ಆರ್.ಬಿ.ಐ.

[]ಕೇಂದ್ರ ಬ್ಯಾಂಕಿನ ಕಾರ್ಯಗಳು

ಬದಲಾಯಿಸಿ

ದೇಶದ ಅಗ್ರಗಣ್ಯ ಬ್ಯಾಂಕಾದ ಕೇಂದ್ರ ಬ್ಯಾಂಕ್ ಹಲವಾರ್ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವುಗಳ ವಿವರ ಮುಂದಿನಂತಿದೆ.

ನೋಟುಗಳ ಮುದ್ರಣ ಮತ್ತು ಚಲಾವಣೆ

ಬದಲಾಯಿಸಿ

ನೋಟುಗಳ ಮುದ್ರಣ ಮತ್ತು ಚಲಾವಣೆಯ ಅಧಿಕಾರ ಕೇಂದ್ರ ಬ್ಯಾಂಕಿನ ಏಕಸ್ವಾಮ್ಯ ಅಧಿಕಾರವಾಗಿರುತ್ತದೆ. ಅದು ದೇಶದಲ್ಲಿನ ಅಗತ್ಯತೆಗಳಿಗನುಗುಣವಾಗಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಾರುವ ಪರಮಾಧಿಕಾರವನ್ನು ಹೊಂದಿರುತ್ತದೆ. ಬೇರೆ ಯಾವ ಬ್ಯಾಂಕಿಗು ಈ ಅಧಿಕಾರವಿರುವುದಿಲ್ಲ. ಅದುದ್ದರಿಂದ ಹಣದ ಪೂರೈಕೆಯ ಮೂರ್ಣ ಜವಬ್ದಾರಿ ಅದರದ್ದಾಗಿರುತ್ತದೆ. ಕೇಂದ್ರ ಬ್ಯಾಂಕ್ ಮುದ್ರಿಸಿ ಚಲಾವಣೆಗೆ ತರುವ ನೋಟುಗಳನ್ನು ದೇಶದಾದ್ಯಂತ ಅಪರಿಮಿತ ಗೌರವ ಹಣವನ್ನಾಗಲಿ ಪರಿಗಣಿಸಲಾಗುತ್ತದೆ. ನೋಟೂಗಳನ್ನು ಮುದ್ರಿಸಿ ಚಲಾವಣೆಗೆ ತರುವಾಗ ಕೇಂದ್ರ ಬ್ಯಾಂಕ್ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳು ಕೆಳಗಿನಂತಿವೆ. ೧:ಅದು ಚಿನ್ನ,ಬೆಳ್ಳಿ ಅಥವಾ ವಿದೇಶ ವಿನಿಮಯ ಅಥವಾ ಇತರ ಭದ್ರತೆಗಳು ಆಧಾರದಲ್ಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರಬೇಕು. ೨:ಅದು ಏಕರೂಪತೆ ಸ್ಥಿತಿಸ್ಥಾಪಕತೆ ಮತ್ತು ಸುರಕ್ಷತೆ ತತ್ವಗಳಿಗೆ ಬದ್ದವಾಗಿ ನೋಟುಗಳನ್ನು ಚಲಾವಣೆಗೆ ತರಬೇಕು. ೩:ಹಣಕಾಸು ವ್ಯವಸ್ಥೆಯಲ್ಲಿ ಸ್ಥಿಮಿತತೆ ಸಾಧಿಸುವುದು ಮತ್ತು ಸಾರ್ವಜನಿಕರಲ್ಲಿ ನಂಬಿಕೆಗೆ ಸಾಧಿಸುವುದು ಅದರ ನೋಟು ಚಲಾವಣೆಯ ಗುರಿಯಾಗಿರಬೇಕು. ೪:ಆರ್ಥಿಕತೆಯ ಅಗತ್ಯಕತೆಗಳನ್ನು ಮನಗೊಂಡು ಅವಶ್ಯಕತೆಗೆ ತಕ್ಕಂತೆ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರಬೇಕು. ಕೇಂದ್ರ ಬ್ಯಾಂಕ್ ಮತ್ತು ನೋಟು ಚಲಾವಣೆಯ ಅಧಿಕಾರ ಒಂದಿರುವುದರಿಂದ ಹಲವಾರು ಅನುಕೂಲಗಳು ಲಭ್ಯವಾಗುತ್ತವೆ. ಅವುಗಳೆಂದರೆ, ನೋಟುಗಳಲ್ಲಿ ಏಕರೂಪತೆ ಇರುತ್ತದೆ, ನೋಟುಗಳಿಗೆ ವಿಶಿಷ್ಟ ಪತಿಷ್ಟೆ ಮತ್ತು ಗೌರವಗಳು ಲಭ್ಯವಾಗುತ್ತವೆ. ಜನರಲ್ಲಿ ಭರವಸೆ ಮೂಡುತ್ತದೆ.

