ಕರ್ನಾಟಕ
 
ಮುಂಬಯಿ

ನನ್ನ ಹೆಸರು ವೈಭವಿ ರಾಜು.ನಾನು ಕರ್ನಾಟಕಬೆಂಗಳೂರಿನಲ್ಲಿ ವಾಸವಿರುವ ದೇವಾ ಮತ್ತು ಲೀನಾ ದಂಪತಿಗಳ ಮೊದಲನೆಯ ಪುತ್ರಿಯಾಗಿ, ೨೦೦೦ನೇ ಇಸವಿಯ ನವೆಂಬರ್ ತಿಂಗಳ ೧೪ನೇ ತಾರೀಖಿನಂದು ಜನಿಸಿದೆ.ಅಪ್ಪ ಅಮ್ಮನ ಮುದ್ದಿನ ಮಗಳು. ಅವರ ಪ್ರೀತಿಯನ್ನು ಮಾತಿನಲ್ಲಿ ಹೇಳಲಾಗದು. ನನಗೆ ಕೊಟಿಜಿತ್ ಎಂಬ ತಮ್ಮನಿದ್ದಾನೆ. ಅವನೆಂದರೆ ನನಗೆ ಪ್ರಾಣ. ಅವನ ಬಳಕೆ ಜಗಳ ಮಾಡುತ್ತಿದ್ದುದು ಬಹಳ ಚೆನ್ನಾಗಿತ್ತು. ಅಪ್ಪ ಆ ಜಗಳ ಬಿಡಿಸಲು ಪ್ರಯತ್ನ ಮಾಡಿ ಮಾಡಿ ವಿಫಲರಾಗುತ್ತಿದ್ದರು. ನನಗೆ ಅಪ್ಪನೆಂದರೆ ಪಂಚ ಪ್ರಾಣ, ಅವರಿಗೆ ತಮ್ಮನಿಗಿಂತ ನಾನೆಂದರೆನೇ ತುಂಬಾ ಇಷ್ಟ. ಚಿಕ್ಕ ವಯಸ್ಸಿನಲ್ಲಿ ನಾನು ಕೇಳಿದ ಎಲ್ಲವನ್ನೂ ಕೊಡಿಸುತ್ತಿದ್ದರು,ನನ್ನನ್ನು ತುಂಬಾ ಮುದ್ದು ಮಾಡುತ್ತಿದ್ದರು.ನನ್ನನ್ನು ಆಗ್ಲೆ ಮುಂಬಯಿ, ರಾಜಸ್ಥಾನ, ದೆಹಲಿ, ಕೇರಳ, ವರಂಗಲ್, ಹೈದರಾಬಾದ್, ವೈಜಾಗ್ ಗೆ ಕರೆದುಕೊಂಡು ಹೋಗಿದ್ದರು.

ನನ್ನನ್ನು ಶಾಲೆಗೆ ಸೇರಿಸಬೇಕೆಂದು ಯೋಚಿಸಿ, ಬೆಂಗಳೂರಿನ ಶಿಶು ಗೃಹ ಶಾಲೆಗೆ ಸೇರಿಸಿದರು. ಅಲ್ಲಿನ ವಾತಾವರಣ ಬಹಳ ಸುಂದರವಾಗಿತ್ತು. ಆ ವಯಸ್ಸಿನಲ್ಲಿಯೇ ಎಲ್ಲರನ್ನೂ ಪರಿಚಯ ಮಾಡಿಕೊಂಡೆ. ಅಮ್ಮ ನನಗಾಗಿ ಅನೇಕ ವಿಧದ ಅಡುಗೆ ಮಾಡುತ್ತಿದ್ದರು. ಅಮ್ಮನ ಕೈ ರುಚಿಯ ಎಂದರೆ ನನಗೆ ತುಂಬಾ ಇಷ್ಟ.

