ಪ್ರಭಾಸ್

ಬದಲಾಯಿಸಿ

ಪ್ರಭಾಸ್ ಪೂರ್ಣ ಹೆಸರು ’ಪ್ರಭಾಸ್ ರಾಜು ಉಪಲಪತಿ’. ಸಿನಿಮಾರಂಗದಲ್ಲಿ ಇವರಿಗೆ ಕೊಟ್ಟ ಹೆಸರು ’ಯಂಗ್ ರೆಬಲ್ ಸ್ಟಾರ್’. ಇವರ ಹುಟ್ಟೂರು ಭೀಮಾವರಂ, ಆಂದ್ರ ಪ್ರದೇಶ. ಇವರ ತಂದೆ ಉಪಕುಲಪತಿ ಸೂರ್ಯ ನಾರಾಯಣ ರಾಜು ಮತ್ತು ತಾಯಿ ಶಿವಕುಮಾರಿ. ಇವರ ತಂದೆ ತಾಯಿಯರಿಗೆ ಮೂರುಜನ ಮಕ್ಕಳು. ಅದರಲ್ಲಿ ಪ್ರಭಾಸ್ ಕಿರಿಯ ಮಗ. ಇವರ ಅಣ್ಣ ಪ್ರಮೋದ್ ಮತ್ತು ಅಕ್ಕ ಪ್ರಗತಿ. ಪ್ರಭಾಸ್ ತೆಲುಗು ನಟ ಕೃಷ್ಣ ರಾಜು ಉಪಲಪತಿ ಅವರ ಸೋದರಳಿಯ. ಅವರ ಮೂಲಕ ಪ್ರಭಾಸ್ ಸಿನಿಮಾ ರಂಗಕ್ಕೆ ಕಾಲಿಟ್ಟರು. ಪ್ರಭಾಸ್ ಹುಟ್ಟಿದ ದಿನಾಂಕ ೨೩ ಅಕ್ಟೋಬರ್ ೧೯೭೯ ತಮಿಳುನಾಡಿನ ಚೆನ್ನೈ ನಲ್ಲಿ. ಡಿ.ಎಸ್.ಆರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಅವರ ಪದವಿ ಪೂರ್ವ ಶಿಕ್ಷಣ ಹೈದರಾಬಾದಿನ ಶ್ರೀ ಚೈತನ್ಯ ಕಾಲೇಜಿನಲ್ಲಿ ಓದಿದರು. ಅವರು ಬಿ.ಟೆಕ್/ಬಿ.ಇ ಡಿಗರಿ ಮುಗಿಸಿದರು.ಇವರ ನೆಚ್ಚಿನ ನಟಿ ಜಯಸುದ, ಶ್ರೇಯ, ತ್ರಿಷ. ನೆಚ್ಚಿನ ಸಿನಿಮಾ ಗೀತಾಂಜಲಿ, ಭಕ್ತ ಕಣ್ಣಪ್ಪ. ನೆಚ್ಚಿನ ಊಟ ಬಿರಿಯಾನಿ, ಇಷ್ಟವಾದ ಬಣ್ಣ ಕಪ್ಪು, ಇಷ್ಟವಾದ ಪುಸ್ತಕ ಫೌಂಟೇನ್ ಹೆಡ್. ಇವರ ಆತ್ಮೀಯ ಗೆಳೆಯ ಗೋಪಿಚಂದ್ ಮತ್ತು ಅಲ್ಲು ಅರ್ಜುನ್ ಟಾಲಿವುಡ್‌ನಲ್ಲಿ. ಇವರು ಮಹೀಂದ್ರ ಟಿಯುವಿ ೩೦೦ ಕಾರ್‌ನ ಗ್ರಾಂಡ್ ಅಂಬಾಸಿದಾರ್.