ಸರ್ಕಾರದ ಬ್ಯಾಂಕ್

ಬದಲಾಯಿಸಿ
ಕೇಂದ್ರ ಬ್ಯಾಂಕ್ ಸರ್ಕಾರದ ಪ್ರತಿನಿಧಿ, ಸಲಹೆಗಾರ ಮತ್ತು ಬ್ಯಾಂಕ್ ಆಗಿ ಕೆಲಸವನ್ನು ಮಾಡುತ್ತದೆ. ಅದು ಸರ್ಕಾರದ ಬ್ಯಾಂಕ್ ಆಗಿ ಮತ್ತು ಪ್ರತಿನಿಧಿಯಾಗಿ ಸರ್ಕಾರದ ಹಣಕಾಸಿನ ವ್ಯವಹಾರದಲ್ಲಿ ಎಲ್ಲಾ ಲೆಕ್ಕ ಪತ್ರಗಳನ್ನು ನೀಡುತ್ತದೆ. ಸರ್ಕಾರದ ಪರವಾಗಿ ಹಣವನ್ನು ಸ್ವೀಕರಿಸುತ್ತದೆ, ಪಾವತಿಗಳನ್ನು ಮಾಡುವುದು, ಸರ್ಕಾರಕ್ಕೆ ವಿಷಯ ಸಂದರ್ಭಗಳಲ್ಲಿ ಸಲಹೆ ನೀಡುವುದು, ತೆರಿಗೆಗಳನ್ನು ಕಟ್ಟಿಸಿಕೊಳ್ಳುವುದು ಮುಂತಾದ ಕೆಲಸಗಳನ್ನು ಮಾಡುತ್ತದೆ.

ಬ್ಯಾಂಕರ್ ಗಳ ಬ್ಯಾಂಕ್

ಬದಲಾಯಿಸಿ

[]ಕೇಂದ್ರ ಬ್ಯಾಂಕ್ ಬೇರೆಯೆಲ್ಲಾ ಬ್ಯಾಂಕ್ ಗಳ ಬ್ಯಾಂಕ್ ಆಗಿ ಕೆಲಸ ಮಾಡುತ್ತದೆ. ಅದು ಎಲ್ಲಾ ಬ್ಯಾಂಕ್ ಳಿಗೆ ಯಜಮಾನದಂತಿರುತ್ತದೆ. ಕೇಂದ್ರ ಬ್ಯಾಂಕಿನ ನಿರ್ದೇಶನಗಳನ್ನು ಎಲ್ಲಾ ಬ್ಯಾಂಕ್ ಗಳು ಚಾಚು ತಪ್ಪದೇ ಪಾಲಿಸಬೇಕು. ಇಲ್ಲವಾದಲ್ಲಿ ಹಂತ ಬ್ಯಾಂಕುಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಕೇಂದ್ರ ಬ್ಯಾಂಕ್ ಹೊಂದಿರುತ್ತದೆ.

ವಾಣಿಜ್ಯ ಬ್ಯಾಂಕ್ ಗಳ ನಗದು ಮೀಸಲಿನ ಪಾಲಕ

ಬದಲಾಯಿಸಿ

ವಾಣಿಜ್ಯ ಬ್ಯಾಂಕುಗಳನ್ನು ಕಾನೂನು ಪ್ರಕಾರ ತನ್ನಲ್ಲಿರುವ ಒಟ್ಟು ಠೇವಣಿಯ ಹಣದ ಒಂದು ನಿರ್ದಿಷ್ಟ ಭಾಗವನ್ನು ಕೇಂದ್ರ ಬ್ಯಾಂಕಿನಲ್ಲಿಡಬೇಕಾಗುತ್ತದೆ. ಈ ನಗದು ಮೀಸಲನ್ನು ಕೇಂದ್ರ ಬ್ಯಾಂಕ್ ಪರಿಪಾಲಿಸಿಕೊಂಡು ಬರುತ್ತದೆ.

