--ಸುಹಾಸ್

ಕಾಂತತೆ

ಬದಲಾಯಿಸಿ

ಬಲರೇಖೆಗಳು

ಬದಲಾಯಿಸಿ

ಕಾಂತಕ್ಷೇತ್ರದ ವಿವಿಧ ಬಿಂದುಗಲ್ಲಿ ಉತ್ತರ ದ್ರುವವು ಅನುಭವಸುವ ಬಲದ ದಿಕ್ಕನ್ನು ಬಲರೇಖೆಯು ಸೂಚಿಸುತ್ತದೆ.ಬಲರೇಖೆಗಳನ್ನು ಪುಟ್ಟ ದಿಕ್ಸೂಚಿಯ ಸಹಾಯದಿಂದ ಕಾಂತಕ್ಷೇತ್ರದ ದಿಕ್ಕು ಮತ್ತು ತೀವ್ರತೆಯನ್ನು ತಿಳಿದುಕೊಳ್ಳಬಹುದು. ತುಂಬಾ ಹಿಂದಿನಿಂದಲಲೂ ಅಯಸ್ಕಾಂತದ ಬಲವು ಅಯಸ್ಕಾಂತದಿಂದ ಸ್ವಲ್ಪ ದೂರದವರೆಗೆ ಮಾತ್ರ ಪಸರಿಸಿರುತ್ತದೆ ಎಂದು ತಿಳಿದಿತ್ತು.ಖ್ಯಾತ ವಿಜ಼ಾನಿ ಮೈಕಲ್ ಫ್ಯಾರಡೇ ಕಾಂತೀಯ ಬಲಕ್ಷೇತ್ರ ಮತ್ತು ಕಾಂತೀಯ ರೇಖೆಗಳ ಬಗ್ಗೆ ವಿವರಿಸಿದ ಮೊದಲ ವಿಜ಼ಾನಿ.ಈ ವಿಚಾರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರ ಪರಿಣಮವಾಗಿ ಟೆಲಿಪೋನ್, ವಿದ್ಯುತ್ ದೀಪ, ರೇಡಿಯೋ ಮುಂತಾದ ಉಪಕರಣಗಳ ತಯಾರಿಕೆ ಸಾಧ್ಯವಾಯಿತು.ಯಾವುದೇ ಕಾಂತದಲ್ಲಿ ಆಕರ್ಷಣೆಯು ಬೇರೆ ಬೇರೆ ಪ್ರಮಾಣಗಳಲ್ಲಿರುತ್ತದೆ.ಧ್ರುವಗಳಲ್ಲಿ ಈ ಶಕ್ತಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ.ಆದ್ದರಿಂದ ಕಾಂತತ್ವವು ಒಂದು ಕಾಂತದಲ್ಲಿ ಒಂದೇ ಸಮಾನವಾಗಿ ಹರಡಿರುವುದಿಲ್ಲ ಏಂಬ ಅಂಶ ಸ್ಪಷ್ಟವಾಗಿದೆ.ಕಾಂತದೂಳಗೆ ಯಾವ ಬಿಂದುವಿನಲ್ಲಿ ಸರಾಸರಿ ಪ್ರಮಾಣದಲ್ಲಿ ಏಷ್ಟು ಪ್ರಮಾಣದ ಕಾಂತತ್ವವಿದೆ ಏಂಬುದನ್ನು ಸೂಚಿಸಲು 'ಕಾಂತೀಕರಣದ ತೀವ್ರತೆ'ಏಂಬ ಪದವನ್ನು ಬಳಸಲಾಗುತ್ತಿದೆ.ಒಂದು ದಂಡಕಾಂತವು ತನ್ನ ಉತ್ತರ ಧ್ರುವದ ಹತ್ತಿರ ಕಬ್ಬಿಣದ ಮೊಳೆಯೊಂದನ್ನು ಆಕರ್ಷಿಸುತ್ತದೆ ಏಂಬುದನ್ನು ನಾವು ಅರಿತಿದ್ದೇವೆ.ಎರಡನೇ ಮೊಳೆಯೊಂದನ್ನು ಮೊದಲನೆಯ ಮೊಳೆಯು ತಾನೇ ಒಂದು ಕಾಂತದಂತೆ ಆಕರ್ಷಿಸುತ್ತದೆ.ದಂಡಕಾಂತದ ಉತ್ತರ ಧ್ರುವವನ್ನು ಮೊಳೆಯಲ್ಲಿ ತನ್ನ ಹತ್ತಿರದ ತುದಿಯಲ್ಲಿ ದಕ್ಷಿಣ ಧ್ರುವವನ್ನು ದೂರದ ತುದಿಯಲ್ಲಿ ಉತ್ತರ ಧ್ರುವವನ್ನು ಪ್ರೇರಿಸುತ್ತದೆ.ಈ ಮೊಳೆಯಲ್ಲಿನ ಫ್ರೇರಿತ ಕಾಂತತ್ವ ಏರಡನೇ ಮೊಳೆಯಲ್ಲಿ ಕಾಂತತ್ವವನ್ನು ಪ್ರೇರಿಸುತ್ತದೆ.

