ನನ್ನ ಕತೆ,

    ಬದುಕು ಎಂದರೆ ನದಿಯ ಹಾಗೆ ಕೊನೆ ಇಲ್ಲದ ಪಯಣ,ಯಾವುದೂ ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದಿಲ್ಲ,ಉಳಿಯುವುದು ಒಂದೇ ಹೃದಯ ತಟ್ಟಿದ ನೆನಪುಗಳು ಮಾತ್ರ.ಈ ನನ್ನ ನೆನಪುಗಳನ್ನು ಪರಿಚಯಿಸುತ್ತೇನೆ.
 ಪರಿಚಯ 
  ನನ್ನ ಹೆಸರು ತನುಜ,ನಾನು ಹುಟ್ಟಿದ್ದು ೧೯/೧೦/೨೦೦೧ ಶುಕ್ರವಾರದ ಬೆಳ್ಳಿಗ್ಗೆ ೯:೩೦ಯಂದು ಬೆಂಗಳೂರಿನಬೆಂಗಳೂರು  ಸರಕಾರಿ ಆಸ್ಪತ್ರೆಯಲ್ಲಿ.ನನ್ನ ತಂದೆ ಪಾಪಯ್ಯ ರೆಡ್ಡಿ ಹಾಗೂ ತಾಯಿ ನಾಗ ಲಕ್ಷ್ಮಿರವರಿಗೆ ನಾವು ಇಬ್ಬರು ಮಕ್ಕಳು.ನನ್ನ ಅಣ್ಣ ಗುರು ಕಿರಣ,ನನ್ನನ್ನು ತುಂಬಾ ಸತಾಯಿಸುವನು,ಆದರೂ ನನ್ನ ಮೇಲೆ ಹೆಚ್ಚು ಪ್ರೀತಿ ಅವನಿಗೆ.ನಮ್ಮ ಜೀವನದಲ್ಲಿ ಎಷ್ಟೇ ಕಿರಿಕಿರಿಯಾದರು ಅದನ್ನೆಲ್ಲಾ ಸಹಿಸಿಕೂಂಡು ಸಂತೋಶದಿಂದ ಬಾಳುತ್ತಿದ್ದೆವು.ಆ ದೇವರಿಗೆ ನಮ್ಮ ಮೇಲೆ ಕರುಣೆ ಇಲ್ಲವೆಂದು ಕಾಣುತ್ತದೆ.ನಾನು ತುಂಬಾ ಪ್ರೀತಿಸುವ ನನ್ನ ತಂದೆಯನ್ನು ನನ್ನಿಂದ ದೂರ ಮಾಡಿದ.ಈಗ ನನ್ನನು ನನ್ನ ತಾಯಿ ಹಾಗು ಅಣ್ಣ ಪೋಶಿಸುತಿದ್ದಾರೆ.ನನ್ನ ಹಣೆ ಬರಹವೇ ಹೀಗೆ ನಾನು ಇಷ್ಟ ಪಟ್ಟಿದ್ದು ನನಗೆ ಸಿಗುವುದಿಲ್ಲ.
 ಹವ್ಯಾಸ 
   ನನಗೆ ಹಾಡುವುದು,ಚಿತ್ರಗಳನ್ನು ಬಿಡಿಸುವುದು,ನೃತ್ಯ ಮಾಡುವುದು,ಸಿನಿಮಾಗಳನ್ನು ನೋಡುವುದು,ನಿದ್ದೆ ಮಾಡುವುದು ಎಂದರೆ ಬಹಳಾ ಇಷ್ಟವಾದ ಕೆಳ‌ಸಗಳು.ನನ್ನ ಮನಸ್ಸು ಸರಿಯಿಲ್ಲದಿದ್ದಾಗ ಈ ಯಾವುದೇ ಒಂದು ಕೆಳಸ ಮಾಡಿದರೂ ಸಮಾದಾನವಾಗುತ್ತದೆ.ನನಗೆ ಪ್ರಾಣಿಗಳೆಂದರೆ ಬಹಳಾ ಇಷ್ಟ,ಅದರಲ್ಲೂ ನಾಯಿಗಳ್ಳೆಂದರೆ ತುಂಬ ಪ್ರಾಣ.ನನ್ನ ಮನೆಯಲ್ಲು ಲಕ್ಕಿ ಎಂಬ ನಾಯಿಯನ್ನು ನೋಡಿಕೊಳ್ಳುತ್ತಿದ್ದೇನೆ.
 ವಿದ್ಯಾಭ್ಯಾಸ 
   ನನ್ನನು ನಮ್ಮ ಆಡುಗೋಡಿಯಲ್ಲಿರುವ ವಿ.ಐ.ಪಿ ಪ್ರೌಢ ಶಾಲೆಯಲ್ಲಿ ಸೇರಿಸಿದರು.ನಾನು ಇಲ್ಲಿಯೇ ೧೦ನೇ ತರಗತಿಯವರೆಗು ವಿಧ್ಯಾಭ್ಯಾಸವನ್ನು ಮಾಡಿದೆ.ನನ್ನ ಶಿಕ್ಷಕರ ಸಹಾಯದಿಂದ ೧೦ನೇ ತರಗತಿಯಲ್ಲಿ ೯೪.೪೦% ಶೇಕಡಗಳನ್ನು ಪಡೆದೆನು.ನನ್ನನ್ನು ಎಲ್ಲಾ ವಿಷಯದಲ್ಲೂ ಪ್ರೋತ್ಸಾಹ ನೀಡಿ ಮುಂದುಬರುವಂತೆ ಮಾಡಿದ ನನ್ನ ಶಿಕ್ಷಕರಿಗೆ ನನ್ನ ದನ್ಯವಾದಗಳು. ನನ್ನ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಸೈಂಸ್ ಸಬ್ಜೆಕ್ಟ್ ಅನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿಕ್ರೈಸ್ಟ್ ಜೂನಿಯರ್ ಕಾಲೇಜ್ ತಗೆದುಕೂಂಡು ಸೇರಿದೆ.ಆ ಎರೆಡು ವರ್ಷವು ನನಗೆ ಮರಿಯಲಾಗದ ನೆನಪು.ನನ್ನ ಸ್ನೇಹಿತರು,ಶಿಕ್ಷಕರ ಜೊತೆ ಬಹಳ ಕುಷಿಯಾಗಿದ್ದೆ.ನಾನು ಎರಡನೇಯ ವರ್ಷದಲ್ಲಿ ೮೪.೪0% ಪಡೆದೆನು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲೇಕ್ರೈಸ್ಟ್ ಯೂನಿವರ್ಸಿಟಿ ಸೀಟ್ ದೂರಕಿತು.ಈ ಮೂರು ವರ್ಷ ಹೇಗಿರುವುದೆಂದು ನನಗೆ ಬಹಳ ಕುತೂಹಳವಾಗಿದೆ.
 ಇಲ್ಲಿಯವರೆಗೂ ನನ್ನ ಕತೆ ಸೊಗಸಾಗಿತ್ತು,ಇನ್ನು ಮುಂದೆ ನನ್ನ ಕತೆಯ ಪಯಣ ಎಲ್ಲಿಯವರೆಗೆ ಸಾಗುತ್ತದೆಂದು ಕಾದು ನೋಡಬೇಕಾಗಿದೆ.

ದನ್ಯವಾದಗಳು.