ಸದಸ್ಯ:Swathi m poojary/ನನ್ನ ಪ್ರಯೋಗಪುಟ

ಕಾವ್ಯರಂಗ

ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆ ಇವೆಲ್ಲವನ್ನು ಓದುವ ಮತ್ತು ಅರ್ಥೈಸುವ ಸರಳ ವಿಧಾನವೇ ಕಾವ್ಯರಂಗ.

ಒಂದು ಕಾವ್ಯವನ್ನು ಹೇಗೆ ಓದಬೇಕು, ಯಾವ ದಿಕ್ಕಿನಿಂದ ಓದಬೇಕು, ಓದಿಗೆ ಮುಂಚಿನ ಪೂರ್ವ ತಯಾರಿಗಳು ಹೇಗೆ, ಇವೆಲ್ಲವನ್ನು ಮೊದಲು ಅರಿತುಕೊಳ್ಳಬೇಕು, ಓದು ಬರೀ ಲಿಖಿತ ಓದಾಗಬಾರದು. ಕಾವ್ಯದ ಭಾಷೆಯು ಮೊದಲು ನಮ್ಮ ದೇಹದೊಳಕ್ಕೆ ಇಳಿಯಬೇಕು. ಆ ಭಾಷೆ ದೇಹದೊಳಕ್ಕೆ ಇಳಿದು ಅದರೊಳಗೆ ಅಂತರ್ಗತವಾಗಿರುವ ಅರ್ಥ, ಮಹತ್ವ ಮನಸ್ಸಿಗೂ ಹೃದಯಕ್ಕೂ ಬೇಕಾದರೆ ಅದು ರಂಗಭೂಮಿಯಿಂದ ಮಾತ್ರ ಸಾಧ್ಯ. ಆಶು ಮತ್ತು ಭಾಷೆ ಇವೆರಡು ನಮ್ಮೊಳಗೆ ಇಳಿಯಲು ಸಾಧ್ಯ...

ರಂಗಭೂಮಿಗೆ ಒಂದು ಶೈಕ್ಷಣಿಕ ಸ್ವರೂಪ ಇದೆ. ರಂಗಭೂಮಿ ಕೇವಲ ಭೌತಿಕ ಪರಿಕರವಲ್ಲ. ಅದು ತನ್ನೊಳಗೆ ಅಮೂರ್ತವಾದ ರೂಪವನ್ನು ಪಡೆದುಕೊಂಡಿದೆ ನಾವು ಅದರೊಳಗೆ ಇಳಿದು ಅದನ್ನು ಮೈಗೂಡಿಸಿಕೊಂಡಾಗ ಮಾತ್ರ ಅಮೃತದ ಸವಿ ಸವಿಯಲು ಸಾಧ್ಯ.

