===== ಮೂಡಬಿದರೆ ಜೈನರ ಬಸದಿಗಳು =====

ಮೂಡುಬಿದಿರೆಯ ಭೌಗೋಳಿಕ ಹಿನ್ನೆಲೆ


ಮೂಡುಬಿದಿರೆ ಹಾಗೂ ಇದರ ಪರಿಸರದಲ್ಲಿ ಯಾವಾಗ ವ್ಯವಸ್ಥಿತ ಜನಜೀವನ ಪ್ರಾರಂಭವಾಯಿತೆಂದು ಹೇಳುವುದು ಕಷ್ಟ ಸಾಧ್ಯ. ಆದರೆ ಕರ್ನಾಟಕದಲ್ಲಿ ಶಿಲಾಯುಗ ಮತ್ತು ಲೋಹಯುಗಗಳು ನಡೆದುಹೋದಂತೆ ಕರಾವಳಿ ಕರ್ನಾಟಕ ಹಾಗೂ ಮೂಡುಬಿದಿರೆಯಲ್ಲಿಯೂ ಈ ರೀತಿಯ ಇತಿಹಾಸಪೂರ್ವ ಕಾಲದ ಜೀವನ ಇದ್ದಿರಲೇಬೇಕು. ಕರ್ನಾಟಕದ ಹೆಚ್ಚಿನ ಭಾಗವನ್ನಾಳಿದ ಮೌರ್ಯರು, ಶಾತವಾಹನರು, ಕದಂಬರರು ಮತ್ತು ಚಾಲುಕ್ಯರು ಉತ್ತಮ ಹವಾಗುಣ, ಸ್ಥಳದ ಉನ್ನತಿ, ವಿಪುಲ ಪ್ರಕೃತಿ ಸಂಪತ್ತು ಹಾಗೂ ಸಾಕಷ್ಟು ಜನಸಂಖ್ಯೆಯನ್ನು ಹೊಂದಿದ್ದ ಮೂಡುಬಿದಿರೆಯ ಮೇಲೂ ತಮ್ಮ ಅಧಿಕಾರವನ್ನು ಹೊಂದಿದ್ದರು.

       ಸಮಗ್ರ ತುಳುನಾಡಿನಂತೆ ಮೂಡುಬಿದಿರೆ ಕೂಡಾ ಒಂದು ಶಕ್ತಿಯ ಆರಾಧನಾ ಕೇಂದ್ರವಾಗಿ ಬೆಳೆದಿತ್ತೆಂಬುದು ಆನಂದಗಿರಿ ವಿರಚಿತ “ಶ್ರೀ ಶಂಕರ ವಿಜಯದ” ಅಧ್ಯಯನದಿಂದ ವೇದ್ಯವಾಗುತ್ತದೆ. ಜತೆಗೇ ಕ್ರಿ. ಶ. 9ನೇ ಶತಮಾನಕ್ಕಿಂತ ಮೊದಲು ಈ ಪ್ರದೇಶದಲ್ಲಿ ಅಷ್ಟವಿಧ ಗಣೇಶನ ಆರಾಧನೆ ನಡೆಯುತ್ತೇಂದೂ, ಈ ಪರಿಸರದಲ್ಲಿ ಗಾಣಪತ್ಯರು ನೆಲೆಸಿದ್ದರೆಂದೂ ತಿಳಿಯಬಹುದು. ಮಾತ್ರವಲ್ಲದೆ ಇಲ್ಲಿಯ ಗೌರಿ ದೇವಾಲಯದ ಪ್ರಧಾನ ಖಂಡಿತವಾಗಿಯೂ ಮೂಡುಬಿದಿರೆ ಒಂದು ಶಕ್ತಿ ಆರಾಧನಾ ಕೇಂದ್ರವಾಗಿ ಪ್ರಸಿದ್ಧಿ ಪಡೆದಿತ್ತು.
        ಮೂಡುಬಿದಿರೆ ಸಮೀಪದಲ್ಲಿರುವ ಕೆಲ್ಲಪುತ್ತಿಗೆಯು ಕೆಲ್ಲರೆಂಬ ಜೈನ ಸಾಮಾಂತ ಅರಸರ ರಾಜಧಾನಿಯಗಿತ್ತು. ಅವರು ಕ್ರಿ. ಶ. 450ಕ್ಕಿಂತ ಮೋದಲೇ ಇಲ್ಲಿಂದ ರಾಜ್ಯವಾಳುತಿದ್ದರು. ಮೂಡುಬಿದಿರೆಯ ಚೌಟ ಅರಸರು ಮೊದಲಿಗೆ ಮಂಗಳೂರು ಬಳಿಯ ಸೋಮೇಶ್ವರದಿಂದಲು, ಆ ಬಳಿಕ ಮೂಡುಬಿದಿರೆ ಬಳಿಯ ಪುತ್ತಿಗೆಯಿಂದಲೂ, ಕೊನೆಯಲ್ಲಿ ಮೂಡುಬಿದಿರೆಯಿಂದಲೂ ಆಳುತ್ತಿದ್ದರು. ಇವರು ವಿಜಯನಗರದ ಚಕ್ರವರ್ತಿಗಳ, “ಕೆಳದಿ ನಾಯಕ ಆರಸರ ಹೈದರಾಲಿ ಟಿಪ್ಪು ಸುಲ್ತಾನರ ಸಾಮಂತ ಅರಸರಾಗಿ” ಕ್ರಿ. ಶ. 1800ರವರೆಗೂ ಪರಕ್ರಮಶಲಿಯಾಗಿ ಆಳಿದ್ದರು.
        ಮೂಡುಬಿದಿರೆಯು ಚೌಟ ಅರಸರ ರಾಜಧಾನಿ “ಪುತ್ತಿಗೆ ಹಾಗೂ ಮೂಡುಬಿದಿರೆ” ಅರಮನೆಯ ಸಮೀಪವಿದ್ದರೂ, ಅವರಿಂದ ಸ್ವತಂತ್ರವಾಗಿ ವಿಶೇಷವಾದ ಒಂದು ನಗರಾಡಳಿತ ಸಂಸ್ಥೆಯನ್ನು ಹೊಂದಿತ್ತು. ವೇಣುಪುರದ ಎಂಟು ಪ್ರಜೆ ಸೆಟ್ಟಿಗಾರರು, ನಾಲ್ವರು ಎಳಮಗೊಳಗಾದ ಸಮಸ್ತ ಹಲವರು ಎಂಬ ನಗರಾಡಳಿತ ಸಂಸ್ಥೆಯಿಂದ ಆಳಲ್ಪಡುತಿತ್ತು. ಇದರಿಂದ ಮೂಡುಬಿದಿರೆಯ ನಗರಾಡಳಿತದಲ್ಲಿ ಜೈನ ವ್ಯಾಪಾರಸ್ಥರೂ, ವ್ಯವಸಾಯಗಾರರೂ ಅಧಿಕಾರ ಹೊಂದಿದ್ದರೆಂದು ತಿಳಿಯಬಹುದು. ಇಲ್ಲಿಯ ಗುರು ಬಸದಿಗೆ ಸಂಭಂದಪಟ್ಟ ಒಂದು ಶಾಸನದಲ್ಲಿ ಈ ರೀತಿ ಹೇಳಲಾಗಿದೆ. “ಗುರುಗಳ ಬಸ್ತಿಯ ಪಾರಿಶ್ವನಾಥನ ಸನ್ನಿಧಿಯಲ್ಲಿ ಸಂಘ ಸಮುದಾಯದ ಮುಂದಿಟ್ಟು ಎಂಟು ಮಂದಿ ಸೆಟ್ಟಿಕಾರರು, ನಾಲ್ವರು ಎಳಮೆಗಳೊಳಗಾದ ಸಮಸ್ತ ಹಲರ” ಅಭಪ್ರಾಯದಂತೆ ಆ ದಾನವನ್ನು ಮಾಡಲಾಗುತಿತ್ತು. ಇನ್ನೊಂದು ಶಾಸನವು ಈ ರೀತಿ ಹೇಳಲಾಗುತ್ತದೆ. “ಶ್ರೀಮದ್ವೇಣುಪುರದ ಎಂಟು ಪ್ರಜೆ ಸೆಟ್ಟಿಕಾರರು ನಾಲ್ವರು ಎಳಮೆಗೊಳಗಾದ ಸಮಸ್ತ ಹಲರು ನಿರ್ಮಾಪಿಸಿದ ತ್ರಿಭುವನ ಚೂಡಾಮಣಿ ಎಂಬ ಮಹಾಚೈತ್ಯಾಲಯ”. ಆದರೆ ಅವರೆಲ್ಲರ ಕಾರ್ಯಗಳಿಗೆ ಇಲ್ಲಿಯ ಮಠಾಧೀಶರ ಒಪ್ಪಿಗೆ ಇರುತಿತ್ತು, ಮಾರ್ಗದರ್ಶನವಿತ್ತು. ಅವರ ಶೀತೋಪೇತ ವಾಶ್ಚಂದ್ರಿಕೆಯಿಂದ ಭವ್ಯರ ಹೃದಯದಲ್ಲಿ ಧರ್ಮಾಂಕುರಗಳು ಆವಿರ್ಭಸ, ಇಹ ಪರಗಳಲ್ಲಿ ಸುಖ ಕೊಡುವ ಫಲಗಳನ್ನೀಯುತ್ತಿದ್ದುವು.

ಅಧ್ಯಾಯ 2

ಮೂಡುಬಿದಿರೆಯ ಐತಿಹಾಸಿಕ ಹಿನ್ನೆಲೆ

    ಮೂಡುಬಿದಿರೆಯು  ದೇಶದಲ್ಲಿ  ಒಂದು  ಪ್ರಸಿದ್ಧವಾದ  ತೀರ್ಥಕ್ಷೇತ್ರ. ಇದನ್ನು ಜೈನಕಾಶಿಯೆಂದು ಕರೆಯುತ್ತಾರೆ.ssss ಅಮೂಲ್ಯ ಧವಲ ಗ್ರಂಥಗಳೂ,  ಅಸಂಖ್ಯ  ಶಾಸ್ತ್ರ,  ಸಾಹಿತ್ಯ  ಕೃತಿಗಳೂ  ಇಲ್ಲಿ  ಲಭ್ಯವಾಗಿದೆ.  ಜತೆಯಲ್ಲಿ ನವರತ್ನ ನಿರ್ಮಿತ ಪವೀತ್ರ ಜಿನ ಬಿಂಬಗಳು ರಾರಾಜಿಸುವ ಅಪೂರ್ವ ಸಿದ್ದಾಂತ ದರ್ಶ£ವನ್ನೊದಗಿಸುವ ಪಾವನಕ್ಷೇತ್ರ. ಭಾರತೀಯ ಮಾತ್ರವಲ್ಲದೆ   ವಿದೇಶಿ ಶಿಲ್ಪ   ವಿನ್ಯಾಸಗಳಿಂದಲೂ    ಕಂಗೊಳಿಸುವ  ಹದಿನೆಂಟು  
 
    ಜಿನಾಲಯಗಳು ಮತ್ತು ಅಷ್ಟೆ ದೇವಾಲಯಗಳೂ ಇರುವ ಪೂಣ್ಯ ಭೂಮಿ. ‘‘ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯರ’’ ಧರ್ಮ ಪೀಠದ ಕ್ಷೇತ್ರ. ಚೌಟ ಅರಸರ ರಾಜಧಾನಿ. ಜೈನ ಸಂಸ್ಕ್ರತಿಯ ಕೇಂದ್ರ. ವಿದೇಶಿ ವ್ಯಾಪರವನ್ನು ಕೈಗೊಂಡು ಹೇರಳ ಸಂಪತ್ತನ್ನು ಗಳಿಸಿಕೊಂಡಿದ್ದ ಶ್ರೀಮಂತರ ನೆಲೆವೀಡು. ಹಿಂದುಗಳು, ಜೈನರೂ ಸಾಮರಸ್ಯದಿಂದ ಮತ್ತು ಪರಸ್ಪರ ಸಹಕಾರ , ಸಮತಾ ಭಾವದಿಂದ ನೆಲೆಸಿದ್ದ ಭದ್ರತೆಯ ಸ್ಥಳ. ಇಲ್ಲಿಯ ಸಾವಿರ ಕಂಬದ ಬಸದಿಯ ಗದ್ದಿಗೆ ಮಂಟಪದ ಉತ್ತರ ಭಾಗದ ಗೋಡೆಯ ಮೇಲಿರುವ ಶಿಲಾಶಾಸನವು ಇದನ್ನು “ತೌಳವದೇಶದೊಳಿರ್ಪುದು ಜಿನಧರ್ಮದಾಗರಂ ತಾನೆನೆ ಲೋಕ ಪ್ರಥಿತಮಾಗಿ ಭವ್ಯ ಜನಪ್ರಿಯಮುರು ವೈಭವಾನ್ವಿತಂ ವಂಶಪುರಂ’’ಎಂದು ವರ್ಣಿಸಲಾಗಿದೆ.

ಮೂಡುಬಿದ್ರಿಯನ್ನು ಮೂಡಬಿದುರೆ, ಮೂಡುಬಿದ್ರೆ, ಮೂಡುಬಿದ್ರಿ ಮತ್ತು ಭಾರತೀಯರಿಂದ ಮೂಲ್‍ಬಿದ್ರಿ ಎಂದು ಕರೆಯಲಾಗುತ್ತದೆ ಪ್ರಾಚೀನ ಶಿಲಾಶಾಸನಗ¼ಲ್ಲಿ ಇದನ್ನು ಬಿದಿರೆ ಎಂದು ಸಂಭೋದಿಸಲಾಗಿದೆ. ಪ್ರಾಯಂಶ ಇಲ್ಲಿ (ಬಂಬು)ಗಳು ವಿಶೇಷವಾಗಿ ಬೆಳೆಯುತ್ತಿದ್ದರಿಂದ ಈ ಹೆಸರು ಬಂದಿರ ಬೇಕು ಎಂದು ಹೇಳಲಾಗಿದೆ. ಇದನ್ನು ಸಂಸ್ಕ್ರತದಲ್ಲಿ “ವಂಶಪುರ,ವೇಣುಪುರ ಕ್ಷಮವೇಣುಪುರ ಮತ್ತು ಪ್ರಾಗ್ವೇಣುಪುರ” ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಸಂಸ್ಕ್ರತದಲ್ಲಿ “ವಂಶವೇಣು” ಎಂದರೆ ಬಿದಿರು ಎಂದೆ ಅರ್ಥ.

ಆದುದರಿಂದ ಈ ದೇಶಿಯ ಹಾಗೂ ಸಂಸ್ಕøತ ಹೆಸರುಗಳಿಗೆ ಬಿದಿರು ಬೆಳೆಯುತ್ತಿದ್ದುದೆ ಕಾರಣವಾಗಿದೆ ಎಂದು ಹೇಳಲಾಗಿದೆ. ಪಡುಕಡಲ ತೀರದಲ್ಲಿ ಪಡುಬಿದ್ರೆ ಎಂಬ ಇನ್ನೂದು ಊರಿದ್ದು ಅದಕ್ಕಿಂತ ಮೂಡುದಿಕ್ಕಿಗೆ ಬಿದಿರುಗಳ ಈ ಊರು ಇದ್ದುದರಿಂದ ಇದನ್ನು ಮೂಡುಬಿದಿರೆ ಎಂದು ಹೇಳಲಾಗಿರಬೇಕು. ಇವೆರೆಡು ದೇಶೀಯ ಹೆಸರುಗಳಾಗಿರುವುದರಿಂದ ಇಲ್ಲಿ ಬರುವ ಬಿದಿರು ಎಂಬ ಪದವು ಬಿದಿರನ್ನೆ ಸುಚಿಸುತ್ತದೆ. ಇಲ್ಲಿಯ ಶ್ರೀಮಠದಿಂದ ಭವ್ಯರು ವ್ರತಧಾರಣೆ ಮಾಡುತ್ತಿದರಿಂದ ಇದನ್ನು “ವ್ರತಪುರ” ಎಂದು ಕರೆಯಲಾಗುತ್ತಿತ್ತು.

ಈ ಹಿಂದೆ ಕಾರ್ಕಳ ತಾಲ್ಲೂಕಿನ ಒಂದು ಪ್ರಮುಖ ಹೊಬಳಿಯಾಗಿದ್ದ ಮೂಡುಬಿದ್ರೆಯು ಈಗ ಒಂದು ಪೂರ್ಣ ಪ್ರಮಾಣದ ತಾಲ್ಲೂಕಾಗಿ ರೂಪುಗೊಂಡಿದೆ. ಆದರೆ 1910ರಿಂದ1912 ರ ಜುಲೈ ತಿಂಗಳವರೆಗೆ ಮೂಡುಬಿದಿರೆಯು ಒಂದು ತಾಲ್ಲೂಕ್ಕೇ ಆಗಿತ್ತು. ಇಂದು ಮೂಡುಬಿದಿರೆ ಒಂದು ಪುರ ಸಭೆಯನ್ನು ಹೊಂದಿ ತೀವ್ರಗತಿಯಿಂದ ಪಟ್ಟಣವಾಗಿ ಬೆಳೆಯುತ್ತಿದೆ. ಸುತ್ತಲು ಸಾಮಾನ್ಯ ಸಮತಟ್ಟದ ನೆಲವನ್ನು ಹೊಂದಿರುವುದರಿಂದ ನೇರವಾಗಿ ಸಮುದ್ರದ ತಣ್ಣನೆಯ ಗಾಳಿ ಬೀಸುವ ಮೂಖಾಂತರ ಉತ್ತಮ ಹವಗುಣವನ್ನು ಹೊಂದಿದೆ. ಹಾಗೂ ಮಲೆನಾಡು ಪ್ರದೇಶಗಳಿಂದ ತಂಪಾದ ಗಾಳಿಯು ನಿರಂತರವಾಗಿ ಬೀಸುತ್ತದೆ. ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ 35 ಕಿ ಮೀ .ಪ್ರಸಿದ್ದ ಕ್ಷೇತ್ರ ಶೀ ಧರ್ಮಸ್ಥಳದಿಂದ 52 ಕಿ ಮೀ.ಕಾರ್ಕಳದಿಂದ 12 ಕಿ ಮೀ.ಉಡುಪಿಯಿಂದ 48 ಕಿ ಮೀ ಮತ್ತು ಚಿಕ್ಕಮಗಳೂರಿನಿಂದ 82 ಕಿ ಮೀ, ದೂರವಿರುತ್ತದೆ.

ಅಧ್ಯಾಯ 3 ಜಿನ ಮಂದಿರಗಳು ಅಥವಾ ಬಸದಿಗಳು

ಕ್ರಿ.ಶ. 15-16 ನೇ ಶತಮಾನದವು. ಇಲ್ಲಿಯ ಹದಿನೆಂಟು ಪ್ರಾಮುಖ್ಯ ಜಿನ ಮಂದಿರಗಳು ಅಥವಾ ಬಸದಿಗಳು ಹಾಗೂ ಅವುಗಳಲ್ಲಿ ಆರಾಧಿಸ್ಪಡುತ್ತಿರುವ ತೀರ್ಥಂಕರ ವಿವರ ಈ ಕೆಳಗಿನಂತಿವೆ.

1. ತ್ರಿಭುವನ ತಿಲಕ, ಚೂಡಾಮಣಿ ಬಸದಿ ಚಂದ್ರನಾಥ 2. ಗುರು ಬಸದಿ ಪಾಶ್ರ್ವನಾಥ 3. ಬಡಗ ಬದಿ ಚಂದ್ರನಾಥ 4. ಶೆಟ್ರಬಸದಿ ವರ್ಧಮಾನ ಸ್ವಾಮಿ 5. ಹಿರೇ ಬಸದಿ(ಅಮ್ಮನವರ ಬಸದಿ) ಶಾಂತಿನಾಥ 6. ಬೆಟೆಕೇರಿ ಬಸದಿ ವರ್ಧಮಾನ 7. ಕೋಟಿ ಶೆಟ್ಟ ಬಸದಿ ನೇಮೀಶ್ವರ 8. ವಿಕ್ರಮ ಶೆಟ್ಟಿ ಬಸದಿ ಆದಿನಾಥ 9. ಕಲ್ಲು ಬಸದಿ ಶೀತಲ (ಮಾಲಚಂದ್ರನಾಥ) 10. ದೇರಮ್ಮ ಶೆಟ್ಟಿ ಬಸದಿ ಆದಿನಾಥ 11. ಲೆಪ್ಪದ ಬಸದಿ ಚಂದ್ರನಾಥ 12. ಚೋಳ ಶೆಟ್ಟಿ ಪದ್ಮಪ್ರಭ 13. ಮಹಾದೇವ ಶೆಟ್ಟಿ ಆದಿನಾಥ 14. ಬೈಕಣತಿಕಾರಿ ಬಸದಿ ಅನಂತನಾಥ 15. ಕೆರೆ ಬಸದಿ ಮಲ್ಲಿನಾಥ 16. ಪಾಠಶಾಲೆ ಬಸದಿ ಮುನಿಸುವೃತ 17. ಮಠದ ಬಸದಿ ಪಾಶ್ರ್ವನಾಥ 18. ಪಡು ಬಸದಿ ಅನಂತನಾಥ

      ಸಾವಿರ ಕಂಬದ ಬಸದಿ (ಹೊಸ ಬಸದಿ, ತ್ರಿಭುವನ ತಿಲಕ, ಚೂಡಾಮಣಿ, 
       ಬಸದಿ)
       
     ಮುಡುಬಿದಿರೆಯಲ್ಲಿರುವ ಸಾವಿರ ಕಂಬದ ಬಸದಿ ಸಮಗ್ರ ಭಾರತ ದೇಶದಲ್ಲೇ ಪ್ರಸಿದ್ಧವಾದುದು. ಐರೋಪ್ಯ ವಾಸ್ತು ಕಲಾ ವಿಮರ್ಶಕರ ಅಭಿಪ್ರಾಯದನುಸಾರ ನೇಪಾಳಿ ವಾಸ್ತು ವಿನ್ಯಾಸದಲ್ಲಿ ಇದನ್ನು ನಿರ್ಮಿಸಿರುವುದರಿಂದ ಇದು ಸ್ವದೇಶಿ ಹಾಗೂ ವಿದೇಶಿ ಸಂದರ್ಶಕರನ್ನು ಆಕರ್ಷಿಸುತ್ತದೆ. ಅಷ್ಟು ದೂರದ ನೇಪಾಳ ದೇಶದ ವಾಸ್ತು ಶೈಲಿಯು ದಕ್ಷಿಣ ಭಾರತದ ಈ ಕರಾವಳಗೆ ಹೇಗೆ ಬಂದಿತೆಂಬುದು ಒಂದು ಆಶ್ರ್ಚಯ.
 
       ಒಂದು ಸ್ವಾತಂತ್ರ ಜಿನಾಲಯವನ್ನು ತೆಗೆದುಕೊಂಡರು ಕೊಡಾ ಗಾತ್ರದಲ್ಲಿ ಬಹಳ ಹಿರಿದಾದುದು. ಎರಡು ಅಂತಸ್ತುಗಳಿದ್ದು ಒಟ್ಟು ಮೂರು ನೆಲೆಗಳನ್ನು ಹೊಂದಿರುವುದರಿಂದ ಇದನ್ನು ತ್ರಿಭುವನ ಚೂಡಮಣಿ ಬಸದಿಯೆಂದೂ, ತ್ರಿಭುವನ (ಮೂರು ಲೋಕ)ಗಳಿಗೆ ತಿಲಕ ಪ್ರಾಯವಾಗಿ ಚೂಡಮನಿಯಷ್ಟು ಸುಂದರವಾಗಿರುವುದರಿಂದ ಇದನ್ನು “ತ್ರಿಭುವನ ತಿಲಕ ಚೂಡಮಣಿ” ಬಸದಿಯೆಂದು ಕರೆಯಲಾಗಿದೆ.

ಸಾವಿರದಷ್ಟು ಅಸಂಖ್ಯ ಕಂಬಗಳನ್ನು ಹೊಂದಿರುವುದರಿಂದ ಇದನ್ನು ಸಾವಿರ ಕಂಬದ ಬಸದಿ ಎಂದು ಕರೆಯಲಾಗುತ್ತದೆ. ಮುಖ್ಯವಾದ ಡೊಡ್ಡ ಕಂಬಗಳು ಅವುಗಳಿಗೆ ಅಲಂಕಾರವಾಗಿ ಜೋಡಿಸಿದ ಇತರ ಚಿಕ್ಕ ಕಂಬಗಳಿದ್ದು ಒಟ್ಟು ಮೂರು ನೆಲೆಗಳಿರುವ ಎಲ್ಲಾ ಕಂಬಗಳನ್ನು ಒಂದು ಸಾವಿರ ಕಂಬಗಳು ಆಗಬಹುದೆನಿಸುತ್ತದೆ. ಇದುವೆ ಈ ಜಿನಾಲಯದ ವೈಶಿಷ್ಟ್ಯ. ಕಂಬಗಳೆ ಒಂದು ಸಾವಿರವಿದ್ದರೆ ಅದು ಎಷ್ಟೊಂದು ಬೃಹತ್ ಪ್ರಮಾಣದ ಕಟ್ಟಡವನ್ನು ಆಧರಿಸಿ ಕೊಂಡಿರಕ್ಕಿಲ್ಲವೆಂಬ ಒಂದು ಪ್ರಶ್ನೆಯೆ? ಈ ಬಸದಿ ಬಹಳ ಡೊಡ್ಡದಾಗಿದೆ ಎಂಬುವುದನ್ನು ಪರೋಕ್ಷವಾಗಿ ಸೂಚಿಸುತ್ತದೆ. ಅದಕ್ಕಾಗಿಯೇ ಈ ಹೆಸರನ್ನು ಬಳಸಿರಬೇಕು. ನೋಟದಲ್ಲಿ ಸುಂದರವಾಗಿ, ರಚನೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವಂತೆ ಕಂಡು ಬಂದಿರುವುದರಿಂದ ಹಾಗೂ ಇಲ್ಲಿಯ ಬಸದಿಗಳ ಪೈಕಿ ತೀರಾ ಇತ್ತೀಚೆಗಿನದ್ದಾಗಿರುವುದರಿಂದ (ಕ್ರಿ. ಶ. 1430) ಇದು ಹೊಸ ಬಸದಿಯೆಂಬ ಹೆಸರನ್ನು ಪಡೆದುಕೊಂಡಿದೆ. ಇಲ್ಲಿ “ಭಗವಾನ್ ಚಂದ್ರನಾಥ” ಸ್ವಾಮಿಯು ಆರಾಧನೆಗೊಳ್ಳುವುದರಿಂದ ಇದು ಚಂದ್ರನಾಥ ಸ್ವಾಮಿ ಬಸದಿ. ಇದನ್ನು ಸಂದರ್ಶಿಸಲು ದಿನವಹಿ ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಇದನ್ನು ಯಾರು ನಿರ್ಮಿಸಿದರು ಯಾವಾಗ ನಿರ್ಮಿಸಿದರು, ಹೇಗೆ ನಿರ್ಮಿಸಿದರು, ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಬಂದೆಬರುತ್ತದೆ. ಮತ್ತು ಇಲ್ಲಿಗೆ ಬಂದೊಡನೆ ಎಲ್ಲರೂ ಕೇಳುವ ಪ್ರಶ್ನೆ? ನಿಜವಾಗಿಯೂ ಇಲ್ಲಿ ಸಾವಿರ ಕಂಬಗಳವೆಯೇ ಎಂದು. ಈ ಎಲ್ಲಾ ಪ್ರಶ್ನೆಗಳಿಗೆ ಇದೇ ಬಸದಿಯಲ್ಲಿರುವ ಶಾಸನಗಳು ಎಲ್ಲಾ ವಿವರಗಳನ್ನು ನೀಡುತ್ತದೆ. ಇವು ಬಸದಿಯ ಮೊದಲಿನ ಭೈರಾದೇವಿ ಮಂಟಪವನ್ನು ದಾಟಿ ಕೆಳಗಿಳಿದು ಬಸದಿಯ ಒಳಗಿರುವ ಚಿತ್ರಾದೇವಿ ಮಂಟಪಕ್ಕೆ ಹೋಗಿ ಅಲ್ಲಿ ನಿಂತು ಶ್ರೀ ಚಂದ್ರನಾಥ ಸ್ವಾಮಿಗೆ ಕೈ ಮುಗಿದು ನಿಲ್ಲುವ ಸ್ಥಳದ ಎದುರು ಭಾಗದ ಗೋಡೆಯ ಮೇಲಿವೆ. ಇವು ಸುಂದರವಾದ ಕನ್ನಡ ಅಕ್ಷರಗಳು ದುಂಡಗಾಗಿದ್ದು ಸ್ಪಷ್ಟವಾಗಿರುವುದರಿಂದ ಇದನ್ನು ಓದಲು ಯಾರೂ ಪ್ರಯತ್ನಿಸಬಹುದು.

ಸಂಸ್ಕøತ ಪದಭೂಯಿಷ್ಠವದ ಹಳೆಗನ್ನಡ ಭಾಷೆಯಲ್ಲಿ ಸಂಸ್ಕøತದಲ್ಲಿ ಪ್ರಸಿದ್ಧವಾಗಿರುವ ವೃತ್ತಗಳು ಮತ್ತು ಪದ್ಯಗಳನ್ನು ಬಳಸಿಕೊಂಡು ಕನ್ನಡ ಗದ್ಯ ಮಿಶ್ರಿತವಾಗಿ ಉನ್ನತ ಮಟ್ಟದ ಕಾವ್ಯ ಶೈಲಿಯಲ್ಲಿ ವಿವರಗಳನ್ನು ಬರೆಯಲಾಗಿದೆ. ಅರ್ಥ ಮಾಡಿಕೊಳ್ಳಲು ಮೇಲ್ನೋಟಕ್ಕೆ ಕಷ್ಟವೆಂದು ಕಂಡು ಬಂದರೂ ಇದು ನಾರಿಕೇಳಪಾಕದಂತೆ ರುಚಿಯಾಗಿದೆ. ಸಿಹಿಸವಿಯಾಗಿ, ವಿವರ ಸಂಪನ್ನವಾಗಿದೆ. ಇವುಗಳ ಪೈಕಿ ಒಂದು ಶಾಸನದ ಬರವಣಿಗೆಯ ಕಾಲ ಕ್ರೀ. ಶ . 1430ನೇ ಇಸವಿ ಜನವರಿ 29ನೇ ತಾರೀಕು.

ಈ ಶಾಸನದ ಪ್ರಾರಂಭದಲ್ಲಿ ಈ ಬಸದಿಯ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ನಮಸ್ಕರಿಸಿ ಮೂರು ಲೋಕಗಳ ಒಡೆಯನಾದ ಜಿನೇಶ್ವರನ ಶಾಸನವು ಜಗದಲ್ಲಿ ಶ್ರೇಯೋವಂತವಾಗಿ ವರ್ದಸಲಿ ಎಂದು ಪ್ರಾರ್ಥಿಸಲಾಗಿದೆ. ಮುಕ್ತಿ ಲಕ್ಷ್ಮೀ ವಲ್ಲಭನೂ ಆದ ಶ್ರೀ ಚಂದ್ರನಾಥ ಸ್ವಾಮಿಯು ನಮಗೆಲ್ಲರಿಗೂ, ಭೈರವ ಮಹಾರಾಜರಿಗೂ ಶುಭವನ್ನುಂಟುಮಾಡಲಿ ಎಂದು ಹಾರೈಸಲಾಗಿದೆ. ಸರೋವರದ ಮಧ್ಯದಲ್ಲಿ ಕಮಲ ಪುಷ್ಪವಿರುವಂತೆ ಸಾಗರದ ಮಧ್ಯದಲ್ಲಿ ಜಂಬೂದ್ವೀಪವಿದೆ. ಅದರ ಮಧ್ಯದಲ್ಲಿ ಕಣ್ರ್ನಿಕೆಯಂತೆ ಬಂಗಾರದ ಬೆಟ್ಟದಂತಿರುವ ಕೈಲಾಸ ಪರ್ವತವಿರುವುದು. ಆ ಸುರಗಿರಿಯ ದಕ್ಷಿಣ ದಿಕ್ಕಿಗೆ ಭರತ ಭೂಮಿಯು ಶೋಭಿಸುವುದು. ಅಲ್ಲಿ ಸರೋವರಗಳಿಂದ ಕೂಡಿ ಮನೋಹರವಾಗಿ ತುಳುವ ದೇಶವಿರುವುದು. ಇದು ಭರತದೇಶದಲ್ಲೇ ಪ್ರಸಿದ್ಧ. ಇಲ್ಲಿ ಮೂಡುಬಿದಿರೆ ಎಂಬ ವಿಶಿಷ್ಟವಾದ ಹಾಗೂ ಪ್ರಸಿದ್ಧವಾದ ನಗರವಿರುವುದು.

