನ ಜೀವನದ ಅದ್ಭುತ ಕ್ಷಣಗಳನ್ನು ಅಲ್ಲಿ ಕಳೆದೆ. ನನಗೆ ಅಲ್ಲಿ ಅನೇಕ ಗೆಳೆಯರು ದೊರೆತರು. ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಕ್ಲಾಸ್ ಗೆ ಹೋಗುತ್ತಿದೆ. ಬ್ಯಾಸ್ಕೆಟ್ಬಾಲ್ ಸೇರಿದ  ಮೇಲೆ  ಫಿಟ್ ಆದೆ.ನಾನು ೯ ಕ್ಲಾಸ್ನಲ್ಲಿ ಶಾಲೆಯ ಸ್ಪೋರ್ಟ್ಸ್ ಸೆಕ್ರೆಟರಿ ಆಗಿದೆ . ನನ್ನ ಸ್ಪೋರ್ಟ್ಸ್ ಆಸಕ್ತಿ ಇಂದಾಗಿ ನನ್ನ ಪೋಷಕರು ಸ್ವಿಮ್ಮಿಂಗ್ ಕ್ಲಾಸ್ ಗೆ ಸೇರಿಸಿದ್ದರು.ಮೂರು ತಿಂಗಳು ಸ್ವಿಮ್ಮಿಂಗ್ ಕಲಿತೆ ಆದರೆ ೧೦ನೇ ಕ್ಲಾಸ್ ನಲ್ಲಿ ಓದಲು ಸಮಯ ಬೇಕೆಂದು ಸ್ವಿಮ್ಮಿಂಗ್ ಕ್ಲಾಸ್ ಬಿಡಬೇಕಾಯಿತು.ನಾವು ನಮ್ಮ ಹೊಸ ಸ್ವಂತ  ಮನೆಗೆ ಶಿಫ್ಟ್ ಆಗಿದ್ದ ಕಾರಣ ಓಡಾಡಲು ದೂರವಾದ ಕಾರಣ ಬ್ಯಾಸ್ಕೆಟ್ಬಾಲ್ ಕ್ಲಾಸ್  ಬಿಡಬೇಕಾಯಿತು ಇದು ನನ್ನ  ಬೇಸರಕ್ಕೆ ಕಾರಣವಾಯಿತು.ನಾನು ನಂತರ ೧೦ನೇ ಕ್ಲಾಸ್ ಬೋರ್ಡ್ ಪರೀಕ್ಷೆಗೆ  ಸಿದ್ದತೆ ಮಾಡಿಕೊಳ್ಳುತ್ತಿದೆ.  ೧೦ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕದೊಂದಿಗೆ ಮುಗಿಸಿದೆ .

