ಬೆಳಗಾವಿ ಜಿಲ್ಲೆಯ ಕಲಾವಿದರು

ಬದಲಾಯಿಸಿ

ವಿಠ್ಟಲ ಪೋತದಾರ

ಬದಲಾಯಿಸಿ

ಕಳೆದ ಕೆಲವು ವರುಷಗಳ ಹಿಂದಷ್ಟೆ ನಮ್ಮನ್ನಗಲಿದ ವಿಠ್ಟಲ ಪೋತದಾರ ಚಿಕ್ಕೋಡಿ ತಾಲೂಕಿನ ಸದಲಗಾದವರು. ಎಂಬತ್ತರ ದಶಕದಲ್ಲಿ ಅವರನ್ನು ಕಂಡಿದ್ದೆ. ಆಗಲೆ ಅವರಿಗೆ ಅಂದಾಜು ಎಪ್ಪತ್ತರಷ್ಟು ಆಯಸ್ಸು. ತಮ್ಮದೇ ವಿಶಿಷ್ಟ ಪ್ಯಾಲೇಟ್ಟಿನಲ್ಲಿ ಪೋರ್ಟ್ರೇಟ್ ಬರೆಯುತ್ತಿದ್ದರು. ಅಚ್ಚರಿಯೆಂದರೆ ಆಗವರು ಚಿತ್ರಕಲೆಯ ರಚಿಸುವಾಗ ಕನ್ನಡಕ ಬಳಸುತ್ತಿರಲಿಲ್ಲ. ಚಿತ್ರಕಲೆಯ ಜತೆಗೆ ಅವರಿಗೆ ಸಂಗೀತದ ಗೀಳಿತ್ತು. ತಬಲಾ ಮತ್ತು ತಂತಿವಾದ್ಯ ಪ್ರವೀಣರು ಅದಕ್ಕಾಗಿ ಸರಕಾರದ ಮಾಶಾಸನ ಸಿಗುತ್ತಿತ್ತು ಎಂದು ಹೇಳುತ್ತಾರೆ. ಅವರ ಭಾವಚಿತ್ರ ರಚನೆ ವಿಧಾನವನ್ನು ಅಂದು ಗಮನಿಸಿದ್ದು ಇಂದಿಗೂ ನಮ್ಮಲ್ಲಿ ಹಸಿರಾಗಿ ಉಳಿದಿದೆ. ದುಂಡಗಿನ ಸೇಬಲ್ ಹೇರ್ ಬ್ರಶ್ ಇಂದ ಮುಖದ ನೆರಳು ಬೆಳಕನ್ನು ಚುಕ್ಕೆ ಚಿತ್ರದ ತಂತ್ರದಂತೆ ಪುಟ್ಟ ಪುಟ್ಟ ಹೊಡೆತ ನೀಡುತ್ತಿದ್ದರು. ಅದರಿಂದ ಟೆಕ್ಸ್ ಚರ್ನಲ್ಲಿ ವಿಶಿಷ್ಟ ರೂಪು ಮೂಡುತ್ತಿತ್ತು.

