Spurthi hm
ನನ್ನ ಹೆಸರು ಸ್ಪೂರ್ತಿ . ನಾನು ೨೧/೭/೧೯೯೭ ರಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಮುತ್ತಪ್ಪ. ನನ್ನ ತಾಯಿಯ ಹೆಸರು ಗೀತಾ. ನನ್ನ ಅಕ್ಕನ ಹೆಸರು ದೀಪ್ತಿ. ನನ್ನ ಅಕ್ಕ ಎಸ್.ಡಿ.ಎಮ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಳೆ . ನಾವು ಈಗ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ನಾನು ಪ್ರಾರ್ಥಮಿಕ ಶಿಕ್ಷಣವನ್ನು ನಮ್ಮ ಊರಿನಲ್ಲಿಯೆ ಮುಗಿಸಿದೆ ನಂತರ ನನ್ನ ಪ್ರೌಢ ಶಿಕ್ಷಣವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಡೆದೆ. ನನ್ನ ಪದವಿ ಪೂರ್ವ ಶಿಕ್ಷಣವನ್ನು ಉಡುಪಿಯಲ್ಲಿ ಮುಗಿಸಿದೆ. ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್.ಸಿ ವ್ಯಾಸಾಂಗವನ್ನು ಮಾಡುತ್ತಿದ್ದೇನೆ. ನಾನು ನಮ್ಮ ಕಾಲೇಜಿನ ಎನ್.ಎಸ್.ಎಸ್ ಸಂಘದ ಸದಸ್ಯಳಾಗಿದ್ದೇನೆ. ನಾನು ಕಳೆದ ವರ್ಷ ನಡೆದ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ನಾವು ಬೆಳಗ್ಗೆ ೫ ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ಹಲವಾರು ಚಟುವಟಿಕೆಗಳನ್ನು ಮಾಡುವುದರ ಮೂಲಕ ಶಿಬಿರವನ್ನು ಆನಂದದಿಂದ ಕಳೆದೆವು . ಈ ಶಿಬಿರದಲ್ಲಿ ಯೋಗ ,ಶ್ರಮದಾನ ಹಾಗು ಸಾಂಸ್ಕ್ರತಿಕ ಕಾರ್ಯಕ್ರಮಗಳಿಂದ ತುಂಬಾ ಕಲಿಯಲು ಸಿಗುತ್ತದೆ . ನಾನು ಸ್ನಾತ್ತಕೋತ್ತರ ಪದವಿಯನ್ನು ರಾಸಾಯನ ಶಾಸ್ತ್ರ ದಲ್ಲಿ ಮಾಡಬೇಕೆಂದು ಇಚ್ಛಿಸುತ್ತೇನೆ . ನನಗೆ ಕಾದಂಬರಿ ಓದುವ ಹವ್ಯಾಸವಿದೆ . ನನಗೆ ಬ್ಯಾಡ್ಮಿಂಟನ್ ಆಡುವುದೆಂದರೆ ತುಂಬಾ ಇಷ್ಟ . ನನ್ನ ತಂದೆ ತಾಯಿಯ ಹೆಸರಿಗೆ ಕೀರ್ತಿ ತಂದುಕೊಡಬೇಕೆಂಬುದೇ ನನ್ನ ಆಸೆ .