ಬದಲಾಯಿಸಿ

ನನ್ನ ಕಾಲೇಜಿನ ಜೀವನ

ಬದಲಾಯಿಸಿ

೧೦ನೇ ಕ್ಲಾಸ್ ಬೋರ್ಡ್ ಪರೀಕ್ಷೆಗಳ ನಂತರ ಕೇವಲ ೪ ದಿನಗಳಲ್ಲಿ ಕೊರೋನ ವೈರಸ್ ಇಂದಾಗಿ   ಲೊಕ್ಡೌನ್ ಘೋಷಿಸಲಾಯಿತು. ಆದರಿಂದ ನಾನು ೯ ತಿಂಗಳು ಬರಿ ಮನೆಯಲ್ಲಿ ಕಾಲ ಕಳೆಯಬೇಕಾಯಿತು.ಮನೆ ಹತ್ತಿರ ಇರುವ ಗೆಳೆಯರೊಂದಿಗೆ ಆಟ ಆಡುವುದು,ಸಿನಿಮಾ ನೋಡುವುದು,ವಿಡಿಯೋ ಕಾಲ್ ಮೂಲಕ ಸಂಬಂಧಿಕರ ಜೊತೆ ಮತ್ತು ಗೆಳೆಯರೊಂದಿಗೆ ಸಂಭಾಷಣೆನಡೆಸುವುದು ಕೋವಿಡ್ ಸಮಯದಲ್ಲಿ ನನ್ನ ದಿನಚರಿಯಾಗಿತ್ತು. ಆನ್ಲೈನ್ ಮೂಲಕ ಶ್ರೀ ಭಾಗವಾನ್ ಮಹಾವೀರ್ ಜೈನ್ ಕಾಲೇಜ್ಗೆ  ಅಪ್ಲಿಕೇಶನ್ ಸಲ್ಲಿಸಿದ್ದೆ .ನನ್ನ ಅಡ್ಮಿಶನ್ಅನ್ನು ದೃಢಿಕರಿಸಿದ್ದರು. ಕೆಲವು ದಿನಗಳ ನಂತರ ಆನ್ಲೈನ್ ಕ್ಲಾಸುಗಳನ್ನು  ಪ್ರಾರಂಭಿಸಿದ್ದರು. ಆನ್ಲೈನ್ ಮೂಲಕ ಶಿಕ್ಷಣ ತುಂಬ ಹೊಸ ಅನುಭವವನ್ನು ನನಗೆ ಕಲ್ಪಿಸಿತು.೧೧ನೇ ಕ್ಲಾಸ್ ನಾನು ಕಾಲೇಜಿನ ಹತಿರವೇ ಹೋಗಲಾಗಲಿಲ್ಲ,  ಕೋವಿಡ್ ಕಾರಣ ಪರೀಕ್ಷೆಯನ್ನು ನಡೆಸಲಿಲ್ಲ.೧೨ನೇ ಕ್ಲಾಸ್ ಆನ್ಲೈನ್  ಮೂಲಕವೇ  ಪ್ರಾರಂಭವಾಯಿತು. ನನಗೆ ವಾಟ್ಸಪ್ಪ್ ಮೂಲಕ ಇಬ್ಬರು ಸ್ನೇಹಿತರಿದ್ದರು.ನಂತರ ಪರೀಕ್ಷೆಗಳಿಗಾಗಿ ಮಾತ್ರ ಕಾಲೇಜಿಗೆ ಹೋದೆ. ೧೨ನೇ ಕ್ಲಾಸ್ ಸುಮಾರು ಅರ್ಧ ವರ್ಷದ ನಂತರ ಜೈನ್ ಕಾಲೇಜಿಗೆ ನಾನು ಹೋದದ್ದು . ೧೨ನೇ ಕ್ಲಾಸ್ ಬೋರ್ಡ್ ಪರೀಕ್ಷೆಗಳಿಗೆ ತಯಾರಿಮಾಡಿಕೊಳ್ಳಲು ಪ್ರಾರಂಭಿಸಿದೆ.ನನಗೆ ಉತ್ತಮವಾದ ಶಿಕ್ಷಕರು ದೊರೆತರು.ಅವರು ಪಾಠ ಮಾಡುತ್ತಿದ್ದ ರೀತಿಯಿಂದಾಗಿ ನನಗೆ ಆನ್ಲೈನ್ ಕ್ಲಾಸ್ನಲ್ಲಿ ಶಿಕ್ಷಣ ಕಷ್ಟವಾಗಲಿಲ್ಲ.ಕಾಲೇಜು ಶುರು ಆದ  ಮೇಲೆಯೂ ಶಿಕ್ಷಣ ಉತ್ತಮವಾಗಿ ನಡೆಸಿದರು.ನಾನು ಪರೀಕ್ಷೆಗಳಲ್ಲಿ ಒಳ್ಳೆಯ ಅಂಕವನ್ನು ಪಡೆದುಕೊಂಡೆ. ಪೋಷಕ ಶಿಕ್ಷರ ಸಭೆಯಲ್ಲಿ ನನ್ನ ಬಗ್ಗೆ ಶಿಕ್ಷಕರು ಹೇಳಿದ ಮಾತು ನನ್ನ ಪೋಷಕರಿಗೆ ಹೆಮ್ಮೆ ಆಯಿತು. ನನ್ನ ಶಿಕ್ಷಕರ ಮಾರ್ಗದರ್ಶನ ಮತ್ತು ನನ್ನ ಕಠಿಣ ಪರಿಶ್ರಮದ ಮೂಲಕ ನಾನು ನನ್ನ ದ್ವಿತೀಯ ಪಿ.ಯು.ಸಿ ಬೋರ್ಡ್‌ನಲ್ಲಿ ೯೬% ಗಳಿಸಿದ್ದೇನೆ. ನಾನು  ವಿದ್ಯಾಭ್ಯಾಸದಲ್ಲಿ ಮಂದಿದ್ದ  ಕಾರಣ ನನ್ನ ೧೬  ವರ್ಷ ಹುಟುಹಬ್ಬದಂದು  ನನ್ನ ತಾಯಿ ಇನ್ಸ್ಟಾಸ್ ಯಂಬ ಬೆಲೆಬಾಳುವ ಕ್ಯಾಮೆರಾ ಕೊಟ್ಟಿದ್ದರು ಮತ್ತು ನನ್ನ ೧೭ ವರ್ಷ   ಹುಟುಹಬ್ಬದಂದು ನನ್ನ ತಂದೆ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದರು.ಈ ಎರಡು ಉಡುಗೊರೆಗಳು  ನನಗೆ  ಜೀವನದಲ್ಲಿ ಹೆಚ್ಚು ಸಂತೋಷ ನೀಡಿತ್ತು. ಇದಕ್ಕೆ ನನ್ನ ಪೋಷಕರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ಬದಲಾಯಿಸಿ