ಯುವಜನತೆಯ ಧ್ವನಿ ಕರ್ಕಶವಾಗುತ್ತಿದೆ. ಇಂದಿನ ಯುವಜನತೆ ಕನ್ನಡವನ್ನು, ಅದರ ಸ್ವಾಧವನ್ನು ಮರೆಯುತ್ತಿದ್ದಾರೆ. ಅಲ್ಲದೆ ಹಳಗನ್ನಡ ಕಷ್ಟ ಎಂದು ನಮ್ಮ ಕನ್ನಡವನ್ನು ಕಡೆಗಣಿಸಿ ಮರೆಯುವ ಜಾಯಮಾನ ಹೆಚ್ಚಾಗುತ್ತಿದೆ. ಹಳೆಗನ್ನಡ ಕಷ್ಟ ಎನ್ನುವ ಮನಸ್ಸುಗಳು ಇಂದು ಹಳಗನ್ನಡದ ಬಹು ಮೌಲ್ಯಯುತ ಕೃತಿಗಳನ್ನು ಗಮನಿಸಿಲ್ಲ. ನಮ್ಮ ಪೂರ್ವಜರು ರಚಿಸಿದ ರನ್ನ, ಪಂಪ, ಜನ್ನ ಇವರೆಲ್ಲರ ಅಭೂತಪೂರ್ವ ಕೃತಿಗಳು ಕಪಾಟಿನಲ್ಲಿ ಧೂಳು ಹಿಡಿಯುತ್ತಿವೆ. ಈ ಯುವಜನತೆಗೆ ನಮ್ಮ ಕನ್ನಡದ ಇತಿಹಾಸವನ್ನು ಪರಿಚಯಿಸಬೇಕು. ಕನ್ನಡದ ಒಳಗಿನ ಇತಿಹಾಸವನ್ನು ಪರಿಚಯಿಸಬೇಕು. ಕನ್ನಡದ ಒಳಗಿನ ಸೌಂದರ್ಯ, ಆ ಸುಲಲಿತ ಭಾಷೆಯ ಸ್ವಾದ ಅವರ ಅಂತಃಕರಣಕ್ಕೆ ಮುಟ್ಟಬೇಕು. ಈ ಕಾವ್ಯರಂಗ ರಂಗಪ್ರಯೋಗವನ್ನು ನೋಡಿ ಸಾಹಿತ್ಯದ ಮೇಲೆ ಆಸಕ್ತಿ ಹುಟ್ಟಿ ಕನ್ನಡ ಸಾಹಿತ್ಯ ಪುಸ್ತಕಗಳ ಕಡೆಗೆ ಮತ್ತೆ ಕಣ್ಣು ಹಾಯಿಸುವ ಮನಸ್ಸು ಉಂಟಾದರೆ ಕಾವ್ಯರಂಗ ಸಾರ್ಥಕವಾಗುತ್ತದೆ.

ಮೊದಲೇ ಹೇಳಿದಂತೆ ಯುವಜನತೆಯ ಧ್ವನಿ ಕರ್ಕಶತೆಗೆ ಬದಲಾಗಿ ಲಯ, ಲಾಸ್ಯ ತುಂಬಿರಬೇಕು. ಇದಕ್ಕೆ ಈ ಲಾಸ್ಯತೆ, ಲಯ ಉಂಟಾಗುವ ಕನ್ನಡ ಸಾಹಿತ್ಯವನ್ನು ಓದಬೇಕು. ಹೀಗಾಗಿ ಯುವ ಮನಸ್ಸುಗಳು ಬದಲಾವಣೆಯ ಕಡೆಗೆ ದೃಢವಾದ ಹೆಜ್ಜೆಯನ್ನು ಇಟ್ಟಾಗ ನಮ್ಮ ದೇಶದ ಎಲ್ಲಾ ಸಮಸ್ಯೆಗಳು ಬದಿಗೆ ಸರಿಯುತ್ತದೆ. ಪ್ರಬುದ್ಧ ಭಾರತ ಎದ್ದು ನಿಲ್ಲುತ್ತದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಕಾವ್ಯರಂಗ ರಂಗಪ್ರಯೋಗವನ್ನು ರೂಪಿಸಲಾಗಿದೆ. ಇದು ನಾಡಿನೆಲ್ಲೆಡೆ ಹತ್ತು ಜನ ನಟರನ್ನು ಒಳಗೊಂಡು ತಿರುಗಾಟ ಮಾಡಿ ಎಲ್ಲಾ ಕಾಲೇಜು ಮನಸ್ಸುಗಳಿಗೆ ಕನ್ನಡತನವನ್ನು ತುಂಬುವ ಕೆಲಸವನ್ನು ಮಾಡುತ್ತಿದೆ.