ಒಂದ ಮಿದು ಕಬ್ಬಿಣದ ದಂಡವನ್ನು ಕಾಂತಕ್ಷೇತ್ರದಲ್ಲಿ ಸಮಾಂತರವಾಗಿ ಇಟ್ಟಾಗ ಕಾಂತೀಯ ಪ್ರೇರಣೆಯಿಂದ ಆ ದಂಡವು ಕಾಂತವಾಗಿ ಧ್ರುವಗಳನ್ನು ಹೊಂದುತ್ತದೆ.ದಂಡದೊಳಗೆ ಹಾಯುವ ಬಲರೇಖೆಗಳು ಬಾಹ್ಯಕ್ಷೇತ್ರದಷ್ಟೇ ಅಲ್ಲದೇ ಸ್ವಂತದ ಬಲರೇಖೆಗಳನ್ನೂ ಒಳಗೊಳ್ಲುವುದರಿಂದ ದಂಡದೊಳಗೆ ಹಾಯುವ ಬಲರೇಖೆಗಳ ಸಂಖ್ಯೆ ನಿಜವಾಗಿಯೂ ಹೆಚ್ಚಾಗುತ್ತದೆ.ಬಲರೇಖೆಗಳು ಯಾವಾಗಲೂ ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆಗೆ ಹರಿಯಬೇಕು.ಈ ರೇಖೆಗಳು ಅವಿಚ್ಛಿನ್ನವಾಗಿದ್ದು ಯಾವುದೇ ಪದಾರ್ಥದಲ್ಲದರೂ ಹರಿಯುತ್ತದೆ.ಸಾಮಾನ್ಯವಾಗಿ ಒಂದು ಪದಾರ್ಥದಲ್ಲಿ ಹರಿಯುವ ಕಾಂತೀಯ ರೇಖೆಗಳು, ಯಾವುದೇ ಕಾಂತಕ್ಷೇತ್ರತ್ರೆದಲ್ಲಾದರೂ ಪ್ರೇರಣಾರೇಖೆಗಳೇ ಆಗಿರುತ್ತದೆ. ಕೊಂಚ ತೀವ್ರತೆ ಹೊಂದಿರುವ ಬಲರೇಖೆಗಳು ಮನುಷ್ಯನ ಮೇಲೆ ಯಾವುದೇ ಪರಿಣಾಮವನ್ನು ಬಿರುವುದಿಲ್ಲ.

ಕಾಂತ ಧ್ರುವಗಳು

ಬದಲಾಯಿಸಿ

ನೈಸರ್ಗಿಕ ಕಾಂತ ಮತ್ತು ಕೃತಕ ಕಾಂತಗಳ ತುದಿಗಳನ್ನು 'ಧ್ರುವಗಳು' ಎಂದು ಕರೆಯುತ್ತಾರೆ.ದಂಡಕಾಂತವನ್ನು ಸಮತೋಲದಲ್ಲಿ ಇರುವನಂತೆ ತೂಗಿದಾಗ ಅದು ಸದಾ ಭೂಮಿಯ ಉತ್ತರ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ನೆಲೆಗೊಳ್ಳುತ್ತದೆ.ಮೊದಲನೆಯ ಕೊನೆಯನ್ನು ಉತ್ತರಾಭಿಮುಖ ಧ್ರುವವೆಂದೂ ಹೇಳುತ್ತೇನೆ.ಭೂಮಿ ಒಂದು ಬೃಹತ್ಕಾಂತವಾಗಿ ವರ್ತಿಸುವುದೇ ಇದಕ್ಕೆ ಕಾರಣ ಏಂದು ವಿಜ಼ಾನಿಗಳು ಹೇಳುತ್ತಾರೆ.ಕಾಂತಶಕ್ತಿ ಅತ್ಯಂತ ಹೆಚ್ಚಾಗಿರುವ ಭಾಗಗಳನ್ನು ಧ್ರುವಗಳೊಂದೂ ಶಕ್ತಿ ಇರದಿದ್ದ ಭಾಗಗಳನ್ನು ತಟಸ್ಥ ಭಾಗಗಳೆಂದು ಕರೆಯುತ್ತಾರೆ.ಮಹರಾಣಿ ಎಲಿಜಬೆತ್ ಆಳ್ವಿಕೆಯ ಕಾಲದಲ್ಲಿ ಕಾಂತವು ಎರಡು ಧ್ರುವಗಳನ್ನು ಹೊಂದಿದೆ ಎಂಬ ವಿಚಾರವನ್ನು ಪ್ರಕಟಿಸಲಾಯಿತು.ಆ ಎರಡು ಧ್ರುವಗಳು ಸ್ವಭಾವದಲ್ಲಿ ಒಂದಕ್ಕೊಂದು ವಿರುದ್ದವಾಗಿದ್ದು ಸಜಾತಿಯ ಧ್ರುವಗಳು ಅಪಕರ್ಷಿಸುತ್ತವೆ ಮತ್ತು ವಿಜಾತಿಯ ಧ್ರುವಗಳು ಆಕರ್ಷಿಸುತ್ತವೆ ಎಂದೂ ವಿಜ಼ಾನಿಗಳು ಪ್ರಕಟಿಸಿದರು ಎನ್ನಲಾಗಿದೆ.ಉತ್ತರ ಹಾಗೂ ದಕ್ಷಿಣ ಧ್ರುವವನ್ನು 'ಋಣಧ್ರುವ' ಎಂದೂ ಕರೆಯುವುದುಂಟು.ಒಂದು ಕಾಗದದ ಮೇಲೆ ಕಬ್ಬಿಣದ ಹುಡಿಯನ್ನು ಹಾಕಿ ಅದರ ಕೆಳಗೆ ಕಾಂತವನ್ನು ಆಡಿಸಿದಾಗ ಕಾಗದ ಮೇಲೆ ಕಾಂತರೇಖೆಗಳು ಹಬ್ಬುವ ರೀತಿಯನ್ನು ಪರಿಶೀಲಿಸಿದರೆ ಎರಡು ಧ್ರುವಗಳ ತುದಿಗೆ ಸಮೀಪವಾಗಿರುವ ಎರಡು ಬಿಂದುಗಳಿಂದ ಆ ರೇಖೆಗಳು ಹಬ್ಬಿರುವುದು ಕಾಣಿಸುತ್ತದೆ.ಅ ಪಟ್ಟಿಯಿಂದ ದೂರ ಸರಿದಂತೆ ಹಿಡಿಯುವ ಕಬ್ಬಿಣದ ಹುಡಿಯ ಪ್ರಮಾಣ ಕಾಣಿಸುತ್ತದೆ. ಆ ಕಾಂತ ಪ್ರವಾಹ ರೇಖೆಗಳ ಮೇಲೆ ದಕ್ಚಕ್ರಗಳನ್ನಿಟ್ಟರೆ ದಕ್ಷಿಣ ಧ್ರುವಗಳ ದಿಕ್ಕಿಗೆ ಸಮನಾಗಿಯೇ ನಿಲ್ಲುವುದು. ಕಬ್ಬಿಣ, ನಿಕ್ಕಲ್, ಕೋಬಾಲ್ಟ್ ಮೊದಲಾದ ಲೋಹಗಳ ಪಟ್ಟಿಯಲ್ಲಿ, ಅವುಗಳ ಅಂತರಿಕ ರಚನೆಯಲ್ಲಿ ಈ ಕಾಂತ ಶಕ್ತಿ ಸೇರಿಕೊಂಡಿದೆ. ಒಂದು ಉದ್ದನೆಯ ದಂಡಕಾಂತವನ್ನು ಎಷ್ಟು ತುಂಡುಗಳಾಗಿ ಮಾಡಿದರೂ ಅದರ ಒಂದೊಂದು ತುಂಡಿನಲ್ಲೂ ದಕ್ಷಿಣೋತ್ತರ ಧ್ರುವಗಳಿರುವುದನ್ನು ಅವುಗಳಲ್ಲಿ ಕಾಂತಶಕ್ತಿಯಿರುವುದನ್ನು ಕಂಡುಕೊಳ್ಳಲಾಗಿದೆ.