ಶಾಲೆಯಲ್ಲಿ ಬಹಳ ತುಂಟ ಹುಡುಗಿಯಾಗಿದ್ದೆ.ಆದರೂ ಬಹಳ ಚೆನ್ನಾಗಿ ಓದುತ್ತಿದ್ದೆ. ಎಲ್ಲಾ ಶಿಕ್ಷಕರು ನನ್ನನ್ನು ಬಹಳ ಇಷ್ಟ ಪಡುತ್ತಿದ್ದರು.ಅವರು ನನಗೆ ಬಹಳ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ನಾನು ಎಲ್ಲಾ ಆಟಗಳಲ್ಲಿ ಮುಂದಿರುತ್ತಿದ್ದೆ. ಶಾಲೆಯಿಂದ ನಮ್ಮನ್ನು ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಚಿಕ್ಕಮಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಮಂಗಳೂರು, ಉಡುಪಿ ಮುಂತಾದ ಕಡೆಗಳಿಗೆ ಪ್ರವಾಸ ಕರೆದುಕೊಂಡು ಹೋಗಿದ್ದರು. ಗೆಳತಿಯರ ಜೊತೆಗೆ ಅದು ತುಂಬಾ ಮಜವಾಗಿತ್ತು

ಪ್ರೌಢ ಶಾಲೆ

ಬದಲಾಯಿಸಿ
 
ಕಾನಿಪಾಕಂ

ನಾನು ೯ನೇ ತರಗತಿಗ ಮುಗಿಸಿ ೧೦ನೇ ತರಗತಿಗೆ ಬಂದೆ. ಅಲ್ಲಿ ಎಲ್ಲಾ ಶಿಕ್ಷಕರೂ ಒಳ್ಳೆಯ ವಿಧ್ಯಾಭ್ಯಾಸ ನೀಡಿದರು, ಅವರ ನೆರವಿನಿಂದ ಬಹಳ ಚೆನ್ನಾಗಿ ಓದ ತೊಡಗಿದೆ.ಅಂತೂ ಇಂತೂ ಪರೀಕ್ಷೆಗಳು ಹತ್ತಿರ ಬಂದೇ ಬಿಟ್ಟಕಳೆದೆ.ಅದಕ್ಕಾಗಿ ವಿಶೇಷ ತರಗತಿಗೆ ಹೋಗಲು ಪ್ರಾರಂಭಿಸಿದೆ. ಪರೀಕ್ಷೆಯ ದಿನ ಬಂದೇ ಬಿಟ್ಟಿತು. ಎಲ್ಲಾ ಪರೀಕ್ಷೆಗಳನ್ನು ಅದ್ಭುತವಾಗಿ ಬರೆದೆ.ನನ್ನ ಎಲ್ಲಾ ಗೆಳೆತಿಯರೂ ಚೆನ್ನಾಗಿ ಬರೆದರು. ರಜೆಯಲ್ಲಿ ನಾನು ಕುಟುಂಬದ ಸಮೇತ ತಿರುಪತಿ ದೇವಸ್ಥಾನ, ಕಾನಿಪಾಕಂ ದೇವಾಲಯಗಳಿಗೆ ಭೇಟಿ ಮಾಡಿದ್ದೆವು. ಪರೀಕ್ಷಾ ಫಲಿತಾಂಶಗಳು ಬಂದೆ ಬಿಟ್ಟವು. ಕಾತುರದಿಂದ ಫಲಿತಾಂಶ ನೋಡಿದೆ ನಾನು ೮೦% ಅಂಕಗಳನ್ನು ಗಳಿಸಿದ್ದೆ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತು. ಅಪ್ಪ ಅಮ್ಮ ನಿಗೆ ಎಲ್ಲಿಲ್ಲದ ಸಂತೋಷವಾಯಿತು.

