ಸದಸ್ಯ:Vineeth Vijaykumar/sandbox
ನನ್ನ ಹೆಸರು ವಿನೀತ್.ವಿ.ಎಸ್. ನನ್ನ ತಂದೆಯ ಹೆಸರು ವಿಜಯಕುಮಾರ್. ತಾಯಿಯ ಹೆಸರು ಶಶಿಕಲಾ. ಹಾಗೂ ನನ್ನ ತಂಗಿ ವಿನಯಶ್ರೀ. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಎಂಬಲ್ಲಿದೆ.ನಾನು ಪಿ.ಯು.ಸಿ. ಯನ್ನು ಸುಬ್ರಮಣ್ಯ ಕಾಲೇಜಿನಲ್ಲಿ ಮುಗಿಸಿದ್ದೇನೆ. ನಮ್ಮ ಮನೆಯಿಂದ ಕಾಲೇಜಿಗೆ ಸುಮಾರು ೪೦ ಕಿ.ಮೀ.ಗಳಿವೆ ಪ್ರತಿ ನಿತ್ಯ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆ. ನಮ್ಮ ಕಾಲೇಜು ಕುಮಾರ ಪರ್ವತದ ತಪ್ಪಲಿನಲ್ಲಿದೆ. ಹಾಗೆಯೇ ಪ್ರಸಿದ್ದವಾದ ಕುಕ್ಕೇ ಸುಬ್ರಮಣ್ಯ ಕ್ಷೇತ್ರ ಕುಮಾರದಾರ ನದಿಯ ದಡದಲ್ಲಿದೆ. ನಮ್ಮ ಮನೆಯಿಂದ ದರ್ಮಸ್ಥಳ ಕ್ಷೇತ್ರವು ಹತ್ತಿರವಾಗಿದೆ. ನಾನು ಪಿ.ಯು.ಸಿ.ಯಲ್ಲಿರುವಾಗ ತುಂಬಾ ಒಳ್ಳೆಯ ಗೆಳೆಯರಿದ್ದರು ನಾವು ರಜದ ದಿನದಲ್ಲಿ ದೇವಸ್ಥಾನಕ್ಕೆಲ್ಲಾ ಹೋಗುತ್ತಿದ್ದೆವು. ಈಗ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ.ಪದವಿ ಅದ್ಯಯನವನ್ನು ಮಾಡುತ್ತಿದ್ದೇನೆ. ನಾನು ಕಾಲೇಜು ಆರಂಭದ ದಿನ ಬೆಳಗ್ಗೆ ನಮ್ಮ ಕ್ಲಾಸನ್ನು ಹುಡುಕುವುದೇ ತುಂಬಾ ಕಷ್ಟವಾಗಿತ್ತು. ನಾನು ಬೇರೆಯವರಲ್ಲಿ ಕೇಳಿ ಕ್ಲಾಸನ್ನು ಕಂಡು ಹಿಡಿದೆ. ಕ್ಲಾಸಿಗೆ ಹತ್ತಿದ ಕ್ಷಣ ಇಂಗ್ಲೀಷ್ ಪದಗಳೇ ನನ್ನ ಕಿವಿಗೆ ಕೇಳಿಸುತ್ತಿತ್ತು. ನನಗೆ ಅದು ಸ್ವಲ್ಪ ಕಷ್ಟವಾಗಿತ್ತು. ಅವರೊಂದಿಗೆ ಮಾತನಾಡಲು ಏಕೆಂದರೆ ನಾನು ಹತ್ತನೇ ತರಗತಿಯವರೆಗೆ ಕನ್ನಡ ಮಾದ್ಯಮದಲ್ಲಿ ಅದ್ಯಯನ ಮಾಡಿರುತ್ತೇನೆ.