ಸಿನಿಮಾಗಳು

ಬದಲಾಯಿಸಿ

ಈಶ್ವರ್ (೨೦೦೨) ಎಂಬ ಸಿನಿಮಾದ ಮೂಲಕ ತಮ್ಮ ಅಭಿನಯ ವೃತ್ತಿಯನ್ನು ಪ್ರಾರಂಭಿಸಿದರು. ಇವರ ಎರಡನೆಯ ಚಿತ್ರ ರಾಘವೇಂದ್ರ (೨೦೦೩). ೨೦೦೪ ರಲ್ಲಿ ಇವರ ಮೂರನೆಯ ಚಿತ್ರ ವರ್ಷಂ ಮತ್ತು ಅರವಿ ರಾಯುಡು. ೨೦೦೫ ರಲ್ಲಿ ಚಕ್ರಂ ಮತ್ತು ಚಕ್ರಪತಿ. ೨೦೦೬ ರಲ್ಲಿ ಪೌರ್ಣಮಿ, ೨೦೦೭ ರಲ್ಲಿ ಯೋಗಿ ಮತ್ತು ಮುನ್ನ, ೨೦೦೮ ರಲ್ಲಿ ಬುಜ್ಜಿಗಾಡು, ೨೦೦೯ ರಲ್ಲಿ ಬಿಲ್ಲ ಮತ್ತು ಏಕ್ ನಿರಂಜನ್, ೨೦೧೦ ರಲ್ಲಿ ಡಾರ್ಲಿಂಗ್, ೨೦೧೧ ರಲ್ಲಿ ಮಿಸ್ಟರ್ ಪರ್ಫೆಕ್ಟ್, ೨೦೧೨ ರಲ್ಲಿ ರೆಬೆಲ್, ೨೦೧೩ ರಲ್ಲಿ ಮಿರ್ಚಿ, ೨೦೧೫ ರಲ್ಲಿ ಬಾಹುಬಲಿ ದಿ ಬಿಗಿನಿಂಗ್, ೨೦೧೭ ರಲ್ಲಿ ಬಾಹುಬಲಿ ದಿ ಕನ್‌ಕ್ಲೂಷನ್, ೨೦೧೭ ರಲ್ಲಿ ಭಾಗ್‌ಮತಿ, ದಂಡ, ಸೆಪ್ಟೆಂಬರ್ ೨೦೦೫ ರಲ್ಲಿ ಎಸ್.ಎಸ್.ರಾಜಮೌಳಿ ನಿರ್ದೇಶಿಸಿರುವ ಚಕ್ರಪತಿ ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ ಮತ್ತು ೨೦೧೫ ರಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿಯಲ್ಲಿ ನಟರಾಗಿ ಅಭಿನಯಿಸಿದ್ದಾರೆ.

