ಪರಿಚಯ ಬದಲಾಯಿಸಿ

 

ನನ್ನ ಹೆಸರು ಹೇಮ್ಂತ್ ರೆಡ್ದಿ. ನನ್ನ ಜನ್ಮಸ್ಥಳ ಸಿದ್ಧಮ್ಮನ ಹಳ್ಳಿ. ನಾನು ಬಳ್ಳಾರಿ ಜಿಲ್ಲೆಯವನು. ನನ್ನ ತಂದೆಯ ಹೆಸರು ರವಿ ರಾಜೇಂದ್ರ ರೆಡ್ಡಿ. ನನ್ನ ತಾಯಿಯ ಹೆಸರು ಸರಸ್ವತಿ. ನನ್ನ ತಂದೆ ಕೃಷಿಕ ಮತ್ತು ನನ್ನ ತಾಯಿ ಗೃಹಿಣಿ. ನನಗೆ ಒಬ್ಬಳು ತಂಗಿಯಿದ್ದಾಳೆ. ನನ್ನ ಮುದ್ದು ತಂಗಿಯ ಹೆಸರು ಸಿರಿಶಾ ರೆಡ್ಡಿ. ಅವಳು ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ಶಿಕ್ಷಣ ಬದಲಾಯಿಸಿ

ನಾನು ನಂದಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹತ್ತನೇ ತರಗತಿಯವರೆಗೂ ಓದಿದ್ದೇನೆ. ನಾನು ಪ್ರಥಮ ಮತ್ತು ದ್ವಿತೀಯ ಪಿಯುಸಿ ಅಳ್ವಾಸ್ ಶೈಕ್ಷಣಿಕ ಸಂಸ್ಥೆಯಲ್ಲಿ ಮುಗಿಸಿದ್ದೇನೆ. ನಾನು ಅದೇ ಸಂಸ್ಥೆಯಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ನಡೆಸಿದೆ. ಕ್ರೀಡೆ ಎಂದರೆ ನನಗೆ ತುಂಬಾ ಅಚ್ಚುಮೆಚ್ಚು. ಕ್ರೀಡೆಗೋಸ್ಕರ ನಾನು ಉತ್ತರ ಪ್ರದೇಶದ ಅಮಿಟಿ ವಿಶ್ವವಿದ್ಯಾಲಯಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದೆ. ಒಂದು ವರ್ಷ ಎಲ್ಲಾ ಚೆನ್ನಾಗಿ ನಡೆಯುತಿತ್ತು. ಆದರೆ ಜನವರಿ ತಿಂಗಳಲ್ಲಿ ಎಂದಿನಂತೆ ಅಭ್ಯಾಸ ಮಾಡುತ್ತಾ ನೆಲಕ್ಕೆ ಉರುಳಿ ಬಿದ್ದೆ. ಆದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ನೆಲಕ್ಕೆ ಬಿದ್ದಿದ್ದರಿಂದ ಬೆನ್ನಿಗೆ ಪೆಟ್ಟಾಯ್ತು. ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದರು. ಕ್ರೀಡೆ ಮುಂದುವರಿಸಲು ಸಾಧ್ಯವಾಗದೆ ನಾನು ಕರ್ನಾಟಕಕ್ಕೆ ಹಿಂದಿರುಗಿದೆನು. ಇಲ್ಲಿ ಬೆಂಗಳೂರಿನ ಕ್ರಿಸ್ತ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದನು. ಈಗ ನಾನು ಸಂಪೂರ್ಣ ಚೇತರಿಕೆ ಹೊಂದಿದ್ದೇನೆ.

ಕ್ರೀಡೆ ಬದಲಾಯಿಸಿ

ಈಗ ನಾನು ನನ್ನ ನೆಚ್ಚಿನ ಕ್ರೀಡೆಯಾದ ಅತ್ಲೆಟಿಕ್ ಗೆ ಸೇರಿದ್ದೇನೆ. ಉಸೈನ್ ಬೋಲ್ಟ್ ನನ್ನ ಆದರ್ಶವ್ಯಕ್ತಿಯಾಗಿದ್ದಾರೆ. ಭವಿಷ್ಯದಲ್ಲಿ ಅತ್ತ್ಯುತ್ತಮ ಕ್ರೀಡಾಪಟು ಆಗುವನೆಂಬ ಭರವಸೆ ನನಗಿದೆ.

ಜೈ ಕರ್ನಾಟಕ ಮಾತೆ.

ಜೈ ಹಿಂದೂಸ್ಥಾನ್.