ನನ್ನ ಪ್ರವಾಸ ಕಥೆಗಳು

ಬದಲಾಯಿಸಿ

ಮೈಸೂರಿನ ಮೃಗಾಲಯ,ಅರಮನೆ ಮತ್ತು ಚಿತ್ರದುರ್ಗದ ಕೋಟೆ, ಕೋಲಾರ, ಕನಕಪುರ, ಉಣಸೂರು,ಮಡಿಕೇರಿ,ಬಾಬಾ ಬುಡನಗಿರಿ, ಮಂಗಳೂರು, ತುಮಕೂರು, ಯಾದಗಿರಿ, ಧರ್ಮಸ್ಥಳ, ಮತ್ತು ಕುಕೆ ಸುಬ್ರಮಣ್ಯ .ನಾನು ಕರ್ನಾಟಕದಲ್ಲಿರುವ ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಕರ್ನಾಟಕದ ಹೊರಗೆ ಬಂದರೆ ನಾನು ಗೋವಾ, ಚೆನ್ನೈ ,ಡೆಲ್ಲಿ ,ಕೇರಳ, ಕೃಷ್ಣಗಿರಿ, ಮಂತ್ರಲಾಯ, ತಿರುಪತಿ ಮತ್ತು ಕೊಚ್ಚಿ. ವಂಡರ್ಲ, ವಾಟರ್ ವರ್ಲ್ಡ್, ಜಿ. ಆರ್.ಯಸ್ ಫ್ಯಾಂಟಸಿ ಪಾರ್ಕ್,ಹಾಲಿಡೇ ಪಾಮ್ ರೆಸಾರ್ಟ್,ಸ್ನೋ ಸಿಟಿ ಈ ರೀತಿ ನನಗೆ ರೆಸಾರ್ಟ್ಸ್ ಹೋಗುವುದು ತುಂಬ ಇಷ್ಟವಾದ್ದರಿಂದ  ಈ ಎಲ್ಲಾ ರೆಸಾರ್ಟ್ಸ್ ಗೆ ಭೇಟಿ ನೀಡಿದ್ದೇನೆ .ನಾನು ಹೋಗಿರುವ ಇಷ್ಟು ಪ್ರವಾಸದಲ್ಲಿ ಮೈಸೂರ್ ನಾನು ೧೫ ಬಾರಿ ತಂದೆಯೊಂದಿಗೆ ಬೈಕ್ ನಲ್ಲಿ ಪ್ರಯಾಣಿಸಿದ್ದೇನೆ .ನನ್ನ ಜೀವನದಲ್ಲಿ ದಿನನಿತ್ಯ ಮಾಡುವುದನ್ನು ಬಿಟ್ಟು ಹೊಸ ಜಾಗದಲ್ಲಿ ಹೊಸ ವ್ಯಕ್ತಿಗಳ ಪರಿಚಯ,ಹೊಸ ಸಂಸ್ಕೃತಿ, ವಿವಿಧ ರೀತಿಯ ಊಟ,ಹೊಸ ಭಾಷೆ ಈ ಎಲ್ಲಾ ಅನುಭವ ನನಗೆ ತುಂಬ ಸಂತೋಷ ನಿಡುತ್ತದೆ . ನಾನು ವಿವಿಧ ದೇಶದ ಸಂಸ್ಕೃತಿಗಳು, ಸಂಪ್ರದಾಯಗಳನ್ನು ತಿಳಿಯಲು ಮತ್ತು ಆಹಾರದ ರುಚಿಯನ್ನು ತಿಳಿಯಲು ಪ್ರಪಂಚದ ವಿವಿಧ ಭಾಗಗಳನ್ನು ಅನ್ವೇಷಿಸಲು ಇಷ್ಟಪಡುತ್ತೇನೆ.