ಕಾ೦ತ ಕ್ಷೇತ್ರ

ಬದಲಾಯಿಸಿ

ಕಾ೦ತ ಕ್ಷೇತ್ರ ಅಥವಾ ಮ್ಯಾಗ್ನೆಟಿಕ್ ಫೀಲ್ಡ್ ಎಂದರೆ ಕಾಂತೀಯ ಕಾಯದ ಸುತ್ತ ಅಥವಾ ವಿದ್ಯುತ್ ಹರಿಯುವ ವಾಹಕದ ಸುತ್ತ ಮತ್ತು ಬೆಳಕಿನ ತರಂಗದಲ್ಲಿ ವಿದ್ಯುತ್ ಕ್ಷೇತ್ರದೊಂದಿಗೆ ಅಸ್ತಿತ್ವದಲ್ಲಿರುವ ಬಲಕ್ಷೇತ್ರ. ಈ ಕ್ಷೇತ್ರದಲ್ಲಿ ಚಲಿಸುವ ಅವಿಷ್ಟ ಕಣಗಳು ಬಲಕ್ಕೊಳಗಾಗಿರುತ್ತವೆ. ಒಂದು ಕಾಂತ ಅಥವಾ ಕಾಂತದ್ರುವದ ಸುತ್ತ ಅದರ ಪ್ರಭಾವವನ್ನು ಗುರುತಿಸಬಹುದಾದ ಹರವಿಗೆ ಕಾಂತಕ್ಷೇತ್ರವೆಂದು ಕರೆಯುತ್ತಾರೆ. ಒಂದು ಬಿಂದುವಿನಲ್ಲಿ ಒಂದು ಏಕಕ ಧ್ರುವವು ಬಲವನ್ನು ಅನುಭವಿಸಿದರೆ ಅದು ಬೇರಾವುದೋ ಕಾಂತಕ್ಷೇತ್ರದಲ್ಲಿದೆ ಎಂದು ಅರ್ಥವಾಗುವುದು. ಏಕಕ ಧ್ರುವವು ಅನುಭವಿಸುವ ಬಲವೇ ಬಿಂದುವಿನಲ್ಲಿ ಕಾಂತಕ್ಷೇತ್ರದ ತೀವ್ರತೆಯನ್ನು ಅಳೆಯುವುದು. ಬಲವು ಒಂದು ಡೈನ್ ಆದರೆ ಕಾಂತಕ್ಷೇತ್ರದ ತೀವ್ರತೆಯು ಒಂದು ಓರ್ಸ್ಟೆಡ್ ಆಗಿರುವುದು. ಡೆನ್ಮಾರ್ಕಿನ ಹಾನ್ಸ್ ಕ್ರಿಶ್ಚಿಯನ್ ಓರ್ಸ್ಟೆಡ್(೧೭೭೭-೧೮೧೫) ಎಂಬ ವಿಜ಼ಾನಿಯ ನೆನಪಿಗಾಗಿ ಕಾಂತಕ್ಷೇತ್ರದ ಮಾನವನ್ನು ಹೀಗೆ ಕರೆಯುತ್ತಾರೆ. ಕಾಂತಕ್ಷೇತ್ರದ ವಿವಿಧ ಬಿಂದುಗಳಲ್ಲಿ ಎಕಕ ಉತ್ತರ ಧ್ರುವವು ಅನುಭವಿಸುವ ಬಲದದಿಕ್ಕನ್ನು ಬಲರೇಖೆಯು ಸೂಚಿಸುತ್ತದೆ. ಕಾಂತಕ್ಷೇತ್ರವನ್ನಳೆಯಲು ಮತ್ತು ಧ್ರುವ ಸಾಮರ್ತ್ಯವನ್ನಳೆಯಲು ಕೂಲಂಬನ ನಿಯಮ ಉಪಯುಕ್ತವಾಗಿದೆ ಎಂದು ವಿಜ಼ಾನಿಗಳು ತಿಳಿಸಿದ್ದಾರೆ. ಒಂದು ಪ್ರಬಲ ಕಾಂತದ ಧ್ರುವಗಳ ಸಾಮರ್ಥ್ಯ ಬಹಳ ಹೆಚ್ಚಾಗಿರುತ್ತದೆ. ಯಾವುದೇ ಒಂದು ಕಾಂತದ ಎರಡು ಧ್ರುವಗಳ ಸಾಮರ್ಥ್ಯ ಒಂದು ಪ್ರಮಾಣದಲ್ಲಿರುತ್ತದೆ ಎಂಬುದು ಮಹತ್ವದ ವಿಚಾರ. ಅದಕ್ಕೆ ಕಾರಣವೇನೆಂದರೆ ಯಾವುದೆ ಕಾಂತೀಯ ಪದಾರ್ಥದ ಅಣುಗಳು ಪುಟ್ಟ ಕಾಂತಗಳು ಎಂದು ಭಾವಿಸಿದರೆ ಆ ಪದರ್ಥ ದಂಡಕಾಂತವಾದಾಗ ಅದರಲ್ಲಿ ಅವ್ಯವೆಸ್ತಿತವಾಗಿ ಮೊದಲು ಹರಡಿಕೊಂಡಿದ್ದ ಕಾಂತಾಣುಗಳು ಒಂದು ಕ್ರಮದಲ್ಲಿ ವ್ಯವಸ್ತಿತವಾಗಿ ಉತ್ತರ ಧ್ರುವಗಳನ್ನು ಒಂದು ದಿಕ್ಕಿಗೂ ದಕ್ಷಿಣ ಧ್ರುವಗಳನ್ನು ವಿರುದ್ದ ದಿಕ್ಕಿಗೂ ಮಾಡಿ ನಿಲ್ಲುತ್ತವೆ. ಇದರಿಂದ ದಂಡದಲ್ಲಿ ಅಷ್ಟಷ್ಟೆ ಎರಡು ಧ್ರುವಗಳು ನಿರ್ಮಿತವಾಗುತ್ತವೆ.