ಆ ಮೂಡುಬಿದಿರೆಯ ನಗರದಲ್ಲಿ ಶ್ರೀ ಅಭಿನವ ಚಾರುಕೀತ್ರಿ ಪಂಡಿತಾಚಾರ್ಯ ಸ್ವಾಮಿಗಳು ಮುನಿಮಹಾರಾಜರಂತೆ ಶ್ರೇಷ್ಠ ಮಠಾಧೀಶರಾಗಿರುವರು. ಅವರು ಅಖಿಲಶಾಸ್ತ್ರ ಪರಿಣತರು. ಕಿರೀಟಧಾರಿಗಳಾದ ರಾಜಮಹಾರಾಜರಿಂದ ಅವರ ಪಾದಪೂಜೆಯು ನಡೆಯುತ್ತಿರುತ್ತದೆ. ಅವರು ಪುನೀತ ಜಿನವ್ರತ ಶೀಲರು, ಶೀಲೋನ್ನತ್ತರು. ಅವರ ಪ್ರಶಾಂತ ಮಾತುಗಳು ಚಂದ್ರೋದಯವಾದಾಗ ಜೈನರ ಮನಃಕಮಲಗಳು ಅರಳುತ್ತವೆ. ಅವರ ತತ್ವೋಪದೇಶದ ಸ್ಪರ್ಶದಿಂದ ಚಿಗುರೊಡೆವ ಧರ್ಮಾಂಕುರಗಳು ಈ ಇಹಪರಗಳಲ್ಲಿ ಸ್ವಾದ ಸುಖಫಲಗಳ ಈ ಒಂದು ಸಮೂಹವನ್ನುನೀಡುತ್ತವೆ. ಅವರ ಸಾನಿಧ್ಯದಿಂದ ಪಾಪವೆಲ್ಲವು ಕಳೆದುಕುಲ ಕೋಟಿಗಳು ಉದ್ಧಾರಗೊಳ್ಳುತ್ತವೆ. ಅಂತಹ ಜಗದ್ವ್ಯಾಪಿ ಕೀರ್ತಿ ಇರುವ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯರನ್ನು ಈ ರೀತಿ ಸ್ತುತಿಸಲಾಗಿದೆ. ಶ್ರೀ` ಮದ್ರಾಯರಾಜಗುರು ಮಂಡಲಾಚಾಯ್ರ್ಯ ಮಹಾವಾದವಾದೀಶ್ವರ ರಾಯವಾದಿಪಿತಾಮಹಾ ಸಕಲ ವಿದ್ವಜ್ಜನ ಚಕ್ರವತ್ರ್ತಗಳುಮಪ್ಪ ಶ್ರೀಮದಭನವ ಚಾರುಕೀರ್ತಿ ಪಂಡಿತ ದೇವರು. ಈ ಜೈನ ಯತೀಶವರ ಚಾರುಕೀರ್ತಿ ಪಂಡಿತ ದೇವರ ಪ್ರಿಯ ಶಿಷ್ಯರಾದ ಬದಿರೆ ನಗರದ ಎಂಟು ಜನ ಪ್ರಜೆ ಸೆಟ್ಟಿಕಾರರು ಮತ್ತು ನಗರಾಡಳಿತ ನಡೆಸುವ ನಾಲ್ವರು ಎಳಮೆಗೊಳಗಾದ ಸಮಸ್ತ ಹಲರು ಪ್ರಾಚೀನ ಮತ್ತು ನೂತನ ಚೈತ್ಯಾಲಯಗಳ ನಿರ್ಮಾತ್ರರು. ಅವುಗಳ ಉದಧರಣದ ಶುದ್ಧ ಅಂತಃಕರಣವುಳ್ಳವರು. ಆಹಾರ, ಅಭಯ, ಔಷಧ, ಶಾಸ್ತ್ರ ದಾನದಲ್ಲಿ ಅಗ್ರಗಣ್ಯರು. ಸಮ್ಯಕ್ತ್ವಾದಿ ಅನೇಕ ಗುಣಗಳಿಂದ ಅಲಂಕೃತರಾದವರು. ಆ ಸಮಯದಲ್ಲಿ ಮೂರು ಸಮುದ್ರಗಳವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ತುರುಕರಾಜರ ಅಶವಸೀನೆಯನ್ನು ಮಣಿಸಿದ ಶ್ರೀ ಇಮ್ಮಡಿದೀವರಾಯ ªಮಹಾರಾಜನು ವಿಜಯನಗರ ಸಾಮ್ರಾಜ್ಯವನ್ನು ಆಳುತ್ತಿದ್ದ. ಅವನ ಬಿರುದುಗಳು ಮತಂಗರಾಜ ಸಿಂಧುರವರ ಕೋಟೆಮದ್ರ್ದನ, ಮೃಗೇಶ್ವರ, ಆಂಧ್ರನರೇಂದ್ರ ಸೈನ್ಯಸಾಗರ ಕಲಶೋದ್ಭವ, ಶ್ರೀಮದ್ರಾಜರಾಜಾಧಿರಾಜ, ರಾಜಪರೆಮೇಶ್ವರ, ಮೂರು ರಾಯರ ಗಂಡ, ಪೂರ್ವ ದಕ್ಷಿಣ ಪಶ್ಚಿಮ ಸಮುದ್ರಾಧಿ ಪತಿ, ಗಜವೇಂಟೆಕಾರ. ಇಲ್ಲಿಯೇ ಇರುವ ಇನ್ನೋಂದು ಶಾಸನದ ಅನುಸಾರ, ಶ್ರೀ ವೀರದೇವರಾಯ ಮಹಾರಾಜನ ರಾಜ್ಯಾಭ್ಯುದಯ ಕಾಲದಲ್ಲಿ ಈ ಪೃಥ್ವೀಕಾಂತೆಗೆ ಮಂಗಲಾಭರಣವೆನಿಸಿದ ಮಂಗಳೂರು ರಾಜ್ಯವನ್ನು ನಾಗಮಂಗಳದ ದೀವರಾಜ ಒಡೆಯರು ಆಳುತ್ತಿದ್ದ ಶುಭ ಸಮಯದಲ್ಲಿ ಸಾಮ್ರಾಜ್ಯದ ಶ್ರೀ ಮನ್ಮಹಾಪ್ರಧಾನ ಪೆರುಮಾಳದೇವ ಡಂದನಾಯಕನು ಶ್ರೀ ವಿಜಯನಗರ ಸಾಮ್ರಾಜ್ಯದ ಸಾರ್ವಭೌಮನ ನಿರೂಪದಿಂದ ದೇವರಾಜ ಒಡೆಯರ ಮೂಲಕ ಶ್ರೀ ಮದ್ರಾಯ ರಾಜಗುರು, ವಿದ್ವಜ್ಜನ ಚಕ್ರವರ್ತಿ ಶ್ರೀ ಮದಭಿನವ ಚಾರುಕೀರ್ತಿ ಪಂಡಿತ ದೇವರುಗಳಿಗೆ ಈ ಚೈತ್ಯಾಲಯದ ನಿರ್ಮಾಣಾರ್ಥವಾಗಿ ಕೊಟ್ಟ ಕ್ಷೇತ್ರದಲ್ಲಿ ಮೂಡುಬಿದಿರೆಯ ಎಂಟು ಪ್ರಜೆ ಶೆಟ್ಟಿಕಾರರು ನಾಲ್ವರು ಎಳಮೆಗಳೊಳಗಾದ ಸಮಸ್ತ ಹಲರು ಮತ್ತು ಶಾಲಿಕಿನಾಡು ಚೌಟರು ಮುಖ್ಯರಾದವರು ಬಲ್ಲಾಳುಗಳು ಸಹಾಯದಿಂದ ಈ ಭವ್ಯ ಚೈತ್ಯಾಲಯವನ್ನು ನಿರ್ಮಿಸಲು ಪ್ರಾರಂಭಿಸಿದರು. ಅಂದು ಶಾಲಿವಾಹನ

ಶಕ 1351 ಸೌಮ್ಯ ಸಂವತ್ಸರದ ಮಾಘ ಶುದ್ಧ ಪಂಚಮಿ ಗುರುವಾರದ ಶುಭದಿನ ಅಂದರೆ ಕ್ರಿ. ಶ. 1430ನೇ ಇಸವಿ ಜನವರಿ 29ನೇ ತಾರೀಕು ಈ ಬಸದಿಯ ನಿರ್ಮಾಣ ಕಾರ್ಯವು ಪ್ರಾರಂಭವಾಯಿತು. ಸೂಕ್ತವಾದ ಅದಿಷ್ಠಾನಗಳನ್ನು ಹಾಕಿ ಪ್ರಬಲವಾದ ಗೋಡೆಗಳನ್ನು ನಿರ್ಮಿಸಲಾಯಿತು. ಸರಳವಾದ ಸುಂದರ ಬಂಬಗಲನ್ನು ಕಂಬಗಳ ಸಮೂಹವನ್ನು ನಡೆಯಲಾಯಿತು. ಶಿಲ್ಪಾ ಕಲಾಕೃತಿಗಳನ್ನು ಜೋಡಿಸಲು ಅನುಕೂಲವಾದ ಕಂಬಗಳನ್ನು ಛಾವಣಿಯನ್ನು ನಿರ್ಮಿಸಲಾಯಿತು. ಛಾವಣಿಯ ಚೌಕಟ್ಟಿಗಿಂತ ಮೆಲ್ಭಾಗವು ಹೆಚ್ಚು ವಿಸ್ತಾರವಾಗಿ ನಿರ್ಮಾಣಗೊಂಡಿತು. ಇದನ್ನು ನೋಡಿದಾಗ ಕುಲಗಿರಿಗೆ ರೆಕ್ಕೆ ಬಂದಿರುವಂತೆ ಕಂಡು ಬರುತ್ತದೆ. ನಿಜವಾಗಿ ಈ ವಾಸ್ತು ವಿನ್ಯಾಸವನ್ನು ಕಂಡು ವಿದೇಶಿ ಸಂದರ್ಶಕರು ಮುಂದೆ ಈ ಬಸದಿಯು ನೇಪಾಳಿ ಶೈಲಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಲು ಕಾರಣವಾಯಿತು. ದ್ವಾರಗಳಲಿ ಚಿತ್ರ ಕಲಾಕೃತಿಗಳನ್ನು, ಶಿಲೆಗಳಲಿ ಬಳ್ಳಿಯ ಆಕಾರಗಳನ್ನು ಮೂಡಿಸಲಾಯಿತು. ಆನ್ಯರಿಗೆ ತಿಳಸಲೆಂದು ಸೃಷ್ಟಿಕತನಾದ ಬ್ರಹ್ಮನು ತಂದಿರಿಸಿದ ತ್ರಿಲೋಕ ಸಂಕುಲದಂತೆ ಈ ಜೆನಾಲಯವು ಎಲ್ಲಾ ಅಂಶಗಳನ್ನು ಹೊಂದಿ ಕಂಗೊಳಿಸತೊಡಗಿತ್ತು.

ಸಾವಿರ ಕಂಬ ಬಸದಿಯ ಹಿಂಬದಿಯ ಒಂದು ನೋಟ

  ಈ ಜಿನಾಲಯವು ಪೂರ್ಣಗೊಂಡಾಗ ಬಹು ರಮ್ಯವಾಗಿ ಕಂಗೊಳಿಸುತ್ತಿತ್ತು. ಪರ್ವತಗಳನ್ನು ತನ್ನ ವಜ್ರಾಯುದ್ಧದಿಂದ ಪುಡಿ ಮಾಡುವ ದೇವೇಂದ್ರನಿಗೆ ಹೆದರಿ ರೋಹಣ ಪರ್ವತವು ಬಂದು ಈ ಮೂಡುಬಿದಿರೆಯ ಅಹಿಂಸಾ ಕ್ಷೇತ್ರದಲ್ಲಿ ನೆಲೆ ನಿಂತಿತು ಎನ್ನುವಂತೆ ಕಾಣುತ್ತಿತ್ತು. ಧನಾಧಿಪತಿ ಕುಬೇರನು ರಾಕ್ಷಸರ ಹೆದರಿಕೆಯಿಂದ ತನ್ನ ಪುಷ್ಪಕ ವಿಮಾನವನ್ನು ತಂದು ಇಲ್ಲಿರಿಸಿದಂತೆಯೂ ದಶದಿಕ್ಕುಗಳಲ್ಲಿ ಸ್ಥಳ ಸಾಕಾಗದೆ ಕೈಲಾಸ ಪರ್ವತವೇ ಇಲ್ಲಿಗೆ ಬಂದಿಳಿದಿರುವಂತೆಯೂ ಬಹಳ ಗಂಭೀರವಾಗಿ ಕಾಣುತಿತ್ತು. ಇದರ ಚಂದವನ್ನು ವರ್ಣಿಸಲು ಸಾದ್ಯವೇ ಇಲ್ಲದಂತ್ತಿತ್ತು.

ಗುರು ಬಸದಿ:

  ಶ್ರೀ ಮಠದ ಭಟ್ಟಾರಕರುಗಳ ಪಟ್ಟಾಭಿಷೇಕ ಇಲ್ಲಿ ನಡೆಯುವುದರಿಂದ ಈ ಬಸದಿಯನ್ನು ಗುರು ಬಸದಿಯೆಂದು ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ದಿಗಂಬರ ಮುನಿಯೊಬ್ಬರು ಪ್ರಾತಃ ಕಾಲದ ಶೌಚಕ್ಕಾಗಿ ಇಲ್ಲಿಯೆ ಕಾಡಿಗೆ ನಡೆದರು. ಎಲ್ಲೆಲ್ಲೂ ಬಿದಿರಿನ ಮೆಳೆಗಳು, ಮುಳ್ಳಿನ ಪೊದರುಗಳು ಇದ್ದವು. ತನ್ನ ದೈಹಿಕ ಶುದ್ಧಿಯನ್ನು ಮುಗಿಸಿ ಹಿಂದಿರುಗಿ ಬರುತ್ತಾ ಒಂದು ಆಶ್ಚರ್ಯದ ದೃಶ್ಯವನ್ನು ಕಂಡರು. ಇಲ್ಲಿಯ ಕಲ್ಲಿನ ಮರಿಗೆ ಒಂದರಲ್ಲಿ ಎದುರುಬದುರಾಗಿ ನಿಂತು ಹುಲಿ ಮತ್ತು ಧನ ನೀರನ್ನು ಕುಡಿಯುತ್ತಿದ್ದವು. ತಮ್ಮ ನೈಜ ದ್ವೇಷವನ್ನು ಮರೆತು ದನದ ಕರು ಹುಲಿಯ ಮೊಲೆ ಹಾಲನ್ನೂ ಹುಲಿಮರಿ ದನದ ಕೆಚ್ಚಲ ಹಾಲನ್ನೂ ಹೀರುತ್ತಿದ್ದವು. ಇದನ್ನು ಕಂಡ ಮುನಿಗಳು ಇಲ್ಲಾವುದೋ ವಿಶೇಷ ಪುಣ್ಯ ಸಂಚಯವಿದೆಯೆಂದು ಭಾವಿಸಿ ಅತ್ತಿತ್ತ ಹುಡುಕಾಡ ತೊಡಗಿದರು. ಬಿದಿರ ಮರೆಯಲ್ಲಿ ಭಗವಾನ್ ಪಾಶ್ರ್ವನಾಥ ಸ್ವಾಮಿಯ ಭವ್ಯ ಮೂರ್ತಿಯನ್ನು ಕಂಡು ಪರಮಾಶ್ಚರ್ಯ ಹೊಂದಿ ಬಿದಿರ ಮರಗಳನ್ನು ಕಡಿಸಿ ಅಲ್ಲಿಯೆ ಆ ಮೂರ್ತಿಯನ್ನು ಪ್ರತಿಷ್ಟಾಪಿಸಿದರು ಎಂದು ಹೇಳಲಾಗಿದೆ. ಆದುವೇ ಇಂದಿನ ಪಾಶ್ರ್ವನಾಥ ಸ್ವಾಮಿ ಬಸದಿ.

ವಿಕ್ರಮ ಶೆಟ್ಟಿ ಬಸದಿ: ಇದು ಶಿಲಾನಿರ್ಮಿತವಾದ ಭದ್ರ ಬಸದಿ. ಗುರುಬಸದಿಯ ಎದುರಲ್ಲಿದೆ. ಇದನ್ನು ವಿಕ್ರಮ ಶೆಟ್ಟಿ ಎಂಬ ಶ್ರಾವಕ ಕಟ್ಟಿಸಿದ್ದ. ಮುಂಭಾಗದಲ್ಲಿ ಕಲಾತ್ಮಕವಾದ ಸುಂದರ ಮಾನಸ್ತಂಭವಿದೆ. ಭಗವಾನ್ ಆದಿನಾಥ ಸ್ವಾಮಿಯ ಕೃಷ್ಣ ಶಿಲಾ ನಿರ್ಮಿತ ಪದ್ಮಾಸನ ಭಂಗಿಯ ಮೂರ್ತಿಯು ವಜ್ರ ಲೇಪದಿಂದ ಕಂಗೊಳಿಸುತಿದೆ. ಇಲ್ಲಿಯ ಮುನಿವಾಸದಲ್ಲಿ ಕ್ರಿ. ಶ. 1725ರಲ್ಲಿ ಶಾಂತಿಕೀರ್ತಿ ಮುನಿ ಎಂಬವರು ಭಗವಾನ್ ತೀರ್ಥಂಕರರ ಕುರಿತ್ತಾಗಿಯೇ ಸುಮಾರು 8-10 ಕಾವ್ಯಗಳನ್ನು ರಚಿಸಿದ್ದರು.

ಬಸದಿಯ ಬಲಬದಿಯಲ್ಲಿ ಆಯತಾಕಾರದ ಶಿಲಾಮಯ ಗುಡಿಯಲ್ಲಿ 24 ತೀರ್ಥಂಕರರ ಸುಂದರ ಬಿಂಬಗಳು ಶೋಭಿಸುತ್ತವೆ.

ಶೆಟ್ಟರ ಬಸದಿ

ನವರತ್ನಾದಿಗಳ ಪರೀಕ್ಷೆಯಲ್ಲಿ ಖ್ಯಾತಿ ಪಡೆದಿದ್ದ ಬಂಗೋತ್ತಮ ಶೆಟ್ಟಿ ಎಂಬುವವನು ಕಟ್ಟಿಸಿದ್ದರಿಂದ ಈ ಬಸದಿಯನ್ನು ಶೆಟ್ಟರ ಬಸದಿಯೆಂದು ಕರೆಯಲಗುತ್ತದೆ. ಉತ್ತರಾಭಿಮುಖವಾಗಿ ಇದು ಬಹು ಬೃಹತ್ತಾಗಿದೆ. ಇಲ್ಲೇ ಹಿಂದೊಮ್ಮೆ ಅನೇಕ ಗ್ರಂಥಗಳ ಸಂಗ್ರಹವೊಂದು ಲಭ್ಯವಾಗಿತ್ತು. ಇದರ ಎಡ ಭಾಗದಲ್ಲಿ ಚವ್ವೀಸ ತೀರ್ಥಂಕರರ ಬಸದಿ ಇದೆ. ಈ ಮೂರ್ತಿಗಳ ಎಡ ಬಲದಲ್ಲಿರುವ ಸರಸ್ವತಿ ಮತ್ತು ಪದ್ಮಾವತಿ ದೇವಿಯರ ಮೂರ್ತಿಗಳೂ, ಕುದುರೆಯನ್ನೇರಿರುವ ಬ್ರಹ್ಮಯಕ್ಷನ ವಿಗ್ರಹವೂ ತುಂಬಾ ಕಲಾತ್ಮಕವಾಗಿದೆ.

ಕಲ್ಲು ಬಸದಿ:

   ಈ ಜಿನಾ ಮಂದಿರವು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣಗೋಂಡಿದೆ. ಆದುದರಿಂದ ಇದು ಕಲ್ಲು ಬಸದಿಯೆಂದು ಪ್ರಸಿದ್ದಿ. ಆದಿಯಲ್ಲಿ ಇಲಿ ಭಗವಾನ್ ಚಂದ್ರನಾಥ ಸ್ವಾಮಿಯ ವಿಗ್ರಹವು ಆರಾದಿಸಲ್ಪಡುತಿತ್ತು. 1934 ರಲ್ಲಿ ಬಸದಿಯ ಜೀರ್ಣೊದ್ಧಾರವಾಗುತ್ತಿದ್ದ ಸಂದರ್ಭ ಅಮೃತ ಶಿಲೆಯ ಶ್ರೀ ಶೀತಲಯವಾಥ ತೀರ್ಥಂಕರರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಂಚಕಲ್ಯಾಣವನ್ನು ನೆರೆವೇರಿಸಲಾಗಿತ್ತು.

ಲೆಪ್ಪದ ಬಸದಿ:

ಈ ಬಸದಿಯೂ ಶಿಲಾಮಯವಾಗಿದ್ದು ಉನ್ನತ ಅಸ್ತಿವಾರದ ಮೇಲೆ ನಿರ್ಮಾಣಗೊಂಡಿದೆ. ಎದುರಲ್ಲಿ ಮಾನಸ್ತಂಭವಿದೆ. ಲೆಪ್ಪ ಎಂದರೆ ಕೆಲವು ವಿಶೇಷ ದ್ರವ್ಯಗಳನ್ನು ಬೆರಸಿರುವ ಮಣ್ಣು. ಈ ಮಿಶ್ರಣದಿಂದ ಮಾಡಿದ 4 ಅಡಿ ಎತ್ತರದ ಬಿಳಿ ವರ್ಣದ ಪರ್ಯಂಕಾಸನದಲ್ಲಿ ಮಂಡಿತರಾದ ಶ್ರೀ ಚಂದ್ರನಾಥ ಸ್ವಾಮಿಯ ವಿಗ್ರಹವು ಗರ್ಭಗುಡಿಯಲ್ಲಿ ಸ್ಥಿತವಾಗಿದೆ. ಪ್ರತಿವರ್ಷ ಇಲ್ಲಿ ವೈಭವದಿಂದ ವಾರ್ಷಿಕೋತ್ಸವ, ರಥೋತ್ಸವಗಳು ನಡೆಯುತ್ತವೆ.

ದೇರಮ್ಮ ಶೆಟ್ಟಿ ಬಸದಿ:

ದೇರಮ್ಮ ಶೆಟ್ಟಿ ಎಂಬ ಶ್ರಾವಕನು ಕಟ್ಟಿಸಿದ ಈ ಜಿನ ಮಂದಿರವು ಪಶ್ಚಿಮಾಭಮುಖವಾಗಿದೆ. ಇಲ್ಲಿ ಮೂರು ಮಂಟಪಗಳು, ಗರ್ಭಗೃಹ ಮಂಟಪ, ನಮಸ್ಕಾರ ಮಂಟಪ ಮತ್ತು ಗೋಪುರ ಮಂಟಪ ಮಾತ್ರವಿದ್ದು ಎರಡು ನೆಲೆಗಳಿವೆ. ರತ್ನತ್ರಯರಾದ ಅರ, ಮಲ್ಲಿ ಮುನಿಸುವ್ರತರ ಮೂರು ಮೂಲ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿಯ ವಿಶೇಷತೆಯೆಂದರೆ ಗರ್ಭಗೃಹದಲ್ಲಿ ಮೂಲನಾಯಕರ ಮುಂಬಾಗ ಹರಿಪೀಠದಲ್ಲಿ 24 ತೀಂರ್ಥಂಕರರ ಬಿಳಿ ಶಿಲೆಯ ಮೂರ್ತಿಗಳಿರುವುದು. ಗರ್ಭಗೃಹ ಆಯಾತಾಕಾರದಲ್ಲಿದೆ.

ಚೋಳ ಶೆಟ್ಟಿ ಬಸದಿ:

    ಈ ಜಿನ ಚೈತ್ಯಾಲಯವನ್ನು ಚೋಳ ಶೆಟ್ಟಿ ಎಂಬ ಶ್ರಾವಕ ಕಟ್ಟಿಸಿದ್ದ. ಇದು ಕೂಡಾ ಶಿಲಮಯವಾದುದು. ಮೂಲ ನಾಯಕ ಭಗವಾನ್ ಪದ್ಮಪ್ರಭ ಸ್ವಶಮಿಯ ಕರಿಶಿಲೆಯ ಬಿಂಬ ವಜ್ರಲೇಪನದಿಂದಾಗಿ ಹೊಳೆಯುತ್ತದೆ. ಪರ್ಯಂಕಾಸನದಲ್ಲಿ ಆಸೀನ ಸ್ಥಿತ ಈ ಜಿನಬಿಂಬವು ಕಂಚಿಯ ಪೀಠ ಪ್ರಭಾವಳಿಯನ್ನು ಹೊಂದಿ ಆಕರ್ಷಕವಾಗಿದೆ.

ಮಹಾದೇವ ಶೆಟ್ಟಿ ಬಸದಿ:

ಇದನ್ನು ಮಾದಿ ಶೆಟ್ಟಿ ಯಾನೆ ಮಹಾದೇವ ಶೆಟ್ಟಿ ಎಂಬ ಶ್ರಾವಕನು ಕಟ್ಟಿಸಿದ್ದ. ಗರ್ಭಗೃಹದಲ್ಲಿ ಖಡ್ಗಾಸನ ಭಂಗಿಯ ಐದು ಅಡಿ ಎತ್ತರದ ಕೃಷ್ಣ ಶಿಲೆಯ ಭಗವಾನ್ ಆದಿನಾಥ ಸ್ವಾಮಿಯ ಮೂರ್ತಿ ಇದೆ. ಇದರ ಪ್ರಭಾವಲಯದಲ್ಲಿ 24 ತೀರ್ಥಂಕರರ ಚಿಕ್ಕ ಮೂರ್ತಿಗಳನ್ನು ಕಾಣಬಹುದು.

ಬೈಕಣತಿಕಾರಿ ಬಸದಿ:

ಈ ಬಸದಿಯ ನಿರ್ಮಾತೃ ಬೈಕಣತಿಕಾರಿ ಎಂಬ ಶ್ರಾವಕನಾಗಿದುದರಿಂದ್ದ ರೂಢಿಯಲಿ ಇದನ್ನು ಬೆಂಕಿ ಬಸದಿ ಎಂದು ಕರೆಯಲಾಗುತ್ತದೆ. ಇಲ್ಲಿ ಭಗವಾನ್ ಶ್ರೀ ಆದಿನಾಥ ಸ್ವಾಮಿಯ ಕಂಗೊಳಿಸುವ ಶಿಲಾವಿಗ್ರಹವು ಗರ್ಭಗುಡಿಯಲ್ಲಿದೆ. ಪ್ರಭಾವಲಯದಲ್ಲಿ ಸುತ್ತಲೂ 24 ತೀರ್ಥಂಕರರ ವಿಗ್ರಹವನ್ನು ನೋಡಬಹುದು. ಇಲ್ಲೊಂದು ಅಪೂರ್ವವಾದ ಸ್ಫಟಿಕದ ಸದ್ಧರ ಬಿಂಬವಿದೆ. ಬಸದಿಯ ಮುಂಭಾಗದ ಪ್ರಾಂಗಣದಲ್ಲಿ ವೀಣಾಪಾಣಿಯಾದ ಸರಸ್ವತಿಯ ದೇಗುಲವಿದೆ. ಇದನ್ನು ಇಲ್ಲಿಯ ಅರ್ಚಕರಾದ ದಿ|| ಬಿ. ಈನರಾಜ ಇಂದ್ರರು ನಿರ್ಮಾಣ ಮಾಡಿರುವರು. ದಸರೆಯ ಹತ್ತು ದಿನಗಳಲ್ಲಿ ಇಲ್ಲಿ ಶಾರದಾ ಪೂಜೆ ನಡೆಯುತ್ತದೆ. ಇತ್ತೀಚೆಗೆ ಇಲ್ಲಿ ಸರಸ್ವತಿ ಮತ್ತು ಕ್ಷೇತ್ರಪಾಲ ಪ್ರತಿಷ್ಠೆಯೂ ಆಗಿದೆ.

ಕೆರೆಬಸದಿ:

ಈ ಜಿನ ಮಂದಿರವು ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಮೂಡುಬಿದಿರೆ ಕಲ್ಸಂಕದ ಬಳಿ ಬಲಬದಿಯಲ್ಲಿ ಎತ್ತರದ ಮುರಕಲ್ಲಿನ ಆವರಣದೊಳಗಿದೆ. ಎದುರುಗಡೆ ಕೆರೆ ಇರುವುದರಿಂದ ಕೆರೆ ಬಸದಿ ಎಂಬ ಹೆಸರು ಬಂತು. ಖಡ್ಗಾಸನ ಭಂಗಿಯಲ್ಲಿರುವ ಮೂರು ಅಡಿ ಎತ್ತರದ ಕೃಷ್ಣ ಶಿಲೆಯ ಮನೋಜ್ಞವಾದ ಶ್ರೀ ಮಲ್ಲಿನಾಥ ಸ್ವಾಮಿಯ ಮೂಲ ನಾಯಕ ಮೂರ್ತಿ ಗರ್ಭಗುಡಿಯಲ್ಲಿದೆ.

   	ಪಾಠ ಶಾಲೆ ಬಸದಿ:

ಶ್ರೀ ಮಠದ ಮುಂಭಾಗದಲ್ಲಿ ಜೈನ ಪಾಠ ಶಾಲೆಯ ಮಧ್ಯದಲ್ಲಿ ಈ ಬಸದಿ ಇದೆ. ಇಲ್ಲಿ ಎರಡು ಅಡಿ ಎತ್ತರದ ವಿಶಿಷ್ಟವಾದ ಬಿಳಿಶಿಲೆಯ ಖಡ್ಗಾಸನ ಶ್ರೀ ಮುನಿಸೂವ್ರತ ಸ್ವಾಮಿಯು ವಿರಾಜಮಾನರಾಗಿದ್ದಾರೆ. ಶನಿಪೀಡೆಯುಳ್ಳವರು ಇಲ್ಲಿ ಕ್ಷೀರಾಭಷೇಕ ಪೂಜೆ, ನವಗ್ರಹ ಶಾಂತಿ ಇತ್ಯಾದಿ ಆರಾಧನೆ ಮಾಡಿಸಿಕೊಳ್ಳುತ್ತಾರೆ.

ಕೋಟಿ ಶೆಟ್ಟರ ಬಸದಿ:

ಕ್ರಿ. ಶ. 1401 ರಲ್ಲಿ ಕೋಟಿ ಶೆಟ್ಟಿ ಎಂಬ ಶ್ರಾವಕನು ನಿರ್ಮಿಸಿದುದಾಗಿ ಇಲ್ಲಿಯ ಶಾಸನದಿಂದ ತಿಳಿದು ಬರುತ್ತದೆ. ಮೂಲ ನಾಯಕ ಭಗವಾನ್ ನೇಮಿನಾಥ ತೀರ್ಥಂಕರರು. ಗರ್ಭಗೃಹ ಚತುರಸ್ರಾಕಾರದಲ್ಲಿದ್ದುಪೂರ್ಣ ಬಸದಿ ಆಯತಾಕಾರವನ್ನು ಹೊಂದಿದೆ. ಒಟ್ಟು ನಾಲ್ಕು ಮಂಟಪಗಳಿವೆ. ಒಟ್ಟು ನೆಲೆಗಳು ಎರಡಿದ್ದು ಎರಡನೇ ನೆಲೆ ಶಿಲಾಮಯವಾಗಿದೆ.

  ಬೆಟ್ಕೇರಿ ಬಸದಿ:
      ಈ ಬಸದಿ  ಜೈನ ಪೇಟೆಯ ಕೊನೆಯಲ್ಲಿ ಬೆಟ್ಟದ ಕೇರಿಯ ಬದಿಯಲ್ಲಿದ್ದು ವಿಶಾಲವಾದ ಆವರಣವನ್ನು ಹೊಂದಿದೆ. ಮೂಲನಾಯಕ ಪರ್ಯಂಕಾಸನದಲ್ಲಿ ಕುಳಿತಿರುವ ಬಿಳಿಶಿಲೆಯ ಭಗವಾನ್ ಶ್ರೀ ಮಹಾವೀರ ಸ್ವಾಮಿ . ರಸ್ತೆಯಿಂದ ಎತ್ತರದಲ್ಲಿ ವಿರಾಜಮಾನವಾಗಿರುವ ಈ ಮೂರ್ತಿ ರಸ್ತೆಯಲ್ಲಿ ಸಂಚರಿಸುವವರಿಗೆಲ್ಲ ದರ್ಶನ ನೀಡುತ್ತದೆ. ಶ್ರೀ ಜೈನ ಮಠದ ಹಿಂದಿನ ಪೂಜ್ಯ ಶ್ರೀಗಳವರು ಅಸ್ಸಾಂನ ಶ್ರಾವಕ ಬಂಧುಗಳೀರ್ವರಿಂದ ಜೀಣೊಂೀದ್ಧಾರ ಮಾಡಿಸಿದರು. ಇಲ್ಲಿಗೆ ಪ್ರಭಾಚಂದ್ರ ಮುನಿಗಳೆಂಬ ತ್ಯಾಗಿಗಳು ಆಗಾಗ ಭೇಟಿ ನೀಡುತ್ತಿದ್ದರು. ಇವರ ತತ್ವೋಪದೇಶದಿಂದ ಪ್ರಭಾವಿತನಾದ ಪದ್ಮನಾಭನೆಂಬ ಜೈನ ಕವಿಯು ಕ್ರಿ. ಶ. 1751 ರಲ್ಲಿ ಮುಲ್ಕಿ ಸಾಮಂತರ ಅರಮನೆಯಲ್ಲಿ ಶ್ರೀ ರಾಮಚಂದ್ರ ಚರಿತ್ರವೆಂಬ ಅಸಂಪೂರ್ಣ ಸಾಂಗತ್ಯ ಕಾವ್ಯವನ್ನು ಪೂರ್ಣಗೊಳಿಸಿದ್ದ.

ಹಿರೇ ಬಸದಿ:

ಭಗವಾನ್ ಶಾಂತಿನಾಥ ಸ್ವಾಮಿ ಈ ಜಿನ ಚೈತ್ಯಾಲಯದ ಮೂಲ ನಾಯಕ. ಕೃಷ್ಣ ಶಿಲೆಯಲ್ಲಿ ತಯಾರಿಸಿದ ಖಡ್ಗಾಸನ ಭಂಗಿಯ ಮೂರು ಅಡಿ ಉನ್ನತವಾದ ಮೂರ್ತಿ ಇದು. ಬಸದಿಯ ಬಲಗಡೆಯಲ್ಲಿ 24 ತೀರ್ಥಂಕರರ ಮತ್ತು ಸರಸ್ವತಿ ದೇವಿಯರ ಮೃಣ್ಮೂರ್ತಿಗಳು ಮನೋಹರ ಹಾಗೂ ಸಂದರ್ಶನಿಯವಾಗಿದೆ. ಪ್ರತಿಯೊಂದು ತೀರ್ಥಂಕರರ ಮೂರ್ತಿಗೂ ಶಾಸ್ತ್ರೋಕ್ತವಾದ ಮೂಲವರ್ಣವನ್ನೆ ಕೊಡಲಾಗಿದೆ. ಈ ಮೂರ್ತಿಗಳನ್ನು ದೀಪಣ್ಣ ಶೆಟ್ಟಿ ಎಂಬ ಶ್ರಾವಕನು ಮಾಡಿಸಿದ್ದನೆಂದು ಹೇಳಲಾಗುತ್ತದೆ. ಈ ಬಸದಿಯಲ್ಲಿ ಕ್ರಿ. ಶ. ಸುಮಾರು 1560 ರಲ್ಲಿದ್ದ ನೇಮಣ್ಣ ಅಥವಾ ನೇಮಿವ್ರತಿ ಎಂಬ ಕವಿಯು ಜ್ಞಾನ ಭಾÀಸ್ಕರ ಚರಿತ್ರೆ ಮತ್ತು ಸುವಿಚಾರ ಚರಿತೆ ಎಂಬ ಎರಡು ಕನ್ನಡ ಸಾಂಗತ್ಯ ಕೃತಿಯನ್ನು ರಚಿಸಿದ್ದ. ಸುಮಾರು ಇದೇ ಸಮಯದಲ್ಲಿದ್ದ ಪ್ರಸಿದ್ಧನಾದ ಕವಿ ರತ್ನಾಕರ ವರ್ಣಿಯು ಭರತೇಶ ವೈಭವ ಎಂಬ ಮಹಾಕಾವ್ಯವನ್ನು, ತ್ರಿಲೋಕ ಶತಕ, ಅಪರಾಜಿತೇಶ್ವರ ಶತಕ ಮತ್ತು ರತ್ನಾಕರ ಶತಕಗಳನ್ನು ರಚಿಸಿದ್ದ.