ಕಾವ್ಯರಂಗ ರಂಗ ಪ್ರಯೋಗದ ಮೂಲ ಉದ್ದೇಶ ಎಲ್ಲಾ ಕನ್ನಡ ಸಾಹಿತ್ಯ ಅಭಿರುಚಿ ಜೊತೆಗೆ ನಮ್ಮ ಸಾಹಿತ್ಯ ಪ್ರಾಚೀನತೆ ನಡೆದು ಬಂದ ದಾರಿಯನ್ನು ತಿಳಿಸಿ ಕೊಡುವುದಾಗಿದೆ. ಊರಿನಿಂದ ಊರಿಗೆ ತಿರುಗಾಟ ಮಾಡಲು ಅನುವಾಗುವಂತೆ ಅತ್ಯಂತ ಸರಳವಾದ ರಂಗಸಜ್ಜಿಕೆಯನ್ನು ಹೊಂದಿಸಲಾಗುವುದು. ಒಂದು ಹಿಂಪರದೆ ಇಲ್ಲಿ ಹೊತ್ತಿಗೆಯ ಮಧ್ಯದಿಂದ ಜ್ಞಾನ ಎಂಬ ಜ್ಯೋತಿ ಪ್ರಕಾರವಾದ ಬೆಳಗಿ ಅದರಲ್ಲಿನ ವಿಚಾರಗಳನ್ನು ಪತಂಗಗಳಾಗಿ ಎಲ್ಲೆಡೆ ಪಸರಿಸುತ್ತದೆ ಎಂಬ ಉದಾತ್ತ ದೇಹದ ಚಿತ್ರ ಬರೆಯಲಾಗುವುದು. ಇನ್ನುಳಿದಂತೆ ಕಲಾವಿದರು ವೇದಿಕೆಯಲ್ಲಿ ಕುಳಿತುಕೊಳ್ಳಲು ಅನುವಾಗುವಂತೆ ಕುರ್ಚಿ ಉಪಯೋಗಿಸಲಾಗುವುದು. ಕಲಾವಿದರು ಎಲ್ಲರೂ ಒಂದೇ ವಿಧವಾದ ವಸ್ತ್ರವನ್ನು ಧರಿಸುತ್ತಾರೆ. ಆಯಾ ಪಾತ್ರಗಳಿಗೆ ತಕ್ಕಂತೆ ಶಾಲುಗಳನ್ನು ಮತ್ತು ಕಲಾವಿದರು ತಮ್ಮ ದೇಹ, ಭಾವ, ಭಾಷೆಗಳನ್ನು ಬಳಸಿಕೊಳ್ಳುತ್ತಾರೆ. ಇಲ್ಲಿ ಹೊಸ ತರನಾದ ಬೆಳಕಿನ ವಿನ್ಯಾಸವಿರುವುದಿಲ್ಲ. ಇದು ಕಾಲೇಜು ಕೊಠಡಿ ಹೀಗೆ ಎಲ್ಲಾ ಕಡೆಗೂ ಬೆಳಗಿನ ಹೊತ್ತಲ್ಲಿ ಪ್ರಸ್ತುತ ಪಡಿಸುವುದರಿಂದ ಕಾವ್ಯ ಕಥೆ ನಾಟಕಗಳು ಬೆಳಕಿನ ಹಾಗೆ ಇರುವುದರಿಂದ ಕೃತಕ ಬೆಳಕನ್ನು ಬಳಸುವುದಿಲ್ಲ. ಯಾವುದೇ ಮುಖವರ್ಣಿಕೆ ಸಾಧನಗಳನ್ನು ಉಪಯೋಗಿಸುವುದಿಲ್ಲ. ಕೆಲವು ಪಾತ್ರಗಳ ಗಾಂಭೀರ್ಯತೆ ಮುಖವಾಡಗಳನ್ನು ಬಳಸುತ್ತಾರೆ.

ಇಲ್ಲಿ ನಿರೂಪಣೆಗೆ ಪೂರಕವಾದ ಸಂಗೀತವನ್ನು ಅಳವಡಿಸಲಾಗುವುದು. ಹಳೆಗನ್ನಡ ಬಹಳ ಕಷ್ಟ ಎನ್ನುವವರಿಗೆ ಹಳೆಗನ್ನಡದ ಹಾಡುಗಳಿಗೆ ಆಧುನಿಕ ಲಯಗಳನ್ನು ಸೇರಿಸಿ ಹಾಡನ್ನು ಹಾಡುವುದರಿಂದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯಲ್ಲಿ ಅದರ ಆಶಯಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗುತ್ತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಂಜರ, ತಾಳಗಳನ್ನು ಉಪಯೋಗಿಸುತ್ತಾರೆ.