Vitthal K Gavade
ಶೀರ್ಷಿಕೆ.೧
ಬದಲಾಯಿಸಿ- ಪರಿಚಯ
ಹೆಸರು:ವಿಠ್ಠಲ್ ಕೊಂಡು ಗಾವಡೆ. ತರಗತಿ: ದ್ವೀತಿಯ ಬಿ ಕಾಂ. ದಾಖಲಾತಿ ಸಂಖ್ಯೆ :೧೪೩೪೧೭
ವಿಠ್ಠಲ್ ಗಾವಡೆ ಆದ ನಾನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಿಂದ ಬಂದಿದ್ದು ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜ್ ವಸತಿ ನಿಲಯದಲ್ಲಿ ಇರುತ್ತೇನೆ.
- ವಿದ್ಯಾಭ್ಯಾಸ
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬ್ಯಾನಳ್ಳಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಗ್ಗಿನಕೇರಿಯಲ್ಲಿ ಮುಗಿಸಿದ್ದೇನೆ. ಪ್ರೌಢಶಾಲಾ ಶಿಕ್ಷಣವನ್ನು ತಾಲೂಕಿನ ರೋಟರಿ ಪ್ರೌಢಶಾಲೆಯಲ್ಲಿ ಮುಗಿಸಿ ನಂತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಲೊಯೋಲಾ ಪದವಿಪೂರ್ವ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ವಿದ್ಯಾಲಯದಲ್ಲಿ ದ್ವೀತಿಯ ವರ್ಷದ ಬಿ ಕಾಂ ನಲ್ಲಿ ಕಲಿಯುತ್ತಿದ್ದೆನೆ.
- ಹವ್ಯಾಸಗಳು
ನಾನು ಉತ್ತಮ ಹಾಡುಗಾರನಾಗಿದ್ದೇನೆ. ನನಗೆ ಕಥೆ, ಕಾದಂಬರಿ ಮುಂತಾದ ಪುಸ್ತಕಗಳನ್ನು ಓದುವುದು ಇಷ್ಟ. ನಾನು ಹಲವಾರು ಕವನಗಳನ್ನು ಬರೆದಿದ್ದೇನೆ. ಕಬಡ್ಡಿ,ಕ್ರಿಕೆಟ್ ನನ್ನ ನೆಚ್ಚಿನ ಆಟಗಳು. ಸಂಗೀತ ಕೇಳುವುದು, ಚಲನಚಿತ್ರ ನೋಡುವುದು ನನ್ನ ಹವ್ಯಾಸಗಳಾಗಿವೆ.
- ಸಾಧನೆಗಳು
ನಾನು ಕಬಡ್ಡಿ ಆಟದಲ್ಲಿ ಜಿಲ್ಲಾ ಮಟ್ಟಕ್ಕೆ ಹೋಗಿದ್ದೇನೆ. ನಾನು ಪಿ.ಯು.ಸಿ ಪರೀಕ್ಷೆಯಲ್ಲಿ ನಮ್ಮ ಮುಂಡಗೋಡ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದೇನೆ.ಇದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಬೆಳಗಾವಿಯಲ್ಲಿ ನನ್ನನ್ನು ಸನ್ಮಾನ ಮಾಡಿದ್ದರು. ೨೦೧೨ರಲ್ಲಿ ಧಾರವಾಡದಲ್ಲಿ ನಡೆದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ.
ಈ ಸದಸ್ಯರ ಊರು ಮಂಗಳೂರು. |