ತಾರಾನಾಥ್ ಗಟ್ಟಿ ಕಾಪಿಕಾಡ್

ತಾರಾನಾಥ್ ಗಟ್ಟಿ ಕಾಪಿಕಾಡ್, ವೃತ್ತಿಯಲ್ಲಿ ಪತ್ರಕರ್ತರು. ಕಳೆದ ಎರಡೂವರೆ ದಶಕಗಳಿಂದ ಮಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವವರು. ಪತ್ರಿಕೆ ಹಾಗೂ ಟಿ.ವಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ. ಸಾಹಿತ್ಯದ ಓದಿನಲ್ಲಿ, ನಾಟಕ, ರಂಗಭೂಮಿ ಬಗ್ಗೆ ಆಸಕ್ತರು. ೨೦೧೭-೧೯ ರ ಅವಧಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತುಳು ಸಂಘಟನೆಯಲ್ಲಿ ಸಕ್ರಿಯರು.