ಕಾಲೇಜು

ಬದಲಾಯಿಸಿ

ಮುಂದೆ ಪಿಯುಸಿ ಗಾಗಿ ಕಾಲೇಜನ್ನು ಹುಡುಕಲು ಶುರು ಮಾಡಿದರು. ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಸೇರಲು ಎಲ್ಲರೂ ಹೇಳಿದರು. ಅದರಂತೆ ನಾನೂ ಅದೇ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ದಾಖಲಾತಿ ಮಾಡಿಸಿದೆ.ಅಲ್ಲಿ ಹೊಸ ಗೆಳತಿಯರನ್ನು ಪರಿಚಯ ಮಾಡಿಕೊಂಡೆ. ಅವರ ಜೊತೆಗೆ ಇಡೀ ಕಾಲೇಜನ್ನು ಸುತ್ತಿ ನೋಡಿದೆ, ದೊಡ್ಡ ಪ್ರಮಾಣ ಕಟ್ಟಡಗಳ ಕಾಲೇಜು ಇದು.ಕಾಲೇಜಿಗೆ ಬಂದಿದ್ದ ಉಪೇಂದ್ರ ಅವರನ್ನು ಭೇಟಿ ಮಾಡಿದ್ದೆ.ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಅಧ್ಯಾಪಕರ ನೆಚ್ಚಿನ ವಿಧ್ಯಾರ್ಥಿ ನಾನಾದೆ. ಕ್ಲಾಸ್ ರೆಪ್ ಕೂಡ ಆದೆ. ಅಂತೂ ಆಟ ಆಡುತ್ತಾ ಪ್ರಥಮ ಪಿಯುಸಿ ಮುಗಿಸಿದೆ. ದ್ವಿತೀಯ ಪಿಯುಸಿ ಚೆನ್ನಾಗಿ ಓದಬೇಕೆಂದು ಎಲ್ಲಾ ಕಡೆಯಿಂದ ಒತ್ತಡ ನನ್ನ ಮೇಲೆ ಬೀಳುತ್ತಾ ಹೋಯಿತು. ಅಲ್ಲಿ ಕೂಡ ಗೆಳತಿಯರ ಜೊತೆಗೆ ಆಟ ಆಡುತ್ತಾ ಕಾಲ ಕಳೆದೆ. ಸಮಯ ಹೋಗಿದ್ದು ತಿಳಿಯಲೇ ಇಲ್ಲ, ಪರೀಕ್ಷೆಗಳು ಬಂದೇ ಬಿಟ್ಟವು.ಅದಕ್ಕಾಗಿ ಚೆನ್ನಾಗಿ ಓದತೊಡಗಿದೆ.ಪರೀಕ್ಷೆಗಳನ್ನು ಚೆನ್ನಾಗಿ ಬರೆದೆ.ನಾನು ವಿಂಗ್ಸ್ ಆಫ್ ಫೈರ್, ಮಲೆಗಳಲ್ಲಿ ಮದುಮಗಳು ಎಂಬ ಪುಸ್ತಕಗಳನ್ನು ಓದಿದೆ. ರಜೆಗಳೂ ಬಂದೇ ಬಿಟ್ಟವು, ತುಂಬಾ ಆತುರದಿಂದ ಫಲಿತಾಂಶಗಳಿಗಾಗಿ ಕಾಯುತ್ತಿದ್ದೆ. ಫಲಿತಾಂಶ ಬಂದೆ ಬೊಟ್ಟವು, ನಾನು ೮೧% ಅಂಕಗಳನ್ನು ಗಳಿಸಿದ್ದೆ. ಅಪ್ಪ ತುಂಬಾ ಖುಷಿಯಾದರು.ನಂತರ ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಲು ಹೇಳಿದರು.

ಡಿಗ್ರಿ ಕಾಲೇಜು

ಬದಲಾಯಿಸಿ

ನಾನು ಡಿಗ್ರಿ ಗಾಗಿ ಅದೇ ಕಾಲೇಜನ್ನು ಸೇರಿಕೊಂಡೆ.ಅಲ್ಲಿ ಅನೇಕ ಹೊಸ ಗೆಳೆಯರ ಪರಿಚಯವಾಯಿತು.ಅಲ್ಲಿಗೆ ಮೈಸೂರು ಮಹಾರಾಜರಾದ ಯದುವೀರ್ ಅವರು ಬಂದಿದ್ದರು ಅವರನ್ನು ಭೇಟಿ ಮಾಡಿದೆ.ಇಲ್ಲಿ ದ್ವೈತ, ಅದಿತಿ,ಸೈದಾ, ಎಂಬ ಗೆಳತಿಯರು ತುಂಬಾ ಹತ್ತಿರವಾಗಿದ್ದಾರೆ. ಅಪ್ಪನಿಗಾಗಿ ಏನಾದರೂ ಮಾಡಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದೇನೆ.