ಜನನ ಬದಲಾಯಿಸಿ

ನಿರಾಜ್ ಬಜಾಜ್ ಅವರು ೧೦ ಅಕ್ಟೋಬರ್, ೧೯೫೪ರಲ್ಲಿ ಜನಿಸಿದರು.

ವಿದ್ಯಾಭ್ಯಾಸ ಬದಲಾಯಿಸಿ

ಇವರು ತಮ್ಮ ವಾಣಿಜ್ಯ ಪದವಿಯನ್ನು ಸಿಡೆನ್ಹಾಮ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕಾನೋಮಿಕ್ಸ್ನಲ್ಲಿ ಮಾಡಿದ್ದಾರೆ. ನಂತರ ತಮ್ಮ ಎಂಬಿಎ ಪದವಿಯನ್ನು ಅಮೇರಿಕಾದ, ಬಾಸ್ಟನ್ನಲ್ಲಿರುವ ಹಾರ್ವರ್ಡ್ ಬಿಸ್ನೆಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

ವೃತ್ತಿಜೀವನ ಬದಲಾಯಿಸಿ

ಇವರು ಬಜಾಜ್ ಗ್ರೂಪ್ ವ್ಯಾಪಾರ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ. ಬಜಾಜ್ ಗ್ರೂಪ್ ಸಂಸ್ಥೆಯಲ್ಲಿ ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ನೌಕರರಿದ್ದಾರೆ. ಇವರ ಬಜಾಜ್ ಗ್ರೂಪಿನ ಮಾರುಕಟ್ಟೆ ಬಂಡವಾಳೀಕರಣ ಸುಮಾರು ೩೨೫೦೦೦ ಕೋಟಿ ರೂಪಾಯಿ. ಇವರು ಬಜಾಜ್ ಆಟೋ ಲಿಮಿಟೆಡ್, ಬಜಾಜ್ ಅಲಿಯನ್ಸ್ ಲೈಫ್, ಜನರಲ್ ಇನ್ಶೂರೆನ್ಸ್ ಕೂ. ಲಿಮಿಟೆಡ್ ಸಂಸ್ಥೆಗಳ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ಇವರು ಬಾಚ್ರಾಜ್ ಅಂಡ್ ಕಂಪನಿ, ಜಮ್ನಾಲಾಲ್ ಅಂಡ್ ಸಂಸ್ಸ್ ಮತ್ತು ಬಜಾಜ್ ಗ್ರೂಪ್ ಕಂಪನಿಯ ಚೇರ್ಮನ್ ಆಗಿದ್ದಾರೆ. ಇವರು ಮುಕಾನ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಇಂಡಿಯನ್ ಮರ್ಚೆಂಟ್ ಚೇಂಬರ್ನ ಅಧ್ಯಕ್ಷರಾಗಿದ್ದರು. ಇವರು ಅಲಾಯ್ ಸ್ಟೀಲ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಮತ್ತು ಇಂಡಿಯನ್ ಸ್ಟೇನ್ಲೆಸ್ ಸ್ಟೀಲ್ ಡೆವಲಪ್ಮೆಂಟ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾಗಿದ್ದರು.

ಕ್ರೀಡಾ ಸಾಧನೆಗಳು ಬದಲಾಯಿಸಿ

 

ಇವರು ೧೯೭೦ ರಿಂದ ೧೯೭೭ರ ನಡುವೆ ಏಳು ವರ್ಷಗಳ ಕಾಲ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಈ ವೇಳೆಯಲ್ಲಿ ಕೊನೆಯ ನಾಲ್ಕು ವರ್ಷಗಳ ಕಾಲ ನಾಯಕರಾಗಿ ಪ್ರತಿನಿಧಿಸಿದರು.

ಗೌರವಗಳು ಮತ್ತು ಪ್ರಶಸ್ತಿಗಳು ಬದಲಾಯಿಸಿ

ಇವರು ಮೂರು ಬಾರಿ ಆಲ್ ಇಂಡಿಯಾ ಟೇಬಲ್ ಟೆನ್ನಿಸ್ ಚಾಂಪಿಯನ್ ಆಗಿದ್ದಾರೆ, ಮತ್ತು ನಾಲ್ಕು ಬಾರಿ ಭಾರತದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದರು. ಇವರಿಗೆ ೧೯೭೩ ವರ್ಷದ ಅವಧಿಯಲ್ಲಿ ಅರ್ಜುನ ಪ್ರಶಸ್ತಿಯನ್ನು ಟೇಬಲ್ ಟೆನ್ನಿಸ್ ಗಾಗಿ ನೀಡಲಾಗಿತ್ತು ನೀಡಲಾಗಿತ್ತು. ಇದು ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇವರು ಮಹಾರಾಷ್ಟ್ರದ ಕ್ರೀಡಾ ಪ್ರಶಸ್ತಿಯಾದ- ಶಿವ ಛತ್ರಪತಿ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದ್ದಾರೆ. ಇವರು ಮಹಾರಾಷ್ಟ್ರದ ಗೌರವ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

ಕುಟುಂಬ ಬದಲಾಯಿಸಿ

ಇವರ ಮಡದಿಯ ಹೆಸರು ಮಿನಾಲ್ ಬಜಾಜ್. ಇವರು ಮಹಿಳಾ ವಿಂಗ್, ಇಂಡಿಯನ್ ಮರ್ಚೆಂಟ್ಸ್ ಚೇಂಬರ್ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು. ಇವರು ಜಮ್ನಾಲಾಲ್ ಬಜಾಜ್ ಸಂಸ್ಥೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಎರಡು ಮಕ್ಕಳು - ಕ್ರಿಥಿ ಬಜಾಜ್ ಮತ್ತು ನಿರಾವ್ ಬಜಾಜ್. ಕ್ರಿಥಿ ಬಜಾಜ್ ತಮ್ಮ ವಿಜ್ಞಾನ ಪದವಿಯನ್ನು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ, ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿಯಲ್ಲಿ ಮಾಡಿದ್ದಾರೆ. ನಿರಾವ್ ಬಜಾಜ್ ತಮ್ಮ ಪದವಿ ಶಿಕ್ಷಣವನ್ನು ಬ್ರುನೆಲ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ್ದಾರೆ.

ಉಲ್ಲೇಖಗಳು ಬದಲಾಯಿಸಿ

[೧] [೨]

  1. https://www.bajajauto.com/about-us/our-team
  2. http://www.mukand.com/niraj-r-bajaj-chairman-managing-director/