ಕೂಲಂಬನ ನೆಯಮದ ಪ್ರಕಾರ ಎರಡು ಕಾಂತ ಧ್ರುವಗಳು ಪರಸ್ಪರ ಆಕರ್ಷಿಸುವ ಅಥವಾ ವಿಕರ್ಷಿಸುವ ಬಲದ ಪ್ರಮಾಣವು ಆ ಧ್ರುವ ಸಾಮರ್ಥ್ಯಗಳ ಗುಣಲಬ್ಧದ ಸಮಾನುಪಾತದಲ್ಲಿಯೂ ಅವುಗಳ ನಡುವಿನ ದೂರದ ವರ್ಗದ ವಿಲೋಮನುಪಾತದಲ್ಲಿಯೂ ಇರುತ್ತದೆ. ಈ ಬಲವು ಧ್ರುವಗಳನ್ನು ಜೋಡಿಸುವ ರೇಖೆಯ ದಿಕ್ಕಿನಲ್ಲಿರುತ್ತದೆ ಒಂದೇ ತರಹದ ಕಾಂತಧ್ರುವವನ್ನು ಪ್ರತ್ಯೇಕವಾಗಿ ಪಡೆಯಲು ಸಾಧ್ಯವಾಗದು. ಏಕೆಂದರೆ ಯಾವುದೇ ದಂಡಕಾಂತದಲ್ಲಿ ಎರಡು ಧ್ರುವಗಳು ಇರಲೇಬೇಕು. ಒಂದು ದಂಡಕಾಂತದ ಸಾಮರ್ಥ್ಯವನ್ನು ಕೇವಲ ಅದರ ಧ್ರುವ ಸಾಮರ್ಥ್ಯಗಳಿಂದ ಅಳೆಯದೇ ಅದರ ಕಾಂತೀಯ ಮಹತ್ವ (ಮ್ಯಾಗ್ನೆಟಿಕ್ ಮೋಮಂಡ್) ದಿಂದ ಅಳೆಯುತ್ತಾರೆ. ಯಾವುದೇ ದಂಡಕಾಂತದಲ್ಲಿ ಸಾಮಾನ್ಯವಾಗಿ ಧ್ರುವಗಳು ದಂಡದ ಮಧ್ಯಬಿಂದುವಿನಿಂದ ಒಂದು ನಿರ್ದಿಷ್ಟ ಅಂತರದಲ್ಲಿರುತ್ತವೆ. ಈ ದೂರವನ್ನು ಕಾಂತಾಂತರ ಅಥವಾ ಕಾಂತೀಯ ಉದ್ದ ಎಂದು ಕರೆಯುತ್ತಾರೆ. ಯಾವುದೇ ಕಾಂತಕ್ಷೇತ್ರದ ಒಂದು ಬಿಂದುವಿನಲ್ಲಿ ಕ್ಷೇತ್ರ ಸಾಮರ್ಥ್ಯ ಎಷ್ಟೆಂದು ಅಳೆಯಲು ಒಂದು ಏಕಮಾನ ಉತ್ತರ ಧ್ರುವವನ್ನು ಆ ಬಿಂದುವಿನಲ್ಲಿಟ್ಟು ಅದು ಎಷ್ಟು ಬಲವನ್ನುನುಭವಿಸುವುದು ಎಂಬುದರ ಲೆಕ್ಕ ಹಾಕಬೇಕು. ಬರುವ ಬಲವೇ ಕ್ಷೇತ್ರದ ಅಳತೆಯ ಮಾನವಾಗುತ್ತದೆ. ಈ ಏಕಮಾನವೇ ಒಯರ್ಸ್ಟೆಡ್. ಒಂದು ಆಯಸ್ಕಾಂತವನ್ನು ಒಂದು ಪೇಪರ್ ಕ್ಲಿಪ್ನ ಬಳಿ ತಂದಾಗ ಕ್ಲಿಪ್ಪು ಆಯಸ್ಕಾಂತಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಒಂದು ಆಯಸ್ಕಾಂತದ ಉತ್ತರ ಧ್ರುವದ ಬಳಿಗೆ ಇನ್ನೊಂದು ಆಯಸ್ಕಾಂತದ ಉತ್ತರ ಧ್ರುವವನ್ನು ತಂದಾಗ ಅದು ತನ್ನಷ್ಟಕ್ಕೆ ತಾನೆ ದೂರ ಚಲಿಸುತ್ತದೆ. ಹೀಗೆ ಒಂದು ಆಯಸ್ಕಾಂತದ ಪ್ರಭಾವ ಇರುವಂತಹ ವಲಯವನ್ನು ಕಾಂತೀಯ ಕ್ಷೇತ್ರ ಎಂದು ಕರೆಯುತ್ತಾರೆ. ಆದರೆ ಈ ಪ್ರಭಾವ ಕಾಂತೀಯ ಕ್ಷೇತ್ರದುದ್ದಕ್ಕೂ ಒಂದೇ ಸಮನಾಗಿರುವುದಿಲ್ಲ ಮತ್ತು ಅದು ಒಂದು ನಿರ್ದಿಷ್ಟ ದೂರದವರೆಗೆ ಮಾತ್ರ ತನ್ನ ಪ್ರಭಾವವನ್ನು ಬೀರಬಲ್ಲದು.

