ಸದಸ್ಯ:Uma rajappa dasar/ನನ್ನ ಪ್ರಯೋಗಪುಟ

ಲಾಮಿಯೇಸಿ(lamiaceae)

ಬದಲಾಯಿಸಿ

ಸಸ್ಯ-ಪರಿಚಯ

ಬದಲಾಯಿಸಿ

ಇದು ಸಣ್ಣ ಮೃದುವಾದ ಪರ್ಣ ಸಸಿಯಾಗಿದ್ದು, ಸಣ್ಣ ಮತ್ತು ಸುವಾಸನೀಯ ಎಲೆಗಳನ್ನು ಹೊಂದಿರುತ್ತದೆ. ಇದರ ಜನ್ಮ ಸ್ಥಳ ಭಾರತ[]. ಹೂಗಳು ಊದಾ ಬಣ್ಣವಿದ್ದು, ಸಿಹಿಯಾದ ಪರಿಮಳ ಮತ್ತು ಖಾರವಾಗಿರುಹುದರಿಂದ ಸಾಲಡ್ ಮತ್ತು ಮಾಂಸ ಭಕ್ಷ್ಯಗಳ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ. ಇದ್ದನ್ನು ಮದ್ಯ ಮತ್ತು ಬೀಯರ್ ಪೇಯಗಳನ್ನು ಸುವಾಸನೆಗೊಳಿಸಲೂ ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು

ಬದಲಾಯಿಸಿ

ಮನೆಯ ಅಂಗಳದಲ್ಲಿ ಸುಲಭವಾಗಿ ಬೆಳೆಯಬಹುದಾದ ದಪ್ಪ ಎಲೆಯ ಈ ಎಳೆ ಸಸಿ ಸದಾ ಹಸಿರಾಗಿರುತ್ತದೆ. ಅಡಿಗೆಯಲ್ಲಿ ರುಚಿಯಾಗಿರುತ್ತದೆ. ಮೂತ್ರದಲ್ಲಿ ಕಲ್ಲಿನ ದೊಷವಿರುವವರಿಗೆ ಇದೊಂದು ವರದಾನ. ಮಕ್ಕಳಿಗೆ ಬರುವ ಸಾಮಾನ್ಯ ಕೆಮ್ಮನ್ನು ಪರಿಹರಿಸಲು ಎಲೆಯ ರಸಕ್ಕೆ ಜೇನು ಸೇರಿಸಿ ೧ ಚಮಚದಂತೆ ೨-೩ ಬಾರಿ ತೆಗೆದುಕೊಳ್ಳಬೇಕು. ಮಕ್ಕಳಿಗೆ ಅಜೀರ್ಣದಿಂದ ಉಂಟಾಗುವ ಹೊಟ್ಟೆ ಉಬ್ಬರ ಮತ್ತು ನೋವಿಗೆ ಎಲೆರಸ ಮತ್ತು ಜೇನು ಸೇರಿಸಿ ಕೊಡಬೇಕು. ಪಿತ್ತದ ಗಂಧೆ ಬಂದಾಗ೩-೪ ಎಲೆಗಳನ್ನು ಉಪ್ಪಿನೊಂದಿಗೆ ತಿಂದು, ಎಲೆಗಳ ರಸವನ್ನು ಮೈಗೆ ಹಚ್ಚಿಕೊಂಡರೆ ಗಂಧೆ ನಿವಾರಣೆಯಾಗುತ್ತದೆ.

