Visar
ಕನ್ನಡ ಕರ್ಮಚಾರಿಗಳಿಗೆ ಸ್ವಾಗತ. ನನ್ನ ಹೆಸರು ಸುಗ್ಗನಹಳ್ಳಿ ವಿಜಯಸಾರಥಿ. ಹಾಸನ ಜಿಲ್ಲೆಯ ಶ್ರವಣಬೆಳಗೊಳದಿಂದ 4 ಕಿಮೀ ದೂರದಲ್ಲಿ ನನ್ನ ಊರು ಇದೆ. ನನ್ನ ಜನ್ಮ ದಿನಾಂಕ 5 ಜುಲೈ 1975. ನನ್ನ ವಿದ್ಯಾಭ್ಯಾಸ ಮತ್ತು ಆರಂಭದ ನೌಕರಿಗಳು ಬೆಂಗಳೂರಿನಲ್ಲಿ ನಡೆದವು. 10ನೇ ತರಗತಿಯವರೆಗೆ ಬೆಂಗಳೂರಿನ ಬ್ಯಾಂಕ್ ಕಾಲೊನಿಯಲ್ಲಿರುವ ಜ್ಞಾನಮಿತ್ರ ಶಾಲೆಯಲ್ಲಿ ಅಭ್ಯಾಸ. ಬಿಎಸ್ಸಿ ವರೆಗಿನ ಕಾಲೇಜು ವಿದ್ಯಾಭಾಸ ವಿವಿ ಪುರಂ ವಿಜ್ಞಾನ ಕಾಲೇಜಿನಲ್ಲಿ. ಹಲವು ವರ್ಷಗಳು ಉದ್ಯೋಗ ಮತ್ತು ನಿರುದ್ಯೋಗಗಳ ನಂತರ ವಿಕ್ರಮ ವಾರಪತ್ರಿಕೆ ಮೂಲಕ ಪತ್ರಿಕಾ ಕ್ಷೇತ್ರಕ್ಕೆ 2002ರಲ್ಲಿ ಪಾದಾರ್ಪಣೆ. ಎರಡು ವರ್ಷಗಳ ನಂತರ ಕನ್ನಡಪ್ರಭ ಅಂತರಜಾಲ ಆವೃತ್ತಿಯಲ್ಲಿ ಕೆಲಸ ಮಾಡುವ ಅವಕಾಶ ಲಭ್ಯ. ಪ್ರಸಕ್ತ ಚೆನ್ನೈನಲ್ಲಿ ನೆಲೆ ಕಂಡುಕೊಂಡಿದ್ದು ಕನ್ನಡದ ಸೇವೆಗೆ ನನ್ನ ಕಿರುಕಾಣಿಕೆಗಳನ್ನು ಸಲ್ಲಿಸಲು ಉತ್ಸುಕನಾಗಿದ್ದೇನೆ. ನನ್ನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಬಯಸುವವರು snvsrthy@yahoo.comಗೆ ಇಮೇಲ್ ಮಾಡಬಹುದು ಮತ್ತು ನನ್ನ ಖಾಸಗಿ ಬ್ಲಾಗ್ ಅನ್ನು ವೀಕ್ಷಿಸಬಹುದು.