ಭುಮಿ ದೊಡ್ಡ ಕಾಂತವೇ ಆಗಿದೆ

ಬದಲಾಯಿಸಿ

ಕಾಂತವನ್ನು ಮಧ್ಯದಲ್ಲಿ ನೇತುಹಾಕಿದಾಗ ಅದು ದಕ್ಷಿಣೋತ್ತರವಾಗಿ ನಿಲ್ಲುತ್ತದೆ ಇದಕ್ಕೆ ಕಾರಣ ವಿಜ಼ಾನಿಗಳು ತಿಳಿಸಿರುವಂತೆ ಭೂಮಿ ಒಂದು ದೊಡ್ಡ ಕಾಂತವಾಗಿರುವುದೇ ಆಗಿದೆ. ಭೂಕಾಂತ ಕ್ಷೇತ್ರದ ಉತ್ತರ ಧ್ರುವವು ಅದರ ಭೌಗೋಳಿಕ ದಕ್ಷೀಣ ದಿಕ್ಕಿನಲ್ಲಿಯೂ ಹಾಗೂ ಭೂಕಾಂತ ಕ್ಷೇತ್ರದ ದಕ್ಷಿಣ ಧ್ರುವವು ಅದರ ಭೌಗೋಳಿಕ ಉತ್ತರ ದಿಕ್ಕಿನಲ್ಲಿಯೂ ಇದೆ. ಆದರಿಂದ ಭೂಸಮತಲದಲ್ಲಿ ತೂಗುಬಿಟ್ಟ ಕಾಂತವು ಯಾವಾಗಲು ದಕ್ಷಿಣೋತ್ತರವಾಗಿ ನಿಲ್ಲುವುದು. ಭೂಮಿ, ಸೂರ್ಯ ಮೊದಲಾದ ದೊಡ್ಡ ಭೌತಕಾಯಗಳು ಕಾಂತತೆಯನ್ನು ಪ್ರದರ್ಶಿಸುತ್ತದೆ. ಸೂರ್ಯ ಮುಂತಾದ ನಕ್ಷತ್ರಗಳ ಸುತ್ತ ಕಾಂತಕ್ಷೇತ್ರ ಬಲವತ್ತರವಾಗಿದೆ ಎಂದು ವಿಜ಼ಾನಿಗಳು ತಿಳಿಸಿದ್ದಾರೆ. ಕೆಲವು ನಕ್ಷತ್ರಗಳು ಭೂಮಿ ಮತ್ತು ಸೂರ್ಯನಿಗಿಂತ ಹೆಚ್ಚು ಪ್ರಬಲವಾಗಿರುವ ಕಾಂತತೆಯನ್ನು ಹೊಂದಿವೆ ಎಂದು ಊಹಿಸಲಾಗಿದೆ. ಭೂಮಿ ಗುರುತ್ವ ಮತ್ತು ಕಾಂತತೆಗಳೆರಡನ್ನೂ ಹೊಂದಿದೆ. ಭೂಕಾಂತತೆಯು, ಕಾಂತವಾಗಿ ಪರಿವರ್ತಿಸಬಲ್ಲ ಪದಾರ್ಥ ಅಂದರೆ ಕಾಂತೀಯ ಪದಾರ್ಥಗಳ ಮೇಲೆ ಮಾತ್ರ ಪ್ರಭಾವಬೀರುತ್ತವೆ. ಆದರೆ ಗುರುತ್ವಾಕರ್ಷಣೆಯ ಪ್ರಭಾವ ಭೂಮಿಯ ಮೇಲಿರುವ ಎಲ್ಲ ಪಧಾರ್ತಗಳ ಮೇಲೂ ಇರುತ್ತದೆ. ನಾವೀಕರು ಹಿಂದಿನಿಂದಲು ಬಳಸುತ್ತಿರುವ ನಾವಿಕರ ದಿಕ್ಸೂಚಿಯು ಸದಾ ಉತ್ತರ ಮತ್ತು ದಕ್ಷಿಣ ದಿಕ್ಕುಗಳನ್ನು ತೋರಿಸುವುದು ಎಂಬುದನ್ನು ತುಂಬಾ ಹಿಂದೆಯೇ ಕಂಡುಕೊಳ್ಳಲಾಗಿತ್ತು. ಆದರೆ ವಾಸ್ತವವಾಗಿ ದಿಕ್ಸೂಚಿಯು ಭೂಮಿಯ ನಿಜವಾದ ಉತ್ತರಾ ಮತ್ತು ದಕ್ಷಿಣಾ ದಿಕ್ಕುಗಳನ್ನು ತೋರಿಸುವುದಿಲ್ಲ ಎಂಬುದು ಕೂಡ ತುಂಬಾ ಹಿಂದೆಯೇ ತಿಳಿದಿತ್ತು. ದಿಕ್ಸೂಚಿಯು ವಾಸ್ತವವಾಗಿ ಕಾಂತ ಧ್ರುವಗಳ ದಿಕ್ಕನ್ನು ತೋರಿಸುತ್ತದೆ. ನಿಜವಾದ ಉತ್ತರಾ ಮತ್ತು ದಕ್ಷಿಣಾ ದಿಕ್ಕನ್ನು ಅರಿಯಲು ಭೌಗೋಳಿಕ ಧ್ರುವಗಳ ಮಧ್ಯೆ ಇರುವ ಕೋನಗಳ ಲೆಕ್ಕ ಹಾಕಬೇಕು. ಈ ಕೋನಕ್ಕೆ ಕಾಂತೀಯ ದಿಕ್ಪಾತ ಎಂಬ ಹೆಸರಿದೆ. ಕಾಂತೀಯ ದಿಕ್ಪಾತವೆಂದರೆ ಭೌಗೋಳಿಕ ಮತ್ತು ಕಾಂತೀಯ ಯಾಮ್ಯೋತ್ತರ ತಲಗಳ ನಡುವಿನ ಕೋನ. ಇದು ಭೂಮಿಯ ಮೇಲೆ ವಿವಿಧ ಸ್ಥಳಗಳಲ್ಲಿ ಮತ್ತು ಕಾಲಗಳಲ್ಲಿ ಬದಲಾಗುತ್ತಿರುವುದು. ಭೂಮಿಯ ಕಾಂತೀಯ ಉತ್ತರ ಧ್ರುವ ಭೌಗೋಳಿಕ ಉತ್ತರ ಧ್ರುವದ ಸುತ್ತ ಪರಿಭ್ರಮಿಸುತ್ತ ೯೩೦ವರ್ಷಗಳಲ್ಲಿ ಒಂದು ಪರಿಬ್ರಮಣೆಯನ್ನು ಮುಗಿಸುತ್ತದೆ. ಈ ಕಾಂತೀಯ ದಿಕ್ಪಾತಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಯಾಗಿರುತ್ತದೆ. ಕಾಂತ ಧ್ರುವಗಳು ಭೌಗೋಳಿಕ ಧ್ರುವಗಳಲ್ಲ ಎಂಬುದನ್ನು ಲಕ್ಷಕ್ಕೆ ತಂದು ಕೊಳ್ಲಬೇಕು. ಭೌಗೋಳಿಕ ಧ್ರುವದಿಂದ ಸುಮಾರು ೧೬೦೦ಕಿ.ಮೀ. ದೂರದಲ್ಲಿ ಕಾಂತಧ್ರುವವಿದೆ. ಉತ್ತರ ಕಾಂತ ಧ್ರುವವು ಆರ್ಕಟಿಕ್ ಪ್ರದೇಶದ ಆರ್ಚಿಪೆಲಾಗೋವಿನಲ್ಲಿರುವ ಭಾಥಸ್ಟ್ ಮತ್ತು ಪ್ರಿನ್ಸ್ ಆಫ ವೇಲ್ಸ ದ್ವೀಪಗಳ ಮದ್ಯದಲ್ಲಿದೆ. ವೈಕೌಂಟಿ ಮೆಲ್ವಿಲ್ ಎಂಬ ಸ್ಥಳದಲ್ಲಿದೆ. ದಕ್ಷಿಣ ಕಾಂತಧ್ರುವವು ಅಂಟಾರ್ಟಿಕಾದಲ್ಲಿರುವ ಹಾಗೂ ಆಸ್ಟ್ರೇಲಿಯಕ್ಕೆ ಸೇರಿರುವ, ಅದಾ ಪಶ್ಚಿಮ ಕರಾವಳಿಯಲ್ಲಿರುವ ಟೆರೆ ಅಡಳಿ ಎಂಬಲ್ಲಿದೆ.

