ಸುಷ್ಮ ಎನ್

ಕುಟುಂಬ

ಬದಲಾಯಿಸಿ

ನನ್ನ ಹೆಸರು ಸುಷ್ಮ.ಎನ್. ನಾನು ಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಂದೆಯ ಹೆಸರು ವಿ. ನಾಗರಾಜು. ತಾಯಿಯ ಹೆಸರು ಎಸ್. ಹೇಮಾವತಿ ಮತ್ತು ತಮ್ಮನ ಹೆಸರು ಭಾರ್ಗವ್.ಎನ್. ನನಗೆ ನನ್ನ ತಂದೆ-ತಾಯಿ ಎಂದರೆ ತುಂಬಾ ಇಷ್ಟ. ಅವರು ನನ್ನ ಬೆನ್ನೆಲುಬಾಗಿ ಸದಾ ಕಾಲ ನನ್ನನ್ನು ಪ್ರೋತ್ಸಾಹಿಸುತ್ತಾರೆ. ನಾನು ಅವರಿಗೆ ಸಂತೋಷ ಕೊಡುವ ವಿಷಯಗಳನ್ನು ಹೇಳುತ್ತೇನೆ. ಆದರೆ ನಾನು ಎಂದಿಗು ದುಃಖದ ವಿಷಯಗಳನ್ನು ಹೇಳಲು ಇಚ್ಛಿಸುವುದಿಲ್ಲ. ಏಕೆಂದರೆ ಅವರು ಯಾವಾಗಲು ಸುಖ ಸಂತೋಷದಿಂದ ಇರಬೇಕೆನ್ನುವುದು ನನ್ನ ಆಸೆ.

ಚಟುವಟಿಕೆಗಳು

ಬದಲಾಯಿಸಿ

ನನಗೆ ನೃತ್ಯ ಮಾಡಲು, ಸಂಗೀತವನ್ನು ಕೇಳಲು ಮತ್ತು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಆಟವಾಡಲು ತುಂಬಾ ಇಷ್ಟ. ನಾನು ಭರತನಾಟ್ಯವನ್ನು ಕಲಿತು ಜೂನಿಯರ್ ಮುಗಿಸಿದ್ದೇನೆ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಸ್ವಲ್ಪ ನನ್ನ ಗುರುಗಳಾದ ಆನಂದರವರಿಂದ ಕಲಿತಿದ್ದೇನೆ. ನನ್ನಗೆ ಇಷ್ಟವಾದ ತಿಂಡಿ ಚಿತ್ರಾನ್ನ, ಚಪಾತಿ ಮತ್ತು ಪಲಾವ್. ಇಷ್ಟವಾದ ಸಿಹಿ ತಿಂಡಿ ಕಾಜು. ನನಗೆ ತುಂಬ ಹೃದಯಕ್ಕೆ ಹತ್ತಿರವಾದ ಸ್ನೇಹಿತರು ಅಭಿಲಾಶ್, ನೇತ್ರ, ನಿಖಿಲ, ಕಂಚನ್, ಇವರೊಂದಿಗೆ ಕಳೇಯುವ ಸಮಯ ಮನಸ್ಸಿಗೆ ಹಾಗು ವಿದ್ಯೆಗೆ ತುಂಬ ಅನುಕೂಲಕರವಾಗಿರುತ್ತದೆ. ನಾನು ಐದನೆ ತರಗತಿಯಲ್ಲಿ ಇದ್ದಾಗ ಸುಜಿತ್ ಎಂಬ ಗೆಳೆಯ ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತಿದ್ದ. ಒಬ್ಬರನ್ನು ಒಬ್ಬರು ಕಂಡರೆ ಆಗುತ್ತಿರಲಿಲ್ಲ. ನಾನು ಆ ವಯಸ್ಸಿನಲ್ಲಿ ತುಂಟಾಟವನ್ನು ಮಾಡುತ್ತಿದ್ದೆ. ಒಂದು ದಿನ ಅವನು ನಡೆದುಕೊಂಡು ಬರುತ್ತಿದ್ದಾಗ ನಾನು ಅವನಿಗೆ ನನ್ನ ಕಾಲನ್ನು ಅಡ್ಡ ಕೊಟ್ಟು ಅವನನ್ನು ಬೀಳಿಸಿದೆ ಮತ್ತು ನನ್ನ ಶಿಕ್ಶಕಿ ನನ್ನನ್ನು ಚೆನ್ನಾಗಿ ಹೊಡೆದು ಮತ್ತು ಬೈದು ಕಳಿಸಿದರು. ಅವನಿಗೆ ತುಂಬ ಪೆಟ್ಟಾಗಿತ್ತು. ನನಗೆ ಒಂದು ಕಡೆ ಅಳು ಮತ್ತೊಂದು ಕಡೆ ನಗು. ನನಗೆ ಇಷ್ಟವಾದ ಆಟ ಕಬ್ಬಡಿ ಮತ್ತು ಥ್ರೊಬಾಲ್. ನನಗೆ ಇಷ್ಟವಾದ ಹಬ್ಬ ದಸರಾ. ನಮ್ಮ ಮನೆಯಲ್ಲಿ ದಸರಾ ಜೋರು ಮತ್ತು ನನಗೆ ದಸರಾ ಹಬ್ಬ ತುಂಬಾ ಇಷ್ಟ ಏಕೆಂದರೆ ಆ ದಿನ ತುಂಬ ಸಿಹಿ ತಿಂಡಿಗಳನ್ನು ತಿನ್ನಬಹುದು ಮತ್ತು ಎಲ್ಲಾ ವಸ್ತುಗಳಿಗೆ ಅಲಂಕಾರ ಮಾಡಿ ಅದಕ್ಕೆ ಪೂಜೆ ಮಾಡುವುದು ವಿಶೇಷ.