ಅಂತಿಮ ಋಣದಾತ

ಬದಲಾಯಿಸಿ

ಕೇಂದ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಗಳಿಗೆ ಅಂತಿಮ ಋಣದಾತ ಕೆಲಸ ಮಾಡುತ್ತದೆ. ವಾಣಿಜ್ಯ ಬ್ಯಾಂಕಿನ ಹಣಕಾಸಿನ ತೊಂದೆರೆ ಅನುಭವಿಸುತ್ತಿರುವ ಕೇಂದ್ರ ಬ್ಯಾಂಕ್ ಸಾಲವನ್ನು ನೀಡಲು ಮುಂದಾಗುತ್ತದೆ.

ವಿದೇಶಿ ವಿನಿಮಯದ ಪಾಲಕ

ಬದಲಾಯಿಸಿ
ದೇಶದಲ್ಲಿನ ಅಮುಲ್ಯವಾದ ಚಿನ್ನ, ಬೆಳ್ಳಿ ಮತ್ತು ವಿದೇಶಿ ಹಣವನ್ನು ಸುರಕ್ಷಿತವಾಗಿ ಕಾಪಾಡುವ ಹೊಣೆ ಕೇಂದ್ರ ಬ್ಯಾಂಕಿನದ್ದಾಗಿರುತ್ತದೆ. ವಿನಿಮಯ ದರವನ್ನು ನಿರ್ದರಿಸುವುದು, ವಿದೇಶಿ ವಿನಿಮಯದ ಪೂರೈಕೆ, ಸರ್ಕಾರ ವಿನಿಮಯ ನಿಯಂತ್ರಣ ಮುಂತಾದ ವಿದೇಶಿ  ವಿನಿಮಯ ಸಂಬಂಧಿ ಕಾರ್ಯಗಳನ್ನು ನಿರ್ವಹಿಸುವುದು ಕೇಂದ್ರ ಬ್ಯಾಂಕಿನ ಜವಬ್ದಾರಿಯಾಗಿರುತ್ತದೆ. 

ಸಾಲ ನಿಯಂತ್ರಣ

ಬದಲಾಯಿಸಿ

ವಾಣಿಜ ಬ್ಯಾಂಕ್ ಗಳು ನಿರ್ವಹಿಸುವ ಸಾಲ ಅಥವಾ ಪತ್ತನ್ನು ನಿಯಂತ್ರದಲ್ಲಿರಿಸುವುದು ಕೇಂದ್ರ ಬ್ಯಾಂಕಿನ ಬಹು ಮುಖ್ಯವಾದ ಕಾರ್ಯವಾಗಿದೆ. ವಾಣಿಜ್ಯ ಬ್ಯಾಂಕ್ ಗಳು ನಿರ್ವಹಿಸುವ ಸಾಲಗಳು ಆರ್ಥಿಕ ವ್ಯವಸ್ಥೆಯ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಸಾಲದ ಪ್ರಮಾಣ ಹೆಚ್ಚಾದಾಗ ಅಥವಾ ಕಡಿಮೆಯಾದಾಗ ನಮ್ಮ ಸಮಾಜದಲ್ಲಿ ದುಷ್ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಅದ್ದರಿಂದ ಕೇಮ್ದ್ರ ಬ್ಯಾಂಕ್ ಸಾಲ ನಿಯಂತ್ರಣವನ್ನು ಅಂದಿನಂತೆಯೇ ನಿಯಂತ್ರಿಸುತ್ತದೆ.

ಉಲ್ಲೇಖ

ಬದಲಾಯಿಸಿ
  1. https://www.rbi.org.in/
  2. http://www.yourarticlelibrary.com/economics/7-major-functions-of-the-reserve-bank-of-india/2764/