ಸಿನಿಮಾದ ಪಾತ್ರಗಳು

ಬದಲಾಯಿಸಿ

ಜಯಂತ್ ಸಿ ಪರಂಜೀ ನಿರ್ದೇಶನದ ಈಶ್ವರ್ ಸಿನಿಮಾದಲ್ಲಿ ತಾಯಿ ಇಲ್ಲದ ಮಗುವಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ೧೧ ನವೆಂಬರ್ ೨೦೦೨ ರಲ್ಲಿ ಬಿಡುಗಡೆ ಮಾಡಿದರು. ಸುರೇಶ್ ಕೃಷ್ಣ ನಿರ್ದೇಶನದ ರಾಘವೇಂದ್ರ ಸಿನಿಮಾದಲ್ಲಿ ರಾಘವ ಎಂಬ ಹೆಸರಿನಲ್ಲಿ ಅನ್ಯಾಯದ ವಿರುದ್ಧ ಹೋರಾಟಗಾರನಾಗಿ ಅಭಿನಯಿಸಿದಾರೆ. ಈ ಸಿನಿಮಾ ೨೦೦೩ ರಲ್ಲಿ ಬಿಡುಗಡೆ ಮಾಡಿದರು. ಶೋಭನ್ ನಿರ್ದೇಶನದ ವರ್ಷ ಸಿನಿಮಾದಲ್ಲಿ ರಾಮು ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ವರ್ಷ ಸಿನಿಮಾ ೫೦ ದಿನಗಳ ಕಾಲ ೧೨೫ ಕಡೆ ಪ್ರದರ್ಶನವಾಗಿತ್ತು ಮತ್ತು ೧೦೦ ದಿನಗಳ ಕಾಲ ೬೮ ಕಡೆ ಪ್ರಸಾರವಾಗಿತ್ತು. ಬಿ.ಗೋಪಾಲ್ ನಿರ್ದೇಶನದ ಅಡವಿರಾಯುಡು ಸಿನಿಮಾವನ್ನು ೨೧ ಮೇ ೨೦೦೪ ರಲ್ಲಿ ಬಿಡುಗಡೆ ಮಾಡಿದರು. ಕೃಷ್ಣ ವಂಶಿ ನಿರ್ದೇಶನದ ಚಕ್ರಂ ಸಿನಿಮಾದಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟಿ ಬಡವರಿಗೆ ಸಹಾಯ ಮಾಡುವ ಆಸೆ ಕನಸನ್ನು ತುಂಬಿಕೊಂಡವನಂತೆ ಮತ್ತು ಕ್ಯಾನ್ಸರ್ ವ್ಯಾದಿಯಿಂದ ಬಳಲುತ್ತಿದ್ದು ಸಾವಿಗೆ ಹತ್ತಿರವಾಗಿದ್ದು ಎಲ್ಲರನ್ನು ಸಂತೋಷದಿಂದ ನಕ್ಕುನಲಿಸುವನಂತೆ ಅಭಿನಯಿಸಿದ್ದಾರೆ. ಈ ಸಿನಿಮಾ ೨೫ ಮಾರ್ಚ್ ೨೦೦೫ ರಲ್ಲಿ ಬಿಡುಗಡೆಯಾಯಿತು. ಎಸ್.ಎಸ್.ರಾಜಮೌಳಿ ನಿರ್ದೇಶನದ ಚತ್ರಪತಿ ಸಿನಿಮಾದಲ್ಲಿ ಶಿವಾಜಿ ಎಂಬ ಹೆಸರಿನಿಂದ ತಾನು ತನ್ನ ಅಮ್ಮನಿಂದ ದೂರವಾದವನಂತೆ ಅಭಿನಯಿಸಿದ್ದಾರೆ. ಈ ಸಿನಿಮಾ ೧೦೦ ದಿನ ೫೪ ಕಡೆ ಪ್ರದರ್ಶನವಾಯಿತು. ಪ್ರಭುದೇವಾ ನಿರ್ದೇಶನದ ಪೌರ್ಣಮಿ ಸಿನಿಮಾವನ್ನು ೨೧ ಏಪ್ರಿಲ್ ೨೦೦೬ ರಲ್ಲಿ ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಶಿವಕೇಶವ ಎಂಬ ಹೆಸರಿನಿಂದ ಎಲ್ಲಾ ಕಲೆಯನ್ನು ಹೊಂದಿದವರಂತೆ ಅಭಿನಯಿಸಿದ್ದಾರೆ. ವಿ.ವಿ.ವಿನಾಯಾ ನಿರ್ದೇಶನದ ಯೋಗಿ ಸಿನಿಮಾದಲ್ಲಿ ಈಶ್ವರ ಚಂದ್ರ ಪ್ರಸಾದ್ ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ಈ ಸಿನಿಮಾದಿಂದ ೨೫ ಕೋಟಿ ಸಂಪಾದನೆಯಾಯಿತು. ಯೋಗಿ ಯಶಸ್ಸನ್ನು ಕೊಟ್ಟ ಸಿನಿಮಾ. ವಂಶಿ ಪೈಡಿಪಲ್ಲಿ ನಿರ್ದೇಶನದ ಮುನ್ನ ಸಿನಿಮಾವನ್ನು ೨೭ ಏಪ್ರಿಲ್ ೨೦೦೭ ರಲ್ಲಿ ಬಿಡುಗಡೆ ಮಾಡಿದರು. ಮುನ್ನ ಎಂಬ ಹೆಸರಿನಿಂದ ಕಾಲೇಜಿನ ವಿದ್ಯಾರ್ಥಿಯಾಗಿ ಅಭಿನಯಿಸಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಬುಜ್ಜಿಗಾಡು ಸಿನಿಮಾದಲ್ಲಿ ಬುಜ್ಜಿ ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ಮೆಹೆರ್ ರಮೇಶ್ ನಿರ್ದೇಶನದ ಬಿಲ್ಲಾ ಸಿನಿಮಾದಲ್ಲಿ ಭೂಗತರ ದೊರಯಾಗಿ ಬಿಲ್ಲಾ ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಏಕ್ ನಿರಂಜನ ಸಿನಿಮಾ ೩೦ ಅಕ್ಟೋಬರ್ ೨೦೦೯ ರಲ್ಲಿ ಇಡೀ ಆಂದ್ರಪ್ರದೇಶದಾದ್ಯಂತ ೭೦೦ ಚಿತ್ರಮಂದಿರಗಳಲ್ಲಿ ಪ್ರಸಾರವಾಗಿತ್ತು. ಮೊದಲನೇ ವಾರದಲ್ಲಿ ೨೧ ಕೋಟಿ ಸಂಪಾದನೆ ಮಾಡಿತು. ಚೋಟು ಎಂಬ ಹೆಸರಿನಿಂದ ಪೊಲೀಸರಿಗೆ ಕಳ್ಳರನ್ನು ಹಿಡಿದುಕೊಳ್ಳಲು ಸಹಾಯ ಮಾಡುವನಂತೆ ಮತ್ತು ತನ್ನ ತಂದೆ ತಾಯಿಯನ್ನು ಹುಡುಕುವ ಮಗನಂತೆ ಅಭಿನಯಿಸಿದ್ದಾರೆ. ಕರುಣಾಕರನ್ ನಿರ್ದೇಶನದ ಡಾರ್ಲಿಂಗ್ ಸಿನಿಮಾ ೨೩ ಏಪ್ರಿಲ್ ೨೦೧೦ ರಲ್ಲಿ ಮೊದಲನೇ ವಾರದಲ್ಲಿ ೧೦ ಕೋಟಿ ಆಂದ್ರದಲ್ಲಿ, ೮ ಕೋಟಿ ನಿಜಾಮ್‌ನಲ್ಲಿ ಸಂಪಾದನೆ ಮಾಡಿತು. ೧೫ ಕಡೆ ೧೦೦ ದಿನಗಳ ಕಾಲ ಪ್ರದರ್ಶನವಾಯಿತು. ಪ್ರಭು ಎಂಬ ಹೆಸರಿನಿಂದ ತಾನು ಪ್ರೀತಿಸಿದ ಹುಡುಗಿಯನ್ನು ಪಡೆದುಕೊಳ್ಳುವನಂತೆ ಅಭಿನಯಿಸಿದ್ದಾರೆ. ಮಿಸ್ಟರ್ ಪರ್‌ಫೆಕ್ಟ್ ಸಿನಿಮಾ ೨೨ ಏಪ್ರಿಲ್ ೨೦೧೧ ರಲ್ಲಿ ಬಿಡುಗಡೆಯಾಗಿ ೨೮ ಕೋಟಿ ಸಂಪಾದಿಸಿತು. ೧೦೦ ದಿನಗಳ ಕಾಲ ಪ್ರದರ್ಶನವಾಯಿತು. ವಿಕ್ಕಿ ಎಂಬ ಹೆಸರಿನಿಂದ ಸಾಫ್ಟ್‌ವೇರ್ ಆಗಿ ಅಭಿನಯಿಸಿದ್ದಾರೆ. ೨೦೧೧ ರಲ್ಲಿ ಈ ಸಿನಿಮಾ ಇವರಿಗೆ ಒಂದು ದೊಡ್ಡ ತಿರುವನ್ನು ಕೊಟ್ಟಿತು. ರಾಘವ ಲಾರೆನ್ಸ್ ನಿರ್ದೇಶನದ ರೆಬಲ್ ಸಿನಿಮಾ ೨೮ ಸೆಪ್ಟೆಂಬರ್ ೨೦೧೨ ರಲ್ಲಿ ಬಿಡುಗಡೆಯಾಗಿ ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಿದರು. ರಿಶಿ ಎಂಬ ಹೆಸರಿನಿಂದ ತಂದೆಗೆ ತಕ್ಕ ಮಗನಂತೆ ಅಭಿನಯಿಸಿದ್ದಾರೆ. ಕೋರಟಾಲ ಶಿವ ನಿರ್ದೇಶನದ ಮಿರ್ಚಿ ಸಿನಿಮಾದಲ್ಲಿ ಜೈ ಎಂಬ ಹೆಸರಿನಿಂದ ಅಭಿನಯಿಸಿದ್ದಾರೆ. ೫೦ ದಿನಗಳ ಕಾಲ ೨೩೮ ಕಡೆ ಪ್ರದರ್ಶನವಾಗಿತ್ತು. ಇದರಲ್ಲಿ ತನ್ನ ಕುಟುಂಬವನ್ನು ಶತೃಗಳಿಂದ ಕಾಪಾಡುವ ಮಗನಾಗಿ ಅಭಿನಯಿಸಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ

ಇವರು ವರ್ಷಂ ಸಿನಿಮಾಗೆ ೨೦೦೪ ರಲ್ಲಿ ಫಿಲಂಫೇರ್ ಪ್ರಶಸ್ತಿ ಪಡೆದರು. ೨೦೧೦ ರಲ್ಲಿ ಸಿನಿಮಾ ಪ್ರಶಸ್ತಿ, ೨೦೧೨ ರಲ್ಲಿ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಸಿನಿಮಾ ಪ್ರಶಸ್ತಿ, ಲಕ್ಸ್ ಸಿನಿಮಾ ಅವಾರ್ಡ್‌ನಲ್ಲಿ ೨೦೧೧ ರಲ್ಲಿ ಉತ್ತಮ ನಟ ಪ್ರಶಸ್ತಿ,ಬಾಹುಬಲಿ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಪ್ರಶಸ್ತಿ ಪಡೆದರು. ೨೦೧೨ ರಲ್ಲಿ ಪ್ರಭಾಸ್ ಟಿ.ಟೌನ್‌ನಲ್ಲಿ ಹ್ಯಾಡ್‌ಸಮ್ ನಾಯಕನಟ ಎಂದು ಆಯ್ಕೆಯಾದರು. ೨೦೦೪ ರಲ್ಲಿ ವರ್ಷಂ ಸಿನಿಮಾಗೆ ಉತ್ತಮ ನಾಯಕ ನಟ, ೨೦೦೫ ರಲ್ಲಿ ಚತ್ರಪತಿ ಸಿನಿಮಾಗೆ ಫಿಲಂಫೇರ್ ಪ್ರಶಸ್ತಿಗೆ ಉತ್ತಮ ನಾಯಕನಟ ಎಂದು, ೨೦೦೯ ರಲ್ಲಿ ಏಕ್ ನಿರಂಜನ್ ಎಂಬ ಸಿನಿಮಾದ ಉತ್ತಮ ನಟ ಪ್ರಶಸ್ತಿಗೆ, ೨೦೧೧ ರಲ್ಲಿ ಮಿಸ್ಟರ್ ಪರ್‌ಫೆಕ್ಟ್ ಸಿನಿಮಾಗೆ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಸಿನಿಮಾ ಪ್ರಶಸ್ತಿಗೆ ಇವರ ಹೆಸರು ಆಯ್ಕೆಯಾಗಿತ್ತು.

ಉಲ್ಲೇಖನಗಳು

ಬದಲಾಯಿಸಿ
  • "Baahubali creates history with opening day collections". India Today. 11 July 2015.
  • Sashidhar AS (11 November 2012). "Prabhas completes 10 years". The Times of India.