ನಿಪ್ಪಾಣಿಯ ಅಪ್ಪಾಸಾಹೇಬ

ಬದಲಾಯಿಸಿ

ನಿಪ್ಪಾಣಿಯ ಅಪ್ಪಾಸಾಹೇಬ ಕಾಡಾಪುರಕರ ಕಲಾವಿದ ಹಾಗು ಲೋಹಶಿಲ್ಪಿ ಕಲೆ ಮತ್ತು ಶಿಲ್ಪಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದ ಇವರ ಕೃತಿಗಳು ಸಾಂಪ್ರದಾಯಿಕ ನೆಲೆಯವು. ತಮ್ಮದೇ ಆಧ್ಯಾತ್ಮ ಆಲೋಚನೆಗಳನ್ನು ತೈಲಕೃತಿಗಳಲ್ಲಿ ರಚಿಸಿದ ಅಪ್ಪಾ ಸಾಹೇಬರ 'ಆಕಾರ ಮಹಾನ್' ಎಂಬ ಕಲಾಸಂಗ್ರಹದ ಪುಸ್ತಕ ಪ್ರಕಟಿಸಿದ್ದಾರೆ. ಅದರಲ್ಲಿ ಅವರ ಕೆಲ ಕಲಾಕೃತಿಗಳಿವೆ. ಅಪ್ಪಾ ಸಾಹೇಬರ ಜಲವರ್ಣದಲ್ಲಿಯ ವಿಶ್ವಕರ್ಮ ವರ್ಣಚಿತ್ರಗಳು ನೈಜತೆ ರೂಪದಲ್ಲಿವೆ ಬಣ್ಣಗಳ ಬಳಕೆಯ ಜಾಣ್ಮೆ ಕುಶಲತೆ ಅವರ ಪ್ರಧಾನ ಶೈಲಿ. ಅದರಂತೆ ಕಾಳುಗಳಿಂದ, ಸಿಪ್ಪೆಗಳಿಂದ ಕಲಾಕೃತಿಯನ್ನು ರಚಿಸುವ ಕೌಶಲ್ಯ ಅವರಿಗಿದೆ. ಕೆಲ ಪೋರ್ಟ್ರೇಟ್ ಗಳಲ್ಲಿಯ ಬಣ್ಣ ಸಿಹಿಯಂತೆ ಭಾಸವಾಗುತ್ತದೆ. ಬೆಳ್ಳಿಯ ವಿಗ್ರಹ, ಹಿತ್ತಾಳೆ ಬಳಸಿ ನಿರ್ಮಿಸಿದ ವಿನ್ಯಾಸದ ಸಿಂಹಾಸನ, ಬೆಳ್ಳಿ ಕಿರೀಟ, ಪರಶುಗಳು ಲೋಹಶಿಲ್ಪ ಕೃತಿಗಳಲ್ಲಿ ಪ್ರಮುಖವಾದವು. ರೇಖೆ ಮತ್ತು ಬಣ್ಣಗಳ ಪ್ರಯೋಗದಲ್ಲಿನ ನೈಪುಣ್ಯತೆ ಅವರ ಕೃತಿಗಳಿಗೆ ಚೈತನ್ಯ ತರುತ್ತದೆ. ಎಪ್ಪತ್ತು ದಾಟಿದ ಅಪ್ಪಾ ಸಾಹೇಬ ಕಾಡಪುರಕರ ಇಂದಿಗೂ ಕಲಾಕೃತಿ ರಚಿಸುವ ಉತ್ಸಾಹಿ ಹಿರಿಯ ಕಲಾವಿದರು. ಅವರ ಕೃತಿಗಳು ಅನೇಕ ಕಲಾಪ್ರೇಮಿಗಳ ಸಂಗ್ರಹದಲ್ಲಿದೆ.

