ಉದ್ಯಾನ ನಗರಿ ಎಂದು ಪ್ರಸಿದ್ಧವಾದ ನಗರ ಬೆಂಗಳೂರು.ಈಗ ಇದು ಸಿಲಿಕಾನ್ ಸಿಟಿ ಇಂತಹ ಮಹಾನ್ ನಗರದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ದಿನಾಂಕ ೮/೯/೨೦೦೦ ರಂದು ಒಂದು ಬ್ರಾಹ್ಮಣ ಕುಟುಂಬದಲ್ಲಿ ನನ್ನ ಜನನ. ಶ್ರೀಯುತ ಮಂಜುನಾಥ ಹಾಗೂ ಶ್ರೀಮತಿ ವೀಣಾ ಇವರ ದ್ವಿತೀಯ ಪುತ್ರನಾಗಿ ಜನಿಸಿದ ನನಗೆ ಒಬ್ಬ ಸಹೋದರ ನಿತೀಲ್ ಈಗ ಅವನು ಎಂ.ಬಿ.ಎ.ಶಿಕ್ಷಣವನ್ನು ಪಡೆದು ಖಾಸಗಿ ಕಂಪನಿ ಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ನನ್ನ ತಂದೆ ರಾಜ್ಯ ಸರ್ಕಾರದ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ತಾಯಿಯು ಖಾಸಗಿ ಶಾಲೆಯೋಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿರಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕುಟುಂಬ

ಬದಲಾಯಿಸಿ

ಅಲ್ಲದೇ ಭಾರತಾಂಬೆಯ ಮಗಳಂತಿರುವ ಕನ್ನಡ ತಾಯಿಯಾದ ಭುವನೇಶ್ವರಿಯ ನೆಲೆಯಲ್ಲಿ ಜನಿಸಿದ ನನೇಧನ್ಯ.ನನ್ನ ಬಾಲ್ಯ ಹಾಗೂ ವಿದ್ಯಾಭ್ಯಾಸ ಅಜ್ಜಿ,ತಾತನ ಮನೆಯಲ್ಲಿಯೆ ಸಾಗಿತು. ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವು ಕೋರಮಂಗಲದ ಲಾರೆನ್ಸ್ ಪ್ರೌಢಶಾಲೆಯಲ್ಲಿ

ಪ್ರಾಥಮಿಕ ಶಿಕ್ಷಣ

ಬದಲಾಯಿಸಿ

ನನ್ನ ಶಾಲಾ ದಿನಗಳಲ್ಲಿ ನಡೆದ ಕೆಲವು ಸವಿ ನೆನಪುಗಳನ್ನು ಮೆಲುಕು ಹಾಕಲು ಬಯಸುತ್ತೇನೆ. ನಾನು ಗುರುಗಳು ತರಗತಿಯಲ್ಲಿ ಹೇಳಿಕೊಟ್ಟ ಅಂದಿನ ಪಾಠಗಳನ್ನು ಅಂದೇ ಓದಿ ಪೂರ್ಣಗೊಳಿಸುತ್ತೀದ್ದೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ.ನನ್ನ ಗುರುಗಳು ಸದಾ ಪ್ರೋತ್ಸಾಹಿಸುತ್ತಿದ್ದರು. ಪ್ರೌಢಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಸತತ ಮೂರು ಭಾರಿ ಗೆಲುವನ್ನು ಸಾಧಿಸಿದೆ.ಮೊದಲ ಬಾರಿ ಆಯ್ಕೆಯಾದಗ ಸಾಂಸ್ಕೃತಿಕ ಮಂತ್ರಿಯಾದೆ,ಎರಡನೆ ಬಾರಿ ಸಂಪನ್ಮೋಲ ಮಂತ್ರಿಯಾಗಿ ಆಯ್ಕೆಯಾದೆ ಕೊನೆಯ ವರ್ಷದಲ್ಲಿ ಎಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಮತವನ್ನು ಪಡೆದು ಶಾಲೆಯ ಪ್ರಧಾನ ನಾಯಕನಾಗಿ ಆಯ್ಕೆಯಾದೆ. ಇದು ನನಗೆ ಹಾಗೂ ನನ್ನ ತಂದೆ, ತಾಯಿ, ಗುರುಗಳಿಗೆ ಹಾಗೂ ನನ್ನ ಕೆಲವು ಸ್ನೇಹಿತರಿಗೆ ಬಹಳ ಸಂತೋಷವಾಯಿತು. ನನ್ನ ಕುಟುಂಬದ ಎಲ್ಲಾ ಸದಸ್ಯರೂ ನೀನು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಬೇಕು ಎಂದು ಪ್ರೋತ್ಸಾಹಿಸುತ್ತಿದ್ದರು. ನನ್ನ ಸಹೋದರ ಗಣಿತದ ವಿಷಯದ ಬಗ್ಗೆ ಬಹಳ ಮನೆ ಮುಟ್ಟುವ ತನಕ ಬಿಡುತ್ತಿರಲಿಲ್ಲ ಒಂದಲ್ಲಾ ಎರಡಲ್ಲ ಹತ್ತಾರು ಬಾರಿ ಹೇಳಿ ಕೊಡುತ್ತಿದ್ದನು. ಇವರ ಪ್ರೋತ್ಸಾಹ ನನ್ನ ಮನಸ್ಸಿನಲ್ಲಿ ಆಗಾಧ ಪ್ರಮಾಣದಲ್ಲಿ ಪರಿಣಾಮ ಬೀರಿತು.ಅಂತೆಯೇ ನಾನು ಚೆನ್ನಾಗಿ ಓದಿ ಶೇಕಡಾ ತ್ತೋಂಭತ್ತಾರರಷ್ಟು (೯೬%) ಅಂಕಗಳನ್ನು ಪಡೆದು ಉತ್ತೀರ್ಣನಾದೆ.ಈ ಮಹಾನ್ ಸಾಧನೆಗೆ ನನ್ನ ತಂದೆ,ತಾಯಿ,ಗುರುಗಳ ಹಾಗೂ ದೇವರ ಆಶೀರ್ವಾದ. ನಾನು ಶೃಂಗೇರಿ[]ಶಾರದಾಂಬೆಯ ಹಾಗೂ ಶಿರಡಿ ಸಾಯಿಬಾಬಾನ ಭಕ್ತ.ನಾನು ಶಾರದಾಂಬೆಯ ಪಡೆಯಬೇಕು ಎಂದು ಮನಸ್ಸಿಗೆ ಬಂದೊಡನೆ ಹೋಗಿ ಬರುತ್ತೇನೆ.ಕಳೆದ ಹತ್ತು ವರ್ಷಗಳಿಂದ ಪ್ರತಿ ವರ್ಷ ಕುಟುಂಬ ಸದಸ್ಯರು ಶಿರಡಿ ಸಾಯಿಬಾಬಾನ ದರ್ಶನ ಪಡೆದು ಬರುತ್ತೇವೆ.ಜೊತೆಗೆ ಮಾರ್ಗ ಮಧ್ಯದಲ್ಲಿ ಸಿಗುವ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಗುರು ರಾಯರ ಆಶೀರ್ವಾದ ಪಡೆದು ಬರುತ್ತೇವೆ