ಮಠದ ಬಸದಿ:

ಮೂಡುಬಿದಿರೆ ಶ್ರೀ ಜೈನ ಮಠದ ಪೀಠಾಧಿಪತಿಗಳಾದ ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮಿಗಳು ವಾಸವಿರುವ ಮಠಕ್ಕೆ ಸಂಬಂಧಿಸಿದ ಬಸದಿ ಇದು. ಗಾತ್ರದಲ್ಲಿ ಚಿಕ್ಕದು. ಮೂಲನಾಯಕ ಭಗವಾನ್ ಪಾಶ್ರ್ವನಾಥ ಸ್ವಾಮಿ. ಇಲ್ಲಿಯ ವಿಶೇಷವೆಂದರೆ ಆರಾಧನೆಯ ದೇವಿ ಮಾತೆ ಪದ್ಮಾವತಿಯೊಂದಿಗೆ ಶ್ರೀ ಮಠದ ಪಟ್ಟದ ಆರಾಧ್ಯದೇವಿ ಕೊಷ್ಮಾಂಡಿನಿ ದೇವಿ ಆರಾದಿಸಲ್ಪಡುತ್ತಿದ್ದಾರೆ. ನಲ್ಲೂರು ಬಸದಿಯಲ್ಲಿ ನೆಲೆನಿಂತ ಕೂಷ್ಮಾಂಡಿನಿ ದೇವಿ ಅನಂತರ ಮೂಡುಬಿದಿರೆಯಲ್ಲಿ ಶ್ರೀ ಮಠದ ನಿರ್ಮಾಣಗೊಂಡಾಗ ಇಲ್ಲಿಯೂ ನೆಲೆನಿಂತು ಆರಾಧಿಸಲ್ಪಡತೊಡಗಿದಳು. ಈ ಪವಿತ್ರ ಮಂದಿರದ ಗಂಧಕುಟಿಯಲ್ಲಿ ಪಂಚಲೋಹದ ತೀರ್ಥಂಕರರ ಮೂರ್ತಿಗಳು, ಪದ್ಮಾಸನಸ್ಥ ಸ್ಫಟಿಕದ ಸಿದ್ಧರ ಬಿಂಬಗಳು, ಖಡ್ಗಾಸನ ಭಂಗಿಯ ವಿವಿಧ ಜಿನಬಿಂಬಗಳು ವಿರಾಜಮಾನವಾಗಿದೆ. ಪೂಜಾ ಸಂದರ್ಭದ ಜ್ಯೋತಿಗಳ ಪ್ರಭೆಯಲ್ಲಿ ಬೆಳಗುವ ಈ ಬಿಂಬಗಳು ವಿಶೇಷ ಆಧ್ಯಾತ್ಮಿಕ ಆನಂದವನ್ನುಂಟು ಮಾಡುತ್ತವೆ.

     ಪ್ರಸ್ತುತ ಭಟ್ಟಾರಕ ಭಾರತ ಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮಿಗಳ ಪೀಠಾರೋಹಣದ ಬಳಿಕ ಈ ಬಾಗದಲ್ಲಿ ವಿಶೇಷ ಧರ್ಮ ಪ್ರಭಾವನೆ ನಡೆಯುತ್ತಿದ್ದು ಈ ಮಂದಿರದಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ, ಭಜನೆ, ಮತ್ತಿತರ ಆರಾಧನಾ ಕಾರ್ಯಗಳು ಜರುಗುತ್ತಿವೆ. ಪೂಜಾ ನಂತರ ಪೂಜ್ಯ ಭಟ್ಟಾರಕರು ಧರ್ಮಪ್ರಭಾವನಾ ಕಾರ್ಯದ ಅಂಗವಾಗಿ ಧಾರ್ಮಿಕ ಪ್ರವಚನ ನಡೆಸುತ್ತಾರೆ. ಪುರಾಣ ಪುಣ್ಯ ಕಥೆಗಳನ್ನು ಹೇಳುತ್ತಾರೆ. ಎಲ್ಲಾ ಜಿನಮಂದಿರಗಳು ಸುಸ್ಥಿತಿಗೆ ಬರುತ್ತಾ ಪೂಜಾದಿಗಳು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿವೆ. ಈ ಧರ್ಮದ ಪುನರುತ್ಥಾನದ ಕಾರ್ಯಕ್ರಮದಲ್ಲಿ ವಿವಿಧ ಪ್ರದೇಶಗಳಿಂದ ಭವ್ಯಜನರು ಆಗಮಿಸಿ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಶ್ರೀಮಠವು ಜೈನಕಾಶಿ ಮೂಡಬಿದಿರೆಯ ಹದಿನಾರು ಬಸದಿಗಳ ಆಡಳಿತ ಕೇಂದ್ರವೂ ಆಗಿದೆ.

ಪಡು ಬಸದಿ:

ಈ ಜಿನಾಲಯ ಶಿಲಾಮಯವಾದುದು. ಇದರೊಳಗಿನ ಮೂರು ಗರ್ಭಗುಡಿಯಲ್ಲಿ ರತ್ನತ್ರಯರಾದ ಭಗವಾನ್ ವಿಮಲ, ಅನಂತ, ಧರ್ಮನಾಥ ತೀಥಂಕರರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಇಲ್ಲಿಯ ಬ್ರಹ್ಮ ಯಕ್ಷ ಬಲು ಕಾರಣಿಕದ ದೈವತ್ವವೆಂದು ನಂಬಲಾಗಿದೆ. ಈತನ ಮಹಿಮೆಯನ್ನು ವರ್ಣಿಸುತ್ತಾ ಮಹೇಂದ್ರನೆಂಬ ಕವಿಯೊಬ್ಬನು “ಗೆಜ್ಜೆ ಬ್ರಹ್ಮ” ಎಂಬ ಹೆಸರಿನ ಒಂದು ಚಿಕ್ಕ ಕೃತಿಯನ್ನು ಕನ್ನಡದಲ್ಲಿ ರಚಿಸಿರುವನು.

ಬಡಗ ಬಸದಿ

ಮೂಡುಬಿದಿರೆಯ ಬಡಗು(ಉತ್ತರ) ದಿಕ್ಕಿನಲ್ಲಿರುವುದರಿಂದ ಈ ಬಸದಿಗೆ ಬಡಗ ಬಸದಿ ಎಂಬ ಹೆಸರು ಬಂತು. ಅಮೃತ ಶಿಲೆಯ ಮೂರಡಿ ಎತ್ತರದ ಖಡ್ಗಾಸನ ಭಂಗಿಯ ಶ್ರೀ ಚಂದ್ರನಾಥ ಸ್ವಾಮಿಯ ಮೂಲ ನಾಯಕ. ಬಸದಿ ಪೂರ್ವಾಭಿಮುಖ. ಮುಂಭಾಗದಲ್ಲಿ ತಲೆ ಎತ್ತಿ ನಿಂತಿರುವ ಸುಮಾರು 40 ಅಡಿ ಎತ್ತರದ ಮಾನಸ್ತಂಬವಿದೆ. ಮೂಲ ಸ್ವಾಮಿಯ ಪೀಠ ಮತ್ತು ಪ್ರಭಾವಲಯಗಳು ಕಂಚಿನದ್ದಾಗಿದ್ದು ವಜ್ರಲೇಪನಗೊಂಡು ಹೊಳೆಯುತ್ತವೆ. ಇಲ್ಲಿರುವಪಚ್ಚೆಕಲ್ಲಿನ ಖಡ್ಗಾಸನಸ್ಥ ಪಾಶ್ರ್ವನಾಥ ಸ್ವಾಮಿಯ ಮೂರ್ತಿ ತುಂಬಾ ಅಮೂಲ್ಯವಾದುದು ಹಾಗೂ ರಮ್ಯವಾದುದು. ಈ ಜಿನ ಮಂದಿರದ ಇನ್ನೊಂದು ವೈಶಿಷ್ಟ್ಯವೆಂದರೆ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲದ 72 ಜೈನ ತೀರ್ಥಂಕರರ ಕಂಚಿನ ಮೂರ್ತಿಗಳಿರುವುದು. ಅಧ್ಯಾಯ 4 ಶ್ರೀ ಚಂದ್ರನಾಥ ಸ್ವಾಮಿಯ ಪ್ರತಿಷ್ಠಾಪನೆ ಪಂಚಕಲ್ಯಾಣ, ಪೂಜಾದಿಗಳ ವ್ಯವಸ್ಥೆ.

ಶ್ರೀ ಚಂದ್ರನಾಥ ಸ್ವಾಮಿಯ ಪ್ರತಿಷ್ಠಾಪನೆ ಪಂಚಕಲ್ಯಾಣ ಇಷ್ಟು ಹಿರಿದಾದ ಬಸದಿಗೆ ತಕ್ಕದೆನಿಸುವ ಶ್ರೀ ಚಂದ್ರಪ್ರಭ ತೀಥಂಕರರ ಕಂಚಿನ ಬಿಂಬವನ್ನು ತಯಾರಿಸಲು ಸಿದ್ದತೆಗಳು ನಡೆದವು. ( ಈ ಬಿಂಬ ತಯಾರಿಸಿದ ವಿವರಗಳನ್ನು ನಮಗೆ ಮೂಡಬಿದರೆಯ ಪಂಡಿತ ಶ್ರೀ ದೇವಕುಮಾರ ಶಾಸ್ತಿಯವರು ಕೊಟ್ಟಿದ್ದಾರೆ. ಊರಿನ ಶ್ರಾವಕ ಬಂಧುಗಳೆಲ್ಲ ಒಟ್ಟಾದರು. ಊರ ಕಂಚುಗಾರ ಶಿಲ್ಪಿಯನ್ನು ಕರೆಸಿದರು. ಆತನನ್ನುದಾನ-ಮಾನ-ಸನ್ಮಾನದಿಂದ ಉಪಚರಿಸಿದರು. ತಿಲಕವಿಟ್ಟು. ಸೇಸೆಯಿಕ್ಕಿ ಮೂರ್ತಿ ನಿರ್ಮಾಣಕ್ಕಾಗಿ ಕೇಳಿಕೊಂಡರು. ಸುವರ್ಣದ ಆಭರಣಗಳನ್ನು ಭಗವಂತನ ಬಿಂಬದ ತಯಾರಿಕೆಗಾಗಿ ತಟ್ಟಿಯಲ್ಲಿ ತಂದು ಅರ್ಪಿಸಿದರು. ಮಣಗಟ್ಟಲೆ ತಾಮ್ರ, ಕಂಚು,ಕಬ್ಬಿಣ, ಬೆಳ್ಳಿ, ಬಂಗಾರ ಸಂಗ್ರಹವಾಯಿತು. ಶುಭದಿನ ಶುಭವೇಳೆಗೆ ಕಾರ್ಯಾರಂಭ. ಕಂಚುಗಾರನು 9 ಅಡಿ ಗಾತ್ರದ ಮೇಣದ ಮೂರ್ತಿಯನ್ನು ತಯಾರಿಸಿದರು.ಸುಂದರ-ಬಂಧುರ ಪ್ರತಿಮೆ ತಯಾರಾಯಿತು. ಅದರ ಸುತ್ತ ಮುತ್ತ ನಯವಾದ ಮಣ್ಣು ಮೆತ್ತಿದ. ದಪ್ಪವಾಗಿ ಮತ್ತೂ ಮಣ್ಣು ಮೆತ್ತಿದ.ತಲೆಯ ಭಾಗದಲ್ಲಿ ಕರಗಿದ ಮೇಣ ಹೊರಬರಲು ದ್ವಾರವಿರಿಸಿದ. ಈ ಅಣುಕು ಮೂರ್ತಿಯನ್ನು (ಡಮ್ಮಿ) ಪ್ರಖರ ಬಿಸಿಲಲ್ಲಿಟ್ಟು ವಾರಗಟ್ಟಲೆ ಒಣಗಿಸಲಾಯಿತು. ಅದು ಚೆನ್ನಾಗಿ ಒಣಗಿತು .ಸಿದ್ದವಾಯಿತು. ಒಂದು ಶುಭದಿನ ಪ್ರತಃಕಾಲ ಶಿಲ್ಪಿಯ ಯೋಜನೆಯಂತೆ ಪಂಚಲೋಹಗಳು ಕರಗಿ ಶಾಖವಾದ ಪಾಕವಾಯಿತು. ಇತ್ತ ಮೇಣದ ಮೂರ್ತಿಯ ಕೋವೆಯನ್ನು ಒಲೆಗೆ ಇಟ್ಟರು.ಕರಗಿದ ಮೇಣ ತಲೆಯ ಭಾಗದಲ್ಲಿ ಇಟ್ಟಿರುವ ದ್ವಾರದಿಂದ ಹೊರಟು ಬಂತು. ಅಚ್ಚು ಖಾಲಿಯಾಯಿತು. ಅದರಲ್ಲಿ ಕಾದು ಕೆಂಪಾದ ಪಂಚಲೋಹ ಸರವನ್ನು ಸುರಿದರು.. ಅದನ್ನು ಹಾಗೆಯೇ ತಣಿಯಲು ಬಿಟ್ಟರು. ವಾರ ಕಳೆಯಿತು. ಕಂಚುಗಾರನಿಗೆ ತವಕ, ಆತುರ. ಅವಸರ. ತನ್ನ ಕೃತಿಯನ್ನು ನೋಡುವ ಆಸೆ. ಕೋವೆಯನ್ನು ಸುತ್ತಿಗೆಯಿಂದ ಬಡಿದ, ಹೊಡೆದ. ಅದು ಆರಿರಲಿಲ್ಲ. ತಲೆ,ಎದೆಯಲ್ಲಿ ರಸ ಹಸಿಯಾಗಿಯೇ ಇತ್ತು. ಭಸಕ್ಕೆಂದು ಹೊರ ಹರಿಯಿತು. ಮಾಡಿದೆಲ್ಲ ವ್ಯರ್ಥವಾತು. ಎಚ್ಚರದಿಂದ ಹೆರಕ ಹೊಯ್ದರು. 15 ದಿನ ತಣಿಯಲು ಬಿಟ್ಟರು. ಹದಿನಾರನೆ ದಿನ ಕೋವೆಯನ್ನು ಒqದರು. ಈ ಬಾರಿಯು ಅದು ತಣಿಯಬೇಕಾದಷ್ಟು ತಣಿದಿರಲಿಲ್ಲಿ. ಕಾಲ ನೋಡಿ ಬಂದಿರಲಿಲ್ಲ. ದಪ್ಪದ ಮೂರ್ತಿಯ ಎದೆಯ ಭಾಗ ಬಸಿಯಿತು. ಅದು ನುಚ್ಚುನೂರಾಯಿತು. ಕಟ್ಟೆಚ್ಚರದಿಂದ ಎರಕ ತಯಾರಿಸಿ ಹೊಯ್ದರು. ಆದರೆ ಈ ಬಾರಿ ಶಿಲ್ಪಿಯನ್ನು ಅವನಿಗೆ ತಿಳಿಯದಂತೆ ಗೃಹಬಂಧನದಲ್ಲಿಟ್ಟರು. ಅಸನ-ವಸನ ಮತ್ತು ಭೋಜನ ಶಯನ ಅಲ್ಲಿಯೇ. ಶಿಲ್ಪಿ ಚಡಪಡಿಸಿದ. ಆದರೆ ನಿರುಪಾಯ. ಪೂರ್ತಿ ಎರೆಡು ತಿಂಗಳು ಬಿಸಿ ಕೋವೆ ಪೂರ್ತಿ ತಣಿದು ತಣ್ಣಗಾಯಿತು. ಎಲ್ಲಾ ಸಮಕ್ಷಮ ಕೋವೆಯನ್ನು ಒಡೆದರು. ಮೂರ್ತಿ ಸರ್ವಾಂಗ ಸುಂದರವಾಗಿ ಬಂಧುರವಾಗಿ ಉದಯವಾಯಿತು, ದರ್ಶನ ನೀಡಿತು. ಚಂದ್ರನಾಥ ಭಗವಾನ್ ಕೀ ಜಯ್ ಎಂಬ ಜಯಘೋಷದೊಂದಿಗೆ ಗರ್ಭಗೃಹದಲ್ಲಿ ಚಂದ್ರನಾಥನ ಮೂರ್ತಿ ಸ್ಥಾಪನೆಯಾಯಿತು. ಪೀಠದಲ್ಲಿ ಸ್ವಾಮಿಯ ಲಾಂಛನ ಬೆಳಗಿತು. ಈ ಜಿನಬಿಂಬವಿರುವ ಸಿಂಹ ಪೀಠದ ಮೇಲಿನ ಅಪ್ರಕಟಿತವಾದ ಶಾಸನದ ಅನುಸಾರ ಶಕ 1430 ನೇ ಸಾದರಣ ಸಂವತ್ಸರದ ಚೈತ್ರ ಪಂಚಮಿ ಅಂದರೆ ಕ್ರಿ. ಶ 1430 ನೇ ಇಸವಿ ಮಾರ್ಚ್ 27 ನೆ ತಾರೀಕಿನಂದು ಈ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪಂಚಕಲ್ಯಾಣ ನಡೆಸಲಾಯಿತು. . ಎಡ ಬಲದಲ್ಲಿ ಶ್ಯಾಮ, ಯಕ,್ಷ ಜ್ವಾಲಾಮಾಲಿನಿ ದೇವಿಯ ಪ್ರತಿಮೆಗಳು ಸ್ಥಾಪನೆಗೋಡವು. ದೇವಿಗೆ ಎಂಟು ಕೈಗಳು, ಪಾಶ, ತ್ರಿಶೂಲ ,ಮೀನು,ಚಕ್ರ, ಧನು, ಕಮಲ, ಮಾದಳಹಣ್ಣು ಮತ್ತು ದಾನಹಸ್ತ ಇವು 8 ಕೈಗಳಲ್ಲಿ ಚಿಹ್ನೆಗಳಾಗಿ ಶೋಭಿಸಿದವು.

ಪೂಜಾದಿಗಳ ವ್ಯವಸ್ಥೆ : ಮೇಲೆ ಉಲ್ಲೇಖಿಸಿದ ಕ್ರಿ.ಶ. 1430ನೇ ಇಸವಿ ಜನವರಿ 29ನೇ ತಾರೀಕಿನ ಶಿಲಾಶಾಸನದ ಅನುಸಾರ ಆ ಕಾಲದಲ್ಲಿ ತುಳುದೇಶವೆಂಬ ಸ್ತ್ರೀಯ ಅರಳಿದ ಮುಖಕಮಲಕ್ಕೆ ತಿಲಕದಂತೆ ನಗರೆ ಎಂಬ ರಾಜ್ಯವಿತ್ತು. ಅದರ ಮಧ್ಯದಲ್ಲಿ, ನಂದನವನಗಳಿಂದ. ಕೆರೆ ಪುಷ್ಕರಗಳಿಂದ ನೀರಝರಿ ಕೋಟೆಕೊತ್ತಲಗಳಿಂದ ಜೈನನಿವಾಸಿಗಳಿಂದ, ಗೋಪುರಗಳಿಂದ ರಾಜ್ಯಭಾರ ಮಾಡುತ್ತಿದ್ದ. ಮಹಾ ಮಂಡಲೇಶ್ವರನಾದ ಆತನನ್ನು ‘ ಸುಕವಿಜನಮನಃಪದ್ಮಿನೀ ರಾಜಹಂಸ ’ ಎಂದು ಸ್ತುತಿಸಲಾಗುತ್ತಿತ್ತು. ರಿಪುಕಟಕ ಸೂರೆಕಾರ ಸಾಳುವಧಟ್ಟ ವಿಭಾಡ ಸಿಂಗಣ ಧಟ್ಟ ವಿಭಾಡ ಮಲೆವರ ಗಂಡ ಶರಣಾಗತ ವಜ್ರಪಂಜರನಾದ ಈ ಅರಸನು ತನ್ನ ರಾಜ್ಯದ ಎಲ್ಲಾ ಚೈತ್ಯಾಲಯಗಳಲ್ಲಿ ಸಂಹಿತಾಶಾಸ್ತ್ರೋಕ್ತ ಕ್ರಮದಿಂದ ನಿತ್ಯೊಜೋತ್ಯವ ಶ್ರೀ ಬಲಿ ವಿಧಾನಗಳನ್ನು ನಡೆಸುತ್ತಿದ್ದ. ಅನುಪಮ ಉದಾರಿಯೆನಿಸಿಕೊಂಡಿದ್ದ ಈ ಅರಸನು ಶ್ರವಣಬೆಳಗೂಳ, ಚಂದ್ರಗುತ್ತಿ ಮತ್ತು ಹೊನ್ನಾವರಗಳಲ್ಲಿದ್ದ ಬಸದಿಗಳಿಗೆ ವಿಶೇಷ ದಾನಗಳನ್ನು ಕೊಟ್ಟಿದ್ದ. ಮೂಡುಬಿದಿರೆಯ ಶ್ರೀ ಪೀಠದ ಶ್ರೀ ಚಾರುಕೀರ್ತಿ ಭಟ್ಟರಕರ ಶಿಷ್ಯವರ್ಗಕ್ಕೆ ಸೇರಿದ್ದ ಈ ರಾಜವರನು ಒಂದು ದಿನ ತನ್ನ ರಾಜಗುರುವಾಗಿದ್ದ ವೀರಸೇನ ಮುನಿಗಳಲ್ಲಿ ವಿಮರ್ಶೆಯನ್ನು ನಡೆಸಿಕೊಂಡು, ಮೂಡುಬಿದಿರೆಯಲ್ಲಿ ನೂತನವಾಗಿ ರಚಿಸಲ್ಟಟ್ಟಿದ್ದ ಶ್ರೀ ಚಂದ್ರನಾಥನ ತ್ರಿಭುವನ ತಿಲಕ ಚೂಡಮಣಿ ಬಸದಿಗೆ ಶಾಶ್ವತ ಧರ್ಮವ್ಯವಸ್ಥೆಯನ್ನು ಮಾಡಲು ನಿರ್ಧರಿಸಿಕೊಂಡ. ಅದರನುಸಾರ ಮೂಡುಬುದಿರೆಯ ಜೈನಶ್ರಾವಕರನ್ನು ತನ್ನಲ್ಲಿಗೆ ಬರಮಾಡಿಕೊಂಡು ಅವರ ಒಪ್ಪಿಗೆ ಪಡೆದು ಈ ಬಸದಿಯು ಕೆಂಪಾದ ಚಿನ್ನದ ಬಣ್ಣದಿಂದ ಕಂಗೊಳಿಸತೊಡಗಿತು. ಅದರಂತೆ, ಶ್ರೀ ಚಂದ್ರಪ್ರಭ ಸ್ವಾಮಿಗೆ ಬೆಳಗ್ಗಿನ ಪಂಚಾಮೃತಾಭಿಷೇಕ ಹಾಗೂ ಶಾಶ್ವತವಾದ ಅರ್ಚನೆ, ಪೂಜೆಗಳಿಗೆ ಬೇಕಾದ ಸಂಪತ್ತನ್ನೂ ಒದಗಿಸಿಕೊಟ್ಟ. ನಿತ್ಯ ಅರ್ಚನೆಗೆ ಬೇಕಾದ ಹರಿವಾಣಗಳನ್ನು ಬೆಳ್ಳಿಯಲ್ಲೇ ತಯಾರಿಸಿ, ಅವುಗಳನ್ನೂ ಬೆಳ್ಳಿಯ ಕಲಶ ಪಾತ್ರೆಗಳು, ನೀರು ತುಂಬಿಸಿಡುವ ಬೆಳ್ಳಿಯ ಪಾತ್ರೆಗಳು, ಬೇರೆ ಬೇರೆ ರೀತಿಯ ಬೆಳ್ಳಿಯ ಬಟ್ಟಲು, ಗಿಂಡಿಗಳನ್ನು ಈ ಬಸದಿಗೆ ಒಪ್ಪಿಸಿದ. ದೇವರಿಗೆ ಹಿಡಿಯಲು ಬಿಳಿ ಕೊಡೆ, ಗಾಳಿ ಬೀಸಲು ಚಾಮರಗಳು, ಹಿಡಿಯಲು ರಾಜದಂಡ, ಗಂಧ ಕುಟಿಯಲ್ಲಿಡಲುಬೇಕಾದ ವಿವಿಧ ಜಿನ ಬಿಂಬಗಳು – ಇತ್ಯಾದಿಗಳನ್ನು ಇದೇ ಭೈರವೇಂದ್ರ ಒದಗಿಸಿಕೊಟ್ಟ. ಆತನ ಪತ್ನಿಯಾದ ನಾಗಲಾದೇವಿಯು ಈ ಜಿನಾಲಯದ ಮುಂದುಗಡೆ ಮಾನಸ್ತಂಭವನ್ನು ನಿರ್ಮಿಸಿದಳು. ಅವರ ಪುತ್ರಿಯರಾದ ಲಕ್ಷ್ಮೀ ಮತ್ತು ಪಂಡಿತದೇವಿ ಎಂಬವರು ಜಿನೇಶ್ವರನ ಹಾಗೂ ಮಠಾಧೀಶರ ಆಹಾರಕ್ಕೆ ವ್ಯವಸ್ಥೆ ಮಾಡಲು ಧನವನ್ನಿತ್ತರು. ಇಲ್ಲಿಯ ಶ್ರೀಮಠದಲ್ಲಿರುವ ಒಂದು ಶಾಸನದ ಅನುಸಾರ “ ಶಕ ವರ್ಷ 1371ನೆಯ ಶುಕ್ಲ ಸಂವತ್ಸರದ ವೃಷಭ ಮಾಸಂ 15ನೆಯ ಆದಿವಾರ ( 11-5-1449) ದಂದು ಶ್ರೀ ಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀವೀರ ಮಲ್ಲಿಕಾರ್ಜುನ ಮಹಾರಾಯರ ನಿರೂಪದಿಂದ ಶ್ರೀ ಪೃಥ್ವೀಕಾಂತೆಗೆ ಮಂಗಲಾಭರಣಮೆನಿಸಿದ ಮಂಗಲೂರ ರಾಜ್ಯವನ್ನಾಳುತ್ತಿದ್ದ ಷಡ್ದರ್ಶನ ವರ್ಣಾಶ್ರಮ ಪ್ರತಿಪಾಲಕರುಮಪ್ಪ ಚಾಯಣ್ಣೊಡೆಯರು ಬಿದಿರೆಗೆ ಬಿಜಮಾಡಿದಲ್ಲಿ ತ್ರಿಭುವನ ಚೂಡಮಣಿಯೆಂಬ ಮಹಾಚೈತ್ಯಾಲಯದಲು ಮೂರ್ತಿಗೊಂಡ ಶ್ರೀ ಚಂದ್ರಪ್ರಭ ತೀರ್ಥಂಕರರನು ಕಂಡು ಪರಿಣಾಮಿಸಿ ಪೂರ್ವಾಹ್ನದ ದೇವ ಪೂಜೆಗೆ ಬಿದಿರೆಯ ತಿಗುಳಪ್ಪರಸರ ಕಲ್ಲಿಟ್ಟ ಮೂಡಣ ಹೆಗ್ಗಡೆಯವರ ಬ್ರಹ್ಮಾದಾಯವೆನಿಸಿದ ಸಾಲಿಕೆಯೊಳಗಣ ಕೋಟೆತಿಂಜಯೆಂಬ ಕ್ಷೇತ್ರದ ಬೆಟ್ಟು ಬಯಲುಗಳಿಗೆ ಪ್ರತಿವರ್ಷದಲೂ ಅರಸುಗಳಿಗೆ ತೆರುವು ಕಾಟಿಗ 20ಯಿಪ್ಪತ್ತನೂ..........ಧಾರಾಪೂರ್ವಕವಾಗಿ ಸಮರ್ಪಿಸಿದರು. ಇದೇ ಗದ್ದುಗೆ ಮಂಟಪದ ದ್ವಾರದ ಎಡಕ್ಕಿರುವ ಶಿಲಾಶಾಸನಲ್ಲಿ ಹೇಳಿರುವ ಅನುಸಾರ ನಗಿರೆ ರಾಜ್ಯದ ಶ್ರೀ ಮನ್ಮಹಾ ಮಂಡಲೇಶ್ವರ ಹಿರಿಯ ಭೈರವ ದೇವ ಒಡೆಯನು ತನ್ನ ಆರೋಗ್ಯ ಸುಧಾರಣಾರ್ಥವಾಗಿ ಶಕ 1384ನೆಯ ವಿಷು ಸಂವತ್ಸರದ ಪುಷ್ಯ ಶುದ್ಧ ಪ್ರತಿಪದ ( ಕ್ರಿ. ಶ. 1461ನೇ ಇಸವಿ ಡಿಸೆಂಬರ್ 2-3ನೇ ತಾರೀಕು ) ಬುಧವಾರದಂದು ಈ ಚೈತ್ಯಾಲಯದ ಶ್ರೀ ಚಂದ್ರನಾಥ ಸ್ವಾಮಿಯ ಪೂರ್ವಾಹ್ನದ ಪೂಜೆಗೆ, ನಡುವಣ ನೆಲೆಯ ಶ್ರೀ ಸುಪಾಶ್ರ್ವ ತೀರ್ಥಂಕರರ ಮಧ್ಯಾಹ್ನದ ಪೂಜೆಗೆ ಮೇಲಿನ ನೆಲೆಯ ಶ್ರೀ ಚಂದ್ರಪ್ರಭ ಸ್ವಾಮಿಯ ಮಧ್ಯಾಹ್ನದ ಪೂಜೆಗೆ ಶ್ರವಣಬೆಳಗೊಳದ ಸ್ವಾಮೀಜಿಯವರ ಒಪ್ಪಿಗೆಯನ್ನು ಪಡೆದು ತನ್ನ ರಾಜ್ಯದಿಂದ ಒಂದು ಮುಡಿಗೆ 30 ಹಾನೆಯ ಲೆಕ್ಕದಲ್ಲಿ ಒಟ್ಟು ಒಂದು ಸಾವಿರ ಮುಡಿ ಭತ್ತವನ್ನು ಸಮರ್ಪಿಸಿದನು. ಹಾಗೂ ಪ್ರತಿವರ್ಷ ಇಷ್ಟು ಪ್ರಮಾಣದ ಭತ್ತವು ತನ್ನ ರಾಜ್ಯದಿಂದ ಈ ಸೇವೆಗಾಗಿ ಬಸದಿಗೆ ಸಂದಾಹಿಸಬೇಕೆಂಬ ನಿಯಮವನ್ನು ಮಾಡಿ ಈ ಶಾಸನ ಬರೆಸಿದನು. ಇದೇ ಬಸದಿಯ ಕ್ಷೇತ್ರಪಾಲ ಗುಡಿಯ ಗೋಡೆಯ ಕೆಳಗಿರುವ ಶಿಲಾಶಾಸನವು ಈ ವಿವರಗಳನ್ನು ನೀಡುತ್ತದೆ. “ಶಕವರ್ಷ 1398ನೆಯ ದುರ್ಮುಖಿ ಸಂವತ್ಸರದ ಮಾಘ ಶು. 10 ( 24-1-1477) ಶುಕ್ರವಾರದಲು ವಿರೂಪಾಕ್ಷರಾಯರು ರಾಜ್ಯ ಸ್ಥಿತರಾಗಿರಲು ಸಿಂಗಪ್ಪ ದಂಣ್ನಾಯಕರ ಕಾಲದಲ್ಲಿ ವಿಠ್ಠರಸೊಡೆಯರು ಮಂಗಲೂರ ರಾಜ್ಯ ಸ್ಥಿತರಾಗಿರ್ದ ಕಾಲದಲ್ಲಿ(ಚಾ)ರು ಕೀತ್ರ್ತಿ ಪಂಡಿತದೇವರುಗಳ ನಿರೂಪದಿಂದ ಬಿದಿರೆಯಯೆಂಟು ಪ್ರಜೆ ಸೆಟ್ಟಿಕಾರರು ನಾಲ್ವರೆಳ (ಮೆ)ಗಳೊಳಗಾದ ಸಮಸ್ತ ಹಲರು ಶ್ರೀ ಚಂದ್ರಪ್ರಭ ಸ್ವಾಮಿಯ ತ್ರಿಭುವನ ಚೂಡಮಣಿಯೆಂ(ಬ)ಚೈತ್ಯಾಕಯದ ನಡುವಣ ನೆಲೆಯಲ್ಲಿ ಎರಡು ಗಂಧ ಕುಟಿಗಳನು ಪೇರಳದ (ಕ)ರಣಂತತ ಬಳಿ(ಯ) (ಮೆಲ್ಲಂಟ) ಸೌಟಿರೆ ಸೆಟ್ಟಿಯರು ಅವರಳಿಯ ಚಿಟ್ಟಿಪಾಡಿಯ (ಕೇಚಿ)ಯ ದೇವರು ಸೆಟ್ಟಿಯರು” ಧರ್ಮವಾತ್ಯಲ್ಯದಿಂದ ತಮಗೆ ಸ್ವರ್ಗಾಪವಗ್ರ್ಗವಾಗಬೇಕೆಂಬ ಭಾವದಿಂದ ಈ ಬಸದಿಯ ನಡುವಣ ನೆಲೆಯಲ್ಲಿ ಎರಡು ಗಂಧ ಕುಟಿಗಳನ್ನು ಕೊಟ್ಟರು. ನೈವೇದ್ಯ ಸಮರ್ಪಣೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿದರು. ಗಂಧ ಕುಟಿಯಲ್ಲಿ ಪೂಜೆ ನಡೆಸುವ ಪುರೋಹಿತರಿಗೆ ವಾಸ್ತವ್ಯವಿರಲು ಮನೆಯನ್ನು ಒದಗಿಸಿದರು. ಬಸದಿಗೆ ಗದ್ದಿಗೆ ಮಂಟಪದ ಉತ್ತರ ಭಾಗದ ಗೋಡೆಯ ಮೇಲಿರುವ ಕ್ರಿ.ಶ 1486ರ ಇನ್ನೊಂದು ಶಾಸನದ ಅನುಸಾರ “ಶಕವರ್ಷ 1409ನೆಯ ಪರಾಭವ ಸಂವತ್ಸರದ ಕಾತ್ರ್ತಿಕ ಶುದ್ಧ ಪಾಡ್ಯ ಆದಿತ್ಯವಾರ (28,29 ಅಕ್ಟೋಬರ್ 1486)ದಲ್ಲೂ ತ್ರಿಭುವನ ಚೂಡಮಣಿ ಎಂಬ ಚೈತ್ಯಾಲಯ (ದ ಕೆ)ಳಗಣ ನೆಲೆಯ ಭವಂತಿಯ ಪಚ್ಚಿಮ ದಿಕ್ಕಿನಲೂ ಪಂಡಿತ ದೇವರ ನಿರೂಪ ಹಲರು ಸೆಟ್ಟಿಕಾರರ ಅನುಜ್ಞೆಯಿಂದ ಕೊತ್ತೊಂಪಳೆ ಬಳಿಯ ಚೌಟ ಗುಂಮಟ ಸೆಟ್ಟಿ ತನ್ನ ತಮ್ಮ ಬಿರುಮು ಸೆಟ್ಟಿ” ಎಂಬುವರು ಕೆಳಗಿನ ನೆಲೆಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಪಾಶ್ರ್ವನಾಥ ಸ್ವಾಮಿಯ ನಿತ್ಯನೈವೇದ್ಯ ಮತ್ತು ದೇವ ಪೂಜೆಗೆ ಎರಡು ಗದ್ದೆಗಳನ್ನು ದಾನ ಮಾಡಿದರು. ಇಲ್ಲಿಯ ಶ್ರೀ ಜೈನ ಮಠದಲ್ಲಿ ದೊರಕಿರುವ ಶಕ 1439ರ ಒಂದು ತಾಮ್ರ ಶಾಸನದ ಅನುಸಾರ “ಶ್ರೀ ಮನ್ಮ ಹಾಮಂಡಲೇಶ್ವರ ಇಮ್ಮಡಿ ದೇವರಾಜ ವೊಡೆಯರು ಹೈವೆ ತುಳು ಕೊಂಕಣ ಮುಂತಾದ ರಾಜ್ಯವನೂ ಪ್ರತಿಪಾಲಿಸುತ್ತಿದ್ದ ವರುಷ 1439ನೆಯ ಧಾತೃ ಸಂವತ್ಸರದ ಪ್ರಥಮ ಶ್ರಾವಣ ಶುದ್ದಿ 13 ಯೂ (12-7-1516) ಶುಕ್ರವಾದಲುಇ… ಶ್ರೀ ಮನ್ಮ ಹಾಮಂಡಲೇಶ್ವರ ಯಿಂಮಡಿ ದೇವರಸ ವೊಡೆಯರು ತಥಾತಿಯಲು ಆಬಿದಿರೆಯ ಚಂದ್ರಾನಾಥ ಸ್ವಾಮಿಯಗಳ ನಿತ್ಯ ಮಹೋತ್ಸವ ಶ್ರೀ ವಿಹಾರಕ್ಕೆ ತಮ್ಮ ತ್ರಿಕಾಲದಲು ನಡೆವ ನಿತ್ಯೋತ್ಸವದ ಶ್ರೀ ವಿಹಾರಕ್ಕೆ ಕೊಟ್ಟ ಆನೆಯ ಭೋಗಪಡಿಗೆ ಬಯಲೂರವೊಳಗೆ ಶಾಸನಾಂಕಿತವಾಗಿ .........ಕೊಟ್ಟ ಭತ್ತ ಮೂ 29 ಹಾ 18 ಭತ್ತ ಮೂ 30 ಭತ್ತ ಮೂ 108 ಭತ್ತ ಮೂ 100 ಭತ್ತ ಮೂ 102 ಅಂತೂ ಭತ್ತಕ 372 ... ಯಭಯಂ ಭತ್ತ ಅಕ್ಕಿಯಿಂದಲು ವಗ ಅಕ್ಷರದಲೂ ನಾಲ್ವತ್ತು ವರಹ…,….. ಇದೇ ಬಸದಿಯಲ್ಲಿರುವ ಇನ್ನೂದು ಶಾಸನ ಪ್ರಾಕಾರ “ಶಕವರ್ಷ 1458ನೆಯ ನಂದನ ಸಂವತ್ಸರದ ಚೈತ್ರ ಪ್ರತಿಪದ್ದಿನ (8-3-1532) ಶುಕ್ರವಾರ ದಿನ ಪ್ರಾರಂಭದಲ್ಲಿ ಶ್ರೀ ಮದಭಿನವ ಚಾ(ರು ಕೀರ್ತಿ) ಪಂಡಿತದೇವರುಗಳ ನಿರೂಪದಿಂದ ಸಾರಖೇತಿ ಭದ್ರದೇವರುಗಳ ಸದುಪದೇಶದಿದ (ಮೂ)ವುಳಿಯ ಬಳಿಯ ಕೊಂತಕಿಯ ಮಗ ಕೋಟೆ ( ಇಲ್ಲಿ ಆ ವ್ಯಕ್ತಿಯ ಹೆಸರು ಸ್ಪಷ್ಟವಿಲ್ಲಿ) ಬಿದುರಿಯ ನಕರದ ಯೆಂಟು ಮಂದಿ ಸೆಟ್ಟಿಕಾರg..............ಹಲರ ಅನುಜ್ಞೆಯಿಂದ ತ್ರಿಭುವನ ಚೂಡಮಣಿಯೆಂಬ ಚೈತ್ಯಾಲಯದ ಚಂದ್ರನಾಥ ಸ್ವಾಮಿಗಳ ಮಹಾಭಿಷೇಕಾರ್ಥವಾಗಿ ನಿಮ್ರ್ಮಾಪಿಸಿದ ಸುವಣ್ರ್ನ ಕುಂಭದ ತೂಕ ವರಹ 45 ಇದಕ್ಕೆ ಕ್ರಮ ವರಹಗದ್ಯಾಣಂ 500 ಈ ರೀತಿಕ “...... ಪೂರ್ಣ ಕುಂಭವನ್ನು ಸ್ವಾಮಿಯ ಶ್ರೀಪಾದಪದ್ಮಗಳಿಗೆ ಅರ್ಪಿಸಿದರು. ಇಲ್ಲಿಯ ಶ್ರೀಮಠದಲ್ಲಿ ಸಿಕ್ಕಿರುವ ಒಂದು ತಾಮ್ರ ಶಾಸನದ ಅನುಸಾರ “ಶಕ ವರುಷ 1671ನೆಯ ವರ್ತಮಾನಕ್ಕೆ ಸಲುವ ಶುಕ್ಲ ಸಂವತ್ಸರದ ಮಾಘ ಬ 13 (20-1-1749)ಲ್ಲೂ ಶ್ರೀಮತು ತಿಂಮಣ್ಣರಸರಾದ ಅಜಿಲರೂ ಮೂಡುಬಿದ್ರೆ ಚಂದ್ರನಾಥ ಸ್ವಾಮಿಯವರು ಸನ್ನಿಧಿಯಲ್ಲು ನಡವ ದೇವತಾ ಸೇವೆಯ ಬಗ್ಯೆ ಪ್ರಾಕು ನಂಮ ಹಿರಿಯವರೂ ಪೆರಿಂಜದ ಮಾಗಣೆ ಪಡುವಕೋಡಿ ಗ್ರಾಮದಲ್ಲೂ ಬಜದ ಪಂಮ್ಯ ಬಾಳಿಕೆಯಿಂದ ಉತ್ತಾರವ ಬಿಡಿಸಿದಲ್ಲಿ ಆ ಭೂಮಿಯು ಆರುವಾರವಾಗಿ ನಷ್ಟ ಬಿದ್ದು ದೇವತಾ ವೆಚ್ಚಕ್ಕೆ ಸಂದು ಬಾರದೆ ನಿಂತಲ್ಲಿ ಯಿದೇ ಸ್ಥಿತಿಯಲು ಮೂಡುಬಿದಿರೆ ಪೇಟೆ ಹಲರು ಪೂರ್ವ ಪ್ರಮಾಣು ದೇವತಾ ಸೇವೆ ನಡದು ಬಹ ರೀತಿಗೆ ಅಪ್ಪಣೆ ಆಗಬೇಕೆಂದು ಹೇಳಿಕೊಂಡ ಸಂಬಂಧ ....... ಆ ಯಿಪ್ಪತ್ತು ಮುಡಿ ಅಕ್ಕಿಗೇನಿ ಸ್ಥಳವನ್ನು..........ಈ ಸೇವೆಗಾಗಿ ಉತ್ತಾರ ಬಿಟ್ಟರು.