ಬಿ.ಕೆ.ಹುಬಳಿ

ಬದಲಾಯಿಸಿ

ಎಂಬತ್ತರ ಹರೆಯದ ಬಿ.ಕೆ.ಹುಬಳಿ ವಾಸ್ತವವಾದಿ ಮತ್ತು ಅಕೆಡೆಮಿಕ್ ನೆಲೆಯ ಕಲಾವಿದರು. ಬೆಳಗಾವಿಯ ಶಹಾಪುರ ನಿವಾಸಿ. ಹುಬಳಿ ಜಲವರ್ಣ ತೈಲ ಮಾಧ್ಯಮಗಳಲ್ಲಿ ಚಿತ್ರಕೃತಿಗಳನ್ನು ಸೃಜಿಸಿದ್ದಾರೆ. ಅವರ ಕಲಾಭಿವ್ಯಕ್ತಿ ಮತ್ತು ಮನಸು ಸ್ತ್ರೀಯರ ಚೆಲುವನ್ನು ಗ್ರಹಿಸಿದೆ. ಅವರ ಪೆನ್ಸಿಲ್ ನ ರೇಖಾ ಚಿತ್ರಗಳು ಜಲವರ್ಣ ಮತ್ತು ತೈಲವರ್ಣ ರಚನೆಗಳಲ್ಲಿ ಸ್ತ್ರೀ ಸೌಂದರ್ಯ ಮತ್ತು ಭಿನ್ನಾಣ ಮಡುಗಟ್ಟಿದೆ. ವಿಧ್ಯಾರ್ಥಿ ಆಗಿದ್ದಾಗ ಆರ್.ಬಿ.ಪವಾರರ ಜಲವರ್ಣ ಬಳಕೆಯ ಮಾರ್ಗದರ್ಶನ; ಮುಂಬೈನ ಜೆ.ಜೆ. ಕಲಾಶಾಲೆಯ ವ್ಯಾಸಂಗ ಇಂಗ್ಲೀಷ್ ಶೈಲಿಯ ಚಿತ್ರಗಳು ಅವರ ಕೃತಿ ರಚನೆಯಲ್ಲಿ ನೆರವಿಗಿವೆ. ಮಹಿಳೆಯ ವಿವಿಧ ಭಂಗಿಗಳಲ್ಲಿ ಅವಳ ಸ್ವಭಾವವನ್ನು ಕೃತಿಗೆ ತಂದುಕೊಳ್ಳುತ್ತಾರೆ. ಚೆಲುವೆಯ ಲಜ್ಜೆ, ಪ್ರೇಮ,ಯೌವನ , ನಯ ನಾಜೂಕುಹಗಳನ್ನು ಸಮರ್ಥವಾಗಿ ತಿಳಿಸುತ್ತಾರೆ. ಒಂದೆಡೆ ಮಹಿಳೆ ಕೇಂದ್ರ ವ್ಯಕ್ತಿಯೆನಿಸಿದರೆ ಮತ್ತೊಂದೆಡೆ ಜಲವರ್ಣದಲ್ಲಿ ಅರಳಿದ ನಿಸರ್ಗ ಚಿತ್ರಗಳು ಮನಸೆಳೆಯುತ್ತವೆ.ಅಸಂಖ್ಹ್ಯಾತ ರೇಖಾ ಚಿತ್ರಗಳು ಅವರ ಬಳಿಯಿವೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ಥಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಿ.ಕೆ.ಹುಬಳಿಯವರು ಇತ್ತೀಚಿಗೆ ಕೃತಿರಚನೆಯನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಕಣ್ಣಿನ ತೊಂದರೆಯಿಂದ ಕಾಣುವುದು ದುಸ್ತರವಾಗಿದೆ.ಅವರ ಕಲಾ ಕೃತಿಗಳ ಪ್ರದರ್ಶನ ಈಚಿಗಷ್ಟೆ ಮುಂಬೈನಲ್ಲಿ ಜರುಗಿತ್ತು.

ಕೆ.ಬಿ.ಕುಲಕರ್ಣಿ

ಬದಲಾಯಿಸಿ

ಇವರ ಸಮಕಾಲೀನರದ ಕೆ.ಬಿ.ಕುಲಕರ್ಣಿಯವರ ಕೃತಿಗಳ ಮುಖ್ಯ ವಸ್ಥು ಮಹಿಳೇಯೇ. ಜೆ.ಜೆ.ಪರಂಪರೆಯ ನೆನಪನ್ನು ಮರುಕಳಿಸುವ ಆ ತಲೆಮಾರಿನ ಕಲಾವಿದರ ಅಭಿವ್ಯಕ್ತಿಗೆ ಹತ್ತಿರವೆನಿಸುವ ಚಿತ್ರಕೃತಿಗಳು. ಮಹಿಳೆಯ ವಿರಾಮದ ಕ್ಷಣಗಳನ್ನು ಚಿತ್ರಿಸುವ ವಾಸ್ತವ ನೆಲೆಯ ಕೃತಿಗಳಿರಲಿ , ನಿಸರ್ಗ ರಮ್ಯತೆಯ ಜಲವರ್ಣ ಮಿಶ್ರ ಮಾಧ್ಯಮದ ಚಿತ್ರಗಳಿರಲಿ ;ಕುಲಕರ್ಣಿಯವರ ರಚನೆಯ ವಿಧಾನದ ಕ್ರಮ ಆಕರ್ಷಣೀಯವಾದುದು. ಬಣ್ಣಗಳು ಸವಿಭಾವ ಹುಟ್ಟಿಸುವಂಥವು.