ಬದಲಾಯಿಸಿ

ನನ್ನ ಸ್ನೇಹಿತರು

ಬದಲಾಯಿಸಿ

ನನ್ನ ಮೊದಲ ಸ್ನೇಹಿತೆ ಹೆಸರು ರಿಖಿತ,ನಾನು ಶಾಲೆಗೆ ಸೇರಿದಾಗ ಪರಿಚಯವಾದವಳು.ಆಗ ನನ್ನ ವಯಸ್ಸು ೩ ವರ್ಷ.ಶಾಲೆಯಲ್ಲಿ ನನಗೆ ತುಂಬ ಸಹಾಯ ಮಾಡುತ್ತಿದಳು.ಅವಳು ಒಲೆಯ ಕಲಾವಿದೆ.ನಮ್ಮ ಗೆಳೆತನ ಸುಮಾರು ೧೨ ವರ್ಷದು.ರಿಖಿತ ಈಗ ಸಿ.ಎ ಪರೀಕ್ಷೆಗೆ  ಓದುತ್ತಿದ್ದಾಳೆ.   ನನ್ನ ಇನ್ನೊಂದು ಗೆಳೆತಿಯ ಹೆಸರು ನಿಕಿತಾ.ಇವಳು ನನಗೆ ಬ್ಯಾಸ್ಕೆಟ್ಬಾಲ್ ಕ್ಲಾಸ್ನಲ್ಲಿ ಪರಿಚಯವಾದವಳು.ಇವಳು ಉತ್ತಮ ಬ್ಯಾಸ್ಕೆಟ್ಬಾಲ್ ಆಟಗಾರ್ತಿ ಮತ್ತು ಓದಿನಲ್ಲಿ ಮುಂದೆ ಇದ್ದಳು.ನಿಖಿತಾ ಈಗ ಮ್ಯಾಂಗಲೋರ್ ಮಣಿಪಾಲನಲ್ಲಿ ಎಂ.ಬಿ.ಬಿ.ಯಸ್ ಓದುತ್ತಿದ್ದಾಳೆ.ದೀಪ್ತಿ ನನ್ನ ಇನ್ನೊಂದು ಗೆಳೆತಿಯ ಹೆಸರು.ಇವಳು ನಮ್ಮ ಮನೆಯ ಹತ್ತಿರ ಇರುವ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದಳು .ದೀಪ್ತಿಯೊಂದಿಗೆ ಸೈಕ್ಲಿಂಗ್ ಹೋಗುವುದು,ಸಂಜೆ ಆಟ ಆಡುವುದು ನನಗೆ ದಿನಚರಿಯಲ್ಲಿ ಭಾಗವಾಗಿತ್ತು . ಕೊರೋನ ಲೊಕ್ಡೌನ್ನಲ್ಲಿ  ನಾವು ಕಳೆದ ಸಮಯವನ್ನು ಮರೆಯಲಾರೆನು. ದೀಪ್ತಿ ಚೆನ್ನೈ ನಲ್ಲಿರುವ ಟಿ.ಯನ್.ಎ.ಯು ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಳೆ. ಕರಣ್ ದೀಪ್ತಿಯಾ ಆಗೇ ನನಗೆ ಪರಿಚಯವಾದವನು.ಇವನು ತುಂಬ ಸಿನಿಮಾ ಮತ್ತು ಯುಟ್ಯೂಬ್ ವಿಡಿಯೋಗಳನ್ನು  ಮಾಡುವುದರಲ್ಲಿ  ಆಸಕ್ತಿ ಹೊಂದಿದವನು.ಇವನು ಈಗ ಬೇಸ್ ಕಾಲೇಜಿನಲ್ಲಿ ಹನ್ನೆರಡನೇ   ತರಗತಿಯಲ್ಲಿ ಓದುತ್ತಿದ್ದಾನೆ. ನನ್ನ ಪ್ರಸ್ತುತ ಗೆಳೆತಿಯ ಹೆಸರು ಹರ್ಷಿತಾ.ಇವಳು ನಂಗೆ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪರಿಚಯವಾದವಳು.ಆರು ತಿಂಗಳಲ್ಲಿ ಅದ್ಬುತ ಕ್ಷಣಗಳನ್ನು ಅವಳೊಂದಿಗೆ  ಕಳಿದಿದ್ದೇನೆ.ಮುಂದಿರುವ ಎರೆಡು ವರ್ಷದಲ್ಲಿ ಅವಳನ್ನು ಹೆಚ್ಚು ತಿಳಿಯಲು ಬಯಸುತ್ತೇನೆ   .ನಾನು ಗೆಳೆಯರನ್ನು ತುಂಬ ಸುಲಭವಾಗಿ ಮಾಡಿಕೊಳ್ಳುವುದಿಲ್ಲ.ಅವರೊಂದಿಗೆ ಬೆರೆತು ಅವರನ್ನು ಅರ್ಥ ಮಾಡಿಕೊಳುವವರೆಗೂ.