ತಿಂಡಿ ತಿನಿಸುಗಳು

ಬದಲಾಯಿಸಿ
  • ದೊಡ್ಡ ಪತ್ರೆ ತಂಬುಳಿ: ಸ್ವಲ್ಪ ಎಣ್ಣೆಯಲ್ಲಿ ಸೊಪ್ಪು ಮತ್ತು ಸ್ವಲ್ಪ ಜೀರಿಗೆಯನ್ನು ಹುರಿದು ಸ್ವಲ್ಪ ತೆಂಗಿನ ತುರಿಯೊಂದಿಗೆ ಅರೆದು ಉಪ್ಪುಹಾಕಿ ಗಟ್ಟಿಮಜ್ಜಿಗೆ ಅಥವಾ ಮೊಸರಿನಲ್ಲಿ ಬೆರೆಸಿ ಉಪಯೋಗ ಮಾಡಬಹುದು. ಬೇಕಿದಾರೆ ಒಗ್ಗರಣೆ ಹಾಕಿಕೊಳ್ಳಬಹುದು.
  • ದೊಡ್ದ ಪತ್ರೆ ಚಟ್ನಿ:ಎಲೆಗಳನ್ನು ತೊಳೆದು ತುಪ್ಪದಲ್ಲಿ ಚೆನ್ನಾಗಿ ಬಾಡಿಸಬೇಕು ನಂತರ ಒನಮೆಣಸಿನಖಾಯಿ, ಒಣಕೊಬ್ಬರಿ, ಕಾಳುಮೆಣಸು , ರುಚಿಗೆ ತಕ್ಕಷ್ಟು ಉಪ್ಪು, ಹುಣಿಸೆ ಹಣ್ಣುಸೇರಿಸಿ ಗಟ್ಟಿಯಾಗಿ ಅರೆದು ಇಟ್ಟುಕೊಳ್ಳಬೇಕು. ಈ ಚಟ್ನಿಯ ಉಪಯೋಗದಿಂದ ಕೆಮ್ಮು ಮತ್ತು ಜ್ವರದಿಂದ ಉಂಟಾದ ಅರುಚಿ ನಿವಾರಣೆಯಾಗುತ್ತದೆ.
  • ದೊಡ್ದ ಪತ್ರೆ ಬಜ್ಜಿ:ಇದರ ತಯಾರಿಕೆಗೆ ದೊಡ್ಡ ಪತ್ರೆ ಎಲೆ, ಕಡ್ಲೆಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಖಾರದಪುಡಿ, ಉಪ್ಪು ಮತ್ತು ಕರಿಯಲು ಎಣ್ಣೆ ಬೇಕು. ಎಲೆಗಳನ್ನು ತೊಳೆದು ತೇವ ಒರೆಸಬೇಕು.ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರದಪುಡಿ, ಸ್ವಲ್ಪ ಕಾದ ಎಣ್ಣೆ ಸೆರಿಸಿ ನೀರಿನ್ಲ್ಲಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಖಾದ ಎಣ್ಣೆಯಾಲ್ಲಿ ಕೆಂಪಗೆ ಕರಿಯಬೇಕು.

ಇವುಗಳಲ್ಲ್ದದೆ ಎಲೆಗಳ ರಸವನ್ನು ಸಕ್ಕರೆಯೊಂದಿಗೆ ಬೆರೆಸಿ ತೆಗೆದುಕೊಂಡರೆ ವಾತಹರವೆನ್ನಿಸುತ್ತದೆ. ಇದಕ್ಕೆ ಮತ್ತು ಬರಿಸುವ ಗುಣವಿದ್ದರೂ 'ಡಿಸ್ಸೆಪ್ಸಿಯಾಗೆ' ಬಳಸುತ್ತಾರೆ. ಬೇರೂರಿಂದ ಕೆಮ್ಮು ಮತ್ತು ಆಸ್ತಮಾ ತೊಂದರೆಗಳಿಗೆ ಇದರ ಕಷಾಯ ಪ್ರಯೋಜನಕಾರಿ.

ಉಲ್ಲೇಖಗಳು

ಬದಲಾಯಿಸಿ

<reference/>

  1. ಸೊಪ್ಪು ತರಕಾರಿಗಳು; ಪಿ.ನಾರಾಯಣ ಸ್ವಾಮಿ, ಎಂ.ಎಂ.ಖಾನ್, ಕೆ.ಕೆಂಪೇಗೌಡ, ಡಾ:ಎಲ್. ವಸಂತ, ನವಕರ್ನಾಟಕ ಪಬ್ಲಿಕೇಷನ್ ಪ್ರೈವೆಟ್ ಲಿಮಿಟೆಡ್ ರಸ್ತೆ ಬೆಂಗಳೂರು