ಬಸದಿಯ ವಿಸ್ತರಣೆ:

   ಈ ಜಿನ ಚೈತ್ಯಾಲಯವು ಮೂರು ಹಂತಗಳಲ್ಲಿ ವಿಸ್ತರಿಣೆ ಅದುದನ್ನು    ಗುರುತಿಸಿಕೊಳ್ಳುಬಹುದು. ಮೊದಲು ಹಂತವಾಗಿ ಗರ್ಭಗೃಹ, ಸುಕನಾಸಿ, ಮತ್ತು ಲಕ್ಷ್ಮೀಮಂಟಪಗಳ ನಿರ್ಮಾಣವಾಯಿತು. ಈ ಬಸದಿಯ ಚಿತ್ರಾದೇವಿ ಮಂಟಪದ ಗೋಡೆಯ ಮೇಲಿರುವ ಇನ್ನೊಂದು ಶಿಲಾಶಾಸನದಿಂದ ತಿಳಿದು ಬರುವಂತೆ, ಪ್ರೌಢದೇವರಾಯನು ವಿಜಯನಗರ ಸಾಮ್ರಾಜ್ಯವನ್ನೂ ಗಣಪಣ್ಣ ಒಡೆಯನು ಮಂಗಳೂರು ರಾಜ್ಯವನ್ನೂ ಆಳುತ್ತಿದ್ದಾಗ, ಮೂಡುಬಿದಿರೆಯ ಮಂದಿ ಸೆಟ್ಟಿಕಾರರು ಹಣವನ್ನು ವಿನಿಯೋಗಿಸಿ ಇಲ್ಲಿ ತೀರ್ಥಂಕರ ಮಂಟಪ ಮತ್ತು ನಮಸ್ಕಾರ ಮಂಟಪಗಳೆಂಬ ಎರಡು ನೂತನ ಮಂಟಪಗಳನ್ನು ಶಾಲಿವಾಹನ ಶಕ 1373ನೇ ಪ್ರಜೋತ್ಪತ್ತಿ ಸಂವತ್ಸರದ ವೈಶಾಖಮಾಸ (1451ನೇ ಇಸವಿ ಎಪ್ರಿಲ್ ತಿಂಗಳ )ದಲ್ಲಿ ನಿರ್ಮಿಸಿದರು.ಆಬಳಿಕ ರಾಣಿ ಚಿತ್ರಾದೇವಿಯು ಚಿತ್ರಾದೇವಿ ಮಂಟಪವನ್ನೂ ನಿರ್ಮಿಸಿದಳು.ಇದು ಎರಡನೆಯ ಹಂತ.ಮೂರನೇ ಹಂತದಲ್ಲಿ ಕ್ರಿ.ಶ. 1462ರಲ್ಲಿ ಭೈರಾದೇವಿಯೆಂಬ ಇನ್ನೂಬ್ಬ ರಾಣಿ ಭೈರಾದೇವಿ ಮಂಟಪವನ್ನೂ ನಾಗಲಾದೇವಿಯು ಮಾನಸ್ತಣಭವನ್ನು ಬಸದಿಯ ಶೋಬೆಯು ಇಮ್ಮಡಿಯಾಗುವಂತೆ ರಚಿಸಿಕೊಟ್ಟರು.ಆದುದರಿಂದ ಈ ಬಸದಿಗೆ ವಿಶಿಷ್ಟವಾಗಿ ಪ್ರವೇಶ ದ್ವಾರದಿಂದ ಕೊನೆಯ ಗರ್ಭಗೃಹದವರಿಗೆ ಆನುಕ್ರಮವಾಗಿ ಬೈರಾದೇವಿ ಮಂಟಪ,ಚಿತ್ರಾದೇವಿ ಮಂಟಪ ನಮಸ್ಕಾರ ಮಂಟಪ, ತೀರ್ಥಂಕರ ಮಂಟಪ,ಲಕ್ಷ್ಮಿ ಮಂಟಪ,ಸುಕಾನಸಿ ಮತ್ತು ಗರ್ಭಗೃಹವೆಂಬ ಏಳು ಮಂಟಪಗಳು ಒಂದಕ್ಕೋಂದು ಹೊಂದಿಕೊಂಡಿದ್ದು ಸಿದ್ದಶಿಲೆಗೆ ಹೋಗುವ ದೇವಲೋಕದ ದಾರಿಯಂತೆ ಶಾಂತಿ ಸಂಪನ್ನವಾಗಿಯೂ, ದೀರ್ಘವಾಗಿಯೂ, ಶೋಭಾಯಮಾನವಾಗಿಯೂ ನಿರ್ಮಿಸಲ್ಪಟ್ಟವು. ಈಗ ಈ ಬಸದಿಯು ದೇವಲೋಕದ ದೊಡ್ಡ ಸೌಧದಂತಾಯಿತು.

ಗರ್ಭಗೃಹ:

   ಬಸದಿಯ ವಾಸ್ತು ವಿನ್ಯಾಸ ಹಾಗೂ ಶಾಸ್ತ್ರದ ಅನುಸಾರ ಆರಂಭದಲ್ಲಿ ಗರ್ಭಗುಡಿ ಮತ್ತು ಶುಕನಾಸಿಯನ್ನು  ಕ್ರಿ.ಶ 1430ರಲ್ಲೇ ನಿರ್ಮಾಣಗೋಳಿಸಲಾಗಿತ್ತು, ಅದೇ ಸಮಯಕ್ಕೆ, ಕ್ರಿ.ಶ 1430, ಮಾರ್ಚ್ 27ರಂದು ಈ ಗರ್ಭಗುಡಿಯಲ್ಲಿ ಶ್ರೀ ಚಂದ್ರನಾಥಸ್ವಾಮಿಯ ಏಳುವರೆ ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು.ಗರ್ಭಗೃಹವು ಬಸದಿಯ ಕೆಂದ್ರ. ಬಿಂದು ಹಾಗೂ ಹೃದಯ ಭಾಗ. ಇಲ್ಲಿಯೇ ಜಿನ ತೀರ್ಥಂಕರ ಶ್ರೀ ಚಂದ್ರನಾಥ ಸ್ವಾಮಿಯನ್ನು ಅರಳಿದ ತಾವರೆಯಂತಿರುವ ಶಿಲೆಯ ಸಿಂಹ ಪೀಟದ ಮೇಲೆ ಖಡ್ಗಾಸನ ಭಂಗಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.ಈ ಬಿಂಬವು ಬಹಳ ಸುಂದರವಾಗಿ ಹೊಂಬಣ್ಣದಿಂದ ಕಂಗೊಳಿಸುತ್ತಿದೆ. ಇದುವೇ ಭವ್ಯರ ಆರಾಧ್ಯ ಮೂರ್ತಿ, ಸದ್ಗುಣಗಳ ಸಾಕಾರ. ಸಂದರ್ಶಕರೂ ನೋಡಬೇಕೆಂದು ತವಕ ಪಡುವ ಶ್ರೀ ಜಿನಬಿಂಬ.

ಪೀಠದಲ್ಲಿ ಸ್ವಾಮಿಯ ಲಾಂಛನವಾದ ಅರ್ಧ ಚಮದ್ರಾಕೃತಿಯನ್ನು ಕಾಣಬಹುದು.ಎಡಭಾಗದಲ್ಲಿ ಜ್ವಾಲಾಮಾಲಿನಿ ಮತ್ತು ಬಲಭಾಗದಲ್ಲಿ ಶ್ಯಾಮ ಯಕ್ಷನ ಮೂರ್ತಿಗಳಿವೆ. ಬಿಂಬದ ಎರಡೂ ಬದಿಗಳಲ್ಲಿ ಮೇಲಿಂದ ಕೆಳಗೆ ಇಳಿಸಲ್ಪಟ್ಟಿರುವ ಸರಮಾಲೆಯ ದೀಪಗಳನ್ನು ಜೋಡಿಸಲಾಗಿದೆ.ಮೂಲಸ್ವಾಮಿ ಭಗವಾನ್ ಶ್ರೀ ಚಂದ್ರನಾಥನಿಗೆ ದಿನನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ ಪೂಜೆ ನಡೆಸಲಾಗುತ್ತದೆ.ಮೂರ್ತಿ ಎತ್ತರವಾಗಿದ್ದರೂ ಪ್ರತಿದಿನ ಅಭೀಷೆÀಕ ನಡೆಯು7ತ್ತದೆ. ವಿಶೇಷ ಪೊಜೆಗಳು ಅಂದರೆ ಭಕ್ತರು ಸೇವೆ ನಡೆಸುವ ಪದ್ದತಿ ಇರುವುದಿಲ್ಲ.ಆದರೆ ವಿಶೇಷ ಸಂದರ್ಭಗಳಲ್ಲಿ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕಗಳನ್ನು ನಡೆಸಲಾಗುತ್ದೆ. ಅಷ್ಟವಿಧಾರ್ಚನಾ ಪೂಜೆ,ನೋಂಪಿ, ಉದ್ಯಾಪನೆ,ದಶಲಕ್ಷನ ಪರ್ವ ಮತು ವಿಶೇಷದಿನಗಳಲ್ಲಿ ಹಿಚ್ಚಿನಪೂಜೆ,ಅಭಿಷೇಕಗಲನ್ನುನಡೆಸಲಾಗುತ್ತದೆ.ಪೂಜೆಯಲ್ಲಿ,ಜಲಗಂಧ,ಅಕ್ಷತೆ,ಪುಷ್ಪ,ಚರು,ಧೂಪ,ದೀಪ,ಅಘ್ರ್ಯ, ನೈವೇದ್ಯಗಳ ಸಮರ್ಪಣೆ ಇದೆ. ಪಂಚಾರತಿ ನೆಲೆ ಆರತಿ ಮತ್ತು ಕರ್ಪೂರಾತಿಗಳೋಂದಿಗೆ ಆರಾಧನೆ ನಡೆಸಲಾಗುತ್ತದೆ.ಚೈತ್ರ ಮಾಸ ಶಕ್ಲ ಪಕ್ಷದಲ್ಲಿ ನಡೆಯುವ ರಥೋತ್ಸವ ಸಂಬಂದಿ ಪೂಜೆಗಳು ಸತತ ಏಳುದಿನ ನಡೆಯುತ್ತವೆ.ಕೊನೆಗೆ ಚತುರ್ದಶಿಯಂದು ಚಿಕ್ಕ ರಥೋತ್ಸವ, ಪವರ್ಣಮಿಯಂದು ಬೃಹತ್ ರಥೋತ್ಸವ ಶ್ರೀವಿಹಾರಗಳು ನಡೆಯುತ್ತವೆ.ಇದು ಜಿನೇಶ್ವರನ ಸಮವಸರನದ ಶ್ರೀವಿಹಾರ ಇಲ್ಲಿ ಭಗವಂತನ ಪ್ರತ್ಯಕ್ಷ ದರ್ಶನ ಪಡೆಯುಬಹುದು.

ಸುಕನಾಸಿ:

  ಗರ್ಭಗೃಹದ ಅನಂತರ ಬರುವುದು ಸುಕನಾಸಿ. ಇದು ಗರ್ಭಗೃಹ ಮತ್ತು ಲಕ್ಷ್ಮಿ ಮಂಟಪದ ಮಧ್ಯದಲ್ಲಿದೆ.ಇದನ್ನು ಅಂತರಾಲವೇಂದೂ ಕರೆಯುತ್ತಾರೆ. ವಾಸ್ತುಶಿಲ್ಪದ ದೃಷ್ಟಿಯಿಂದ ಯಾವುದೇ ವಿಶೇಷತೆಗಳು ಕಂಡುಬಾರದಿದ್ದರೂ ಬಸದಿಯ ಒಟ್ಟು ವಾಸ್ತು ದೃಷ್ಟಿಯಿಂದ ಅದರ ಅವಿಭಾಜ್ಯ ಅಂಗ.

ಅಧ್ಯಾಯ 5

 ಮಂಟಪಗಳು

ಲಕ್ಷ್ಮೀ ಮಂಟಪ

   ಸುಕನಾಸಿಯ ಅನಂತರ ಬರುವುದೇ ಲಕ್ಷ್ಮಿ ಮಂಟಪ.ಇದರ ಮೇಲ್ಛಾವನಿಯ ಶಿಲೆಯಲ್ಲಿ ವಿವಿಧ ಶೈಲಿಯ ಹೂವಿನಾಕೃತಿಯನ್ನು ಮತ್ತು ಕೆತ್ತನೆಗಳನ್ನು ಕಾಣಬಹುದು. ಗೋಡೆಯ ಮೇಲೂ ಕೆಲವು ಅಲಂಕಾರಗಳಿವೆ. ಇಲ್ಲಿ ಭಕ್ತಾದಿಗಳು ಕಾಣಿಕೆಯಾಗಿ ಕೊಟ್ಟ ತೀರ್ಥಂಕರ ಲೋಹದ ಮೂತಿಗಳನ್ನ ಇಡಲಾಗಿದೆ.ಇದರ ಮೇಲಂತಸ್ತಿನಲ್ಲಿ ಚತುರ್ವಿಂಶತಿ ತೀರ್ಥಂಕರ ಹಾಗೂ ಬಲಬಾಗದಲ್ಲಿ ಪಾಶ್ರ್ವನಾಥ ಸ್ವಾಮಿಯ ಮೂರ್ತಿ ಇದೆ.

ತೀರ್ಥಂಕರ ಮಂಟಪ:

   ಬಸದಿಯ ಮಂಟಪಗಳಲ್ಲಿ ತೀರ್ಥಂಕರ ಮಂಟಪವೂ ಒಂದು. ಇದು ಲಕ್ಷ್ಮೀ ಮಂಟಪ ಮತ್ತು ನಮಸ್ಕಾರ ಮಂಟಪಗಳ ಮದ್ಯದಲ್ಲಿದೆ. ಇದರಲ್ಲಿ ವಿಭಿನ್ನ ವಿನ್ಯಾಸದ ನಾಲ್ಕು ಶಿಲಾಸ್ತಂಭಗಳಿವೆ. ಇಲ್ಲಿ ಗಂಧಕುಟಿಯನ್ನು ವ್ಯವಸ್ಥೆಗೊಳಿಸಿ ನಾಲ್ಕು ಬದಿಯಲ್ಲಿಯೂ ತಲಾ 13 ದೇವ ಕೋಷ್ಟಗಳನ್ನು ಕಾಣÀಬಹುದು. ಅವುಗಳಲ್ಲಿ 24 ತೀರ್ಥಂಕರರ ಮೂರ್ತಿಗಳನ್ನು ಇಡಲಾಗಿದೆ. ಆದುದರಿಂದಲೇ ಇದನ್ನು ತೀರ್ಥಂಕರ ಮಂಟಪ ಎಂದು ಕರೆಯಲಾಗುವುದು. ಕಂಚಿನ ಎರಡು ಚತುರ್ವಿಂಶತಿ ತೀರ್ಥಂಕರರು, ಶ್ರೀ ಚಂದ್ರನಾಥ ಮತ್ತು ಶ್ರಿ ಆದಿನಾಥರ ಮೂರ್ತಿಗಳನ್ನು ಎಡಬಾಗದಲ್ಲಿ ಹಾಗೂ ಇನ್ನೋಂದು ಭಾಗದಲ್ಲಿ ಬಾಹುಬಲಿ ಮತ್ತು ಚತುರ್ವಿಂಶÀತಿ ತೀರ್ಥಂಕರರಲ್ಲದೆ ಇನ್ನೂ ಅನೇಕ ಮೂರ್ತಿಗಳನ್ನು ಮತ್ತು ನೋಪಿ ಗೈದು ಉದ್ಯಾಪನೆ ಮಾಡಿದ 5 ಜಿನಾÀಲಯಗಳನ್ನು ಕಾಣಬಹದು.

ಚಿತ್ರಾದೇವಿ ಮಂಟಪ:

  ಈ ಜಿನಾಲಯದ ರಮ್ಯ ಮಂಟಪಗಳಲ್ಲಿ ಚಿತ್ರಾದೇವಿ ಮಂಟಪವು ಒಂದು ಇದು ಭೈರಾದೇವಿ ಮತ್ತು ತೀರ್ಥಮಂಟಪದ ನಡುವಿನಲ್ಲಿದೆ. ಇದನ್ನು ಗದ್ದಿಗೆ ಮಂಟಪವೆಂದೂ ಕರೆಯುತ್ತಾರೆ. ಇದರ ಪ್ರವೇಶ ದ್ವಾರವು 3.75 ಮೀಟರ್ ಎತ್ತರ ಹಾಗೂ 1.80 ಮೀಟರ್ ಅಗಲವಿರುವ ಶಿಲಾದ್ವಾರವನ್ನು ಹೊಂದಿದೆ. ಇದಕ್ಕೆ ಸರಿ ಹೊಂದುವ ಮರದ ಬಾಗಿಲನ್ನು ಜೋಡಿಸಲಾಗಿದೆ. ಬಾಗಿಲಿನ ಸೂತ್ರ ಪಟ್ಟಿಯನ್ನು ಹಿತ್ತಾಳೆಯ ಹೂವಿನಂತಿರುವ ಸಾಧನದಿಂದ ದ್ವಾರಬಂಧಕ್ಕೆ ಆನೆ, ಹೂವು ಮತ್ತು ತೀರ್ಥಂಕಕರ ಆಕೃತಿಗಳನ್ನು ಕೆತ್ತಿರುವುದು ಕಂಡುಬರುತ್ತದೆ. ಮಂಟಪದ ಗೋಡೆಗಳು ಸರಳವಾಗಿದ್ದು ಈ ಮಂಟಪದೊಳಕ್ಕೆ ಗಾಳಿ ಮತ್ತು ಬೆಳಕು ಸರಿಯಾಗಿ ಹರಿದು ಬರುವಂತೆ ಉತ್ತರ ಮತು ದಕ್ಷಿಣದಲ್ಲಿ ಆರು ಜಾಲಂಧ್ರಗಳನ್ನು ಜೋಡಿಸಲಾಗಿದೆ.

ಇಲ್ಲಿಂದ ಗರ್ಭಗೃಹದ ಕಡೆಗೆ ಹೋಗುವ ಮಹಾದ್ವಾರದ ಇಕ್ಕೆಗಳಲ್ಲಿ ಗೋಡೆÀಗೆ ತಾಗಿಕೊಂಡಿರಯವಂತೆ ಆಕರ್ಷಕವಾದ ಬೃಹತ್ ಕಂಬಗಳಿವೆ. ಈ ಕಂಬಗಳ ಮೇಲೆ ಕೆಳಗಿಂದ ಮೇಲೆ ಕ್ರಮವಾಗಿ ದ್ವಾರಪಾಲಕ,ಕೀರ್ತಿ ಮುಖ ಮತ್ತು ಬಳ್ಳಿಯ ಚಿತ್ರಗಳನ್ನು ಕೆತ್ತಲಾಗಿದೆ. ದಕ್ಷಿಣ ಭಗದಲ್ಲಿರುವ ಕಂಬಗಳ ಮೇಲೆ ಮೃದಗ ಬಾರಿಸುವ ಪುರುಷನೊಬ್ಬನ ಆಕೃತಿ ಹಾಗೂ ಅಷ್ಟಾವಕ್ರನಂತೆ ಕಾಣುವ ಕುರೂಪಿ ವ್ಯಕ್ತಿಯ ಶಿಲ್ಪವನ್ನು ಕೆತ್ತಲಾಗಿದೆ. ಕಂಬದ ತುದಿಯಲ್ಲಿ ಕೊಳಲನ್ನೂದುವಗೋಪಾಲಕೃಷ್ಣನ ಆಕೃತಿ ಇದೆ. ಇದು ಧಮ್ ಸಮ್ವಯಯತೆಯ ತತ್ವವನು ಸೂಚಿಸುವಂತಿದೆ. ಇನ್ನೊಂದು ಬದಿಯ ಕಂಬಗಳ ಮೇಲೆ ಆನೆಯ ಚಿತ್ರ, ಬಳ್ಳಿಗಳು, ಕೀರ್ತಿಮುಖ ಮತ್ತು ಅಲಂಕಾರಿಕ ರಚನೆಗಳನ್ನು ಬಿಡಿಸಲಾಗಿದೆ. ಇಕ್ಕೆಲಗಳಲ್ಲಿ ಒಟ್ಟು ನಾಲ್ಕು ನೃತ್ಯ ಭಂಗಿಯ ಸ್ತ್ರಿಯರ ಆಕೃತಿಗಳಿವೆ. ಈ ಮಂಟಪದ ಇನ್ನೂಮದು ವೈಶಿಷ್ಟವೆಂದರೆ ಇದರ ಗೋಡೆಗಳ ಮೇಲಿರುವ ವಿಜಯನಗರ ಕಾಲೀನ ಶಾಸನಗಳು. ಇದರ ಎಡಕ್ಕಿರುವ ಕ್ರಿ.ಶ.1430ರ ಇಮ್ಮಡಿ ದೇವರಾಯನ ಶಾಸನ,ಉತ್ತರ ಭಾಗದ ಗೋಡೆಯ ಮೇಲಿರುವ ಕ್ರಿ.ಶ. 1430ರ ಇಮ್ಮಡಿ ದೇವರಾಯನ ಇನ್ನೋದು ಶಾಸನ,ಅಲ್ಲೆ ಎಡಕ್ಕಿರುವ ಈ ಜಿನಲಯದ ಎರಡನೇ ನೆಲೆಯ ಕುರಿತಾದ ಶಾಸನ,ಉತ್ತರಭಾಗದ ಗೋಡೆಯ ಮೇಲಿರುವ ಕ್ರಿ.ಶ. 1451ರ 2ನೇ ದೇವರಾಯ ಶಾಸನ, ಉತ್ತರ ಭಾಗದ ಗೋಡೆಯ ಮೇಲಿರುವ ಕ್ರಿ.ಶ 1461 ರ ಜೈನಶಾಸನ, ಎಡಕ್ಕಿರುವ ನಗಿರೆಯ ರಾಜ ಭಯರದೇವನ ಶಾಸನ, ಉತ್ತರ ಭಾಗದ ಗೋಡೆಯ ಮೇಲಿರುವ ಕ್ರಿ.ಶ 1471ರ ವಿರೂಪಾಕ್ಷನ ಶಾಸನ ಮತ್ತು ಉತ್ತರ ಭಾಗದ ಗೊಡೆಯ ಮೇಲಿರುವ ಕ್ರಿ.ಶ 1486 ರ ನಿತ್ಯ ನೈವೇದ್ಯ ಮತ್ತು ದೇವಪೂಜೆಗೆ ಸಂಬಂದಿಸಿದ ಶಾಸನ ಇವು ಈ ಜಿನಾಲಯ ಹಾಗೂ ವಿಜಯನಗರ ಸಾಮ್ರಾಜ್ಯ ಮತ್ತು ನಗಿರೆ ರಾಜ್ಯಕ್ಕೆ ಸಂಬಂದಿಸಿದ ಅಮೂಲ್ಯ ಮಾಹಿತಿಯನ್ನೂ ಒದಗಿಸಿಕೊಡುತ್ತದೆ. ಈ ಮಂಟಪದ ವಾಯುವ್ಯ ಮೂಲೆಯ ಕಂಬದ ತಳದಲ್ಲಿರುವ ಸರಸ್ವತಿ ದೇವಿಯ ಮೂರ್ತಿ ಅತಿ ಸುಂದರವಾದುದು. ಈ ಮಂಟಪದ ಉತ್ತರ ದಿಕ್ಕಿನಲ್ಲಿರುವ ಕಂಬದ ತಳಭಾಗದಲ್ಲಿ ಕಾಳಿಂಗ ಮರ್ದನ ಮಾಡುತ್ತಿರುವ ಶ್ರೀ ಕೃಷ್ಣ,ಇನ್ನೂಂದು ಪಾಶ್ರ್ವದಲ್ಲಿ ಬೆಣ್ಣೆ ತಿನ್ನುತ್ತಿರುವ ಬಾಲಕೃಷ್ಟಣರ ಆಕೃತಿಗಳನ್ನು ತೋರಿಸಲಾಗಿದೆ. ಇನ್ನೂಂದು ಕಂಬದ ಮೇಲೆ ಕಿರಾತನಂತೆ ಕಾಣುವ ಗಡ್ಡಧಾರಿಯಾದ ವ್ಯಕ್ತಿ, ಮರದ ಕೆಳಗೆ ಮಲಗಿರುವ ಜಿಂಕೆ ಇತ್ಯಾದಿಗಳ ಆಕೃತಿಗಳನ್ನು ತೋರಿಸಲಾಗಿದೆ. ಪ್ರವೇಶದ್ವಾರದ ಬಲಬದಿಯ ಕಂಬದಲ್ಲಿಕೋಲಾಟದಲ್ಲಿ ನಿರತರಾದ ಇಬ್ಬರು ಸ್ತ್ರಿಯರು, ಇನ್ನೊಂದೆಡೆ ತಂಬೂರಿಯನ್ನು ನುಡಿಸುವನಟ್ವಾಂಗವನ್ನು ಬಾರಿಸುವ ಹಾಗೂ ನೈತ್ಯ ಮಾಡುವ ಸ್ತ್ರೀಯರ ಆಕೃತಿಗಳನ್ನು ಕಾಣಬಹುದು.ಇಲ್ಲಿಯ ಕಂಬಗಳ ರಚನೆಗಳು ಗಮನೀಯ. ಏಕೆಂದರೆ ಅದರ ಮೇಲ್ಬಾಗಗಳುಅಗಲ ಕಿರಿದಾಗಿ ವೃತ್ತಾಕಾರದ ತಲೆದಿಂಬಿನಂತಹ ರಚನೆ ಇದ್ದು ಅದರಲ್ಲಿ ಅದೋ ಮುಖಕಮಲದಳಗಳನ್ನು ತೋರಿಸುವುದು. ಕಂಬಗಳಂತೂ ಹಂಸ,ರಾಣಿ, ನೃತ್ಯ ಮಾಡುವ ಕಲಾವಿದೆ.ಜಾಲಿಯ ಮರ ಜಿಂಕೆಯನ್ನು ಓಡಿಸುವ ವ್ಯಕ್ತಿ, ಮೃದಂಗಿಕ್ಕೆ ಅನುಗುಣವಾಗಿ ನೃತ್ಯ ಮಾಡುವ ಸ್ತ್ರಿ ಯರ ಆಕೃತಿಗಳಿಂದ ಅಲಂಕೃತವಾಗಿರುವುವು. ಈ ಮಂಟಪದ ರಚನೆ, ಕಂಬಗಳ ವಿನ್ಯಾಸ, ಕಡಿದಿರಿಸಿದ ವಿಭಿನ್ನ ಆಕೃತಿಗಳು ನಮ್ಮನ್ನು ಅವುಗಳ ವೀಕ್ಷಣೆಯಲ್ಲೇ ತಲ್ಲೀನಗೋಳಿಸುತ್ತವೆ. ನೋಡುತ್ತಾ ಮುಂದುವರಿದಂತೆ ಇನ್ನೊಂದು ಆಕೃತಿಗಳು ನಮ್ಮ ಮನಸ್ಸನ್ನ ಸೆಳೆಯುತ್ತದೆ. ಇಲ್ಲಿಂದ ನಮ್ಮ ದೃಷ್ಟಿಯನ್ನು ಕಿತ್ತು ಮೇಲ್ಭಾಗಕ್ಕೆ ಹರಿಸಿದರೆ ಅಲ್ಲಿಯ ಭುವನೇಶ್ವರಿಯ ಮಧ್ಯದಲ್ಲಿ ಶೋಭೀಸುವ ಅಧೋಮುಖ ಕಮಲದ ಆಕೃತಿಯು ನಮ್ಮ ದೃಷ್ಟಿಯನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಕೆಳಗಿನ ಶಿಲೆಗಳ ಮೇಲೆ ಅಲಂಕಾರಿಕ ಕೆತ್ತನೆಗಳನ್ನು ಇನ್ನೂ ಕೆಳಗಿನ ಅಂಕಣದಲ್ಲಿ ಅಷ್ಟದಿಕ್ಪಾಲಕರನ್ನು ಆಕೃತಿಗಳ ಮೂಲಕ ತೋರಿಸಲಾಗಿದೆ. ಇಲ್ಲಿ ಪೂರ್ವದಿಕ್ಕಿನಿಂದ ಐರಾವತರ ಮೇಲೆ ಕುಳಿತಿರುವ ದೇವೇಂದ್ರ,ಟಗರಿನ ಮೇಲೆ ಕುಳಿತಿರುವ ಆಗ್ನಿ, ದಕ್ಷಿಣ ದಿಕ್ಕಿಗೆ ಕೋಣನ ಮೇಲೆ ಸವಾರಿ ಮಾಡುತ್ತಿರುವ ಯಮ ಮತ್ತು ಅವನ ದೂತ, ನೈಋತ್ಯ ದಿಕ್ಕಿನಲ್ಲಿ ಮನುಷ್ಯನ ಮೇಲೆ ಸವಾರಿ ಮಾಡುತ್ತಿರುವ ನಿರುತ್ ದಂಪತಿಗಳು ಪಶ್ಚಿಮ ದಿಕ್ಕಿನಲ್ಲಿ ಮಕರದ ಮೇಲೆ ಪ್ರಯಾಣಿಸುತ್ತಿರುವ ವರುಣ, ವಾಯುವ್ಯ ದಿಕ್ಕಿನಲ್ಲಿ ರಭಸದಿಂದ ಗಮನಿಸುತ್ತಿರುವ ವಾಯುದೇವ, ಉತ್ತರ ದಿಕ್ಕಿನಲ್ಲಿ ಪಿಠಸ್ಥನಾಗಿರುವ ಕುಬೇರ, ಈಶಾನ್ಯಾ ದಿಕ್ಕಿನಲ್ಲಿ ವೃಷಭದ ಮೇಲೆ ಕುಳಿತಿರುವ ಶಿವಪಾರ್ವತಿಯರು. ಈ ಎಲ್ಲಾ ಆಕೃತಿಗಳು ಬಹು ಕಲಾತ್ಮಕವಾಗಿ ಮೂಡಿ ಬಂದಿರುವುದನ್ನು ಇಲ್ಲಿ ಕಾಣಬಹುದು. ಇವುಗಳ ಕೆಳಗಿನರುವ ಕಲ್ಲಿನ ತೋಲೆಗಳ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಜೈನ ತೀರ್ಥಂಕರರು ಧ್ಯಾನ ಮುದ್ರೆಯಲ್ಲಿ ಕುಳಿತಿರುವುದನ್ನು ತೋರಿಸಲಾಗಿದೆ. ಈ ತೊಲೆಗಳ ನಾಲ್ಕುಗಳಲ್ಲಿ ಅರಳುತ್ತಿರುವ ಆಧೋಮುಖ ಕಮಲಗಳನ್ನು ಮೂಡಿಸಿಡಲಗಿದೆ.