ಕುಸನೂರು

ಬದಲಾಯಿಸಿ

ಅಸಂಗತ ನಾಟಕ,ಹೈಕು,ಗಜಲ್ ಮತ್ತು ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಸಿರಿವಂತಗೊಳಿಸಿದ ಕುಸನೂರರು ಚಿತ್ರಕಲೆಯ ಗಂಭೀರ ಓದುಗರು, ಚಿಂತಕರು ಜೊತೆಗೆ ಕಲಾವಿದರು ಆಗಿದ್ದಾರೆ. ಬಹಳಷ್ಟು ಜನರಿಗೆ ಇವರು ಕಲಾವಿದರೆಂಬುದು ತಿಳಿದಿಲ್ಲ. ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಅವರ ಕೃತಿಗಳ ಪ್ರದರ್ಶನ ನಡೆದಿದೆ. ದೆಹಲಿಯಲ್ಲಿ ಜರುಗಿದ ೧೦ನೇಯ ರಾಷ್ಟ್ರೀಯ ಕಲಾಮೇಳದಲ್ಲಿ ಸಮೂಹ ಪ್ರದರ್ಶನ ಬೆಳಗಾವಿಯಲ್ಲಿ ಸಪ್ತರಂಗದ ಆಶ್ರಯದಲ್ಲಿ ನಡೆದ ಶಿಬಿರ.ಗುಂಪು ಪುರದರ್ಶನದಲ್ಲಿ ಕುಸನೂರರು ಕೃತಿಗಳನ್ನು ಪ್ರದರ್ಶಿಸಿದ್ದಾರೆ. ಇವರು ಜಲವರ್ಣ ಮತ್ತು ಆಕ್ರಿಲಿಕ್ ಮಾಧ್ಯಮಗಳಲ್ಲಿ ಕಾಗದದ ಮೇಲೆ ತಮ್ಮ ಆಲೋಚನೆಗಳಾನ್ನು ಅಭಿವ್ಯಕ್ತಿಸುತ್ತ ಬಂದವರು. ಇವರ ಪ್ರಕಾರ ಬಣ್ಣಗಳಲ್ಲಿ ಬಿಚ್ಚಿಕೊಳ್ಳುವ ಕೃತಿ ವಿಶಿಷ್ಟ.

ಎಂ.ಆರ್.ಬಾಳಿಕಾಯಿ

ಬದಲಾಯಿಸಿ

ಇವರು ಹುಕ್ಕೇರಿ ತಾಲುಕಿನ ಹೆಬ್ಬಾಳ ಗ್ರಾಮದ ಕಲಾಶಿಕ್ಷಕ ಹಾಗು ಕಲಾವಿದರು ಆಗಿದ್ದರೆ. ಸಧ್ಯ ಧಾರವಾಡದಲ್ಲಿ ನೆಲೆಸಿರುವ ಇವರು ಚಿತ್ರ ರಚನೆ, ಚಿತ್ರಕಲೆಯ ಶಿಕ್ಷಣ ನೀಡುವ ಮೂಲಕ ಕೆಲವು ಕಲಾವಿದರನ್ನು ಹುಟ್ಟುಹಾಕಿದ್ದರೆ.

ಎಸ್.ಪ್ರಹ್ಲ್ಲಾದ

ಬದಲಾಯಿಸಿ

ಇವರು ಬೆಳಗಾವಿಯವರು. ಈಗ ಬೆಂಗಳೂರು ನಿವಾಸಿಯಾದ ಇವರು ಸಿನಿಮಾ ಬ್ಯಾನರ್ ರಚಿಸುತಿದ್ದರು. ಅದೂ ಅಲ್ಲದೆ ಹಬ್ಬದಂದು ಬೃಹತ್ ರೂಪದ ಮಂಟಪಗಳಲ್ಲಿ ತಮ್ಮ ಗಮನ ಸೆಳೆವ ಚಿತ್ರ ರಚನೆಯಿಂದ ಪರಿಚಿತರು.ಬ್ಯ್ಯಾನರ್ ರಚನೆ ಪ್ರಭಾವದ ಅನುಭವ ಅವರ ಕ್ಯಾನ್ವಾಸಿನ ಕಲಾಭಿವ್ಯಕ್ತಿಯಲ್ಲಿ ಪ್ರಕಟಗೊಳ್ಳುತ್ತದೆ. ಸವಿಯಾದ ಆಕರ್ಷಕ ರೂಪದ ಬಣ್ಣಗಳು ಇವರ ಸ್ಥ್ಹಾಯಿ. ಹೀಗಾಗಿ ಇವರು ಕೃತಿಗಳ ಚಿಂತನೆಯ ಪರವಾಗದೆ ಸೌಂದರ್ಯ ಛಾಯೆಯಲ್ಲಿ ನಿಲ್ಲುವಂಥವು . ಇತ್ತೀಚಿಗೆ ಬೆಂಗಳೂರಿನಲ್ಲಿ ತಮ್ಮ ಕೃತಿಗಳ ಪ್ರದರ್ಶನ ನಡೆಸಿದ್ದಾರೆ.

ಈಶ್ವರ ಪತ್ತಾರ

ಬದಲಾಯಿಸಿ

ಇವರು ಗ್ರಾಮೀಣ ಪ್ರತಿಭೆ. ಗೋಕಾಕ ತಾಲುಕಿನ ಹಡಗಿನಾಹಾಳ ಗ್ರಾಮದ ಪತ್ತಾರಕಿ ವೃತ್ತಿಯ ಮನೆತನದಲ್ಲಿ ಜನಿಸಿದ ಈಶ್ವರ ದಾವಣಗೆರೆ ಫೈನ್ ಆರ್ಟ್ ಕಾಲೇಜಿನಲ್ಲಿ ಕಲಾ ವ್ಯಾಸಂಗ ಮುಗಿಸಿ ಬೆಂಗಳೂರು ಸೇರಿ ಅಲ್ಲಿಯೆ ನೆಲಸಿದರು. ಇಂಜನೀಯರುಗಳ ಪ್ಲ್ಲಾನ್ಗೆ ಇಲವೇಶನ್ ನೀಡುವ ವೃತಿಯ ಜೊತೆಗೆ ಕಲೆಯನ್ನು ಪ್ರವೃತಿಯಾಗಿಸಿಕೊಂಡವರು.ಆರಂಭದಲ್ಲಿ ನಿಸರ್ಗ ಚಿತ್ರ ಮತ್ತು ವಾಸ್ತವ ನೆಲೆಯ ಆಶಯ ಅಭಿವ್ಯಕ್ತಿಸಿದ ಈಶ್ವರ ಪತ್ತಾರರು ಅಮೂಲ್ಯ ಭೂದೃಶ್ಯಗಳನ್ನು ಮೈವಳಿಕೆಯ ಮೇಲೆ ಅಮೂರ್ತ ಗ್ರಹಿಕೆಗಳನ್ನು ಸೃಷ್ಟಿಸಿ ಕಲಾತ್ಮಕ ಕೃತಿಗಳನ್ನು ಪ್ರದರ್ಶಿಸಿದರು. ಸ್ಪೆಸ್ ಅನ್ನು ಶಕ್ತಿಯುತವಾಗಿ ಬಳಸಿ ದುಡಿಸಿಕೊಂಡರು. ಅಮೂರ್ತ ಹಳ್ಳಿ ,ಶಹರು, ನಿಸರ್ಗಗಳು ಅಮೂರ್ತದ ಆಹ್ಲ್ಲಾದ ನೀಡುವ ರೂಪಗಳಾಗಿ ಮನಮುಟ್ಟುವಂತಹು.ಇವರ ಕೃತಿಗಳಿಗೆ ಆದಿಮೂಲಂ,ರಾಮಕುಮಾರರ ಪ್ರೇರಣೆಯಿದೆ. ಮೈಸೂರಿನ ದಸರ ಪುರಸ್ಕಾರ (ಮೂರು ಬಾರಿ) ಮುಂಬೈನ ಆರ್ಟ್ ಸೊಸೈಟಿ ಪ್ರಶಸ್ತಿ ಚಿತ್ರಕಲಾ ಪರಿಷತ್ತಿನ ಪ್ರಶಸ್ತಿ ಮೂಖ್ಯವಾದವು.

ಹೀಗೆ ಬೆಳಗಾವಿಯು ಹಲವಾರು ಕಲಾ ಪ್ರತಿಬೆಗಳನ್ನು ಹೊಂದಿರುವ ಮಹಾನಗರವಾಗಿದೆ.