ಕಾಂತೀಯ ಧ್ರುವಗಳು ಸ್ಥಿರವಾಗಿರದೇ ಭೌಗೋಳಿಕ ವೃತ್ತಗಳಸುತ್ತ ನಿಧಾನವಾಗಿ ತಿರುಗುತ್ತಿರುತ್ತವೆ. ತುಂಬಾ ಹಿಂದೆ ಉತ್ತರ ಕಾಂತ ಧ್ರುವ ದಕ್ಷಿಣ ಕಾಂತ ಧ್ರುವ ವಾಗಿತ್ತೆಂದೂ ಎನೋಕಾರಣದಿಂದ ಅವುಗಳ ಸ್ಥಾನಗಳು ಬದಲಾಗಿವೆ ಎಂದೂ ತಗ್ನರು ತಿಳಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಭೂಮಿಯ ಕಾಂತಕ್ಷೇತ್ರ ಆಕಾಶದಲ್ಲಿ ಸುಮಾರು ೮೦,೦೦೦ಕಿ.ಮೀ ನರೆಗೂ ಹರಡಿಕೋಂಡಿದೆ. ಈ ಪ್ರಭಾವೀ ವಲೆಯವನ್ನು ಕಾಂತಮಂಡಲ ಎಂದು ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ವಿದ್ಯುದಂಶ ಹೊಂದಿರುವ ಕಣಗಳು ಇರುತ್ತವೆ. ಭೂಮಿಗೆ ಸಮೀಪದಲ್ಲಿ ಇವುಗಳ ಸಾಂದ್ರತೆ ಹೆಚ್ಚಾಗಿರುತ್ತದೆ. ಧ್ರುವಪ್ರಭೆ ಅಂದರೆ ಅರೋರಾಕ್ಕೆ ಕೂಡ ಕಾಂತಮಂಡಲ ಕಾರಣ ಎಂದು ತಿಳಿದು ಬಂದಿದೆ. ಸುಮಾರು ೪೦೦೦ ವರ್ಷಗಳ ಹಿಂದೆಯೇ ಸೂಜಿಗಲ್ಲು ಸದಾ ಒಂದೇ ದಿಕ್ಕಿನತ್ತ ಓಲಾಡುತ್ತದೆ ಎಂಬುದನ್ನು ಚೀನೀಯರು ಅರಿತಿದ್ದರು. ಇಂಗ್ಲಾಂಡನ ಮೊದಲನೇ ಎಲಿಜಬತ್ ಮಹಾರಾಣಿಯ ಆಸ್ಥಾನದಲ್ಲಿ ವೈಧ್ಯನಾಗಿದ್ದ ವಿಲಿಯಮ್ ಗಿಲ್ಬರ್ಟ್ (೧೫೪೪-೧೬೦೩) ವ್ಯಾಪಕವಾಗಿ ಅಧ್ಯಯನ ನಡಿಸಿ ಭೂಮಿ ಭ್ರುಹತ್ ಕಾಂತದಂತೆ ವರ್ತಿಸುತ್ತದೆ ಎಂದು ತಿಳಿಸಿದ. ಭೂಕಾಂತ ಕ್ಷೇತ್ರದ ತೀವ್ರತೆಯಲ್ಲಿ ಬಹುಪಾಲು ಭೂಮಿಯ ಯಿರುಳನ್ನು ಅವಲಂಬಿಸಿ ಕೊಂಡಿದೆ. ಭೂಮಿ ತನ್ನ ಅಕ್ಷದಲ್ಲಿ ತಿರುಗುವಾಗ ಅದರ ಘನ ರೂಪದ ಒಳತಿರುಳು ಮತ್ತು ದ್ರವರೂಪದ ಹೊರತಿರುಳು ವ್ಯತ್ಯಾಸಗೊಳ್ಳುತ್ತದೆ. ಭೂಮಿಯ ಅಂತರಾಳದಲಿ ಅತ್ತ್ಯಧಿಕ ಉಷ್ಣತೆಇದೆ. ಇದರಿಂದ ಭೂಮಿಯೊಳಗೆ ವಿಧ್ಯುತ್ ಪ್ರವಾಹ ಹರಿಯುತ್ತದೆ. ಇದರಿಂದ ಕಾಂತಕ್ಷೇತ್ರ ನಿರ್ಮಾಣವಾಗುತ್ತದೆ.

