ಭಾರತದ ನೃತ್ಯ ಪದ್ಧತಿಗಳು

ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ರಚಿತವಾಯಿತೆನಿಸುವ ಭರತ ಮುನಿಯ ನಾಟ್ಯ ಶಾಸ್ತ್ರವನ್ನು ಅವಲಂಬಿಸಿ, ಅನೇಕ ನೃತ್ಯ ಪ್ರಕಾರಗಳು, ಭಾರತದೇಶದಲ್ಲಿ ರೂಪಗೊಂಡವು. ಈ ನಾಟ್ಯ ಶಾಸ್ತ್ರದ ಅಡಿಪಾಯದ ಮೇಲೆ, ಪ್ರಾಂತೀಯ ಜನ ಜೀವನ, ಸಂಸ್ಕೃತಿಕ ಪ್ರಭಾವದಿಂದ, ವಿವಿಧ ರೀತಿಯಲ್ಲಿ ಸೃಜನೆಯಾದ ನೃತ್ಯ ಪ್ರಕಾರಗಳು, ಕಾಲಕ್ರಮೇಣ ಒಂದು ಸಂಪ್ರದಾಯದ ಚೌಕಟ್ಟಿಗೆ ಅಳವಟ್ಟು ಶಾಸ್ತ್ರೀಯತೆಯನ್ನು ಪಡೆದವು. ಅವುಗಳಲ್ಲಿ ಮುಖ್ಯವಾದವು ದಕ್ಷಿಣ ಭಾರತದ ಭರತನಾಟ್ಯ, ಆಂಧ್ರದ ಕೂಚಿಪುಡಿ, ಕೇರಳದ ಕಥಕ್ಕಳಿ,ಮೋಹಿನಿ ಅಟ್ಟಂ, ಉತ್ತರ ಭಾರತದ ಕಥಕ್, ಮಣಿಪುರದ ಮಣಿಪುರಿ, ಒರಿಸ್ಸಾ ಪ್ರಾಂತ್ಯದ ಒಡಿಸ್ಸಿ, ಇದಲ್ಲದೆ ಕರ್ನಾಟಕದ ಯಕ್ಷಗಾನ, ಒರಿಸ್ಸಾ, ಬಿಹಾರಿನ ಚೌ ನೃತ್ಯ ಪದ್ಧತಿ, ಅಸ್ಸಾಮಿನ ಸತ್ರಿಯ, ಕೇರಳದ ಚಕಿಯಾರ್ ಕೊತ್ತು, ಕೋಡಿಯಾಟ್ಟo ಮುಂತಾದ ನೃತ್ಯಗಳು ಶಾಸ್ತ್ರೀಯತೆಯ ಸೊಗಡನ್ನು ಪಡೆದಿದೆ.