ಭೈರಾದೇವಿ ಮಂಟಪ:

ತ್ರಿಭುವನ ತಿಲಕ ಚೂಡಾಮಣಿ ಚೈತ್ಯಾಲಯ ನಿರ್ಮಾಣದ ಸ್ವಲ್ಪ ಸಮಯದ ನಂತರ ಕ್ರಿ.ಶ. 1462 ರಲ್ಲಿ ಭಟ್ಕಳದ ರಾಣಿಭೈರಾದೇವಿ ಈ ಮಂಟಪವನ್ನು ನಿರ್ಮಿಸಿದ್ದಳು ಈ ಮಂಟಪದ ಸ್ತಂಭಗಳು ದೊಡ್ಡ ಗಾತ್ರದವು ವಿಚಿತ್ರವಾದವು ಹಾಗೂ ಆಕರ್ಷಕವಾದವು ಗಮನೀಯ ವಿಷಯವೆಂದರೆ ಒಮದು ಕಂಬದಂತೆ ಮತ್ತೊಂದಿಲ್ಲ. ಚೌಕಾಕಾರದ ಅಸ್ತಿವಾರದ ಮೇಲೆ ನಕ್ಷತ್ರಕಾರ ಮೂಲೆಗಳನ್ನು ಹೊಂದಿ ನಾಲ್ಕು ಸುತ್ತಲೂ ತೆರೆದ ಮಹಡಿಯುಳ್ಳ ಮಂಟಪವಿದು. ಇದರ ಅಧಿಷ್ಠಾನದ ಭಾಗವನ್ನು ವಿಜಯನಗರದ ಅರಸ ಇಮ್ಮಡಿ ದೇವರಾಯನು ಉಡುಗೊರೆಯಾಗಿ ಕೊಟ್ಟಿದ್ದನೆಂದು ಹೇಳಲಾಗಿದೆ. ಒಟ್ಟಿನಲ್ಲಿ ಈ ಮಂಟಪದ ಆಯ ಪಾಯ ರಚನೆ ಮತ್ತು ಉನ್ನತಿ ಬಲು ದೊಡ್ಡದು.

ಭೈರಾದೇವಿ ಮಂಟಪವನ್ನು ಅಧ್ಯಯನ ಮಾಡಿದಾಗ ನಮಗೆ ತಿಳಿದು ಬರುವ ಆಂಶವೇಂದರೆ ಇದರ ಒಳಾಂಗಣದಲ್ಲಿ ಇಪ್ಪತ್ತಾರು ಕಂಬಗಳು, ಹೊರ ಜಗಲಿಯಲ್ಲಿ ಇಪ್ಪತ್ನಾಲ್ಕು ಕಂಬಗಳು - ಹೀಗೆ ಒಟ್ಟುಐವತ್ತು ಕಂಬಗಳಿವೆ ಎಂಬುದು. ಮುಖ್ಯ ಗೋಪುರಕ್ಕೆ ಆಧಾರವಾಗಿ ನಾಲ್ಕು ಕಂಬಗಳು, ಬದಿಗಳಿಗೆ ಆಧಾರವಾಗಿ ಇಪ್ಪತ್ತುಕಂಬಗಳು ನಿಲ್ಲಿಸ್ಪಟ್ಟಿವೆ. ಮುಖ್ಯ ಗೋಪುರದಲ್ಲಿನ ನಾಲ್ಕು ಕಂಬಗಳು ಉಳಿದೆಲ್ಲಾ ಕಂಬಗಳಿಗಿಂತ ಹೆಚ್ಚು ಆಕರ್ಷಕ. ಎಡಪಾಶ್ರ್ವದ ಮೊದಲನೇ ಕಂಬದ ಕೆಳಭಾಗದಲ್ಲಿ ಚೌಕಾಕಾರದ ಮೂರು ಪಟ್ಟಿಗಳಿವೆ ಅದರ ಮೇಲ್ಬಾಗದಲ್ಲಿ 4 ಜತೆ ಹಂಸಗಳು ಅದರ ಮೇಲೆ ಹೂಗಳು ಅವುಗಳನ್ನು ಭಿನ್ನವಾಗಿ ತೋರಿಸುವ ದಪ್ಪನೆಯ ಹಗ್ಗವೋಂದು ಕಂಬವನ್ನು ಸುತ್ತುವರಿದಿದೆ. ಕಂಬದ ನಾಲ್ಕು ಮೈಗಳ ಮೇಲೆ ಆನೆಯ ಸೊಂಡಿಲಿನ ಆಕಾರವಿದ್ದು ಅದರ ತುದಿಯಲ್ಲಿ ಕಮಲದ ಮೊಗ್ಗಿನ ರಚನೆಗಲಿವೆ. ಈ ಕಂಬದ ವಿಶೇಷೆಯೆಂದರೆ ಇದರ ತಳಭಾಗದಲ್ಲಿ ನಗಿರೆ ರಾಜ್ಯದ ಅರಸ ಸಾಳ್ವ ಮಲ್ಲ ಒಂದುಅಪುರ್ಣ ಶಾಸನವಿರುವುದು. ಇನ್ನೋಂಡು ಕಂಬವು ಬಳ್ಳಿಯಾಕಾರದ ರಂಗೋಲಿಯನ್ನು ಹೊಂದಿದೆ.ಕೆಳಬಾಗದ ನಾಲ್ಕು ಮೂಲೆಗಳಲ್ಲಿ ಕುದುರೆ ಹಾಗೂ ಆನೆಯ ಸೊಂಡಿಲಿನ ಕೆತ್ತನೆಗಳನ್ನು ಕಾಣಬಹುದು. ದ್ಯಾನಾಸಕ್ತನಾದ ದಿಗಂಬರ ಗಣಪತಿಯ ಮೂರ್ತಿಯು ಕಂಡುಬರುವುದೇ ಇಲ್ಲಿಯ ವಿಶೇಷತೆ. ಉಳಿದಂತೆ ಯಕ್ಷಗಾನದ ಕಿರೀಟವನ್ನು ಹೋಲುವ ರಚನೆ ಮತ್ತು ಬಳ್ಳಿಯ ಆಕೃತಿಗಳನ್ನು ಇಲ್ಲಿ ಕಾಣಬಹುದು. ಒಟ್ಟಿನಲ್ಲಿ ಈ ಮಂಟಪದ ಎಲ್ಲ ಕಂಬಗಳ ತಳವು ಚೌಕಾಕಾರವಾಗಿದ್ದು ಮೇಲಕ್ಕೆ ಹೋದಂತೆ ಅನೇಕ ಛೇದಗಳನ್ನೂ,ವರ್ತುಲಗಳನ್ನೂ ಪಡೆದುಕೊಂಡು ಸಿಂಗಾರಗೊಂಡಿವೆ. ವಿವಿಧ ಬಂಗಿಯ ಮದನೀಕಾ ಶಿಲ್ಪಗಳು, ವಾದ್ಯಗಾರರು, ನೃತ್ಯಗಾರರು, ದೇವತೆಗಳು ನಮ್ಮ ಕಣ್ಮನಗಳನ್ನೂ ಸೂರೆಗೋಳ್ಳುತ್ತವೆ. ಸ್ತಂಭಗಳು ಅಸಂಖ್ಯಾತ ಕುಸುರಿ ಕೆಲಸಗಳಿಮದ ಸುಂದರವಾಗಿರುವಂತೆ ಶಿಲ್ಪ ಶಾಸ್ತ್ರಕ್ಕೆ ನಿಷ್ಠೆಯನ್ನು ತೋರಿಸುತ್ತಾ ಪದ್ಮಪೀಠ, ಘಟಕಪೋತ, ಚೌಕ, ಬ್ರಹ್ಮಕಾಂತ, ವಿಷ್ಣುಕಾಂತ, ಸೌಮ್ಯ ಹೀಗೆ ಎಲ್ಲ ನಿಮಯಬದ್ಧವಾಗಿ ಮತ್ತು ಸುಸಂಬದ್ಧವಾಗಿ ನಿರ್ಮಾಣವಾಗಿವೆ. ಇವುಗಳ ಇನ್ನೋಂದು ವೈಶಿಷ್ಟ್ಯವೆಂದರೆ ಒಂದೇ ಕಂಬದಲ್ಲಿ ಹಲವಾರು ಚಿಕ್ಕ ಚಿಕ್ಕ ಕಂಬಗಳನ್ನು ನಿರ್ಮಿಸಿ ಅವುಗಳಲ್ಲೇ ಬೇರೆ ಬೇರೆ ಆಕಾರಗಳನ್ನು ಸೃಷ್ಟಿದ ಶಿಲ್ಪಿಯ ಕುಶಲತೆ, ಈ ಆಕಾರಗಳಲ್ಲಿ ಚಿಕ್ಕ ಚೈತ್ಯಾಲಯಗಳು ದೇವಕೋಷ, ಗಂಧ ಕುಟಿ, ವಿವಿಧ ರೀತಿಯ ಮಕರ ತೋರಣಗಳು ನಿರ್ಮಾಣ ಗೋಡಿರುವುದುದನ್ನು ಕಾಣಬಹುದು. ಕಂಬಗಳ ಮೇಲ್ಭಾಗದ ಬೋದಿಗೆ, ಅಲ್ಲಿ ಮೂಡಿರುವ ಅಧೋಮುಖ ಕಮಲದ ಮೋಗ್ಗುಗಳು ಕುತೂಹಲವನ್ನು ಹುಟ್ಟಿಸುತ್ತವೆ. ನಾಲ್ಕು ಕಂಬಗಲು ಸೇರುವ ಮಧ್ಯಬಾಗದ ಮೇಲ್ಚಾವಣಿಯ ಕೂಟದಲ್ಲಿ ಭುವನೇಶ್ವರಿ ಮತ್ತು ಅದರ ಮಧ್ಯದಲ್ಲಿ ಅಧೋಮುಖವಾಗಿರುವ ಸಹಸ್ರದಳ ಕಮಲವಿದೆ.ಅದಕ್ಕೆ ಹೊಂದಿಕೊಂಡು ಅನೇಕ ಛೇದಪಟ್ಟಿಗಳು ಅದರಲ್ಲಿ ವಿವಿಧ ಕೋನಗಳು, ಅಷ್ಟದಿಕ್ಪಾಲಕರು, ಅವುಗಳೆಲ್ಲವನ್ನುಹೂಬಳ್ಳಿಗಳಿಂದ ಆವೃತವಾಗಿಸಿ ಶಿಲ್ಪಕ್ಕೆ ಸಮಗ್ರತೆಯನ್ನೂ ಪರಿಪೂರ್ಣಯನ್ನೂ ತಂದು ಕೊಟ್ಟಿವೆ. ಹೊಯ್ಸಳ ದೇವಾಲಯಗಳಲ್ಲಿ ಭುವನೇಶ್ವರಿ ಕೆತ್ತನೆಯನ್ನು ಮೃದುವಾದ ಬಳಪದ ಕಲ್ಲಿನಲ್ಲಿ ನಿರ್ಮಿಸಿದ್ದರೆ. ಈ ಜಿನಾಲಯದಲ್ಲಿ ಒರಟು ಕಲ್ಲುಗಳನ್ನು ಉಪಯೋಗಿಸಿ ಇಂತಹ ಸುಂದರ ಕಲಾಕೃತಿಗಳನ್ನು ಮೂಡಿಸಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಶಿಲ್ಪಿಗಳ ಕಲಾ ಕೌಶಲ್ಯಕ್ಕೆ ಸಾಕ್ಷಿ

   ನಿರ್ಮಾಣದ ವಿನ್ಯಾಸದಲ್ಲಿ ಒಂದು ಕಂಬದಂತೆ ಇನ್ನೋಂದಿಲ್ಲದಿರುವುದು ಕುತೂಹಲಕರವಾದ ಮತ್ತು ಗಮನೀಯ ಅಂಶವಾಗಿರುವಂತೆ ನಿರ್ಮಾಪಕರ ಅಭಿರುಚಿಯನ್ನು ವ್ಯಕ್ತಗೋಳಿಸಿವ ದಿಕ್ಸೂಚಿಯೂ ಆಗಿದೆ.ಈ ವೈಭವ ಮತ್ತು ವಾಸ್ತುಶಿಲ್ಪದ ತಾಂತ್ರಿಕತೆಯನ್ನು ಕಂಡ ವಿದೇಶಿ ಕಲಾ ವಿಮರ್ಶಕರಾದ ಪರ್ಸಿ ಬ್ರೌನ್,ಸ್ಮಿತ್, ವಾಲ್ ಹೌಸ್,ಫರ್ಗೂಸನ್ ಮೊದಲಾದವರು ಮುಕ್ತ ಕಂಠದಿಮದ ಪ್ರಶಂಸಿಸಿದ್ದಾರೆ. ಅವರಲ್ಲೋಬ್ಬರಾದ ಸ್ಮಿತ್ ಎಂಬುವನು ಎನ್ನುತ್ತಾ  ಈ ಸ್ತಂಭ ಶಿಲ್ಪವನ್ನು ಮನಸಾರೆ ಮೆಚ್ಚಿದ್ದಾರೆ. ಫರ್ಗೂಸನ್ನರು “ ಈ ವಿಶಾಲ, ಶೋಬಾಯಮಾನವಾದ ಬಸದಿಗೆ ಹೆಚ್ಚು ಕಡಿಮೆ ಒಂದು ಸಾವಿರ ಕಂಬಗಳಿದ್ದರೂ, ಒಂದು ಕಂಬವು ಇನ್ನೋಂದುನ್ನು ಹೋಲುವುದೇ ಇಲ್ಲ ಈ  ಶಿಲ್ಪದಲ್ಲಿ ಮುಖ್ಯವಾದುದು ಕಂಬಗಳ ಮತ್ತು ಅವುಗಳ ಚಾಚುಪೀಠಗಳಲ್ಲಿ ಕಂಡುಬರುವ ತಾಂತ್ರಿಕ ಕೌಶಲ್ಯ. ಒಂದೊಂದು ಕಂಬವೂ ಅದರ ಮೇಲಿನ ಬೋದಿಗೆಯೂ ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟು ಸಾಮರಸ್ಯದಿಂದ ಹೊಂದಿಕೊಂಡು ಒಂದು ಸ್ವತಂತ್ರ  ರಚನೆಯಂತೆ ಕಂಡುಬದುತ್ತದೆ. ಒರಟುಗಲ್ಲಿನ (ಗ್ರಾನೈಟ್) ಒಂದು ಕಂಬದ ಒಳಗಡೆ ಅನೇಕ ಚಿಕ್ಕ ಕಂಬಗಳನ್ನು ಕೊರೆದು ಅವುಗಳ ಓಳಬಾಗದಲ್ಲಿ ಸುತ್ತಲೂ ಸೂಕ್ಷ್ಮ ಕುಸುರಿ ಕೆತ್ತನೆಗಳನ್ನು ಮಾಡಿರುವುದು ನಮಗೆ ಸೋಜಿಗವನ್ನುಂಟು ಮಾಡುತ್ತದೆ” ಎಂದು ಹೇಳಿದ್ದಾರೆ.
   ಇಲ್ಲಿಯ ಈ ಮಂಟಪದ ಮೇಲಿನ ಕಟ್ಟಡದ ಭಾಗದಲ್ಲಿ ವೈವಿದ್ಯಮಯವಾದ ಅಲಂಕಾರ ಸೂಕ್ಷ್ಮ ಕುಸುರಿ ಕಲೆಗಳು ಅವಕಾಶವನ್ನು ಪಡೆಯದೆ ಇದ್ದುದರಿಂದ ಸ್ತಂಭಗಳ ಕೆತ್ತನೆ, ದ್ವಾರ ಬಂಧ ಮತ್ತು ಅಧಿಷ್ಠಾನದ ಕೆತ್ತಾನೆಗಳಿಗೆ  ಹೆಚ್ಚು ಗಮನ ನೀಡಿರುವಂತೆ ತೋರುತ್ತದೆ. ಸ್ತಂಭ ಮತ್ತು ಭಿತ್ತಿಯ ಮೇಲೆ ಕೊರೆದ ಉಬ್ಬು ಶಿಲ್ಪಗಳು,ಅಲಂಕೃತ ಚಾಚುಪೀಠ, ಬೋದಿಗೆಯ ಸುಂದರ ರಚನೆ, ಹೂಬಳ್ಳಿಗಳಿಂದ ಅಲಂಕೃತವಾಗಿರುವ  ದ್ವಾರಬಂದ- ಇವೆಲ್ಲವೂ ಇಲ್ಲಿಯ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಸಾರಿ ಹೇಳುತ್ತವೆ. ಇನ್ನು ಒಂದು ಹೆಜ್ಜೆ ಮುಂದುವರಿದು ಹೇಳುವುದಾದಾರೆ, ವಿಜಯನಗರ ಶೈಲಿಯ ಸತ್ವವನ್ನು ಹೀರಿಕೊಂಡು ಚಾಲುಕ್ಯ ಹೋಯ್ಸಳ ಶಿಲ್ಪದ ಕುಸುರಿ ಕೆತ್ತನೆಯ ಮನೋಧರ್ಮವನ್ನು ಬೆಳೆಸಿಕೊಂಡು ಇಲ್ಲಿಯ ವಾಸ್ತುಶಿಲ್ಪವು ತನ್ನದೇ ಆದ ಸುಂದರ ಮಾರ್ಗದಲ್ಲಿ ಮುಂದುವರಿಯಿತು.
     ಈ ಶಿಲ್ಪಗಳು ಧಾರ್ಮಿಕ  ಸಾಂಸ್ಕ್ರತಿಕ ಮತ್ತು ಕಲಾ ಮಹತ್ವದಿಂದ ಕೊಡಿವೆ. ಇವುಗಳು ಹದಿನಾಲ್ಕನೇ ಶತಮಾನದ ಮಾನವ ಚಟುಟಿವಟಿಕೆ, ದಾರ್ಮಿಕ ವಿಧಿವಿಧಾನ ಸರ್ವಧರ್ಮ ಸಮನ್ವಯತೆ ಮತ್ತು ಆಡಳಿತ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ.ಪ್ರತಿಯೋಂದು ಕಂಬವೂ ಭಿನ್ನ ಭಿನ್ನವಾಗಿರುವುದು.ಶಿಲ್ಪಕಾರನ ಅತಿಯಾದ ಸ್ವಾತಂತ್ರ್ಯ ಮತ್ತು ಅಭಿರುಚಿಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಿನಲ್ಲಿ ಶಿಲೆಯಲ್ಲಿ ಕಲೆಯ ಬಲೆಯನ್ನುಬೀಸಿದಂತಿರುವ ಇದರ ಶಿಲ್ಪ ಕಲಾ ಕೌಶಲ್ಯಕ್ಕೆ ಬೆರಗು ಬೀಳದ ಜನರೆ ಇಲ್ಲ ಹೀಗೆ ಬಾರತೀಯ ವಸ್ತು ಶಿಲ್ಪಕ್ಕೆ ಜೈನ ಧರ್ಮದ ಕರಾವಳಿಯ ಈ ಕಲಾಕುಸುವು ಅಪೂರ್ವವಾಗಿದೆ. 
   ಬೈರಾದೇವಿ ಮಂಟಪದಲ್ಲಿ ವೀಕ್ಷಕರ ಗಮನ ಸೆಳೆಯುವ ಶಿಲ್ಪಕಲಾಕೃತಿಗಳೆಂದg  ಇಲ್ಲಿಯ ಉಬ್ಬಶಿಲ್ಪಗಳು ಸುಮಾರು ಹನ್ನೆರಡು ಸೆಂಟಿಮೀಟರ್ ಅಗಲವಿರುವಅಧಿಷ್ಠಾನದ ಪಟ್ಟಕೆಗಳಲ್ಲಿ ಕೆತ್ತಲಾಗಿರುವ ಈ ಉಬ್ಬ ಶಿಲ್ಪಗಳು ತೀರಾ ವಿಶಿಷ್ಟ ರಚನೆಗಳಾಗಿದ್ದು ಆಕರ್ಷಣೀಯವಾಗಿವೆ, ನಮ್ಮ ಪೂರ್ವಜರ ಜನ ಜೀವನವನ್ನು, ಅಂದಿನ ಸಮಾಜದ ಸ್ಥಿತಿ ಹಾಗೂ ವಿಶಿಷ್ಟ ಸಂಪ್ರದಗಳನ್ನು ಹಾಗೂ ಅರಸು ಮ£ತನಗಳ  ಕಾರ್ಯಕ್ರಮಗಲನ್ನು ಇವು ಚಿತ್ರಿಸುತ್ತವೆ. ಎಂಬುದು ಸತ್ಯ.
     ಈ ಬೈರಾದೇವಿ ಮಂಟಪವನ್ನು ಪ್ರವೇಶಿಸಲು ಹತ್ತಿಕೊಂಡು ಹೋಗುವ  ಮೆಟ್ಟಿಲುಗಳ ಎರಡೂ ಪಾಶ್ರ್ಚಗಳಲ್ಲಿ ಎರಡು ಕಲ್ಲಿನ ಆನೆಗಳನ್ನು ನಮಗೆ ಮುಖ ಮಾಡಿ ನಿಲ್ಲಿಸಲಾಗಿದೆ.ಅವುಗಲ ಮೇಲೆ ಅಲಂಕಾರಿಕ ವಸ್ತ್ರಗಳನ್ನು ಹಾಕಿ ವಿವಿಧ ಸರಪಳಿಗಳಿಂದ ಹಾಗೂ ಗಂಟೆಯಿಂದ ಅಲಂಕಾರಗೋಳಿಸಲಾಗಿದೆ. ಇವುಗಳ ಬಲಭಾಗದ ಪಟ್ಟಿಕೆಯಲ್ಲಿ ಮುಸ್ಲೀಂ ಸೈನಿಕರು ಯುದ್ದಕ್ಕೆಹೊರಟದೈಶ್ಯ, ಎಡಭಾಗಕ್ಕೆ ಹಿಂದೂಸೈನಿಕರು ಅದೇ ರೀತಿ ಹೊರಟಿರುವ ದೃಶ್ಯಗಳನ್ನು ತೋರಿಸಲಾಗಿದೆ. ಇದು ಪ್ರಾಯಶಃ14-15 ನೇ ಶತಮಾನದಲ್ಲಿ ಬಹಮನಿ ಅರಸರಿಗೂ, ವಿಜನಗರದ ಅರಸರಿಗೂ ನಡೆದ ಯುದ್ದವನ್ನು ಚಿತ್ರಿಸುತ್ತದೆಯೆಂದು ಊಹಿಸಬಹುದು. ಈ ಶಿಲ್ಪಗಳು ಇಷ್ಟನ್ನು ಮಾತ್ರವಲ್ಲದೆ ಜನರ ಕೀಡೆಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಿತ್ಯಕರ್ಮಗಳು ದೇವಾನುದೇವತೆಗಳು, ಪ್ರಾಣಿ ಪಕ್ಷಿಗಳು ಮುಂತಾದುವುಗಳುನ್ನು ತೋರಿಸುತ್ತವೆ.ಅಲ್ಲಲ್ಲಿರುವ ಖಡ್ಗ, ಕತ್ತಿ ಗುರಾಣಿ ಮತ್ತು ಬಿಲ್ಲು ಬಾಣಗಳನ್ನು ಕೈಯಲ್ಲಿ ಹಿಡಿದ ಯೋಧರ ಆಕೃತಿಗಳು ಹಾಗೂ ಅವುಗಳು ವ್ಯಕ್ತಪಡಿಸುವ ಭಾವಾಭಿವ್ಯಕ್ತಿ ಬಹು ಮುಖ್ಯ ವಿಹಾರಕ್ಕೆ ಹೊರಟ ಅರಸ,ಆತನ ಕಾವಲಿಗಾಗಿ ನಿಂತ ಅಂಗರಕ್ಷಕರು, ಕುದುರೆ ಮತ್ತು ಆನೆಗಳ ಮೇಲೆ ಸವಾರಿ ಹೊರಟ ಯೋಧರು, ಶತ್ರುಗಳು ಮುತ್ತಿಗೆ ಹಾಕಿದಾಗ ಯುದ್ಧಕ್ಕೆ ಸನ್ನದ್ಧರಾಗುವಂತೆ ಸೂಚನೆ ನೀಡಲು ಕಹಳೆ ಊದುತ್ತಾ ನಿಂತ ಯೋಧರು - ಹೀಗೆ ಅನೇಕ ಸನ್ನಿವೇಶಗಳು ಇಲ್ಲಿ ಸಹಜವೆನ್ನುವಂತೆ ಚಿತ್ರಿತವಾಗಿವೆ. ಈಎಲ್ಲ ಯೋಧರ ಮೈಕಟ್ಟು, ಶಸ್ತ್ರಾಸ್ತ್ರಗಳು,ಚಲನೆಯ ವಿನ್ಯಾಸ ಹಾಗೂ ಅವರ ಮುಖದಲ್ಲಿ ಅಭಿವ್ಯಕ್ತಿಗೊಳ್ಳುವ ಭಾವಗಳು – ಇತ್ಯಾದಿಗಳನ್ನು ಗಮನಿಸಿದರೆ ಅವರು ಬಲಶಾಲಿಗಳಾಗಿಯೂ, ಶೌರ್ಯವಂತರಾಗಿಯೂ ಕ್ರಿಯಾ ಸನ್ನದ್ಧರಾಗಿ ಇದ್ದಿರುವಂತೆಯೂ ಕಂಡು ಬರುತ್ತದೆ.
   ಅಂದಿನ ಜನರು ಕೇವಲ ಯುದ್ಧಕ್ಕೆ ಮಾತ್ರವಲ್ಲದೆ ಮನರಂಜನೆಗಾಗಿಯೂ ತಮ್ಮ ಸಮಯವನ್ನು ಮೀಸಲಿಡುತ್ತಿದ್ದರು ಎಂಬುದನ್ನು ಇನ್ನುಳಿದ ಕೆಲವು ಈ ಉಬ್ಬು ಶಿಲ್ಪಗಳ ಮೂಲಕ ತಿಳಿಯಪಡಿಸಲಾಗಿದೆ.ಈ ಮನರಂಜನೆಗಳಲ್ಲಿ ಮಹಿಳೆಯರ ಪಾತ್ರವೇ ಹಿರಿದಾದುದು ಹಾಗೂ ಅವರು ಬಹು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದನ್ನೂ ಇವು ಸೂಚಿಸುತ್ತವೆ. ನಾಟ್ಯ ಭಂಗಿಯಲ್ಲಿ ನಿಂತ ನಾರಿಯರು, ವಿವಿಧ ನಾಟ್ಯ ಸಲಕರಣೆಗಳನ್ನು ಹಿಡಿದು  ಜಾನಪದ ನೃತ್ಯ ಮಾಡುವ ದೃಶ್ಯ, ಡೋಲು ಕುಣಿತ ಇತ್ಯಾದಿ ನರ್ತನದ ದೃಶ್ಯಗಳು ಹಾಗೂ ಅದರ ವಿವಿಧ ಬಂಗಿಗಳು ಇಲ್ಲಿ ಪ್ರದರ್ಶಿತವಾಗಿವೆ. ನೃತ್ಯಗಾತಿಯರು ಧರಿಸಿರುವ ಮನಸೆಳೆವ ಉಡುಪು ಮತ್ತು ತೊಟ್ಟಿರುವ ಆಭರಣಗಳು ಬಹಳ ಕಲಾತ್ಮಕವಾಗಿರುವಂತೆಯೋ ನೋಡುಗರ ಕಣ್ಣಿಗೆ ಮುದ ನೀಡುತ್ತವೆ. ಜೊತೆಯಲ್ಲೆ ಹಣೆಗೆ ಬಿಂದಿ ಹಾಕುತ್ತಿರುವ ಮಹಿಳೆಯು ತನ್ನ ಶೃಂಗಾರಪ್ರಿಯತೆಯನ್ನು ಎತ್ತಿ ತೋರಿಸುತ್ತಿದ್ದಾಳೆ. ಬೀಸುಕಲ್ಲಿನಿಂದ ಧಾನ್ಯಗಳನ್ನು ಆಹಾರಕ್ಕಾಗಿ ಸಿದ್ಧಗೊಲಿತ್ತಿರುವ ಮಹಿಳೆಯೋಬ್ಬಳು ತನ್ನ ಕರ್ಮತಲ್ಲೀನತೆಯಿಂದ ಗಮನವನ್ನು ಸೆಳೆಯುತ್ತಾಳೆ.
    ಕೆಲವು ಉಬ್ಬು ಶಿಲ್ಪಗಳಲ್ಲಿ ಪ್ರಾಣಿಗಳ ಚಿತ್ರಣವೂ ಕಂಡುಬರುತ್ತದೆ.ಅವುಗಳಲ್ಲಿ ನಾಯಿಯನ್ನು ಸಾಕುಪ್ರಾಣಿಯನ್ನಾಗಿ, ಬೇಟೆ ಸಂದರ್ಭದಲ್ಲಿ ಇತರ ಕ್ರೂರ ಪ್ರಾಣಿಗಳಿಂದ ತಮ್ಮ ರಕ್ಷಣೆಗಾಗಿ ಬಳಸುತ್ತಿದ್ದ, ಹಂದಿಯನ್ನು ಬೇಟೆಯಾಡುವ, ಆನೆಗೆ ಗುರಿ  ಇಡುತ್ತಿರುವ, ಸಿಂಹಗಳೊಂದಿಗೆ ಕಳಗ ನಡೆಸುತ್ತಿರುವ ಆನೆಯೊಂದಿಗೆ ಸೆಣಸುತ್ತಿರುವ ಮತ್ತು ಕುದುರೆಯನ್ನು ಪಲಗಿಸುತ್ತಿರುವ ದೃಶ್ಯಗಳು ಇಲ್ಲಿ ಸ್ವಷ್ಟವಾಗಿ ಕಂಡು ಬರುತ್ತವೆ.  ಚೀನಾ ದೇಶದ ಡ್ರಾಗನ್ ವಿಶೇಷವಾಗಿ ಇಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತದೆ.ಮಾತ್ರವಲ್ಲದೆ ಇದು ವಿಜಯನಗರ ಕಾಲದಲ್ಲಿ ನಮ್ಮ ದೇಶಕ್ಕೂ, ಚೀನಾಕ್ಕೂ ಇದ್ದ ಸಂಭಂದವನ್ನು ತೋರಿಸುವ ಸಾಕ್ಷಿಯಾಗಿದೆ.ಕರಾವಳಿ ಕರ್ನಾಟಕದ ಇಲ್ಲಿಯ ಶ್ರೇಷ್ಠಿಗಳು ಚೀನಾ ದೊಂದಿಗೆ ಇಟ್ಟುಕೊಂಡಿದ್ದ ವ್ಯಾಪಾರ ಸಂಬಂದವನ್ನು ಸೂಚಿಸುತ್ತದೆ, ಅಲ್ಲವೇ?

ದೇವರ ಮೇಲೆ ಅಪಾರ ನಂಬಿಕೆ ,ಭಕ್ತಿ,ಶ್ರದ್ಧೆಗಳು ಇಂದಿನ ಜನರಿಗಿಂತ ಅಂದಿನವರಲ್ಲಿ ಹೆಚ್ಚು ತೀವ್ರವಾಗಿದ್ದುದನ್ನು ಇಲ್ಲಿರುವ ದೇವತೆಗಳ ಉಬ್ಬ ಶಿಲ್ಪಗಳ ಸಂಖ್ಯೆಯಿಂದ ತಿಳಿದುಕೊಳ್ಳಬಹುದು. ಅವುಗಳಲ್ಲಿ ಗಣಪತಿ,ವೀಣಾಪಾಣೀ ಸರಸ್ವತಿಉಗ್ರ ನರಸಿಂಹ,ಭಕ್ತ ಹನುಮಾಂತ ಇತ್ಯಾದಿಗಳು ಗಮನೀಯ, ಅಂದಿನವರ ಶ್ರದ್ಧೆಯ ಪ್ರತೀಕ

   ಕೇವಲ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲದೆ ಆನೇಕ ಕ್ರೀಡೆಗಳಲ್ಲಿ ತಮ್ಮ ಸಾಮಥ್ರ್ಯವನ್ನು ವ್ಯಕ್ತಪಡಿಸುವುದಕ್ಕಾಗಿ ಕತ್ತಿ ವರಸೆ, ಮಲ್ಲ ಯುದ್ದ, ಮಲ್ಲ ಕಂಬದ  ಸಾಹಸ ಕ್ರಿಡೆಗಳು ಸಿಂಹದ ಜೋತೆ ಕಾಳಗ ಮುಂತಾದವುಗಳನ್ನು ಇಲ್ಲಿ ತೋರಿಸಲಾಗಿದೆ.ಜನರು ಸಂಗೀತ ಪ್ರಿಯರೆಂಬುದಕ್ಕೆ ವೀಣಾಪಣೀ ಸರಸ್ವತಿ, ವೀಣಾವಾದಕಿಯಾದ ನಾರಿ ಚೆಂಡೆ ಹಿಡಿದು ನಿಂತಿರುವ ಮನುಷ್ಯ, ತಮಟೆ ಬಾರಿಸುತ್ತಿರುವ ಕಲಾವಿದ, ಡಂಗುg ಸಾರುತ್ತಿರು ಸೇವಕ ಇವರಲ್ಲವುಗಳು ಸಾಕ್ಷಿಯಾಗಿರುವುದಲ್ಲದೆ ಕಲಾಗಾರರ ನೈಪುಣ್ಯತೆ, ಚಾಕಚಕ್ಯ ಮತ್ತು ಕಲಾ ಪ್ರತಿಭೆಯನ್ನು ಸೂಚಿಸುತ್ತವೆ.
   ಒಟ್ಟಿನಲ್ಲಿ, ಉಬ್ಬು ಶಿಲ್ಪಗಳ ಜೊತೆಗಿನ ನಮ್ಮ ಸಂಭಾಷಣೆಯು ಅಂದಿನ ಕಾಲದ ಜನ  ಜೀವನವನ್ನು ನಮಗೆ  ಭಾಷೆ,ಪದಗಲು ಮತ್ತು ವ್ಯಾಕರಣಗಳಿಲ್ಲದೆ ತಿಳಿಸುತ್ತವೆ. ಈ ಶಿಲ್ಪಗಳು ಶ್ರಾವ್ಯ ಕಾವ್ಯಗಳಲ್ಲ, ದೃಶ್ಯಗಳು ಮತ್ತು ಪ್ರಾಯಶಃ ನುಡಿವ ಮಾತುಗಳಿಗಿಂತ ಹೆಚ್ಚು ಪರಿಣಾಮಕಾರಿಯಾದುವುಗಳು. ಇವುಗಳನ್ನು ನೋಡುತ್ತಾ ಇದ್ದರೆ ಮತ್ತೊಮ್ಮೆ ಇನ್ನೊಮ್ಮ ನೋಡಬೇಕು, ಬಸದಿಗೆ ಪ್ರದಕ್ಷಿಣೆ ಬಂದು ಇನ್ನೊಮ್ಮೆ  ವಿಕ್ಷಿಸಬೇಕು, ಪರೀಕ್ಷೀಸಬೇಕು ಎಂಬ ಹಂಬಲ ಹಾಗೂ ಆಸೆ ಉಂಟಾಗುತ್ತದೆ.

ಸಹಸ್ರ ಕೂಟ, ಸಿದ್ಧಕೂಟ:

     ಈ ಜಿನ ಮಂದಿರದ ಸಹಸ್ರ ಕೂಟವು ಭೈರಾದೇವಿ ಮಂಟಪದ ಎರಡನೇ ಅಂತಸ್ತಿನಲ್ಲಿದೆ, ಇದರ ಸುತ್ತಲೂ ಪ್ರದಕ್ಷಿಣೆ ಬರಲು ಬೇಕಾದ ಪ್ರದಕ್ಷಿಣಾ ಪಥವೂ ಗಾಳಿ ಬೆಲಕುಗಳ ಹರಿಯುವಿಕೆಗೆ ಬೇಕಾದ ಕಿಟಕಿಗಳೂ ಇವೆ.   ಈ ನೆಲೆಯನ್ನು ಪಂಡಿತದೇವರ ನಿರೂಪದಿಂದ ಹಾಗೂ ಸಮಸ್ತ ಹಲರ ಅನುಮತಿಯಿಮದ ಹನ್ನೆರಡು ಭಾಗಗಳಾಗಿ ನಿರ್ಮಿಸಲಾಗಿತ್ತು. ಇದೇ ಬಸದಿಯ ದ್ವಾರದ ಎಡಕ್ಕಿರುವ ಶಿಲಾಫಲಕದ ಮೇಲಿರುವ ಲಾಕ ನಿರೂಪಣೆ ಇಲ್ಲದ ಒಂದು  ಶಾಸನವು ಇದನ್ನು ನಿರ್ಮಿಸಿದವರ ಹೆಸರುಗಳನ್ನು ಈ ರೀತಿ ಕೊಡುತ್ತದೆ. ಕೊಂಡೆ ಕೇಶವ ಸೆಟ್ಟೆ, ಸಾಲ್ಮದೇವರು ಸೆಟ್ಟಿ, ಆಳ್ವ ನಾರಣ ಸೆಟ್ಟಿ, ಕಾಜವ ಸೆಟ್ಟಿ, ಕೊವಾರಿ ಪಾಂಡಿ ಸೆಟ್ಟಿ, ಜಂತ್ರಿ ಬಾಲ್ಯಮ್ಮ ಸೆಟ್ಟಿ, ಶಾಂತಿ ಸೆಟ್ಟಿ ಆಳ್ವ, ಅಮ್ಮಣ ಸೆಟ್ಟಿ ಚುಟ ದೇವರು ಸೆಟ್ಟಿ, ನಾರಾವಿಯ ಪದುಮಣ್ಣಸೆಟ್ಟಿ, ವರ್ಧಮಾನ ಸೆಟ್ಟಿ, ಕಕ್ಕೆ ಬಾಲಿದೇವ ಸೆಟ್ಟಿ,ಚೆನ್ನಕೊಟಿ ಸೆಟ್ಟಿ.ಯೆಡ ಕಪಟಿ ಸೆಟ್ಟಿ, ಪಾರ ಕಾಂತಣ ಸೆಟ್ಟಿ  ಪಾರದೇವರು ಸೆಟ್ಟಿ. ಸಹಸ್ರ ಕೂಟವು ಪ್ರತಿಷ್ಠಾ ಪಿತವಾಗಿರುವ ಸಮಗ್ರ ಮಂಟಪವನ್ನು ಸರ್ವತೋಭದ್ರ ಮಂಟಪವೆಂದು ಕೆರೆಯಲಾಗಿದೆ.                                                                                     

ಸಹಸ್ರ ಕೂಟವೆಂದರೆ ಒಂದು ಸಾವಿರದ ಎಂಟು ಜಿನ ಬಿಂಬಗಳಿರುವ ಮೂರು ಅಂಕಣಗಳ ಒಂದು ಕಂಚಿಯ ಮಂಟಪ. ದೂರನೋಟಕ್ಕೆ ಒಂದು ನಂದೀಶ್ವರದಂತೆ ಕಂಡುಬಂದರೂ ಇದರಲ್ಲಿ ನಂದೀಶ್ವರದಲ್ಲಿರುವ ಬಿಂಬಗಳಿಗಿಂತ ಎಷ್ಟೋ ಹೆಚ್ಚು ಅಂದರೆ ಒಂದು ಸಾವಿರದ ಎಂಟು ಜಿನ ಬಿಂಬಗಳಿವೆ. ಇದರ ಒಳಗಡೆ ಇರುವ ಬಿಂಬಗಳನ್ನು ಬಿಟ್ಟು ಉಳಿದ ಎಲ್ಲವುಗಳು ಪರ್ಯಂಕಾಸನದಲ್ಲಿರುವುವೂ, ಸಮಾನ ಗಾತ್ರದವುಗಳೂ, ಸಮಾನ ಲಕ್ಷಣವುಳ್ಳವುಗಳೂ ಆಗಿವೆ. ಜೈನ ಶಾಸ್ತ್ರದಂತೆ ಇವು ತೀರ್ಥಂಕರರ ವಿಭಿನ್ನ ಗುಣಗಳನ್ನು ಮೂರ್ತಿಪದಲ್ಲಿ ತೋರಿಸುವಂಥವುಗಳು. ಗುಣಗಳನ್ನು ಪದಗಳಲ್ಲಿ ವರ್ಣಿಸದೆ ಅವುಗಳನ್ನು ಒಂದು ರೂಪ ಅಥವಾ ಆಕಾರದ ಮುಖಾಂತರ ತಿಳಿಯಪಡಿಸುವ ವ್ಯವಸ್ಥೆಯೇ ಈ ಸಹಸ್ರಕೂಟ. ಆದುದರಿಂದ ಇದೊಂದು ಗುಣಗಳ ಸಾಕ್ಷಾತ್ ಮೂರ್ತಿ ರೂಪ. ಈ ಮಹಾನ್ ಬಿಂಬಕ್ಕೆ ಇಲ್ಲಿ ವರ್ಷಕ್ಕೊಮ್ಮೆ ಪಂಚಾಮೃತ ಅಭಿಷೇಕ, ಪೂಜೆ ಮತ್ತು ಸಹಸ್ರನಾಮಾರ್ಚನೆ ನಡೆಯುತ್ತದೆ. ಈ ವ್ಯವಸ್ಥೆಯಿಂದಾಗಿ ಸಾವಿರ ಕಂಬದ ಈ ಬಸದಿಯನ್ನು ಸಹಸ್ರಕೂಟ ಜಿನಾಲಯ ಎಂದು ಕರೆಯಬಹುದು.

    ಈ ಸಹಸ್ರಕೂಟವು ಉತ್ತರ ಕನ್ನಡ ಜಿಲ್ಲೆಯ ಸಂಗೀತಪುರ ಅಥವಾ ಹಾಡುವಳ್ಳಿಯಿಂದ ತುಳು, ಹೈವ.ಕೊಂಕಣ ದೇಶಗಳನ್ನು ಆಳುತ್ತಿದ್ದ ಮಹಾಮಂಡಲೇಶ್ವರ ಇಮ್ಮಡಿ ದೇವರಾಯನ ಕಾಲದಲ್ಲಿ ಸ್ಥಾಪಿಸಲ್ಪಟ್ಟಿತ್ತು. ಜೊತೆಗೆ ಅದೇ ಸಮಯದಲ್ಲಿ ಗೇರುಸೋಪ್ಪೆ ಸಂಸ್ಥಾನದಿಂದ ಆಳುತ್ತಿದ್ದ ಪಾಂಡ್ಯ ರಾಜನ ಪಟ್ಟ ಮಹಿಷಿಯಾಗಿದ್ದ ಭೈದಾದೇವಿಯ ಮಗ ರಾಜಕುಮಾರ ಸಾಳ್ವ ಸಂಗೀರಾಯನು ತನ್ನ ಪುಣ್ಯಾರ್ಥವಾಗಿ ಕ್ರಿ.ಶ. 1516ರಲ್ಲಿ ಇದನ್ನು ಪ್ರತಿಷ್ಠಾಪಿಸಿ ಪೂಜಿಸಿದ. ಹಾಗೆಯೇ ಇದರ ಪೂಜಾದಿ ವಿನಿಯೋಗಗಳಿಗಾಗಿ 367 ಮುಡಿ ಭತ್ತ ಗೇಣಿ ಬರುವ ಸ್ಥಳವನ್ನು ಉಂಬಳಿ ಬಿಟ್ಟ ಅಂದಿನಿಂದ ಇಲ್ಲಿ ಎಲ್ಲ ಧಾರ್ಮಿಕ ವಿಧಿ ವಿಧಾನಗಳು ಸರಿಯಾಗಿ ನಡೆಯತೊಡಗಿದವು. ಕ್ರಿ.ಶ 1462ರಲ್ಲಿ ನಿರ್ಮಿಸಲ್ಪಟ್ಟ ಭೈರಾದೇವಿ ಮಂಟಪವು ಆವರೆಗೆ ವಿಶೇಷವಾದ ಯಾವ ಆಕರ್ಷಣೆಯೂ ಇಲ್ಲದೆ ಸಾಮಾನ್ಯವೆನಿಸಿತ್ತು. ಆದರೆ ಈ ಸಹಸ್ರಕೂಟದ ಸ್ಥಾಪನೆಯಿಂದಾಗಿ ಈ ಮಂಟಪವು ಹೊಸ ಚೈತನ್ಯವನ್ನೂ, ಆಕರ್ಷಣೆಯನ್ನೂ ಪಡೆದುಕೊಂಡಿತು.ಆದುದರಿಂದ ರಾಜಕುಮಾರ ಸಂಗೀರಾಯನು ಈ ಸಹಸ್ರ ಕೂಟ ಬಸದಿಯ ವಿನಿಯೋಗಾದಿಗಳಿಗಾಗಿ ತನ್ನ ಎರಡನೇ ಕೊಡುಗೆಯಾದ 124 ಚಿನ್ನದ ನಾಣ್ಯಗಳನ್ನು ಸಮರ್ಪಿಸಿದ್ದ.

ಮಾನಸ್ತಂಭ : ಈ ಮಾನಸ್ತಂಭವು ಕ್ರಿ ಶ 1461 -62ರ ಸಮಂiÀiಲ್ಲಿ ನಿರ್ಮಾಣ ಗೊಂಡಿರುತ್ತದೆ. ಸರಿ ಸುಮಾರು 50 ಅಡಿ ಎತ್ತರವಿದೆ . ದಷ್ಟಪುಷ್ಟವಾಗಿದೆ. ನಿಜವಾಗಿ ಮಾನಸ್ತಂಭಗಳು ಭಗವಾನ್ ಜಿನೇಶ್ವರರ ಸಮವಸರಣದ ಪ್ರತೀಕಗಳು. ಯಾಕೆಂದರೆ ಆ ತತ್ವ ಭೋಧನೆಯ ದಿವ್ಯ ಸಭೆಗಳ ವಿವಿಧÀ ಭಾಗಗಳಲ್ಲಿ ಅರಮನೆ, ಕೋಟೆ, ನಂದನವನ ,ಸಭಾಗೃಹಗಳಂತೆ ಮಾನಸ್ತಂಭವನ್ನು ನಿರ್ಮಿಸಲಾಗಿದೆ, ಈ ಒಂದು ಪ್ರದೇಶದಲ್ಲಿ ಬಸದಿ ಇದೆ ಎಂಬುವುದನ್ನು ಸೂಚಿಸಲು ಇವುಗಳನ್ನು ನೆಡಲಾಗಿದೆ. ಸಾಮನ್ಯವಾಗಿ ಇವುಗಳ ಎತ್ತರ ತೀಥಂಕರನ ಶರಿರಾಕೃತಿಯ 12 ಪಟ್ಟು ಉನ್ನತವಾಗಿರುತ್ತದೆ ಎಂಬ ಒಂದು ಸಾಮನ್ಯ ನಂಬಿಕೆ ಇz.É ಆದರೆ ಎಲ್ಲಕಡೆ ಈ ನಿಯಮವನ್ನು ಅನುಸರಿಸಿಲ್ಲ. ಕೆಲವು ಬಸದಿಗಳಿಗೆ ಈ ಸ್ತಂಭಗಳು ಇರುವುದೂ ಇಲ್ಲ. ಇವುಗಳಲ್ಲಿ 3 ವಿಭಾಗಗಳನ್ನು ಕಾಣಬುದು 1 ಪೀಠ 2 ಸ್ತಂಭ 3 ಮುಕುಟ. ಮೂಡುಬಿದ್ರೆಯ ಈ ಬಸದಿಯ ಮಾನಸ್ತಂಭದ ಪೀಠವು 5-6 ಅಡಿ ಎತ್ತರದಲ್ಲಿದೆ. ರೇಖಾಕಾರದ ಚತುರಸ್ರ ವಿನ್ಯಾಸವನ್ನು ಹೊಂದಿದೆ. 2-3 ಅಂಕಣಗಳನ್ನು ಹೊಂದಿ ಸುಂದರವಾಗಿದೆ. ಕೆಳಗಿನ ಅಗಲವಾದ ಪೀಠದ ಮೇಲೆ ಗಾತ್ರ ಚಿಕ್ಕದಾಗಿರುವ ಇನ್ನೆರೆಡು ಪೀಠಗಳಿದ್ದು ಮೇಲಿನ ಮೂರನೆಯ ಪೀಠದ ಮದ್ದದಲ್ಲಿ ಹುದುಗಿಸದೆ , ಕಾಂತ್ತತ್ವಕೇಂದ್ರ ಸಿದ್ದಾಂತದಲ್ಲಿ ಮಾನಸ್ತಂಭವನ್ನು ನಿಲ್ಲಿಸಲಾಗಿದೆ. ಅದರಲ್ಲಿ ಮೂರು ಖಂಡಗಳಿದ್ದು ಪ್ರತಿಯೋಂದು ತನ್ನದೇ ರೀತಿಯ ನಿರ್ಮಾಣವನ್ನು ಹೊಂದಿದೆ, ತನ್ನ ಮೈಮೇಲೆ ಚೌರಿ, ಗಂಟೆ ,ಗೆಜ್ಜೆ, ರತ್ನಹಾರಗಳು ,ದ್ವಜಗಳು ಮತ್ತು ಯಂತ್ರಗಳನ್ನು ಹೋಲುವ ರೇಖಾ ಚಿತ್ರಗಳನ್ನು ಹೊಂದಿದೆ. ಮೇಲಿನ ಮುಕುಟ ಭಾಗದಲ್ಲಿ ತೆರೆದ ಒಂದು ಮಂಟಪವಿದ್ದು ಅದಕ್ಕೆ ಅದೋಮುಖವಾಗಿ ನಾಲ್ಕು ಗಂಟೆಗಳನ್ನು ತೂಗುಹಾಕಲಾಗಿದೆ. ಈ ಮಂಟಪದಲ್ಲಿ ಆಮಲಕ, ಪದ್ಮ ,ಪತ್ರಿಕೆ ಇತ್ಯಾದಿ ವಾಸ್ತು ವಿಭಾಗಗಳನ್ನು ಮೇಲ್ಗಡೆ 2-3 ಅಂತಸ್ತುಗಳ ಶಿಖರವನ್ನು ಕಾಣಬುಹುದು, ನಾಲ್ಕು ದಿಸೆಗಳಿಗೆ ಮುಖಮಾಡಿರುವ ನಾಲ್ಕು ಜಿನ ಪ್ರತಿಮೆಗಳನ್ನು ಇಲ್ಲಿ ಕೆಳಗಿನಿಂದಲೇ ಸ್ಪಷ್ಟವಾಗಿ ಕಾಣಬಹುದು, ಜಿನಾಲಯನ್ನು ಪ್ರವೇಶಿಸುವಾಗಲೇ ನಮ್ಮ ಅಹಂಭಾವ ಮತ್ತು ಮನಃ ಕಷಾಯವನ್ನು ಬಿಡಬೇಕೆಂಬ ಸಂದೇಶವನ್ನು ಮಾನಸ್ತಂಭಗಳು ಸಾರುತ್ತದೆ ಎಂದು ನಂಬಲಾಗಿದೆ. ಮೂಡಬಿದ್ರೆಯ ಮಾನಸ್ತಂಭದ ಬಿಳಿಯಲ್ಲೇ ದ್ವಜ ಸ್ತಂಭವನ್ನು ಕಾಣಬಹುದು, ಇದನ್ನು ಮರದಿಂದ ಮಾಡಿರುವ ಕಾರಣ ಇದಕ್ಕೆ ತಾಮ್ರದ ಕವಚವನ್ನು ಹಾಕಲಾಗಿದೆ. ವಾರ್ಷಿಕೋತ್ಸವದ ಸಮಯದಲ್ಲಿ ಇದಕ್ಕೆ ಕ್ಷೇತ್ರಪಾಲನ ಪ್ರತೀಕವಾದ ದ್ವಜವನ್ನು ತೂೀಗು ಹಾಕಲಾಗುತ್ತದೆ.

ಅಧ್ಯಾಯ 6 ಜಿನಾಲಯದ ಅಪೂರ್ವ ಶಿಲ್ಪ ಕಲಾಕೃತಿಗಳು

ಜಿನಾಲಯದ ಅಪೂರ್ವ ಶಿಲ್ಪ ಕಲಾಕೃತಿಗಳು:

   ಸುಂದರ ಐತಿಹಾಸಿಕ ಹಿನ್ನಲೆ, ಧಾರ್ಮಿಕ ಮಹತ್ವ, ಬೃಹತ್ ಆಕರ್ಷಕ ವೈಶಿಷ್ಟ್ಯಗಳಿಂದ ಪ್ರಸಿದ್ದವಾಗಿರುವ ಈ ಜಿನ ಮಂದಿರವು ಇಲ್ಲಿರುವ ವಿಶಿಷ್ಟವಾದ ಶಿಲ್ಪಕಲಾಕೃತಿಗಳಿಂದಾಗಿಯೂ ದೇಶದಲ್ಲಿ ಚಿರ ಪರಿಚಿತವಾಗಿದೆ. ಒಳಾಂಗಣದಲ್ಲಿ ಬಸದಿಯನ್ನೊಮ್ಮೆ ಪ್ರದಕ್ಷಣೆ ಬಂದರೆ.ಎರಡನೆ ವiತ್ತು ಮೂರನೆಯ ಮಹಡಿಯ ಸುತ್ತಲು ಮರದ ಜಾಲಂಧ್ರಗಳಿಗೆ ಹೊರಗಿನಿಂದ ಜೋಡಿಸಿಲ್ಪಟ್ಟಿರುವ ಅಪೂರ್ವವಾದ ಕಾಷ್ಠಶಿಲ್ಪಗಳು ನಮ್ಮ ಗಮನವನ್ನು ಸೆಳೆಯುತ್ತವೆ.ತುಳುನಾಡಿನ ಛಾಪನ್ನು ಹೊಂದಿರುವ ವೇಷಭೊಷಣ.ಕಿರೀಟ,ಕೇಶಾಲಂಕಾರ ಸಂಗೀತಸಾಧನ, ಶಸ್ತ್ರಾಸ್ತ್ರಗಳು ಇಲ್ಲಿ ಗಮನೀಯವಾಗಿರುವಂತೆ, ಕಲಾವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿಕೊಂಡಿವೆ. ಇಲ್ಲಿಯ ಹವಾಮಾನ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳಲಿಕ್ಕಾಗಿ ಸೂಕ್ತವಾದ ದಪ್ಪ ಬಣ್ಣವನ್ನೂ ಕೊಟ್ಟು ಅಲಂಕರಿಸಲಾಗಿದೆ. 

ಬಸದಿಯ ಮುಂಬಾಗದಲ್ಲಿ ನಿಂತು ಮೇಲ್ಗಡೆ ನೋಡಿದರೆ, ಗರ್ಭಗೃಹದ ಹಾಗೂ ಭೈರಾದೇವಿ ಮಂಟಪದ ಅತ್ಯಂತ ಮೇಲ್ಗಡೆಯಲ್ಲಿ ಎದುರಿಗೆ ಕೀರ್ತಿಮುಖವು ಕಂಡುಬರುತ್ತದೆ ಬೈರಾದೇವಿ ಮಂಟಪದ ಕೀರ್ತಿ ಮುಖದ ಕೆಳಗಡೆ ಬಾಗಿಲಿನಂತಹ ಒಂದು ರಚನೆ ಇದ್ದು ಅದರ ಇಕ್ಕೆಲೆಗಳಲ್ಲಿ ನಮ್ಮನ್ನುನೋಡುತ್ತಿರುವಂತಿರುವ ಇಬ್ಬರು ದ್ವಾರಪಾಲಕರ ಶಿಲ್ಪಗಳಿವೆ. ಅವರ ಎಡಬಲದಲ್ಲಿ ಅಷ್ಟದಿಕ್ಛಾಲಕರ ಕಾಷ್ಟಶಿಲ್ಪಗಳಿವೆ

ಸುಂದರವಾದ ಕಲ್ಲಿನ ಕೆತ್ತನೆಯ ಶಿಲ್ಪ ಕಲಾಕೃತಿ

   ಇಲ್ಲಿಂದ ದಕ್ಷಿಣಭಾಗಕ್ಕೆ ಇನ್ನೂ ಕೆಲವು ಶಿಲ್ಪಗಳು. ಇಲ್ಲಿ ನಮ್ಮ ಗಮನವನ್ನು ಸೆಳೆಯುವಂಥಾದ್ದು ಸುಂದರ ಮದನಿಕಾ ಶಿಲ್ಪ. ಆಕೆಯಕೈಯಲ್ಲಿ ಗಿಳಿಯೊಂದು ಕೂತಿದೆ. ಬೇಲೂರಿನ ಮದನಿಕೆಯನ್ನು ನೋಡಿ ಸವಿಯಿರೆಂದು ನಮಗೆ ನೆನಪಿಸಿ ಸೂಚಿಸುತ್ತದೆ. ಅನಂತರ ಕಾಣುವುದು ತ್ರಿಭಂಗ ವಿನ್ಯಾಸದ ಗೋಪಾಲಕೃಷ್ಣಮೂರ್ತಿ. ಅವನ ಕೈಯಲ್ಲಿ ಕೊಳಲು ಇಲ್ಲಿ ಬಳಿಯಲ್ಲಿ ಗೋವುಗಳಿವೆ. ತಲೆಯ ಮೇಲೆ ಕಿರೀಟವಿದೆ. ಮುಂದಿರುವುದು ದರ್ಪಣ ಸುಂದರಿ. ದರ್ಪಣವನ್ನು ನೋಡಿ ತಿಲಕವನ್ನು ಹಣೆಗೆ ಇಟ್ಟುಕೊಳ್ಳುತ್ತಿದ್ದಾಳೆ, ಬೇಲೂರಿನ ಮದನಿಕೆಯಂತೆ. ಮುಂದೆ ಕಾಣುವುದು ಪಾದರಕ್ಷೆ ಧರಿಸಿ ಸಾಮ ಭಂಗಿಯಲ್ಲಿ ನಿಂತಿರುವ ಮಾಲಾಧಾರಿಣಿ ಸ್ತ್ರೀ. ಅವಳನ್ನು ನೋಡುತ್ತಾ ನಿಂತಿದ್ದಾನೆ ಕೊಳಲನ್ನು ಹಿಡಿದಿರುವ ಒಬ್ಬ ಬೇಟೆಗಾರ. ಅಲ್ಲೇ ಇರುವುದು ಪ್ರಾಯಶಃ ಶಾಸ್ತ್ರದಾನ ಮಾಡುಲು ಕೈಯಲ್ಲಿ ಗ್ರಂಥಹಿಡಿದಿರುವ ಒಬ್ಬ ಗೃಹಸ್ಥ ಹಾಗೂ ಶೀ ರಾಮಚಂದ್ರ ಮತ್ತು ದಿಕ್ಪಾಲಕ. ಮುಂದಿರುವುದು ಕುಬ್ಜನಾದ ಅಗಸ್ತ್ಯಮುನಿ, ಶೀರಾಮ, ಗೋವರ್ಧನಗಿರಿಧಾರಿ ಕೃಷ್ಣ, ಆನೆಯನ್ನು ಮೆಟ್ಟಿ ನಿಂತಿರುವ ಸಿಂಹ ಇತ್ಯಾದಿ.
   ಈ ಕಾಷ್ಟ ಶಿಲ್ಪಗಳ ಬಗ್ಗೆ ಡಾ! ಶಿವರಾಮ ಕಾರಂತರು ವಿಮರ್ಶಾತ್ಮಕವಾಗಿ ಹೀಗೆ ಬರೆದಿದ್ದಾರೆ “ದ್ವಾರಪಾಲಕ, ಕೊಳಲ ಕೃಷ್ಣನಂಥ ಸಂಪ್ರದಾಯಬದ್ದ ಮೂರ್ತಿಗಳ ಕೆತ್ತನೆಯಲ್ಲಿ ಹೆಚ್ಚಳವೇನೂ ಕಾಣಿಸುವುದಿಲ್ಲ.ಎಲ್ಲಿ ವೈಯಾರಿ, ವಾದನಕಾರರಂಥವರು ವಸ್ತುವನ್ನು ಆಯ್ಕೆಮಾಡಿದ್ದಾರೋ,ಅಲ್ಲಿ ಸೃಷ್ಟಿ ಕ್ರಿಯೆಯ ವೈಖರಿ ಓಜಸ್ವಿಯಾಗಿರುವುದನ್ನು ಕಾಣುತ್ತೇವೆ. ಇನ್ನೂಂದು ಶಿಲ್ಪದಲ್ಲಿ ಅದೇ ವೈಖರಿ, ಲಾಲಿತ್ಯ ಮೊದಲಾದ ಲಕ್ಷಣಗಳಿವೆ. ಇದಕ್ಕೆ ಕಾರಣವಾದ ಅಂಶಗಳು, ಪ್ರತಿಮೆಯ ವಿವಿಧ ತಳದಲ್ಲಿ ಆಕೃತಿ ಮತ್ತು ಅವು ಬೆಳಕನ್ನು ಬಿಂಬಿಸುವ ರೀತಿ, ಶರೀರದ ಭಂಗಿ, ಶರೀರದ ಆಭರಣ, ಉಡುಗೆ, ತೊಡುಗೆ ಮೊದಲಾದುವುಗಳ ರೇಖೆಗಳು ಪ್ರತಿಮೆಯ ಉದ್ದಕ್ಕೂ ಪ್ರವಹಿಸುವ ರೀತಿ ಬಹು ಮುಖ್ಯವೆನಿಸುತ್ತದೆ. ಆ ದೃಷ್ಟಿಯಿಂದ ಇಲ್ಲಿನ ಕೆಲವು ವಿಗ್ರಹಗಳು ಬಾರತೀಯ ಶಿಲ್ಪದ ಅತ್ಯುತ್ಕ್ರಷ್ಟ ಮಾದರಿಗಳೆನ್ನಬಹುದು. ಉದಾ:ಕಿನ್ನರಿಯಂಥ ವಾದ್ಯವನ್ನು ವಿಚಿತ್ರ ನೃತ್ಯ ಭಂಗಿಯಲ್ಲಿ ನುಡಿಸುತ್ತಿರು ಇಬ್ಬ ಗಂಡಸಿನ ಪ್ರತಿಮೆ. ಅವನಿಗೆ ತೋರಿಸಿದ ಒಂದು ವಿಶಿಷ್ಟ ಶೈಲಿ, ಇಲ್ಲಿಯ ಗೊಂಬೆಗಳನ್ನಷ್ಟೇ ಕಾಣೀಸುತ್ತದೆ.ಆದರೆ ಇವುಗಳ ಸೊಗಸು ಅಷ್ಟಿಷ್ಟಲ್ಲ. ಇಂಥದೇ ಒಬ್ಬಳು ವಾದ್ಯಗಾರ್ತಿ ಕೈಯಲ್ಲಿ ಕಿನ್ನರಿಯನ್ನು ಹಿಡಿದುಕೊಂಡು ಕುಣಿಯುವ ವಿಗ್ರಹವೂ ಇದೆ. ಇದಾದರೂ, ನೃತ್ಯ ವೈಖರಿಯ ದೃಷ್ಟಿಯಿಂದಲೂ, ಪ್ರವಹಿಸುವ ರೇಖೆಗಳ ದೃಷ್ಟಿಯಿಂದಲೂ. ಅಂಗಪ್ರಮಾಣಗಳ ದೃಷ್ಟಿಯಿಂದಲೂ ಒಂದು ಶ್ರೇಷ್ಠ ನಿದರ್ಶನವನ್ನಾಗಿ ಕೊಡಬಹುದು. ಒಬ್ಬಾತ ಡಮರು ವಾದ್ಯವನ್ನು ಬಾರಿಸುತ್ತಿದ್ದಾನೆ. ಇನ್ನೊಬ್ಬ ಮೃದಂಗ ನುಡಿಸುತ್ತಿದ್ದಾನೆ. ತಮ್ಮ ವಾದ್ಯಗಳಲ್ಲಿ ತಲ್ಲೀನರಾದ ಇವರು ದೇಹ ಭಂಗಿಗಳ ವೈಖರಿ ಅಷ್ಟೇ ಮನ್ನೋಜ್ಞವಾಗಿದೆ. ಅವರ ದೇಹದಿಂದ ಇಳಿಯುವ ಬಟ್ಟೆಬರೆಗಳ ಹರಿವು, ಲಯ ಬದ್ದವಾದ ಇವು ಶಿಲ್ಪಗತ ವ್ಯಕ್ತಿಯ ಆಕೃತಿಗೆ ಪುಷ್ಟಿ ಕೊಡುತ್ತದೆ. ಇಲ್ಲಿನ ಒಬ್ಬ ಶಿಲ್ಪಿ ವೈಯಾರಿಯೊಬ್ಬಳ ಸ್ತ್ರೀ ರೂಪವನ್ನು ಕೆತ್ತಿದ್ದು ಕಾಣಿಸುತ್ತದೆ ಆಕೆಯ ಕಾಲ ಬುಡದಲ್ಲಿ ಎರೆಡು ಗಿಳಿಗಳಿವೆ. ಒಂದು ಗಿಳಿ ಅವಳ ಬಟ್ಟೆಯ ಸೆರಗನ್ನು ಎಳೆಯುವಂತೆ ಚಿತ್ರಿಸಿದ್ದಾರೆ. ಈ ಪ್ರತಿಮೆಯ ಸೊಗಸು, ಭುವನೇಶ್ವರದ ರಾಜರಾಣಿ ದೇವಾಲಯದ ಒಂದೆರಡು ಶ್ರೇಷ್ಠ ಶಿಲ್ಪಗಳ ನೆನಪನ್ನು ತಂದುಕೊಡುತ್ತದೆ ಕಂಚಿನಲ್ಲಿ ಎರೆದಷ್ಟೇ ಲಾವಣ್ಯದಿಂದ ಈಕೆಯ ನೀಳ ಶರೀರವನ್ನು ಮರದಲ್ಲಿ ಕೆತ್ತಿದ್ದು ಕಂಡು ಬರುತ್ತದೆ.
  ಹಾಗೆ, ಇದು ಜೈನ ಬಸದಿಯಾದರೂ, ಬ್ರಾಹ್ಮಣ ಸಂಪ್ರದಾಯದ ಇತರೆ ಕೆಲವು ವಿಗ್ರಹಗಳು ಇವೆ ಉದಾ: ಕೊಳಲ ಕೃಷ್ಣ. ಇದು ಕೃಷ್ಣನ ಪ್ರತಿಮೆಯನ್ನು ತೋರಿಸುವ ಸಾಂಪ್ರದಾಯಿಕ ತೆರನದು. ಆದುದ್ದರಿಂದಲೋ ಏನೋ, ಆತ ಆಭರಣಪ್ರಿಯನೆಂದು ಕಾಣಿಸುತ್ತದೆ ಅವುಗಳ ಹೊರೆಯಿಂದ ಕೃಷ್ಣನ ದೇಹ ಜೋತು ಹೋಗಿದೆ ಅದೇರೀತಿಯಲ್ಲಿ ಕೆತ್ತಿದ ದ್ವಾರಪಾಲಕಿ ಮತ್ತು ದ್ವಾರಪಾಲಕರು ಇಲ್ಲಿದ್ದಾರೆ.ಅವರ ಅಲಂಕಾರದಲ್ಲಾಗಲಿ, ಪ್ರತಿಮೆಯ ಅಂಗಭಂಗಿಗಳಲ್ಲಾಗಲಿ ಜಡತೆ ಕಾಣಿಸುತ್ತದೆ. ಅದು ಕೇವಲ ಪರಂಪರೆಯ ಅನುಕರಣೆಯ ಫಲ.

ಈ ಹಲವಾರು ಪ್ರತಿಮೆಗಳನ್ನು ಕಣ್ಣೆತ್ತರಕ್ಕಿಂತ ಬಹಳ ಹೆಚ್ಚಿನ ಉನ್ನತಿಯಲ್ಲಿ ತೂಗಿರುವುದರಿಂದ ದಿನನಿತ್ಯ ಇಲ್ಲಿಗೆ ಬರುವ ಅಸಂಖ್ಯ ಪ್ರೇಕ್ಷಕರು ಇವುಗಳ ಅಸ್ತಿತ್ವವನ್ನು ಮರೆತು ಅಲೆದಾಡುವಂತಾಗಿದೆ ಅವನ್ನೆ ಕಣ್ಣೆದುರಿಗೆ ಕಾಣಿಸುವ ಎತ್ತರದಲ್ಲಿ ಇರಿಸಿದ್ದರೆ, ಇಲ್ಲಿನ ಕೆಲವು ಅತ್ಯಪೂರ್ಣ ಮೂರ್ತಿಗಳನ್ನು ಕಂಡು, ಈ ದೇಶದ ಮಹಾಶಿಲ್ಪಿಯೊಬ್ಬನ ನಾಲ್ಕಾರು ವಿಗ್ರಹ ಸೃಷ್ಟಿಗಳ ವಿಚಾರದಲ್ಲಿ ಸದಾ ಹೆಮ್ಮೆ ಪಡಬಹುದು” ಈ ಬಸದಿಯನ್ನು ಪ್ರವೇಶಿಸುತ್ತಿರುವಂತೆ ನಮ್ಮ ಗಮನ ಸೆಳೆಯುವಂಥಾದ್ದು ಕಲಾಪೂರ್ಣವಾದ ಇದರ ಮುಖ್ಯದ್ವಾರ ಮತ್ತು ಶಿಲಾದ್ವಾರಬಂಧ. ಈ ದ್ವಾರಬಂಧವು17.6 ಇಂಚು ಅಗಲವಿದ್ದು ಅದರ ಚಂದವನ್ನು ವೃದ್ದಿಸಲಿಕ್ಕಾಗಿ ಅಲವಾರು ಅಲಂಕಾರಿಕ ಆಕೃತಿಗಳನ್ನು ಇದರಲ್ಲಿ ಬಿಡಿಸಲಾಗಿದೆ. ಎರೆಡೂ ಪಾಶ್ರ್ವಗಳಲ್ಲಿ ಆನೆ, ಮೇಲ್ಗಡೆ ಕೀರ್ತಿ ಮುಖ, ಇವುಗಳ ಮಧ್ಯ ಅಲಂಕಾರಿಕಾ ಬಳ್ಳಿಗಳು, ರಂಗೋಲಿ ಮತ್ತು ರೇಖಾ ಚಿತ್ರಗಳು.

  ಬಲಗಡೆ 3.7 ಅಡಿ ಎತ್ತರದ ಶಿಲೆಯ ದ್ವಾರ ಪಾಲಕ. ಆತನ ತಲೆಯ ಮೇಲೆ ಕೀರ್ತಿ ಮುಖ. ಕಿವಿಯಲ್ಲಿ ಮಕರ ಕುಂಡಲ, ಕೈಯಲ್ಲಿ ಆಯುಧವಾದ ಗದೆ, ಕಾಲಬುಡದಲ್ಲಿ ನಾಗರಹಾವು.ಯೋಧನಂತೆ ದಷ್ಟಪುಷ್ಟವಾಗಿರುವ ಆತನ ಮೈಮೇಲೆ ಧರಿಸಿಕೊಂಡಿರು ಒಬ್ಬ ಸ್ತ್ರೀ. ಆಕೆಯ ಒಂದು ಕೈಯಲ್ಲಿ ಹಣ್ಣೊದನ್ನು ಹಿಡಿದು ಕೊಂಡಿದ್ದಾಳೆ. ಇನ್ನೊಂದು ಕೈ ಬಳ್ಳಿಯ ಮೇಲಿದೆ. ಆ ಬಳ್ಳಿಯ ಮೇಲೆ ಮಂಗ ಮತ್ತು ನವಿಲು.ಆಕೆಯ ಕಾಲ ಬುಡದಲೊಂದು ಸಿಂಹ. ದ್ವಾರ ಬಂದದ ಎಡಭಾಗದಲ್ಲಿ 3.4 ಅಡಿ ಎತ್ತರದ ಗದಾಯುಧಪಾಣಿಯಾದ ದ್ವಾರಪಾಲಕ. ಶಿರದಲ್ಲಿ ಕೀರ್ತಿ ಮುಖ ಮತ್ತು ವಾಲೆಯಿಂದ ಅಲಂಕೃತವಾದ ಕಿರೀಟ. ಬಲಗಡೆಯ ಸಹವರ್ತಿಯಂತೆ ಈತನಿಗೂ ಅಂಗಸೌಷ್ಠವ., ಸೌಂದರ್ಯ. ಬಳಿಯಲ್ಲಿ ಸ್ತ್ರೀ. ಆಕೆಯ ಒಂದು ಕೈಯಲ್ಲಿ ಹೂಗೊಂಚಲು, ಇನ್ನೊಂದು ಕೈಯಲ್ಲಿ ಹೂವು.ಗಿಳಿ, ನವಿಲು,ಹಣ್ಣುಗಳಿರುವ ಮರದ ಕೆಳಗೆ ನಿಂತುಕೊಂಡಿದ್ದಾಳೆ. ಇಲ್ಲೆ ಮೇಲ್ಗಡೆ ಕೆಳದಿ ನಾಯಕ ಅರಸರ ಲಾಂಛಾನವಾದ ಗಂಡೆಭೇರುಂಡವಿದೆ.ಈ ದ್ವಾರಬಂದದ ಮೇಲ್ಗಡೆ ಪಟ್ಟಿಯ ಮೇಲೆ ಸುಂದರವಾಗಿರುವ 24 ಜಿನಬಿಂಬಗಳು. ಅವುಗಳ ಮದ್ಯದಲ್ಲಿ ಯಕ್ಷ ಯಕ್ಷಿಯರನ್ನೊಳಗೊಂಡ ದೊಡ್ಡದಾದ ಒಂದು ಜಿನ ಪ್ರತಿಮೆ. ಅಲ್ಲೇ ಮಧ್ಯದಲ್ಲಿ ಅದೋಮುಖ ಕಮಲ. ಇವುಗಳನ್ನು ಅಲ್ಲಲ್ಲಿ ಬಳಸಿರುವ ಲತೆಗಳು, ರಂಗವಲ್ಲಿಗಳು. ಎಲ್ಲಕ್ಕೆ ಎಲ್ಲವು ರಮ್ಯ.
   ಪ್ರವೇಶ ದ್ವಾರಕ್ಕೆ ಸುಮಾರು 15 ಅಡಿ ಎತ್ತರದ ಬಾಗಿಲು. ಅದು ಚಿಕ್ಕದಾಗಿರುವ 28 ಆಕೃತವಾಗಿದೆ. ಕಿರಿದಾಗಿರುವ ಒಟ್ಟು 96 ಲೋಹದ ಹೂಗಳನ್ನು ಇದಕ್ಕೆ ಜೋಡಿಸಲಾಗಿದೆ. ಬಲಭಾಗದ ಬಾಗಿಲಿನ ಬಲಗಡೆ ವಿವಿಧ ಆಕಾರದ ಆಕೃತಿಗಳು. ಸಂಗೀತಗಾರ್ತಿಯರು, ರಂಗೋಲಿಯ ಚಿತ್ರಗಳು. ಇಲ್ಲೇ ಕಾಣುವುದು ಒಂದು ಅಪೂರ್ವವಾದ ಕಾಲಕೃತಿ. ನವರಿ ಕುಂಜರ. ಮೇಲ್ನೊಟಕ್ಕೆ ಇಲ್ಲಿ ಕಾಣುವುದು ಒಂದು ಕುಂಜರ (ಆನೆ) ಒಂಬತ್ತು ಮಂದಿ (ನವ) ನಾರಿಯರು ವಿವಿಧ ವಿನ್ಯಾಸ ಮತ್ತು ನೃತ್ಯಭಂಗಿಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಆನೆಯ ರೂಪವನ್ನು ನಿರ್ಮಿಸುವುದೆ ಇದರ ವೈಶಿಷ್ಟ್ಯ. ಶಿಲ್ಪಿಯ ಕೆತ್ತನೆ ಮತ್ತು ಕಲ್ಪನೆಯನ್ನು ಇಲ್ಲಿ ಮೆಚ್ಚಬೇಕಾದುದೇ. ನಾರಿಯರೆಲ್ಲಾ ನಾಟ್ಯ ಭಂಗಿಯಲ್ಲಿ ತಮ್ಮ ಅಂಗಾಂಗವನ್ನು ಮಾಟವಾಗಿ ಮಾರ್ಪಡಿಸಿಕೊಂಡು ತೋರ್ಪಡಿಸುವುದೇ ಇದರ ಆಕರ್ಷಣೆ ಮತ್ತು ಹೆಗ್ಗಲಿಕೆ. ಈ ಕುಂಜರ ಮೇಲೆ ಪುಷ್ಪಬಾಣದಿಂದ ಗುರಿ ಹೊಡೆಯಲು ಸನ್ನದ್ದನಾಗಿರುವ ಮನ್ಮಥ ಇದರ ಮೇಲಿನ ಹಂತದಲ್ಲಿ ಶ್ರೀ ಪಾಶ್ರ್ವನಾಥ ತೀರ್ಥಂಕರ ಕಮಲದ ಮೇಲೆ ನಿಂತಿರುವ ಲಕ್ಷೀದೇವಿ ಮತ್ತು ಒಂದು ಕಲಶ ಕಂಡು ಬರುತ್ತವೆ.ಬಲಭಾಗದ ಬಾಗಿಲಿನ ಎಡಭಾಗದ ಕೆಳಗಿನ ಹಂತದಲ್ಲಿ ರಂಗೋಲಿ ಮತ್ತು ಹೂವಿನ ಅಲಂಕಾರವಿದೆ. ಅದರ ಮೇಲಿನ ಹಂತದಲ್ಲಿ ದ್ವಾರಪಾಲಕರನ್ನು ಹೋಲುತ್ತಾ ನಿಂತಿರುವ ವರ್ಣಮಯ ಆಕೃತಿ ಇದೆ. ಇದರ ಮೇಲೆ ಅನಂತಶಯನ ಮಹಾವಿಷ್ಣು ಮತ್ತು ಆತನ ಹೊಕ್ಕುಳಿನಿಂದ ಹೊರಟ ಕಮಲದ ಬಳ್ಳಿ, ಅದರ ತುದಿಯಲ್ಲಿ ಬ್ರಹ್ಮನ ಅಸ್ತಿತ್ವ. ಇದರ ಮೇಲ್ಭಾಗದಲ್ಲಿ ಶ್ರೀರಾಮ, ಲಕ್ಷ್ಮಣ, ರಾಮನ ತೊಡೆಯ ಮೇಲೆ ಕುಳಿತಿರುವ ಸೀತಾ ದೇವಿ, ಕೆಳಗೆ ಹನುಮಂತ. ಇವುಗಳ ಮೇಲ್ಗಡೆ ನರಸಿಂಹಮೂರ್ತಿ.
  ಎಡಭಾಗದ ಬಾಗಿಲಿನ ಬಲಭಾಗದ ತಳದಿದ ಸುತ್ತಿರುವ ರಂಗೋಲಿಯ ಚಿತ್ರಣವಿದೆ.ಇದರ ಮೇಲಿನ ಹಂತದಲ್ಲಿ ಪಕ್ಷಿ ಹಾಗೂ ಅದಕ್ಕಿಂತ ಮೇಲೆ ಸ್ವಾಗತಕ್ಕೋಸ್ಕರ ಸ್ತ್ರೀಯು ನಿಂತುಕೊಂಡಿದ್ದಾಳೆ. ಇದರ ಮೇಲಿನ ಹಂತದಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ ಮತ್ತು ಕುಳಿತ್ತಿರುವ ಬಸವ, ಇವರಿಂದ ಮೇಲ್ಗಡೆಯಲ್ಲಿ ಶ್ರೀ ಪಾಶ್ರ್ವನಾಥನ ಬಿಂಬವಿದೆ. ಎಡಭಾಗದಲ್ಲಿ ಸ್ವಾಗತಕೊರತ್ತಾ ಆಯುಧವನ್ನು ಹಿಡಿದುಕೊಂಡು ನಿಂತಿರುವ ಸ್ರ್ತೀಯರನ್ನು ಕಾಣಬಹುದು. ಇದರ ಮೇಲ್ಗಡೆ ನಮ್ಮನ್ನು ಆಕರ್ಷಿಸುತ್ತಿರುವುದು ಪ್ರಸಿದ್ದವಾದ ಪಂಚನಾರಿತುರಗವೆಂಬ ಕಲಾಕುಸುಮ. ಇದು ನವನಾರೀ ಕುಂಜರಕ್ಕಿಂತ ಗಾತ್ರದಲ್ಲಿ ಸ್ವಲ್ಪಚಿಕ್ಕದು. ಇಲ್ಲಿ ಐದು ಮಂದಿ ನಾರಿಯರು ಒಬ್ಬರನ್ನೊಬ್ಬರು ತಬ್ಬಿಕೊಂಡು ಕದುರೆಯನ್ನು ರೂಪಿಸುವುದೆ ಈ ಕಲಾಕೃತಿಯ ವೈಶಿಷ್ಟ್ಯ. ಇವೆರೆಡು ಕುಂಜರ ಮತ್ತು ತುರಗ –ಕಲಾಕೃತಿಗಳ ಒಬ್ಬನೇ ದಾರುಶಿಲ್ಪ ಕರ್ಮಚಾರಿಯ ಸೃಷ್ಟಿ ಎಂದು ಹೇಳಬಹುದು.ಯಾಕೆಂದರೆ ಇವೆರಡಲ್ಲಿಯು ನಾರಿಯರ ಮೈಮಾಟ, ಬಾಗಿರುವ ಭಂಗಿ ವೇಷಭೂಷಣಗಳು ಸಮಾನವಾಗಿವೆ. ಇವೆಡು ಮೂಡಬಿದರೆಯ ಚೌಟರ ಅರಮನೆಯ ಸಭಾಂಗಣದಲಿರು ಕಂಬಗಳ ಮೇಲಿನ ಕಲಾಕೃತಿಯ ಪ್ರತಿರೂಪಗಳೂ. ಇದರ ಮೇಲಿನ ಹಂತದಲ್ಲಿ ನಾಗಪಾಣಿಯಿಂದ ಅಲಂಕೃತನಾದ ಶ್ರೀ ಪಾಶ್ರ್ವನಾಥ ಸ್ವಾಮಿಯ ಬಿಂಬವಿದೆ. ಇದಕ್ಕಿಂತ ಮೇಲ್ಗಡೆ ಮಹಾವಿಷ್ಣು ಹಾಗೂ ರಂಗೋಲಿಯ ಚಿತ್ರವಿದ್ದು ನಮ್ಮನ್ನು ಆಕರ್ಷಿಸುತ್ತವೆ.
   ಈ ಪ್ರಮುಖ ದ್ವಾರದಿಂದ ನಾವು ಹೊರಗೆ ಬಂದಾಗ ಸಿಗುವುದೇ ಹೊರಾಂಗಣ.ಮೂಡುದಿಕ್ಕಿಗಿರುವ ಈ ಅಂಗಣವನ್ನು ತುಳು ಸಮಂತಭದ್ರರು ಈ ಬಸದಿಗೆ ಸೇರಿಸಿಕೊಟ್ಟಿದ್ದರು. ಈಗ ಇಲ್ಲಿ ಧಾರ್ಮಿಕ ಸಭಾÀಕಾರ್ಯಗಳನ್ನು ನಡೆಸಲಾಗುತ್ತದೆ.ಬಸದಿಯ ಸುತ್ತಲಿರು ಈ ಹೊರಾಂಗಣವು ಓಟ್ಟು 442 ಮೀಟರ್ ಉದ್ದ ಮತ್ತು 219 ಮೀಟರ್ ಅಗಲ. ಇದನ್ನು ವರ್ಷಿಕ ರಥ ಶ್ರೀವಿಹಾರ ನಡೆಸಲು ಬಳಸಿಕೊಳ್ಳಲಾಗುತ್ತದೆ. ಇದರ ಸುತ್ತಲು ತಗ್ಗಾಗಿರುವ ಮುರಕಲ್ಲಿ (ಲ್ಯಾಟರೈಟ್)ನ ಸದಾ ಪ್ರಾಕಾರ ಗೋಡೆ ಇದೆ.
   ಒಳಗಿನ ಪ್ರಾಗಣವು ಒಟ್ಟು 366 ಉದ್ದ ಮತ್ತು 184 ಮೀಟರ್ ಅಗವಿದೆ. ಬಸದಿಗೆ ಪ್ರದಕ್ಷಣೆ ಬಂದು ಅದರ ಪೂರ್ಣ ವಿಕ್ಷಣೆ ನಡೆಸಲು ಬಳಸಿಕೊಳ್ಳಲಾಗುತ್ತದೆ. ಇಲ್ಲಿ ಸಮಗ್ರ ಬಸದಿ, ಸರ್ವಾಹ್ಣಯಕ್ಷನ ಗುಡಿ ಕ್ಷೇತ್ರ ಪಾಲನ ಗುಡಿ ಮತ್ತು ನೈಋತ್ಯ ಮೂಲೆಯಲ್ಲಿ 6 ಕಲ್ಲುಗಳೊಂದಿಗೆ ನಾಗ ಸನ್ನಿದಿ ಇದೆ. ಈ ಸಭಾಂಗಣವು ಸುಮಾರು 30 ಅಡಿ ಎತ್ತರದ ಮುರಗಲ್ಲಿನಿಂದ ನಿರ್ಮಿತವಾದ ಪ್ರಾಕಾರ ಗೋಡೆಯಿಂದ ಸುತ್ತುವರಿಯಲ್ಪಟ್ಟಿದೆ. ಮೇಲ್ತುದಿಯಲ್ಲಿ ಕಲಶದ ಆಕೃತಿಯನ್ನು ಹೊಂದಿ ಬಹಳ ದೃಢವಾಗಿರುವ ಈ ಗೋಡೆಯು ನಮ್ಮ ಪ್ರಾಚೀನರ ನಿರ್ಮಾಣ ತಂತ್ರಜ್ಞನದ ಔನತ್ಯಕ್ಕೆ ಒಂದು ಸಜೀವ ಸಾಕ್ಷಿ. ಗಾರೆ, ಸಿಮೆಂಟನ್ನು ಬಳಸದೆ ಕುಣಿಕೆ ಮತ್ತು ಕಂಬ ಹಾಗೂ ಸರ್ವತೋಮುಖ ಒತ್ತಡದ ತತ್ವವನ್ನು ಅನುಸರಿಸಿ ನಿರ್ಮಿಸಿರುವ ಈ ನಿರ್ಮಾಣ ಒಂದು ಅಧ್ಯಯನೀಯ ವಿಷಯವೂ ಹೌದು. ಒಳಬದಿಯಲ್ಲಿ ಈ ಗೋಡೆಗೆ ತಾಗಿಕೊಂಡು ಸುಮಾರು 1.1/2 ಮೀಟರ್ ಎತ್ತರದ ಜಗಲಿ ಇದ್ದು ಇಲ್ಲಿ ನಡೆಯುವ ಕಾರ್ಯಕ್ರಮವನ್ನು ಕುಳಿತು ನೋಡಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಈ ಬಸದಿಯ ಕಾಲಾತ್ಮಕವಾದ ಪವಿತ್ರ ಜಿನಬಿಂಬಗಳ ಪೈಕಿ ಉಲ್ಲೇಖಿಸಬೇಕಾದ ಇನ್ನೊಂದು ಮೂರ್ತಿಯೆಂದರೆ ಸರ್ವಾಯಕ್ಷ. ಸರ್ವಾಹ್ಣ ಎಂದರೆ ಎಲ್ಲಕಾಲದಲ್ಲೂ, ಎಲ್ಲಾ ಜಿನಾಯಗಳಲ್ಲೂ,ಇರುವವ ಎಂದಾರ್ಥ. ಸಾಮಾನ್ಯವಾಗಿ ಆನೆಯ ಮೇಲೆಕುಳಿತು ಎರೆಡು ಕೈಗಳಲ್ಲಿ ನಮಸ್ಕಾರ ಭಂಗಿಯನ್ನು ಹೊಂದಿ ಇನ್ನೆರೆಡು ಕೈಗಳಿಂದ ತನ್ನ ತಲೆಯ ಮೇಲ್ಗಡೆ ಧರ್ಮಚಕ್ರವನ್ನು ಹಿಡಿದುಕೊಂಡು ಭವ್ಯ ಜನರನ್ನು ಬಸದಿಗೆ ಆಹ್ವಾನವನ್ನು ಹಾಗೂ ಸ್ವಾಗತ ಕೋರುವವನು. ಜಿನಾಯಕ್ಕೆ ಬನ್ನಿ ಇಲ್ಲಿ ಭಗವಂತನಿಗೆ ನಡೆಯುವ ಅಭಿಷೇಕ ಪೂಜೆಗಳಲ್ಲಿ ಪಾಲ್ಗೊಂಡು ಪುಣ್ಯವನ್ನು ಸಂಪಾದಿಸಿ ಕೊಳ್ಳಿರಿ.ದೇವತ ಸ್ವರೂಪವಾದ ಸರ್ವ ಸದ್ಗುಣಗಳನ್ನು ರೂಡಿಸಿಕೊಳ್ಳಿಯೆಂದು ಎಲ್ಲರನ್ನು ಜಿನಾಯಕ್ಕೆ ಆಹ್ವಾನಿಸುತ್ತಾನೆ. ತಾನು ಶಿರದಲ್ಲಿ ಧರಿಸಿರುವ ಜೈನ ಧರ್ಮಚಕ್ರವು ಸದಾ ಉನ್ನತಿಯ ಕಡೆಗೆ ಚಲಾನಶೀಲವಾಗಿರುತ್ತದೆ ಚರಮ ಸತ್ಯವನ್ನು ಸಾರುತ್ತಾನೆ.

ಅಧ್ಯಾಯ 7

 			ಜಿನಾಲಯದ ಜೀರ್ಣೋದ್ಧಾರ

ತುಳು ಸಮಂತಭದ್ರರ ಸೇವೆ : ಜಿನಾಲಯದ ಜೀರ್ಣೋದ್ಧಾರ: ಆಧ್ಯಾತ್ಮಿಕ ವೈಭವದಿಂದ ಸುಂದರವಾಗಿ ಕಂಗೊಳಿಸುತ್ತಿದ್ದ ಈ ಬೃಹತ್ ಜಿನಮಂದಿರಕ್ಕೆ ವಿಭಿನ್ನ ಕಾಲಗಳಲ್ಲಿ ಕರ್ನಾಟಕದ ಹಲವಾರು ರಾಜ ಮಹರಾಜರೂ,

ವಿದೇಶಿ ಸಂದರ್ಶಕರು ಋಷಿ ಮೂನಿಗಳು ಸಂದರ್ಶನವಿತ್ತು ಇಲ್ಲಿಯ ಅಭಿಷೇಕ  ಪೂಜಾದಿ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ಜನ್ಮವನ್ನು ಪಾವನವಾಗಿಸಿಕೊಡಂಡರು ಅಂತಹವರ ಪೈಕಿ ದಕ್ಷಿಣ ಭಾರತದ ದಿಗಂಭರ ಪರಂಪರೆಯಲ್ಲೇ ಪ್ರಸಿದ್ದರಾಗಿದ್ದ ತುಳು ಸಮಂತಭದ್ರರೆಂಬ ಜೈನ ಗುರುಗಳೂ ಒಬ್ಬರು ಇಲ್ಲಿಯ ಶ್ರೀ ಮಠದಲ್ಲಿ ಅವರ ಕುರಿತಾದ ಎರೆಡು ತಾಮ್ರ ಶಾಸನಗಳೂ. ಪಡುಬಸದಿಯಲ್ಲಿ ಇನ್ನೊಂದು ಶಾಸನವೂ ಲಭ್ಯವಾಗುತ್ತದೆ. ಅವುಗಳ ಅನುಸಾರ ಮೂಡಬಿದರೆ ನಗರದಲ್ಲಿ ಕಾಜ ದೇವಮ್ಮ ಸೆಟ್ಟಿ ಎಂಬವನ ಅಳಿಯನಾಗಿ ಹುಟ್ಟಿ ಸಕಲ ಶಾಸ್ತ್ರಾಭ್ಯಾಸವನ್ನು ಮಾಡಿ ಕುಮಾರ ದಿಕ್ಷೆಯನ್ನು ಅಂಗೀಕರಿಸಿ ಸಮಂತಭದ್ರ ಎಂಬ ಹೆಸರಿನೊಂದಿಗೆ ಸೇನಗುಣದ ಗುರುಗಳಾದರು. ಹಲವು ಧಾರ್ಮಿಕ ಹಾಗೂ ಸಮಾಜಿಕ ಕಾರ್ಯಗಳನ್ನು ಮಾಡಿದರು ಮೊದಲಿಗೆ ಮೂಡಬಿದರೆ, ಪಡುಬಿದರೆಯ ಜೀಣೋದ್ಧಾರ ಕೆಲಸವನ್ನು ಕ್ರಿ.ಶ 1605ರಲ್ಲಿ ಪೂರ್ಣಗೊಳಿಸಿದರು ಆ ಬಳಿಕ ಸಾವಿರ ಕಂಬದ ಬಸದಿಯ ಜೀರ್ಣೊದ್ಧಾರದ ಕೆಲಸವನ್ನು ಕೈಗೆತ್ತಿಕೊಂಡರು. ಇವರು ನಡೆಸಿದುದು ಈ ಬಸದಿಯ ಎರಡನೆ ಜೀರ್ಣೋದ್ಧಾರ
  ಮೊದಲ ಜೀರ್ಣೋದ್ದಾರವನ್ನು ಶಕ 1437 ನೇ (ಕ್ರಿ.ಶ.1515)ಯುವ ಸಂವತ್ಸರದಲ್ಲಿ ಶ್ರೀ ಮನ್ಮಹಾಜಾದಿರಾಜ, ರಾಜ ಪರಮೇಶ್ವರ, ವೀರಕ್ರುಷ್ಣರಾಯ ಮಹಾರಾಯರ ರಾಜ್ಯಾಭ್ಯುದಯ ಕಾಲದಲ್ಲೂ ಜೈನ ಪರಮಾಗಮೋದ್ದರಣ ದತ್ತಾವಧಾನರುಂ ಸಮ್ಯಕ್ತ್ವ ಗುಣರತ್ನ ಭೂಷಣ ಭುಷಿತರುನಪ್ಪ ರತ್ನಪ್ಪೊಡೆಯರು ಮಂಗಲೂರ ಬಾರಕೂರ ರಾಜ್ಯವನ್ನು ಪ್ರತಿಪಾಲಿಸುತ್ತ ಯಿರ್ದ ಕಾಲದಲು ಶ್ರೀ ಮದಬಿನವ ಚಾರುಕೀರ್ತಿ ಪಂಡಿತ ದೇವರುಗಳ ನಿರೂಪದಿಂ ಮುನಿಭದ್ರದೇವರು” ನಡೆಸಿದ್ದರು.ಅದು ಕಳೆದು ಒಂದುನೂರು ವರ್ಷ ಕಳೆದುಬಸದಿ ಜೀರ್ಣಗೊಂಡಿತ್ತು.
   ಶ್ರೀ ಮಟದಲ್ಲಿ ದೊರೆತ ಒಂದನೇ ಶಾಸನದಲ್ಲಿ ಹೇಳಿರುವಂತೆ ಶ್ರೀಮತು ವೆಂಕಪ್ಪ ನಾಯಕರು ತುಳು ರಾಜ್ಯವನ್ನೆಲ್ಲ ಶಕ್ತಿಯಿಂದ ಕಟ್ಟಿಕೊಂಡು ಮಲೆನಾಡು ಗಡಿಯಾಗಿ ರಾಜ್ಯವನ್ನಾಳುವಾಗ .. ಮಂಗಲೂರು ರಾಜ್ಯವನ್ನು ಭಂಡಾರ ದೇವಪ್ಪೂಡೆಯರು ಅರಸುತನ ಮಾಡುವಾಗ …,ಕೆಳದಿ ವೆಂಕಪ್ಪ ನಾಯಕನನ್ನು ಸಂದಿಸಿ ಆ  ಸಭೆಯಲ್ಲಿ ಪ್ರತಿವಾದಿಯನ್ನು ವಾದದಲ್ಲಿ ಜಯಿಸಿ, ವೆಂಕಪ್ಪ ನಾಯಕರ ಚಿತ್ತವನ್ನು ಪಡೆದು, ಚಂದ್ರನಾಥ ಸ್ವಾಮಿಯ … ಚೈತ್ಯಾಲಯದ ಜೀರ್ಣೋದ್ದರದ ಕರ್ತವ್ಯವಾಗಿ ಹೇಳಿಕೊಂಡು ಆತನ ಕೈಯಿಂದ 500 ವರಹಗಳನ್ನು ಪಡೆದುಕೊಂಡರು. ಮಿಕ್ಕ ಸಹಾಯಕ್ಕಾಗಿ ರಾಜ್ಯಪಾಲ ದೇವಪ್ಪೂಡೆಯರಿಗೆ ರಾಯಸವನ್ನು ತರಿಸಿಕೊಂಡು ಮರಮಟ್ಟು ಮೊದಲಾದ ಸಾಮಗ್ರಿಯನ್ನು ದೊರಕಿಸಿ ಕೊಂಡರು. ಬಿದಿರೆಯ ಎಂಟು ಪ್ರಜೆ ಸೆಟ್ಟಿಕಾರರು ಮತ್ತಿತರರ ಸಮ್ಮತಿಯಿಂದ ಒಂದು ಸಾವಿರ ವರಹವನ್ನು ಹದಿನಾರು ಮಂದಿ ಹಲರನ್ನು ಕೂಡಿಕೊಂಡು 32 ನಗರಗಳಿಗೆ ಹೋಗಿ ಅಲ್ಲಿದ್ದ ಎರಡು ಸಾವಿರ ವರಹವನ್ನು ಸಂಗ್ರಹಿಸಿಕೊಂಡರು. ಇದರ ಸಹಾಯದಿಂದ ಜೀರ್ಣೋದ್ದಾರದ ಕೆಲಸವನ್ನು ಹನ್ನೊಂದು ತಿಂಗಳಲ್ಲಿ ಪೂರ್ಣಗೊಳೀಸಿ ಶಕವರ್ಷ 1544 (ಕ್ರಿ.ಶ 1622) ನೇರುಧಿರೋದ್ಗಾರಿ ಸಂವತ್ಸರದ ವೈಶಾಖ ಮಾಸ (ಮೇ ತಿಂಗಳು) ದಲ್ಲಿ ಶ್ರೀ ಚಂದ್ರನಾಥ ಸ್ವಾಮಿಯ ಪುನರ್ ಪ್ರತಿಷ್ಠಯನ್ನು ವೈಭವದಿಂದ ನೆರವೇರಿಸಿದರು.
   ಇದೇ ಶಾಸನದಲ್ಲಿ ತಿಳಿಸಿರುವಂತೆ ಬಸದಿಯ ಒಳಾಂಗಣದ ಪ್ರವೇಶದ್ವಾರದಿಂದ ಮೂರು ದಿಕ್ಕಿನಲ್ಲಿದ್ದ ದೊಡ್ಡ ಬಾಗಿಲಿನ ತನಕ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದರು. ಪರಿಸರವು ನಿರ್ಮಲವಾಗಿರಲಿಲ್ಲಾ ಸ್ಥಳಾವಕಾಶವು ಕಡಿಮೆಯಾಗಿತ್ತು. ಈ ಕಾರಣದಿಂದ ತುಳು ಸಂಭದ್ರ ದೇವರು ಉಪಾಯದಿಂದ ಎಡಬಲದಲ್ಲಿದ್ದ 6-6 ಕೆಡವಿಸಿ 30 ಕೋಲು ಉದ್ದ ಮತ್ತು 120 ಕೋಲು ಅಗಲದ ಹೊರಾಂಗಣವನ್ನು ಬಸದಿಗೆ ಸೇರಿಸಿ ಕೊಟ್ಟರು.ಎದುರಿಗೆ ಕಲ್ಲಿನ ದ್ವಾರಭಂದ ಮತ್ತು ಬಾಗಿಲನ್ನು ನಿರ್ಮಿಸಿದರು.ಅದರ ಮುಂದುಗಡೆ ಇದ್ದ ಭೂಮಿಯನ್ನು ತೆರವುಗೋಳಿಸಿ ಬಸದಿಗೆ ಬರಲು ಮೆಟ್ಟಿಲುಗಳನ್ನು ಕಟ್ಟಿಸಿದರು.
   ಶ್ರೀ ಮಠದಲ್ಲಿ ದೊರೆತ ಇನ್ನೊಂದು ತಾಮ್ರಾಶಾಸನ ತಿಳಿಸುವಂತೆ ಶಾಲಿವಾಹನ ಶಕ 1554ನೇ (ಕ್ರಿ.ಶ.1632) ಆಂಗೀರಸ ಸಂವತ್ಸರದ ದೀಪಾವಳಿ ಹಬ್ಬದಂದು ಈ ಜಿನಾಲಯದಲ್ಲಿ ದೀಪೋತ್ಸವ ನಡೆಸುತ್ತಿದ್ದಾಗ ಕೆಲವು ಜನ ಕುಹಕ್ಕಿಗಳು ಅದರಲ್ಲಿ ಭಾಗವಹಿಸದೆ ಕಲ್ಲು ಕವಣೆ ಆಟವನ್ನು ಆಡಿ ಹೆಡಿಗೆ ಬಡಿಗೆಗಳನ್ನು ಹಿಡಿದು ಜಗಳ ಮಾಡಿದಾಗ ತುಳುಸಮಂತ ಭದ್ರ ದೇವರು ಪ್ರತಿರೋಧವಾಗಿ ತಾನು ಹಾಗೂ ತನ್ನ ಶಿಷ್ಯರು ಮತ್ತು ನಾಲ್ಕು ಗಣದ ತಪಸ್ವಿಗಳು ಈ ನಗರದಲ್ಲಿ ಆಹಾರ ತೆಗೆದುಕೊಳ್ಳಲವೆಂದು ನಿರ್ದರಿಸಿದರು. ಆದರೂ ಜನಧರ್ಮದ ಮೇಲಿನ ನಿಷ್ಠೆಯಿಂದ ಅಂಥವರನ್ನು ತಮ್ಮ ಬಳಿಗೆ ಕರೆಸಿ ಅವರಿಗೆ ಅವರಿಗೆ ಧರ್ಮಭೋಧನೆಯನ್ನು ಮಾಡಿದರು. ಶ್ರೀಮಠದ ಭಟ್ಟಾರಕರ ನಾಯಕತ್ವದಲ್ಲಿ ರಥೋತ್ಸವವನ್ನು ನಡೆಸಿ, ಈ ಧರ್ಮವು ಆಚಾದ್ರಾರ್ಕವಾಗಿ ನಡೆಯಲಿ ಎಂದು ಹಾರೈಸಿದರು.
  ವಿಜಯನಗರದ ಸಾಮ್ರಾಜ್ಯದ ಆಳ್ವಿಕೆಯ ಬಳಿಕ ಈ ಪ್ರದೇಶದ ಮೇಲೆ ರಾಜಕೀಯ ಅಧಿಕಾರ ಹೊಂದಿದವರು. ಕೆಳದಿ ನಾಯಕ ಅರಸರು. ಅವರು ರಾಜ್ಯದ ಆರ್ಥಿಕ ಸುಧಾರಣೆ ಮತ್ತು ತಮ್ಮ ರಾಜ್ಯದ ವಿಸ್ತರಣೆಗೆ ಕೊಟ್ಟಷ್ಟು ಪ್ರಮುಖ್ಯತೆಯನ್ನು ಜನರ ಧರ್ಮಿಕ ಜೀವನದ ಸುಧಾರಣೆಗೆ ಕೊಡಲಿಲ್ಲ.  ತುಳುನಾಡನ್ನು ಆಳುತ್ತಿದ್ದ ಹಲವು ಸ್ಥಳೀಯ ಜೈನ ಅರಸರ ಮೇಲೆ ಆಗಾಗ ದಂಡೆತ್ತಿ ಬರುತ್ತಿದ್ದರು. ಇದರಿಂದ ಜೈನರ ರಾಜಕೀಯ ಸ್ಥಿತಿಯಂತೆ. ಆರ್ಥಿಕ ಸ್ಥಿತಿಯು ಕಂಗೆಟ್ಟು ಹೊಯಿತು. ಹಲವು ಜಿನಾಲಯಗಳ ಸ್ಥಿತಿ ಹಾಲಾಗತೊಡಗಿತು. ಪ್ರಸ್ತುತ ಸಾವಿರ ಕಂಬದ ಬಸದಿಯು ಇದಕ್ಕೆ ಹೊರತಾಗಿರಲಿಲ್ಲ. ಬಸದಿಯ ವಾಸ್ತುವೂ, ಆರ್ಥಿಕ ಸಂಪನ್ನಮೂಲಗಳು ದುಃತಿಯನ್ನು ತಲುಪಿದವು.
        