ಹವ್ಯಾಸಗಳು

ಬದಲಾಯಿಸಿ

ನನ್ನ ಚಿಕ್ಕಮ್ಮನ ಮಗ ಶ್ರೇಯಸ್ಸು ಅವನಿಗೆ ಕ್ರಿಕೇಟ್ ಹುಚ್ಚು. ಅವನಂತೆ ನಾನು ಎರಡು ವರ್ಷ ಒಂದು [೧]ತರಬೇತಿ ಶಿಬಿರಕ್ಕೆ ದಾಖಲಾತಿಯಾದೆ ಹಾಗೂ ತರಬೇತಿ ಪಡೆದು ಅರ್ಧದಲ್ಲೇ ತರಬೇತಿ ಮೊಟಕುಗೊಳಿಸಿದೆ.ನಾನು ಪದವಿ ಪೂರ್ವ ಶಿಕ್ಷಣವು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಂದುವರೆಸಿದೆ ನಾನು ಸಿ.ಎ.ಎಂ.ಇ. ವಿಷಯವನು ಆಯ್ದುಕೊಂಡೆ.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ಎಂಭತ್ತೇಂಟುರಷ್ಟು(೮೮%) ಅಂಕಗಳನ್ನು ಪಡೆದು ಉತ್ತೀರ್ಣನಾದೆ.ಆಗ ನನ್ನ ತಂದೆ ನನಗೆ ಒಂದು ಲಕ್ಷದ ಮುವತ್ತು ಸಾವಿರದ ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದ್ದರು.ಇದ್ದಕ್ಕೆ ನನ್ನ ತಂದೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನಗೆ ಬಹಳ ದೂರ ವಾಹನ ಚಾಲನೆ ಮಾಡಬೇಕು ಎಂದು ಬಹಳಷ್ಟು ಆಸೆ ಇದೆ.ಹಾಗೂ ನನಗೆ ಡಿ ಜೆ ಆಗುವ ಕನಸು ಆದರೆ ಇದು ನನ್ನ ತಂದೆ ತಾಯಿಗಳಿಗೆ ಇಷ್ಟವಿಲ್ಲ. ಈಗ ನಾನು ಉನ್ನತ ಪದವಿ ಶಿಕ್ಷಣವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮುಂದುವರೆಸುತ್ತಿದ್ದೇನೆ. ಇದರ ನಂತರ ಸ್ವಂತ ಉದ್ಯೋಗ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ.ನನಗೆ ಮುಂದೆ ಒಂದು ದಿನ ಕೊಡಗು ಜಿಲ್ಲೆ ಇಲ್ಲ ಮಡಿಕೇರಿ[]ಯಲ್ಲಿಯಾಗಲಿ ಒಂದು ಕಾಫಿಯ ತೋಟದ ಮಾಲೀಕನಾಗ ಬೇಕು ನನ್ನ ತಂದೆ ತಾಯಿಗಳಿಗೆ ಆ ಸುಂದರ ಪರಿಸರದಲ್ಲಿ ಒಂದು ಮನೆ ಕಟ್ಟಿ ಕೊಡಬೇಕು ಎಂಬ ಆಸೆ.

ಉಲ್ಲೆಖಗಳು

ಬದಲಾಯಿಸಿ
  1. https://en.wikipedia.org/wiki/Sringeri
  2. https://en.wikipedia.org/wiki/Madikeri