Vineeth Vijaykumar
ನನ್ನ ಹೆಸರು ವಿನೀತ್ ವಿ. ಎಸ್. ಭೂಮಿ ತಕ್ಷಣ ಗಮನ ಸೆಳೆಯುವ ಭೂಮಿಯು ಒಂದು ಲಕ್ಷಣವೆಂದರೆ ಅದರ ಮೇಲ್ಮೈ ಅನ್ನು ಆವರಿಸಿರುವ ನೀರು. ಭೂಮಿಯ ಮೂರನೆ ಎರಡಂಶ ಭಾಗವನ್ನು ನೀರು ಆವರಿಸಿದೆ. ಈ ಜಲರಾಶಿಯನ್ನು ಜಲಗೋಳ ಎನ್ನುತ್ತಾರೆ. ಸಾಗರ, ಸಮುದ್ರಗಳು, ಸರೋವರ, ನದಿಗಳು, ಕೆರೆಗಳು-ಎಲ್ಲ ಸೇರಿ ಭೂಮಿಯ ಹೆಚ್ಚಿನ ಮೇಲ್ಮೈಯನ್ನು ಆವರಿಸಿಬಿಟ್ಟಿವೆ. ಇನ್ನೊಂದು ಲಕ್ಷಣ ಎಂದರೆ ಉಳಿದ ಮೂರನೇ ಒಂದಂಶ ಸಮತಲವಾದ ನೆಲ. ಈ ನೆಲ ಹಾಗೂ ಜಲಗಳನ್ನು ಕಣ್ಣಿಗೆ ಕಾಣದ ವಾಯುವು ಸುತ್ತುವರೆದಿದೆ. ಇದೇ ವಾಯುಗೋಳ ಅಥವಾ ಇದು ನೆಲದಿಂದ ಕೆಲವು ನೂರು ಕಿಲೋಮೀಟರ್ ಗಳ ದೂರದ ವಾಯುಮಂಡಲದವರೆಗೂ ಪಸರಿಸಿದೆ. ಇದರ ಗಡಿಯನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ವಾಯುಮಂಡಲವು ಆಕ್ಸಿಜನ್,ನೈಟ್ರೋಜನ್, ಕಾರ್ಬನ್ ಡೈ ಆಕ್ಸೈಡ್ ಮತ್ತು ಇನ್ನೂ ಅನೇಕ ಅನಿಲ ರೂಪದ ಧಾತು ಮತ್ತು ಸಂಯುಕ್ತಗಳ ಮಿಶ್ರಣ.ಭೂಮಿಯ ಮೇಲೆ ಜೀವ ಬದುಕುಳಿಯಲು ಯೋಗ್ಯವಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಂದು ಅನಿಲವು ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮ್ಮ ಸುತ್ತಮುತ್ತ ಕಾಣುವ ಪರಿಸರ-ಮರ,ಪ್ರಾಣಿ,ಪಕ್ಷಿ ಮತ್ತು ಸೂಕ್ಷ್ಮಜೀವಿಗಳು ಭೂಮಿಯು ೪.೫ ಬಿಲಿಯನ್ ವರ್ಷಗಳಿಂದ ಕಂಡ ಬದಲಾವಣೆಗಳ ಫಲ. ಇಂದಿನ ಭೂಮಿಯನ್ನು ರೂಪಿಸಲು ಪ್ರೇರಕವಾದ ಬದಲಾವಣೆಗಳು ಆಗಿರದೇ ಇದ್ದಿದ್ದರೆ ನಮ್ಮ ಭೂಮಿಯೂ ಕೂಡ ಬುಧ ಅಥವಾ ಮಂಗಳ ಗ್ರಹಗಳಂತೆ ನಿರ್ಜೀವಿಗ್ರಹವಾಗಿ ಉಳಿದು ಬಿಡುತ್ತಿತ್ತು, ಇಂದಿನ ಅನುಕೂಲಕರ ವಾತಾವರಣವನ್ನು ಅರ್ಥ ಮಾಡಿಕೊಳ್ಳಲು, ಭೂಮಿಯ ಉಗಮ ಹೇಗಾಯಿತಿ ಮತ್ತು ಆಗ ಪರಿಸ್ಥಿತಿ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ,