ಸದಸ್ಯ:UnitedUK/ನನ್ನ ಪ್ರಯೋಗಪುಟ
ಮಾರಿಕಾಂಬೆಯ ಇತಿಹಾಸ
ಬದಲಾಯಿಸಿಮಾರಿಕಾಂಬೆಯ ಇತಿಹಾಸ
ಬದಲಾಯಿಸಿ೧೬೮೮ ರ ಮೊದಲು
ಬದಲಾಯಿಸಿ೧೬೮೮ರ ಮೊದಲು ಸಿರ್ಸಿ ಮಾರಿಕಾಂಬೆಯನ್ನು ದುರ್ಗಾದೇವಿ ಎಂದು ಹಾನಗಲ್ ನಲ್ಲಿ ಪೂಜಿಸುತ್ತಿದ್ದರು. ಹಾನಗಲ್ ತಾಲೂಕಿನ ಆಡುರು ಗ್ರಾಮದಲ್ಲಿ ದೊರೆತ ೧೨ನೆ ಶತಮಾನದ ಚಾಲುಕ್ಯರಿಗೆ ಸೇರಿದ ಶಾಸನದಲ್ಲಿ ಪಾಂಡವರು ತಮ್ಮ ೧೩ನೆ ವರ್ಷದ ಅಜ್ಞಾತ ವಾಸವನ್ನು ಈ ಪ್ರದೇಶದಲ್ಲಿ ಕಳೆದಿದ್ದರೂ ,ಮತ್ತು ಹಾನಗಲ್ ಅನ್ನು ಮಹಾಭಾರತದ ಕಾಲದಲ್ಲಿ ವಿರಾಟಕೋಟ ಮತ್ತು ವಿರಾಟನಗರಿ ಎಂದು ಕರೆಯುತ್ತಿದ್ದರು ಹಾಗೂ ಅದನ್ನು ವಿರಾಟ ಎಂಬ ರಾಜ ಆಳುತ್ತಿದ್ದನು ಎಂಬ ಉಲ್ಲೇಖವಿದೆ. [೧]
[Hangal fifty miles south of Dharwad in inscription of the twelfth century called Viratkot and Viratanagari, the fort and city of Virata, and is believed to place where Pandavas lived during part of their exile, the name Viratkota and Viratanagari support the traditions according to Mahabharata, Virat was the name of the king at whose court Pandavas spent the thirteenth year of exile.
(ಆಡೂರು ಶಾಸನ
] Error: {{Transliteration}}: transliteration text not Latin script (pos 398) (help)
ಗೆಜೆಟಿಯರ್ ೧೮೮೪,
ಅಧ್ಯಾಯ ೭ ಇತಿಹಾಸ ಮತ್ತು ಅಧ್ಯಾಯ ೧೪ ಸ್ಥಳಗಳು,
ಧಾರವಾರ್ ಜಿಲ್ಲೆ, ಬಾಂಬೆ ಪ್ರೆಸಿಡೆನ್ಸಿ)[೨][೩]
ಹಿಂದೂ ಗ್ರಂಥ ಮಹಾಭಾರತದ ವಿರಾಟಪರ್ವದಲ್ಲೀ ಪಾಂಡವರ ಹಿರಿಯ ಸಹೋದರ ಯುಧಿಷ್ಠಿರನು ತನ್ನ ಸಾಮ್ರಾಜ್ಯವನ್ನು ಮರಳಿಪಡೆಯಲು ಶಕ್ತಿ ದೇವತೆಯಾದ ದುರ್ಗಾದೇವಿ (ಇಂದಿನ ಸಿರ್ಸಿ ಮಾರಿಕಾಂಬೆ)ಯನ್ನು ವಿರಾಟನಗರದಲ್ಲಿ ಸೋಸ್ತ್ರವನ್ನು ಹೇಳುವ ಮೂಲಕ ಆರಾಧಿಸುತ್ತಿದ್ದನು ಎಂಬ ಉಲ್ಲೇಖವಿದೆ.
.[೪]
೧೬೮೮ರ ನಂತ
ಬದಲಾಯಿಸಿಹಾನಗಲ್ ನಿಂದ ಸಿರ್ಸಿಗೆ
ಬದಲಾಯಿಸಿಬೇಡರಬೊಮ್ಮನು ಶ್ರೀಮಂತರಿಂದ ಕಳ್ಳತನ ಮಾಡಿ ಅದನ್ನು ಬಡವರಿಗೆ ಕೊಡವ ಹವ್ಯಾಸ ಹೊಂದಿದ್ದ , ಒಂದು ದಿನ ಅವನಿಗೆ ಹಾನಗಲ್ ಜಾತ್ರೆ ಮುಗಿದ ತಕ್ಷಣ ದೇವಿಯ ಮೂರ್ತಿಯ ಬಿಡಿಭಾಗಗಳನ್ನು ಬಿಡಿಸಿ ಒಂದು ಪೆಟ್ಟಿಗೆಯಲ್ಲಿ ಹಾಕಿ ಇಡುತ್ತಾರೆ ಮತ್ತು ಆಭರಣಗಳನ್ನೂ ಇನ್ನೊಂದು ಪೆಟ್ಟಿಗೆಯಲ್ಲಿ ಇಡುತ್ತಾರೆ ಎಂಬ ಮಾಹಿತಿ ದೊರೆಯಿತು, ಹೇಗಾದರೂ ಮಾಡಿ ಆಭರಣಗಳನ್ನೂ ಕದಿಯ ಬೇಕು ಎಂದು ಜಾತ್ರೆ ಮುಗಿಯವ ದಿನ ತೆರಳಿದ , ಆದರೆ ಅಂದು ಹಾನಗಲ್ ನಲ್ಲಿ ದೇವಿಯ ಆಭರಣಗಳನ್ನೂ ವಿಗ್ರಹದ ಪೆಟ್ಟಿಗೆಯಲ್ಲಿ, ವಿಗ್ರಹದ ಬಿಡಿಭಾಗಗಳನ್ನು ಆಭರಣ ಪೆಟ್ಟಿಗೆಯಲ್ಲಿ ಅದಲು ಬದಲು ಮಾಡಿ ಇಟ್ಟಿದ್ದರು , ಈ ವಿಷಯ ತಿಳಿಯದ ಬೇಡರಬೊಮ್ಮ ಕಗ್ಗತ್ತಲ ರಾತ್ರಿಯಲ್ಲಿ ದೇವಿಯ ಮೂರ್ತಿ ಇರುವ ಆಭರಣ ಪೆಟ್ಟಿಗೆಯನ್ನು ತೆಗೆದುಕೊಂಡು ತನ್ನ ಗ್ರಾಮ ಸಿರಸಿಯ ಕಡೆಗೆ ಹೊಡಿದ ಬೆಳಗಿನ ಜಾವ ತನ್ನ ಗ್ರಾಮ ಸಿರಸಿಯ ಗಡಿ ಭಾಗಕ್ಕೆ ಬಂದು ತಲುಪಿದ , ಅಲ್ಲಿ ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಆಭರಣಗಳ ಬದಲು ಮರದ ತುಂಡುಗಳನ್ನು ಕಂಡು ಬೇಸರವಾಗಿ, ಅದನ್ನು ಅಲ್ಲೇ ಪಕ್ಕದಲ್ಲಿ ಇದ್ದ ಕೊಟೇಕೆರೆ ಯಲ್ಲಿ ಎಸೆದನು.[೫]
ಸಿರ್ಸಿಯಲ್ಲಿ ವಿಗ್ರಹ ದೊರೆತಿದ್ದು
ಬದಲಾಯಿಸಿಇದೆ ಸಂದರ್ಭದಲ್ಲಿ ಚಂದ್ರಗುತ್ತಿಯ ಜಾತ್ರೆಯು ಕೂಡ ನಡೆಯತ್ತಿದ್ದು, ಬಸವ ಎಂಬ ಸಿರಸಿ ಗ್ರಾಮದ ಭಕ್ತನೊಬ್ಬ ಚಂದ್ರಗುತ್ತಿಗೆ ತೆರಳಿದ್ದನ್ನು, ಆದರೆ ಅಲ್ಲಿ ಜಾತ್ರೆಯ ಮುಖಂಡರು ಬಸವನಿಗೆ ಅವಮಾನ ಮಾಡಿ , ದೇವಿಯ ದರ್ಶನಕ್ಕೆ ಅವಕಾಶ ಕೊಡದೆ ಗಲಾಟೆ ಮಾಡಿದ್ದರು, ನಂತರ ಬೇಸರಗೊಂಡ ಬಸವನು ದೇವಿಯನ್ನು ಸ್ತುತಿಸುತ್ತಾ ತನ್ನ ಗ್ರಾಮ ಸಿರಸಿಯ ಕಡೆಗೆ ಹೆಜ್ಜೆ ಆಕಿದ, ಅಂದು ರಾತ್ರಿ ಅವನ ಕನಸಿನಲ್ಲಿ ದೇವಿ ಬಂದು
"ಬಸವಾ ನಾನು ದೇವಿ, ನಾನು ನಿಮ್ಮೂರಿನ ಕೆರೆಯಲ್ಲಿದ್ದೆನೆ"
ಎಂದು ಹೇಳಿದಾಗೆ ಆಯ್ತು, ತಕ್ಷಣ ಹೆಚ್ಚರಗೊಂಡ ಬಸವ ಊರಿನ ಗ್ರಾಮಸ್ಥರೆಲ್ಲರಿಗೂ ನಡೆದ ವಿಷಯ ತಿಳಿಸಿದ , ಮುಂಜಾನೆ ಗ್ರಾಮಸ್ಥರೆಲ್ಲರು ಸೇರಿ ಕೋಟೆಕೆರೆಗೆ ಹೋಗಿ ಅಲ್ಲಿ ಬಸವನು ದೇವಿಯನ್ನು ಸ್ತುತಿಸುತ್ತಾ ಕೆರೆಯನ್ನು ಪ್ರದಕ್ಷಿಣೆ ಆಕ ತೊಡಗಿದ ಕೆರೆಯ ನೀರಿನ ಮೇಲೆ ಪೆಟ್ಟಿಗೆಯು ತೇಲುತ್ತಾ ಬಂತು, ಅದನ್ನು ಗ್ರಾಮಸ್ಥರು ತೆಗೆದು ನೋಡಿದಾಗ ಮರದ ತುಂಡುಗಳು ಇದ್ದವು, ಗ್ರಾಮಸ್ಥರ ಗುಂಪಿನಲ್ಲಿ ಇದ್ದ ಬಡಗಿ (ವಿಶ್ವಕರ್ಮ)ನು ಮುಂದೆ ಬಂದು ಮರದ ತುಂಡುಗಳನ್ನು ಜೋಡಿಸ ತೊಡಗಿದೆ ಅವನ ಕಾರ್ಯ ಪೂರ್ತಿ ಆದಮೇಲೆ , ಹುಲಿ ಮೇಲೆ ಸವಾರಿ ಮಾಡುತ್ತಿರುವ ಎಂಟು ಕೈಗಳಲ್ಲಿ ಶಸ್ತ್ರಗಳನ್ನೂ ಇಡಿದುಕೊಂಡ ರಕ್ತಗೆಂಪಿನ ಬಣ್ಣವನ್ನು ಹೊಂದಿದ ಕಾಲಿನಲ್ಲಿ ಕೊಣವು ಮತ್ತು ತಲೆಯಲ್ಲಿ ಹಾವುಗಳು ಇರುವ ಆಕಾರ ಮೂಡಿ ಬಂತು, ಗ್ರಾಮಸ್ಥರು ದೇವಿಯ ಮೂರ್ತಿಯನ್ನು ನೋಡಿ ಸೌಮ್ಯ ಮುಖದ ಪಾರ್ವತಿ, ಅಷ್ಟಾಯುದ ದುರ್ಗೆ, ರಕ್ತಗೆಂಪಿನ ಕಾಳಿಯ ಸಮ್ಮಿಲನದ ಅವತಾರವಾಗಿ ಆದಿಶಕ್ತಿಯೆ ತಮ್ಮ ಊರಿಗೆ ಬಂದಿರುವುದನ್ನು ಕಂಡು ಒಬ್ಬಬ್ಬರು ಒಂದೊಂದು ಹೆಸರಿನಲ್ಲಿ ಮರಮ್ಮ,ಯಲ್ಲಮ್ಮ, ದೊಡ್ಡಮ್ಮ, ಇತ್ಯಾದಿ ಹೆಸರು ಗಳಿಂದ ಕರೆಯುತ್ತಾ ಜೈಕಾರ ಹಾಕಿದರು.[೬][೭]
ಸಿರ್ಸಿ ಯಲ್ಲಿ ಸ್ಥಾಪನೆ
ಬದಲಾಯಿಸಿಗ್ರಾಮಸ್ಥರು ನಡೆದ ಘಟನೆಯನ್ನು ಸವಿಸ್ತಾರವಾಗಿ ಗ್ರಾಮದ ಆಡಳಿತ ನಡೆಸುತ್ತಿದ್ದ ಸೋಂದಾ ತಹಶೀಲ್ದಾರ್ ರವರಿಗೆ ತಿಳಿಸಿ, ದೇವಿಯ ಮೂರ್ತಿಯನ್ನು ಗ್ರಾಮದಲ್ಲಿ ಸ್ಥಾಪಿಸಲು ಅನುಮತಿ ಪಡೆದು ಇಂದಿನ ಮಾರಿಕಾಂಬಾ ದೇವಾಲಯದಲ್ಲಿ ಶ್ರೀ ಶಾಲಿವಾಹನ ಶಕೆ ೧೬೧೧ ನೇ ಶುಕ್ಲ ಸಂವತ್ಸರದ ವೈಶಾಖ ಶುದ್ಧ ೮ ಮಂಗಳವಾರದಂದು ಸ್ಥಾಪಿಸಿದರು.
ಶ್ರೀ ಸಿರಸಿ ಮಾರಿದೇವಿಯ ಸ್ಥಳದ ಕೈಫಿಯತ್ತು:
ಸನ್ ೧೮೬೮ನೇ ಇಸವಿಯ ಜೂನ್ ತಿಂಗಳ ತಾರೀಕ ೫ರಲ್ಲು ಶ್ರೀ ಮಾರಿದೇವರ ಕಾಗದ ಪತ್ರಗಳ ಜೀರ್ಣಾವಶೇಷಗಳನ್ನು ಒಂದುಗೂಡಿಸಿ ಭೂತಗನ್ನಡಿಯ ಸಹಾಯದಿಂದ ಓದಿಕೊಂಡು ಕೇಳಿ ಬರೆಸಿದ ಪ್ರತಿಯು:
ಶ್ರೀ ಶಾಲಿವಾಹನ ಶಕೆ ೧೬೧೧ ನೇ ಶುಕ್ಲ ಸಂವತ್ಸರದ ವೈಶಾಖ ಶುದ್ಧ ೮ ಮಂಗಳವಾರ
ಶ್ರೀ ದೇವಿಯ ಪ್ರತಿಷ್ಠೆ ವಗೈರೆ ಕಾರ್ಯ ಪರತರಣೆಯಲ್ಲು. ಚನ್ನಾಪುರದ ಸೀಮೆಯಲ್ಲಿ ಪರಶುರಾಮನ ಹೆಸರು ಹೇಳಿ ಬಸವಾ ಪಡಲಗಿ ಹೊತ್ತು ತಿರುಗುವರೆ ಗುತ್ತಿ ಸೀಮೆಯವರು ಹರಕತ್ತು ಮಾಡಿದ್ದಕ್ಕೆ ಮಚಗಾರು, ಚಲುವಾದಿರುಗಳ, ಗುರುಮಠದವರ ಅಪ್ಪಣೆ ಪಡೆದು ಮೂರ್ಧಾಪುರ ಎಂಬ ಹೆಸರಿನ ಸಿರಸಿಯಲ್ಲಿ ದುರಗಿ ಸ್ಮಶಾನದಲ್ಲಿ ಎದುರಿನ ನಾಗರಗುತ್ತಿ ಪಾರ್ಶ್ವದಲ್ಲಿ ಶ್ರೀ ದೇವಿಯನ್ನು ಕುಂದರಿಸಿ , ದೈವದವರು ನಂದಿಕೇಶ್ವರ ಮಠದ ಸ್ವಾಮಿಗಳ ನಿರೂಪಣೆ ಕೆಳಗಿನ ಮನೆಗೌಡರು, ಮೇಲಿನ ಮನೆಗೌಡರು, ಕಟ್ಟೆಮನೆ ಗೌಡರು, ಗೋಲಗೇರಿ ಮಂಜಗೌಡರು, ಹೇಮಶೆಟ್ಟಿ,ಮಡಿವಾಳಪ್ಪಸೆಟ್ಟರು, ಕುಂಬಾರಗುಂಡಪ್ಪನವರು, ಎಸಳೇ ಮೇದಾರ ಭಿರಮಪ್ಪನವರು, ನಗರದ ಮಾದೇವ ಸೆಟ್ಟರು, ಬಿಡಕಿಬೈಲ ಮೈದುರಗಿ ಮಠದ ದುರದುಂಡಿ ಸ್ವಾಮಿಗಳು ಇವರುಗಳೆಲ್ಲ ಸ್ವಾದಿ ಮಹಾಸಂಸ್ಥಾನಕ್ಕೆ ನಿರೂಪಕಳ್ಸಿ ಅಪ್ಪಣೆಗೊಂಡು ಶ್ರೀದೇವಿಯ ನಿರುಮಾತ್ರಣಕ್ಕೆ ಮುಂದಾದವರ ವಂತಿಗೆಯ ತಪಶೀಲು:- ಮೇಲಿನ ಮನೆ ಗೌಡರು ವರಾಹಾ ೨, ಕೆಳಗಿನ ಮನೆಗೌಡರು ವರಾಹಾ ೨, ಸಿದ್ದೆಗೌಡರು ವರಾಹಾ ೧, ಹೇಮಶೆಟ್ಟರು ವರಾಹಾ ೧, ಕಟ್ಟೆ ಮಂಜಗೌಡರು ವರಾಹಾ ೧, ಕುಂಬಾರಗುಂಡಪ್ಪನವರು ವರಾಹಾ ೧, ಕುಮಟಾ ಅರಳೇ ಸಾವಕಾರರು ವರಾಹಾ ೧ , ಮೇದಾರ ಭರಮಪ್ಪನವರು ಎಸಳೆ ವರಾಹಾ ೧, ಶಾರೋಬಿ ನಾಗಣ್ಣಾ ವರಾಹಾ ೧, ಹುಸರಿ ಬಸವಣ್ಣ ವರಾಹಾ ೧, ನಗರದ ಮಹದೇವ ಶೆಟ್ಟರು ವರಾಹಾ೧, ಬ್ಯಾಡರ ಜೋಗತೇರು ವರಾಹಾ ೧, ಚಲವಾದಿ ಜೋಗತೇರು ವರಾಹಾ ೧, ಮೇತ್ರಿ ಜೋಗತೇರು ವರಾಹಾ ೧, ಚನ್ನಯ್ಯ ಜಾತೇರ ಜೋಗತೇರು ವರಾಹಾ ೧, ಗವಳಿ ಭರಮಪ್ಪ ವರಾಹಾ ೧, ಬಡಿಗೇರ ಮಂಜ ವರಾಹಾ ೧, ಚಮಗಾರ ಗೌಡರ ಬುದವಂತರು ವರ್ಗಣಿ ಮಾಡಿ ತಂದ ವರಾಹಾ ೧, ಅಗ್ಸಾಲ ಮಾರೆಪ್ಪ ವರಾಹಾ ೧, ಮತ್ತು ಸಿರಸಿ, ಬಚಗಾಂವಿ, ಬಸಳೆ ಕೊಪ್ಪ, ಬದ್ರಾಪುರ, ಗೋಣೂರು, ಗೋಕಣಾಪುರ ಬೆಳಗಾಲಪುರ, ಬಾಳೆಗದ್ದೆ, ವಗೈರೆ ಹಳ್ಳಿಗಳಿಂದ ಬಂದ ವರ್ಗಣಿ ವರಾಹಾ ೧೦ , ಕೊರಗರ ಸಿದ್ದಾ ಪೀರಾ ದುಡ್ಡ ೨, ಉಪ್ಪಾರ ದೇವಪ್ಪ ದುಡ್ಡು ೨ ಆಚಾರಿ ಲಿಂಗಪ್ಪ ದುಡ್ಡು ೨ಇ ಶಿವ್ವಾ ಎಲ್ಲಾ ಗ್ರಾಮದವರಿಂದ ವಸೂಲಿ ಬಂದ ವಟ್ಟು ಅಕ್ಕಿ ಖಂಡುಗ ೧೦, ಇವಿಷ್ಟು ಜಮೆ ಬಂದಿದ್ದು ಮೇಲಿನ ಮನೆ ಪಟೇಲ ಪೇಟೆಗೌಡರು, ಅಗ್ಸಾಲ ಮಾರೆಪ್ಪ, ಬಡಿಗೇರ, ಕಸಬೆಗೌಡರು ಬಸಪ್ಪಗೌಡರು ಬಳಿಗೆ ಶ್ರೀದೇವಿಯ ವಿನಿಯೋಗದ ಬಗ್ಗೆ ಕೊಟ್ಟಿತು.
ಇಲ್ಲಿ ಶ್ರೀದೇವಿಯ ಪ್ರತಿಷ್ಠಾಪನೆಗೆ ಜಾತಿಮತ ಭೇದವಿಲ್ಲದೆ ಎರಡು ವರಹ ಕೊಟ್ಟವರಿಂದ ಹಿಡಿದು ಎರಡು ದುಡ್ಡು ಕೊಟ್ಟವರ ಹೆಸರಿನ ಉಲ್ಲೇಖವಾಗಿರುವುದು ಗಮನಾರ್ಹ.
ಮಹಾಭಾರತದ ಉಲ್ಲೇಖ
ಬದಲಾಯಿಸಿವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ । ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಂ ।।೧।।
ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಮ್ । ನಂದಗೋಪಕುಲೇ ಜಾತಾಂ ಮಾಂಗಲ್ಯಾಂ ಕುಲವರ್ಧನೀಮ್ ।।೨।।
ಕಂಸವಿದ್ರಾವಣಕರೀಮಸುರಾಣಾಂ ಕ್ಷಯಂಕರೀಮ್ । ಶಿಲಾತಲೇ ವಿನಿಕ್ಷಿಪ್ತಾಮಾಕಾಶಂ ಪ್ರತಿಗಾಮಿನೀಮ್ ।। ೩ ।।
ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯವಿಭೂಷಿತಾಮ್ । ದಿವ್ಯಾಂಬರಧರಾಂ ದೇವೀಂ ಖಡ್ಗಖೇಟಕಧಾರಿಣೀಮ್ ।। ೪ ।।
ಭಾರಾವತರಣೇ ಪುಣ್ಯೇ ಯೇ ಸ್ಮರಂತಿ ಸದಾಶಿವಂ । ತಾನ್ ವೈ ತಾರಯತೇ ಪಾಪಾತ್ ಪಂಕೇ ಗಾಮಿವ ದುರ್ಬಲಾಮ್ ।। ೫ ।।
ಸ್ತೋತುಂ ಪ್ರಚಕ್ರಮೇ ಭೂಯೋ ವಿವಿಧೈಃ ಸ್ತೋತ್ರಸಂಭವೈಃ । ಆಮಂತ್ರ್ಯ ದರ್ಶನಾಕಾಂಕ್ಷೀ ರಾಜಾ ದೇವೀಂ ಸಹಾನುಜಃ ।। ೬ ।।
ನಮೋಽಸ್ತು ವರದೇ ಕೃಷ್ಣೇ ಕುಮಾರೀ ಬ್ರಹ್ಮಚಾರಿಣೀ । ಬಾಲಾರ್ಕಸದೃಶಾಕಾರೇ ಪೂರ್ಣಚಂದ್ರನಿಭಾನನೇ ।। ೭ ।।
ಚತುರ್ಭುಜೇ ಸೂಕ್ಷ್ಮಮಧ್ಯೇ ಪೀನಶ್ರೋಣಿಪಯೋಧರೇ । ಮಯೂರಪಿಚ್ಛವಲಯೇ ಕೇಯೂರಾಂಗದಭೂಷಣೇ ।। ೮ ।।
ಭಾಸಿ ದೇವಿ ಯಥಾ ಪದ್ಮಾ ನಾರಾಯಣಪರಿಗ್ರಹಾ । ಸ್ವರೂಪೇ ಬ್ರಹ್ಮಚರ್ಯಂ ಚ ವಿಶದಂ ತವ ಖೇಚರಿ ।। ೯ ।।
ಕೃಷ್ಣಚ್ಛವಿಸಮಾ ಕೃಷ್ಣಾ ಸಂಕರ್ಷಣನಿಭಾನನಾ । ಬಿಭ್ರತೀ ವಿಪುಲೌ ಬಾಹೂ ಶಕ್ರಧ್ವಜಸಮುಚ್ಛ್ರಯೌ ।। ೧೦ ।।
ಪಾತ್ರೀ ಚ ಪಂಕಜೀ ಘಂಟೀ ಸ್ತ್ರೀ ವಿಶುದ್ಧಾ ಚ ಯಾ ಭುವಿ । ಪಾಶಂ ಧನುರ್ಮಹಾಚಕ್ರಂ ವಿವಿಧಾನ್ಯಾಯುಧಾನಿ ಚ ।। ೧೧ ।।
ಕುಂಡಲಾಭ್ಯಾಂ ಸುಪೂರ್ಣಾಭ್ಯಾಂ ಕರ್ಣಾಭ್ಯಾಂ ಚ ವಿಭೂಷಿತಾ । ಚಂದ್ರಮಸ್ಪರ್ಧಿನೀ ದೇವಿ ಮುಖೇನ ತ್ವಂ ವಿರಾಜಸೇ ।। ೧೨ ।।
ಮುಕುಟೇನ ವಿಚಿತ್ರೇಣ ಕೇಶಬಂಧೇನ ಶೋಭಿನಾ । ಭುಜಂಗಭೋಗವಾಸೇನ ಶ್ರೋಣಿಸೂತ್ರೇಣ ರಾಜಿತಾ ।। ೧೩ ।।
ವಿಭ್ರಾಜಸೇ ಚ ಬದ್ಧೇನ ಭೋಗೇನೇವೇಹ ಮಂದರಃ । ಧ್ವಜೇನ ಶಿಖಿಪಿಚ್ಛೇನ ಉಚ್ಛ್ರಿತೇನ ವಿರಾಜಸೇ ।। ೧೪ ।।
ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ । ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈಃ ಪೂಜ್ಯಸೇಽಪಿ ಚ ।। ೧೫ ।।
ತ್ರೈಲೋಕ್ಯರಕ್ಷಣಾರ್ಥಾಯ ಮಹಿಷಾಸುರನಾಶಿನಿ । ಪ್ರಸನ್ನಾ ಮೇ ಸುರಶ್ರೇಷ್ಠೇ ದಯಾಂ ಕುರು ಶಿವಾ ಭವ ।। ೧೬ ।।
ಜಯಾ ತ್ವಂ ವಿಜಯಾ ಚೈವ ಸಂಗ್ರಾಮೇ ಚ ಜಯಪ್ರದಾ । ಮಮಾಪಿ ವಿಜಯಂ ದೇಹಿ ವರದಾ ತ್ವಂ ಚ ಸಾಂಪ್ರತಮ್ ।। ೧೭ ।।
ವಿಂಧ್ಯೇ ಚೈವ ನಗಶ್ರೇಷ್ಠೇ ತವ ಸ್ಥಾನಂ ಚ ಶಾಶ್ವತಮ್ । ಕಾಳಿ ಕಾಳಿ ಮಹಾಕಾಳಿ ಖಡ್ಗಖಟ್ವಾಂಗಧಾರಿಣಿ ।। ೧೮ ।।
ಕೃತಾನುಯಾತ್ರಾ ಭೂತೈಸ್ತ್ವಂ ವರದಾ ಕಾಮರೂಪಿಣೀ । ಭಾರಾವತಾರೇ ಯೇ ಚ ತ್ವಾಂ ಸಂಸ್ಮರಿಷ್ಯಂತಿ ಮಾನವಾಃ ।। ೧೯ ।।
ಪ್ರಣಮಂತಿ ಚ ಯೇ ತ್ವಾಂ ಹಿ ಪ್ರಭಾತೇ ತು ನರಾ ಭುವಿ । ನ ತೇಷಾಂ ದುರ್ಲಭಂ ಕಿಂಚಿತ್ ಪುತ್ರತೋ ಧನತೋಽಪಿ ವಾ ।। ೨೦ ।।
ದುರ್ಗಾತ್ ತಾರಯಸೇ ದುರ್ಗೇ ತತ್ ತ್ವಂ ದುರ್ಗಾ ಸ್ಮೃತಾ ಬುಧೈಃ । ಕಾಂತಾರೇಷ್ವವಸನ್ನಾನಾಂ ಮಗ್ನಾನಾಂ ಚ ಮಹಾರ್ಣವೇ ।ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಮ್ ।। ೨೧ ।।
ಜಲಪ್ರತರಣೇ ಚೈವ ಕಾಂತಾರೇಷ್ವಟವೀಷು ಚ ।ಯೇ ಸ್ಮರಿಷ್ಯನ್ ಮಹಾದೇವೀಂ ನ ಚ ಸೀದಂತಿ ತೇ ನರಾಃ ।। ೨೨ ।।
ತ್ವಂ ಕೀರ್ತಿಃ ಶ್ರೀರ್ಧೃತಿಃ ಸಿದ್ಧಿಹ್ರೀ೯ ವಿದ್ಯಾ ಸಂತತಿರ್ಮತಿಃ । ಸಂಧ್ಯಾ ರಾತ್ರಿಃ ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿಃ ಕ್ಷಮಾ ದಯಾ ।। ೨೩ ।।
ನೃಣಾಂ ಚ ಬಂಧನಂ ಮೋಹಂ ಪುತ್ರನಾಶಂ ಧನಕ್ಷಯಮ್ । ವ್ಯಾಧಿಂ ಮೃತ್ಯುಭಯಂ ಚೈವ ಪೂಜಿತಾ ನಾಶಯಿಷ್ಯಸಿ ।। ೨೪ ।।
ಸೋಽಹಂ ರಾಜ್ಯಾತ್ ಪರಿಭ್ರಷ್ಟಃ ಶರಣಂ ತ್ವಾಂ ಪ್ರಪನ್ನವಾನ್ । ಪ್ರಣತಶ್ಚ ಯಥಾ ಮೂರ್ಧ್ನಾ ತವ ದೇವಿ ಸುರೇಶ್ವರಿ ।। ೨೫ ।।
ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯೇ ಸತ್ಯಾ ಭವಸ್ವನಃ । ಶರಣಂ ಭವ ಮೇ ದುರ್ಗೇ ಶರಣ್ಯೇ ಭಕ್ತವತ್ಸಲೇ ।। ೨೬ ।।
ಏವಂ ಸ್ತುತಾ ಹಿ ಸಾ ದೇವೀ ದರ್ಶಯಾಮಾಸ ಪಾಂಡವಮ್ । ಉಪಗಮ್ಯ ತು ರಾಜಾನಮಿದಂ ವಚನಮಬ್ರವೀತ್ ।। ೨೭ ।।
"ಶೃಣು ರಾಜನ್ ಮಹಾಬಾಹೋ ಮದೀಯಂ ವಚನಂ ಪ್ರಭೋ । ಭವಿಷ್ಯತ್ಯಚಿರಾದೇವ ಸಂಗ್ರಾಮೇ ವಿಜಯಸ್ತವ ।। ೨೮ ।।"
ಮಮ ಪ್ರಸಾದಾನ್ನಿರ್ಜಿತ್ಯ ಹತ್ವಾ ಕೌರವವಾಹಿನೀಮ್ । ರಾಜ್ಯಂ ನಿಷ್ಕಂಕಟಂ ಕೃತ್ವಾ ಭೋಕ್ಷ್ಯಸೇ ಮೇದಿನೀಂ ಪುನಃ ।। ೨೯ ।।"
ಭ್ರಾತೃಭಿಃ ಸಹಿತೋ ರಾಜನ್ ಪ್ರೀತಿಂ ಪ್ರಾಪ್ಸ್ಯಸಿ ಪುಷ್ಕಲಾಮ್ । ಮತ್ಪ್ರಸಾದಾಚ್ಚತೇ ಸೌಖ್ಯಮಾರೋಗ್ಯಂ ಚ ಭವಿಷ್ಯತಿ ।। ೩೦ ।।
ಯೇ ಚ ಸಂಕೀರ್ತಯಿಷ್ಯಂತಿ ಲೋಕೇ ವಿಗತಕಲ್ಮಷಾಃ । ತೇಷಾಂ ತುಷ್ಟಾ ಪ್ರದಾಸ್ಯಾಮಿ ರಾಜ್ಯಮಾಯುರ್ವಪುಃ ಸುತಮ್ ।। ೩೧ ।।
ಪ್ರವಾಸೇ ನಗರೇ ವಾಽಪಿ ಸಂಗ್ರಾಮೇ ಶತ್ರುಸಂಕಟೇ । ಅಟವ್ಯಾಂ ದುರ್ಗಕಾಂತಾರೇ ಸಾಗರೇ ಗಹನೇ ಗಿರೌ ।। ೩೨ ।।
ಯೇ ಸ್ಮರಿಷ್ಯಂತಿ ಮಾಂ ರಾಜನ್ ಯಥಾಽಹಂ ಭವತಾ ಸ್ಮೃತಾ । ನ ತೇಷಾಂ ದುರ್ಲಭಂ ಕಿಂಚಿದಸ್ಮಿನ್ ಲೋಕೇ ಭವಿಷ್ಯತಿ ।। ೩೩ ।।
ಇದಂ ಸ್ತೋತ್ರವರಂ ಭಕ್ತ್ಯಾ ಶ್ರುಣುಯಾದ್ವಾ ಪಠೇತ ವಾ । ತಸ್ಯ ಸರ್ವಾಣಿ ಕಾರ್ಯಾಣಿ ಸಿದ್ಧಿಂ ಯಾಸ್ಯಂತಿ ಪಾಂಡವಾಃ ।। ೩೪ ।।
ಮತ್ಪ್ರಸಾದಾಚ್ಚ ವಃ ಸರ್ವಾನ್ ವಿರಾಟನಗರೇ ಸ್ಥಿತಾನ್ । ನ ಪ್ರಜ್ಞಾಸ್ಯಂತಿ ಕುರವೋ ನರಾ ವಾ ತನ್ನಿವಾಸಿನಃ ।। ೩೫ ।।
ಇತ್ಯುಕ್ತ್ವಾ ವರದಾ ದೇವೀ ಯುಧಿಷ್ಠಿರಮರಿಂದಮಮ್ । ರಕ್ಷಾಂ ಕೃತ್ವಾ ಚ ಪಾಂಡೂನಾಂ ತತ್ರೈವಾಂತರಧೀಯತ ।। ೩೬ ।।
।। ಇತಿ ಶ್ರೀಮನ್ಮಹಾಭಾರತೇ ವಿರಾಟಪರ್ವಣಿ ಅಷ್ಟಮೋऽಧ್ಯಾಯಃ ಯುಧಿಷ್ಠಿರಕೃತಂ ಶ್ರೀದುರ್ಗಾಸ್ತೋತ್ರಮ್ ।।[೮][೯]
- ↑ Moraes, George M. (1931). Kadamba Kula: a history of ancient and Mediaeval Karnatka.
- ↑ Gazette (PDF) (in ಇಂಗ್ಲಿಷ್) (Chapter 7 History ed.). Dharwar District: Bombay Presidency. 1884. p. 1.
- ↑ Gazette (PDF) (Chapter 14 Places ed.). Bombay Presidency. 1884.
{{cite book}}
: Text "l" ignored (help) - ↑ "Marikamba Temple – Hindu Temple Timings, History, Location, Deity, shlokas" (in ಅಮೆರಿಕನ್ ಇಂಗ್ಲಿಷ್). Retrieved 2023-07-26.
- ↑ https://tv9kannada.com/karnataka/bedara-vesha-2021-history-and-interesting-facts-of-300-year-old-bedara-vesha-which-held-in-sirsi-ayb-206614.html
- ↑ https://aksharamaya.wixsite.com/home/post/sirsi-jatre2
- ↑ https://sanchara.in/shri-marikamba-temple-information-in-karnataka/
- ↑ "Sirsi Marikamba Devi". web.archive.org. 2016-03-09. Retrieved 2023-07-25.
- ↑ "Yudhishthira Krta Durga Stotram - StotraSamhita". stotrasamhita.net (in ಸಂಸ್ಕೃತ). Retrieved 2023-07-25.