ನನ್ನ ಹೆಸರು ವಿಶ್ಮಿ. ನಾನು ಸಂತ ಆಲೋಸಿಯಸ್ ಕಾಲೇಜ್ ನಲ್ಲಿ ಕಲಿಯುತ್ತಿದ್ದೇನೆ.

ದ್ವಿತೀಯ ಬಿ. ಕಾಂ. ಪದವಿ ಓದುತ್ತಿದ್ದೇನೆ. ನನ್ನ ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು

ಪುತ್ತೊರಿನಲ್ಲಿ ಮುಗಿಸಿರುತ್ತೇನೆ. ನಾನು ಬಾಲ್ಯದಿಂದಲೂ ಆಟೋಟದಲ್ಲಿ ಆಸಕ್ತಳಾಗಿದ್ದು

ಶಾಲಾ ಹಾಗೂ ಕಾಲೇಜು ಮಟ್ಟದಲ್ಲಿ ಹಲವಾರು ಪ್ರಶಸ್ತಿ ಗಳನ್ನು ಗೆದ್ದಿರುತ್ತೇನೆ.

ನನ್ನ ಹವ್ಯಾಸಗಳು: ಕಾದಂಬರಿ ಓದುವುದು, ಸಣ್ಣ ಕಥೆಗಳ ರಚನೆ, ಸಂಗೀತ ಕೇಳುವುದು ಇತ್ಯಾದಿ.

ನಾನು ಎನ್. ಎಸ್. ಎಸ್. ನ ಸದಸ್ಯೆಯಾಗಿದ್ದು ಅದರ ಎಲ್ಲಾ ಸಾಮಾಜಿಕ ಕೆಲಸಗಳಲ್ಲಿ

ಭಾಗವಹಿಸುತ್ತೇನೆ