ನೇಮಿಸಾಗರ(ಪುಟ್ಟಯ್ಯ)ರಿಂದ ಜೀರ್ಣೋದ್ಧಾರ:

  ಆದರೆ ಈ ಸಂದರ್ಭದಲ್ಲಿ ಹಾಸನದ ಧರ್ಮಿಷ್ಟನಿಂದ ಇದರ ಜೀರ್ಣೋದ್ಧ್ದಾರ ನಡೆಯಿತೆಂಬುದನ್ನು ತಿಳಿಸುವ ಚಿಕ್ಕ ಸಾಹಿತ್ಯ ಕೃತಿಯೊಂದು ಲಭ್ಯವಾಗುತ್ತದೆ. ಇದನ್ನು ಮೂಡಬಿದರೆಯ ಪಂಡಿತ ಶ್ರೀ ದೇವಕುಮಾರ ಶಾಸ್ತ್ರಿಯವರು ಸಂಗ್ರಹಿಸಿ, ಸಂಪಾದಿಸಿ,1965ರಲ್ಲಿ ಪ್ರಕಾಶಗೋಳಿಸಿದ್ದಾರೆ. ಈ ಬಸದಿಯು ಜೀರ್ಣ ಸ್ಥಿತಿಗೆ ಬಂದಾಗದನ್ನು ಹಾಸನದ ಈ ಶ್ರಾವಕರು ಉದ್ಧರಿಸಿ ಪುನಃ ಪ್ರತಿಷ್ಠೆ ಮಾಡಿಸಿದ ವಿಷಯವೇ ಇದರ ಕಥಾವಸ್ತು.
  ಹಾಸನದ ಚಕ್ಕಣ್ಣ ಮತ್ತು ನಾಗಮ್ಮ ಎಂಬ ಧರ್ನಿಕ ದಂಪತಿಗಳಿಗೆ ಪುಟ್ಟಯ್ಯು ಏಕಮಾತ್ರ ಪುತ್ರ. ವಿದ್ಯೆ,ಬುದ್ದಿ, ನಡೆ-ನುಡಿ ಕಲಿತ ಪಟ್ಟಯ್ಯನಿಗೆ ಅನುರೂಪಳಾದ ಸುಂದರಿಯೆಂಬ ಕನ್ಯಯೊಡನೆ ವಿವಾಹವಾಯಿತು. ತನ್ನ ವ್ಯಾಪಾರ ಉದ್ದೋಗದಲ್ಲಿಚತುರನಾದ ಪುಟ್ಟಯ್ಯ ಹೇರಳ ಸಂಪತ್ತನ್ನೂ, ದಾನ-ಧರ್ಮದಿಂದ ಕೀರ್ತಿಯನ್ನೂ ಗಳಿಸಿ ಪ್ರಸಿದ್ದ ವರ್ತಕನಾದ.ಕೆಲ ಕಾಲಾನಂತರ ಸಂತತಿಯನ್ನು ಪಡೆದು, ಮಕ್ಕಳು ಪ್ರಾಯಪ್ರಬುದ್ದರಾದ ಮೇಲೆ ತನ್ನೆಲ್ಲಾ ವ್ಯಾಪಾರವನ್ನು ಮಕ್ಕಳವಶಕ್ಕೆ ಇಪ್ಪಿಸಿ, ವಿರಕ್ತನಾಗಿ ತೀರ್ಥಯಾತ್ರೆಗೆ ಹೊರಟ.
  ಹಲವು ಕ್ಷೇತ್ರಗಳನ್ನು ಸಂದರ್ಶಿ ಶ್ರವಣ ಬೆಳಗೊಳಕ್ಕೆ ಬಂದ. ಅಲ್ಲಿನ ಚಿಕ್ಕಬೆಟ್ಟದಲ್ಲಿ ಒಂದು ಮಾನಸ್ತಂಭವನ್ನು ಸ್ಥಾಪಿಸಿದ. ಮುಂದೆ ಮೂಡಬಿದರೆಗೆ ಬಂದು ಇಲ್ಲಿನ ತ್ರಿಭುವನ ತಿಲಕ ಚೂಡಾಮಣಿ ಬಸದಿಯುಜೀರ್ಣವಾಗಿ ಅಂದಗೆಟ್ಟಿರುವುದನ್ನು ಕಂಡು ಕನಿಕರಿಸಿದ. ಇದರ ಉದ್ದಾರಕ್ಕೆ ಇಲ್ಲಿನ ಹಲವರು ಮಠದ ಶ್ರೀ ಚಾರುಕೀರ್ತಿಸ್ವಾಮಿಗಳ ಪ್ರೇರಣೆಯಿಂದ ಮುಂದಾದ. ಈ ಮಧ್ಯೆ ಕಾಖ್ಳದ ಸ್ರೀ ಬಾಹುಬಲಿಸ್ವಾಮಿಯ ದರ್ಶನ ಮಾಡಿ ಅಲ್ಲಿಯ ಶ್ರಾವಕರ ಪ್ರಾರ್ಥನೆಯಂತೆ ತನ್ನ ವೆಚ್ಚದಿಂದ ಮಹಾಮಸ್ತಭಿಷೇಕವನ್ನು ಶಾ.ಶ. ವರ್ಷ 1661ನೆಯ ಕಾಲಯುಕ್ತಿ ಸಂವತ್ಸರದ ಚೈತ್ರ ಕೃಷ್ಣ ಸಪ್ತಮಿ (31-3-1738)ಯಂದು ವಿಜೃಂಭನೆಯಿಂದ ನೆರವೇರಿಸಿದರು.
  ಸ್ವಲ್ಪ ಸಮಯದ ಮೇಲೆ ಯಾತ್ರಾ ನಿಮಿತ್ತವಾಗಿ ಮೂಡಬಿದರೆಗೆ ಪುನಃ ಆಗಮಿಸಿದ. ಕೌಪಿನದಾರಿ ತ್ಯಾಗಿಗಳ ದರ್ಶನ ಪಡೆದು, ಅವರ ಉಪದೇಶದಂತೆ ಉಜ್ಜಂತಗಿರಿಯಲ್ಲಿ ಮುಕ್ತರಾದ ಶ್ರೀ ನೇಮಿಜಿನೇಶ್ವರರ ಪುಣ್ಯ ದರ್ಶನಕ್ಕಾಗಿ ಆಯತಿಗಳ ಜೊತೆ ಹೊರಟು ಹೋದ. ಉಜ್ಜಂತಗಿರಿಗೆ ಬಂದು ನೇಮಿ ಜಿನೇಶ್ವರರ ದರ್ಶನ ಪಡೆದ ಪುಟ್ಟಯ್ಯ ವೈರಾಗ್ಯವನ್ನು ತಾಳಿ ಆ ತ್ಯಾಗಿಗಳಿಂದಲೇ ದೀಕ್ಷೇ ಪಡೆದು ನೇಮಿಸಾಗರನೆಂಬ ಶುಭನಾಮವನ್ನು ಧರಿಸಿ ಯೋಗಿಯಾದ.

ಅಲ್ಲಿಂದ ಬೀಳ್ಕೊಂಡ ನೇಮಿಸಾಗರರು ಪುನಃ ಮೂಡಬಿದರೆಗೆ ಮರಳಿ ಬಂದು ತಾನು ಕೈಗೊಂಡ ಜೀರ್ಣೋದ್ದಾರದ ಕಾರ್ಯವನ್ನು ಮುಂದಿವರಿಸಿದರು. ನಡುವಣ ನೆಲೆಗೆ ಶಿಲೆಯನ್ನು ಹಾಸಿ, ಸಹಸ್ರಕೊಟ ಜಿನ ಚೈತ್ಯಾಲಯಕ್ಕೆ ತಾಮ್ರವನ್ನು ಮಡಾಯಿಸಿದರು. ಕಲ್ಲಿನ ರದ ತಾಮ್ರದ ಕೆಲಸದಿಂದ ಬಸದಿಯ ಸಿಂಗಾರಗೊಂಡು ಪಂಚಕಲ್ಯಾಣಕ್ಕೆ ಸಿದ್ಧವಾಯಿತು.ಆದರೆ ಅದರ ಹಿಂದಿನ ದಿನವೇ ಶ್ರೀ ನೇಮಿಸಾರರು ಪರಂದಾಮವನ್ನ್ಯೆದಿದರು. ಆದರೂ ಶಾ.ಶ.ವರ್ಷ 1668ನೇಯ ಕ್ರೋಧನ ಸಂವತ್ಸರದ ಮಾಘ ಶುದ್ದ ದಶಮಿ (21-1-1746)ಯ ಶುಭ ದಿನದಂದು ತ್ರಿಭುನ ತಿಳಕ ಚೂಡಾಮಣೀ ಬಸದಿಯ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಪಂಚಕಾಲ್ಯಾಣ ಮಗೊತ್ಸವವು ವೈಭವೋಪೇತವಾಗಿ ಸಂಪನ್ನವಾಯಿತು.

    ಪ್ರಸ್ತುತ ಮೂಡಬಿದರೆಯ ಭಟ್ಟಾರಕ ಶ್ರೀಗಳರವರಿಂದ
    ಜೀರ್ಣೋದ್ಧಾರ”
      ಕಾಲದ ಪ್ರಾಬಾವದಿಂದಾಗಿ ನಾದುರುಸ್ತಿಗೊಳ್ಳುತ್ತಿದ್ದ ಈ ಜಿನಾಲಯದ ಜೀರ್ಣೋದ್ಧಾರ ಶಯಬ ಸಮಂiÀi ಒದಗಿಬಂದುದು ಸಾವಿರದ ಒಭೈನೂರು ತೊಂಭತ್ತೋಭನೇ ಇಸವಿ ಅಗೋಸ್ತು ತಿಂಗಳ ಇಪ್ಪತ್ತೊಂಭತ್ತನೆ ತಾರಿಕ್ಕಿನಂದು ನಡೆದ ಪ್ರಸ್ತುತ ಭಾರತ ಬೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳವರ ಪೀಠಾರೋಹಣದ ದಿನದಂದು. ಅದು ತಮ್ಮ ದಿವ್ಯ ಸಾನ್ನಿಧ್ಯವನ್ನಿತ್ತು ಮಾರ್ಗದರ್ಶನ ಮುಖೇನ ಧರ್ಮೋಪದೇಶವನ್ನಿತ್ತ ಶ್ರವಣಬೆಳಗೂಳದ ಪೂಜ್ಯ ಭಟ್ಟಾರಕ ಶ್ರೀಗಳವರು, ಧರ್ಮಪ್ರಾಭಾವನೆ ಜಿನ ಮಂದಿರಗಳ ಉದ್ದರಣ ಶಾಸ್ತೋಕ್ತ ಪೂಜಾದಿಗಳ ನಿರ್ವಹಣೆಯ ಜವಬ್ದಾರಿಯನ್ನು ಸಮಾಜದ ಪರ ನೀಡಿದ್ದರು.ಆ ಸಮಯದಲ್ಲೆ ಜಿನಾಲಯ ಉದ್ದರಣದ ಕಾರ್ಯವನ್ನು ಪೂಜ್ಯ ಮದಬಿನವ ಶ್ರೀಗಳು ಪ್ರಾರಂಭಿಸಿ, ಸ್ಥಳೀಯ ಶ್ರೀ ರಾಜೇದ್ರರವರ ಸಹಕಾರದಿಂದಲೆ ಲೆಪ್ಪದ ಬಸದಿಯ ಜೀರ್ಣೋದ್ಧಾರವನ್ನು ತಮ್ಮ ಮಾರ್ಗದಲ್ಲಿ ನೆರವೇರಿಸಿ ಧಮ ಸಂಪ್ರೋಕ್ಷಣಾದಿಕಾರ್ಯಗಳಲ್ಲಿ ದಿವ್ಯ ಸನ್ನಿದ್ಯ ವಹಿಸಿದರು. ಮುಂದೆ ಕೋಟಿ ಸೆಟ್ಟಿ ಬಸದಿ ಮತ್ತು ಪಡು ಬಸದಿ ಪುನರುತ್ಥಾನವನ್ನು ಕಂಡವು. ನಂತರ ಧರ್ಮೋತ್ಥಾನ ಟ್ರಸ್ಟ್‍ವತಿಯಿಂದ ಚೋಳ ಸೆಟ್ಟಿ ಬಸದಿಯ ಜೀರ್ಣೋದ್ದಾರ ಗುರು ಬಸದಿಯ ರೀಪೇರಿ ಕಾಮಗಾರಿಗಳನ್ನು ಯಶಸ್ವಿಯಾಗಿ ನೆರವೇರಿಸಿದರು. ಶ್ರೀ ಕ್ಷೇತ್ರದ ಬಸದಿಗಳ ಹಾಗೂ ದೇಶ ವಿದೇಶಗಳ ಜಿನ ಮಂದಿರಗಳ ಅತೀ ಅಗ್ತಯ ಪುನರ್ ನಿರ್ಮಾಣದ ಕೆಲಸವನ್ನು ನಡೆಸಿದರು.
  ಪ್ರಸ್ತುತ ಸಾವಿರ ಕಂಬದ ಬಸದಿಯ ಜೀರ್ಣೋದ್ದಾರದ ಕೆಲಸವನ್ನು ನಡೆಸಲಿಕ್ಕಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಾನುರಾಗಿಗಳ ಒಂದು ಸಮಿತಿಯನ್ನು ಈ ಹಿಂದಿನ ಜ್ಞಾನಯೋಗಿ ಶ್ರೀ ಶ್ರೀಗಳವರು ರೂಪಿಸಿದ್ದರು. ಸುಮಾರು 5 ಲಕ್ಷ ರೂಪಾಯಿ ವೆಚ್ಚದ ಕೆಲಸವೂ ನಡೆದಿತ್ತು. ಆದರೆ ಇದರ ಪುನರ್ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯದ ಅತೀ ಅಗತ್ಯವನ್ನು ಮನಗಂಡು ಪ್ರಸ್ತುತ ಪೂಜ್ಯ ಭಟ್ಟಾರಕರು ಶೀಘ್ರ ಈ ಬಗ್ಗೆ ಗಮನ ಹರಿಸಿ, 2003ನೇ ಇಸವಿ ಡಿಸೆಂಬರ್ 11 ರಂದು ಶಾಸ್ತ್ರೋಕ್ತ ವಿಧಿ ವಿಧಾನಗಳೊದಿಗೆ ಈ ಕಾರ್ಯವನ್ನು  ಆರಂಬಿಸಿಯೇ ಬಿಟ್ಟರು. ಇದರಲ್ಲಿ ಸಂರಕ್ಷಣ, ಜೀರ್ಣೋದ್ದಾರರ ಮತ್ತು ಪುನರ್ ನಿರ್ಮಾಣ ಎಂಬ ಮೂರು ರೀತಿಯ ಕೆಲಸಗಳು ನಡೆಯಲಿಕ್ಕಿತ್ತು. ನಿಶ್ಚಯವಾಗಿಯೂ ಅಪಾರ ದ್ರವ್ಯದ ಅಗತ್ಯವೂ ಇತ್ತು.
   ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರರಿಗೆ ಜಿಲ್ಲೆ ಮತ್ತು ರಾಜ್ಯದ ಧರ್ಮ ಬಂಧುಗಳು ಮಾತ್ರವಲ್ಲದೆ ದಕ್ಷಿಣೋತ್ತರ ಭಾರತದಲ್ಲಿ ನಲೆಸಿರು ಧರ್ಮಾನುರಾಗಿಗಿಗಳೂ ಉಧಾರಶೀಲರೂ ಬೆಂಗಾವಲಾಗಿ ಬಂದರು. ನವದೆಹಲಿಯ ಭಕ್ತ, ರತ್ನ ವ್ಯಾಪಾರಿಗಳಾದ ಶ್ರೀ ಸುರೇಂದ್ರ ಜೈನ್ ಜೋಹಾರಿಯವರು ಸ್ವಾಮೀಜಿಯವರಿಗೆ ತಮ್ಮ ವಾಸ್ತು ಶಾಸ್ತ್ರ್ರದ ಬಗೆಗಿನ ವಿಶೇಷ ಸಾಧನೆಗಾಗಿ ಮತ್ತು ಕಲ್ಲತ್ತಾ ವಿದ್ಯಾಪೀಠದಿಂದ ಭಾರತ ಭೂಷಣ ಗೌರವಾರ್ಪಣೆ ಸಂದರ್ಭದಲ್ಲಿ ರೂಪಾಯಿ ಹನ್ನೊದು ಲಕ್ಷವನ್ನು ಗೌರವ ಪಾದ ಕಾಣಿಕೆಯಾಗಿ ಸಮರ್ಪಿಸಿದರು. ಅದನ್ನು ಈ ಜೀರ್ಣೋದ್ದಾರ ಕಾರ್ಯಕ್ಕೆ ಬಳಸುವುದಾಗಿ ಪೂಜ್ಯ ಸ್ವಾಮೀಜಿಯವರು ದಾನಿಗಳಿಗೆ ತಿಳಿಸಿದರು.ಇನ್ನೊಂದು ಕಡೆಯಿಂದ ಬಿಂಬ ಶುದ್ದಿ ಮತ್ತು ಧರ್ಮ ಸಂಪ್ರೋಕ್ಷಣೆಗೆ ಸಂಬಂಧಿಸಿದ ಕಲಸವೂ ನಡೆಯುತ್ತಿತ್ತು. ಇದೇ ಕಳೆದ ಡಿಸೆಂಬರ್ ತಿಂಗಳಲ್ಲಿ ಶ್ರೀ ಚಂದ್ರನಾಥ ಸ್ವಾಮಿಯ ಬಿಂಬಕ್ಕೆ ಅಗತ್ಯ ಸ್ವರ್ಣದ ವಜ್ರ ಲೇಪನ್ನ್ನು ಸೂಕ್ತರೀತಿಯಲ್ಲಿ ನಡೆಸಲಾಯಿತು.ಗರ್ಭಗೃಹದಿಂದ ಹಿಡಿದು ಭೈರಾದೇವಿ ಮಂಟಪದವರೆಗಿನ ವಿಸ್ತಾರ ಜಿನಾಲಯಾಂತರಂಗವನ್ನು, ಗೋಡೆ ಜಾಲಂದ್ರಗಳನ್ನು ಶುಚಿ ಶುಭ್ರಗೊಳಿಸಲಾಯಿತು.ಜಿನಾಬಿಂಬಗಳನ್ನು ಶ್ರದ್ಧೆ, ಸುಂದರಗೊಳಿಸಲಾಯಿತು. ಈ ಪವಿತ್ರ ಜಿನಾಲಯವು ತ್ಯಾಗ ಶ್ರದ್ದೆಗಳ ಪ್ರತೀಕವಾಗಿ ಶುದ್ದ ಸಂಪ್ರೋಕ್ಷಣೆಗೆ ಸಿದ್ದವಾಗಿ ನಿಂತು  ಆಧ್ಯಾತ್ಮಿಕ ವೈಭವದಿಂದ ಕಂಗೊಳಿಸತೊಡಗಿದೆ.
    	ಮೂಡುಬಿದಿರೆಯ ಗುರುಪೀಠ ಮತ್ತು ಭಟ್ಟಾರಕರ ಪರಂಪರೆ:
   ಮೂಡುಬಿದಿರೆಯ ಗುರುಪೀಠವು ಭಗವಾನ್ ಮಹಾವೀರರ ನಂತರದ ಆಚಾಂiÀರ್i ಕುಂದರ ದೇಶಿಯಗುಣ ಪರಂಪರೆಯಾಗಿದ್ದು, ಇಲ್ಲಿಯ ಪೀಠದ ಬಿರುದಾವಳಿಯು ಶ್ರೀಮದ್‍ಡೆಲ್ಲಿ ಕನಕಾದ್ರಿಶ್ವೇತಪುರ, ಸುಧಾಪುರ, ಸಂಗೀತಪುರ, ಶ್ರೀಮದ್ ಬೆಳಗೂಳ, ಕ್ಷೇಮವೇಣುಪುರ, ಸಿದ್ಧಸಂಹಾಸನದೀಶ್ವರ ಎಂಬುವುದಾಗಿದೆ.  ಭಟ್ಟಾರಕರೆಂದರೆ “ಸರ್ವ ಶಾಸ್ತ್ರ ಕಲಾಬಿಜ್ಞೊ ಸರ್ವಗಜ್ಜಾಭ ವರ್ಧಕಃ ಮಹಾತ್ನಾನಾಂ ಪ್ರಭಾವಿ ಭಟ್ಟಾರಕ ಇತೈಷ್ಯತೆ” ಆಂದರೆ ಧರ್ಮಶಾಸ್ತ್ರದಲ್ಲಿ ಪ್ರವೀಣರು, ಮುನಿಗಳ ಶ್ರೇಯಸ್ಸನ್ನು ಬಯಸುವರು. ಮಹ್ಮಾತರು ಧರ್ಮ ಬೋಧನೆ ಪ್ರಚಾರವನ್ನು ಮಾಡುವರು ಎಂಬುವುದಾಗಿದೆ.  ಇಲ್ಲಿಯ ಗುರು ಪೀಠದ ಸ್ಥಾಪನೆಯು ಸುಮಾರು ಕ್ರಿ. ಶ. 1220 ರಲ್ಲಾಯಿತು. “ಶ್ರವಣ ಬೆಳಗೊಳ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಪಂದಿತಾಚಾರ್ಯ ಸ್ವಾಮಿಗಳವರಿಂದ ನೆರವೇರಿತು.  ದ್ವಾರಸಮುದ್ರ (ಹಳೆಬೀಡು)ದ ರಾಜನದ ಬಿಟ್ಟೆದೇವನು (1104-1141) ಜೈನ ಧರ್ಮವನ್ನು ತೊರೆದು ವೈಷ್ಣವ ಧರ್ಮ ಸ್ವೀಕರಿಸು ವಿಷ್ಣುವರ್ಧನನೆಂದು ನಾಮಾಂಕಿತನಾದನು.  ವಿಷ್ಣುವರ್ಧನನು ಮತಾಂತರ ಹೊಂದಿದ ಬಳಿಕ ಅನೇಕ ಬಸದಿಗಳನ್ನು ದ್ವಂಸಗೊಳಿಸಿದ. ಜೈನ ಶ್ರಾವಕರನ್ನು ಹಿಂಸಿಸಿ ವದಿಸಿದ. ಈ ಅತ್ಯಾಚಾರ, ಅನಾಚಾರದ ಪರಿಣಾಮವಾಗಿ ಪ್ರಕೃತಿ ವಿಕೋಪಕ್ಕಾಗಿ ಅನೇಕ ಜನರು, ಪ್ರಾಣಿಗಳು ಬಲಿಯದವು. ಕ್ರಿ. ಶ. 1173-1219ರ ತನಕ ಇಲ್ಲಿ ರಾಜ್ಯವಾಳಿದ ವೀರಬಲ್ಲಾಳನು ಈ ಘೋರ ದುರಂತವನ್ನು ದೂರಗೊಳಿಸುವುದಕ್ಕಾಗಿ ಶ್ರವಣಬೆಳಗೊಳದ ಪೂಜ್ಯ ಶ್ರೀ ಸ್ವಾಮಿಯನ್ನು ಭಿನ್ನವಿಸಿಕೊಂಡರು. ರಾಜನ ಪ್ರಾರ್ಥನೆಯನ್ನು ಮನ್ನಿಸಿ ಪೂಜ್ಯ ಶ್ರೀ ಸ್ವಾಮಿಗಳವರು ದ್ವಾರ ಸಮುದ್ರಕ್ಕೆ ಚಿತ್ತೈಸಿದರು. ಭಗವಾನ್ ಪಾಶ್ವನಾಥ ಸ್ವಾಮಿಯ ಕಲಿಕುಂಡ ಆರಾಧನೆಯನ್ನು ವಿಧಿವತ್ತಾಗಿ ಆರಾಧಿಸಿ ಮಂತ್ರಪೂತವಾದ ಕುಂಬಳಕಾಯಿಗಳಿಂದ ಸಿದ್ಧಾಂತವೆತ್ತರು, ತಪೋಧನ ಜೈನ ಮಂತ್ರದ್ರಷ್ಟಾರರು, ತಪೋಶೀಲ ನಿರತರೂ ಆಗಿದ್ದರು.  
   ಹೊಯ್ಸಳ ರಾಜ ಬಳ್ಲಾಳರಾಯನ ರಾಜ್ಯದ ವಿಪತ್ತನ್ನೂ ,ದುಖಃವನ್ನು ದೂರ ಮಾಡುವುದರಿಂದ ರಾಜನು ನಾಲ್ಕೂ ಕಡೆಯಲ್ಲಿ ಧವರ್i ಜಾಗೃತಿಯನ್ನು ಮೊಳಗಿಸಿದ ಪೂಜ್ಯರಿಗೆ ತನ್ನ ಮಂತ್ರಿ, ಪರಿವಾರಸಮೇತ ವಿನಯ ಪೂರ್ವಕ ಚಾರುಕೀರ್ತಿ ಎಂಬ ಅಭಿಧಾನವನ್ನಿತ್ತು  ಗೌರವಿಸಿದ. ಅವರೇ ಆದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮಿಗಳವರು. ಅಲ್ಲಿಂದ ಸ್ವಾಮಿಗಳವರು ನೇರವಾಗಿ ದಕ್ಷಿಣಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿಗೆ ಬಂದು ಅಲ್ಲೊಂದು ಮಠವನ್ನು ಸ್ಥಾಪಿಸಿದರು. ನಂತರ ಮೂಡುಬಿದಿರೆಗೆ ಸಿದ್ಧಾಂತ ಗ್ರಂಥಗಳ ಪ್ರದರ್ಶನಕ್ಕೆ ಚಿತ್ತೈಸಿ ಇಲ್ಲೊಂದು ಮಠವನ್ನು ಸನ್ 1220 ನೇ ಇಸವಿಯಲ್ಲಿ ಸ್ಥಾಪಿಸಿ ಖಾಲಿಯಾಗಿದ್ದ ಪ್ರಾಚೀನ ಪೀಠವನ್ನು   ಅಲಂಕಾರಿಸಿದರು. 
   ಮಠಗಳು ಶ್ರವಣಬೆಳಗೊಳದ ಮಠಗಳೊಂದಿಗೆ ಅನಂತ ನೇರ ಸಂಬಂಧ ಹೊಂದಿರುವ ಗೌರವ ಪಾತ್ರವಾದ ಸ್ವತಂತ್ರ ಪೀಠಗಳಾಗಿವೆ. ಅಂದಿನಿಂದ ಎರಡೂ ಗೌರವಾನ್ವಿತ ಪೀಠದ ಮಠಾಧಿಪತಿಗಳು ಕೂಡಾ ಹೊಯ್ಸಳ ರಾಜ ಬಲ್ಲಾಳ ರಾಯನಿಂದ ಕೂಡ ಮಾಡಿದ ಚಾರುಕೀರ್ತಿ ಎಂಬ ಅಭಿಧಾನದಿಂದ ವಿಖ್ಯಾತರಾದರು.  ಇಂದು ಮೂಡುಬಿದಿರೆಯ ಚಂದನದ ಗದ್ದುಗೆಯ ಶ್ರೀ ಪೀಠ ರೂಢಿಯಾದ ಪೂಜ್ಯ ಭಟ್ಟಾರಕರು ಸ್ವಸ್ತಿ ಶ್ರೀ ಮದಭಿನವ ಭಾರತ ಭೂಷಣ ಚಾರುಕೀರ್ತಿ ಪಂಡಿತಚಾರ್ಯವರ್ಯ ವiಹಾಸ್ವಾಮಿಗಳವರು ವಿದ್ವಾಂಸರಾಗಿದ್ದು, ಜೈನದರ್ಶನ, ರತ್ನಕಂದಕ, ವಿಶಾರದ ಸಿವಿಲ್ ಇಂಜಿನಿಯರ್ ಡಿಪ್ಲೋಮ್, ಅರ್ಥಶಾಸ್ತ್ರ,ಪದವೀಧರರು. ಇವರ ಪೀಠಾರೋಹಣ ಸಮಾರಂಭವು ದಿನಾಂಕ 29.8.1999ರಂದು ಸಂಪನ್ನವಾಯಿತು. ಆಭಿಜಿತದ.ಕ ಜಿಲ್ಲೆಯ ಜೈನ ಶ್ರಾವಕರ, ಪರಮಪೋಜ್ಯ ಕರ್ಮಯೋಗಿ ಚಾರುಕೀರ್ತಿ ಭಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ತನ್ನ ಪ್ರಿಯಾಗ್ರ ಶಿಷ್ಯರಲ್ಲೋರ್ವರಾದ ತಮ್ಮಿಂದಲೇ ಬಿಜಾಪುರದ ಸಹಸ್ರವಾಗಿ ಕ್ಷೇತ್ರದ ಅಧ್ಯಕ್ಷರಾಗಿ ನಿಯುಕ್ತಗೊಂಡ ವಿಚಾರಪಟ್ಟದ ಕ್ಷುಲ್ಲಕ ದೀಕ್ಷಿತ ಹೇಮಕೀರ್ತಿ  ರೀತಿಗಳನ್ನು ಶ್ರೀ ಪೀಠಕ್ಕೆ ನೀಡಿದರು.
 ಇವರು ತನ್ನ ಗುರುಗಳ ಆದೇಶದಂತೆ ಶ್ರೀ ಪೀಠ ರೂಢರಾಗಿ ಧರ್ಮ ಪ್ರಭಾವನ ನಿರತರಾಗಿದ್ದುದಲ್ಲದೆ ಬಹುಬಾಷೆ ಬಲ್ಲವರೂ, ವಿದ್ವಾಂಸರೂ, ಮೇಧಾವಿಗಳೂ, ವಾಸ್ತು ಶಾಸ್ತ್ರತಜ್ಞರೂ, ಬರಹಗಾರರೂ, ಕಲಾಪೋಷಕರೂ ಆಗಿದ್ದು, ಧರ್ಮಪೂಜ್ಯ ಭಟ್ಟಾರಕ ಸಂಚಾಲಕತ್ವ ಹಾಗೂ ನೇತೃತ್ವದಲ್ಲಿ ಮೂಡಬಿದ್ರೆ ಕ್ಷೇತ್ರವು, 18 ಭವ್ಯ ಬಸದಿಗಳು, ಅನಗ್ರ್ಯ ರತ್ನ ಪ್ರತಿಮೆಗಳು ಇವರ ಆಧೀನದಲ್ಲಿವೆ. ಇವರು ಈ ಕ್ಷೇತ್ರಗಳ (18 ಬಸದಿಗಳ) ಮುಖ್ಯ ಸಂಚಾಲಕರಾಗಿರುತ್ತಾರೆ. ಇಲ್ಲಿಯ ಜಿನಾಲಯಗಳಲ್ಲಿ ಜರುಗುವ ಪ್ರತಿಯೊಂದು ನೋಂಪಿ, ಪೂಜೆ ಅಭಿಷೇಕ ಮೊದಲಾದ ಕಾರ್ಯಗಳಲ್ಲಿ ಶ್ರೀಗಳ ನಂತರ ಜೈನ ಪಾಳೇಗಾರರ ಪೈಕಿ ಮೊತ್ತಮೊದಲು ಚೌಟರು, ಬಂಗರು, ಅಜೀಲರು, ಚೋಳರು, ಮೂಲರು, ರೊನ್ನರು, ಭಿನ್ನಾಳರು, ಸೇಮಿತರು, ಬಲ್ಲಾಳರು, ಹೆಗ್ಡೆಯವರು ಮೊದಲಾದವರಿಗೆ ಯಥಾಕ್ರಮವಾಗಿ ಗಂಧಪ್ರಸಾದ ಮೊದಲಾದ ಮಾನ ಮರ್ಯಾದೆಗಳನ್ನು ಕೊಡತಕ್ಕದ್ದು, ನಡೆಯತಕ್ಕದ್ದೆಂದು ಸೂಚಿಸುತ್ತಾರೆ.

ಆಕಾರ ಗ್ರಂಥ • ಅಂತರಜಾಲ • ಮೂಡುಬಿದಿರೆಯ ಗ್ರಂಥಲಾಯ • ಮೂಡುಬಿದಿರೆಯ ಶಾಸನ ಅನ್ವೇಷಣೆಗಳ ಗ್ರಂಥ • ಛಾಯ ಚಿತ್ರಣದ ಅನ್ವೇóಷಣೆ ಗ್ರಂಥ

ಸಂಗ್ರಹ ವಿಶ್ವಕರ್ಮ ಆಚಾರ್ಯ ಚಿಕ್ಕಮಗಳೂರು