ಸದಸ್ಯ:Vani Bhat manjalli/ನನ್ನ ಪ್ರಯೋಗಪುಟ3

ಧರ್ಮನಾಥ ಸ್ವಾಮಿ ಜಿನ ಮಂದಿರ, ಪಡುಗ್ರಾಮ,ಕಾಪು

ಶ್ರೀ ಧರ್ಮನಾಥ ಸ್ವಾಮಿ ಜಿನ ಮಂದಿರ ಉಡುಪಿ ತಾಲೂಕು ಪಡುಗ್ರಾಮದ ಕಾಪುವಿನಲ್ಲಿದೆ. ಕಟಪಾಡಿಯಿಂದ ಇಲ್ಲಿಗೆ ೫ಕೀ.ಮಿ, ದೂರ.ಇದು ಕಾಪು ಪೆಟ್ರೋಲ್ ಬಂಕ್ ಬಳಿಯಿದೆ.

ಒಳಾಂಗಣ ಶಿಲಾನ್ಯಾಸ

ಬದಲಾಯಿಸಿ

ಬಸದಿಯ ಜಗಲಿಗೆ ಹೋಗುವಲ್ಲಿ ಪ್ರಮುಖದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಮುಂದೆ ಇರುವಂತಹ ಪ್ರಾರ್ಥನಾ ಮಂಟಪದಲ್ಲಿ ಜಯಘಂಟೆ ಮತ್ತು ಮಣಿಘಂಟೆಗಳನ್ನು ತೂಗಿ ಹಾಕಲಾಗಿದೆ. ಮುಂದಿನ ಮಂಟಪಕ್ಕೆ ತಾಗಿಕೊಂಡು ಬಸದಿಯ ಗರ್ಭಗೃಹವಿದೆ. ಇಲ್ಲಿಯೇ ಗಂಧಕುಟಿ ಕೂಡಾ ಇದೆ. ಗಂಧಕುಟಿಯ ಬಳಿಯಲ್ಲಿ ಗಣಪಧಪಾದ, ಬ್ರಹ್ಮಯಕ್ಷ ಮತ್ತು ೨೪ ತೀರ್ಥಂಕರರ ಸಣ್ಣ ಮೂರ್ತಿ ಇದೆ. ಬಲಬದಿಯಲ್ಲಿ ಕ್ಚೇತ್ರಪಾಲನ ಶಿಲಾ ಮೂರ್ತಿಯಿದೆ. ಅಲ್ಲಿ ಕೆಲವು ನಾಗರಕಲ್ಲುಗಳೂ ಇದ್ದು, ಒಂದು ಚಿಕ್ಕಪೀಠದ ಮೇಲೆ ಅವುಗಳನ್ನ ಇಡಲಾಗಿದೆ. ಬಸದಿಯ ಸುತ್ತಲೂ ಅಷ್ಟದಿಕಾಲಕರ ಕಲ್ಲುಗಳು ಇವೆ. ಬಸದಿಯ ನಾಲ್ಕೂ ದಿಕ್ಕುಗಳಲ್ಲಿ ಬಲಯೂತ ರಕ್ಷಣಾ ಗಿಡವಿದೆ.ಇಲ್ಲಿಯ ಶ್ರೀ ಧರ್ಮನಾಥಸ್ವಾಮಿಯ ಮೂಲನಾಯಕ ಬಿಂಬವು ಶಿಲೆಯದ್ದಾಗಿದ್ದು, ಸುಮಾರು ೨ ಅಡಿ ಎತ್ತರವಿದೆ. ಇದರ ಸುತ್ತಲೂ ಇಲೆಯದ್ದೇ ಆದ ಪ್ರಭಾವಳಿ ಇದೆ.[]

ಪೂಜಾ ವಿಧಾನ

ಬದಲಾಯಿಸಿ

ಶ್ರೀ ಪದ್ಮಾವತೀ ಅಮ್ಮನವರ ಮೂರ್ತಿಯಿದ್ದು, ದಿನವೂ ಎಂದಿನಂತೆ ಬೆಳಿಗ್ಗೆ ಪೂಜೆ ನಡೆಯುತ್ತದೆ. ಶುಕ್ರವಾರಗಳಂದು ಮತ್ತು ನವರಾತ್ರಿಯ ಎಲ್ಲಾ ದಿನಗಳಂದು ಬೆಳಿಗ್ಗೆ ಮತ್ತು ಸಾಯಂಕಾಲ ಪೂಜೆಗಳಿರುತ್ತವೆ. ಆ ಸಂದರ್ಭದಲ್ಲಿ ಸೀರೆ ಉಡಿಸಿ, ಹೂವಿನ ಅಂಲಕಾರ ಮಾಡಲಾಗುತ್ತದೆ. ಬಳಿಯಲ್ಲಿ ಕುಕ್ಕುಟ ಸರ್ಪವಿದೆ.ಸ್ವಾಮಿಗೆ ದಿನವೂ ಕ್ಷೀರಾಭೀಷೇಕ, ಗಂಧಾಭಿಷೇಕ ಹಾಗೂ ಜಲಾಭಿಷೇಕಗಳನ್ನು ಮಾಡಿ ಪೂಜೆಯನ್ನು ನಡೆಸಲಾಗುತ್ತದೆ. ದಿನಕ್ಕೆ ಒಂದು ಬಾರಿ ಸೇರಿದಂತೆ ಶುಕ್ರವಾರ ಮತ್ತು ನವರಾತ್ರಿಯ ದಿನಗಳಲ್ಲಿ ರಾತ್ರಿಯೂ ಪೂಜೆಯನ್ನು ಮಾಡಲಾಗುತ್ತದೆ.

ಉಲ್ಲೇಖ

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಮಂಜೂಶ್ರೀ ಪ್ರಿಂಟರ್ಸ್‌. p. ೩೩೨.