ಕಂಪ್ಯೂಟರ್

ಆಧುನಿಕ ಯುಗವನ್ನು ಬಾಹ್ಯಾ ಕಾಶಯುಗ, ಕಂಪ್ಯೂಟರ್ ಯುಗವೆಂದು ಕರೆಯುತ್ತಾರೆ. ಕಂಪ್ಯೂಟರ್ ಆಧುನಿಕ ಯುಗದ ಅಪೂರ್ವ ಕೊಡುಗೆ. ಕಂಪ್ಯೂಟರ್ ಗಳು ಎಲೆಕ್ಟ್ರಾನಿಕ್ ಯಂತ್ರಗಳು. ಅತ್ಯಂತ ಜಟಿಲವಾದ ಸಮಸ್ಯೆಗಳನ್ನು ನಿಖರವಾಗಿ ಬಿಡಿಸಿ ಕೊಡುವ ಸಾಧನವಾಗಿದೆ. 'ಚಾರ್ಲ್ಸ್ ಬಾಬೇಜ್' ಎಂಬ ಆಂಗ್ಲ ಗಣಿತ ತಜ್ಞ, ವಿಜ್ಞಾನಿ ಕಂಪ್ಯೂಟರ್ ನಲ್ಲಿ ಹಾರ್ಡ್ ವೇರ್, ಸಾಫ್ಟ್ ವೇರ್ ಗಳೆಂದು ಎರಡು ವಿಧ. ಕಣ್ಣಿನಿಂದ ನೋಡಬಲ್ಲ, ಕೈಯಿಂದ ಮುಟ್ಟಬಲ್ಲ ಕಂಪ್ಯೂಟರಿನ ವಿವಿಧ ಭಾಗಗಳನ್ನು ಹಾರ್ಡ್ ವೇರ್ ಎನ್ನುತ್ತಾರೆ. ಕೀಬೋರ್ಡ್, ಸಿ.ಪಿ.ಯು, ಮಾನಿಟರ್, ಮೋಸ್, ಸ್ಂಡ್ ಸಿಸ್ಟಂಮ್ ಇವು ಮುಖ್ಯ ಭಾಗಗಳಾಗಿವೆ. ನಾವು ಒದಗಿಸುವ ಮಾಹಿತಿಗಳಿಂದ ಕಂಪ್ಯೂಟರಿನಿಂದ ಹೊರಬರುವ ಪರಿಹರಗಳೇ ಸಾಫ್ಟ್ ವೇರ್.

ವಿಜ್ಞಾನ, ವೈದ್ಯಕೀಯ, ವಾಣಿಜ್ಯ, ಇಂಜಿನಿಯರಿಂಗ್ ಕೈಗಾರಿಕೆ, ಆಡಳಿತ, ವಾರ್ತಾ, ಪ್ರಸಾರ, ಕೃಷಿ, ಶಿಕ್ಷಣ, ಸಾರಿಗೆ, ಬ್ಯಾಂಕುಗಳು, ಬಾಹ್ಯಾಕಾಶ ಸಂಶೋಧನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಕಂಪ್ಯೂಟರ್ ಕೆಲಸ ಮಾಡುವುದು ನಾವು ಒದಗಿಸುವ ಮಾಹಿತಿಯ ಆಧಾರದ ಮೇಲೆ ಈ ಮಾಹಿತಿಗೆ 'ಡಾಟ' ಎನ್ನುತ್ತಾರೆ. ಆಧುನಿಕ ಯುಗದಲ್ಲಿ ಹವಾಮಾನ ಮಾಹಿತಿಗಾಗಿ ಭೂ ಉಪಗ್ರಹಗಳನ್ನು ಬಳಸಲು ಕಂಪ್ಯೂಟರ್ ಬಳಸುವರು.