ಬದಲಾಯಿಸಿ

ಪ್ರಸ್ತುತ  ಜೀವನ

ಬದಲಾಯಿಸಿ

ದ್ವಿತೀಯ ಪಿ.ಯು ಪರೀಕ್ಷೆ ಮೊದಲೇ ನಾನು ಕ್ರೈಸ್ಟ್ ಯೂನಿವರ್ಸಿಟಿ ಅಡ್ಮಿಷನ್ಗೆ ಫಾರ್ಮ್ ಸಲ್ಲಿಸಿದ್ದೆ .ಎರಡು ವಾರಗಳ ನಂತರ ಕ್ರೈಸ್ಟ್ ಕಾಲೇಜಿಗೆ ನನ್ನ ಅಡ್ಮಿಷನ್ ಖಚಿತವಾಯಿತು  ನನ್ನ ಪೋಷಕರಿಗೆ ತುಂಬ ಸಂತೋಷವಾಯಿತು.ನಾನು ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಕಾಂ ದ್ವಿತೀಯ ಸೆಮಿಸ್ಟರ್ನಲ್ಲಿ ಓದುತ್ತಿದ್ದೇನೆ. ನಾನು ಸೈಕ್ಲಿಂಗ್ ಮೂಲಕ ನನ್ನ ದಿನವನ್ನು ಪ್ರಾರಂಭಿಸುತ್ತೇನೆ ಅದು ಇಡೀ ದಿನ ನನಗೆ ಉತ್ಸಹವನ್ನು  ತುಂಬುತ್ತದೆ . ನಾನು ಬ್ಯಾಸ್ಕೆಟ್ಬಾಲ್ ಆಟಗಾರ್ತಿ ಹಾಗು ಈಜುಗಾರ್ತಿ.    ನಾನು ನನ್ನ ಹೆತ್ತವರಿಂದ ಗೌರವ,ಸಮಯಪಾಲನೆ,ಪ್ರಾಮಾಣಿಕತೆ,ಒಳೆಯ ನಡತೆ ಮತ್ತು ಸಹಾಯ ಮಾಡುವ ಸ್ವಭಾವವನ್ನು ರೂಢೀ ಸಿಕೊಂಡಿದ್ದೆನೇ. ಕ್ರೈಸ್ಟ್   ವಿಶ್ವವಿದ್ಯಾನಿಲಯಕ್ಕೆ ಸೇರಿದ ನಂತರ ನಾನು ಸ್ವತಂತ್ರನಾದೆ. ನಾನು ಅನೇಕ ಹೊಸ ವಿಷಯಗಳನ್ನು ಕಲಿತ್ತಿದ್ದೇನೆ ಮತ್ತು ವಿವಿಧ ಸಂಸ್ಕೃತಿಗಳ ಜನರೊಂದಿಗೆ ಬೆರೆಯುತ್ತಿದ್ದೇನೆ.

ಬದಲಾಯಿಸಿ

ನನ್ನ ಶಿಕ್ಷಕರು

ಬದಲಾಯಿಸಿ

ನನ್ನ ಮೊದಲ ಶಿಕ್ಷಕಿ ಹೆಸರು ಶೆರ್ಲಿ ಮೇಡಂ.ಅವರು ನನ್ನ ಯಲ್.ಕೆ.ಜಿ ಕ್ಲಾಸ್ನಲ್ಲಿ ಪಾಠ ಹೇಳಿಕೊಟ್ಟವರು. ರೊಸಿ ಮೇಡಂ ನನ್ನ ಉ.ಕೆ.ಜಿ ಶಿಕ್ಷಕಿ ಇವರು ಇಂಗ್ಲಿಷ್ ಹೇಳಿಕೊಡುತ್ತಿದ್ದರು.ನನ್ನನ್ನು ಒಮ್ಮೆ ಅವರ ಮನೆಗೂ ಆಹ್ವಾನಿಸಿದ್ದರು .ನನ್ನ ಶಾಲೆಯ ಮತೊಬ್ಬ ನೆಚ್ಚಿನ ಶಿಕ್ಷಕಿ ಹೆಸರು ವಿನುತಾ ಮೇಡಂ .ಅವರು ನನ್ನ ಚಿಕ್ಕ ವಯಸ್ಸಿನಲ್ಲಿ ಪಾಠ ಹೇಳಿಕೊಟ್ಟವರು.ನನ್ನನು ೧೦ನೇ ಕ್ಲಾಸ್ ನಂತರ ಕೂಡ ಗುರುತಿ ಹಿಡಿದು ಮಾತನಾಡಿಸಿದ್ದರು.ಜೆಮಿಮಾ ಮೇಡಂ ನನ್ನ ಆರನೇ ತರಗತಿಯ ಶಿಕ್ಷಕಿ ಇವರು ನನಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದರು.ನನ್ನ ಮತ್ತೊಬ್ಬ ನೆಚ್ಚಿನ ಶಿಕ್ಷಕರ ಹೆಸರು ಆನಂದ್ ಸರ್.ಇವರು ನನಗೆ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಕನ್ನಡ ಪಾಠ ಮಾಡುತ್ತಿದ್ದರು.ಇವರ ಉತ್ತಮ ಶೈಲಿಯ ಪಾಠದಿಂದ ನನ್ನ ಬೋರ್ಡ್ ಪರೀಕ್ಷೆಯಲ್ಲಿ ೯೫ ಅಂಕಗಳು ಲಭಿಸಿತು. ಇವರು ನನ್ನ ಶಿಕ್ಷಕಗಿಂತ ಹೆಚ್ಚಾಗಿ ತಂದೆಯಂದು ಹೇಳೆಬಹುದು.ಅನಿತಾ ಮೇಡಂ ನನ್ನ ದ್ವಿತೀಯ ಪಿ.ಯು.ಸಿ ಕಂಪ್ಯೂಟರ್ ಸೈನ್ಸ್ ಟೀಚರ್.ಇವರ ಶಿಕ್ಷಣ ಶೈಲಿ ಇಂದ  ಕಂಪ್ಯೂಟರ್ ಬೇಸಿಕ್ಸ್ ಅಲ್ಲಿ ವೀಕ್ ಇದ್ದ ನನಗೆ ಬೋರ್ಡ್ ಪರೀಕ್ಷೆಯಲ್ಲಿ ೧೦೦ಕೆ ೧೦೦ ಅಂಕಗಳು ದೊರೆಯಿತು. ರತಿ ಮೇಡಂ ,ಕವಿತಾ  ಮೇಡಂ ,ಸತ್ಯನಾರ್ಯನ ಸರ್,ಲೈಜೇಶ್ ಸರ್ ಮತ್ತು ಪ್ರಕಾಶ್ ಸರ್ ಕ್ರೈಸ್ಟ್ ಕಾಲೇಜಿನಲ್ಲಿ ಪ್ರಥಮ ಸೆಮಿಸ್ಟರ್ ಬಿಕಾಂನಲ್ಲಿ ಪಾಠ ಮಾಡಿದವರು.ಇವರ ಪಾಠದಿಂದ ಮೊದಲನೆಯ  ಸೆಮಿಸ್ಟರ್ನಲ್ಲಿ ಉತ್ತಮ ಅಂಕಗಳಲ್ಲಿ ಪಾಸ್ ಆದೆ.

ಬದಲಾಯಿಸಿ

ಜೀವನದ ಗುರಿ

ಬದಲಾಯಿಸಿ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ಸಿವಿಲ್ ಸರ್ವಿಸಸ್ ಪರೀಕ್ಷೆ ಬರೆದು ಐ.ಪಿ .ಯಸ್. ಆಫೀಸರ್ ಆಗುವುದು ನನ್ನ ಗುರಿ.ಈ ಪರೀಕ್ಷೆಯಲ್ಲಿ ಮೂರು ಹಂತವನ್ನು ದಾಟಬೇಕು.ಮೊದಲನೆಯದು ಪ್ರೆಲಿಮ್ಸ್ ಪರೀಕ್ಷೆ,ಎರಡನೆಯದು ಮೈನ್ಸ್ ಪರೀಕ್ಷೆ ,ಮತ್ತು   ಸಂದರ್ಶನ.ಈ ಪರೀಕ್ಷೆ ಅತೀ ಕಷ್ಟವಾದುದು ಯಂದು ಎಲ್ಲಾ ಜನರ ಅಭಿಪ್ರಾಯ.ಆದರೆ ಆ ಕಷ್ಟವಾದ ಪರೀಕ್ಷೆಯನ್ನು ಬರೆದು ಪಾಸ್ ಆಗೆಬೇಕೆಂದು ನಾನು ಛಲದೊಂದಿಗೆ ಸಿದ್ದತೆ ನಡೆಸುತ್ತಿದ್ದೇನೆ. ನನ್ನ ಎಲ್ಲಾ ಬಯಕೆಯನ್ನು ತೀರಿಸಿರುವ ನನ್ನ ಪೋಷಕರಿಗೆ ಒಳೆಯ ಪೊಲೀಸ್ ಆಫೀಸರಾಗಿ ನಾನು ಅವರ ಮುಂದೆನಿಂತು ಖುಷಿ ತರಿಸಬೇಕೆಂಬುವುದು ನನ್ನ ಬಯಕೆ. ನನ್ನ ಸೇವೆಯ ಮೂಲಕ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುವುದೇ ನನ್ನ ಕನಸು. ನನ್ನ ಗುರಿಗಳನ್ನು ಸಾಧಿಸುವ ಮೂಲಕ ನನ್ನ ಹೆತ್ತವರು ತಮ್ಮ ಏಕೈಕ ಮಗಳಿಗೆ  ಸಾಕಷ್ಟು ಪ್ರೀತಿಯನ್ನು ಧಾರೆಯೆರೆದಿದ್ಧರಿಂದ ನನ್ನ ಬಗ್ಗೆ ಹೆಮ್ಮೆಪಡಲು ನಾನು ಬಯಸುತ್ತೇನೆ. ನಾನು ನನ್ನ ಗುರಿಗಳನ್ನು ಸಾಧಿಸಿದ ದಿನದಂದು ನನ್ನ ಅಸ್ತಿತ್ವದ ಉದ್ದೇಶವು ಈಡೇರುತ್ತದೆ ಮತ್ತು ನನ್ನ ಸೇವೆಯ ಮೂಲಕ ಜನರು ನನ್ನನು ಗುರುತಿಸುತ್ತಾರೆಯಂದು ಬಯಸುತ್ತೇನೆ .  ನನ್ನ ಗುರಿಯನ್ನು ಸಾಧಿಸುವ ಮೂಲಕ ಇದು ಕೇವಲ ಕನಸು ಎಂದು ಭಾವಿಸುವ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ ನೀಡಲು ನಾನು ಬಯಸುತ್ತೇನೆ. 

ಬದಲಾಯಿಸಿ