ಕೃತಕ ಕಾಂತಗಳು

ಬದಲಾಯಿಸಿ

ಒಂದು ಕಾಂತವು ತನ್ನ ಬಳಿಯಿರುವ ಮತ್ತೊಂದು ಕಂತ ವಸ್ತುವಿನಲ್ಲಿ ಕಾಂತತೆಯನ್ನುಂಟು ಮಾಡುವುದು. ಇದಕ್ಕೆ ಪ್ರೇರಿತ ಕಾಂತತೆ ಎಂದು ಕರೆಯುತ್ತಾರೆ.ಈ ಪ್ರೇರಿತ ಕಾಂತತೆಗಳಲ್ಲಿ ಎರಡು ವಿಧಗಳಿವೆ:ತಾತ್ಕಾಲಿಕ ಮತ್ತು ಶಾಶ್ವತ.ಮಿದು ಕಬ್ಬಿಣವು ಕಾಂತಕ್ಷೇತ್ರದಲ್ಲಿ ಇರುವವರೆಗೆ ಎಂದರೆ ಕಾಂತ ಬಲರೇಖೆಗಳ ವ್ಯಾಪ್ತಿಯಲ್ಲಿ ಮಾತ್ರ ಕಾಂತತೆಯನ್ನು ಪ್ರದರ್ಶಿಸುತ್ತದೆ.ಇದನ್ನು ತಾತ್ಕಾಲಿಕ ಕಾಂತ ಎಂದು ಕರೆಯುತ್ತಾರೆ.ಆದರ ಉಕ್ಕಿನಂತಹ ಕಠಿಣ ಪದಾರ್ಥಗಳು ಒಮ್ಮೆ ಕಾಂತತೆಯನ್ನು ಪಡೆದರೆ ಅವು ಶಾಶ್ವತ ಕಾಂತಗಳಾಗಿ ಬಿಡುವುವು.ಕಬ್ಬಿಣ, ನಿಕ್ಕಲ್, ಕೋಬಾಲ್ಟ್ ಮೊದಲಾದ ಲೋಹಗಳನ್ನು ಬೆರಸಿ ತಯಾರಿಸಲಾದ ಮಿಶ್ರಲೋಹಗಳಿಂದ ಶಾಶ್ವತ ಕಾಂತಗಳೆನ್ನು ತಯಾರಿಸುತ್ತಾರೆ.ಸೂಜಿಗಲ್ಲು ಅಥವಾ ಲೋಡ್ ಸ್ಟೋನ್ ಪ್ರಾಕೃತಿಕ ಕಾಂತವಾದರೆ, ಉಪಯೋಗದಲ್ಲಿ ಹೆಚ್ಚಾಗಿ ಇರುವುದು ಕೃತಕ ಕಾಂತಗಳು.ಏಕೆಂದರೆ ಪ್ರಕೃತಿಕ ಕಾಂತಗಳು ಬಳಕೆಯಲ್ಲಿ ಅಷ್ಟು ಉಪಯುಕ್ತವೇನಲ್ಲ.ಬೇರೆ ಬೇರೆ ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ತಯಾರಾದ ಕೃತಕ ಕಾಂತಗಳು ನಮ್ಮ ದಿನ ನಿತ್ಯದ ಬಳಕೆಗೆ ಉಪಯುಕ್ತವಾಗಿದೆ.ಒಂದು ಉಕ್ಕಿನ ಪಟ್ಟಿಯ ಮೇಲೆ ವಿಶಿಷ್ಟರೀತಿಯಲ್ಲಿ ದಂಡಕಾಂತದಿಂದ ತಿಕ್ಕಿದರೆ ಅದನ್ನು ಶಾಶ್ವತ ಕಾಂತವಾಗಿ ಮಾಡಬಹುದು.ಆದರೆ ಕಬ್ಬಿಣದಲ್ಲಿ ಶಾಶ್ವತ ಕಾಂತವಾಗುವ ಗುಣವಿಲ್ಲವಾದ್ದರಿಂದ ಈ ಪದ್ಧತಿಯಿಂದ ಪ್ರಯೋಜನವಿಲ್ಲ. ಹಾಗೆಯೇ ನಿರೋಧಿತ ತಂತಿಯನ್ನು ಉಕ್ಕಿನ ದಂಡದ ಸುತ್ತಸುತ್ತಿ ಬ್ಯಾಟರಿಯ ಸಹಾಯದಿಂದ ವಿದ್ಯುತ್ ಪ್ರವಾಹ ಹರಿಸಿದರೆ ಆದಂಡ ಶಾಶ್ವತ ಕಾಂತವಾಗುವುವು. ಇಂಥ ಕಾಂತಗಳನ್ನು ವಿದ್ಯು ಕಾಂತಗಳು ಅಥವಾ ಎಲೆಕ್ಟೋಮ್ಯಾಗ್ನೆಟ್ ಎಂದು ಕರೆಯುತ್ತಾರೆ. ಪ್ರಬಲವಾಗಿರುವ ಕಾಂತಗಳು ಬೇಕೆನಿಸಿದಾಗ ವಿದ್ಯುತ್ ಪ್ರವಾಹ ಹರಿಸಿ ಕಾಂತಗಳನ್ನು ತಯಾರಿಸುವ ಪದ್ದತಿಯನ್ನು ಅನುಸರಿಸುತ್ತಾರೆ. ತಂತಿಯನ್ನು ಸುರುಳಿಯಾಕಾರದಳಿ ಸುತ್ತಿ ಅದರೊಳಗೆ ಕಬ್ಬಿಣ ಅಥವಾ ಉಕ್ಕಿನ ದಂಡಗಳನ್ನು ಇರಿಸದಿದ್ದರೆ ಹಾಗೂ ತಂತಿಯ ಸುರುಳಿಯಲ್ಲಿ ವಿದ್ಯುತ್ ಅನ್ನು ಪ್ರವಹಿಸಿದರೆ ಆ ಸುರುಳಿಯೇ ವಿದ್ಯುತ್ ಕಾಂತದಂತೆ ವರ್ತಿಸುವುದು. ಇದನ್ನು ಧೀರ್ಗಸುರುಳಿ ಎಂದು ಕರೆಯುತ್ತಾರೆ. ಕಬ್ಬಿಣಾ ಮತ್ತು ಉಕ್ಕಿನ ಕಾಂತ ಜಡತ್ವದ ಬಳ್ಳಿಗಳಲ್ಲಿ ಮಹತ್ವದವ್ಯೆತ್ಯಾಸವಿದೆ. ವಿದು ಕಬ್ಬಿಣದಲ್ಲಿ ಕಾಂತೀಯ ಪ್ರೇರಣೆ ಹೆಚ್ಚಾಗಿದ್ದರೂ ನಿಗ್ಗ್ರಹ ಬಲ ಮತ್ತು ಧಾರಣ ಶಕ್ತಿ ಕಡಿಮೆ ಯಾಗಿರುತ್ತದೆ. ಸ್ವಲ್ಪ ಕಲಕಿದರೂ ಕಾಂತತೆ ಅಳಿದು ಹೋಗುತ್ತದೆ. ಆದರೆ ಹೆಚ್ಚು ನಿಗ್ಗ್ರಹ ಬಲ ಹೊಂದಿರುವ ಉಕ್ಕಿನಲ್ಲಿ ಕಾಂತತೆ ಶಾಶ್ವತವಾಗಿ ಉಳಿದು ಕೊಳ್ಳುತ್ತದೆ. ವಿದ್ಯುದ್ ಉಪಕರಣಗಳಲ್ಲಿ ಕಬ್ಬಿಣಾವನ್ನು ಬಳಸಲು ಮುಖ್ಯ ಕಾರಣವೆಂದರೆ ಅದರಲ್ಲಿ ಕಡಿಮೆ ಕಾಂತ ಬಲ ವಿರುವುದು.