ನಾನು ನನ್ನ ಚಿಕ್ಕ ವಯಸ್ಸಿನಿಂದ ಡಾಕ್ಟರ್ ಆಗುವ ಆಸೆ ಮತ್ತು ನಾನು ಅದನ್ನು ಸಾದಿಸಬೇಕೆಂಬುವ ಗುರಿಯಾಗಿತ್ತು. ಆದರೆ ನನ್ನ ಅಂಕಗಳು ತುಂಬ ಬಂದಿದ್ದರಿಂದ ನಾನು ಬಿ.ಎಸ್.ಸಿ ತೆಗೆದುಕೊಂಡಿದ್ದೇನೆ.ನಾನು ಮುಂದಕ್ಕೆ ಏನಾಗುತ್ತೇನೋ ಎಂದು ನನಗೆ ತಿಳಿದಿಲ್ಲ ಮತ್ತು ನನ್ನ ಗುರಿ ಯಾವುದೆಂಬುದು ನನಗೆ ತಿಳಿದಿಲ್ಲ.ಮೊದಲಿಂದಲು ಡಾಕ್ಟರ್ ಆಗುವ ಆಸೆ ಆದರೆ ಅದು ಸಾದ್ಯವಾಗಿಲ್ಲ. ಕಷ್ಟ ಪಟ್ಟರೆ ಸುಖವುಂಟು ಎಂಬ ಗಾದೆಯ ಪ್ರಕಾರ ನಾನು ಸ್ವಲ್ಪ ಕಷ್ಟ ಪಟ್ಟು ಸುಖದಿಂದ ಓದಿದ್ದರೆ ಡಾಕ್ಟರ್ ಓದುವ ಅವಕಾಶ ಸಿಗುತಿತ್ತು. ನನಗೆ ಆ ಗಾದೆಯ ಅರ್ಥ ತಿಳಿದಿದೆ. ಕಷ್ಟ ಪಟ್ಟರೆ ಮಾತ್ರ ಮುಂದಕ್ಕೆ ನಾವು ಏನು ಸಾದಿಸಬೇಕು ಅನ್ನುವುದನ್ನು ಸದಿಸಬಹುದು. 'ಛಲ, ತಾಳ್ಮೆ, ಶ್ರದ್ದೆ, ಗುರಿ ಇರುವವನು ಎಂದಿಗು ಸೋಲುವುದಿಲ್ಲ.'

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sushma sai