ಓರಿಯೆಂಟೇಶನ್ ಪ್ರೋಗ್ರಾಮಿನ ದಿನ ನನಗೆ ಇಬ್ಬರೂ ಗೆಳೆಯರು ಪರಿಚಯವಾದರು. ನಾನು ಹೆಚ್ಚು ಸಮಯ ಅವರೊಂದಿಗೆ ಮಾತನಾಡುತ್ತಿದ್ದೆ. ಒಂದು ವಾರದ ನಂತರ ನನಗೆ ಒಬ್ಬ ಕೇರಳದ ಗೆಲೆಯ ಸಿಕ್ಕಿದ. ನಾನು ಮನೆಯಲ್ಲಿಯೇ ಮಲೆಯಾಲಂ ಮಾತನಾಡುತ್ತೇನೆ. ಆದ್ದರಿಂದ ಅವನೊಂದಿಗೆ ಹೆಚ್ಚು ಬೆರೆಯಲು ಸಾದ್ಯವಾಯಿತು. ನನ್ನ ತಂದೆಯ ಊರು ಕೇರಳದ ತಿರುವನಂತಪುರಂ ನಾನು ವರುಷಕ್ಕೊಮ್ಮೆ ಅಲ್ಲಿಗೆ ಮನೆಯವರೊಂದಿಗೆ ಹೋಗುತ್ತೇನೆ. ಅದು ತುಂಬಾ ಒಲ್ಳೆಯ ಅನುಭವನ್ನು ನೀಡುತ್ತದೆ.ರೈಲಿನಲ್ಲಿ ಮಂಗಳೂರಿನಿಂದ ಸಂಜೆ ಹತ್ತಿದರೆ ಅಲ್ಲಿ ತಲುಪುವಾಗ ಬೆಳಿಗ್ಗೆಯಾಗುತ್ತದೆ. ಒಂದು ವಾರದಲ್ಲಿ ಎಲ್ಲಾ ಸಂಬಂದಿಕರ ಮನೆಗೆ ಹೋಗಿ ಮತ್ತೆ ಇಲ್ಲಿಗೆ ಮರಳುತ್ತೇವೆ.ನನಗೆ ಈ ಕಾಲೇಜಿನಲ್ಲಿ ಈಗ ತುಂಬಾ ಸ್ನೇಹಿತರು ಸಿಕ್ಕಿದ್ದಾರೆ. ನಾನು ಈಗ ಪಿ.ಜಿ ಯಲ್ಲಿ ನಿಂತು ಓದುತ್ತಿದ್ದೇನೆ. ಅಲ್ಲಿ ೪ ಜನ ಗೆಳೆಯರು ಸಿಕ್ಕಿರುತ್ತಾರೆ. ನಾವೆಲ್ಲರೂ ಮಲೆಯಾಲಂ ಮಾತಾನಾಡುವವರ ಆಗಿದ್ದರಿಂದ ತುಂಬಾ ಖುಶಿಯಾಗಿ ಇರುತ್ತೇವೆ. ನಮ್ಮ ಊರಿನ ಹತ್ತಿರ ಶೀರಾಡಿ ಘಾಟಿ ಇದೆ. ವಾಹನಗಳ ದಟ್ಟನೆಯಿಂದ ಅಪಘಾತಗಳು ಸಂಬವಿಸುತ್ತಿರುತ್ತವೆ. ನನಗೆ ಗೋಬಿ ಮಂಚೂರಿ ಎಂದರೆ ತುಂಬಾ ಇಷ್ಟವಾಗಿತ್ತು. ಆದರೆ ಆ ಮಂಗಳೂರಿಗೆ ಬಂದ ನಂತರ ಅದನ್ನು ತಿನ್ನುವುದನ್ನೆ ಬಿಟ್ಟಿರುತ್ತೇನೆ. ಈ ಕಾಲೇಜಿನಲ್ಲಿ ಚೆನ್ನಾಗೆ ಓದಿ ಒಳ್ಳೆಯ ಅಂಖಗಳಿಸಬೇಕೆಂಬುದು ನನ್ನ ಆಸೆ.