ಉಪಯೋಗಗಳು

ಬದಲಾಯಿಸಿ

ಶಾಶ್ವತ ಕಾಂತಗಳನ್ನು ಅಮ್ಮೀಟರ್, ವೋಲ್ಟಾಮೀಟರ್ ಮುಂತಾದ ವಿಧ್ಯುತ್ ಮಾಪಕಗಳಲ್ಲೂ, ದಿಕ್ಸೂಚಿಗಳಲ್ಲೂ ಬಳಸುತ್ತಾರೆ. ಕಣ್ಣಿನಲ್ಲಿ ಲೋಹದ ಚೂರ್ರುಗಳು ಸೇರಿಕೊಂಡಿದ್ದರೆ ಪ್ರಬಲಕಾಂತಗಳಿಂದ ಅವನ್ನು ಸುಲಬವಾಗಿ ಹೊರಗೆ ತೆಗೆಯಬಹುದು. ರೇಡಿಯೋ, ಟೆಲಿಫೊನ್, ರೇಡಾರ್ ಮುಂತಾದ ಹಲವಾರು ಸಂಪರ್ಕ ಸಾಧನಗಳಮೇಲೆ ಕಾಂತೀಯ ಬಿರುಗಾಳಿಯ ಪ್ರಭಾವವಿದೆ. ರೇಡಿಯೋ ತರಂಗಗಳು, ಶಾಖವಿಕಿರಣ, ಕ್ಷ-ಕಿರಣ ವಿಕಿರಣಶೀಲ ವಸ್ತುವಿನಿಂದ ಹೊರಡುವ ಗಾಮಾಕಿರಣ ಮತ್ತು ಕೆಲವು ವಿಶ್ವಕಿರಣಗಳು ವಿಧ್ಯುತ್ ಕಾಂತಿಯ ತರಂಗಗಳೇ ಆಗಿದೆ. ವಿದ್ಯುದ್ಗಂಟೆಗಳು, ಧ್ವನಿವರ್ಧಕಗಳು, ಫಾನ್ಗಳು, ಮೋಟಾರುಗಳು, ವಿದ್ಯುಜ್ಜನಕಗಳು, ಮುಂತಾದ ಹತ್ತು ಹಲವು ಸಾಧನಗಳಲ್ಲಿ ವಿದ್ಯುತ್ಕಾಂತಗಳು ನೆರವಿಗೆ ಬರುತ್ತದೆ. ಅನೇಕ ದಿನ ಬಳಕೆಯ ವಸ್ತುಗಳಲ್ಲಿ ವಿದ್ಯುತ್ಕಾಂತಗಳು ಉಪಯುಕ್ತವಾಗಿದೆ.

 This user is a member of WikiProject Education in India